ಅಂಕಣಇತಿಹಾಸ

“ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಬೋಸರಿಂದಲೇ ಹೊರತು ಗಾಂಧಿಯಿಂದಲ್ಲ!” : ಡಾ.ಬಿ‌.ಆರ್‌.ಅಂಬೇಡ್ಕರ್

ಮೊದಲೇ ಹೇಳುತ್ತೇನೆ!! ಇದು ಅತಿಶಯೋಕ್ತಿ!! ನಾವು ಭಾರತೀಯರು ಇಂದೂ ಸಹ, ಭಾರತಕ್ಕೆ ಸ್ವಾತಂತ್ರ್ಯ. ತಂದುಕೊಟ್ಟಿದ್ದು ನೆಹರೂ ಮತ್ತು ಮಹಾತ್ಮಾ ಗಾಂಧಿ ಎನ್ನುವ ಭ್ರಮೆಯಲ್ಲಿಯೇ ಇದ್ದೇವಲ್ಲ?! ಇವತ್ತಿನವರೆಗೂ, ತೀರಾ ಮೂರ್ಖರೆನ್ನುವ ಹಾಗೆ, ಮಹಾತ್ಮಾ ಗಾಂಧಿಯ ಜನುಮ ದಿನದ ಪ್ರಯುಕ್ತ, ಕೇವಲ ಮಹಾತ್ಮಾ ಎನ್ನುವ ನಾವುಗಳು ಅಂದೇ ಹುಟ್ಟಿದಂತಹ ಲಾಲ್ ಬಹದ್ದೂರ್ ಶಾಸ್ತ್ರಿಯಂತಹವರನ್ನು ಮರೆತೇ ಬಿಡುತ್ತೇವೆ!! ಕೇವಲ, ನೆಹರೂ ಮಕ್ಕಳನ್ನು ಪ್ರೀತಿಸುತ್ತಿದ್ದರೆನ್ನುವ ಕಾರಣಕ್ಕೆ ನವೆಂಬರ್ ಹದಿನಾಲ್ಕನ್ನು ಮಕ್ಕಳ ದಿನಾಚರಣೆ ಎಂದಾಚರಿಸುವ ನಮಗೆ, ನವೆಂಬರ್ ೧೯ ಝಾನ್ಸಿ ರಾಣಿಯ ಜನುಮದಿನವೊಂದು ನಗಣ್ಯವೇ ಆಗಿಬಿಡುತ್ತದೆ!! ತನ್ನ ಸೆರಗಿಗೆ ತನ್ನ ಮಗನನ್ನು ಕಟ್ಟಿಕೊಂಡು, ಅಲ್ಲಿಂದಲೇ ಭಾರತದ ಕ್ಷಾತ್ರ ತೇಜವನ್ನು ಸ್ಫುರಿಸಿದ್ದ ಮಹಿಳೆಯ ಜನುಮದಿನ ನಮಗೆ ವಿಶೇಷ ದಿನವಲ್ಲ! ಬದಲಿಗೆ, ದೇಶವನ್ನು ಇಬ್ಭಾಗ ಮಾಡಿ ಹೋದ ಮತ್ತದೇ ನೆಹರೂ ಮತ್ತು ಗಾಂಧಿಯನ್ನು ಆರಾಧಿಸುವ ನಾವು ನಮ್ಮ ಮಕ್ಕಳಿಗೆ ಹೇಳಿ ಕೊಡುವುದು ಮತ್ತದೇ ಗುಲಾಮ ಗಿರಿಯನ್ನಷ್ಟೇ ಹೊರತು ಕ್ಷಾತ್ರ ತೇಜವನ್ನಂತೂ ಖಂಡಿತಾ ಅಲ್ಲ!!

ಬಿಡಿ!! ಇದನ್ನು ಇವತ್ತಿನ ಶ್ರೀ ಸಾಮಾನ್ಯನಾದಂತಹವನು ಹೇಳಿಬಿಟ್ಟರೆ ಅವನೊಬ್ಬ ಕೋಮುವಾದಿಯಾಗಿ ಹೋಗುತ್ತಾನೆ!! ದಲಿತ ವಿರೋಧಿಯೂ ಆಗಿ ಬಿಡುತ್ತಾನೆ! ಅದು ಹೇಗಾದರೂ ಆಗಲಿ! ಗಾಂಧಿ ಮತ್ತು ನೆಹರೂ ಏನನ್ನು ಮಾಡಿದರೋ, ಅವರಲ್ಲಿರುವ ಒಳ್ಳೆಯ ಗುಣಗಳನ್ನಷ್ಟೇ ನಾವು ಯೋಚಿಸ ಬೇಕೆಂದು ಉದ್ದುದ್ದ ಭಾಷಣ ಬಿಗಿಯುವವನಿಗೆ ಉಹೂಂ! ದೇಶಕ್ಕೋಸ್ಕರ ಗಲ್ಲಿಗೇರಿದವರನ್ನು ಮೂರ್ಖರೆಂದು ಬಿಡುವಾಗ, ನಗಬೇಕೋ ಅಥವಾಬ ಅಳಬೇಕೋ?! ನಾವು ಬಿಡಿ! ಕೋಮುವಾದಿಗಳೆಂದಾಗಿ ಹೋಯಿತು! ಆದರೆ, ಸ್ವತಃ ಬಿ.ಆರ್ ಅಂಬೇಡ್ಕರ್ ರವರು ಈ ದೇಶಕ್ಕೆ ಸ್ವಾತಂತ್ರ್ಯ
ಬಂದಿದ್ದು ಗಾಂಧಿಯಿಂದಲ್ಲ ಎಂದಿದ್ದರು!! ಬೇರೆ ಯಾರೂ ಬೇಡ! ಸಂವಿಧಾನ ರಚನೆಕಾರರಾದ ಅಂಬೇಡ್ಕರ್ ರನ್ನು ಆರಾಧ್ಯ ದೈವವಾಗಿಸಿಕೊಂಡ, ಜಾತ್ಯಾತೀತತೆ ಎಂದೆಲ್ಲ ಪೋಸು ಕೊಡುವ ಪ್ರತೀ ಜಾತ್ಯಾತೀತವಾದಿಗಳಿಗೆ ಬಿ.ಆರ್.ಅಂಬೇಡ್ಕರ್ ಹೇಳಿದ ಮಾತುಗಳು ಕೇಳಲೇ ಇಲ್ಲವೆಂಬಂತಾಗಿತ್ತು!!

