ಅಂಕಣಪ್ರಚಲಿತ

ಅಂದು ರಾಜೀವ್ ಗಾಂಧಿಯವರು ರಾಷ್ಟ್ರಗೀತೆಯನ್ನು ಕಡ್ಡಾಯ ಮಾಡಿದಾಗ ಸುಮ್ಮನಿದ್ದ ಕಮ್ಯುನಿಸ್ಟರು ಹಾಗೂ ಕಾಂಗ್ರೆಸ್ಸಿಗರು ಇಂದು ಬೊಬ್ಬೆ ಹೊಡೆಯುತ್ತಿರುವುದೇಕೆ?!

ನರೇಂದ್ರ ಮೋದಿ ಸರಕಾರ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯ ಮಾಡಿದ್ದೇ ಎಡಪಂಥೀಯರು, ವಿಚಾರವಾದಿಗಳು, ಬುದ್ಧಿ ಜೀವಗಳೆಲ್ಲ “ದೇಶಭಕ್ತಿ”ಯನ್ನು
ಪ್ರಶ್ನಿಸುತ್ತಿದ್ದಾರೆ ಪ್ರಧಾನಿ ಮೋದಿ ಎಂದು ಬೊಬ್ಬಿರಿದರು! ಅಂತರಾಷ್ಟ್ರೀಯ ಮಟ್ಟದಲ್ಲಿ, ಚರ್ಚೆಗಳೂ ನಡೆದು ಕೊನೆಗೆ ಸರ್ವೋಚ್ಛ ನ್ಯಾಯಾಲಯವೇ “ದೇಶಭಕ್ತಿ ಪ್ರಕಟ ಪಡಿಸುವುದಕ್ಕೆ ರಾಷ್ಟ್ರಗೀತೆಗೆ ಎದ್ದು ನಿಲ್ಲಲೇ ಬೇಕಿಲ್ಲ” ಎಂಬರ್ಥದ ತೀರ್ಪನ್ನೂ ಕೊಟ್ಟುಬಿಟ್ಟಿತು! ದುರಾದೃಷ್ಟ ನೋಡಿ! “52 ಸೆಕೆಂಡ್ ನಿಲ್ಲಲಾಗದವರು ದೇಶಭಕ್ತರಾಗಿ ಹೋದರು! 52 ಸೆಕೆಂಡ್ ಗಳಲ್ಲಿ ದೇಶಕ್ಕೆ ಪ್ರಾಣ ಕೊಟ್ಟ ಅದೆಷ್ಟೋ ಜನ ದೇಶ ದ್ರೋಹಿಗಳಾಗಿ ಹೋದರು!”

ಯೋಗಿ ಆದಿತ್ಯನಾಥ್ ರವರು ಮದರಸಾಗಳಲ್ಲಿಯೂ ರಾಷ್ಟ್ರಗೀತೆಯನ್ನು ಕಡ್ಡಾಯ ಮಾಡಬೇಕೆಂದಾಗ ಮತ್ತದೇ ವಿಚಾರವಾದಿಗಳು ತಗಾದೆ ತೆಗೆದರು! ಧಾರ್ಮಿಕ ಹಕ್ಕು ಎಂದೆಲ್ಲ ಮುಸಲ್ಮಾನ ಮೌಲಾನಾಗಳು ಯುದ್ಧಕ್ಕೇ ನಿಂತರು! ದೇಶ ಮೊದಲೆನ್ನುವ ಹಿಂದುಗಳು ಮಾತ್ರ ಮೂರ್ಖರ ಹಾಗೆ ನಿಂತರು!

ರಾಷ್ಟ್ರಗೀತೆಗೆ ವಿರೋಧವೋ ಅಥವಾ . . . .?!

