ಪ್ರಚಲಿತ

ಅಭಿವ್ಯಕ್ತಿ ಸ್ವಾತಂತ್ರ್ಯವೂ ಇಲ್ಲದಂತಾಯ್ತು ಸಿದ್ಧರಾಮಯ್ಯನ ಸರಕಾರದಲ್ಲಿ!! ಸಮಸ್ಯೆಯನ್ನು ಹೇಳಿದ್ದಕ್ಕೆ ಬಿತ್ತು ನಾಗರಿಕನಿಗೆ ಏಟು!!!

ಪ್ರಜಾಪ್ರಭುತ್ವದ ನಾಡಿನಲ್ಲಿ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಅನ್ನೋದು ಇದ್ದೇ ಇರುತ್ತದೆ!! ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವರು ಇದ್ದಾರಾ ಎಂದು ಕೇಳಿದರೆ ಒಂದು ಕ್ಷಣ ನೀವು ದಂಗಾಗಿ ಹೋಗುತ್ತೀರಿ!!! ಯಾಕೆಂದರೆ ನಮ್ಮ ಸಿದ್ದರಾಮಯ್ಯ ಸರಕಾರದಲ್ಲಿ ಮನುಷ್ಯನಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವು ಇಲ್ಲದಂತಾಗಿದೆ ಎಂದರೆ ನಂಬ್ತೀರಾ? ಆದರೆ ಇದು ನಂಬಲೇಬೇಕಾದಂತಹ ಸಂಗತಿ.

ಹೌದು.. ಸಿದ್ದರಾಮಯ್ಯ ಅವರ ಸರಕಾರದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಯಾವ ಮಟ್ಟಕ್ಕೆ ಬಂದು ನಿಂತಿದೆ ಎಂದರೆ ಮನುಷ್ಯ ಮನಸ್ಸು ಬಿಚ್ಚಿ ಮಾತಾನಾಡುವುದನ್ನೇ
ಮರೆತುಬಿಡುತ್ತಾನೋ ಗೊತ್ತಿಲ್ಲ! ಆದರೆ ಒಬ್ಬ ಯುವಕ ತಮ್ಮ ಊರಿನ ರಸ್ತೆಯ ಸಮಸ್ಯೆಯನ್ನು ಫೇಸ್‍ಬುಕ್‍ನಲ್ಲಿ ಹಂಚಿ ಕೊಂಡಿದ್ದಕ್ಕಾಗಿ ಏನೆಲ್ಲಾ ರಾದ್ದಾಂತ ನಡೆಯಿತು ಗೊತ್ತಾ? ಹದಗೆಟ್ಟ ರಸ್ತೆ ಕುರಿತಾಗಿ ಫೇಸ್‍ಬುಕ್‍ನಲ್ಲಿ ಶಾಸಕರನ್ನು ಪ್ರಶ್ನಿಸಿದ್ದಕ್ಕಾಗಿ ಪೆÇಲೀಸರು ಈತನಿಗೆ ಚೆನ್ನಾಗಿ ಥಳಿಸಿರುವ ಘಟನೆ ರಾಯಚೂರಿನ ಸಿಂಧನೂರಿನಲ್ಲಿ ನಡೆದಿದೆ.

ಸಾಮಾಜಿಕ ಜಾಲತಾಣದಲ್ಲಿ ತನ್ನ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಕ್ಕಾಗಿ ಯುವಕನಿಗೆ ಪೆÇೀಲಿಸ್ ಠಾಣೆಯಲ್ಲಿ ಥಳಿತ ಭಾಗ್ಯ ಲಭಿಸಿದ್ದು ಮಾತ್ರವಲ್ಲದೇ ಈ ಕುರಿತು ಜಿಲ್ಲಾದ್ಯಂತ ಚರ್ಚೆಗೆ ಗ್ರಾಸವಾಗಿದೆ!!! ಮಸ್ಕಿ ವಿಧಾನಸಭಾ ಕ್ಷೇತ್ರದ ಕೋಳಬಾಳ ಗ್ರಾಮದ ಸಮಸ್ಯೆಯೊಂದರ ಕುರಿತು ಸೆ.10ರಂದು ಫೇಸ್‍ಬುಕ್‍ನಲ್ಲಿ ಅಪ್‍ಲೋಡ್ ಮಾಡಿದ ಯುವಕ ಕೆ.ಶರಣಬಸವ ಹಂಚಿನಾಳ ಎಂಬುವರನ್ನು ಡಿವೈಎಸ್ಪಿ ಕಚೇರಿಯಲ್ಲಿ ಥಳಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಸದ್ಯ ಯುವಕ ಲಿಂಗಸುಗೂರು ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಾಗಾದರೆ, ಕೇವಲ ಅನಿಸಿಕೆಗಳನ್ನು ವ್ಯಕ್ತಪಡಿಸಿದರೆ ಥಳಿತ ಭಾಗ್ಯವನ್ನು ಕೊಡುತ್ತಿದೆ ಈ ಸಿದ್ದರಾಮಯ್ಯ ಸರಕಾರ!! ಆದರೆ ಇಲ್ಲಿ ಅಧಿಕಾರಿಗಳನ್ನು ತಮ್ಮ ಸ್ಚಾರ್ಥಕ್ಕೆ ಬಳಸಿಕೊಳ್ಳಲಾಗುತ್ತಿದೆಯೇ ಎಂಬ ಇನ್ನೊಂದು ಪ್ರಶ್ನೆ ಹಲವರಲ್ಲಿ ಈಗಾಗಲೇ ಮೂಡಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತಿದೆಯೇ ಎನ್ನುವ ಅಂಶ ಇಲ್ಲಿ ಮೂಡುತ್ತೆ!!

