ಅಂಕಣ

ಅನಂತ್ ಕುಮಾರ್ ಹೆಗಡೆಗೆ ಬಿಲ್ಲವ ವಿರೋಧಿ ಎಂಬ ಪಟ್ಟಕಟ್ಟುವ ಕಾಂಗ್ರೆಸ್ಸಿಗರೇ, ನಿಮ್ಮ ಪಕ್ಷ ಈ ಜಾತಿಗೆ ಕೊಟ್ಟ ಗೌರವ ಎಷ್ಟು ತಿಳಿಸುವಿರಾ?!

ಅನಂತ್ ಕುಮಾರ್ ಹೆಗಡೆ!!

ಉತ್ತರ ಕನ್ನಡ ಸಂಸದ. ಇವರ ಹೆಸರು ಕೇಳಿದರೆ ಸಾಕು ಯುವಕರಲ್ಲಿ ಅದೇನೋ ಹೊಸ ತೇಜಸ್ಸು ಎದ್ದು ಕಾಣುತ್ತೆ. ಬೆಂಕಿ ಚೆಂಡಿನಂತಹ ಅವರ ಮಾತುಗಳು, ಅವರ ವ್ಯಕ್ತಿತ್ವ, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಅವರು ತನ್ನ ಜವಬ್ಧಾರಿಯನ್ನು ಸಮರ್ಥವಾಗಿ ನಿರ್ವಹಿಸುವ ಶೈಲಿ, ಹೀಗೆ ಇವೆಲ್ಲವೂ ಅವರ ಉತ್ತಮ ನಾಯಕತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಹೀಗೆ ಅನಂತ್ ಕುಮಾರ್ ಹೆಗಡೆಯವರ ಸರಳತೆ ಎಲ್ಲರಿಗೂ ಇಷ್ಟವಾಗುತ್ತದೆ.

5 ಬಾರಿ ಸಂಸದರಾದರೂ ಯಾವುದೇ ಅಹಂಕಾರವಿಲ್ಲದೆ, ಈ ಹಿಂದೆ ಯಾವ ರೀತಿ ಇಸ್ಲಾಂ ಉಗ್ರರನ್ನು ಝಾಡಿಸುತ್ತಿದ್ದರೋ ಅದೇ ರೀತಿ ಝಾಡಿಸುವ ಅದ್ಭುತ
ಧೈರ್ಯ, ಪ್ರಸ್ತುತ ಸಚಿವರಾಗಿದ್ದರೂ ತನ್ನ ಧರ್ಮದ ಬಗ್ಗೆ ಇಟ್ಟುಕೊಂಡಿರುವ ಅಗಾಧ ಹೆಮ್ಮೆ, ಇವೆಲ್ಲಾ ಅವರನ್ನು ಬಹಳಷ್ಟು ಎತ್ತರಕ್ಕೆ ಕೊಂಡೊಯ್ದು ಬಿಟ್ಟಿದೆ.

ಬಿಲ್ಲವ ವಿರೋಧಿಯಾದರೇ ಅನಂತ್ ಕುಮಾರ್ ಹೆಗಡೆ…?

ಹೌದು. ಹೀಗೊಂದು ಪ್ರಶ್ನೆ ಸಮಾಜ ಬಾಂಧವರಲ್ಲಿ ಉದ್ಭವಿಸಿದೆ. ಇತ್ತೀಚೆಗೆ ಬೈಂದೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಎಂದಿನಂತೆ ತನ್ನದೇ ಅದ್ಭುತ
ಶೈಲಿಯಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಭಾಷಣ ಮಾಡುತ್ತಾರೆ. ಭಾಷಣದ ಮಧ್ಯೆ ಬೈಂದೂರು ಶಾಸಕ ಗೋಪಾಲ ಪೂಜಾರಿಯನ್ನು ಇಲ್ಲಿಂದ ಮುಕ್ತಗೊಳಿಸಬೇಕು ಎಂಬರ್ಥದಲ್ಲಿ, “ಪೂಜಾರಿಯ ಪುಂಗಿ ಬಂದ್ ಆಗಬೇಕು” ಎಂದು ಹೇಳಿದ್ದಾರೆ. ಆದರೆ ಇದನ್ನೇ ಕೆಲವರು ಹಿಡಿದುಕೊಂಡು ಬಿಲ್ಲವರಿಗೆ ಮಾಡಿದ ಅವಮಾನ ಎಂದು ಬೊಬ್ಬೆ ಬಿಡುತ್ತಿದ್ದಾರೆ.

