ಪ್ರಚಲಿತ

ಅದೊಂದು ಬಾಕಿ ಇತ್ತು… ಫಲಾನುಭವಿಗೆ ನೀಡಿದ ಚೆಕ್ಕನ್ನು ವಾಪಸ್ ಪಡೆದು ಜೇಬಿಗಿಳಿಸಿದ ಈ ಕಾಂಗ್ರೆಸ್ ಶಾಸಕನನ್ನು ನೋಡಿದ್ದೀರಾ?

ಫಲಾನುಭವಿಗಳಿಗೆ ಸರಕಾರದ ಸೌಲಭ್ಯದ ಚೆಕ್ ವಿತರಿಸಿ ವಾಪಸ್ ಪಡೆದಿರುವುದನ್ನು ನೋಡಿದ್ದೀರಾ? ಆದರೆ ಈ ಶಾಸಕ ಚೆಕ್ ವಿತರಿಸಿ ವಾಪಸ್ ಪಡೆದು ಜೇಬಿಗಿಳಿಸಿಬಿಟ್ಟಿದ್ದಾರೆ. ಪ್ರಚಾರದ ತೆವಲೋ ಗೊತ್ತಿಲ್ಲ. ಸುಮ್ನೆ ಜನರೆದುರು ನಾಟಕ ಮಾಡಿ ಮರುಳು ಮಾಡಲು ಮಾಡಿದ ತಂತ್ರವೆನ್ನುವುದಂತೂ ಸತ್ಯ. ಇಲ್ಲದಿದ್ದರೆ ತಾನು ಮಹಿಳೆಯೊಬ್ಬರಿಗೆ ಕೊಟ್ಟ ಚೆಕ್ಕನ್ನು ಮತ್ತೆ ವಾಪಸ್ ಪಡೆದು ಜೇಬಿಗಿಳಿಸುತ್ತಿರಲಿಲ್ಲ. ಹೌದು ಇದೆಲ್ಲಾ ಕಾಂಗ್ರೆಸ್‍ನಿಂದ ಮಾತ್ರ ಸಾಧ್ಯ. ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಮೊಯ್ದೀನ್ ಬಾವಾ ಅವರು ಮಹಿಳೆಗೆ ಚೆಕ್ ವಿತರಿಸಿ ಮತ್ತೆ ಅದನ್ನು ವಾಪಸ್ ಪಡೆದು ಛೀಮಾರಿಗೊಳಗಾಗಿದ್ದಾರೆ.

ಈ ಶಾಸಕನಿಗೆ ಅದೆಷ್ಟು ಪ್ರಚಾರದ ತೆವಲು ಹತ್ತಿಬಿಟ್ಟಿದೆಯಂದರೆ ಅದಕ್ಕಾಗಿ ನಾನಾ ಗಿಮಿಕ್‍ಗಳನ್ನು ಮಾಡಿ ಸುದ್ದಿಯಲ್ಲಿರುತ್ತಾರೆ. ಈವಾಗ ಅಂಥದ್ದೇ ಒಂದು ಎಡವಟ್ಟು ಮಾಡಿ ಸಿಕ್ಕಿಬಿದ್ದಿದ್ದಾರೆ. ಸೋಮವಾರ ದಕ್ಷಿಣ ಕನ್ನಡ ಜಿಲ್ಲೆಗೆ ಕಾಂಗ್ರೆಸ್ ಉಸ್ತುವರಿ ವೇಣುಗೋಪಾಲ್ ಅವರು ಬಂದಿದ್ದರು. ಆ ಬಳಿಕ ಇವರು ಕಾಂಗ್ರೆಸ್‍ನ ಮನೆಮನೆಗೆ ಭೇಟಿ ಕಾರ್ಯಕ್ರಮವನ್ನೂ ನೀಡಿದ್ದರು. ವೇಣುಗೋಪಾಲರನ್ನೇ ಸೈಡ್‍ಗೆ ಹಾಕಿ ಮುಂದಕ್ಕೆ ಹೋದ ಬಾವಾ ತನಗೆ ಜಿಲ್ಲೆಯಲ್ಲಿ ಬಾರೀ ಜನಪ್ರಿಯೆ ಇದೆ ಎಂದು ತೋರಿಸಿ ಮತ್ತೊಮ್ಮೆ ಟಿಕೆಟ್ ಗಿಟ್ಟಿಸಬೇಕೆನ್ನುವ ಆಸೆ ಮೊಯ್ದೀನ್ ಬಾವಾ ಅವರಲ್ಲಿತ್ತು. ಅದಕ್ಕಾಗಿಯೇ ಮೋಯ್ದೀನ್ ಬಾವಾ ಈ ನಾಟಕ ಆಡಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬಹುದು..