“ರಾಷ್ಟ್ರಗೀತೆಯನ್ನು ಕಡ್ಡಾಯಗೊಳಿಸಬೇಕು” ಎಂಬುವುದೊಂದಿದೆಯಲ್ಲ, ಇದು ಇವತ್ತಿನದೇನಲ್ಲ! ಬದಲಾಗಿ, ಇದೇ ಕಾಂಗ್ರೆಸ್ ನ ದಿವಂಗತ ರಾಜೀವ್ ಗಾಂಧಿ ಕೂಡಾ ರಾಷ್ಟ್ರಗೀತೆಯನ್ನು ಕಡ್ಡಾಯಗೊಳಿಸಲು ಬಯಸಿದ್ದರು! ಆಗ ಯಾವೊಬ್ಬನೂ ಕೂಡ ‘ದೇಶಭಕ್ತಿಯನ್ನೇ ಪ್ರಶ್ನಿಸುತ್ತಿದ್ದಾರೆ” ಎಂಬ ಚಕಾರವನ್ನೂ ಎತ್ತಿರಲಿಲ್ಲ!

ಅಂದರೆ, ಈ ವಿಚಾರವಾದಿಗಳು ಯಾವುದೇ ವಿರೋಧವನ್ನು ಮಾಡಿದರೂ ಸಹ ರಾಜಕೀಯ ಹಿನ್ನೆಲೆಯನ್ನಿಟ್ಟೇ ಎಂಬುವುದು ಇಲ್ಲಿಗೆ ಸಾಬೀತಾಯಿತಲ್ಲವಾ?!

ರಾಷ್ಟ್ರಗೀತೆಗೆ ಸಂಬಂಧಪಟ್ಟ ವಿವಾದ ಶುರುವಾಗಿದ್ದು ನವೆಂಬರ್ 29, 2015 ರಂದು! ಮುಂಬೈನ ಸಿನಿಮಾ ಹಾಲ್ ವೊಂದರಲ್ಲಿ ರಾಷ್ಟ್ರಗೀತೆಗೆ ಎದ್ದು ನಿಲ್ಲಲಿಲ್ಲ ಎಂಬ ಕಾರಣಕ್ಕೆ ಐದು ಜನವಿದ್ದ ಒಂದು ಕುಟುಂಬವೊಂದನ್ನು ಹೊರ ಹಾಕಲಾಗಿತ್ತು! ರಾಷ್ಟ್ರಗೀತೆಗೆ ಎದ್ದು ನಿಲ್ಲಿ ಎಂಬ ಉಳಿದವರ ವಿನಂತಿಗೆ ಬೇಕಾ ಬಿಟ್ಟಿ ಪ್ರತ್ಯುತ್ತರ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಅದರ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದೂ ಅಲ್ಲದೇ, ಮಾಧ್ಯಮಗಳೂ ಅದನ್ನೇ ಹಿಡಿದು ಜಗ್ಗಿದವು! ಆದರೆ, ವಿಷಯ ಇದ್ದದ್ದು ರಾಷ್ಟ್ರಗೀತೆಗೆ ಗೌರವ ಕೊಡಲಿಲ್ಲವೆಂದಲ್ಲ, ಬದಲಿಗೆ ಸಿನಿಮಾ ಹಾಲ್ ನಿಂದ ಹೊರಹಾಕಲ್ಪಟ್ಟವರು ‘ಅಪ್ಪಟ ಮುಸಲ್ಮಾನರು” ಎಂಬ ಕಾರಣಕ್ಕೆ! ಅದೇ, ಹಿಂದೂ ಕುಟುಂಬಕ್ಕೆ ಇನ್ಯಾವುದೋ ಕಾರಣಕ್ಕೆ ಥಳಿಸಿದ್ದರೂ ಅದು ಸುದ್ದಿಯಾಗುವುದಿಲ್ಲ ಎನ್ನುವುದಕ್ಕಿಂತ ವಿರೋಧಿಸುವುದರಿಂದ ಯಾವುದೇ ರಾಜಕೀಯ ಲಾಭವಿಲ್ಲ!

