ಅಂಕಣಇತಿಹಾಸ

ಅಚ್ಚರಿ ಸೃಷ್ಟಿಸುತ್ತೆ ಈ ದೇವಾಲಯದ ಕೆತ್ತನೆ! 900 ವರ್ಷಗಳ ಹಿಂದೆ ಕೆತ್ತಿರುವ ಕೆತ್ತನೆಯಲ್ಲಿ ಟೆಲಿಸ್ಕೋಪ್ ಬಣ್ಣನೆ…

ಯಾವಾಗ ನಮ್ಮ ಪುಣ್ಯ ಭೂಮಿ ಭಾರತಕ್ಕೆ ಪಾಶ್ಚಿಮಾತ್ಯರು ಕಾಲಿಟ್ಟರೋ ಇಲ್ಲಿರುವ ಇಡೀ ಸಂಪತ್ತನ್ನು ದೋಚಿ ತಮ್ಮಂದೆದರು… ಶಿಕ್ಷಣ ಕ್ಷೇತ್ರದಲ್ಲೇ ಅಗಾಧ ಪಾಂಡಿತ್ಯವನ್ನು ಹೊಂದಿದ್ದ ಭಾರತವನ್ನು ಅನಾಗರಿಕರು ಎಂಬುವುದನ್ನು ಪಾಶ್ಚಿಮಾತ್ಯರು ನಂಬಿಸಿಬಿಟ್ಟರು. ಭಾರತ ವಿಶ್ವಗುರುವಿನ ಸ್ಥಾನದಲ್ಲಿತ್ತು. ಸನಾತನ ಸಂಸ್ಕೃತಿ, ಇಲ್ಲಿನ ಸಂಪತ್ತು, ಪ್ರಾವಿಣ್ಯತೆ, ಕಂಡು ವಿದೇಶಿಯರು ಇಲ್ಲಿಗೆ ದಾಳಿ ಇಟ್ಟು ಎಲ್ಲಾ ಸಂಪತ್ತು ತಮ್ಮದೆಂದರು. ಭಾರತದಲ್ಲಿದ್ದ ಶಿಕ್ಷಣವನ್ನು ಕೊಳ್ಳೆ ಹೊಡೆದ ವಿದೇಶಿಗರು ಅದು ಕಂಡುಹಿಡಿದದ್ದು ನಾವು ಇದನ್ನು ಕಂಡುಹಿಡಿದದ್ದು ನಾವು ಎಂದು ಸ್ಕೋಪ್ ತೆಗೆದುಕೊಳ್ಳುತ್ತಿದ್ದಾರೆ ಅಷ್ಟೆ. ಆದರೆ ಎಲ್ಲಾ ಆವಿಷ್ಕಾರದ ಹಿಂದೆಯೂ ಭಾರತೀಯನಿದ್ದಾನೆ ಎಂಬುವುದನ್ನು ಮರೆಯಬೇಡಿ… ಯಾರೋ ಆವಿಷ್ಕಾರ ಮಾಡಿದ್ದನ್ನು ತಮ್ಮ ಪೇಟೆಂಟ್ ಹಾಕಿಕೊಂಡು ತಿರುಗಾಡಿದರೆ ಜಗತ್ತಿಗೆ ಒಂದಲ್ಲ ಒಂದು ದಿನ ಸತ್ಯದ ಅರಿವಾಗಿಯೇ ಆಗುತ್ತದೆ.