ಹಾ!! ೧೯೫೫ ರಲ್ಲಿ ಬಿಬಿಸಿ ಸುದ್ದಿ ವಾಹಿನಿಯೊಂದು ನಡೆಸಿದ್ದ ಸಂದರ್ಶನವೊಂದಿದೆಯಲ್ಲವಾ?! ಅವತ್ತು ಇಡೀ ಭಾರತ ಬೆಚ್ಚಿ ಬಿದ್ದಿತ್ತು!! ಅರೇ! ಅಂಬೇಡ್ಕರ್ ಹೀಗೆ ಹೇಳಿಬಿಟ್ಟರಾ ಎಂಬ ಅಚ್ಚರಿಯ ಜೊತೆ, ಅವತ್ತಿನ ಪೀಳಿಗೆಯ ಜನರಿಗೆ ಮಹಾತ್ಮನ ಶೂನ್ಯವಾದವೊಂದು ಅರ್ಥವಾಗಿ ಹೋಗಿತ್ತು! ಬಹುಷಃ ತನ್ನ ಹೆಸರನ್ನು ಉಳಿಸಿಕೊಳ್ಳಲೇ ಬೇಕೆಂಬ ಹಠಕ್ಕೆ ಬಿದ್ದ ಕಾಂಗ್ರೆಸ್ಸೊಂದು ತನ್ನದೇ ಇತಿಹಾಸವೊಂದನ್ನು ಸೃಷ್ಟಿಸತೊಡಗಿತ್ತು! ಕಾಂಗ್ರೆಸ್ ಪಕ್ಷವನ್ನು ಹೊಗಳಿ ಅಟ್ಟಕ್ಕೇರಿಸಿದ ಪಠ್ಯ ಪುಸ್ತಕಗಳು, ಹಂತ ಹಂತವಾಗಿಯೇ ಭಾರತೀಯರನ್ನು ಭ್ರಮೆಗೆ ದೂಡಿತ್ತಷ್ಟೇ! ಅದೆಲ್ಲ ಬಿಡಿ! ಅವತ್ತು, ಸಂದರ್ಶನಕಾರ ಅಂಬೇಡ್ಕರ್ ರವರಿಗೆ ಕೇಳಿದ್ದು ಒಂದೇ ಒಂದು ಪ್ರಶ್ನೆಯನ್ನು! ಯಾವ ಬಲವಾದ ಕಾರಣಕ್ಕಾಗಿ ೧೯೪೭ ರಲ್ಲಿ ಭಾರತವನ್ನು ಬಿಟ್ಟು ಹೊರಡಲು ಬ್ರಿಟಿಷರು ಒಪ್ಪಿಕೊಂಡರು ಎಂಬ ಪ್ರಶ್ನೆಯನ್ನು!!  ಅಂಬೇಡ್ಕರ್ ಬಿಡಿ! ಸ್ವತಃ ಬ್ರಿಟನ್ ಪ್ರಧಾನಿಯಾಗಿದ್ದ ಕ್ಲಿಮೆಂಟ್ ಅಟ್ಲೀ ಒಪ್ಪಿಕೊಂಡಿದ್ದರು! ” ನಮ್ಮ ಸಾಮ್ರಾಜ್ಯ ಎದುರಿಸಬೇಕಾದಿದ್ದದ್ದು ನೇತಾಜಿ ಬೋಸ್ ರನ್ನು! ಅವರಷ್ಟು ಬಲಶಾಲಿ ಮತ್ತು, ಚಾಣಾಕ್ಷ ಎದುರಾಳಿಯನ್ನು ಬ್ರಿಟಿಷ್ ಸಾಮ್ರಾಜ್ಯ ಯಾವತ್ತೂ ನೋಡಲಿಲ್ಲ!!

In an interview to BBC in February 1955, Babasaheb elucidated the reason why the British left India in 1947. Subsequently, Attlee agreed Netaji was the toughest challenge the Empire faced. Several defence and intelligence experts agreed, too.

ಅಚ್ಚರಿಯೇನು ಗೊತ್ತೇ?! ಎಪ್ಪತ್ತು ವರ್ಷಗಳಾಗಿ ಹೋಗಿದೆ!! ನೇತಾಜಿ ಸುಭಾಷ್ ಚಂದ್ರ ಬೋಸರು ಕಣ್ಮರೆಯಾಗಿ! ಆದರೆ, ನೇತಾಜಿ ಎಂದ ತಕ್ಷಣ ಪ್ರತೀ ಭಾರತೀಯ ಕಿವಿ ನಿಮಿರಿಸುವುದು ಯಾಕೆ ಗೊತ್ತೇ?! ನೇತಾಜಿ ವಿಮಾನಾಪಘಾತದಲ್ಲಿ ತೀರಿಲ್ಲವೇ ಎಂಬ ಸಣ್ಣ ಅನುಮಾನ ದೇಶಾದ್ಯಂತ ್ರ್ಚೆಯ ವಿಷಯವಾಗುವುದೇಕೆ ಗೊತ್ತಾ?! ಇವತ್ತಿಗೂ, ನೇತಾಜಿಯ ಬಗ್ಗೆ ತಿಳಿದುಕೊಳ್ಳಲು ಭಾರತಕ್ಕೆ ಭಾರತವೇ ಎದ್ದು ನಿಲ್ಲುವುದು ಯಾಕೆ ಎಂಬುದು ತಿಳಿಯಬೇಕಾದರೆ, ನೇತಾಜಿ ಅಷ್ಟು ಪ್ರಮುಖರಾಗುವುದಕ್ಕೆ ಮಾಡಿದ್ದಾದರೂ ಏನು ಎಂಬುದನ್ನು ತಿಳಿದುಕೊಳ್ಳಲೇ ಬೇಕು!