ನಾನೊಬ್ಬ ಬಿಲ್ಲವ- ಹೆಗಡೆಯನ್ನು ಚೆನ್ನಾಗಿ ಬಲ್ಲವ…!

ಹೌದು. ನಾನೊಬ್ಬ ಬಿಲ್ಲವನಾಗಿ ಎಡಬಿಡಂಗಿಗಳ ಈ ಧೋರಣೆಯನ್ನು ಕಟುವಾಗಿ ಖಂಡಿಸುತ್ತೇನೆ. ಅನಂತ್ ಕುಮಾರ್ ಹೆಗಡೆಯವರನ್ನು ನಾವು ಚೆನ್ನಾಗಿ
ಅರಿತಿದ್ದೇವೆ. ಅವರು ಬಿಲ್ಲವ ಸಮಾಜದೊಂದಿಗೆ ಇಟ್ಟುಕೊಂಡಿರುವ ಪ್ರೀತಿ, ಅನ್ಯೋನ್ಯತೆ ಇವೆಲ್ಲಾ ಇಂದಿಗೂ ಬಿಲ್ಲವರು ಅವರೊಂದಿಗೆ ಕೈಜೋಡಿಸಲು ಸಾಧ್ಯವಾಗಿದೆ. ತನ್ನ ಕೆಟ್ಟ ಆಡಳಿತದಿಂದಲೇ ಬೈಂದೂರು ವಿಧಾನ ಸಭಾ ಕ್ಷೇತ್ರವನ್ನು ಅಭಿವೃದ್ಧಿಯಿಂದ ಮುಕ್ತ ಮಾಡಿದ್ದ ಕಾಂಗ್ರೆಸ್ ಶಾಸಕ ಗೋಪಾಲ ಪೂಜಾರಿಗೆ ತನ್ನ ಕ್ಷೇತ್ರವನ್ನು ವಿಕಾಸದ ಹಾದಿಗೆ ಕೊಂಡೊಯ್ಯುವ ಯಾವ ಕನಿಷ್ಠ ಚಿಂತನೆಯೂ ಇರಲಿಲ್ಲ. ಕಾಂಗ್ರೆಸ್ ಕಾರ್ಯಕರ್ತರಲ್ಲೂ ಸಚಿವ ಅನಂತ್ ಕುಮಾರ್ ಹೆಗಡೆ ವಿರುದ್ಧ ಮಾತನಾಡುವ ಯಾವ ವಿಷಯವೂ ಇರಲಿಲ್ಲ. ಹೀಗಾಗಿಯೇ ಅವರು ಮೈ ಪರಚಿಕೊಳ್ಳುತ್ತಿದ್ದರು. ಆದರೆ ಇತ್ತೀಚೆಗೆ ನಡೆದ ಭಾಷಣವನ್ನೇ ಹಿಡಿದುಕೊಂಡು ಅನಂತ್ ಕುಮಾರ್ ಹೆಗಡೆಯವರ ವಿರುದ್ಧ ಮನ ಬಂದಂತೆ ಮಾತನಾಡುತ್ತಿದ್ದಾರೆ.

ಅಷ್ಟಕ್ಕೂ ಅವರ ಹೆಸರೇ “ಗೋಪಾಲ ಪೂಜಾರಿ” ಎಂದು. ಹೀಗಾಗಿಯೇ “ಪೂಜಾರಿಯ ಪುಂಗಿ ಬಂದ್ ಆಗಬೇಕು” ಎಂದು ಹೇಳಿದ್ದಾರೆ. ಮತ್ತೇನನ್ನಬೇಕು ಸ್ವಾಮಿ. ಇದು ಕೇವಲ ಆ ಶಾಸಕನಿಗೆ ಹೇಳಿದ ಮಾತುಗಳು. ಇದನ್ನು ಇಡೀ ಬಿಲ್ಲವ ಸಮಾಜಕ್ಕೆ ಎತ್ತಿ ಕಟ್ಟುತ್ತೀರಲ್ಲಾ ನಿಮಗೇನನ್ನಬೇಕು? ಪುಂಗಿ ದಾಸಯ್ಯನ ಪುಂಗಿ ಬಂದ್ ಆಗಬೇಕೆನ್ನುವ ಸಂಕಲ್ಪವನ್ನು ಬೈಂದೂರಿನ ಸಮಸ್ತ ಜನತೆಯೇ ಬಯಸುತ್ತಿದ್ದಾರೆ. ಬಿಡಿ, ನಾನೊಬ್ಬ ಬಿಲ್ಲವನಾಗಿ, ಗುರು ನಾರಾಯಣ ಸ್ವಾಮಿಗಳ ಭಕ್ತನಾಗಿ ಗೋಪಾಲ ಪೂಜಾರಿಯ ಪುಂಗಿಯನ್ನು ಬಂದ್ ಮಾಡಬೇಕೆಂದು ಗಂಟಾಘೋಷವಾಗಿ ಹೇಳುತ್ತೇನೆ. ಎದುರಿಸುವ ಧೈರ್ಯವಿದೆಯೇನೂ..?