ರಾಷ್ಟ್ರಗೀತೆಗೆ ಗೌರವ ಕೊಡಬೇಕೋ ಬೇಡವೋ ಎನ್ನುವುದು ಇಲ್ಲಿ ನಿರ್ಧಾರಿತವಾದದ್ದು ರಾಜಕೀಯ ಪಕ್ಷಗಳ ಹಿನ್ನೆಲೆಯನ್ನಿಟ್ಟುಕೊಂಡಷ್ಟೇ! ಬಿಜೆಪಿಯ ಹಿಂದುತ್ವದ ಅಜೆಂಡಾವೊಂದನ್ನು ವಿರೋಧಿಸುವ ಸಲುವಾಗಿ, ವಿಚಾರವಾದಿಗಳೆನ್ನಿಸಿಕೊಂಡವರು ದೇಶದ ವಿರುದ್ಧವೇ ತಿರುಗಿ ಬಿದ್ದ ಉದಾಹರಣೆಗಳಿಗೆ ಲೆಕ್ಕವಿಲ್ಲವಾದರೂ, ದೇಶ ಮೊದಲೆನ್ನುವ ಹಿಂದುತ್ವದ ಪ್ರತಿಪಾದಕರು ಬಿಜೆಪಿಯಾದರೆ, ಸ್ಟಾಲಿನ್ ರಂತಹವರನ್ನು ಗೌರವಿಸಿ ಸ್ವೇಚ್ಛಾಚಾರಿಗಳಾಗುವವರಿಗೆ ಹಿಂದುತ್ವವೆಂದರೆ “ಅಸಹಿಷ್ಣುತೆ” ಎಂಬಂತಾಂಗಿಬಿಡುತ್ತದೆ!

ನೆಹರೂವಿನ ಚೀನಿ ಭಯ್ಯಾಗಳು!

ಇಂಡೋ – ಚೀನಾ ಯುದ್ಧದಲ್ಲಿ ಭಾರತ ಸೋತಾಗ ಕಳೆದುಹೋಗಿದ್ದ ಭರವಸೆಯನ್ನು ಕಾಂಗ್ರೆಸ್ ಗೆ ಮತ್ತೆ ಪಡೆದುಕೊಳ್ಳಬೇಕಾಗಿತ್ತಷ್ಟೇ! ಅದಕ್ಕೆ ಸರಿಯಾಗಿ ರಾಷ್ಟ್ರಗೀತೆಯನ್ನು ಕಡ್ಡಾಯ ಗೊಳಿಸಿದಾಗಲೂ ಭಾರತೀಯರು ಖುಷಿಯಿಂದಲೇ ಒಪ್ಪಿದ್ದರು! ಸ್ವಾಗತಾರ್ಹವೆಂದು ಅಭಿನಂದಿಸಿದ್ದರು! ಇರಲಿ!ನೆಹರೂವಿನ ಚೀನಾ ಭಯ್ಯಾಗಳೆಂಬ ಒಲವೊಂದು ತೀರಾ ಹೀನಾಯವಾಗಿದ್ದರೂ ಸಹ, ಭಾರತೀಯರು ಮತ್ತೆ ಮತ್ತೆ ದೇಶಕ್ಕೆ ಬದುಕಲು ತೊಡಗಿದ್ದರಷ್ಟೇ! ಅವತ್ತು ಯಾವ ವಿಚಾರವಾದಿಯೂ, ಲಬಡಾಸಿ ಬುದ್ಧಿ ಜೀವಿಯೂ ವಿರೋಧಿಸಿರಲಿಲ್ಲ! ತೀರಾ ಅಷ್ಟೇನೂ ಸ್ವಾಗತಾರ್ಹವಲ್ಲ ಎಂಬಂತೆ ಚರ್ಚೆ ನಡೆದಿತ್ತೇ ವಿನಃ ಉಹೂಂ! ಬೀದಿಗಿಳಿದು ಬೆತ್ತಲಾಗಿರಲಿಲ್ಲ!

ಅದೂ ಹೋಗಲಿ! ಮತ್ತೆ ರಾಷ್ಟ್ರಗೀತೆಯನ್ನು ಉಪಯೋಗಿಸಿಕೊಂಡಿತ್ತು ಕಾಂಗ್ರೆಸ್! 2003 ರಲ್ಲಿ, ಮುಂಬೈ ನ ಭೂಗತ ಪಾತಕಿಗಳ ಜೊತೆ ಕಾಂಗ್ರೆಸ್ ಗೆ ಸಂಪರ್ಕವಿದೆ ಎನ್ನುವುದು ಬಹಿರಂಗವಾದಾಗ, ಸಾಲು ಸಾಲು ಕಾಂಗ್ರೆಸ್ ನಾಯಕರ ಹಗರಣಗಳು ಬಯಲಾದಾಗ, ಮತ್ತದೇ ಹಳೆಯ ಫರ್ಮಾನ್ ಹೊರಡಿಸಲು ತಯಾರಾಯಿತು ಕಾಂಗ್ರೆಸ್! ಮತ್ತೆ ರಾಷ್ಟ್ರಗೀತೆಯನ್ನು ಕಡ್ಡಾಯಗೊಳಿಸಬೇಕೆಂಬ ಕೂಗಿನಿಂದ ಸ್ವತಃ ಕಾಂಗ್ರೆಸ್ ತನ್ನ ಅಸ್ತಿತ್ವವನ್ನುಳಿಸಿಕೊಳ್ಳಲು ನೋಡಿತು!