ಅಷ್ಟಕ್ಕೂ ಆತ ಫೇಸ್‍ಬುಕ್‍ನಲ್ಲಿ ಅಪ್‍ಲೋಡ್ ಮಾಡಿದ್ದೇನು?

ಫೇಸ್‍ಬುಕ್‍ನಲ್ಲಿ ಕೆ.ಶರಣುನಾಯಕ.ಯು ಹಂಚಿನಾಳ ಎಂಬ ಹೆಸರಲ್ಲಿ ಬರೆದುಕೊಂಡಿರುವ ಈ ಯುವಕ “ಮಸ್ಕಿ ಕ್ಷೇತ್ರದ ಅಭಿವೃದ್ಧಿ ಹರಿಕಾರರಾದಂತಹ ಶ್ರೀಮಾನ್ ಪ್ರತಾಪ್‍ಗೌಡ ಪಾಟೀಲರ ಅಭಿವೃದ್ಧಿ ಕೆಲಸ ನೋಡಿ, ಸತತ 9 ವರ್ಷಗಳಲ್ಲಿ ಇವರು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ರಾಜ್ಯದ ಜನತೆಗೆ ತೋರಿಸುವ ಸಣ್ಣ ಪ್ರಯತ್ನ” ಎಂದು ಕಾಮೆಂಟ್ ಮಾಡುವ ಮೂಲಕ ಕೋಳಬಾಳ ಗ್ರಾಮದಲ್ಲಿ ನೀರು ನಿಂತ ರಸ್ತೆಯೊಂದರ ಫೆÇೀಟೋ ಅಪ್‍ಲೋಡ್ ಮಾಡಿದ್ದಾರೆ. ಇದಕ್ಕೆ ಪರ-ವಿರೋಧ ಕಾಮೆಂಟ್‍ಗಳು ಈ ಒಂದು ಸ್ಟೇಟಸ್‍ಗೆ ವ್ಯಕ್ತವಾಗಿತ್ತು!!

ಈ ಬಗ್ಗೆ ಸದರಿ ಡಿವೈಎಸ್‍ಪಿ, ತನ್ನ ಸಂಬಂಧಿಯಾದ ಮಸ್ಕಿ ಕ್ಷೇತ್ರದ ಅಭಿವೃದ್ಧಿ ಹರಿಕಾರರಾದ ಶ್ರೀಮಾನ್ ಪ್ರತಾಪ್‍ಗೌಡ ಪಾಟೀಲರನ್ನು ಎಚ್ಚರಿಕೆ ಕೊಡುವಷ್ಟು
ಬೆಳೆದಿದ್ದೀಯ ಎಂದು ಈತನನ್ನು ಥಳಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಜೊತೆಗೆ ಹೇಳಿಕೊಂಡ ಕೆ.ಶರಣಬಸವ ಹಂಚಿನಾಳ, ಕೋಳಬಾಳ ಗ್ರಾಮದ ಸಮಸ್ಯೆ ಕುರಿತು ಫೇಸ್‍ಬುಕ್‍ನಲ್ಲಿ ಅಪ್‍ಲೋಡ್ ಮಾಡಿದ್ದನ್ನೇ ನೆಪವಾಗಿಸಿಕೊಂಡು ಡಿವೈಎಸ್ಪಿ ಹಾಗೂ ಸಿಪಿಐ ನನ್ನ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಮತ್ತೊಮ್ಮೆ ತಂಟೆಗೆ ಬಂದರೆ ಗೂಂಡಾ ಕಾಯ್ದೆಯಡಿ ಬಂಧಿಸಿ ಗಡಿಪಾರು ಮಾಡುತ್ತೇವೆ ಎಂದಿದ್ದಾನೆ. ಅಷ್ಟೇ ಅಲ್ಲದೇ, ನನಗೆ ರಕ್ಷಣೆ ಬೇಕಾಗಿದೆ ಎಂದು ಈ ಸಂದರ್ಭದಲ್ಲಿ ಕೇಳಿಕೊಂಡಿದ್ದಾನೆ!!

