ಪ್ರಚಲಿತ

ಅಮಾಯಕ(?) ಕವಿಯೊಬ್ಬನ ರಕ್ತ ಚರಿತ್ರೆ

ವರಾವರ ರಾವ್…

ನಾನು ಅರ್ಬನ್ ನಕ್ಸಲ್ ಎಂದು ಬೋರ್ಡ್ ಹಾಕಿಕೊಂಡು ತಿರುಗುತ್ತಿದ್ದವರ ಮತ್ತು ಅಂತಹವರ ಸಮರ್ಥಕರ ಸಧ್ಯದ ಆರಾಧ್ಯ ದೈವ. ಭೀಮಾ ಕೊರೆಗಾವ್ ಗಲಭೆಯ ಸೂತ್ರದಾರನೆಂದು ಪೊಲೀಸರ ಅತಿಥಿಯಾಗಿರುವ ಈತನಿಗೆ ಹೈಕೋರ್ಟ್ ಕೂಡ ಜಾಮೀನು ನಿರಾಕರಿಸಿದೆ.

ಅಂದು ವರಾವರ ರಾವ್ ಸೇರಿ ಐವರು ಬೌದ್ಧಿಕ ಭಯೋತ್ಪಾದಕರ ಬಂಧನವಾದಾಗ ಸದಾ ಕಾಲ ಎಡಕ್ಕೆ ಚಲಿಸುವ ಕೆಲವು ಬುದ್ಧಿ ಜೀವಗಳ ಗೋಳಾಟ ಮುಗಿಲು ಮುಟ್ಟಿತ್ತು. ಮಳೆಗಾಲ ಬಂದ ಹಾಗೆ ರಾಗ ಹಾಡುವ ಮಂಡೂಕ ಮಹಾಶಯರಂತೆ ಇದೀಗ ಮತ್ತೊಮ್ಮೆ ಪ್ರಲಾಪ, ರೋಧನೆಯನ್ನು ಶುರುವಿಟ್ಟುಕೊಂಡಿದ್ದಾರೆ ಸ್ವಯಂ ಘೋಷಿತ ಬುದ್ಧಿ ಜೀವಿಗಳು.

ಕಾರಣ ಇಷ್ಟೇ, ವರಾವರ ರಾವ್ ತನ್ನ ಇಳಿ ವಯಸ್ಸಿನಲ್ಲಿದ್ದು ಇದೀಗ ಅನಾರೋಗ್ಯ ಪೀಡಿತರಾಗಿರುವ ಕಾರಣ ಅವರಿಗೆ ಜಾಮೀನು ಸಿಗಬೇಕು ಎನ್ನುವುದೊಂದೇ ಇವರ ರೋಧನೆ. ಅದಕ್ಕೆ ಕೊಡುವ ಸಮರ್ಥನೆಗಳನ್ನು ಗಮನಿಸಿ… ವೃದ್ಧ, ಅಮಾಯಕ, ಒಬ್ಬ ಕವಿ, ಆತ ಒಬ್ಬ ಶಿಕ್ಷಕ, ಅನಾರೋಗ್ಯ ಪೀಡಿತ ಒಂದೇ ಎರಡೇ.. ಆತ ರಕ್ತದಾಹಿಯಂತೆ ಮಾತನಾಡುವಾಗ ಬಾಯಿ ಮುಚ್ಚಿ ಕುಳಿತ ಇದೇ ಬಳಗ ಈಗ ಬೊಬ್ಬೆ ಹಾಕುತ್ತಿದೆ. ಬಾಯಿ ಮುಚ್ಚಿ ಕುಳಿತದ್ದು ಮೌನಂ ಸಮ್ಮತಿ ಲಕ್ಷಣಂ ಎನ್ನುವ ಕಾರಣಕ್ಕೆ ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ.

ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ವರಾವರ ರಾವ್ ನೀಡಿದ ಸಂದರ್ಶನದ ತುಣುಕೊಂದು ವೈರಲ್ ಆಗಿದೆ. ಅದನ್ನು ನೋಡಿ, ಬಿಳಿ ತಲೆಯ ಆ ಹಿರಿಯ ಜೀವದ ಬಗ್ಗೆ ಹೇವರಿಕೆ ಬರದಿದ್ದರೆ ಕೇಳಿ. ದಾಂತೇವಾಡ, ಸುಕ್ಮ, ಆಂಧ್ರ ಪ್ರದೇಶದ ವಿವಿದೆಡೆ ನಕ್ಸಲ್ ಹಾಗೂ ಮಾವೋ ಉಗ್ರರ ರಾಕ್ಷಸಿ ಕೃತ್ಯಕ್ಕೆ ಬಲಿಯಾದ ಕೇಂದ್ರ ಮೀಸಲು ಪೊಲೀಸ್ ಪಡೆ ಹಾಗೂ ರಾಜ್ಯ ಪೊಲೀಸ್ ಪಡೆಯ ಬಗ್ಗೆ ಆತನಾಡುವ ಮಾತನ್ನು ಕೇಳಿ ಬೆನ್ನುಹುರಿಯಲ್ಲಿ ನಡುಕ ಹುಟ್ಟದ್ದಿದ್ದರೆ ಕೇಳಿ.. ಕ್ರೌರ್ಯವೇ ಮೂರ್ತಿವೆತ್ತಂತೆ….