ಭಾರತದ ಕ್ರಾಂತಿಕಾರಿಗಳ ಬಗೆಯ ರಹಸ್ಯ ದಾಖಲೆಗಳು, ನೇತಾಜಿಯ ರಹಸ್ಯ ಮಾತುಕಥೆಗಳ ಬಗ್ಗೆ ಸಿಕ್ಕಿದ್ದ ಸಾಕ್ಷ್ಯಗಳು, ನೇತಾಜಿ ಸೀದಾ ಜರ್ಮನಿಗೆ ನಡೆದದ್ದು, ಸೈನ್ಯವನ್ನು ಸ್ಥಾಪಿಸಿದ್ದು, ತನ್ಮೂಲಕ ಭಾರತೀಯ ಕ್ರಾಂತಿಕಾರಿಗಳಿಗೆ ಸಂದೇಶವನ್ನು ನೀಡಿದ್ದು, ಇಲ್ಲಿ ಭಾರತದಲ್ಲಿ ಕುಳಿತ ಅಪ್ರತಿಮ ವೀರ ಸಾವರ್ಕರ್ ಹೆಮ್ಮೆ ಪಟ್ಟಿದ್ದು, ಇವೆಲ್ಲವೂ ಸಹ ಬ್ರಿಟಿಷ್ ಸರಕಾರಕ್ಕೆ ಬಿಸಿ ಮುಟ್ಟಿಸಿತ್ತು! ಇನ್ನೂ ಸಹ, ೧೮೫೭ ರಲ್ಲಾದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರನ್ನು ಹಿಡಿದು ಚಚ್ಚಿದ್ದಕ್ಕೇ ಹೆದರಿ ಜೀವಂತ ಹೆಣವಾಗಿದ್ದ ಬ್ರಿಟಿಷರಿಗೆ ಸವಾಲಾಗಿ ಪರಿಣಮಿಸಿದ್ದು ಸುಭಾಷ್ ಚಂದ್ರ ಬೋಸರು, ಮತ್ತು ಎರಡನೇ ಜಾಗತಿಕ ಯುದ್ಧ!!

ಇವತ್ತಿಗೂ, ೧೯೪೭ ರಲ್ಲಿ ಬೋಸರ ಒತ್ತಡದಿಂದಾಗಿ ಬ್ರಿಟಿಷರು ಭಾರತದ ಮೇಲೆ ಸಾಧಿಸಿದ್ದ ಅಧಿಕಾರವೊಂದನ್ನು ಭಾರತೀಯರಿಗೆ ಹಸ್ತಾಂತರಿಸಿದ್ದನ್ನು, ರಾತ್ರೋ ರಾತ್ರಿ ಸ್ವಾತಂತ್ರ್ಯ ವನ್ನು ಘೋಷಿಸಿ, ಬದುಕಿದರೆ ಭಿಕ್ಷೆ ಬೇಡಿ ಜೀವನ ಸಾಗಿಸುವೆವು ಎಂದು ಓಡಿದ್ದು ಯಾವ ಕಾರಣಕ್ಕಾಗಿ ಎಂಬುದನ್ನು ಕೆಲವು ರಾಜಕೀಯ ಕಾರಣಗಳಿಗೋಸ್ಕರ ಒಪ್ಪುವುದೇ ಇಲ್ಲ. ಹಾಸ್ಯಾಸ್ಪದವೆಂದರೆ, ಇವತ್ತಿಗೂ ಸಹ, ಭಾರತೀಯರು ದುಂಡು ಮೇಜಿನ ಮುಂದೆ ನಡೆಸಿದ ಸಭೆಯೇ ಭಾರತಕ್ಕೆ ಸ್ವಾತಂತ್ರ್ಯ ಕೊಟ್ಟಿದ್ದೆನ್ನುವುದನ್ನು ಒಪ್ಪಿಬಿಟ್ಟಿದ್ದಾರೆ!! ಹೇಳಲೇಬೇಕೆಂದರೆ, ೧೯೩೯ ರಲ್ಲಿ ಯಾವಾಗ, ಎರಡನೇ ಜಾಗತಿಕ ಯುದ್ಧ ಪ್ರಾರಂಭವಾಯಿತೋ, ಭಾರತದಲ್ಲಿದ್ದ ಸೈನಿಕರನ್ನು ಒತ್ತೆಯಿಟ್ಟು ಬ್ರಿಟಿಷರು ತಮ್ಮ ಅಧಿಕಾರ ಪಡೆಯಲು ಹೊರಟಿದ್ದನ್ನು ಕಂಡೂ ಕಾಣದಂತೆ ಮುಗ್ಧರಾಗಿ ಕುಳಿತರು ಭಾರತೀಯರು! ಆಗಲೇ ನೋಡಿ, ಸುಭಾಷ್ ಚಂದ್ರ ಬೋಸರಿಗೆ ಸಾವರ್ಕರ್ ರವರ ದೂರದರ್ಶಿಯೊಂದು ಪ್ರೇರಣೆಯಾಗಿ ಹೊಮ್ಮಿದ್ದು!! ಅದಾವುದೋ ಸಭೆಯಲ್ಲಿ, ಸಾವರ್ಕರ್ ಜೊತೆ ಕುಳಿತಿದ್ದ ಬೋಸರು ಮಾತಿಗಿಳಿದಾಗ, ದೇಶ ಕಂಡ ಅಪ್ರತಿಮ ದೇಶಭಕ್ತ ಸಾವರ್ಕರ್ ಹೇಳಿದ್ದಿಷ್ಟನ್ನೇ!!

