ಅಂಕಣ

ಅಯ್ಯಯ್ಯೋ!! ಶಬರಿಮಲೆ ಭಕ್ತರಿಗೆ ಕೇರಳ ಸರಕಾರದಿಂದ ಮಹಾಮೋಸ! ಲೂಟಿ ಹೊಡೆದಿತೇ ಸರಕಾರ?

ಭಾರತದಲ್ಲಿ ಮೊಘಲರ ಆಡಳಿತವಿದ್ದ ಸಂದರ್ಭ ಅನೇಕ ದೇವಸ್ಥಾನಗಳನ್ನು ನೆಲಸಮಗೊಳಿಸಿ ಮಸೀದಿ ಕಟ್ಟಲಾಯಿತು. ಅನೇಕ ದೇವಸ್ಥಾನಗಳ ಆಭರಣಗಳನ್ನು ಲೂಟಿಗೊಳಿಸಲಾಯಿತು. ಸಾವಿರಾರು ದೇವಸ್ಥಾನಗಳು ಹೇಳಹೆಸರಿಲ್ಲದಂತೆ ನಾಶವಾದವು. ಅಲ್ಲದೆ ದೇವಸ್ಥಾನಕ್ಕೆ ತೆರಳುವ ಯಾತ್ರಿಗಳ ಮೇಲೆ ದುಬಾರಿ ತೆರಿಗೆ ವಿಧಿಸಲಾಗಿತ್ತು. ಆದರೆ ದೇಶದಲ್ಲಿ ಮೊಘಲರ ಸಾಮ್ರಾಜ್ಯ ಎಂದೋ ನಾಶವಾಗಿದೆ. ಆದರೆ ಇಂದಿನ ಸರಕಾರಗಳು ಹಿಂದೂಗಳ ಪಾಲಿಗೆ ಮೊಘಲರಂತೆ ಎಷ್ಟು ಕ್ರೂರವಾಗಿ ವರ್ತಿಸುತ್ತದೆ ಗೊತ್ತಾ? ಹೌದು ಈ ವಿಷಯಗಳನ್ನು ಓದಿದಾಗ ನಿಮಗೆ ಹೊಟ್ಟೆಯಲ್ಲಿ ಜ್ವಾಲೆ ಬರುವುದರಲ್ಲಿ ಯಾವುದೇ ಸಂಶಯವೇ ಇಲ್ಲ.

ಹಿಂದೂಗಳ ಭಾವನೆ ಜೊತೆ ಆಟವಾಡಿ ಅವರನ್ನು ಶ್ರದ್ಧಾಸ್ಥಾನಗಳಿಂದ ವಿಮುಖಗೊಳಿಸಿ ಭಾರತವನ್ನು ಇಸ್ಲಾಂ ಹಾಗೂ ಕ್ರೈಸ್ತೀಕರಣಗೊಳಿಸಲು
ಗುಪ್ತಕಾರ್ಯಸೂಚಿಯೊಂದು ಕೆಲಸ ಮಾಡುತ್ತಿದೆ. ಇವುಗಳನ್ನು ಹಿಂದೂಗಳು ಎಷ್ಟು ದಿನಗಳ ಸಹಿಸುತ್ತಾರೋ ಅಷ್ಟು ದಿನಗಳ ಕಾಲ ಅವರ ತಾಳ್ಮೆಯನ್ನು ಪರೀಕ್ಷೆ
ನಡೆಸುವ ಕೆಲಸ ನಡೆಯುತ್ತಾ ಬರುತ್ತಿದೆ. ವಿಪರ್ಯಾಸವೆಂದರೆ ಹಿಂದೂಗಳ ತಾಳ್ಮೆಯ ಕಟ್ಟೆಯೊಡೆಯುವುದೇ ಇಲ್ಲ. ಸರಕಾರ ಹಿಂದೂಗಳ ಪಾಲಿಗೆ ಎಷ್ಟೇ ವಿಲನ್ ತರ ವರ್ತಿಸಿದರೂ ಅದನ್ನು ಪ್ರಶ್ನಿಸುವ ಕೆಲಸವನ್ನು ಮಾಡುವುದೇ ಇಲ್ಲ. ದೇವಸ್ಥಾನಗಳನ್ನು ವ್ಯಾವಹಾರಿಕ ಕೇಂದ್ರಗಳನ್ನಾಗಿ ಮಾಡುವ ಈ ನರಸತ್ತ ಸರಕಾರಗಳ ವಿರುದ್ಧ ಹಿಂದೂಗಳು ಯಾವಾಗ ಹೋರಾಟಕ್ಕೆ ಇಳಿಯುವುದಿಲ್ಲವೋ ಅಲ್ಲಿಯ ತನಕ ಹಿಂದೂಗಳು ಉದ್ಧಾರವಾಗಲು ಸಾಧ್ಯವೇ ಇಲ್ಲ.