ಬಿಲ್ಲವ ಜಾತಿಗೆ ಬಿಜೆಪಿಯನ್ನು ಎತ್ತಿಕಟ್ಟಲು ನಿಮಗೆ ಅದ್ಯಾವ ಅರ್ಹತೆ ಇದೆ ಸ್ವಾಮೀ…

ಕರಾವಳಿ ಭಾಗದಲ್ಲಿ ಬಿಲ್ಲವರ ಸಂಖ್ಯೆ ಅಧಿಕವಾಗಿದೆ. ಬಿಲ್ಲವ ಬಾಂಧವರು ಮನಸ್ಸು ಮಾಡಿದರೆ ಯಾವ ಅಭ್ಯರ್ಥಿಯನ್ನೂ ಗೆಲ್ಲಿಸುವಲ್ಲಿಯೂ ಸಮರ್ಥರಿದ್ದಾರೆ. ಆದರೆ ಬಿಲ್ಲವರು ಬಲ್ಲವರಾಗಿದ್ದಾರೆ. ಅವರು ಜಾತಿ ನೋಡಿ ಮತ ಹಾಕಲ್ಲ. ದೇಶಕ್ಕೆ ಅಥವಾ ಕ್ಷೇತ್ರಕ್ಕೆ ಯಾವ ಪಕ್ಷ ಉತ್ತಮ ಎಂಬುದನ್ನು ಬಿಲ್ಲವರು ಚೆನ್ನಾಗಿಯೇ ಅರಿತಿದ್ದಾರೆ. ದಕ್ಷಿಣ ಕನ್ನಡ ಕ್ಷೇತ್ರವನ್ನೊಮ್ಮೆ ನೋಡಿ ಕಲಿಯಿರಿ. ಇಲ್ಲಿ ಎಲ್ಲಾ ಜಾತಿಯವರೂ ಅಣ್ಣ ತಮ್ಮಂದಿರಂತೆ ಇದ್ದಾರೆ ಅನ್ನೋದನ್ನು ಮರೆಯಬೇಡಿ. ಇಲ್ಲಿ ಕೂಡಾ ಬಿಲ್ಲವರೇ ಅಧಿಕ ಸಂಖ್ಯೆಯಲ್ಲಿರುವವರು. ಅನೇಕ ಬಾರಿ ಆ ಜಿಲ್ಲೆಯಲ್ಲಿ ಜನಾರ್ಧನ ಪೂಜಾರಿಯವರನ್ನು ಗೆಲ್ಲಿಸಿದ ಅದೇ ಬಿಲ್ಲವರು ಬದಲಾವಣೆಯನ್ನು ಬಯಸಿ ಯುವ ಪೀಳಿಗೆಗೆ ಅವಕಾಶ ಮಾಡಿಕೊಟ್ಟಿದ್ದರು. ನಳಿನ್ ಕುಮಾರ್ ಕಟೀಲ್ ಎಂಬ ಯುವ ನಾಯಕ ಆವಾಗಷ್ಟೇ ಜನರಿಗೆ ಪರಿಚಯವಾಗಿದ್ದರು. ಸೂರ್ಯ ಬೆಳಕು ಚಿಮ್ಮುವ ಹಾಗಿದ್ದ ಕಟೀಲರನ್ನು ಅದೇ ಬಿಲ್ಲವ ಜನತೆ ಅವರನ್ನು ಗೆಲ್ಲಿಸಿ ಲೋಕಸಭೆಗೆ ಕಳಿಸಿದ್ದರು. ದಕ್ಷಿಣ ಕನ್ನಡದ ಚಿತ್ರಣವೇ ಬದಲಾಯಿತು. ನಂತರ 2ನೇ ಅವಧಿಗೆ ಮತ್ತೆ ಚುನಾವಣೆಗೆ ಸ್ಪರ್ಧಿಸುವಾಗ ನಳಿನ್ ಕುಮಾರ್ ಕಟೀಲ್ ಎಂಬ ಕರಾವಳಿಯ ನಾಯಕನ ವಿರುದ್ಧ ಬಿಲ್ಲವ ವಿರೋಧಿ ಎಂಬ ಪಟ್ಟ ಕಟ್ಟಲಾಯಿತು. ಅವರು ಯಾವುದೇ ಜಾತಿಗೂ ಅಂಟಿಕೊಳ್ಳದೆ ಎಲ್ಲಾ ಜಾತಿಯವರನ್ನೂ ಸಮಾನ ರೀತಿಯಲ್ಲಿ ಕಾಣುತ್ತಿದ್ದರು. ಅದರಲ್ಲೂ ಬಿಲ್ಲವ ಬಾಂಧವರನ್ನು ಪ್ರೀತಿಯಿಂದಲೇ ಕೊಂಡೊಯ್ಯುವ ಕಟೀಲ್‍ರ ಬಗ್ಗೆ ಬಿಲ್ಲವ ಬಾಂಧವರಿಗೆ ಚೆನ್ನಾಗಿಯೇ ಅರಿತಿತ್ತು. ಇದರ ಪ್ರತಿಫಲವೇ ಕಳೆದ ಲೋಕ ಸಭಾ ಚುನಾವಣೆಯಲ್ಲಿ ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಕಂಡು ಪ್ರತಿಸ್ಪರ್ಧಿಯಾಗಿದ್ದ ಜನಾರ್ಧನ ಪೂಜಾರಿಯನ್ನು ಮತ್ತೆ ಮಣಿಸಿದ್ದರು. ಪ್ರತಿಸ್ಪರ್ಧಿ ಪೂಜಾರಿಯನ್ನು ಸೋಲಿಸಿದ್ದ ಮಾತ್ರಕ್ಕೆ ಅವರನ್ನು ಬಿಲ್ಲವ ವಿರೋಧಿ ಅನ್ನೋದೇ..?

