ಪ್ರಚಲಿತ

ಅಭಿಮಾನಿಗಳಿಗೆ ಮುಖ ಮೂತಿ ನೋಡದೆ ಹೊಡೆಯುವ ಕಮಲ್ ಹಾಸನ್ ಪಕ್ಷ ಕಟ್ಟಿಕೊಂಡು ಏನು ಮಾಡಿಯಾರು?? ಇಲ್ಲಿದೆ ಈತನ ಅಸಲಿ ಮುಖ!!!

ರಾಜಕೀಯಕ್ಕೆ ಎಂಟ್ರಿಯಾಗಲು ನಿರ್ಧಾರವನ್ನು ಕೈಗೊಂಡಾಗಿನಿಂದಲೂ ಒಂದಲ್ಲ ಒಂದು ವಿವಾದಗಳನ್ನು ಸೃಷ್ಟಿಸುತ್ತಿರುವ ನಟ ಕಮಲ್ ಹಾಸನ್ ವಿವಾದಗಳಿಂದಲೇ ಫೇಮಸ್ ಆಗಿರೋದು ಗೊತ್ತೇ ಇದೆ!! ಆದರೆ ರಾಜಕೀಯ ರಂಗಕ್ಕೆ ಪ್ರವೇಶಿಸುವ ಉತ್ಸಾಹದಲ್ಲಿರುವ ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್ ಇದೀಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹೌದು.. ಈಗಾಗಲೇ “ಹಿಂದೂಗಳಲ್ಲೂ ಭಯೋತ್ಪಾದನೆ, ಉಗ್ರವಾದ ಇಲ್ಲವೆಂದು ಹೇಳಲು ಸಾಧ್ಯವಿಲ್ಲ” ಎಂಬ ಹೇಳಿಕೆಯನ್ನು ನೀಡಿ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿರುವ ನಟ ಕಮಲ್ ಹಾಸನ್ ಅವರಿಗೆ ಪ್ರಕಾಶ್ ರೈ ಬೆಂಬಲ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಲ್ಲದೇ, ನೈತಿಕತೆಯ ಹೆಸರಿನಲ್ಲಿ ಯುವ ಜೋಡಿಯನ್ನು ಥಳಿಸುವುದು, ಅದಕ್ಕೆ ಪ್ರತಿರೋಧ ಒಡ್ಡಿದ್ರೆ ಬೆದರಿಕೆ ಹಾಕುವುದು, ಟ್ರಾಲ್ ಮಾಡುವುದು ಭಯೋತ್ಪಾದನೆ ಅಲ್ಲದೇ ಬೇರೆ ಏನು ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಗೋಹತ್ಯೆ ಮಾಡಿದ ಅನುಮಾನದ ಮೇಲೆ ಅಮಾಯಕರ ಕೊಲೆ ಮಾಡುವುದು ಭಯೋತ್ಪಾದನೆ ಅಲ್ಲ ಅನ್ನುವುದಾದರೆ, ಭಯೋತ್ಪಾದನೆ ಅಂದ್ರೆ ಏನು ಎಂದು ಅವರು ಪ್ರಶ್ನೆ ಮಾಡಿದ್ದಲ್ಲದೇ ಇದರಿಂದಾಗಿ ತೀವ್ರ ವಿವಾದವನ್ನು ಸೃಷ್ಟಿಸಿದ್ದರು.

ಆದರೆ ಇದೀಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿರುವ ಕಮಲ್ ಹಾಸನ್ ಬೆಂಗಳೂರಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಭಿಮಾನಿಯೊಬ್ಬರಿಗೆ ಕಪಾಳ ಮೋಕ್ಷ ಮಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆದರೆ ಈ ಹಿಂದೆ “ತಮಿಳು ನಿಯತಕಾಲಿಕವೊಂದರಲ್ಲಿ ಕಮಲ್ ಹಾಸನ್ ಬರೆದಿದ್ದ ಲೇಖನದಲ್ಲಿ “ಭಾರತದಲ್ಲಿ ಹಿಂದೂ ಭಯೋತ್ಪಾದನೆ ಇರುವುದನ್ನು ಅಲ್ಲಗಳೆಯಲಾಗದು” ಎಂದು ಪ್ರತಿಪಾದಿಸಿದ್ದರು. ಈ ಮೂಲಕ ಅವರು ಹಿಂದೂಗಳಿಗೆ ಭಯೋತ್ಪಾದಕರ ಹಣೆಪಟ್ಟಿ ಹಚ್ಚಲು ಮುಂದಾಗಿದ್ದಲ್ಲದೆ ಈ ಬಗ್ಗೆ ತಮಿಳುನಾಡಿನ ಜನರನ್ನು ಧರ್ಮದ ಹೆಸರಿನಲ್ಲಿ ಒಡೆಯುತ್ತಿದ್ದಾರೆ ಎಂದು ವಕೀಲರೊಬ್ಬರು ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು.

ಕೋಮು ಸಾಮರಸ್ಯವನ್ನು ಕದಡುವ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ವಕೀಲರೊಬ್ಬರ ಕಾರ್ಯದರ್ಶಿ ಕಮಲ್ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಪೆÇಲೀಸರಿಗೆ ಸೂಚಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಎಸ್. ರಮೇಶ್, ಪೆÇಲೀಸರಿಗೆ ನಿರ್ದೇಶನ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅರ್ಜಿದಾರ, ಕಮಲ್ ಹಾಸನ್ ಅವರು ಹಿಂದುಗಳ ಕೋಮು ಸಾಮರಸ್ಯ ಕದಡುವಂತ ಹೇಳಿಕೆ ನೀಡಿದ್ದಾರೆ. ಇಂದು ಹಿಂದು ಭಯೋತ್ಪಾದನೆ ಎಂದಿರುವ ಅವರು ಮುಂದುವರಿದು ಕ್ರಿಶ್ಚಿಯನ್ ಮತ್ತು ಮುಸ್ಲಿಂ ಭಯೋತ್ಪಾದನೆ ಎಂದರು ಆಶ್ಚರ್ಯವಿಲ್ಲ. ಧರ್ಮಗಳ ಮಧ್ಯೆ ಕೋಲಾಹಲ ಸೃಷ್ಟಿಸುವಂತ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ.