ಸ್ವಾಮಿಯೇ ಶರಣಂ ಅಯ್ಯಪ್ಪ….!

ಹೌದು ಇದು ಕೋಟ್ಯಂತರ ಭಕ್ತರ ಬಾಯಿಯಿಂದ ಬರುವ ಉದ್ಗಾರ. ನಮ್ಮ ಆರಾಧ್ಯ ಶಬರಿ ಮಲೆ ಅಯ್ಯಪ್ಪನಿಗೆ ಸಂಪೂರ್ಣವಾಗಿ ಶರಣಾಗಿ ನಮ್ಮ ಸರ್ವಸ್ವವನ್ನೇ ಮಹಾಮಹಿಮ ದೇವರಿಗೆ ಅರ್ಪಿಸುತ್ತೇವೆ. ಅಯ್ಯಪ್ಪನ ದಿವ್ಯ ಮೂರ್ತಿಯನ್ನು ಕಣ್ಣುಗಳಲ್ಲಿ ತುಂಬಿಕೊಂಡು ಅವನ ಚರಣದಲ್ಲಿ ಭಕ್ತಿಯಿಂದ ಲೀನವಾಗುವ ಮುಗ್ಧ ಭಕ್ತರ ಜೊತೆ ಕೇರಳ ಸರಕಾರ ಯಾವ ರೀತಿ ಆಟ ಆಡುತ್ತಿದೆ ಗೊತ್ತಾ? ಮುಸ್ಲಿಮೇತರ ಜನರಿಗೆ ಮೊಘಲರು ಜೆಜಿಯಾ ಎಂಬ ತೆರಿಗೆ ವಿಧಿಸುತ್ತಿದ್ದರು. ಅದೇ ರೀತಿ ಇಂದು ಕೇರಳ ಸರಕಾರ ಅಯ್ಯಪ್ಪ ಭಕ್ತರಿಂದ ಯಾವ ರೀತಿ ಹಣ ಲಪಟಾಯಿಸಲು ಸಾಧ್ಯವೋ ಅಷ್ಟು ಹಣವನ್ನು ಲಪಟಾಯಿಸುತ್ತದೆ.

ಮಾಲೆ ಧರಿಸಿ ಪಾದರಕ್ಷೆ ಧರಿಸದೆ, ದಿನಕ್ಕೆ ಒಂದು ಹೊತ್ತು ಅನ್ನಾಹಾರ ಸೇವಿಸಿ, ಕಪ್ಪು ಬಣ್ಣದ ವಸ್ತ್ರ ಧರಿಸಿ ಒಂದು ಮಂಡಲ ವೃತಾಚರಣೆ ಕೈಗೊಂಡು ಅಯ್ಯಪ್ಪನ ಸನ್ನಿಧಿಗೆ ಸಾವಿರಾರು ಭಕ್ತರು ಬರುತ್ತಾರೆ. ಅಯ್ಯಪ್ಪ ದೇವಸ್ಥಾನವು ಸಮುದ್ರ ತೀರದಿಂದ 914 ಮೀಟರ್ ಎತ್ತರದಲ್ಲಿ ಪೆರಿಯಾರ್ ಹುಲಿಧಾಮದ ಭಾಗವಾದ ಗೊಂಡಾರಣ್ಯದ ಮಧ್ಯ ಭಾಗದಲ್ಲಿದೆ. ಇದು ಪತ್ತಿನಂತಿಟ್ಟ ಜಿಲ್ಲೆಯ ರಾನ್ನಿ ತಾಲೂಕಿನ ಪರಿನಾಡು ಗ್ರಾಮಗಳನ್ನೊಳಗೊಂಡಿದೆ. ಪಂಪಾನದಿಯವರೆಗೆ ವಾಹನಗಳಲ್ಲಿ ಬರುವ ಭಕ್ತರು ಅಲ್ಲಿಂದ ಶಬರಿಮಲೆ ಸನ್ನಿಧಿಗೆ ತಲುಪಲು 4 ಕಿ.ಮೀ. ಕಡಿದಾದ ಗುಡ್ಡದ ದಾರಿಯನ್ನು ಏರಿಕೊಂಡು ಭಕ್ತರು ಅಯ್ಯಪ್ಪನ ದರುಶನ ಮಾಡುತ್ತಾರೆ. ಇಷ್ಟೆಲ್ಲಾ ಕಷ್ಟಪಟ್ಟು ಬರುವ ಭಕ್ತರಿಗೆ ಕೇರಳ ಸರಕಾರ ಮಾಡುತ್ತಿರುವ ಮೋಸವೇನು ಗೊತ್ತಾ?