ಬೋಸ್! ನಿಮ್ಮಂತಹ ಕೆಚ್ಚೆದೆಯ ಯುವಕರು ಹೀಗೆ ಸುಮ್ಮನೇ ಕೂರುವುದು ಸರಿಯಲ್ಲ! ಶತ್ರುವಿನ ಶತ್ರುವಿನ ಜೊತೆ ಸ್ನೇಹ ಸಂಪಾದಿಸಿ ಇಂಗ್ಲೆಂಡನ್ನು ಮಣಿಸಿ! ಎಂದ ಸಾವರ್ಕರ್ ರ ಕಣ್ಣುಗಳಲ್ಲಿ ಬೋಸರಿಗೆ ಕಂಡಿದ್ದು ಸ್ವತಂತ್ರ್ಯ ಭಾರತ!! ಅಲ್ಲಿಂದ , ಸೀದಾ ವಿದೇಶಕ್ಕೆ ಹಾರಿದ ಬೋಸರು, ಹಿಟ್ಲರ್ ನನ್ನು ಭೇಟಿಯಾಗಿದ್ದಲ್ಲದೇ, ಇಂಡಿಯನ್ ನ್ಯಾಷನಲ್ ಆರ್ಮಿ ಸ್ಥಾಪಿಸಿ, ಅಂಡಮಾನ್ ಮತ್ತು ನಿಕೋಬಾರ್ ಗಳನ್ನು ವಶಪಡಿಸಿಕೊಂಡರು!! ಅವತ್ತು, ಇದೇ
ನಾವು- ನೀವು ಮೆಚ್ಚುವ, ಭಾರತದ ಸ್ವಾತಂತ್ರ್ಯ ಹೋರಾಟಗಾರ ಎನ್ನುವಂತಹ ನೆಹರೂ, ಬೋಸರು ಭಾರತಕ್ಕೆ ಕಾಲಿಟ್ಟರೆ ಯುದ್ದ ಮಾಡಿಯಾದರೂ ಹಿಂದಕ್ಕೆ ಕಳುಹಿಸುವೆ ಎಂದಿದ್ದರು! ಇತ್ತ, ಕ್ರಾಂತಿಕಾರಿಗಳು, ಭಾರತೀಯ ಸೈನಿಕರಲ್ಲಿ ದೇಶಭಕ್ತಿಯ ಜ್ವಾಲೆಯನ್ನು ಹೊತ್ತಿಸಿದ್ದೇ, ಬ್ರಿಟಿಷರ ಜೊತೆ ಹೋರಾಡಲು ನಿರಾಕರಿಸಿದರು! ಭಾರತಿಯ ಸೇನೆಯಲ್ಲಿ ಅಶಾಂತಿಯ ಹೊಗೆಯಾಡಿತು! ಅತ್ತ, ಜರ್ಮನಿ ಬ್ರಿಟಿಷರ ವಿರುದ್ಧ ತಿರುಗಿ ಬಿತ್ತು! ಚಾಣಾಕ್ಷರಾದ ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ನೀಡಿದ್ದೇವೆ ಎಂದರು! ಮತ್ತದೇ, ಸುಭಾಷ್ ಚಂದ್ರ ಬೋಸ್ ಮತ್ತು ಸಾವರ್ಕರ್ ನಗುತ್ತಲಿದ್ದರು! ನೆಹರೂ ಮತ್ತು ಗಾಂಧಿಯವರಿಗೆ ಬುದ್ಧಿ ಭ್ರಮಣೆಯಾದಂತಾಗಿ ಹೋಗಿತ್ತು!

When due to misguided political whims and lack of vision almost all the leaders of Congress Party are decrying all the soldiers of Indian Army as mercenaries, it is heartening to know that Veer Savarkar is fearlessly exhorting the youth to enlist in the armed forces. Those enlisted youths themselves provide us with trained men from which we draw the soldiers of our Indian National Army.