1962 ರ ನಂತರದಲ್ಲಿ ಕ್ರಮೇಣ ಈ ಪದ್ಧತಿ ಕಡಿಮೆಯಾಗುತ್ತಲೇ ಬಂದಿತಾದರೂ ಸಹ 2015 ರ ವಿವಾದದ ಹೊರತಾಗಿ ಬೇರೆಲ್ಲೂ ವಿವಾದಗಳು ದಾಖಲಾಗಲಿಲ್ಲ.

ಆದರೆ, ಒಂದು ವಿಚಾರವನ್ನು ಬಹಿರಂಗಪಡಿಸಲೇ ಬೇಕು! 1985 ರ ಜುಲೈನಲ್ಲಿ ಕೇರಳದಲ್ಲಿ ಶಾಸಕಾಂಗ ಸಭೆಯೊಂದರಲ್ಲಿ ಜೆಹೋವಾಸ್ ಎಂಬ ವರ್ಗಕ್ಕೆ ಸೇರಿದ ಕ್ರೈಸ್ತ ಮಕ್ಕಳು ರಾಷ್ಟ್ರಗೀತೆಯನ್ನು ಹಾಡಲೊಪ್ಪುತ್ತಿಲ್ಲ ಎಂಬ ಬಗ್ಗೆ ಚರ್ಚೆಯಾಗಿತ್ತು. ಪರಿಶೀಲನೆಯ ನಂತರ ಜೆಹೋವಾ ಧರ್ಮ ರಾಷ್ಟ್ರಗೀತೆಯನ್ನು ಹಾಡಲು ಅನುಮತಿಸುವುದಿಲ್ಲ ಹಾಗೂ ಮೂರ್ತಿ ಪೂಜೆಯನ್ನು ವಿರೋಧಿಸುತ್ತದೆಂಬ ಕಾರಣಕ್ಕೆ ರಾಷ್ಟ್ರಗೀತೆಯನ್ನು ನಾವು ಹಾಡುತ್ತಿಲ್ಲ. ಹಾಗಂತಹ, ಉಳಿದವರು ಹೇಳುವಾಗ ನಾವು ಎದ್ದು ನಿಂತು ಗೌರವಿಸುತ್ತೇವೆ ಎಂದಿದ್ದರು! ಇದೇ ರಾಜೀವ್ ಗಾಂಧಿ ಸರಕಾರ ಅಸ್ತಿತವದಲ್ಲಿರುವಾಗಲೇ ನಡೆದ ಈ ವಿವಾದ ಕೇರಳದ
ವಿದ್ಯಾನಿಲಯದಿಂದ ಆ ಮೂವರು ಮಕ್ಕಳನ್ನು ಅಮಾನತುಗೊಳಿಸುವಲ್ಲಿ ಅಂತ್ಯ ಕಂಡಿತ್ತು!

ತದನಂತರ, ಆ ಮೂವರ ತಂದೆ ವಿದ್ಯಾನಿಲಯದ ನಡೆಯನ್ನು ಪ್ರಶ್ನಿಸಿ ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಿದಾಗ, ‘ಪ್ರತಿಯೊಬ್ಬರಿಗೂ ಅವರ ಧರ್ಮವನ್ನಾಚರಿಸುವ ಹಕ್ಕಿದೆ’ ಎಂದ ನ್ಯಾಯಾಲಯ ‘ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸಿಕೊಳ್ಳಲು’ ಹೇಳಿತ್ತು.

