ಅಂಕಣ

ಅದ್ಭುತ!!! 1965 ರ ಇಂಡೋ-ಪಾಕ್ ಯುದ್ಧದಲ್ಲಿ 1200 ಪಾಕಿಸ್ಥಾನಿ ಯೋಧರಿಗೆ ಈ ಭಾರತೀಯ ಭಯಂಕರನಾಗಿದ್ದ!!!

ನಾವು ನಮ್ಮ ದೇಶದ ಅದೆಷ್ಟೋ ಯೋಧರು ದೇಶಕ್ಕೋಸ್ಕರ ಹೋರಾಡಿ ಪ್ರಾಣವನ್ನೇ ಸಮರ್ಪಣೆ ಮಾಡಿದ್ದಾರೆ. ಆದರೆ ಹಿಂದಿನಿಂದಲೇ ಭಾರತ ಮತ್ತು ಪಾಕಿಸ್ತಾನ ಬದ್ಧ ವೈರಿಗಳು! ಹಾಗಾಗಿ ಭಾರತ-ಪಾಕಿಸ್ತಾನ ನಡುವೆ ನಡೆದ ಯುದ್ದದಲ್ಲಿ ಅದೆಷ್ಟೋ ವೀರರು ದೇಶಕ್ಕೋಸ್ಕರ ಹೋರಾಡಿ ಪ್ರಾಣವನ್ನೇ ತ್ಯಾಗ ಮಾಡಿದ್ದಲ್ಲದೇ, ದೇಶದ ಹಿರಿಮೆಯನ್ನು ಹೆಚ್ಚಿಸುವಲ್ಲಿ ಬಹುದೊಡ್ಡ ಪಾತ್ರವನ್ನು ಮಾಡಿದ್ದಾರೆ. ಅಲ್ಲದೇ ಅದೆಷ್ಟೋ ವೀರಾರು ಭಾರತ ಪಾಕಿಸ್ತಾನದ ನಡುವೆ ನಡೆದ ನಾಲ್ಕು ಯುದ್ದದದಲ್ಲಿ ಹೀರೋಗಳೆಂದೆನಿಸಿದ ಸೈನಿಕರು ನಮ್ಮಲ್ಲಿದ್ದಾರೆ. ಪ್ರತಿಯೊಂದು ಯುದ್ಧ ನಡೆದಾಗಲೂ ಹೊಸ ಹೀರೋಗಳನ್ನು, ಹೊಸ ಆದರ್ಶಪುರುಷರನ್ನು ನಮಗೆ ಕೊಟ್ಟಿದಲ್ಲದೇ ತ್ಯಾಗ ಮತ್ತು ದೇಶಭಕ್ತಿಯ ಪರಿಕಲ್ಪಪನೆಗಳನ್ನು ತೋರಿಸಿ ಕೊಟ್ಟಿದ್ದಾರೆ!! ಆದರೆ ಇವತ್ತು ಹೇಳಹೊರಟಿರುವ ಭಾರತ-ಪಾಕಿಸ್ತಾನದ ನಡುವೆ ನಡೆದ ಯುದ್ದದಲ್ಲಿ ಒಬ್ಬ ನಾಯಕ ದೇಶಕ್ಕೋಸ್ಕರ ಮಾಡಿದ ಸಾಧನೆಯ ಕಥೆ!! ಹೌದು…ಆದರೆ ಈ ಹೀರೋ ಸೈನಿಕನಲ್ಲ! ಈ ಹೀರೋ, ಒಬ್ಬ ಸಾಮಾನ್ಯ ನಾಗರೀಕ.