1121ರಲ್ಲಿ ನಿರ್ಮಾಣವಾದ ಹಳೆಬೀಡಿನ ದೇವಾಲಯ ಒಂದು ಮಟ್ಟಕ್ಕೆ ನಿಲ್ಲಲು 40 ವರ್ಷ ಬೇಕಾದರೆ ದೇವಾಲಯದ ಕಲಾಕುಸುರೆ ನಿರ್ಮಾಣಕ್ಕೆ ಮತ್ತೆ 80 ವರ್ಷಗಳೇ ಬೇಕಾಯಿತು ಎಂದರೆ ಅದರ ಕೆತ್ತನೆ ಅಬ್ಬಾ ಅದನ್ನು ವರ್ಣಿಸಲೂ ಅಸಾಧ್ಯ! ಹೊಯ್ಸಳದ ನಾಲ್ಕು ತಲೆಮಾರಿನ ರಾಜರುಗಳೂ ಈ ದೇವಾಲಯ ನಿರ್ಮಾಣಕ್ಕೆ ತೊಡಗಿದ್ದರು ಎಂದರ ಜಸ್ಟ್ ಊಹೆ ಮಾಡಿ…. ದೇವಾಲಯ ನಿರ್ಮಾಣಕ್ಕೆ 120 ವರ್ಷಗಳಾದರೆ ಇಲ್ಲಿ ಎಷ್ಟು ಶಿಲ್ಪಿಗಳು ಶ್ರಮಿಸಿರಬಹುದು ಎಂದು ಊಹಿಸಿಸಲೂ ಅಸಾಧ್ಯ! 20ಸಾವಿರ ಕಲಾ ಚಾತುರ್ಯರು ಈ ದೇವಾಲಯ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಇವರ ಕಲಾಚಾತುರ್ಯತೆಯಿಂದನೇ ಇಂತಹ ಭವ್ಯ ಕೆತ್ತನೆಗಳು ನಿರ್ಮಾಣವಾಗಿರುವುದು. ಅಂದು ಕೂಡಾ ಉತ್ತಮ ಉಪಕರಣಗಳನ್ನು ಬಳಸಿಯೇ ಇದನ್ನು ಕೆತ್ತಿರಬಹುದು.

ಹಳೆಬೀಡು ಬಿತ್ತಿಯಲ್ಲಿರುವ ಶಿಲ್ಪ ಸಮೂಹವನ್ನೊಮ್ಮೆ ನೋಡಿ. ಗಗನಯಾನಿಗಳು ಧರಿಸುವಂತಹ ಹೆಲ್ಮೆಟನ್ನು ನಾವು ಈ ಕೆತ್ತನೆಯಲ್ಲಿ ನೋಡಬಹುದು. ಕೈಗೆ ಗ್ಲೌಸ್‍ಗಳನ್ನು ತೊಟ್ಟಿದ್ದು 900 ವರ್ಷಗಳ ಹಿಂದೆ ಈ ಶಿಲ್ಪಿಗಳು ಕೆತ್ತನೆಯಲ್ಲಿ ಇಂತಹ ಚಿತ್ರದ ಕಲ್ಪನೆಯಾದರೂ ಬಂದಿದ್ದೇಗೆ? ಅಂದು ಗಗನಯಾನದ ಬಗ್ಗೆ ಭಾರತೀಯರಿಗೆ ಮಾಹಿತಿ ಇತ್ತಾ ಅಥವಾ ಕಲ್ಪನೆಯಲ್ಲಿಯೇ ಕೆತ್ತನೆ ಮಾಡಿದರಾ ಎಂಬುವುದು ಎಂಬುವುದು ಇಂದಿಗೂ ಅಚ್ಚರಿಯನ್ನು ಸೃಷ್ಟಿಸುತ್ತೆ! ಗಗನಯಾನಿಗಳು ಬಳಸುವ ಬಟ್ಟೆ ಹೆಲ್ಮೆಟ್ ಬಗ್ಗೆ ಕೆತ್ತಾನಾಕಾರಕು ಕೆತ್ತಲು ಹೇಗೆ ಸಾಧ್ಯ?! ಒಂದಾ ಈ ಬಗ್ಗೆ ನೋಡಿರಬೇಕು ಇಲ್ಲವೆ ಈ ಬಗ್ಗೆ ಓದಿರಬೇಕು… ಈ ಎರಡರಲ್ಲಿ ಏನೇ ಆಗಿದ್ದರೂ ಆ ಜ್ಞಾನ ಸಂಪತ್ತು ಇತ್ತು ಎಂಬುವುದು ಈ ಕೆತ್ತನೆಯ ಮೂಲಕ ಸ್ಪಷ್ಟವಾಗಿ ಗೋಚರಿಸುತ್ತದೆ. ಆಶ್ಚರ್ಯ ಅಂದರೆ ಇತಿಹಾಸಕಾರಿಗೆ ಈ ಗಗನಯಾನಿಗಳ ಹಿಂದಿನ ರಹಸ್ಯ ಮಾತ್ರ ಕಂಡು ಹಿಡಿಯೋಕೆ ಇಂದಿಗೂ ಸಾಧ್ಯವಾಗಿಲ್ಲ.