ಇದರ ನಂತರ, ರಾಜೀವ್ ಗಾಂಧಿ ಸುಪ್ರೀಮ್ ಗೆ ಕಟ್ಟುನಿಟ್ಟಿನ ಎಚ್ಚರಿಕೆಯನ್ನೂ ನೀಡಿದರು! ‘ಅಕಸ್ಮಾತ್ತಾಗಿ ಸರ್ವೋಚ್ಛ ನ್ಯಾಯಾಲಯ ತನ್ನ ಈ ನಿರ್ಧಾರದಿಂದ ಹಿಂದೆ ಸರಿಯದಿದ್ದಲ್ಲಿ ಈ ತಕ್ಷಣವೇ ಸರಕಾರ ಸಂವಿಧಾನಬದ್ಧವಾಗಿ ರಾಷ್ಟ್ರಗೀತೆಯನ್ನು ಕಡ್ಡಾಯಗೊಳಿಸಲು ತಿದ್ದುಪಡಿ ಮಾಡುತ್ತದೆ” ಎಂದು ವಿರೋಧಿಸಿದ ರೀತಿಗೆ ಸುಪ್ರೀಮ್ ಬೆಪ್ಪಾಗಿತ್ತು!

ಇದೊಂದೇ ಅಲ್ಲ, ರಾಜೀವ್ ಗಾಂಧಿ ಶಾ ಬಾನೋ ಪ್ರಕರಣದಲ್ಲಿಯೂ ಸಹ ಅಯೋಧ್ಯಾದ ರಾಮ ಮಂದಿರದ ಪರವಾಗಿ ನಿಂತರು! ಈ ನಿರ್ಧಾರ ಅವರನ್ನು ಅಪ್ಪಟ “ಜಾತ್ಯಾತೀತವಾದಿ ಹಾಗೂ ರಾಷ್ಟ್ರವಾದಿ’ ಯನ್ನಾಗಿ ಬಿಂಬಿಸಿಬಿಟ್ಟಿತು! 1986 ರ ಫೆಬ್ರುವರಿಯಲ್ಲಿ ಮುಚ್ಚಿದ್ದ ರಾಮ ಮಂದಿರ ಬಾಗಿಲನ್ನು ಮತ್ತೆ ತೆಗೆಯುವಂತೆ ಆಜ್ಞೆ ಮಾಡಿದ ರಾಜೀವ್ ಗಾಂಧಿಯ ನಡೆ ಅವತ್ತಿನ ಮಟ್ಟಿಗಿನ ಒಂದು ಅದ್ಭುತ!

ಆದರೆ, ಜೀವನ ಪೂರ್ತಿ ಗಾಂಧೀ ಕುಟುಂಬಕ್ಕೆ ವಿಧೇಯಕವಾಗಿ ಬದುಕಿದ್ದ ಮೊಹಮ್ಮದ್ ಯುನಸ್ “ರಾಷ್ಟ್ರಗೀತೆಯ ಬಗ್ಗೆ ತೀರ್ಪು ಕೊಟ್ಟವರು ನ್ಯಾಯಾಧೀಶರೂ ಅಲ್ಲ, ಭಾರತೀಯನೂ ‘ಅಲ್ಲ ಎಂಬ ಹೇಳಿಕೆ ನೀಡಿದ ಮೇಲೆ ಮತ್ತೆ ವಿವಾದ ಪ್ರಾರಂಭವಾಗಿತ್ತು.

ಇನ್ನೇನು ರಾಜೀವ್ ಗಾಂಧಿಯ ಸರಕಾರ ಶಾಶ್ವತವಾಗಿ ತನ್ನ ಇಲ್ಲದ ‘ದೇಶಭಕ್ತಿ’ಯ ಮೂಲಕ ಇತಿಹಾದ ಸೃಷ್ಟಿಸುತ್ತದೆ ಎನ್ನುವಾಗಲೇ ಬೋಫೋರ್ಸ್ ಹಗರಣ ಬಯಲಾಯಿತು! ಕೊನೆಗೆ ರಾಷ್ಟ್ರಗೀತೆಯನ್ನು ಕಡ್ಡಾಯಗೊಳಿಸಿ ದೇಶಭಕ್ತಿಯನ್ನು ಪ್ರಕಟ ಪಡಿಸಲಿ ಎಂಬುದಕ್ಕೂ ರಾಜೀವ್ ಗಾಂಧಿಗೆ ಧ್ವನಿ ಇಲ್ಲದೇ ತಲೆ ತಗ್ಗಿಸುವ ಹಾಗಾಯಿತು! ಅದೇ, ರಾಜೀವ್ ಗಾಂಧಿಯ ನಿರ್ಣಯಗಳನ್ನೇ ಇವತ್ತೂ ಅನುಸರಿಸಿದ್ದರೆ ಬಹುಷಃ ಹೊರದಬ್ಬಲ್ಪಟ್ಟ ಮುಸಲ್ಮಾನರು ‘ದೇಶದ್ರೋಹಿ’ ಪಟ್ಟದೊಂದಿಗೆ ಬದುಕಿಡೀ ಜೈಲಿನ ಕಂಬಿ ಎಣಿಸಬೇಕಾಗಿ ಬರುತ್ತಿತ್ತಷ್ಟೇ!