ಉತ್ಸವ ಕಾಲದಲ್ಲಿ `ಮಂಡಲ ಪೂಜೆ ‘ ಮತ್ತು `ಮಕರ ವಿಳಕ್ಕು’ ನಡೆಯುವ ಪುಣ್ಯ ಮುಹೂರ್ತಗಳಲ್ಲಿ ಎರಡೂವರೆ ತಿಂಗಳು ಭಕ್ತದರ್ಶನಕ್ಕಾಗಿ ತೆರೆದಿಡಲಾಗುತ್ತದೆ. ಉತ್ಸವ ಸಮಯವು ಆರಂಭವಾಗುವುದು ಮಳಯಾಳ ತಿಂಗಳು ವೃಶ್ಚಿಕಂ ಒಂದಕ್ಕೆ (ನವಂಬರದಲ್ಲಿ) ಮತ್ತು ಕೊನೆಗೊಳ್ಳುವುದು ಮಕರಂ ಒಂದಕ್ಕೆ (ಜನವರಿಯಲ್ಲಿ). ಅಲ್ಲದೆ ಶಬರಿಮಲೆ ದೇವಾಲಯವು ಕೇರಳದ ಪ್ರಧಾನ ಉತ್ಸವಗಳಾದ ಓಣಂ, ವಿಷು, ಹಸ್ತ ಚಿತ್ರ, ನಿರಪುತ್ತರಿ (ಮನೆತುಂಬು ಹುತ್ತರಿ) ಮತ್ತು ಪೈಂಗುಣಿ ಉತ್ತರಂ (ಉತ್ತರಾಷಾಡ) ದಿನಗಳಲ್ಲಿ ದೇವಾಲಯದ ಬಾಗಿಲು ತರೆಯುತ್ತಾರೆ. ಮಂಡಲ ಪೂಜೆ ಮತ್ತು ಮಕರವಿಳಕ್ಕು ಸಮಯದಲ್ಲಿ ಲಕ್ಷಗಟ್ಟಲೆ ಅಯ್ಯಪ್ಪ ಭಕ್ತರು ಸನ್ನಿಧಿಗೆ ಬರುತ್ತಾರೆ. ಈ ಸಮಯ ಕೇರಳ ಸರಕಾರಕ್ಕೆ ಸುಗ್ಗಿಯೆಂದೇ ಹೇಳಬಹುದು.

ಪಂಪಾನದಿಯಿಂದ ಸನ್ನಿಧಾನಕ್ಕೆ 3000 ಅಡಿ ಅಂತರವಿದೆ. ಶಬರಿಮಲೆಯನ್ನೊಳಗೊಂಡು ಒಟ್ಟು 18 ಬೆಟ್ಟಗಳಿವೆ. ಅದರಲ್ಲಿ ನೀಲಕ್ಕಲ್, ಕಲಕೆಟ್ಟಿ ಹಾಗೂ ಕರಿಮಲೆ ಪ್ರಮುಖವಾದವುಗಳು. ಕೆಲವರು ಕರಿಮಲೆ ಮುಖಾಂತರ 18 ಕಿ.ಮೀ. ಪಾದಯಾತ್ರೆಯ ಮೂಲಕ ಕಡಿದಾದ ಗುಡ್ಡದಲ್ಲಿ ಎರಡು ದಿನಗಳ ಕಾಲ ನಿರಂತರ ಸಂಚರಿಸಿ ಶಬರಿಮಲೆಗೆ ತಲುಪುತ್ತಾರೆ. ಇನ್ನು ಕೆಲವರು ಪಂಪಾ ನದಿಯಿಂದ ನಾಲ್ಕು ಕಿ.ಮೀ. ಸಂಚರಿಸಿ ಸನ್ನಿಧಾನಕ್ಕೆ ತಲುಪುವವರಿದ್ದಾರೆ. ದೇವಸ್ಥಾನದ ಆಡಳಿತವನ್ನು ತಿರುವಂಕೂರು ದೇವಸ್ವಂ ಆಡಳಿತ ಮಂಡಳಿ ವಹಿಸುತ್ತದೆ. ಕೇರಳ ರಾಜ್ಯಕ್ಕೆ ಶಬರಿಮಲೆ ದೇವಸ್ಥಾನ ಆದಾಯ ತರುವಂತಹಾ ದೇವಸ್ಥಾನವಾಗಿದೆ.

