ಕಾಂಗ್ರೆಸ್ಸಿನಲ್ಲಿರುವ ಕುಶಲತೆಯ ಕಲೆಯನ್ನು ಕಲಿತುಕೊಳ್ಳಲೇ ಬೇಕು!! ಈಗಾಗಲೇ ತಮ್ಮ ವೈಯುಕ್ತಿಕ ಪ್ರಯೋಜನಗಳಿಗಾಗಿ ಸರಕಾರಿ ಸಂಸ್ಥೆಗಳನ್ನು
ದುರುಪಯೋಗಪಡಿಸಿಕೊಂಡರಲ್ಲದೇ ಕೋಟಿಗಟ್ಟಲೆ ಜನ ಭಾರತೀಯರು ಇವರ ಕಪಿಮುಷ್ಠಿಯಲ್ಲಿದ್ದ ಸರಕಾರವನ್ನು ನಂಬಿದ್ದರು. ಆದರೆ ಕಾಂಗ್ರೆಸ್ ಮಾತ್ರ ತನ್ನ
ಪ್ರಜೆಗಳ ಅಭಿಪ್ರಾಯಗಳನ್ನು ಯಾವತ್ತೂ ಗೌರವಿಸಲೇ ಇಲ್ಲ!!
ಇನ್ನು ನಾವು ಇಶ್ರತ್ ಜಹಾನ್ ಎನ್ನುವ ಹೆಸರನ್ನು ಕೇಳಿದಾಗ ಅಥವಾ ಆಕೆಯ ಹೆಸರನ್ನು ತೆಗೆದುಕೊಂಡಾಗ, ಕೆಲವು ರಾಷ್ಟ್ರೀಯತಾವಾದಿಗಳಿಗೆ ಆಕೆ
ಭಯೋತ್ಪಾದಕಳಾಗಿದ್ದಳು. ಆದರೆ ವಿರೋಧ ಪಕ್ಷಗಳು ಮಾತ್ರ ಆಕೆ ತಮ್ಮ ಸಹೋದರಿ ಎಂದು ಪರಿಗಣಿಸಿದೆ. ಆದರೆ ಈ ನಾಟಕವನ್ನು ಕೇವಲ ಮೋದಿ ಮತ್ತು ಅಮಿತ್ ಷಾ ಅವರಿಗಾಗಿ ನಿರ್ದೇಶಿಸಲಾಗಿದೆ!! ಸಿಬಿಐಯನ್ನು ಕಾಂಗ್ರೆಸ್ ಬಳಕೆ ಮಾಡಿದ್ದರು ಕೂಡ ಅದು ಭಯೋತ್ಪಾದನೆಯನ್ನು ನಿಗ್ರಹಿಸಲು ಅಲ್ಲ. ಬದಲಾಗಿ ರಾಜಕೀಯ ಪ್ರತಿಸ್ಪರ್ಧಿಗಳನ್ನು ನಾಶ ಮಾಡಲು ಈ ತಂತ್ರವನ್ನು ಬಳಸಿದ್ದರು. ಆದರೆ ಕಾಂಗ್ರೆಸ್ ಮಾತ್ರ ಯಾವುದೇ ಸರ್ಕಸ್ ಮಾಡಿದರೂ, ತಾನು ಮಾಡಿದ ತಪ್ಪುಗಳನ್ನು ಮರೆಮಾಚಲು ಸಾಧ್ಯವಾಗಲೇ ಇಲ್ಲ. ಅಷ್ಟೇ ಅಲ್ಲದೇ ಇದರಿಂದ ತಾವೇ ಸಂಕಷ್ಟಕ್ಕೊಳಗಾಗಿದ್ದಂತೂ ನಿಜ!
ಅಮಿತ್ ಷಾ ಅವರನ್ನು ಕಾಂಗ್ರೆಸ್, ಎರಡು ಪ್ರಕರಣಗಳಲ್ಲಿ ತೊಡೆದು ಹಾಕಲು ಯೋಜಿಸಿದೆ. ಹೌದು.. ಒಂದು ಇಶ್ರಾತ್ ಜಹಾನ್ ಎನ್ಕೌಂಟರ್ ಪ್ರಕರಣದಲ್ಲಿಯಾದರೆ ಇನ್ನೊಂದು ಸೊಹ್ರಾಬುದ್ದೀನ್ ಎನ್ಕೌಂಟರ್ ಪ್ರಕರಣದಲ್ಲಿ!! ಇಷ್ಟೆಲ್ಲಾ ಯೋಜನೆಯಲ್ಲಿ ಅಮಿತ್ ಷಾ ಅವರನ್ನು ತೊಡೆದು ಹಾಕಲು ನಿರ್ಧರಿಸಿದ್ದರು ಕೂಡ, ಕಾಂಗ್ರೆಸ್ ಮಾತ್ರ ಅದರಿಂದ ಹಿನ್ನಡೆಯನ್ನು ಪಡೆದುಕೊಂಡಿದೆ!!
