ಪ್ರಚಲಿತ

ಅಮೇರಿಕವನ್ನೂ ಮೀರಿಸಲಿರುವ ಈ ಕ್ಷಿಪಣಿಯನ್ನು ಕಂಡು ಪಾಕಿಸ್ತಾನ-ಚೀನಾ ಯುದ್ದೋತ್ಸಾಹವನ್ನೇ ಕಳೆದುಕೊಳ್ಳಲಿದೆ.

ಪ್ರಧಾನಿ ನರೇಂದ್ರ ಮೋದಿ ಸರಕಾರ ಅಧಿಕಾರದ ಚುಕ್ಕಾಣಿಯನ್ನು ಹಿಡಿದ ನಂತರದಿಂದ ದೇಶದಲ್ಲಿ ಅದೆಷ್ಟೋ ಅಭಿವೃದ್ದಿ ಕಾರ್ಯಗಳು ನಡೆಯುತ್ತಿರುವ ಜೊತೆಗೆ ಸೇನಾ ಬಲವನ್ನು ಬಲಿಷ್ಠವಾಗಿಸುವ ನಿಟ್ಟಿನಲ್ಲಿ ಗಡಿ ಕಾಯುವ ಸೈನಿಕರಿಗೆ ನಾನಾ ಸವಲತ್ತುಗಳನ್ನು ನೀಡಿರೋದು ಎಲ್ಲರಿಗೂ ತಿಳಿದಿರುವ ವಿಚಾರ!! ಆದರೆ ಇದೀಗ ಭಾರತೀಯ ನೌಕಾಪಡೆ ವಿಧ್ವಂಸಕ ಕ್ಷಿಪಣಿಗಳನ್ನು ಪಡೆಯಲಿದ್ದು, ಇದನ್ನು ಖರೀದಿಸಲು 200 ಕೋಟಿ ಮೌಲ್ಯದ ಯೋಜನೆಯನ್ನು ತೆರವುಗೊಳಿಸಲಾಗಿದೆ!!

ಹೌದು… ರಕ್ಷಣಾ ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಅಧಿಕಾರ ಸ್ವೀಕರಿಸಿದಾಗಿನಿಂದ ಭಾರತದ ಮಿಲಿಟರಿ ವ್ಯವಸ್ಥೆಯನ್ನು ಬಲಪಡಿಸಲು ದಿಟ್ಟ ಹೆಜ್ಜೆಯನ್ನಿಟ್ಟಿದ್ದಲ್ಲದೇ, ಭಾರತದ ಮಿಲಿಟರಿಗೆ ಮಹಿಳೆಯರನ್ನು ಸೇರಿಸುವ ನೂತನ ಯೋಜನೆಗೆ ಈಗಾಗಲೇ ಅಂಕಿತ ಹಾಕಿದ್ದಾರೆ!! ಇದರ ಬೆನ್ನಲ್ಲೇ, ಭಾರತೀಯ ರಕ್ಷಣಾ ಪಡೆಗಳ ರಕ್ಷಣಾತ್ಮಕ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿ.ಆರ್.ಡಿ.ಒ) ಅತ್ಯಾಧುನಿಕ ವಿಧ್ವಂಸಕ “ನಾಗ್ ಕ್ಷಿಪಣಿ”ಯನ್ನು ಯಶಸ್ವಿಯಾಗಿ ಪರೀಕ್ಷಿಸಿದ್ದು, ರಾಜಸ್ಥಾನದಲ್ಲಿ ನಡೆದ ಈ ಪರೀಕ್ಷಾರ್ಥ ಪ್ರಯೋಗಗಳ ಎರಡು ವಿಭಿನ್ನ ಗುರಿಗಳನ್ನು ಈ ಕ್ಷಿಪಣಿ ನಾಶ ಮಾಡುವ ಮೂಲಕ ಸಂಪೂರ್ಣ ಯಶಸ್ಸನ್ನು ಕಂಡಿದೆ. ಇದರಿಂದಾಗಿ ಭಾರತದ ರಕ್ಷಣಾ ಕ್ಷೇತ್ರ ಮತ್ತಷ್ಟು ಬಲಗೊಂಡಿದೆ. ಆದರೆ ಇದೀಗ ಭಾರತೀಯ ನೌಕಾಪಡೆ ವಿಧ್ವಂಸಕ ಕ್ಷಿಪಣಿಗಳನ್ನು ಪಡೆಯಲಿದ್ದು, ಇದರಿಂದ ಚೀನಾ-ಪಾಕಿಸ್ತಾನಕ್ಕೆ ನಡುಕ ಶುರುವಾಗಲಿರುವುದು ಗ್ಯಾರೆಂಟಿ!!

