ಪ್ರಚಲಿತ

ಅಂದು ಅಂಬರೀಶ್‍ನನ್ನು ರಾಹುಲ್‍ಗಾಂಧಿ ಕಡೆಗಣಿಸಲು ಕಾರಣ ಯಾರು ಗೊತ್ತೇ? ಕನ್ನಡಿಗರ ಅಂತಸತ್ವ ಕಲಕ್ಕಿದ್ದ ಆ ಘಟನೆಯ ಸ್ಫೋಟಕ ಮಾಹಿತಿ ಬಹಿರಂಗ!!

ನಿಮಗೆ ನೆನಪಿದೆಯೋ ಇಲ್ಲವೋ ಗೊತ್ತಿಲ್ಲ. ಅದೊಂದು ವಿಡಿಯೋ ರಾಜ್ಯದಲ್ಲೆಲ್ಲೆಡೆ ಭಾರೀ ಸುದ್ದಿ ಮಾಡಿತ್ತು. ಆ ವಿಡಿಯೋದಲ್ಲಿ ತೋರಿಸಿದಂತೆ ವೇದಿಕೆಯಲ್ಲಿ ಅಂಬರೀಶ್ ಆಸೀನರಾಗಿದ್ದರು. ಇದೇ ವೇಳೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ವೇದಿಕೆಗೆ ಕೈಬೀಸಿಕೊಂಡು ಬರುತ್ತಿದ್ದರು. ರಾಹುಲ್ ಗಾಂಧಿ ಹತ್ತಿರ ಬರುತ್ತಿದ್ದಂತೆ ಅಂಬರೀಶ್ ಅವರು ರಾಹುಲ್ ಗಾಂಧಿಯವರನ್ನು ಬರಮಾಡಿಕೊಳ್ಳಲು ಮುಂದಾಗಿದ್ದರು. ಆದರೆ ಇದನ್ನೆಲ್ಲಾ ಕ್ಯಾರ್ ಮಾಡದ ರಾಹುಲ್ ಗಾಂಧಿ ಅವರು ಅಂಬರೀಶ್‍ನನ್ನು ದೂಡಿ ಮುಂದೆ ಸಾಗಿದ್ದರು. ಇದರಿಂದ ಮುಜುಗರಕ್ಕೊಳಗಾದಂತೆ ಕಂಡುಬಂದ ಅಂಬರೀಶ್ ಏನೂ ಮಾಡದಂತೆ ಕೈಕೈ ಹಿಸುಕಿಕೊಳ್ಳುವುದು ಬಹಿರಂಗಗೊಂಡಿತ್ತು…

ಯಾರೋ ಒಬ್ಬ ಪುಣ್ಯಾತ್ಮ ಇದರ ವಿಡಿಯೋವನ್ನು ತೆಗೆದು ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದ. ಇದು ಸುದ್ದಿಮಾಧ್ಯಮಗಳಲ್ಲಿ ಸಾಕಷ್ಟು ಪ್ರಚಾರ ಪಡೆದಿತ್ತು. ಈ ಘಟನೆ ಕನ್ನಡಿಗರ ಅಂತಸತ್ವವನ್ನೇ ಕಲಕುವಂತೆ ಮಾಡಿದ್ದಲ್ಲದೆ ಕನ್ನಡದ ಹಿರಿ ನಟರೊಬ್ಬರಿಗೆ ಭಾರೀ ಅವಮಾನವಾಗಿದೆ ಎಂದು ಅಂಬರೀಶ್ ಅಭಿಮಾನಿಗಳು ಕಿಡಿಕಾರಿದ್ದರು.. ಈ ರೀತಿ ಆಗಲು ಕಾರಣವೂ ಇದ್ದು, ಆ ಘಟನೆಗೆ ಕಾರಣ ಏನು ಎಂಬ ಬಗ್ಗೆ ಸ್ಫೋಟಕ ಮಾಹಿತಿಯೊಂದು ಇದೀಗ ಬಹಿರಂಗಗೊಂಡಿದೆ.