ಬಿಲ್ಲವರೇ ಓಟು ಹಾಕಿ ಗೆಲ್ಲಿಸಿದ್ದ ಉತ್ತರ ಕನ್ನಡದ ಹೀರೋ ಅನಂತ್ ಕುಮಾರ್ ಹೆಗಡೆಗೆ ಬಿಲ್ಲವ ವಿರೋಧಿ ಎಂಬ ಪಟ್ಟ ರಾಹುಲ್ ಗಾಂಧಿಗಿಂತಲೂ ಹಾಸ್ಯಾಸ್ಪದ.
ಇಂದಿಗೂ ರಾಜ್ಯದ ಬಿಲ್ಲವರು ಖಂಡಿತವಾಗಿಯೂ ದುಷ್ಟ ಸಿದ್ದರಾಮಯ್ಯರ ಆಡಳಿತದ ಪರವಾಗಿಲ್ಲ. ಬದಲಾಗಿ ದೇಶದ ಹೆಮ್ಮೆಯ ನಾಯಕ, ಜಗತ್ತೇ ಮೆಚ್ಚುವ ನಾಯಕ ಶ್ರೀ ನರೇಂದ್ರ ಮೋದಿಯವರ ಪರವಾಗಿ, ಕೇವಲ “ಪೂಜಾರಿಯ ಪುಂಗಿ ಬಂದ್ ಮಾಡಬೇಕು” ಎಂದಿದ್ದಕ್ಕೆ, ಕೆಲವು ಸೋಗಲಾಡಿಗಳಿಂದ ಟೀಕೆಗೊಳಗಾದ ಅದೇ ಅನಂತ್ ಕುಮಾರ್ ಹೆಡೆಯ ಪರವಾಗಿ, ಎಲ್ಲಾ ಜಾತಿಯವರನ್ನೂ ಒಂದೇ ಎಂದು ಪ್ರೀತಿಸಿ, ರಾಜ್ಯದಲ್ಲೇ ನಂಬರ್ 01 ಸಂಸದ ಎಂದು ಹೆಗಳಿಕೆಯಲ್ಲಿರುವ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಪರವಾಗಿ, ಉಡುಪಿ ಸಂಸದೆ ಶೋಭಾ ಕರಂದ್ಲಾಜೆಯವರ ಪರವಾಗಿ ಇದ್ದೇವೆ ಎನ್ನುವುದೂ ಸತ್ಯ ಪ್ರಮಾಣ.