– Subhash Chandra Bose

Image result for savarkar and bose

೧೯೪೨ ರಲ್ಲಿ, ಬೋಸರ ಇಂಡಿಯನ್ ನ್ಯಾಷನಲ್ ಆರ್ಮಿಯ ಮಾದರಿಯಂತೆಯೇ, ಮಹಾತ್ಮಾ ಗಾಂಧಿ ಸಹ “ಕ್ವಿಟ್ ಇಂಡಿಯಾ” ಚಳುವಳಿ ಯನ್ನು ಪ್ರಾರಂಭಿಸಿದರು! ಬ್ರಿಟಿಷರು ಅದನ್ನೆಷ್ಟು ಯಶಸ್ವಿಯಾಗಿ ಹತ್ತಿಕ್ಕಿದರೆಂದರೆ, ಸ್ವತಃ ಮಹಾತ್ಮಾ ಗಾಂಧಿಯವರು “ಬ್ರಿಟಿಷರು ಭಾರತ ಬಿಟ್ಟು ತೊಲಗುವರೋ ಬಿಡುವರೋ, ನಾವು ಮಾತ್ರ ನಮ್ಮ ಚಳುವಳಿಯನ್ನು ನಿಲ್ಲಿಸುತ್ತಿದ್ದೇವೆ ಎಂದರು! ವ್ಹಾ! ಅಹಿಂಸೆ ಅಹಿಂಸೆ ಎನ್ನುತ್ತಲೇ ಹೋದ ಗಾಂಧಿಗೆ, ಭಾರತೀಯರ ಪ್ರಾಣಗಳೆಂದರೆ, ಅತ್ತ ಅದೋ! ಕೋಳಿಯಂಗಡಿಯವನ ಕೈಗೆ ಸಿಕ್ಕಿ ಕುತ್ತಿಗೆ ಮುರಿಸಿಕೊಂಡು ಪ್ರಾಣ ಬಿಡುವ ಕೋಳಿಗಳಂತೆ!

ಇರಬಹುದು!! ಮಹಾತ್ಮಾ ಗಾಂಧಿ ಅಹಿಂಸೆಯನ್ನು ಭೋಧಿಸಿದರೋ ಅಥವಾ, ಇನ್ನೇನೋ, ಆದರೆ, ಭಾರತೀಯರಲ್ಲಿ ಸ್ವಾತಂತ್ರ್ಯದ ಬಗ್ಗೆ ಅರಿವು ಮೂಡಿಸಿರಬಹುದು! ಅಥವಾ, ಮಹಾತ್ಮಾ ಗಾಂಧಿಯವರ ಆಲೋಚನೆಗಳು, ದೇಶ ಇಬ್ಭಾಗವಾಗುವದಕ್ಕಿಂತ ಮುಂಚೆ, ಕೊಡುಗೆಯನ್ನೂ ಕೊಟ್ಟಿರಬಹುದಾದರೂ ಸಹ, ಕೇವಲ ಅಹಿಂಸಾ ಚಳುವಳಿಗಳು, ಅಥವಾ ಕ್ವಿಟ್ ಇಂಡಿಯಾ ಮಾತ್ರವೇ ಭಾರತಕ್ಕೆ ಸ್ವಾತಂತ್ರ್ಯ ಕೊಟ್ಟಿತು ಎನ್ನುವುದು ಬಹಳ ಅಪ್ರಬುದ್ಧವಾದ ಮತ್ತು ಅತೀ ಮೂರ್ಖ ಮಾತುಗಳಷ್ಟೇ!! ಅವರ ಹೋರಾಟಗಳು ಸ್ವಾತಂತ್ರ್ಯ ತಂದು ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು ಎನ್ನುವುದೂ ಸಹ ಅತಿಶಯೋಕ್ತಿಯೇ! ಯಾಕೆಂದರೆ, ಬ್ರಿಟಿಷರು ಬೆಚ್ಚಿದ್ದು, ಮದ್ದುಗುಂಡುಗಳಿಗೇ ವಿನಃ ಸ್ವಾತಂತ್ರ್ಯ ” ಬೇಡಿದ” ಕೈಯ್ಯನ್ನಲ್ಲ ಅಲ್ಲವೇ?!
ಹಾಗಿದ್ದಾಗ, ಭಾರತದ ಮೇಲೆ ಅದೆಷ್ಟೋ ದಶಕಗಳ ಕಾಲ ಹಿಡಿತ ಸಾಧಿಸಿದ್ದ ಬ್ರಿಟಿಷರಿಗೆ ಇದ್ದಕ್ಕಿದ್ದಂತೆ ಭಾರತ ಬಿಟ್ಟು ಹೊರಡಬೇಕು ಎನ್ನಿಸಿದ್ದು ಯಾಕೆ ಗೊತ್ತಾ?!

ಸ್ವಾತಂತ್ರ್ಯದ ರಹಸ್ಯವನ್ನು ಬಿಚ್ಚಿಟ್ಟಿದ್ದರು ಬಿ ಆರ್ ಅಂಬೇಡ್ಕರ್!

ಫೆಬ್ರುವರಿ ೧೯೫೫ ರಲ್ಲಿ ನಡೆಸಿದ ಸಂದರ್ಶನವೊಂದರಲ್ಲಿ, ಮುಚ್ಚು ಮರೆಯಿಲ್ಲದೇ ಅಂಬೇಡ್ಕರ್ ಹೇಳಿದ್ದರು! “೧೯೪೭ ರಲ್ಲಿ ಅದ್ಹೇಗೆ, ಇದ್ದಕ್ಕಿದ್ದಂತೆ ಬ್ರಿಟಿಷ್ ಪ್ರಧಾನಿಯಾದ ಶ್ರೀ ಅಟ್ಲೀ ಯವರು ಒಪ್ಪಿದರೆಂದೇ ಅರ್ಥವಾಗಲಿಲ್ಲ! ಆದರೆ, ಸ್ವಾತಂತ್ರ್ಯವನ್ನು ಯಾಕೆ ಕೊಡಬೇಕಾಗಿ ಬಂತೆನ್ನುವುದನ್ನು ಅಟ್ಲೀ ತಮ್ಮ ಆತ್ಮಚರಿತ್ರೆಯಲ್ಲಿ ವಿವರಿಸಿದ್ದರು! ಅವರು, ಹೀಗೆ ಇದ್ದಕ್ಕಿದ್ದಂತೆ, ಅಧಿಕಾರ ಹಸ್ತಾಂತರಕ್ಕೆ ಸಿದ್ಧವಾಗುತ್ತಾರೆ ಎ‌ಂಬುದನ್ನು ಯಾರೂ ನಿರೀಕ್ಷಿಸಿರಲಿಲ್ಲ!”