ಆ ಆವಿಷ್ಕಾರ ಮಾಡಿದ್ದೇವೆ ಈ ಆವಿಷ್ಕಾರ ನಾವು ಮಾಡಿದ್ದೇವೆ ಎಂದು ಪಾಶ್ಚಿಮಾತ್ಯರು ಇಡೀ ವಿಶ್ವಕ್ಕೆ ಹೇಳಿದರೂ ಅದು ಸುಳ್ಳು. ಸಾವಿರಾರು ವರ್ಷಗಳ ಹಿಂದೆಯೇ ಅದೆಲ್ಲಾ ಭಾರತದಲ್ಲಿ ನಡೆದು ಹೋಗಿತ್ತು. ಅದನ್ನು ರೀ ಸರ್ಚ್ ಮಾಡಿದ್ದು ಪಾಶ್ಚಿಮಾತ್ಯರು. ನಮ್ಮಿಂದಲೇ ಶಿಕ್ಷಣವನ್ನು ಕದ್ದು ನಮ್ಮಂದೆದು ತಿರುಗುತ್ತಿದ್ದಾರೆ ಅಷ್ಟೇ… 1608ರಲ್ಲಿ ಟೆಲಿಸ್ಕೋಪ್ ಕಂಡುಹಿಡಿಯಲಾಯಿತು ಎಂದು ಬೊಬ್ಬಿಡುವ ಮೊದಲು 900 ವರ್ಷಗಳ ಹಿಂದೆ ನಿರ್ಮಾಣವಾದ ಹಳೆಬೀಡಿನ ಕೆತ್ತನೆಗಳನ್ನು ನೋಡಿ. ಹಳೆಬೀಡಿನ ಗೋಡೆಯಲ್ಲಿ ಒಬ್ಬ ಮನುಷ್ಯನ ಕೆತ್ತನೆಯಿದ್ದು ಆತ ಟೆಲಿಸ್ಕೋಪ್ ಹಿಡಿದು ನಿಂತಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. 400 ವರ್ಷಗಳ ಹಿಂದೆ ಟೆಲಿಸ್ಕೋಪ್ ಕಂಡುಹಿಡಿಯಲಾಯಿತು ಎನ್ನುವವರು 900 ವರ್ಷಗಳ ಹಿಂದೆ ಕೆತ್ತಿರುವ ಕೆತ್ತನೆಯಲ್ಲಿ ಹೇಗೆ ಟೆಲಿಸ್ಕೋಪ್ ಬಣ್ಣನೆಯಿರಲು ಸಾಧ್ಯ!? ಇಡೀ ಜಗತ್ತಿನೆದುರು ಭಾರತ ನಿಜಕ್ಕೂ ವಿಶ್ವಗುರು ಸ್ಥಾನದಲ್ಲಿದೆ. ಭಾರತದ ಶಿಕ್ಷಣವನ್ನು ಕದ್ದು ತಮ್ಮದೆಂದು ಪಾಶ್ಚಿಮಾತ್ಯರು ಎಲ್ಲಾ ನಾವೇ ಮಾಡಿದ್ದೆಂದು ಬೊಬ್ಬಿಡುತ್ತಿದ್ದಾರೆ. ಆದರೆ ಒಂದೊಂದು ದೇವಾಲಯಗಳಲ್ಲಿರುವ ಕೆತ್ತನೆಯೇ ಭಾರತ ಸಾವಿರಾರು ವರ್ಷಗಳ ಹಿಂದೆಯೇ ಅದೆಷ್ಟೋ ಆವಿಷ್ಕಾರಗಳನ್ನು ಮಾಡಿದೆ ಹಾಗೂ ಅಗಾಧ ಜ್ಞಾನವಿತ್ತು ಎಂಬುವುದನ್ನು ತಿಳಿಸುತ್ತದೆ.

Tags

Related Articles

FOR DAILY ALERTS
Close