ಕಾಂಗ್ರೆಸ್, ಸಿಬಿಐನ್ನು ಬಳಸಿಕೊಂಡು ಪ್ರಾಮಾಣಿಕ ಅಧಿಕಾರಿಗಳನ್ನು ಹೇಗೆ ಹಿಂಸಿಸಿದರು ಗೊತ್ತೆ??
2014ರ ಲೋಕಸಭೆ ಚುನಾವಣೆಗೂ ಮುನ್ನ ಆಗಿನ ಸಿಬಿಐ ನಿರ್ದೇಶಕ ಹೇಳಿರುವ ಪ್ರಕಾರ “ಇಶ್ರತ್ ಜಹಾನ್ ಪ್ರಕರಣದಲ್ಲಿ ಅಮಿತ್ ಷಾ ಅವರ ಮೇಲೆ
ಚಾರ್ಜ್ ಶೀಟ್ ಮಾಡಿದ್ದ ಸಂದರ್ಭದಲ್ಲಿ ಯುಪಿಎ ಸರಕಾರ ಸಂತೋಷದಿಂದಲೇ ಇತ್ತು. ಆದರೆ ಅಮಿತ್ ಷಾ ವಿರುದ್ದ ಸಿಬಿಐಗೆ ಯಾವುದೇ ರೀತಿಯ ಸಾಕ್ಷ್ಯಗಳು
ಸಿಗಲಿಲ್ಲ” ಎಂದು ಹೇಳಿದ್ದಾರೆ.
ಇಶ್ರತ್ ಜಹಾನ್ ಳ ಭಯೋತ್ಪಾದಕ ಹಿನ್ನೆಲೆಗೆ ಸಂಬಂಧಿಸಿದಂತೆ 2009 ನೇ ಆಗಸ್ಟ್ ನಲ್ಲಿ ನಿರ್ದೇಶಕರೊಂದಿಗೆ ಸೇರಿ ಅಧೀನ ಕಾರ್ಯದರ್ಶಿ ಆರ್ ವಿ ಎಸ್ ಮಣಿ ಸಿದ್ಧಪಡಿಸಿದ್ದ ಮೊದಲನೇ ಅಫಿಡವಿಟ್ ನಲ್ಲಿ ಇಶ್ರಾತ್ ಜಹಾನ್ ಉಗ್ರಳು ಹಾಗೂ ಆಕೆಯೊಂದಿಗೆ ಹತ್ಯೆಗೀಡಾದ ಮೂವರು ಎಲ್ ಇ ಟಿ ಉಗ್ರರು ಎಂಬುದನ್ನು ಸ್ಪಷ್ಟಪಡಿಸಲಾಗಿತ್ತು. ನಕಲಿ ಎನ್ ಕೌಂಟರ್ ಎಂದು ಹಣೆಪಟ್ಟಿ ಕಟ್ಟಲಾಗಿದ್ದ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಲು ಮಣಿ ಆಕ್ಷೇಪ ವ್ಯಕ್ತಪಡಿಸಿದ್ದರು. ಮೊದಲನೇ ಅಫಿಡವಿಟ್ ಸಲ್ಲಿಕೆಯಾದ ನಂತರ ಎರಡನೇ ಅಫಿಡವಿಟ್ ನ್ನು ನೀಡಿ ಸಿಸಿಎಸ್ ನಡವಳಿಕೆಯ ನಿಯಮಗಳ ಪ್ರಕಾರ ಎರಡನೇ ಅಫಿಡವಿಟ್ ಗೆ ಸಹಿ ಹಾಕಲು ತಮಗೆ ನಿರ್ದೇಶನ ನೀಡಲಾಗಿತ್ತು ಎಂದು ಆರ್.ವಿ.ಎಸ್ ಮಣಿ ಹೇಳಿಕೆ ನೀಡಿದ್ದಾರೆ.