“ If I have to recall, then British Prime Minister’s decision to agree to the transfer of power in 1947. I don’t know how Mr Attlee suddenly agreed to give India independence. That is a secret that he will disclose in his autobiography. None expected that he would do that.!”

– Ambedkar

ಅಚ್ಚರಿಯೆಂದರೆ, ಅಂಬೇಡ್ಕರ್ ೧೯೫೬ ಅಕ್ಟೋಬರ್ ನಲ್ಲಿ ನಿಧನರಾಗುವುದಕ್ಕಿಂತ ಮುಂಚೆ, ಕ್ಲಿಮೆಂಟ್ ಅಟ್ಲೀ ತೀರಾ ಎನ್ನುವಷ್ಟು ರಹಸ್ಯ ವಾದ ಮಾತುಕಥೆಗಳ ಪ್ರಸ್ತಾಪವನ್ನು ಬಹಿರಂಗಪಡಿಸಿದ್ದಾದರೂ ಸಹ, ಸಾರ್ವಜನಿಕ ವಲಯದಲ್ಲಿ ಅಟ್ಲೀಯವರ ಖಾಸಗಿ ವಿಚಾರಗಳು ಬಯಲಗಲು ಅದೆಷ್ಟೋ
ದಶಕಗಳೇ ಹಿಡಿದು ಬಿಟ್ಟಿತು ಬಿಡಿ!

ಬಾಬಾ ಸಾಹೇಬ್ ಅಂಬೇಡ್ಕರ್ ರವರೇ ಸ್ವತಃ ಒಪ್ಪುವಂತೆ, ಅಟ್ಲೀಯ ಈ ನಿರ್ಧಾರ ಅವರಿಗೆ ಅಚ್ಚರಿಯಾಗಿರಲೇ ಇಲ್ಲ! ಯಾಕೆಂದರೆ, ಸ್ವಾತಂತ್ರ್ಯ ಪೂರ್ವಕ್ಕೂ ಮುನ್ನ ನಡೆದ ಘಟನೆಗಳು ನೇರವಾಗಿ, ಸ್ವಾತಂತ್ರ್ಯದ ಕಡೆಗೇ ಬೊಟ್ಟು ಮಾಡಿ ತೋರಿಸುತ್ತಿದ್ದವು ಅಷ್ಟೇ! ಅದಲ್ಲದೇ, ತಕ್ಷಣವೇ ಸ್ವಾತಂತ್ರ್ಯ ಕೊಡಲು ಅಟ್ಲೀಯವರ “ಲಿಬರ್ಟಿ ಪಕ್ಷ” ಕ್ಕೆ ಕಾರಣವಾಗಿದ್ದು ಎರಡೇ ಎರಡು ಕಾರಣಗಳು!

“ಮೊದಲನೆಯದಾಗಿ, ಇಂಡಿಯನ್ ನ್ಯಾಷನಲ್ ಆರ್ಮಿಯನ್ನು ಕಟ್ಟಿದ್ದು ಒಬ್ಬ ಸುಭಾಷ್ ಚಂದ್ರ ಬೋಸ್! ಸೈನಿಕರ ತರಬೇತಿಯನ್ನೂ ಸ್ವತಃ ನಿಂತು ಕಾಳಜಿ ವಹಿಸಿದ್ದರ ಪರಿಣಾಮ, ಬ್ರಿಟಿಷ್ ಸೈನಿಕರಿಗಿಂತ ಹೆಚ್ಚು ತೀಕ್ಷ್ಣ ಹೋರಾಟಕ್ಕಿಳಿಯ ಬಲ್ಲಂತಹ ಸೈನಿಕರು ತಯಾರಾಗಿದ್ದು ಒಂದೆಡೆಯಾದರೆ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ವಶಪಡಿಸಿಕೊಂಡಿದ್ದು!”

“ಅದಲ್ಲದೇ, ಏನೇ ಆದರೂ ಸಹ, ಭಾರತದಲ್ಲಿರುವ ಸೈನಿಕರು ತಮ್ಮ ಗುಲಾಮಗಿರಿಗೆ ಮತ್ತು ಬ್ರಿಟಿಷರಿಗೆ ನಿಷ್ಟವಾಗಿ ಬದುಕುತ್ತಾರೆ ಎಂದು ಕೊಂಡಿದ್ದು!! ಅದೇ ಆಧಾರದ ಮೇಲೆ ಬ್ರಿಟಿಷ್ ನಮ್ಮನ್ನು ಆಳತೊಡಗಿದ್ದಲ್ಲವೇ?! ಯಾವಾಗ, ಸುಭಾಷ್ ಚಂದ್ರರು ಸೈನ್ಯ ಕಟ್ಟಿದರೋ, ಆಗ ಇಲ್ಲಿದ್ದ ಭಾರತೀಯ ಸೈನಿಕರು ಬ್ರಿಟಿಷರ ವಿರುದ್ಧ ತಿರುಗಿ ಬಿದ್ದಿದ್ದರು! ಸೈನ್ಯದಿಂದ ಹೊರ ಹೋಗಲು ತಯಾರಿದ್ದ ಸೈನಿಕರು ಸುಭಾಷ್ ಚಂದ್ರ ಬೋಸರ ಸೈನ್ಯವನ್ನು ಸೇರಿದರೆ, ಬ್ರಿಟಿಷ್ ಸರಕಾರಕ್ಕೆ ಅತಿ ದೊಡ್ಡ ಹೊಡೆತ ಬೀಳುತ್ತಿತ್ತು! “

The national army that was raised by Subhas Chandra Bose. The British had been ruling the country in the firm belief that whatever may happen in the country or whatever the politicians do, they will never be able to change the loyalty of soldiers. That was one prop on which they were carrying on the administration. And that was completely dashed to pieces. They found that soldiers could be seduced to form a party — a battalion to blow off the British.