ವೇಣುಗೋಪಾಲ ಅವರ ಮುಂದೆ ಚಿಕ್ಕದೊಂದು ಕಾರ್ಯಕ್ರಮ ಮಾಡಿ ಚೆಕ್ ವಿತರಿಸಲು ಮುಂದಾಗಿದ್ದರು. ಇದಕ್ಕೆ ಅವರಿಗೆ ನೆರವಿಗೆ ಬಂದಿದ್ದು ಸಿಎಂ ಪರಿಹಾರ ನಿಧಿಯಿಂದ ಕೊಡಲ್ಪಡುವ ಚೆಕ್. ಮಹಿಳೆಯೊಬ್ಬರ ಚಿಕಿತ್ಸೆಗೆ ಸ್ಪಂದಿಸಲು ಸರಕಾರದ ಸಿಎಂ ಪರಿಹಾರ ನಿಧಿಯ ಬಾಬ್ತು ಚೆಕ್ ನೀಡಿ, ಅತ್ತ ವೇಣುಗೋಪಾಲ್ ವೇದಿಕೆಯಿಂದ ಕೆಳಗಿಳಿಯುತ್ತಿದ್ದಂತೆ ಇತ್ತ ಸಂತ್ರಸ್ತ ಮಹಿಳೆ ಕೈಗೆ ಕೊಟ್ಟ ಚೆಕ್ಕನ್ನು ಕಸಿದುಕೊಂಡು ತನ್ನ ಜೇಬುಗಿಳಿಸಿದ್ದಾರೆ. ಮೊಯ್ದೀನ್ ಬಾವಾರ ನಡೆ ಭಾರೀ ಚರ್ಚೆಗೆ ಗ್ರಾಸ ಒದಗಿಸಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ.

ಖುದ್ದು ಮೊಯ್ದೀನ್ ಬಾವ ಅವರು ವೇಣುಗೋಪಾಲರ ಮುಂದೆಯೇ ನಿಂತುಕೊಂಡು ತಮಗೆ ಬೇಕಾದವರನ್ನು ಮುಂಚೂಣಿಯಲ್ಲಿ ನಿಲ್ಲಿಸಿ ಕೇವಲ ಪರಿಚಯದವರ ಮನೆಗಷ್ಟೇ ಕರೆದುಕೊಂಡು ಹೋಗಿ ಎಲ್ಲರ ಒಲವು ತನ್ನ ಕಡೆಗೆ ಇದೆ ಎಂದು ಪೆÇೀಸು ಕೊಡುತ್ತಿದ್ದರು. ಆದರೆ ಈ ವಿಚಾರವನ್ನು ವೇಣುಗೋಪಾಲ್ ಸೂಕ್ಷ್ಮವಾಗಿ ಗಮನಿಸುತ್ತಲೇ ಇದ್ದರು. ತಮ್ಮ ಕ್ಷೇತ್ರದ ವಿವಿಧ ಕಡೆಗಳಲ್ಲಿ ಅನಾರೋಗ್ಯ ಬಾಧಿತರಿಗೆ ಚೆಕ್ ವಿತರಣೆ ಮಾಡುವ ಕಾರ್ಯಕ್ರಮವನ್ನು ಬಾವಾ ಇರಿಸಿಕೊಂಡಿದ್ದು ಅನಾರೋಗ್ಯ ಪೀಡಿತ ಮಹಿಳೆಯೊಬ್ಬರಿಗೆ ಸರಕಾರದ ಪರಿಹಾರ ನಿಧಿಯಿಂದ 1.25 ಲಕ್ಷ ರೂ ಚೆಕ್ಕನ್ನು ವಿತರಣೆ ಮಾಡಿದ್ದರು. ಅಲ್ಲದೆ ವೇಣುಗೋಪಾಲ್ ಎದುರು ದೊಡ್ಡದೊಂದು ಭಾಷಣವನ್ನೂ ಬಿಗಿದರು. ಆದರೆ ಇವರ ಭಾಷಣ ಕೇಳಲು ಪುರುಸೊತ್ತು ಇಲ್ಲದ ವೇಣುಗೋಪಾಲ್ ಅಲ್ಲಿಂದ ನಡೆದು ಬಿಟ್ಟಿದ್ದರು. ಮುಖಭಂಗಕ್ಕೆ ಒಳಗಾದ ಮೊಯ್ದೀನ್ ಬಾವ ಭಾಷಣ ಅರ್ಧಕ್ಕೆ ಮೊಟಕುಗೊಳಿಸಿ ಅವರನ್ನು ಹಿಂಬಾಲಿಸಿದರು.