ಹೌದು.. ದೇಶಕ್ಕೋಸ್ಕರ ದೇಶ ಸೇವೆಯನ್ನು ಮಾಡಿದ ಒಬ್ಬ ಸಾಮಾನ್ಯ ಭಾರತೀಯನ ಕಥೆ! 1965 ಮತ್ತು 1971ರಲ್ಲಿ ನಡೆದ ಇಂಡೋ-ಪಾಕ್ ಯುದ್ದದಲ್ಲಿ ಭಾರತೀಯ ಸೈನ್ಯಕ್ಕೆ ‘ಮಾರ್ಗದರ್ಶನ’ ನೀಡಿ ಹೀರೋ ಅನಿಸಿಕೊಂಡರು ಆ ವ್ಯಕ್ತಿ. ದೇಶಕ್ಕೋಸ್ಕರ ಭಾರತೀಯ ಸೈನಿಕರಿಗೆ ಸಹಾಯಹಸ್ತವನ್ನು ನೀಡಿದ, ಆ ಅಸಾಧಾರಣ ಪಾತ್ರವನ್ನು ವಹಿಸಿದ ವ್ಯಕ್ತಿಯೇ ರಾಂಚೋದ್ಬಾಯಿ ರಬರಿ!!! ಇವರ ಬಗ್ಗೆ ಹೆಚ್ಚಿನವರಿಗೆ ತಿಳಿದಿರಲೂ ಸಾಧ್ಯವೇ ಇಲ್ಲ. ಆದರೆ ಭಾರತೀಯ ಸೈನ್ಯ 2 ಯುದ್ದದಲ್ಲಿ ಜಯವನ್ನು ಗಳಿಸಿತು ಎಂದರೆ ಅದಕ್ಕೇ ರೂವಾರಿ ಎಂದೆನಿಸಿದವರೇ ರಾಂಚೋದ್ಬಾಯಿ ರಬರಿ.

1965ರಂದು ನಡೆದ ಯುದ್ದದಲ್ಲಿ ಪಾಕಿಸ್ತಾನದ ಸೈನಿಕರು ಕುಚ್‍ನಲ್ಲಿನ ವಿದಕೋಟ್ ಹುದ್ದೆಯನ್ನು ವಶಪಡಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಸುಮಾರು 100ಕ್ಕೂ ಹೆಚ್ಚು ಭಾರತೀಯ ಸೈನಿಕರು ಹುತಾತ್ಮರಾದರು. ಈ ಸಂದರ್ಭದಲ್ಲಿ ಪಾಕಿಸ್ತಾನ ಸೈನ್ಯವು, ಭಾರತೀಯ ಭೂಪ್ರದೇಶವನ್ನು ಸಂಪೂರ್ಣವಾಗಿ ನುಸುಳಲು ಸಹಾಯ ಮಾಡಿತ್ತು. ಆ ಸಂದರ್ಭದಲ್ಲಿ ಭಾರತೀಯ ಸೈನ್ಯಕ್ಕೆ ಮಾರ್ಗದರ್ಶನ ನೀಡಿ, ಪಾಕಿಸ್ತಾನ ಸೈನ್ಯವನ್ನು ಸದೆಬಡೆಯಲು ಕಾರಣರಾದವರು ರಾಂಚೋದ್ಬಾಯಿ!! ಹೌದು…. ಪಾಕಿಸ್ತಾನದ ಸೈನಿಕರು ನುಸುಲಿದ್ದ ಆ ಸ್ಥಳದ ಬಗ್ಗೆ ಗೊತ್ತಿರುವುದರಿಂದ, ಅದರ ಬಗ್ಗೆ ಮಾಹಿತಿಯನ್ನು ನೀಡಿ ಮಾರ್ಗದರ್ಶನವನ್ನು ಮಾಡುವುದಲ್ಲದೇ, ಪಾಕಿಸ್ತಾನದ ನುಸುಳುಕೋರರು ಭಾರತದ ಗಡಿ ಪ್ರದೇಶಕ್ಕೆ ತಲುಪುವ ಸಮಯಕ್ಕೆ, ಭಾರತೀಯ ಸೈನಿಕರು ತಲುಪುವಂತೆ ಸಹಾಯ ಮಾಡಿದ್ದರು!!ಅಷ್ಟೇ ಅಲ್ಲದೇ 1200 ಪಾಕಿಸ್ತಾನಿ ಸೈನಿಕರು ಇದ್ದ ನಿಖರವಾದ ಸ್ಥಳವನ್ನು ತಲುಪಿದ್ದಲ್ಲದೇ ಭಾರತೀಯ ಸೈನಿಕರು ಪಾಕಿಸ್ತಾನದ ಮೇಲೆ ಆಕ್ರಮಣ ಮಾಡಿ ಜಯವನ್ನು ಸಾಧಿಸಿದರು.