ಬಿಲ್ಲವರ ಪರವಾಗಿರುವ ನಕಲಿ ನಾಯಕರೇ-ಇಲ್ಲಿ ಕೇಳಿ ನನ್ನ ಕರೆ…

ಖಂಡಿತಾ ಒಪ್ಪುತ್ತೇನೆ. ನಾನೊಬ್ಬ ಬಿಲ್ಲವನಾಗಿ ಮಾತ್ರವಲ್ಲ, ಸಜ್ಜನ ಪ್ರಜೆಯಾಗಿ ಜನಾರ್ಧನ ಪೂಜಾರಿಯವರ ಬಗ್ಗೆ ನನಗೂ ಅಭಿಮಾನವಿದೆ. ಆದರೆ ನಿಮ್ಮ
ಕಾಂಗ್ರೆಸ್ ನಾಯಕರಲ್ಲಿ ನನ್ನ ಹಲವಾರು ಪ್ರಶ್ನೆಗಳಿವೆ. ಉತ್ತರಿಸುವಿರಾ… ವಿಶೇಷವಾಗಿ ಬಿಲ್ಲವ ವಿರೋಧಿಗಳೆಂದು ಬಿಜೆಪಿಗರಿಗೆ ಪಟ್ಟ ಕಟ್ಟುವ ಸೋಗಲಾಡಿ
ನಾಯಕರಿಗೆ ನನ್ನ ಪ್ರಶ್ನೆ.

1. ನಿಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಿಲ್ಲವ ಸಮಾಜಕ್ಕೆ ಯಾವ ಕೊಡುಗೆ ನೀಡಿದೆ ಎಂಬುವುದನ್ನು ದೃಢೀಕರಿಸುತ್ತೀರಾ.(ಕಳೆದ ಬಿಜೆಪಿ
ಸರ್ಕಾರಕ್ಕೆ ಹೋಲಿಸಿಕೊಂಡು)

2. ಕಾಂಗ್ರೆಸ್‍ನಲ್ಲಿ ಎಷ್ಟು ಬಿಲ್ಲವ ಶಾಸಕರಿದ್ದಾರೆ. ಬೆಳ್ತಂಗಡಿಯಲ್ಲಿ ವಸಂತ ಬಂಗೇರ, ಕಾಪು ಕ್ಷೇತ್ರದಲ್ಲಿ ವಿನಯ ಕುಮಾರ್ ಸೊರಕೆ, ಬೈಂದೂರಿನಲ್ಲಿ ಗೋಪಾಲ
ಪೂಜಾರಿ ಸಹಿತ ಅನೇಕ ಶಾಸಕರು ಕಾಂಗ್ರೆಸ್ ಸರ್ಕಾರದಲ್ಲಿ ಇದ್ದಾರೆ. ಆದರೆ ಅವರಿಗೆ ನಿಮ್ಮ ಪಕ್ಷ ಎಷ್ಟು ಗೌರವ ನೀಡಿದೆ ಎಂಬುವುದನ್ನು ನೀವು ಅರಿತಿದ್ದೀರಾ..? ವಸಂತ ಬಂಗೇರ 5 ಬಾರಿ ಶಾಸಕರಾಗಿದ್ರೂನು ಅವರಿಗೆ ಸಚಿವ ಸ್ಥಾನ ನೀಡದೆ, ಕೇವಲ ಒಂದು ಬಾರಿ ಶಾಸಕರಾಗಿ ಆಯ್ಕೆಯಾದ ಪ್ರಮೋದ್ ಮಧ್ವರಾಜ್‍ಗೆ ಹೇಗೆ ಸಚಿವ ಸ್ಥಾನ ಕೊಟ್ಟಿದ್ರಿ.? ಹಾಗಾದರೆ ನಿಮ್ಮ ಪಕ್ಷಕ್ಕೆ ಹಣ ಮಾತ್ರ ಮುಖ್ಯವಾಯಿತು. ಅರ್ಹತೆ ಮುಖ್ಯವೇ ಆಗಿಲ್ಲ. ಆವಾಗ ಯಾಕೆ ನೀವು ವಸಂತ ಬಂಗೇರರ ಪರವಾಗಿ ಬ್ಯಾಟಿಂಗ್ ಮಾಡಿಲ್ಲ.?