ಅಂಬರೀಶ್ ಅವರು ಕಾಂಗ್ರೆಸ್‍ನಿಂದ ಎಂದೋ ಮಾನಸಿಕವಾಗಿ ದೂರವಾಗಿದ್ದಾರೆ. ಒಮ್ಮೆ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆಗೆ ಮುಂದಾಗಿದ್ದ ಅಂಬರೀಶ್ ಕೊನೆಗೆ ಪಕ್ಷದ ಹಿರಿಯ ಮುಖಂಡರ ಒತ್ತಾಸೆಯಂತೆ ಪಕ್ಷದಲ್ಲೇ ಮುಂದುವರಿದಿದ್ದರು. ಅವರನ್ನು ಸಂಪುಟ ದರ್ಜೆಯಿಂದ ಕಿತ್ತುಹಾಕಲಾಗಿದ್ದಲ್ಲದೆ, ಇಂದು ಅವರು ಹೆಸರಿಗಷ್ಟೇ ಪಕ್ಷದಲ್ಲಿ ಮುಂದುವರಿದಿದ್ದಾರೆ. ಒಮ್ಮೆ ಇವರು ಜೆಡಿಎಸ್ ಪಕ್ಷಕ್ಕೆ ಪಕ್ಷಾಂತರಗೊಳ್ಳಲಿದ್ದಾರೆ ಎಂ ಸುದ್ದಿಯೂ ಹಬ್ಬಿತ್ತು. ಆದರೆ ಚುನಾವಣೆಗೆ ಇನ್ನೂ ಹಲವು ತಿಂಗಳಿರುವುದರಿಂದ ಮುಂದೇನಾಗಬಹುದು ಎನ್ನುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಅಂಬರೀಶ್ ರಾಜಕೀಯ ಭವಿಷ್ಯಕ್ಕೆ ಕೊಳ್ಳಿ ಇಟ್ಟರೇ ಮೋಹಕ ತಾರೆ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನಾ?

ಮಂಡ್ಯಾದಲ್ಲಿ ರಾಜಕೀಯ ಜೀವನ ಆರಂಭಿಸಿದ್ದ ಅಂಬರೀಶ್ ಅವರನ್ನು ಮಂಡ್ಯದ ಗಂಡು ಎಂದು ಇಂದಿಗೂ ಮಂಡ್ಯದ ಜನ ಅಭಿಮಾನದಿಂದ ಹೇಳುತ್ತಾರೆ. ಮಂಡ್ಯದಲ್ಲಿ ಅಮೋಘವಾಗಿ ಹಲವು ಬಾರಿ ಗೆದ್ದಿದ್ದ ಅಂಬರೀಶ್ ಅವರು ಒಮ್ಮೆ ತಮ್ಮ ಕ್ಷೇತ್ರದಲ್ಲಿ ರಮ್ಯಾಳಿಗೂ ಅವಕಾಶ ಕೊಟ್ಟಿದ್ದರು. ಅಂಬಿ ಅಂಕಲ್ ಅಂಬಿ ಅಂಕಲ್ ಎಂದು ಅವರ ಸುತ್ತನೇ ಸುತ್ತುತ್ತಿದ್ದ ರಮ್ಯಾಳನ್ನು ಅಂಬರೀಶ್ ಅವರು ರಾಜಕೀಯವಾಗಿ ಬೆಳೆಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಅದೇ ದಿವ್ಯಸ್ಪಂದನಾ ತನ್ನನ್ನು ಬೆಳೆಸಿದವರನ್ನೇ ಮರೆತುಬಿಟ್ಟಿದ್ದಾರೆಯೇ ಎಂಬ ಪ್ರಶ್ನೆಯೊಂದು ಮೂಡಿದೆ.

ಇಂದು ರಮ್ಯಾ ರಾಷ್ಟ್ರಮಟ್ಟದ ನಾಯಕಿಯಾಗಿ ಹೊರಹೊಮ್ಮಿದ್ದಾರೆ. ಕಾಂಗ್ರೆಸ್ ಅವರನ್ನು ಜಾಲತಾಣದ ಮುಖ್ಯಸ್ಥೆಯನ್ನಾಗಿ ಆಯ್ಕೆ ಮಾಡಿಕೊಂಡು ಅವರಿಗೆ ಸ್ಟಾರ್ ಪಟ್ಟ ನೀಡಿತು. ಇಂದು ಅದೇ ರಮ್ಯಾ ರಾಜ್ಯರಾಜಕಾರಣಕ್ಕೆ ಬರುತ್ತಾರೆ ಎಂದು ಸುದ್ದಿಯೂ ಹಬ್ಬಿತ್ತು. ಮಂಡ್ಯಾದಲ್ಲಿ ಅಂಬರೀಶ್ ಅವರನ್ನು ಕಡೆಗಣಿಸಿ ಅವರ ಕ್ಷೇತ್ರದಲ್ಲಿ ರಮ್ಯಾಳಿಗೆ ಟಿಕೆಟ್ ನೀಡುವ ಪ್ಲಾನ್ ಕೂಡಾ ನಡೆಯುತ್ತಿದೆ ಎಂಬ ಗುಸುಗುಸು ಹಬ್ಬಿದೆ. ಇದು ಅಂಬರೀಶ್ ಅವರ ನೋವಿಗೂ ಕಾರಣವಾಗುವ ಸಾಧ್ಯತೆ ಇದೆ.

