ಅಂಕಣದೇಶಪ್ರಚಲಿತ

ಇಂದೇ ಲೋಕಸಭೆ ಚುನಾವಣೆ ನಡೆದರೆ ಬಿಜೆಪಿ ಎಷ್ಟು ಸ್ಥಾನ ಗೆಲ್ಲುತ್ತೆ ಗೊತ್ತಾ ?

ಉಪನಿಷದ್ ಮತ್ತು ಭಗವದ್ಗೀತೆ ಓದಲು ಪ್ರಾರಂಭ ಮಾಡಿದ ನಂತರವೂ ಮಿಸ್ಟರ್ ರಾಹುಲ್ ಗಾಂಧಿಯವರು ಮೋದಿಯವರ ವಿರುದ್ಧ ಗೆಲ್ಲುವ ಚಾಕಚಕ್ಯತೆಯನ್ನು ಇನ್ನೂ ಗಳಿಸಿಕೊಂಡಿಲ್ಲ. ಇವತ್ತೇ ಚುನಾವಣೆ ನಡೆದರೆ ಮೋದಿಯವರೇ ಅಭೂತ ಪೂರ್ವವಾಗಿ ಗೆಲ್ಲುತ್ತಾರೆಅನ್ನುವ ಅನೇಕ ಸಮೀಕ್ಷೆಗಳು ಇದಕ್ಕೆ ಸಾಕ್ಷಿಯಾಗಿವೆ. ಕಾಂಗೆಸ್ ಪಕ್ಷದ ವಿರುದ್ಧ ಭಾರತೀಯರು ನಿಜವಾಗಿಯೂ ಅಸಹಿಷ್ಣುಗಳಾಗಿದ್ದು, 2019 ರಲ್ಲಿ ಕಾಂಗ್ರೆಸ್ ಮುಕ್ತ ಭಾರತವನ್ನು ನಿರ್ಮಿಸಲು ಪಣತೊಟ್ಟಿದ್ದಾರೆ.

ಎನ್ ಡಿ ಎ 347 ಸ್ಥಾನಗಳನ್ನು ಗೆದ್ದರೆ

ಕಾಂಗ್ರೆಸ್ ಪಕ್ಷಕ್ಕೆ 47 ಸ್ಥಾನವೂ ಅಸಾಧ್ಯ :

ಇದರಲ್ಲಿ ಬಿಜೆಪಿ ಬರೋಬ್ಬರಿ 298 ಸ್ಥಾನ ಗೆಲ್ಲಲಿದೆ ಅಂತ ಊ ಸಮೀಕ್ಷೆ ಹೇಳಿದೆ. ಇದು ಕಳೆದ ಬಾರಿಗಿಂತಲೂ ಭಾರಿ ಮುನ್ನಡೆ.

ಈ ಸಮೀಕ್ಷೆ ನಡೆದಿರುವುದು ಜುಲೈ ತಿಂಗಳ ಮೊದಲ ವಾರದಲ್ಲಿ.

ಒಟ್ಟು ಹತ್ತೊಂಬತ್ತು ರಾಜ್ಯಗಳ 198 ವಿಧಾನಸಭ ಕ್ಷೇತ್ರಗಳಲ್ಲಿ ಹದಿನೈದು ಸಾವಿರ ಜನರನ್ನು ಸಂಪರ್ಕಿಸಿ ಸಮೀಕ್ಷೆ ನಡೆಸಲಾಗಿದೆ

ನೆನಪಿರಲಿ ಈ ಸಮೀಕ್ಷೆ ನಡೆದ ಮೇಲೆ ಬಿಹಾರದಲ್ಲಿ ಜೆಡಿಯ ಮತ್ತು ತಮಿಳುನಾಡಿನಲ್ಲಿ ಎಐಎಡಿಎಂಕೆ  ಎನ್ ಡಿ ಎ ತೆಕ್ಕೆಗೆ ಬಂದು ಸೇರಿದೆ