3. ಸಂಸದರಾಗಿ, ಶಾಸಕರಾಗಿ, ಎಐಸಿಸಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ ಕಾಪು ಶಾಸಕ ವಿನಯ ಕುಮಾರ್ ಸೊರಕೆಯವರಿಗೆ 2ನೇ ಅವಧಿಯಲ್ಲಿ ಸಚಿವ
ಸ್ಥಾನವನ್ನು ಕಿತ್ತು ಕೊಂಡಿದಿರಲ್ಲಾ… ಆವಾಗ ಎಲ್ಲಿ ಹೋಗಿತ್ತು ಸ್ವಾಮಿ ಜಾತಿ ಪ್ರೇಮ..? ಸೊರಕೆಯವರು ಬಿಲ್ಲವ ಜಾತಿಯವರಲ್ಲವೇ..?

4. ಬಿಲ್ಲವರ ಆರಾಧ್ಯ ದೇವರು ಗುರು ನಾರಾಯಣ ಸ್ವಾಮಿಗಳು ಪ್ರತಿಷ್ಟಾಪಿಸಿದ ಕುದ್ರೊಳ್ಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ ಬಿಜೆಪಿ ಸರ್ಕಾರ ಇರುವಾಗ
ದಸರಾ ಉತ್ಸವಕ್ಕೆ ಅನುದಾನ ಒದಗಿಸುತ್ತಿತ್ತು. ಆದರೆ ನಿಮ್ಮ ಸಿದ್ದರಾಮಯ್ಯ ಸರ್ಕಾರ ಮಾತ್ರ ಆ ಅನುದಾನವನ್ನು ಸ್ಥಗಿತಗೊಳಿಸಿತ್ತಲ್ಲಾ… ಆವಾಗ ನಿಮ್ಮ ಜಾತಿ ಪ್ರೇಮ ಎಲ್ಲಿ ಹೋಗಿತ್ತು ಸೋಕಾಲ್ಡ್ ಬಿಲ್ಲವ ಪ್ರೇಮಿಗಳೇ..?

5. ಅದೇ ಕುದ್ರೊಳ್ಳಿ ದೇವಸ್ಥಾನಕ್ಕೆ ಮುಖ್ಯಮಂತ್ರಿಗಳ ಭೇಟಿ ನಿಗಧಿಯಾಗಿದ್ದರೂ, ಮಂಗಳೂರಿಗೆ ಬಂದವರೇ ನೇರವಾಗಿ ಐವನ್ ಡಿಸೋಜಾರವರ ಮನೆಗೆ ಹೋಗಿ, ಅಲ್ಲಿಂದ ಕುದ್ರೊಳ್ಳಿಗೆ ತೆರಳದೆ ಬೆಂಗಳೂರಿಗೆ ವಾಪಾಸಾಗಿದ್ದರಲ್ಲಾ ನಿಮ್ಮ ಸಿದ್ದರಾಮಣ್ಣ… ಆ ದೇವಸ್ಥಾನದಲ್ಲಿ ಮುಖ್ಯಮಂತ್ರಿಗಳ ಸ್ವಾಗತಕ್ಕೆ ಹೂ ಬೊಕ್ಕೆ ಹಿಡಿದುಕೊಂಡು ಕಾಯುತ್ತಿದ್ದ ನಿಮ್ಮದೇ ಪಕ್ಷದ ಜನಾರ್ಧನ ಪೂಜಾರಿ ಸಹಿತ ಅನೇಕ ಬಿಲ್ಲವ ಬಾಂಧವರಿಗೆ ಅವಮಾನವಾಗಿತ್ತಲ್ಲಾ… ಆವಾಗ ಯಾಕೆ ಯಾವ ಬಿಲ್ಲವ ಪ್ರೇಮಿಗಳೂ ತುಟಿ ಬಿಚ್ಚಿಲ್ಲ..?