ಇಂದು ಕಾಂಗ್ರೆಸ್‍ನಿಂದ ಬಲುದೂರ ಸಾಗಿರುವ ಅಂಬರೀಶ್ ಅವರಲ್ಲಿ ಹಿಂದಿನಂತೆ ಲವಲವಿಕೆ ಕಾಣುತ್ತಿಲ್ಲ. ಇದಕ್ಕೆಲ್ಲಾ ಪ್ರಮುಖ ಕಾರಣ ರಮ್ಯಾ ಎಂಬ ಶಂಖೆಗೆ ಕಾರಣವಾಗಿದೆ. ಅಂಬರೀಶ್ ಬಗ್ಗೆ ರಾಹುಲ್ ಗಾಂಧಿಯವರಲ್ಲಿ ಚಾಡಿ ಹೇಳುತ್ತಿದ್ದಾರೆ ಎಂಬ ಶಂಕೆ ಹಿಂದಿನಿಂದಲೂ ಕಾಡುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಅಂಬರೀಶ್ ಅವರಲ್ಲಿ ಒಳ್ಳೆಯ ಭಾವನೆಯಿಲ್ಲ ಎಂಬ ಭಾವನೆ ಮನೆಮಾಡಿದ್ದು ಇದು ಅದೇ ಅಂಬರೀಶ್ ಅವರನ್ನು ಪಕ್ಷದ ಚಟುವಟಿಕೆಗಳಿಂದ ದೂರ ಸರಿಯುವಂತೆ ಮಾಡಿದೆ. ರಮ್ಯಾಳ ಚಾಡಿ ಮಾತನ್ನು ಕೇಳಿಕೊಂಡೇ ಇಂದು ಅಂಬರೀಶ್ ಅವರನ್ನು ಹೈಕಮಾಂಡ್ ಮಟ್ಟದಲ್ಲಿ ಕಡೆಗಣಿಸಲಾಗುತ್ತಿದೆಯೇ ಎಂಬ ಭಾವನೆ ಮನೆ ಮಾಡಿದೆ.

ಇದಕ್ಕೆ ಒಂದು ಬಲವಾದ ಕಾರಣವೂ ಇದೆ.

ಎಪ್ರಿಲ್ ತಿಂಗಳಲ್ಲಿ ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆ ನಡೆಯಲಿದೆ. ಟಿಕೆಟ್ ಹಂಚಿಕೆ ವಿಚಾರದಲ್ಲಿ ಈಗಾಗಲೇ ಕಾಂಗ್ರೆಸ್‍ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಅದೇ ರೀತಿ ಮಂಡ್ಯಾ ಕ್ಷೇತ್ರದಲ್ಲೂ ನಡೆಯುತ್ತಿದೆ. ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಅಂಬಿ ಹಾಗೂ ರಮ್ಯಾ ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇದ್ದು, ಅದು ಕೊನೆಗೂ ಸ್ಫೋಟಗೊಂಡಿದೆ. ಇದೆಲ್ಲಾ ಅಂಬರೀಶ್ ಅವರನ್ನು ಕಾಂಗ್ರೆಸ್ ಮೇಲೆ ಮುನಿಸಿಕೊಳ್ಳುವಂತೆ ಮಾಡಿದೆ.

ಬುಧವಾರ ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರು ಕೆಪಿಸಿಸಿ ಸಭೆಯನ್ನು ಕರೆದಿದ್ದರು. ಈ ಸಭೆಗೆ ಹಾಜರಾಗುವಂತೆ ಖುದ್ದಾಗಿ ವೇಣುಗೋಪಾಲ್ ಅವರೇ ಅಂಬರೀಶ್ ಅವರಿಗೆ ಕರೆ ಮಾಡಿ ತಿಳಿಸಿದ್ದರು. ಆದರೆ ಅಂಬರೀಶ್ ಅವರು ಬುಧವಾರದ ಕೆಪಿಸಿಸಿ ಸಭೆಗೆ ಹಾಜಾರಾಗದೇ ಇರುವುದು ಅನುಮಾನಕ್ಕೆ ಪುಷ್ಟಿ ನೀಡಿದೆ. ಮಂಡ್ಯ ಮುಖಂಡರೊಂದಿಗೆ ಹಾಜರಾಗುವಂತೆ ಅಂಬಿಗೆ ಖುದ್ದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರೇ ದೂರವಾಣಿ ಕರೆ ಮಾಡಿ ತಿಳಿಸಿದ್ದರೂ ಕೂಡಾ ಅಂಬಿ ಕ್ಯಾರೆ ಎನ್ನದೆ ಸಭೆಯಲ್ಲಿ ಗೈರಾಗಿದ್ದಾರೆ.