ಉಸ್ತುವಾರಿಗಳು ಅತ್ತ ಹೋಗುತ್ತಿದ್ದಂತೆ ಚೆಕ್ ಪಡೆದುಕೊಂಡ ಮಹಿಳೆ ಬಳಿಗೆ ತೆರಳಿದ ಬಾವ ಆಪ್ತ, ಸಾಹೇಬ್ರು ಹೇಳಿದ್ದಾರೆ ಚೆಕ್ ವಾಪಸ್ ಕೊಡಬೇಕಂತೆ ಎಂದು ಹೇಳಿ ಚೆಕ್ ವಾಪಸ್ ಪಡೆದುಕೊಂಡಿದ್ದಾರೆ. ಅದಕ್ಕೆ ಆ ಮಹಿಳೆ ಏಕೆಂದು ವಿಚಾರಿಸಿದಾಗ, ಈ ಚೆಕ್ ಬದಲಾಗಿದ್ದು, ನಿಮಗೆ ಬೇರೆ ಚೆಕ್ಕನ್ನು ಕೊಡುತ್ತೇವೆ ಎಂದು ಹೇಳಿದ್ದಾರೆ. ನಿಜಕ್ಕೂ ಆ ಚೆಕ್ಕನ್ನು ಕೇವಲ ತೋರಿಕೆ ನೆಪದಲ್ಲಿ ಬಾವ ನೀಡಿದ್ದರೇ ವಿನ: ಅದರಿಂದ ಏನೂ ಪ್ರಯೋಜನವಿಲ್ಲೆಂದು ತಿಳಿದು ಬಂದಿದೆ. ಬಾವರ ಜೊತೆಗೆ ಸ್ಥಳೀಯ ಗ್ರಾಮ ಪಂಚಾಯತ್ ಪಿಎ ಕೂಡಾ ಸಾಮೀಲಾಗಿದ್ದು ಮಹಿಳೆಗೆ ವಂಚನೆ ಮಾಡಿದ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನು ಚೆಕ್ ಪಡೆದ ಸಂತ್ರಸ್ಥ ಮಹಿಳೆ ತೀರಾ ಬಡವರಾಗಿರದೆ ಶ್ರೀಮಂತ ಕುಟುಂಬದವರು ಎನ್ನಲಾಗಿದೆ. ಆದರೆ ನಿಜವಾದ ಫಲಾನುಭವಿಗೆ ಶಾಸಕರು ಚೆಕ್ ನೀಡುವುದು ಬಿಟ್ಟು ಕೇವಲ ಪ್ರಚಾರವನ್ನು ಮಾಡಲು  ಇನ್ಯಾರಿಗೋ ಚೆಕ್ ನೀಡಿ ಬಳಿಕ ಅದನ್ನು ವಾಪಾಸು ಪಡೆದುಕೊಂಡಿರುವ ಕ್ರಮ ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ.

ಬಳಿಕ ಸಾರ್ವಜನಿಕ ಸಭೆಯಲ್ಲಿ ಖುದ್ದು ವೇಣುಗೋಪಾಲ್ ಅವರು ಶಾಸಕ ಬಾವನ ಪ್ರಚಾರಪ್ರಿಯತೆಗೆ ಛೀಮಾರಿ ಹಾಕಿದರು.  ಕೇವಲ ಪ್ರಚಾರವನ್ನು ಮಾಡಲು ಮುಂದಾಗಿದ್ದ ಬಾವಗೆ ವೇಣುಗೋಪಾಲ್ ಟೀಕಿಸಿದ್ದು ಕೂಡಾ ಇರಿಸುಮುರಿಸಿಗೆ ಕಾರಣವಾಯಿತು.

ಈ ಸಂದರ್ಭ ಮಾಧ್ಯಮಗಳೊಂದಿಗೆ ಮಾತನಾಡಿ ಮೊಯ್ದೀನ್ ಬಾವ “ಮನೆ ಮನೆ ಭೇಟಿ ಕಾರ್ಯಕ್ರಮ ನನ್ನ ಕ್ಷೇತ್ರದಲ್ಲಿ ಯಶಸ್ವಿಯಾಗಿದೆ. ನಮ್ಮ ಕಾರ್ಯಕರ್ತರು ಎಲ್ಲಾ ಮನೆಗಳಿಗೆ ಭೇಟಿ ನೀಡಿದ್ದಾರೆ. ಆದರೆ ಇನ್ನು ಕೆಲವು ಮನೆಗಳಿಗೆ ಹೋಗಲು ಆಗಿಲ್ಲ. ಸಮಯದ ಕೊರತೆ ಇತ್ತು. ಅಲ್ಲಿಗೆ ಹೋಗುತ್ತೇವೆ. ಪ್ರಧಾನಿ ನರೇಂಮದ್ರ ಮೋದಿ ಕೊಟ್ಟ ಭರವಸೆ ಈಡೇರಿಸಿಲ್ಲ. ನೋಟು ನಿಷೇಧ ಮಾಡಿ ಜನತೆ ಕಂಗಾಲಾದರು. ಮಗಳ ಮದುವೆ ಮಾಡಲು ಬ್ಯಾಂಕಿನ ಮುಂಬಾಗ ಕ್ಯೂ ನಿಂತರು.. ಬಡವರು ಕಂಗೆಟ್ಟರು ಎಂದು ಏನೇನೂ ಹೇಳಿ ಬಡಬಡಿಸುತ್ತಾ ಮತ್ತೆ ನಗೆಪಾಟಲಿಗೀಡಾದರು.

-ಪವಿತ್ರ

source:

http://epaper.karavaliale.net/#Article/KARAVALE_MAN_20171108_1_2/589px

Tags

Related Articles

Close