ಸಾಮಾಜಿಕ ಜಾಲತಾಣದಲ್ಲಿ ಕೇವಲ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಕ್ಕಾಗಿ ಸಿದ್ದರಾಮಯ್ಯ ಸರಕಾರದ ಶಾಸಕರು ಒಬ್ಬ ವ್ಯಕ್ತಿಯನ್ನು ಥಳಿಸುವಂತಹ ಹೀನಾಯ
ಕೃತ್ಯವನ್ನು ಎಸಗಿದ್ದಾರೆ ಅಂದರೆ ಇನ್ನೂ ಅದೆಷ್ಟು ಮುಗ್ದಜನರು ಇವರ ಕಾಲ್ತುಳಿತಕ್ಕೆ ಒಳಗಾಗಿದ್ದರೋ ಗೊತ್ತಿಲ್ಲ!! ಅಮಾಯಕರನ್ನು ಹಿಂಸಿಸಿದರೆ ಆಗುವ
ಲಾಭಗಳಾದರೂ ಯಾವುದು? ಕೇವಲ ತಮ್ಮ ಊರಿನಲ್ಲಿರುವ ಸಮಸ್ಯೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಭಿತ್ತರಿಸಿದರೆ ಅದು ದೊಡ್ಡ ತಪ್ಪೇ?

ಪ್ರತಿಯೊಬ್ಬ ಭಾರತೀಯನಿಗೂ ವಾಕ್‍ಸ್ವಾತಂತ್ರ್ಯ ಇದ್ದೇ ಇರುತ್ತದೆ. ಹಾಗೆ ಇರಬೇಕಾದರೆ ಸಿದ್ದರಾಮಯ್ಯ ಸರಕಾರ ಈಡೀ ಪೊಲೀಸ್ ಪಡೆಗಳನ್ನು ತನ್ನ ಸ್ವಾಧೀನದಲ್ಲಿ ಇರಿಸಿಕೊಂಡಿದ್ದಾರೋ ಗೊತ್ತಿಲ್ಲ. ಆದರೆ ತಮ್ಮ ಶಾಸಕರ ಸಂಬಂಧಿಗಳು ಉನ್ನತ ಹುದ್ದೆಯಲ್ಲಿದ್ದರೆ ಅಮಾಯಕರಿಗೆ ಮುಕ್ತವಾಗಿ ಮಾತಾನಾಡಲು ವಾಕ್‍ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವೇ ಇಲ್ವೇ?

ಈ ಸರ್ಕಾರವೂ ಸಾಮಾಜಿಕ ಹೋರಾಟಗಾರರನ್ನು, ಸಾಮಾಜಿಕ ಜಾಲತಾಲತಾಣದಲ್ಲಿ ತಮ್ಮ ಅನುಭವವನ್ನು ವ್ಯಕ್ತಪಡಿಸಿಕೊಂಡವರನ್ನು ಗುರಿಯಾಗಿಸಿಕೊಂಡು ತನ್ನ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಇಲ್ಲಿ ಸ್ಪಷ್ಟವಾಗಿದೆ ಕಂಡು ಬರುತ್ತದೆ!! ಅಷ್ಟೇ ಅಲ್ಲದೇ ಕರ್ನಾಟಕದ ಸಿದ್ದರಾಮಯ್ಯ ಸರಕಾರದ ಕೆಲ ಶಾಸಕರು ಪೊಲೀಸ್ ಅಧಿಕಾರಿಗಳನ್ನು ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದ್ದಾರೆ ಎನ್ನುವುದು ಎದ್ದು ಕಾಣುತ್ತದೆ!!

ಮೂಲ:Vijayavani – Source

Read Original Link

– ಅಲೋಖಾ

Tags

Related Articles

Close