ಪ್ರಚಲಿತ

ಅಮೆರಿಕಾದಲ್ಲಿರುವ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ವೈಫಲ್ಯವನ್ನು ಕೊನೆಗೂ ಒಪ್ಪಿಕೊಂಡಿದ್ದು ಹೇಗೆ…??!!

ಎರಡು ವಾರಗಳ ಕಾಲ ಅಮೆರಿಕಾದ ಪ್ರವಾಸದಲ್ಲಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ತನ್ನ ಪಕ್ಷ ಸೋಲಲು ಕಾರಣ ಏನೆಂದು ಕೊನೆಗೋ
ಒಪ್ಪಿಕೊಂಡಿದ್ದಾರೆ. ಕಳೆದ ವಾರ ಅಮೆರಿಕಾದ ಕ್ಯಾಲಿಪೋರ್ನಿಯಾದ ಬರ್ಕ್ ಲೇ ವಿಶ್ವವಿದ್ಯಾಲಯದಲ್ಲಿ ಎಡವಟ್ಟು ಭಾಷಣ ಮಾಡಿದ್ದರು. ಲೋಕಸಭೆಯಲ್ಲಿನ ಸದಸ್ಯರ ಸಂಖ್ಯೆಗಳನ್ನು ತಪ್ಪಾಗಿ ಹೇಳಿ ಮೋದಿಯನ್ನು ಟೀಕಿಸಿದ್ದ ರಾಹುಲ್ ಈ ಬಾರಿ ತನ್ನ ಪಕ್ಷದ ವೈಫಲ್ಯವನ್ನು ಜಗತ್ತಿನ ಮುಂದಿಟ್ಟು, ಸ್ವತಃ ಸ್ವಪಕ್ಷೀಯರಿಂದಲೇ ಟೀಕೆಗೊಳಗಾಗಿದ್ದಾರೆ.

ಅಮೆರಿಕಾದ ಪ್ರಿನ್ಸ್’ಟನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿರುವ ರಾಹುಲ್ ಗಾಂಧಿ ಉದ್ಯೋಗ ಸೃಷ್ಟಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದ್ದರಿಂದ, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬರುವಂತಾಯಿತು. ಕಾಂಗ್ರೆಸ್ ಮೇಲೆ ಜನರು ತೀವ್ರವಾಗಿ ಕೋಪಗೊಂಡಿದ್ದರು. ಈ ಮಧ್ಯೆ ಮೋದಿ ಸರ್ಕಾರ ಜನರಿಗೆ ಉದ್ಯೋಗ ಸೃಷ್ಟಿ ಭರವಸೆ ನೀಡುವ ಮೂಲಕ ಅಧಿಕಾರ ಹಿಡಿಯಿತು ಎಂದು ಹೇಳಿ ತನ್ನ ವೈಫಲ್ಯವನ್ನು ಕೊನೆಗೂ ಒಪ್ಪಿಕೊಂಡಿದ್ದಾರೆ.

ಯುವ ಪೀಳಿಗೆಗೆ ಉದ್ಯೋಗಾವಕಾಶ ಕಲ್ಪಿಸುವ ಭರವಸೆಯಿಂದ ಭಾರತದಲ್ಲಿ ಪ್ರಧಾನಿ ಮೋದಿ ಹಾಗೂ ಅಮೆರಿಕಾದಲ್ಲಿ ಡೊನಾಲ್ಡ್ ಟ್ರಂಪ್ ಅವರು ಅಧಿಕಾರಕ್ಕೆ
ಬಂದಿದ್ದಾರೆ. ಈ ಹಿಂದಿನ ಕಾಂಗ್ರೆಸ್ ಸರ್ಕಾರ ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾದ ಹಿನ್ನಲೆಯಲ್ಲಿ ನಿರುದ್ಯೋಗಿ ಯುವ ಪೀಳಿಗೆ ಕಳೆದ ಚುನಾವಣೆಯಲ್ಲಿ
ಮೋದಿಯವರಿಗೆ ಬೆಂಬಲ ನೀಡಿತು. ಆದರೆ, ಮೋದಿ ಕೂಡ ಉದ್ಯೋಗ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆಂಬುವುದುದ ರಾಹುಲ್ ಗಾಂಧಿಯ ಟೀಕೆಯಾಗಿದೆ.