ಇಶ್ರತ್ ಜಹಾನ್ ಉಗ್ರಳು ಎಂಬ ಮೊದಲನೇ ಪ್ರಮಾಣಪತ್ರದ ಅಂಶಗಳಿಗೆ ಭಿನ್ನವಾದ ಅಂಶಗಳಿದ್ದ ಎರಡನೇ ಅಫಿಡವಿಟ್ ನ್ನು ತಾವು ಸಿದ್ಧಪಡಿಸಿರಲಿಲ್ಲ, ತಮ್ಮ
ನಂತರದ ಇಬ್ಬರು ಅಧಿಕಾರಿಗಳೂ ಸಹ ಎರಡನೇ ಅಫಿಡವಿಟ್ ನ್ನು ಸಿದ್ಧಪಡಿಸಿರಲಿಲ್ಲ. ಗೃಹ ಇಲಾಖೆ ಕಾರ್ಯದರ್ಶಿಗಿಂತಲೂ ಮೇಲ್ಮಟ್ಟದವರು ಅದನ್ನು
ಸಿದ್ಧಪಡಿಸಿದ್ದರು ಎಂದು ಆರ್.ವಿ.ಎಸ್ ಮಣಿ ಸ್ಪಷ್ಟಪಡಿಸಿದ್ದಾರೆ.
ಅಷ್ಟೇ ಅಲ್ಲದೇ, ಇಶ್ರತ್ ಜಹಾನ್ ಮತ್ತು ಆಕೆಯ ಜತೆಗಿದ್ದವರು ಲಷ್ಕರ್-ಇ- ತೊಯ್ಬಾ ಉಗ್ರರು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಆಕೆ ಮತ್ತು ಸಂಗಡಿಗರನ್ನು ಗುಜರಾತ್ ಪೋಲೀಸರು ನಕಲಿ ಎನ್ ಕೌಂಟರ್ ಮೂಲಕ ಹತ್ಯೆ ಮಾಡಿದರು ಎಂದು ತಿರುಚಿದ ಎರಡನೇ ಅಫಿಡವಿಟ್ ಗೆ ಸಹಿಹಾಕಲು ವಿಶೇಷ ತನಿಖಾ ತಂಡದ ಅಧಿಕಾರಿಗಳು ಗೃಹ ಇಲಾಖೆಯ ಆಂತರಿಕ ಭದ್ರತೆ ವಿಭಾಗದಲ್ಲಿ ಅಧೀನ ಕಾರ್ಯದರ್ಶಿಯಾಗಿದ್ದ ಆರ್.ವಿ.ಎಸ್ ಮಣಿ ಅವರಿಗೆ ಚಿತ್ರ ಹಿಂಸೆ ನೀಡಿದ್ದರು, ಇದರ ಜೊತೆಗೆ ಸಿಗರೇಟ್‍ನಿಂದ ಗಾಯಮಾಡಿದ್ದಾರೆ ಎಂದು ಆರೋಪಿಸಿದ್ದಾರೆ!!
ಇನ್ನೂ ಇಶ್ರತ್ ಜಹಾನ್, ಜಾವೇದ್ ಶೇಖ್ ಅಲಿಯಾಸ್ ಪ್ರಾಣೆಶ್ ಪಿಳ್ಳೈ, ಝೀಶನ್ ಜೋಹರ್ ಮತ್ತು ಅಮ್ಜದ್ ಅಲಿ ರಾಣಾ ಎನ್ನುವ ನಾಲ್ಕು ಭಯೋತ್ಪಾದಕರಿಗೆ
ಕಾಂಗ್ರೆಸ್ಸಿಗರೂ ಹುತಾತ್ಮರ ಸಾಲಿಗೆ ಸೇರಿಸಿದ್ದಾರಲ್ಲದೇ ಅವರನ್ನು ದೇಶಪ್ರೇಮಿಗಳು ಎನ್ನುವಷ್ಟರ ಮಟ್ಟಿಗೆ ಬೆಂಬಲ ನೀಡುತ್ತಿದ್ದಾರೆ!!
ಏನಿದು ಇಶ್ರತ್ ಜಹಾನ್ ಪ್ರಕರಣ ??