ಇವೆರಡೂ ಪಕ್ಷಗಳು ಈ ಸಮೀಕ್ಷೆಯಲ್ಲಿ ಒಂದಾದಲ್ಲಿ ಎನ್ ಡಿ ಎ ಗಳಿಕೆ ನಾನ್ನೂರು ದಾಟಿದರೂ ಅಚ್ಚರಿ ಪಡೆಬೇಡಿ

ಇದಲ್ಲದೆ ದೇಶ ಕಂಡ ಸರ್ವಶ್ರೇಷ್ಠ ಪ್ರಧಾನ ಮಂತ್ರಿಗಳಲ್ಲಿ ಮೋದಿಯೇ ಭಾರಿ ಮುನ್ನಡೆಗಳಿಸಿದ್ದಾರೆ

ಮೋಟೋ ಅನ್ನವ ಸಂಸ್ಥೆ ಮಾಡಿದ ಸಮೀಕ್ಷೆ ಪ್ರಕಾರ ಮೋದಿ ನೇತ್ರತ್ವದ ಪಕ್ 347 ಸ್ಥಾನಗಳನ್ನು ಗೆಲ್ಲಲಿದೆ. ನೋಡು ನಿಷೇಧ, ಪಾಕಿಸ್ತಾನದ ವಿರುದ್ದ ತೆಗೆದುಕೊಂಡಿರುವ ಕಠೋರ ನಿಲುವು ಭಾರತೀಯರ ವಿಶ್ವಾಸವನ್ನು ಸರಕಾರ ಪಡೆಯುವಂತೆ ಮಾಡಿತು ಎಂಬುದು ಆ ಸಂಸ್ಥೆ ವರದಿ ನೀಡಿದೆ.

ಭಾರತದ ಯುವ ನಾಯಕ ರಾಹುಲ್ ಗಾಂಧಿಯವರ ನಾಟಕದ ಆಟ ಮುಂದುವರಿಯುತ್ತಲೇ ಇದೆ. ಮೋದಿಯವರ ಸರಕಾರ ಅಧಿಕಾರ ವಹಿಸಿಕೊಂಡಾಗಿನಿಂದಲೂ ಕಾಂಗ್ರೆಸ್ ದೇಶದ್ರೋಹಿಗಳ ಪರವಾಗಿ ವಾದುಸುತ್ತಲೇ ಬಂದಿದೆ, ಆದ ಕಾರಣ ನಿಜವಾದ ರಾಷ್ಡ್ರಪ್ರೇಮಿಗಳು ಅಂತಹ ಪಕ್ಷ ಭಾರತಕ್ಕೆ ಅಗತ್ಯವಿಲ್ಲವೆಂಬುದನ್ನು ಪದೇ ಪದೇ ಸಾಬೀತುಪಡಿಸುತ್ತಿದ್ದಾರೆ. ಇವತ್ತು ಚುನಾವಣೆ ನಡೆದರೆ ಕಾಂಗ್ರೆಸ್ ಪಕ್ಷಕ್ಕೆ 47 ಸ್ಥಾನವೂ ಲಭ್ಯವಾಗಿಲ್ಲವೆಂದಿದ್ದು ಇದೇ ಕಾರಣಕ್ಕೆ.

* 3 ವರ್ಷಗಳ ಕಾಲಾವಧಿಯಲ್ಲಿಯೂ ಮೋದಿಯವರ ಸರಕಾರ 300 ಕ್ಕೂ ಅಧಿಕ ಸ್ಥಾನಗಳನ್ನು ಉಳಿಸಿಕೊಳ್ಳಲು ಸಫಲವಾಗಿದೆ. ಹಾಗಾಗಿ ಕಾಂಗ್ರೆಸ್ ಪಕ್ಷದ ಕುತಂತ್ರ ರಾಜಕಾರಣ ಸಂಪೂರ್ಣವಾಗಿ ವಿಫಲವಾಗಿವೆ.
* 3 ವರ್ಷಗಳ ಹಿಂದೆ ಇಂದಿರಾಗಾಂಧಿಯವರನ್ನು ಸರ್ವಶ್ರೇಷ್ಠ ಪ್ರಧಾನಿಯೆಂದು ಗುರುತಿಸಲಾಗಿತ್ತು. ಆದರೆ ಈಗ ಅವರನ್ನೂ ಮೀರಿಸಿ ಮೋದಿ ಸರಕಾರ ಮುನ್ನಡೆಯುತ್ತಿದೆ.