óಪ್ರಸ್ತುತ ನಾವು ಯಾವುದೇ ಉದ್ಯೋಗಾವಕಾಶಗಳನ್ನು ಕಲ್ಪಿಸುತ್ತಿಲ್ಲ. ಪ್ರತೀನಿತ್ಯ 30,000 ಯುವಕರು ಉದ್ಯೋಗ ಮಾರುಕಟ್ಟೆಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ಸರ್ಕಾರ ಪ್ರತೀನಿತ್ಯ 500 ಉದ್ಯೋಗಾವಕಾಶಗಳನ್ನಷ್ಟೇ ಕಲ್ಪಿಸುತ್ತಿದೆ. ಇದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಯುವಕರು ಈಗಾಗಲೇ ನಿರುದ್ಯೋಗಿಗಳಾಗಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ವೈಫಲ್ಯವನ್ನು ಮತ್ತೊಮ್ಮೆ ವಿವರಿಸಿದ ರಾಹುಲ್, ಕಾಂಗ್ರೆಸ್ ಸರ್ಕಾರ ಪ್ರತೀನಿತ್ಯ 30,000 ಉದ್ಯೋಗಾವಕಾಶಗಳನ್ನು ಕಲ್ಪಿಸದೆ ಇದ್ದಿದ್ದಕ್ಕೆ ಜನರು ಕೋಪಗೊಂಡಿದ್ದಾರೆ ಎಂದು ವಿವರಿಸಿದರು.

ಭಾಷಣದ ನಡುವೆ ಎಂದಿನಂತೆ ಮೋದಿಯನ್ನು ಟೀಕಿಸದೆ ಬಿಡಲಿಲ್ಲ. ಮೋದಿ ಸರಕಾರ ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿದೆ. ಯಾವುದೇ ವಿಚಾರದ ಬಗ್ಗೆ ಚರ್ಚೆ ನಡೆದಾಗ ಮೋದಿಯವರು ವಿಷಯದ ದಿಕ್ಕು ಬದಲಿಸಲು ಯತ್ನಿಸುತ್ತಾರೆ. ಸಮಸ್ಯೆಗೆ ಉತ್ತರಿಸುವ ಬದಲು ಮತ್ತೊಂದು ವಿಷಯವನ್ನು ಪ್ರಸ್ತಾಪಿಸುತ್ತಾರೆ.
ಭಾರತದಲ್ಲಿಂದು ಜನರು ಆಕ್ರೋಶಭರಿತರಾಗುತ್ತಿದ್ದಾರೆ. ಇದರ ಅರಿವು ನಮಗಾಗುತ್ತಿದೆ. ಪ್ರಜಾಪ್ರಭುತ್ವದ ವಾತಾವರಣದಲ್ಲಿ ಉದ್ಯೋಗ ಸೃಷ್ಟಿಯೆಂಬ ಸಮಸ್ಯೆಯನ್ನು ಹೇಗೆ ಬಗೆಹರಿಸಬೇಕೆಂಬುದು ಸವಾಲಾಗಿದೆ. ಮೊದಲು ನಾವು ಇರುವ ಸಮಸ್ಯೆಯನ್ನು ಒಪ್ಪಿಕೊಳ್ಳಬೇಕಿದೆ. ಬಳಿಕ ಒಗ್ಗೂಡಿ ಸಮಸ್ಯೆಯನ್ನು ಬಗೆಹರಿಸಬೇಕು. ಪ್ರಸ್ತುತ ಭಾರತದಲ್ಲಿ ಸಮಸ್ಯೆಯಿರುವುದನ್ನೇ ಯಾರೂ ಒಪ್ಪಿಕೊಳ್ಳಲು ಸಿದ್ಧರಿಲ್ಲ ಎಂದಿದ್ದಾರೆ.