ನಿಜವಾಗಿ ನಡೆದ ಘಟನೆಯಾದರು ಏನು?

ಸ್ಟಾರ್ ನಟರಿಗೆ ಅಭಿಮಾನಿಗಳ ಸಂಖ್ಯೆ ಅಧಿಕವಾಗಿರೋದು ಗೊತ್ತಿರುವ ವಿಚಾರ!! ಆದರೆ, ಅಭಿಮಾನಿಗಳನ್ನು ದೇವರು ಎಂದು ತಿಳಿಯುವ ಅದೆಷ್ಟೋ ಸ್ಟಾರ್ ನಟರಿರಬೇಕಾದರೆ, ಅಭಿಮಾನಿಗಳಿಗೆಯೇ ಕಪಾಳ ಮೋಕ್ಷ ಮಾಡಿ ಅವರನ್ನು ತಳ್ಳಿರುವ ಪ್ರಸಂಗವನ್ನು ಸೃಷ್ಟಿಮಾಡಿ ಸಂಕಷ್ಟಕ್ಕೊಳಗಾದ ಕಮಲ್ ಹಾಸನ್ ತನ್ನ ನಿಜ ಸ್ವರೂಪವನ್ನು ಅಭಿಮಾನಿಗಳಿಗೆ ತೋರಿಸಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

&http://newsable.asianetnews.com/video/watch-viral-video-of-tamil-superstar-kamal-haasan-slapping-fan-on-camera

 

ಬೆಂಗಳೂರಿಗೆ ಭೇಟಿ ನೀಡಿದ್ದ ಕಮಲ್ ಹಾಸನ್, ಖಾಸಗಿ ಸಮಾರಂಭವೊಂದರಲ್ಲಿ ನಟ ರಮೇಶ್ ಜೊತೆ ಪಾಲ್ಗೊಂಡಿದ್ದರು. ಇದ ನಂತರ ಬೆಂಗಳೂರಿನ ಅಂಗಡಿಯೊಂದಕ್ಕೆ ಹೋಗಿ ವಾಪಸ್ ತೆರಳುವಾಗ, ಅಭಿಮಾನಿಗಳು ಮುತ್ತಿಕೊಂಡಿದ್ದು, ಈ ಸಂದರ್ಭದಲ್ಲಿ ರಮೇಶ್ ಮೊದಲು ಹೊರಬಂದಿದ್ದು ಅವರ ಹಿಂದೆಯೇ ಕಮಲ್ ಹಾಸನ್ ಹೊರಬರುತ್ತಿದ್ದಂತೆ ಅಭಿಮಾನಿಗಳು ಇವರನ್ನು ನೋಡಲು, ಶೇಕ್‍ಹ್ಯಾಂಡ್ ಮಾಡಲು ಮುಂದಾಗಿದ್ದಾರೆ.

ಇದರಿಂದ ನೂಕುನುಗ್ಗಲು ಉಂಟಾಗಿದ್ದು, ಸಿಟ್ಟಿಗೆದ್ದ ಕಮಲ್ ಹಾಸನ್ ಕೈ ಕುಲುಕಲು ಮುಂದೆ ಬಂದ ಅಭಿಮಾನಿಯೊಬ್ಬರ ಕೆನ್ನೆಗೆ ಬಾರಿಸಿದ್ದಾರೆ. ಆದರೆ ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ತೀವ್ರ ಸಂಕಷ್ಟವನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ!!

ಈ ಹಿಂದೆ ಪದ್ಮಾವತಿ ಚಿತ್ರ ವಿವಾದ ಸಂಬಂಧ ಚಿತ್ರ ತಂಡ ಹಾಗೂ ನಟಿ ದೀಪಿಕಾ ಪಡುಕೋಣೆ ಬೆಂಬಲಕ್ಕೆ ನಿಂತಿರುವ ಕಮಲ್ ಹಾಸನ್, ‘ಪದ್ಮಾವತಿ’ ತಲೆಯ ರಕ್ಷಣೆಯಾಗಬೇಕು ಎಂದು ಹೇಳಿರುವ ವಿಚಾರ ಗೊತ್ತೇ ಇದೆ!! ಇನ್ನು, ಇತ್ತೀಚೆಗೆ ಕೇರಳ ಸಿಎಂನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ ತಾನು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅಭಿಮಾನಿ ಎಂದು ಹೇಳಿಕೊಂಡಿದ್ದರು. ಆದರೆ ತನ್ನ ಅಭಿಮಾನಿಗಳಿಗೆ ಕಪಾಳ ಮೋಕ್ಷ ಮಾಡಿ ದರ್ಪವನ್ನು ಮೆರೆದಿರುವ ಇವರು ಇನ್ನು ರಾಜಕೀಯಕ್ಕೆ ಎಂಟ್ರಿಯಾಗಿ ಏನೆಲ್ಲಾ ರಾದ್ದಾಂತ ನಡೆಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
– ಅಲೋಖಾ

Tags

Related Articles

Close