* ಅಲ್ಪಸಂಖ್ಯಾತರ ಮನಸ್ಸನ್ನು ಮೋದಿಯವರು ಗೆಲ್ಲುತ್ತಿರುವುದು ಆಶ್ಚರ್ಯದ ಸಂಗತಿಯೇ ಸರಿ. ಭಾರತದಲ್ಲಿ ಬಿಜೆಪಿ ಪಕ್ಷದ ಸುಳಿವೇ ಇರಲಲ್ಲ. ಆದರೆ ಇತ್ತೀಚೆಗಿನ ದಿವಸಗಳಲ್ಲಿ ಬಿಜೆಪಿ ಬಹಳಷ್ಟು ಸದ್ದು ಮಾಡುತ್ತಿದೆ ಎಂದರೆ ಅವರ ಪ್ರಭಾವ ಎಷ್ಟರ ಮಟ್ಟಿಗಿದೆಯೆಂಬುದು ನಾವು ಅವಲೋಕನ ಮಾಡಬಹುದು.
* ಕಪ್ಪು ಹಣದ ವಿರುದ್ದ ಹೋರಾಡುವುದಕ್ಕೆ ಕಟಿಬದ್ಧರಾಗಿರುವ ಮೋದಿಯವರ ನಡೆಯನ್ನು ಎಲ್ಲರೂ ಶ್ಲಾಘಿಸುತ್ತಿದ್ಧಾರೆ. ಭಾರತದ 63% ಜನರು ಮೋದಿಯವರ ಆಡಳಿತ ಅತ್ಯುತ್ತಮವೆಂಬುದಾಗಿ ಪ್ರತಿಕ್ರಯಿಸಿದ್ದಾರೆ.

ಯುವ ನಾಯಕನಿಗೆ ಭಾರೀ ಮುಖಭಂಗ :

ಈ ಸಮೀಕ್ಷೆಯು ಭಾರತೀಯ ಯುವ ನಾಯಕನಿಗೆ ಮುಖಭಂಗವನ್ನುಂಟು ಮಾಡಿದ್ದಂತೂ ಸುಳ್ಳಲ್ಲ. ರಾಹುಲ್ ಗಾಂಧಿಯವರ ಪ್ರಭಾವ ಬಹಳಷ್ಟು ಕ್ಷೀಣಿಸಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ. ಅಷ್ಟೇ ಅಲ್ಲದೇ, ಕಾಂಗ್ರೆಸ್ ಪಕ್ಷ ಉಳಿಯಬೇಕಾದರೆ ನೆಹರೂ ಕುಟುಂಬ ಆ ಪಕ್ಷದಿಂದ ಹೊರ ಬರಬೇಕೆಂಬುದುದಾಗಿಯೂ ಜನತೆ ಪ್ರತಿಕ್ರಯಿಸಿದ್ಧಾರೆ. ಕುಟುಂಬ ರಾಜಕಾರಣವನ್ನು ಜನತೆ ಸ್ವೀಕರಿಸುವುದಿಲ್ಲ ಅನ್ನುವುದನ್ನು ಮಗದೊಮ್ಮೆ ಭಾರತೀಯರು ನಿರೂಪಿಸಿದ್ದಾರೆ. ಗಾಂಧಿ ಹೆಸರನ್ನು ಬಳಸಿಕೊಂಡು ಕುಟುಂಬ ರಾಜಕಾರಣ ಮಾಡುತಿರುವ ನೆಹರೂ ಕುಟುಂಬಕ್ಕೆ ಇದೊಂದು ಹೊಡೆತವೇ ಸರಿ.

– ವಸಿಷ್ಠ

Tags

Related Articles

Close