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ತನ್ನ ಮೊದಲ ರಕ್ಷಣಾ ಅಕ್ವಿಸಿಶನ್ ಕೌನ್ಸಿಲ್ (ಡಿಎಸಿ) ಸಭೆಯನ್ನು ಕೈಗೊಂಡ ಬಳಿಕ ಭಾರತೀಯ ನೌಕಾ ಹಡಗುಗಳಿಗೆ ಸ್ಥಳೀಯ ಸೋನಾರ್ ಮತ್ತು ವಿಧ್ವಂಸಕ ಕ್ಷಿಪಣಿಗಳನ್ನು ಖರೀದಿಸಲು 200 ಕೋಟಿ ಮೌಲ್ಯದ ಯೋಜನೆಯನ್ನು ತೆರವುಗೊಳಿಸಿದ್ದಾರೆ!! ಹಾಗಾಗಿ, ಡಿಎಸಿ ಬೈಯಿಂಗ್ ಇಂಡಿಯನ್ ವಿಭಾಗದ ಅಡಿಯಲ್ಲಿ ಯುದ್ಧನೌಕೆಗಳಿಗೆ ಅಪ್ಗ್ರೇಡ್ ಸೋನಾರ್ ಮತ್ತು ವಿಧ್ವಂಸಕ ಕ್ಷಿಪಣಿಗಳ ಸಂಗ್ರಹಕ್ಕಾಗಿ ಭಾರತೀಯ ನೌಕಾಪಡೆಯ ಅವಶ್ಯಕತೆಯ ಅಂಗೀಕಾರವನ್ನು ಕೇಂದ್ರ ಸರ್ಕಾರ ಈಗಾಗಲೇ ಅನುಮೋದಿಸಿದೆ.

ಸೋನಾರ್ ಅಂದರೆ ಏನು?

ಸೋನಾರ್, ಶಬ್ದ ಪ್ರಸಾರದ ಮೂಲಕ (ಸಾಮಾನ್ಯವಾಗಿ ನೀರಿನಾಳದಲ್ಲಿ, ಸಬ್‍ಮೆರಿನ್ ನೌಕಾಯಾನದಲ್ಲಿ) ಸಂಪರ್ಕಕ್ಕಾಗಿ ಅಥವಾ ಇತರ ನೌಕೆಗಳನ್ನು ಪತ್ತೆ ಹಚ್ಚಲು ಉಪಯೋಗಿಸುವ ತಂತ್ರವಾಗಿದ್ದು, ಎರಡು ರೀತಿಯ ತಾಂತ್ರಿಕತೆಗೆ ಸೋನಾರ್ ಎಂದು ಕರೆಯಲಾಗುತ್ತದೆ. ಒಂದು ನಿಷ್ಕ್ರೀಯ ಸೋನಾರ್, ಇನ್ನೊಂದು ಸಕ್ರೀಯ ಸೋನಾರ್!! ನಿಷ್ಕ್ರೀಯ ಸೋನಾರ್, ಇದು ಹಡಗುಗಳಿಂದ ಮಾಡಲ್ಪಟ್ಟ ಶಬ್ದಗಳನ್ನು ಆಲಿಸಲು ಉಪಯೋಗವಾದರೆ, ಸಕ್ರೀಯ ಸೋನಾರ್ ಶಬ್ದದ ನಾಡಿಯ ವಿಮೋಚನೆಗಾಗಿ ಹಾಗೂ ಪ್ರತಿಧ್ವನಿಯನ್ನು ಆಲಿಸಲು ಅಗತ್ಯವಾಗಿದೆ. ಇನ್ನು ಈ ಸೋನಾರ್, ನೀರಿನಲ್ಲಿ “ಗುರಿಮಾಡಿದ ವಸ್ತುವಿನ” ಪ್ರತಿಧ್ವನಿಯ ಲಕ್ಷಣಗಳನ್ನು ಧ್ವನಿವಿಜ್ಞಾನದ ಮೂಲಕ ಕಂಡುಹಿಡಿಯುವಿಕೆ ಮತ್ತು ಅಳೆಯುವಿಕೆಗೆ ಉಪಯೋಗಿಸಬಹುದಾಗಿದೆ!!