ನಂತರ 1971ರ ಯುದ್ದದಲ್ಲಿ ಭಾರತೀಯ ಸೈನ್ಯದ ಯಶಸ್ಸಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದರು ಕೂಡ. ಆ ಸಂದರ್ಭದಲ್ಲಿ ಪಾಕಿಸ್ತಾನದ ಗಡಿಯನ್ನು ಒಂಟೆಯ ಮೇಲೆ ಕುಳಿತು ಸವಾರಿ ಮಾಡಿ, ಪಾಕಿಸ್ತಾನದ ಪ್ರಮುಖ ಅಡಗು ತಾಣಗಳ ಮಾಹಿತಿಗಳನ್ನು ಸಂಗ್ರಹಿಸಿ, 1971ರಲ್ಲಿ ಪಾಕಿಸ್ತಾನದ ಎದುರು ಜಯವನ್ನು ಸಾಧಿಸಲು ಕಾರಣವಾಯಿತು. ಹೌದು…ಅವರ ಈ ಮಾಹಿತಿಯ ಆಧಾರದ ಮೆರೆಗೆ ಯುದ್ದಕ್ಕೆ ಸಿದ್ಧತೆಯನ್ನು ಮಾಡಿತು ನಮ್ಮ ಭಾರತೀಯ ಸೇನೆ. ಅಲ್ಲದೇ ಯುದ್ದ ಸಾಮಾಗ್ರಿಗಳು ವಿರಳವಾದಾಗ, ಸೈನ್ಯಕ್ಕೆ ಅಗತ್ಯವಿರುವಷ್ಟು ಯುದ್ದಸಾಮಾಗ್ರಿಗಳನ್ನು ಸೈನಿಕರಿಗೆ ತಲುಪುವಂತಹ ಕೆಲಸವನ್ನು ಕೂಡ ಮಾಡಿದ್ದರು. ಈ ಮೂಲಕ ಭಾರತೀಯ ಸೈನ್ಯವು ಪಾಕಿಸ್ತಾನದ ವಿರುದ್ದ ಜಯಗಳಿಸಿದ್ದಲ್ಲದೇ, ರಾಂಚೋದ್ಬಾಯಿ ರಬರಿ ಈ ಮೂಲಕ ಹೀರೋ ಎಂದೆನಿಸಿಕೊಂಡಿದ್ದಾರೆ!!

ದೇಶಕ್ಕೋಸ್ಕರ ಮಾಡಿದ ಈ ಸಾಧನೆಗೆ ಇವರಿಗೆ ಅನೇಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಸೈನ್ಯದ ವಿವಿಧ ಹುದ್ದೆಗಳಿಗೆ ಹುತಾತ್ಮರಾದ ಸೈನಿಕರ ಹಾಗೂ ವಿವಿಧ ದೇವರುಗಳ ಹೆಸರನ್ನು ಮಾತ್ರ ಇಡಲಾಗಿತ್ತು. ಆದರೆ ಒಬ್ಬ ಸಾಮಾನ್ಯ ವ್ಯಕ್ತಿಯೆನಿಸಿಕೊಂಡ ರಾಂಚೋದ್ಬಾಯಿ ಅವರ ಸಾಧನೆಗೆ, ದೇಶಕ್ಕಾಗಿ ಮಾಡಿದ ಸೇವೆಯನ್ನು ಪರಿಗಣಿಸಿ ಸೈನ್ಯದ ಒಂದು ಹುದ್ದೆಗೆ ಇವರ ಹೆಸರನ್ನು ಇಡಲಾಗಿದೆ. 1965 ಮತ್ತು 1971ರಲ್ಲಿ ನಡೆದ ಪಾಕಿಸ್ತಾನದ ವಿರುದ್ಧದ ಯುದ್ದದಲ್ಲಿ ರಾಂಚೋದ್ಬಾಯಿ ರಬರಿ ನಿಜವಾದ ನಾಯಕರೆನಿಸಿಕೊಂಡಿದ್ದು, ಈಡೀ ದೇಶವೇ ಬೆರೆಗಾಗುವಂತಹ ಸಾಧನೆಯನ್ನು ಮಾಡಿದ ಏಕೈಕ ವ್ಯಕ್ತಿಯೆನಿಸಿಕೊಂಡಿದ್ದಾರೆ!!

– ಅಲೋಖಾ

 

Tags

Related Articles

Close