ಇನ್ನೊಂದು ಅಮೆರಿಕಾದ ಪ್ರತಿಸ್ಪರ್ಧಿ ರಾಷ್ಟ್ರ ಚೀನಾದ ಬಗ್ಗೆ ಉಲ್ಲೇಖಿಸಿದ ರಾಹುಲ್ ಗಾಂಧಿ, ಸ್ಪಷ್ಟ ದೂರದೃಷ್ಟಿಯೊಂದಿಗೆ ಮುನ್ನಡೆಯುತ್ತಿರುವ ಚೀನಾದೊಂದಿಗೆ ನಾವು ಸ್ಪರ್ಧಿಸಬೇಕಾಗಿದೆ. ಆದರೆ, ನಮ್ಮ ಸ್ಪರ್ಧೆ ಅಷ್ಟು ಸಮರ್ಥವಾಗಿಲ್ಲ. ಜಗತ್ತಿನ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಉಭಯ ರಾಷ್ಟ್ರಗಳ ನಡುವೆ ಸಹಕಾರ ಹಾಗೂ ಸ್ಪರ್ಧೆಯಿದೆ. ಚೀನಾದೊಂದಿಗೆ ನಾವು ಸ್ಪರ್ಧಿಸುವುದು ಅಗತ್ಯವಾಗಿದೆ. ಒಂದು ವಲಯ, ಒಂದು ರಸ್ತೆ ಯೋಜನೆಯಂತಹ ದೂರದೃಷ್ಟಿಯೊಂದಿಗೆ ಚೀನಾ
ಮುನ್ನಡೆಯುತ್ತಿದೆ. ಭಾರತವೂ ಅಂಥ ದೂರದೃಷ್ಟಿಯನ್ನು ಒಳಗೊಂಡಿದೆಯೇ? ಹೇಗಿದೆ ಆ ಯೋಜನೆ? ನಮ್ಮ ಮತ್ತು ಆ ರಾಷ್ಟ್ರದ ನಡುವಿನ ಸಹಕಾರ ಯಾವ ನಿಟ್ಟಿನಲ್ಲಿ ಸಾಗಲಿದೆ? ಈ ಮೂಲಭೂತ ಪ್ರಶ್ನೆಗಳನ್ನು ಮುಂದಿಟ್ಟು ಸಾಗಬೇಕಿದೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಉದ್ಯೋಗ ಸೃಷ್ಟಿಸಿಲ್ಲ, ಚೀನಾದ ಜೊತೆ ನಮ್ಮ ಸ್ಪರ್ಧೆ ಸಮರ್ಪಕವಾಗಿಲ್ಲ ಎಂದು ಹೇಳುವ ರಾಹುಲ್ ಗಾಂಧಿ, ನರೇಂದ್ರ ಮೋದಿ ಸರಕಾರ ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ ಮುಂತಾದ ಯೋಜನೆಗಳ ಮೂಲಕ ಭಾರತದಲ್ಲಿ ಕೈಗಾರಿಕಾ ಕ್ರಾಂತಿ ಮಾಡಿ ದೇಶದಿಂದ ರಫ್ತು ಹೆಚ್ಚಿಸಲು ಮಾಡಿಕೊಂಡಿರುವ ಕ್ರಮಗಳ ಬಗ್ಗೆ ಮಾತಾಡಿಲ್ಲ. ಅಲ್ಲದೆ ಭಾರತದಲ್ಲಿ ಬುಲೆಟ್ ರೈಲು ಯೋಜನೆಯಿಂದ ಸಾಕಷ್ಟು ಉದ್ಯೋಗ ಸೃಷ್ಟಿಯಾಗುತ್ತಿರುವ ಬಗ್ಗೆ ರಾಹುಲ್ ಮಾತಾಡಲಿಲ್ಲ.

ರಾಯ್‍ಬರೇಲಿಯಲ್ಲಿ ನಿಂತು ಚುನಾವಣಾ ಭಾಷಣದಂತೆ ಮಾತಾಡುವ ರಾಹುಲ್ ಗಾಂಧಿ ತಾನು ಬೇರೊಂದು ದೇಶದಲ್ಲಿ ನಿಂತು ಭಾಷಣ ಮಾಡುತ್ತಿದ್ದೇನೆ ತನ್ನ್
ದೇಶದ ವ್ಯವಸ್ಥೆಯನ್ನು ಇನ್ನೊಂದು ದೇಶದಲ್ಲಿ ಟೀಕಿಸುವುದು ಸರಿಯಲ್ಲ್ ಎನ್ನುವ ವಿವೇಕವನ್ನೂ ಕಳೆದುಕೊಂಡಿದ್ದರು. ಅಲ್ಲದೆ ತನ್ನದೇ ಪಕ್ಷ ಹಿಂದಿನ ಕಾಂಗ್ರೆಸ್
ಸರಕಾರದ ವೈಫಲ್ಯವನ್ನು ಬಹಿರಂಗಪಡಿಸಿದ ರಾಹುಲ್ ಸ್ವಪಕ್ಷೀಯರಿಂದಲೇ ಟೀಕೆಗೊಳಗಾಗಿದ್ದಾರೆ.

-ಚೇಕಿತಾನ

Tags

Related Articles

Close