ಶಬರಿಮಲೆಗೆ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿಂದ ಭಕ್ತರು ಬರುತ್ತಾರೆ. ಶಬರಿಮಲೆ ಸನ್ನಿಧಾನವನ್ನು ತೆರಳುವವರು ಅಚ್ಚನಕೋವಿಲ್, ಅರ್ಯನಕಾವು, ಕುಲತುಪಾಶ, ಎರುಮೆಲಿಯಲ್ಲಿರುವ ಶ್ರೀಧರ್ಮಶಾಸ್ತ ದೇವಸ್ಥಾನ, ಕಲಕೆತ್ತಿಯಲ್ಲಿರುವ ಶಿವ-ಪಾರ್ವತಿ ದೇವಸ್ಥಾನವನ್ನು ಸಂದರ್ಶಿಸುತ್ತಾರೆ.

ಸನ್ನಿಧಾನದ ಸಮೀಪ ಪಂಪಾ ನದಿಯಿದೆ. ಇದರ ಸಮೀಪ ವಿನಯಕರ್ ದೇವಸ್ಥಾನ, ಮಾಲಿಕಪುರತಮ್ಮನ್ ದೇವಸ್ಥಾನ, ಪಂದಲ ಕ್ಷೇತ್ರ, ಇದರ ಮಧ್ಯದಲ್ಲಿ ಅಯ್ಯಪ್ಪ ಸನ್ನಿಧಾನ ಕಂಡುಬರುತ್ತದೆ. ಅಪ್ಪಂ, ಅರವಣ ಪಾಯಸ ಇಲ್ಲಿನ ಪ್ರಮುಖ ಪ್ರಸಾದ. ಇರುಮುಡಿಯಯಲ್ಲಿ ಹೊತ್ತುಕೊಂಡು ಬಂದ ತುಪ್ಪವನ್ನು ಅಯ್ಯಪ್ಪನ ಮೂರ್ತಿಗೆ ಅಭಿಷೇಕ ಮಾಡಿ ಅದ್ನು ಭಕ್ತರಿಗೆ ಸಮರ್ಪಿಸಲಾಗುತ್ತದೆ.

ಕೆಲವು ಅಶಕ್ತ ಭಕ್ತರು ಸನ್ನಿಧಾನಕ್ಕೆ ಸಂದರ್ಶಿಸಲಾಗದಿದ್ದರೆ ಡೋಲಿಯ ಸಹಾಯ ಪಡೆಯಬಹುದು. ನಾಲ್ಕು ಮಂದಿ ಕಟ್ಟುಮಸ್ತಿನ ಆಳುಗಳು ಡೋಲಿ ಹೊತ್ತುಕೊಂಡು ಭಕ್ತರನ್ನು ದೇವಳದವರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹಿಂತಿರುಗಿ ತರುತ್ತಾರೆ. ಭಕ್ತರು ಅನಾರೋಗ್ಯ ಪೀಡಿತರಾದರೆ ಚಿಕಿತ್ಸೆ ಕೊಡುವ ಸವಲಭ್ಯವಿದೆ.

ಅಯ್ಯಪ್ಪ ಭಕ್ತರನ್ನು ಯಾವ ರೀತಿ ಸುಲಿಗೆ ಮಾಡಲಾಗುತ್ತಿದೆ ಗೊತ್ತಾ?

ಮುಸ್ಲಿಮರಿಗೆ ಮೆಕ್ಕಾ ಮದೀನಕ್ಕೆ ತೆರಳಲು ಭಾರತ ಕೋಟಿಗಟ್ಟಲೆ ಸಹಾಯಧನ ಬಿಡುಗಡೆ ಮಾಡಲಾಗುತ್ತದೆ. ದೇವಸ್ಥಾನಗಳಲ್ಲಿ ಸಂಗ್ರಹವಾಗುವ ಕಾಣಿಕೆ ಹಣಗಳನ್ನೂ ಬಿಡದ ಸರಕಾರ ಅದರ ಒಂದು ಪೈಸೆಯನ್ನೂ ಹಿಂದೂಗಳಿಗೆ ಕೊಡದ ಸರಕಾರ ಇಷ್ಟು ