ಅಂಕಣಪ್ರಚಲಿತರಾಜ್ಯ

ಅಯ್ಯಯ್ಯೋ! ರಾಜ್ಯದ ಇಂದಿರಾ ಗಾಂಧಿ ಕ್ಯಾಂಟೀನ್ ಗೆ ಆಹಾರ ಸರಬರಾಜಾಗ್ತಿರೋದು ಎಲ್ಲಿಂದ ಗೊತ್ತೇ?!

ರಾಜ್ಯದಲ್ಲಿ ಚರ್ಚೆಗೀಡಾಗಿದ್ದ ಇಂದಿರಾ ಕ್ಯಾಂಟೀನ್ ಎಂಬ ಕಾಂಗ್ರೆಸ್ ನ ‘ಫೇಕ್ ಪ್ರಚಾರ’ವೊಂದು ಈಗ ಟುಸ್ಸೆಂದಿದೆ! ಹೌದು! ಆಗಸ್ಟ್ 16 ಕ್ಕೆ ಸ್ವತಃ ರಾಹುಲ್ ಗಾಂಧಿಯೇ ಉದ್ಘಾಟಿಸಿ ಸಿಕ್ಕಾಪಟ್ಟೆ ಹೈಪ್ ತೆಗೆದುಕೊಂಡಿದ್ದ ಸಿದ್ದರಾಮಯ್ಯ ಪ್ರೇರಿತ ಕ್ಯಾಂಟೀನ್ ನ ಗೌಪ್ಯತೆಯೊಂದು ಬಟಾಬಯಲಾಗಿದೆ!

ನೆಹರು ಮನೆತನವನ್ನು ಇನ್ನಷ್ಟು ಆಕರ್ಷಿಸಲು, ಸಿದ್ದರಾಮಯ್ಯ ಸರಕಾರ ಇಂದಿರಾ ಕ್ಯಾಂಟೀನ್ ಎಂದೆಲ್ಲ ಹೆಸರಿಟ್ಟು ‘ಮಕ್ಕಳ’ ಅನ್ನ ಕಸಿದು ‘ಬೆಂಗಳೂರಿಗರಿಗೆ’ ಅನ್ನ ದಾನ ಮಾಡ್ತೇನೆಂದ ಸಿದ್ಧರಾಮಯ್ಯ ‘ನೂರು ವರುಷ ಹಳೆಯದಾಗಿದ್ದ ಮರಗಳನ್ನೆಲ್ಲ ಕಡಿಸಿ ಇಂದಿರಾ ಕ್ಯಾಂಟೀನ್ ಮಾಡಿದ್ದೇ’ ಬಂತು!

ಕೇವಲ ಮೂರೇ ತಿಂಗಳಿನಲ್ಲಿ ಸರಕಾರ ರಾಜ್ಯ ಬೊಕ್ಕಸದಿಂದ, ಯಾವುದೇ ಮುಂಚಿತವಾದ ನಿರ್ಧಾರಗಳಿಲ್ಲದೆ, ಯೋಜನೆಗಳಿಲ್ಲದೇ, ಚುನಾವಣೆಗೊಂದು ಗೆಲ್ಲುವ ಅವಕಾಶ ಮಾಡಿಕೊಡಬಹುದೆಂಬ ಹುಸಿ ನಂಬಿಕೆಯಿಂದ ಹಣ ಸುರಿದು ಕ್ಯಾಂಟೀನ್ ಶುರು ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ!

ತಮಿಳುನಾಡಿನಲ್ಲಿ ‘ಜಯಲಲಿತಾ’ ರವರು ‘ಅಮ್ಮ ಕ್ಯಾಂಟೀನ್’ ಪ್ರಾರಂಭ ಮಾಡಿದ್ದನ್ನೇ ನಕಲು ಮಾಡಿದ ಸಿದ್ಧರಾಮಯ್ಯ ಪಕ್ಕಾ ಅವಿವೇಕಿ ಎಂದು ಸಾಬೀತಾಗಿದೆ! ಜಯಲಲಿತಾರವರು ಕೇವಲ ‘ಚುನಾವಣಾ’ ದೃಷ್ಟಿಯಿಂದ ‘ಅಮ್ಮ ಕ್ಯಾಂಟೀನ್ ‘ ಪ್ರಾರಂಭಿಸಿರಲಿಲ್ಲ. ಬದಲಾಗಿ, ಗಂಭೀರವಾಗಿಯೇ ಅನ್ನದಾನವನ್ನು ಪರಿಗಣಿಸಿ ಅದೆಷ್ಟೋ ಬಡವರಿಗೆ ‘ಅಮ್ಮ’ ನಾಗಿದ್ದರು. ಆದರೆ, ಸಿದ್ಧರಾಮಯ್ಯರಗರ ಬುದ್ಧಿಗೆ ಇದೆಲ್ಲ ಅರಿವಾಗದೇ ಸಂಪುಟ ಸಚಿವ ವಿಸ್ತರಣೆ ಜೊತೆ ಈ ಪ್ರಚಾರವೂ ಬದಿಗಿರಲಿ ಎಂದು ಪ್ರಾರಂಭ ಮಾಡೇ ಬಿಟ್ಟರಾ?