ಈಕೆ ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಇ-ತೊಯ್ಬಾದಲ್ಲಿ ಕೆಲಸ ಮಾಡಿದ್ದ ಓರ್ವ ಭಾರತೀಯಳಾಗಿದ್ದು, ಇಶ್ರತ್ ಜಹಾನ್ ಹಾಗೂ ಈಕೆಯ ಜೊತೆಗಿದ್ದ ಮೂವರು ಭಯೋತ್ಪಾದಕರಿಗೆ ಗುಜರಾತಿನ ಆಗಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಮತ್ತು ಬಿಜೆಪಿಯ ಪ್ರಭಾವಿ ಮಂತ್ರಿಯಾಗಿದ್ದ ಅಮಿತಾ ಷಾರನ್ನು ಕೊಲ್ಲುವ ಉದ್ದೇಶವೇ ಇವರದ್ದಾಗಿತ್ತು!! ಆದರೆ ಇಂಟೆಲಿಜೆನ್ಸ್ ಏಜೆನ್ಸಿಗಳು ಎಲ್.ಇ.ಟಿ ಯೋಜನೆಯ ಬಗ್ಗೆ ಮಾಹಿತಿ ಪಡೆದಿದ್ದಲ್ಲದೇ ಇವರ ಉಪಾಯವನ್ನು ಛಿದ್ರಗೊಳಿಸಿ ಅವರನ್ನು ಮಟ್ಟಹಾಕಲಾಯಿತು!!!
ಸೊಹ್ರಾಬುದ್ದೀನ್ ಎನ್ಕೌಂಟರ್ ಪ್ರಕರಣದಲ್ಲಿ ಏನಾಯಿತು??
ನವೆಂಬರ್ 26, 2005ರಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ ಸೊಹ್ರಾಬುದ್ದೀನ್ ಅನ್ವರ್ ಹುಸೇನ್ ಶೇಖ್ ಮರಣಹೊಂದಿದ ನಂತರ ಸೊಹ್ರಾಬುದ್ದೀನ್ ಶೇಖ್ ಎನ್ಕೌಂಟರ್ ಪ್ರಕರಣವು ಗುಜರಾತ್ ರಾಜ್ಯದಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣವಾಗಿದೆ!! ನಿಷೇಧಿತ ಜಾಗತಿಕ ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಇ-ತೋಯ್ಬಾ ಮತ್ತು ಪಾಕಿಸ್ತಾನಿ ಗುಪ್ತಚರ ಸಂಸ್ಥೆಯಾದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ ನೊಂದಿಗೆ ಸಂಬಂಧವನ್ನು ಹೊಂದಿದ್ದನು. ಇದಲ್ಲದೇ “ಪ್ರಮುಖ ರಾಜಕೀಯ ನಾಯಕರನ್ನು” ಹತ್ಯೆಗೈಯುವ ಮೂಲಕ ರಾಜ್ಯದಲ್ಲಿ ಕೋಮುಗಲಭೆಯನ್ನು ಸೃಷ್ಟಿಸಲು ಈತ ಯೋಜಿಸಿದ್ದ ಎಂದು ಹೇಳಲಾಗಿದೆ!!
ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್ಕೌಂಟರ್ 2005ರ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯವು ಅಮಿತ್ ಷಾ ವಿರುದ್ದ ಯಾವುದೇ ಕಾನೂನು ಸಾಕ್ಷ್ಯವಿಲ್ಲ
ಎಂದು ಆರೋಪಿಸಿ ಸೊಹ್ರಾಬುದ್ದೀನ್ ಪ್ರಕರಣದಿಂದ ಕೈಬಿಡಲಾಯಿತು. ಅಮಿತ್ ಷಾ ವಿರುದ್ಧ ಮತ್ತೆ ತನಿಖೆ ನಡೆಸುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್
ಅಭಿಪ್ರಾಯಪಟ್ಟಿದ್ದು, ಅಮಿತ್ ಷಾಗೆ ಕ್ಲೀನ್‍ಚಿಟ್ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾ ಮಾಡಿದೆ. “ಪ್ರಕರಣ ಸಂಬಂಧ ಸಿಬಿಐ ತಾಳಿರುವ ನಿಲುವನ್ನು ಸಂಪೂರ್ಣವಾಗಿ ಒಪ್ಪುವಂತಿಲ್ಲ. ಹಾಗಾಗಿ ಶಾ ಅವರನ್ನು ಆರೋಪಿ ಎಂದು ಪರಿಗಣಿಸಲಾಗದು,” ಎಂದು ಸಿಬಿಐನ ವಿಶೇಷ ನ್ಯಾಯಮೂರ್ತಿ ಎಂ ಬಿ ಗೋಸಾವಿ ಹೇಳಿದ್ದಾರೆ.