6. ಬಿಲ್ಲವ ಸಮಾಜ ಎಂದು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತೀರಿ, ಅದೇ ಬಿಲ್ಲವ ಸಮಾಜದ ಮುಂದಾಳು ಜನಾರ್ಧನ ಪೂಜಾರಿಯವರನ್ನು ಕಾಲ ಕಸಕ್ಕಿಂತಲೂ ಕಡೆ ಮಾಡಿ ರಾಜಕೀಯವಾಗಿ ಅವರನ್ನು ನಿಮ್ಮ ಪಕ್ಷದವರೇ ಮುಗಿಸಿಬಿಟ್ಟಿದಿರಲ್ಲಾ… ಆವಾಗ ಬಿಲ್ಲವರ ಬಗ್ಗೆ ಕಾಳಜಿ ಇರಲಿಲ್ವಾ..?

7. ಬಜರಂಗ ದಳ ಕಾರ್ಯಕರ್ತ, ಮೂಡುಬಿದಿರೆಯ ಪ್ರಶಾಂತ್ ಪೂಜಾರಿಯನ್ನು ತನ್ನ ತಂದೆಯ ಎದುರಿಗೇ ಕೊಚ್ಚಿ ಕೊಂದಿದ್ದರಲ್ಲಾ. ಆವಾಗ ಯಾಕೆ ಸ್ವಾಮಿ ನೀವು ಬಾಯಿ ಮುಚ್ಚಿಕೊಂಡು ಕುಂತಿದ್ರಿ? ಕೊಲೆ ಮಾಡಿದ ಉಗ್ರರು ನಿಮ್ಮ ಅಪ್ಪಂದಿರಾ?

8. ಮೂಲ್ಕಿ-ಮೂಡುಬಿದ್ರಿ ಸಹಿತ ಅನೇಕ ವಿಧಾನ ಸಭಾ ಕ್ಷೇತ್ರದಲ್ಲಿ ಬಿಲ್ಲವ ನಾಯಕರಿಗೆ ಟಿಕೆಟ್ ನೀಡಿದ್ದ ಭಾರತೀಯ ಜನತಾ ಪಕ್ಷದ ವಿರುದ್ಧ ಬಿಲ್ಲವರ ಪರವಾಗಿ
ಇರುವವರು ಎಂದು ಪೋಸು ಕೊಡುವವರು ಯಾಕೆ ಸೋಲಿಸಿದ್ರಿ ಸ್ವಾಮಿ?

9. ಕಾಂಗ್ರೆಸ್‍ನ ಕಟ್ಟಾಳು ಆಗಿದ್ದ ಬಿಲ್ಲವ ನಾಯಕ ಹರಿಕೃಷ್ಣ ಬಂಟ್ವಾಳ ತನ್ನ 1000 ಕಾರ್ಯಕರ್ತರೊಂದಿಗೆ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡರಲ್ಲಾ… ಹಾಗಾದ್ರೆ ಯಾರು ಸ್ವಾಮಿ ಬಿಲ್ಲವ ವಿರೋಧಿಗಳು.

10. ಕೇವಲ ಅನಂತ್ ಕುಮಾರ್ ಹೆಗಡೆ “ಪೂಜಾರಿಯ ಪುಂಗಿ ಬಂದ್ ಆಗಬೇಕು” ಎಂದು ಬೈಂದೂರು ಶಾಸಕ ಗೋಪಾಲ್ ಪೂಜಾರಿಗೆ ಹೇಳಿದ್ದಕ್ಕೆ, ಇಡೀ ಬಿಲ್ಲವ ಸಮಾಜಕ್ಕೇ ನಿಂದಿಸಿದ್ದಾರೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದೀರಲ್ಲಾ… ಆ ಸಮಾಜಕ್ಕಾಗಿ ನೀವೇನು ಮಾಡಿದ್ದೀರಾ ಎಂದು ಬಹಿರಂಗಪಡಿಸಿ ನೋಡೋಣ…