– Dr. B.R.Ambedkar

ಬೇಕಾದರೆ, ಅವತ್ತಿನ ಇತಿಹಾಸ ಕಾಲದ ದಾಖಲೆಗಳು ಮತ್ತು ಪರಿಸ್ಥಿತಿಯನ್ನು ಬೇಕಾದರೆ ಅವಲೋಕಿಸಿ ನೋಡಿ! ರಾಷ್ಟ್ರೀಯ ಭದ್ರತಾ ಸಲಹೆಗಾರರಾದ
ಅಜಿತ್ ದೋವಲ್ ಅಥವಾ ಮೇಜರ್ ಜನರಲ್ ಆದ ಜಿ ಡಿ ಭಕ್ಷಿ ಯ ಹೇಳಿಕೆಗಳು ಸತ್ಯವೇ ಎನ್ನಿಸುತ್ತದೆ! ಬಿ ಆರ್ ಅಂಬೇಡ್ಕರ್ ರವರು ಹೇಳಿದ್ದ ಮಾತನ್ನೇ ಇವರೂ ಹೇಳಿದ್ದು!

ಇಂಟೆಲಿಜೆನಸ್ಸ್ ಬ್ಯೂರೋ ನಿರ್ದೇಶಕರಾಗಿದ್ದ ಸರ್ ನಾರ್ಮನ್ ಸ್ಮಿತ್ ೧೯೪೫ ನವೆಂಬರ್ ನ ದಾಖಲೆಗಳನ್ನಾಧರಿಸಿ, ಹೇಳುವ ಪ್ರಕಾರ, “ಸುಭಾಷ 
ಚಂದ್ರ ಬೋಸರ ಸೈನ್ಯವೊಂದನ್ನು ಕಡೆಗಣಿಸಲು ಸಾಧ್ಯವಿರದಷ್ಟು ಬಲವಾಗಿದ್ದಲ್ಲದೇ, ಸಾರ್ವಜನಿಕರಲ್ಲೂ ಅದೆಷ್ಟೋ ಕುತೂಹಲಗಳು ಹೆಚ್ಚಿತ್ತು!! ಅದಲ್ಲದೇ, ಅವತ್ತಿನ ಪರಿಸ್ಥಿತಿಯ ಪ್ರಕಾರ, ಬೋಸರ ಸಾಧನೆಯೊಂದು ಭಾರತೀಯ ತರುಣರನ್ನು ಆಕರ್ಷಿಸಿತ್ತು‌! ಬ್ರಿಟಿಷರಿಗೂ ಸಹ ಇದ್ದ ಬೆದರಿಕೆಯನ್ನು ನಿರ್ಲಕ್ಷಿಸುವುದು ಅಸಾಧ್ಯವಾಗಿತ್ತು!” ಎನ್ನಬೇಕಾದರೆ ಯೋಚಿಸಿ! ಬ್ರಿಟಿಷರಿಗೆ ಅದೆಷ್ಟು ರೀತಿಯಲ್ಲಿ ಬೆದರಿಕೆ ಹಾಕಿತ್ತು ಬೋಸರ ಸೈನ್ಯ ಎಂಬುದು!

The situation in respect of the Indian National Army is one which warrants disquiet. There has seldom been a matter which has attracted so much Indian public interest and, it is safe to say, sympathy… the threat to the security of the Indian Army is one which it would be unwise to ignore.”

– Sir Norman Smith

ಲೆಫ್ಟಿನೆಂಟ್ ಜನರಲ್ ಆಗಿದ್ದ ಎಸ್ ಕೆ ಸಿನ್ಹಾ ಮಾತ್ರ, ಬ್ರಿಟಿಷರ ಹೆದರಿಕೆಯನ್ನು ಸರಿಯಾಗಿ ಊಹಿಸಿದ್ದರು! ೧೯೪೬ ರಲ್ಲಿ ಸೇನಾ ಕಾರ್ಯಾಚರಣೆಗಳಿಗೆ ಆಯ್ಕೆಯಾದ ಮೂವರು ನಿರ್ದೇಶಕರಲ್ಲಿ ಇವರೂ ಒಬ್ಬರು! ೧೯೭೬ ರಲ್ಲಿ , ಎಸ್ ಕೆ ಸಿನ್ಹಾ, “ಅವತ್ತಿನ ಭಾರತೀಯ ಸೇನೆಯಲ್ಲಿ ಅದಾಗಲೇ ಬೋಸರ ಸೈನ್ಯದ ಬಗ್ಗೆ ಒಂದು ಆಕರ್ಷಣೆ ಮತ್ತು ನಂಬಿಕೆ ಮೂಡಿತ್ತು! ಅದು ಸಹಜವೂ ಕೂಡ! ೧೮೫೭ ರಲ್ಲಿ ನಡೆದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೊಂದು ಅದಾಗಲೇ ಬ್ರಿಟಿಷರ ನಿದ್ದೆ ಗೆಡಿಸಿತ್ತು!!” ಎಂದು!