ಕಾಂಗ್ರೆಸ್‍ಗೆ ಬೇಕಾಗಿರುವುದಾದರೂ ಏನು??
ಕಾಂಗ್ರೆಸ್, ಗುಜರಾತಿನಲ್ಲಿ ಬಿಜೆಪಿಯನ್ನು ಮೂಲೆಗುಂಪು ಮಾಡಿ, ಅದರಲ್ಲೂ ಅಮಿತ್ ಷಾ ಅವರನ್ನು ಹೊರಹಾಕುವಂತೆ ತನ್ನೆಲ್ಲಾ ಪ್ರಯತ್ನವನ್ನು ಮಾಡಿದೆ. ಮಾಜಿ ಗುಜರಾತಿನ ಗೃಹ ಸಚಿವ ಅಮಿತ್ ಷಾ ಅವರು ಸೊಹ್ರಾಬುದ್ದೀನ್ ಎನ್ಕೌಂಟರ್ ಪ್ರಕರಣದಲ್ಲಿ ಆರೋಪಿಯಾಗಿದ್ದು, 2010ರ ಅಕ್ಟೋಬರ್ ನಲ್ಲಿ ಗುಜರಾತ್ ಪ್ರವೇಶಿಸವಂತೆ ನಿಷೇಧಿಸಲಾಗಿತ್ತು. ಇದು ಕಾಂಗ್ರೆಸ್‍ಗೆ ಪ್ರಮುಖ ವಿಜಯವಾಗಿತ್ತು ಯಾಕೆಂದರೆ ಅಮಿತ್ ಷಾ ಅವರು ಮೋದಿ ಅವರ ರಾಜಕೀಯ “ಚಾಣಕ್ಯ”ರಾಗಿದ್ದು ಅದನ್ನು ಇವರಿಗೆ ಸಹಿಸಲಾಗುತ್ತಿರಲಿಲ್ಲ. ಇಷ್ಟೇ ಅಲ್ಲದೇ, ಪ್ರತಿ ಚುನಾವಣಾ ಕಾರ್ಯತಂತ್ರವನ್ನು ರೂಪಿಸುವಲ್ಲಿ ಅಮಿತ್ ಷಾ ಅವರು ನಿಸ್ಸೀಮರಾಗಿದ್ದಾರೆ!!
ಕಾಂಗ್ರೆಸ್ ತನ್ನೆಲ್ಲಾ ತಂತ್ರಗಳಲ್ಲಿ ಯಶಸ್ವಿಯಾದರು ಕೂಡ ರಾಜಕೀಯದ ಪ್ರಭಾವ ಕ್ಷೀಣಿಸಿದ್ದಾದರೂ ಹೇಗೆ??
ಗುಜರಾತ್ ನಲ್ಲಿ ಬಿಜೆಪಿಯ ಪ್ರಾಮುಖ್ಯತೆ ಕ್ರಮೇಣವಾಗಿ ಕೊನೆಗೊಳ್ಳಲಿದೆ ಎಂದು ಕಾಂಗ್ರೆಸ್ ಭಾವಿಸಿತ್ತು. ಅಷ್ಟೇ ಅಲ್ಲದೇ, ಅಮಿತ್ ಷಾ ಅವರಿಗೆ ಗುಜರಾತ್
ಪ್ರವೇಶಿಸಲು ಅನುಮತಿ ನೀಡಲಾಗುವುದಿಲ್ಲ ಹಾಗಾಗಿ ಅವರ ರಾಜಕೀಯ ವೃತ್ತಿ ಜೀವನವೂ ಕೊನೆಗೊಳ್ಳುತ್ತದೆ ಎಂದು ತಿಳಿದಿದ್ದ ಭ್ರಷ್ಟ ರಾಜಕೀಯ ಪಕ್ಷದ,
ದುರ್ಬಲವಾದ ಆಶಯಗಳು ಮಾತ್ರ ಯಶಸ್ವಿಯಾಗಲಿಲ್ಲ!! ಹೌದು… ಇದು ಬಿಜೆಪಿಗೆ ದೊಡ್ಡ ಹೊಡೆತವಾಗಲಿದೆ ಎಂದು ಭಾವಿಸಿದ ಕಾಂಗ್ರೆಸ್ ಗೆ ಬಿಸಿ ತುಪ್ಪದಂತೆ ಪರಿಣಮಿಸಿತು!! ಯಾಕೆಂದರೆ, ಅಮಿತ್ ಷಾ ಅವರನ್ನು ಗುಜರಾತಿನಿಂದ ನಿಷೇಧವಿರಿಸಿದ್ದು, ಅದನ್ನು ಉತ್ತಮ ಅವಕಾಶ ಎಂದು ತಿಳಿದ ಅಮಿತ್ ಷಾ ಉತ್ತರಪ್ರದೇಶಕ್ಕೆ ಬಂದರು. ಹಾಗೆಯೇ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಯಶಸ್ಸನ್ನು ನೀಡಿದರು!!