ಸೋನಾರ್ ಮತ್ತು ವಿಧ್ವಂಸಕ ಕ್ಷಿಪಣಿಗಳ ವಿಶೇಷತೆ!!!

ವೈರಿಗಳನ್ನು ಗಾಬರಿಗೊಳಿಸುವ ಭಾರತದ ಅತ್ಯಾಧುನಿಕ ಶಸ್ತ್ರಾಸ್ತ್ರಗಳಾದ ಈ ಸೋನಾರ್ ಗಳನ್ನು ಡಿ.ಆರ್.ಡಿ.ಒ ಮತ್ತು ಕೊಚ್ಚಿಯ ನೇವಲ್ ಫಿಸಿಕಲ್ ಮತ್ತು ಓಹಿಯೋ ನ್ ಗ್ರಾಫಿಕ್ ಪ್ರಯೋಗಾಲಯದಿಂದ ಸ್ಥಳೀಯವಾಗಿ ವಿನ್ಯಾಸಗೊಳಿಸಲಾಗಿದೆ. ಇದನ್ನು ಮೋದಿ ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ತಯಾರಿಸಲಾಗಿದೆ ಎನ್ನುವುದೇ ಹೆಮ್ಮೆಯ ವಿಚಾರವಾಗಿದೆ!! ಈಗಾಗಲೇ ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ಅನೇಕ ರೀತಿಯ ಶಸ್ತ್ರಾಸ್ತ್ರಗಳನ್ನು ತಯಾರಿಸಲಾಗಿದೆಯಲ್ಲದೇ, ಸೋವಿಯತ್ ಕಾಲದ ಟಿ-72 ಟ್ಯಾಂಕ್ ಗಳನ್ನು ಬದಲಿಸಲು, 1700 ಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಅತ್ಯಾಧುನಿಕ ಫ್ಯೂಚರ್ ರೆಡಿ ಕಾಂಬಟ್ ವೆಹಿಕಲ್ (ಎಫ್.ಆರ್.ಸಿ.ವಿ)ಟ್ಯಾಂಕ್ ಗಳನ್ನು ಪಡೆಯಲಿದೆ!! ಆದರೆ ಇದೀಗ ಸೋನಾರ್ ಮತ್ತು ವಿಧ್ವಂಸಕ ಕ್ಷಿಪಣಿಗಳನ್ನು ನರೇಂದ್ರ ಮೋದಿಯವರ ಮೇಕ್ ಇನ್ ಇಂಡಿಯಾ ಯೋಜನೆಯ ಅಡಿಯಲ್ಲಿ ನಿರ್ಮಾಣಗೊಳ್ಳಲಿರುವುದು ಇನ್ನೊಂದು ಸಂತಸದ ವಿಚಾರವಾಗಿದೆ!!

WATCH HERE!! INDIAN WEAPONS SHOCKED THE ENTIRE WORLD!