ಆದರೆ, ಏನು ಮಾಡುವುದು ಹೇಳಿ!

ರಾಜೀವ್ ಗಾಂಧಿಯ ಪತ್ನಿಯೆಂದೆನಿಸಿಕೊಂಡವಳೂ ಈ ರಾಷ್ಟ್ರದವಳಲ್ಲವಾದ್ದರಿಂದ ಆಕೆಗಂತೂ ಗೌರವವಿಲ್ಲ! ತನ್ನ ಮಕ್ಕಳಿಗಾದರೂ ರಾಷ್ಟ್ರಗೀತೆಯ ಬಗ್ಗೆ ಅಭಿಮಾನ ಮೂಡಿಸಿರುವಳೋ ಎಂಬುದೂ ಅನುಮಾನವೇ!

ತಿಳಿದಿದೆ! ಇವತ್ತು ಮೋದಿ ವಿರೋಧಿಗಳು ರಾಷ್ಟ್ರಗೀತೆಯ ನಡೆಯನ್ನು ಪ್ರಶ್ನಿಸಿ ಧಾರ್ಮಿಕ ಹಕ್ಕು, ಮಾತನಾಡುವ ಹಕ್ಕು ಎಂದೆಲ್ಲ ನೂರು ಕಾರಣಗಳನ್ನು ಕೊಡಬಹುದು! ರಾಷ್ಟ್ರಗೀತೆಯಲ್ಲಿರುವುದು ಸಂಸ್ಕೃತ! ಮೂರ್ತಿ ಪೂಜೆ ಮಾಡುವ ವಿಧೇಯಕ! ಎಂಬೆಲ್ಲ ಧಿಕ್ಕಾರ ಕೂಗಬಹುದು! ಅದೇ ರೀತಿ ಸೂರ್ಯ
ನಮಸ್ಕಾರಕ್ಕೂ ಸಹ ಬೀದಿಗಿಳಿದು ಹೋರಾಡಿದವರಿಗೆ ಡಿಸ್ಕೋ ನೈಟ್ಸ್ ಅಪ್ಪುವ ಸ್ವೇಚ್ಛಾಚಾರವಿತ್ತೇ ಹೊರತು ಭಾರತದ ಗೌರವವನ್ನಲ್ಲ! ಘನತೆಯನ್ನಲ್ಲ!

ರಾಜೀವ್ ಗಾಂಧಿಯ ನಡೆಗೆ ಉಸಿರು ಬಿಡದಿದ್ದ ಈವ್ಯಾವ ವಿಚಾರವಾದಿಗಳು, ಅವಾರ್ಡ್ ವಾಪ್ಸಿ ಪೆಪ್ಸಿಕೋಗಳು ಇವತ್ತು ಮಾತ್ರ ಬಯಲಾಟ ನಡೆಸುತ್ತಿದ್ದಾರೆ! ಕೇವಲ, ರಾಜಕೀಯದ ನೆಲೆಗಟ್ಟಲ್ಲಿ ರಾಷ್ಟ್ರಗೀತೆಗೆ ಗೌರವ ಕೊಡಬೇಕೋ ಬೇಡವೋ ಎಂದು ನಿರ್ಧರಿಸುವ ಇಂತಹವರನ್ನು ಏನೆಂದು ಕರೆಯಬಹುದು?!

ನೀವೇ ಯೋಚಿಸಿ!!

– ತಪಸ್ವಿ

Tags

Related Articles

Close