ಕ್ಲಿಮೆಂಟ್ ಅಟ್ಲೀ ಸ್ವತಃ ಒಪ್ಪಿದ್ದರು! “ನಮಗೆ ನಮ್ಮನ್ನು ಉಳಿಸಿಕೊಳ್ಳುವುದರಲ್ಲಿ ಅಥವಾ, ನಮ್ಮ ಕನಸನ್ನು ನನಸಾಗಿಸಲು ಇರುವುದು ಎರಡೇ ದಾರಿ! ಒಂದು, ನಾವು ಹೊರ ಹೋಗಲು ವ್ಯವಸ್ಥೆ ಮಾಡಿಕೊಳ್ಳಬೇಕು! ಎರಡನೆಯದರು, ನಮ್ಮನ್ನು ಹೊರ ಹಾಕುವ ತನಕ ಕಾಯಬೇಕು! ಭಾರತೀಯ ಸೇನೆ ಯ ನಿಷ್ಠೆಯನ್ನು ಪ್ರಶ್ನಿಸುವ ಅವಕಾಶವೇ ಇಲ್ಲ! ಯಾಕೆಂದರೆ, ಅವರೀಗಾಗಲೇ ಬೋಸರ ಸೇನೆ ಸೇರಲು ಸಿದ್ಧರಾಗಿದ್ದಾರೆ! ಇತ್ತ, ಬೋಸರ ಸೈನ್ಯ ಭಾರತದಲ್ಲಿ ರಾಷ್ಟ್ರೀಯ ನಾಯಕರ ರೀತಿ ಬಿಂಬಿಸಲ್ಪಡುತ್ತಿದೆ!

“There was considerable sympathy for the INA within the Army… It is true that fears of another 1857 had begun to haunt the British in 1946.”

– S.K.Sinha

There are two alternative ways of meeting this common desire (a) that we should arrange to get out, (b) that we should wait to be driven out. In regard to (b), the loyalty of the Indian Army is open to question; the INA have become national heroes…”

– Clement Attlee

ಅರ್ಥವಾಯಿತಾ?! ಅವತ್ತೇ, ಅಂಬೇಡ್ಕರ್ ಪರೋಕ್ಷವಾಗಿ ನುಡಿದಿದ್ದರು! ಮಹಾತ್ಮ ಗಾಂಧಿ “ಮಹಾತ್ಮ”ನಲ್ಲ ಎಂಬುದನ್ನು!! ಭಾರತಕ್ಕೆ ಸ್ವಾತಂತ್ರ್ಯ್ಯ ಸಿಕ್ಕಿದ್ದು ಕ್ರಾಂತಿಗಳಿಂದಲೇ ಹೊರತು ಅಹಿಂಸೆಯಿಂದಲ್ಲ ಎಂಬುದನ್ನು! ಸ್ವತಃ, ಗಾಂಧಿಯ ಇಬ್ಬಗೆ ನೀತಿಯೊಂದು ಅವತ್ತು, ಇಡೀ ಚಳುವಳಿಯನ್ನು ವಾಪಸ್ಸು ತೆಗೆದುಕೊಂಡಿದ್ದಲ್ಲದೇ, ಅದೆಷ್ಟೋ ಸಹಸ್ರ ಭಾರತೀಯರಿಗೆ ನಿರಾಸೆಯಾಗಿ ಹೋಗಿತ್ತು!! ದುರಾದೃಷ್ಟ ಭಾರತೀಯರದ್ದು ಬಿಡಿ! ಸುಭಾಷರು ಸ್ವಾತಂತ್ರ್ಯವನ್ನು ನೀಡಿದರು! ಸಾವರ್ಕರ್ ರಂತಹ ದೇಶಭಕ್ತರ ಮಾರ್ಗದರ್ಶನ ಪಡೆದು ಸ್ವರಾಜ್ಯ ಸ್ಥಾಪಿಸಿದರು! ಆದರೆ, ಯಾವತ್ತು ಭಾರತಕ್ಕೆ ಅವರ ಅಗತ್ಯ ಬಿತ್ತೋ, ಅವತ್ತು ಇದ್ದಕ್ಕಿದ್ದಂತೆ ಕಣ್ಮರೆಯಾಗಿ ಹೋದರು! ಭಾರತದಲ್ಲಿನ ಅಗತ್ಯವೂ ಅವರಿಗೆ ಗೋಚರಿಸಲೇ ಇಲ್ಲ! ಕೊನೆ ಕೊನೆಗೆ, ಒಬ್ಬ ಸನ್ಯಾಸಿ ಯಾದರೋ ಎನ್ನುವ ಅನುಮಾನವನ್ನೂ ಸಹ ಹೂತಿಟ್ಟರು!! ಅದೇ ನೋಡಿ! ಇವತ್ತಿಗೂ ಸಹ, ನಮಗೆ ನಮ್ಮ ರಾಷ್ಟ್ರದ ನಾಯಕರ ಸಾವಿಗೆ ಕಾರಣಗಳೇನು ಎನ್ನುವುದಾಗಲಿ, ಅಥವಾ ಸಂಬಂಧಪಟ್ಟ ದಾಖಲೆಗಳಾಗಿ ಯಾವುದೂ ಸಿಗಲೇ ಇಲ್ಲವೋ, ಅಥವಾ ನಾವು ಅಸಹಾಯಕರಾಗಿ ಕುಳಿತೆವೋ! ಒಟ್ಟಿನಲ್ಲಿ, ಭಾರತವೊಂದು ನೆಹರೂವಿನಂತಹ ಪ್ರಧಾನಿಯೊಂದನ್ನು ಪಡೆದುಕೊಂಡು ಅಕ್ಷರಶಃ ಕುಸಿದು ಬಿದ್ದಿತ್ತು!! ಅಷ್ಟೇ!

ಇನ್ನಾದರೂ ಎಚ್ಚೆತ್ತು ಕೊಳ್ಳಬಹುದಾ ಭಾರತೀಯರು?!!

Source :Swarajya – Bose gave independence, not gandhi

– ತಪಸ್ವಿ

Tags

Related Articles

Close