ಖಂಡಿತವಾಗಿಯೂ ಹೇಳುತ್ತೇನೆ. ನಾನೊಬ್ಬ ಬಿಲ್ಲವನಾಗಿಯೇ ಹೇಳುತ್ತೇನೆ. ಈ ದೇಶದಲ್ಲಿ ಗುರು ನಾರಾಯಣ ಸ್ವಾಮಿಗಳ ತತ್ವವನ್ನು ಮಾಡುತ್ತಿರುವ ಪಕ್ಷ ಬಿಜೆಪಿ. ಯಾವುದೇ ಧರ್ಮಗಳನ್ನು ಒಡೆಯದೆ, ಜಾತಿಗಳ ಮಧ್ಯೆ ತಿಕ್ಕಾಟ ಉಂಟುಮಾಡದೆ, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ತತ್ವದ ಅಡಿ ಕೆಲಸ ಮಾಡುತ್ತಿದೆ. ಆದರೆ ಕಾಂಗ್ರೆಸ್ಸಿಗರು ಮಾತ್ರ ಜಾತಿಗಳ ಮಧ್ಯೆ ಭಿನ್ನಾಭಿಪ್ರಾಯವನ್ನು ತರಲು ಯತ್ನಿಸುತ್ತಿದ್ದಾರೆ. ಲಿಂಗಾಯತ-ವೀರಶೈವರನ್ನು ಬೇರ್ಪಡಿಸಿ ಆಯಿತು, ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಅಡಿಗಲ್ಲು ಹಾಕಿ ಹಿಂದೂ ಧರ್ಮವನ್ನು ವಿಭಜಿಸಿ ಆಯಿತು. ಅಹಿಂದ ಎಂದು ಹೇಳಿಕೊಂಡು ಜಾತಿಗಳ ಮಧ್ಯೆ ಬೇಲಿ ಹಾಕುವ ಕೆಲಸವನ್ನೂ ಮಾಡಿದ್ದಾಯಿತು. ಇನ್ನೇನು ಬಾಕಿ ಇದೆ ನಿಮ್ಮ ನೀಚ ರಾಜಕೀಯ ಆಟಕ್ಕೆ.

ಅನಂತ್ ಕುಮಾರ್ ಹೆಗಡೆ ನಮ್ಮ ನೆಚ್ಚಿನ ನಾಯಕರು. ಅವರನ್ನು ಬಿಲ್ಲವ ವಿರೋಧಿ ಎನ್ನುವವರು ಮೂರ್ಖರು. ಹೀಗೆನ್ನುವವರಿಗೆ ಖಂಡಿತವಾಗಿಯೂ ಜಾತಿಯ
ಮೇಲೆ ಪ್ರೇಮವಿಲ್ಲ. ಬದಲಾಗಿ ಜಾತಿ ಜಾತಿಯ ಮಧ್ಯೆ ಕಂದಕ ಏರ್ಪಡಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದೇ ನಿಮ್ಮ ಹವ್ಯಾಸ. ಅನಂತ್ ಕುಮಾರ್
ಹೆಗಡೆಯವರ ಹಾಗೂ ಬಿಜೆಪಿಯವರ ಏಳಿಗೆಯನ್ನು ನಿಮ್ಮಿಂದ ಸಹಿಸೋಕ್ಕಾಗಲ್ಲ ಅನ್ನೋದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ನೆಪಿಟ್ಟುಕೊಳ್ಳಿ. ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಜಾತಿಯನ್ನು ಮುಂದಿಟ್ಟು ರಾಜಕೀಯ ಮಾಡುತ್ತಿರುವ ನಿಮ್ಮ ಆಟ ಶಾಶ್ವತವಾಗಿ ಬಂದ್ ಆಗುತ್ತದೆ.
ಮುಂದಿನ ದಿನಗಳಲ್ಲಿ ಕರ್ಣಾಟಕದಲ್ಲಿ ಕಮಲ ಅರಳುತ್ತದೆ, ಬೈಂದೂರಿನಲ್ಲಿ “ಪೂಜಾರಿ ಬಾಯಿ ಬಂದ್ ಆಗುತ್ತದೆ”, ಕರಾವಳಿ ಕರ್ನಾಟಕ ಸಹಿತ ಕರ್ನಾಟಕ ರಾಜ್ಯ ಮತ್ತೊಮ್ಮೆ ರಾಮ ರಾಜ್ಯವಾಗುತ್ತದೆ. ಇದರಲ್ಲಿ ಯಾವ ಸಂದೇಹವೂ ಇಲ್ಲ…!!

-ಸುನಿಲ್ ಶೇಖರ್ ಪೂಜಾರಿ

Tags

Related Articles

Close