ಹೈಕಮಾಂಡ್ ಸೂಚನೆಯಂತೆ ವಿಧಾನಸಭೆ ಚುನಾವಣೆಗೆ ರಮ್ಯಾ ಅವರನ್ನು ಕಾಂಗ್ರೆಸ್‍ನ ಸ್ಟಾರ್ ಪ್ರಚಾರಕಿಯಾಗಿ ನೇಮಕಗೊಳಿಸಲಾಗಿದೆ. ಅಲ್ಲದೆ ರಮ್ಯಾ ಅವರ ಹುಟ್ಟುಹಬ್ಬದ ವೇಳೆ ಮಂಡ್ಯದಲ್ಲಿ ಹಾಕಲಾದ ಫ್ಲೆಕ್ಸ್‍ಗಳಲ್ಲಿ ಸ್ಥಳೀಯ ಮತ್ತು ರಾಜ್ಯ ನಾಯಕರ ಫೆÇೀಟೋಗಳು ಇದ್ದರೂ ಅಂಬರೀಷ್ ಫೆÇೀಟೊಗಳೇ ಇರಲಿಲ್ಲ. ಇದರಿಂದಾಗಿ ಅಂಬರೀಶ್ ಅವರನ್ನು ಹೈಕಮಾಂಡ್ ಮಟ್ಟದಲ್ಲೇ ಕಡೆಗಣಿಸುತ್ತಿರುವುದರ ಬಗ್ಗೆ ಅನುಮಾನ ವ್ಯಕ್ತವಾಗಿದೆ.


ಮಂಡ್ಯ ಕ್ಷೇತ್ರದ ಟಿಕೆಟ್ ಹಂಚಿಕೆ ಕುರಿತು ಪ್ರತಿಕ್ರಿಯೆ ನೀಡಿದ್ದ ಅಂಬಿ, ಸೌಮ್ಯಾ, ಸುಮಾ ಯಾರಿಗಾದರೂ ಟಿಕೆಟ್ ನೀಡಲಿ ನಾನು ಅವರ ಪರ ಕೆಲಸ ಮಾಡುತ್ತೇನೆ. ಪಕ್ಷದ ಕೆಲಸ ನಿರ್ವಹಿಸುತ್ತೇನೆ ಎಂದು ಜಾಣ್ಮೆಯ ಹೆಜ್ಜೆಯಿಟ್ಟಿದ್ದರು. ಆದರೆ, ರಮ್ಯಾ ಮಾತ್ರ ವಿಧಾನಸಭೆಯಲ್ಲಿ ಸ್ಪರ್ಧಿಸುವುದು ಅಷ್ಟು ಸುಲಭದ ಮಾತಲ್ಲ ಎಂದು ರಾಜ್ಯ ರಾಜಕಾರಣ, ಅದರಲ್ಲೂ ಮಂಡ್ಯ ಸ್ಪರ್ಧೆಯ ಬಗೆಗಿನ ಊಹಾಪೆÇೀಹಕ್ಕೆ ತೆರೆ ಎಳೆಯುವ ಪ್ರಯತ್ನ ನಡೆಸಿದ್ದರು. ಆದರೆ ಇದೆಲ್ಲಾ ಇಂದು ಉಲ್ಟಾ ಹೊಡೆದಿದೆ.

ಅಂದು ರಾಹುಲ್ ಗಾಂಧಿಯವರು ಅಂಬರೀಶ್‍ನನ್ನು ಕಡೆಗಣಿಸಲು ರಮ್ಯಾ ಅವರೇ ಕಾರಣ ಎನ್ನುವ ಗುಸುಗುಸು ಸುದ್ದಿ ಹರಿದಾಡಿ ಭಾರೀ ಸದ್ದು ಮಾಡುತ್ತಿದೆ. ಅಂಬರೀಶ್ ಅವರು ಯಾರನ್ನು ಹಿಂದೆ ನಿಂತು ಪಕ್ಷದಲ್ಲಿ ಬೆಳೆಸುವಂತೆ ಮಾಡಿದ್ದಾರೋ ಅವರಿಂದಲೇ ಇಂದು ಅಂಬರೀಶ್ ಕಡೆಗಣನೆಗೊಳ್ಳುವಂತೆ ಆಗಿದೆ ಎನ್ನುವುದೇ ಒಂದು ವಿಪರ್ಯಾಸ.

source:https://goo.gl/2UuSFH

ಚೇಕಿತಾನ

Tags

Related Articles

Close