ಕೇಂದ್ರ ಸರ್ಕಾರ ಭಾರತದ ಗಡಿ ಪ್ರದೇಶದಲ್ಲಿನ “ತ್ವರಿತ ಪ್ರಾಬಲ್ಯ”ಕ್ಕಾಗಿ ಫ್ಯೂಚರ್ ರೆಡಿ ಕಾಂಬಟ್ ವೆಹಿಕಲ್ (ಎಫ್.ಆರ್.ಸಿ.ವಿ)ನ್ನು ತರಲಿದ್ದು, ಒಟ್ಟಾರೆಯಾಗಿ 2,000 ಕ್ಕಿಂತಲೂ ಹೆಚ್ಚು ವಾಹನಗಳನ್ನು ತಯಾರಿಸಲಾಗುವುದಾಗಿ ಯೋಜನೆ ಹಾಕಿದೆ. ಇದೀಗ ಮೇಕ್ ಇಂಡಿಯಾ ಯೋಜನೆಯಡಿಯಲ್ಲಿ ವಿಧ್ವಂಸಕ ಕ್ಷಿಪಣಿಗಳನ್ನು ತಯಾರಿ ಮಾಡಲಾಗಿದ್ದು, ಸ್ವದೇಶಿ ವಸ್ತುಗಳ ತಯಾರಿಕೆಗೆ ಹೆಚ್ಚಿನ ಪ್ರಾಶಸ್ಯವನ್ನು ಕೇಂದ್ರ ಸರಕಾರ ನೀಡುತ್ತಿದೆ!! ಅತ್ಯಾಧುನಿಕವಾಗಿ ನಿರ್ಮಿಸಲಾದ ಈ ಸೋನಾರ್ ಗಳು ಸಮುದ್ರದ ಆಳ ಅಥವಾ ಮೇಲ್ಮೈಯಲ್ಲಿಯೂ ಕೂಡ ಯಾವುದೇ ವೈರಿ ಸಬ್ ಮೆರೀನ್ ಅಥವಾ ಹಡಗುಗಳನ್ನು ಪತ್ತೆ ಹಚ್ಚುವ ಪ್ರಭಲ ಸಾಮರ್ಥ್ಯವನ್ನು ಹೊಂದಿದೆಯಲ್ಲದೇ ಕ್ಷಿಪಣಿಗಳ ಗುರಿಯನ್ನು ತಲುಪಿ ನಾಶ ಮಾಡುವ ಸಾಮರ್ಥ್ಯ ಹೊಂದಿದೆ. ಇದರಿಂದ ಭಾರತೀಯ ನೌಕಾ ಪಡೆ ಮತ್ತಷ್ಟು ಬಲಗೊಳ್ಳಲಿದೆ!!

ನಿರ್ಮಲಾ ಸೀತಾರಾಮನ್ ರಕ್ಷಣಾ ಸಚಿವೆಯಾಗಿ ಆಯ್ಕೆಯಾದ ನಂತರ ಸಾಕಷ್ಟು ನುರಿತ ಯೋಜನೆಗಳನ್ನು ಮಾಡುತ್ತಿದ್ದಾರಲ್ಲದೇ, ಸೇನೆಯನ್ನು ಬಲಿಷ್ಠಗೊಳಿಸುವಲ್ಲಿ ಪಣತೊಟ್ಟಿರುವುದಂತೂ ನಿಜ. ಇದರ ಜೊತೆಗೆ ಮೇಕ್ ಇನ್ ಇಂಡಿಯಾ ಯೋಜನೆಗೆ ಬಹಳ ಪ್ರಾಮುಖ್ಯತೆಯನ್ನು ನೀಡಿರುವುದು ಕೂಡ ಹೆಮ್ಮೆಯ ವಿಚಾರವಾಗಿದೆ!!

-ಅಲೋಖಾ

Tags

Related Articles

Close