ಕನ್ನಡ ಮಾಧ್ಯಮವಾದ ‘ಪಬ್ಲಿಕ್ ಟಿವಿ’ ಯವರ ಚುಟುಕು ಕಾರ್ಯಾಚರಣೆಯಿಂದ ಸಿದ್ಧರಾಮಯ್ಯರವರ ‘ಉಪಾಯ’ ಗಳೆಲ್ಲ ತಲೆಕೆಳಗಾಗಿವೆ!

ಎಲ್ಲಿ ತಯಾರಾಗ್ತಿದೆ ಗೊತ್ತೇ ಕ್ಯಾಂಟೀನ್ ನ 5 – 10 ರೂಪಾಯಿಗಳ ಆಹಾರ?!

ಅದಾವುದೋ ಕಲ್ಯಾಣ ಮಂಟಪದಲ್ಲಿ ಶುಚಿಯೆನ್ನುವುದೇ ಕಾಣದ ಅಡಿಗೆ ಮನೆಯಲ್ಲಿ! ಆಹಾರಗಳು, ನೀರು ತುಂಬುವ ಡ್ರಮ್ಮಿನಲ್ಲಿ ಸಾಗಿಸಲ್ಪಡುತ್ತಿದೆ!!!
ತೀರಾ ಅನಾರೋಗ್ಯಕರ ಸ್ಥಿತಿಯಲ್ಲಿ ತಯಾರಿಸುವ ಆಹಾರ ಪದಾರ್ಥಗಳಿಗೆ 5 – 10 ರೂಪಾಯಿಗಳೇ ಬೇಕಾದಷ್ಟಾಯಿತಲ್ಲವೇ ಸ್ವಾಮಿ?!
ಯಾರು, ಈ ಆಹಾರ ತಯಾರಿಸಲು ಒಪ್ಪಂದ ಮಾಡಿಕೊಂಡಿದ್ದರೋ ಅವರೇ ಕೈ ಬಿಟ್ಟಿದ್ದಾರೆ! ಆಹಾರ ತಯಾರಾಗ್ತಿರೋದು ಇನ್ನಾರದೋ ‘ಕೈ’ ನಲ್ಲಿ!

ಮಧು ಗೌಡ ಹಾಗೂ ಸೋಮಣ್ಣ ಈಗಿನ ಆಹಾರ ತಯಾರಕರು! ಅಲ್ಲದೇ, ಇವತ್ತಿನ ಬೆಳಗ್ಗೆಯ ತಿಂಡಿ ನೆನ್ನೆ ಮದುವೆಯ ಸಮಾರಂಭದಲ್ಲುಳಿದಿದ್ದ ಹಳಸಿದ ಪಲಾವ್ ಮತ್ತು ಖಾರಾಬಾತ್ ನನ್ನೇ ಬಿಸಿ ಮಾಡಿ ಮಸಾಲೆ ಸೇರಿಸಿ ರುಚಿ ತೋರಿಸಿದ್ದಾರೆ!

 

ಯಾವಾಗ ಪಬ್ಲಿಕ್ ಟಿವಿ ಕಾರ್ಯಾಚರಣೆ ಪ್ರಾರಂಭಿಸಿತೋ, ಆಗಲೇ ಮಧು ಹಾಗೂ ಸೋಮಣ್ಣ ವಾಹಿನಿಯವರ ಮೇಲೆ ಮುಗಿಬಿದ್ದು ಕ್ಯಾಮೆರಾಗಳನ್ನೆಲ್ಲ ಕಿತ್ತು ಪುಡಿಗಟ್ಟಿದ್ದಾರೆ!
ಆಹಾರ ತಯಾರಿಸಲು ಕೊಟ್ಟ ‘ಲೈಸೆನ್ಸ್’ ತೋರಿಸಿ ಎಂದ ವಾಹಿನಿಯವರಿಗೆ ‘ನಿಮ್ಮ ಕ್ಯಾಮೆ ನೋಡಿ’ ಎಂದು ಛೂ ಗುಟ್ಟಿದ ಸೋಮಣ್ಣ ಹಾಗೂ ಮಧು ಈಗ ಮಧ್ಯಾಹ್ನದ ಊಟದ ತಯಾರಿಕೆಯಲ್ಲಿ ನಿರತರಾಗಿದ್ದಾರೆ!

ರಾಹುಲ್ ಗಾಂಧಿಯ ‘ಅಮ್ಮ’ ಕ್ಯಾಂಟೀನ್ ನ ಗಿಮಿಕ್ಕು ಹಾಗೂ ಸಿದ್ಧರಾಮಯ್ಯರವರ ಪ್ರಜೆಗಳ ಮೇಲಿನ ಕಾಳಜಿ ಎಂತಹ ಅದ್ಭುತವೆಂದು ತಿಳಿಯಬೇಕಾದರೆ ಮಧ್ಯಾಹ್ನದ ಊಟ ಸವಿದು ಬನ್ನಿ!
ಇದು ರಾಜ್ಯ ಸರಕಾರದ ‘ಇಂದಿರಾ ಕ್ಯಾಂಟೀನ್’ ! ಬಡವರಿಗೆ ಅನ್ನ ನೀಡುವ ಮಡಿಲು!

– ಪೃಥು

Tags

Related Articles

Close