ಆ ಜಾಗದಲ್ಲಿ ಪೊಲೀಸರಿಗೆ ಏನು ಕೆಲಸ? ಪೊಲೀಸ್ ಇರಲೇ ಬಾರದು, ಪೊಲೀಸರನ್ನು ನೋಡಿ ಅವಕಾಶ ಸಿಕ್ಕಿತು ಹಾಗಾಗಿ ಮಾವೋಗಳು ಅವರನ್ನು ಕೊಂದರು ಇಂತಹ ಮಾತುಗಳನ್ನು ಆತ ಮುಖದಲ್ಲಿ ನಗುವೊಂದನ್ನು ತರಿಸಿಕೊಂಡು ಮಾತನಾಡುವಾಗ, ಈತ ಪಾಠ ಹೇಳಿದ ಮಕ್ಕಳ ಭವಿಷ್ಯ ನೆನೆಸಿ ಹೆದರಿಕೆ ಉಂಟಾಗಲು ಸಾಕು..

ಮಾವೋಗಳಿಗೆ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ, ಅವರು ಸಂವಿಧಾನ ಒಪ್ಪುವುದಿಲ್ಲ, ಅದಕ್ಕೆ ಕೊಲ್ತಾರೆ ಎನ್ನುವ ಈತನಿಗೆ ಈಗ ನಾನಾವತಿ ಆಸ್ಪತ್ರೆಯಂತಹ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ದಾಖಲಾಗಲು ಆಸ್ಪದ ಮಾಡಿಕೊಟ್ಟದ್ದು ಅದೇ ಸಂವಿಧಾನ ಎಂದು ಅವನ ಸಮರ್ಥಕರು ಯೋಚನೆ ಮಾಡುವುದಿಲ್ಲ. ಅವರಾದರೂ ಏಕೆ ಯೋಚಿಸಿಯಾರು? ನಮ್ಮಂತೆಯೇ ನಮ್ಮ ನಡುವೆಯೇ ಇದ್ದು ದೇಶಕ್ಕೆ ಕೊಳ್ಳಿ ಇಡುವ ಸಂದರ್ಭಕ್ಕೆ ಕಾಯುವವರು ಅವರಲ್ಲವೇ?

ಕೇಳುವಾಗ ಬಾರಿ ಹಿತ, ಸಮರ್ಥನೆಗೆ ಇಳಿದಿರೋ ಮಾರಣಾಂತಿಕ.. ಕಮ್ಯುನಿಸ್ಟ್ ಗಳ ರಕ್ತ ಚರಿತ್ರೆ ಇದು.. ಎಡ ಬಲ ಎಲ್ಲವನ್ನೂ ಪಕ್ಕಕ್ಕಿಡಿ.. ಸರಳವಾಗಿ ಯೋಚಿಸಿ.. ಯಾವೊಬ್ಬ ಆಮಾಯಕನ ಕೊಲೆಯನ್ನು ಸಮರ್ಥಿಸುವ ಶಿಕ್ಷಕ ಆಗಲಿ, ಕವಿ ಆಗಲಿ, ಯಾರೇ ಆಗಲಿ ಆತ ಶಿಕ್ಷೆಗಲ್ಲದೆ ಕ್ಷಮೆಗೆ ಅರ್ಹನೇ?

ವಿಷಜಂತುವನ್ನು ನೋಡಿಯೇ ಹಿಂದೆ ಸರಿಯಿರಿ, ಅದು ಕಚ್ಚಿದರೆ ಸಾವೇ ಗತಿ.. ಕಮ್ಯುನಿಸ್ಟ್ ಎನ್ನುವ ಸಿದ್ಧಾಂತ ಆ ವಿಷ ಜಂತುವಿನಂತೆ.. ಇನ್ನೇನು ಹೇಳಬೇಕಿಲ್ಲ, ಬುದ್ಧಿವಂತ ಸಮಾಜ ನೀವಲ್ಲವೇ?

Related Articles

FOR DAILY ALERTS
Close