ಇನ್ನು ರಾಜ್ಯವು ಭಾರತದ ಸಂಸತ್ತಿನ ಕೆಳಮನೆಗೆ 80 ಸ್ಥಾನಗಳನ್ನು ಒದಗಿಸಿದರೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವಂತೆ, ರಾಜಕೀಯ ಪಕ್ಷವು ಯುಪಿಯಲ್ಲಿ ತಮ್ಮ
ಪ್ರಾಮುಖ್ಯತೆಯನ್ನು ತೋರಿಸಬೇಕಿತ್ತು. ಹಾಗಾಗಿ ಅಮಿತ್ ಷಾ 2014ರ ಲೋಕಸಭೆ ಚುನಾವಣೆಗೆ ತಂತ್ರವನ್ನು ರಚಿಸಿ ಹೊಸ ಇತಿಹಾಸವನ್ನು ನಿರ್ಮಾಣ ಮಾಡುವಂತೆ ಮಾಡಿದ್ದಾರೆ. ಯಾಕೆಂದರೆ ಆ ಸಂದರ್ಭದಲ್ಲಿ ಬಿಜೆಪಿ 71 ಸ್ಥಾನಗಳನ್ನು ಪಡೆದುಕೊಂಡರೆ, ಕಾಂಗ್ರೆಸ್ ಕೇವಲ 2 ಸೀಟುಗಳನ್ನು ಪಡೆದುಕೊಂಡಿತ್ತು!! ಅಂದಿನಿಂದ ಭಾರತದಲ್ಲಿ ಕಾಂಗ್ರೆಸ್ಸಿನ ರಾಜಕೀಯ ಪ್ರಭಾವ ಕ್ಷೀಣಿಸಲು ಆರಂಭಿಸಿತು!!
ಕಾಂಗ್ರೆಸ್ ಅಂದು ಅಮಿತ್ ಷಾ ಅವರನ್ನು ಗುಜರಾತಿನಿಂದ ಹೊರಹಾಕಲು ಬಯಸದೇ ಇರುತ್ತಿದ್ದರೆ, ಕಾಂಗ್ರೆಸ್‍ಗೆ ಈ ರೀತಿಯ ಕೆಟ್ಟ ಸ್ಥಿತಿ ಉಂಟಾಗುತ್ತಿರಲಿಲ್ಲ. ಅಮಿತ್ ಷಾ ಅವರು ಪ್ರತಿ ವಿಚಾರಗಳನ್ನು, ಪ್ರತಿ ಪರಿಸ್ಥಿತಿಗಳನ್ನು ತಮ್ಮ ಅನುಕೂಲಕ್ಕಾಗಿ ಹಾಗೂ ಅವಕಾಶಕ್ಕಾಗಿ ತಿರುಗಿಸಿ ಅದರ ಮೇಲೆ ಗೆಲುವು ಸಾಧಿಸುವುದು ಹೇಗೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ!! ಅಂತೂ ಕಾಂಗ್ರೆಸ್ಸಿನ ಪ್ರತಿ ತಂತ್ರಗಳನ್ನು ಉಡೀಸ್ ಮಾಡಿ ಹೊಸ ಇತಿಹಾಸವನ್ನೇ ಸೃಷ್ಟಿಸಿದ ಅಮಿತ್ ಷಾ, ಸೋಲಿನಲ್ಲಿಯೂ ಗೆಲುವನ್ನು ಕಂಡ ಆಧುನಿಕ ರಾಜಕೀಯದ ಚಾಣಕ್ಷರಾಗಿದ್ದಾರೆ!!
– ಅಲೋಖಾ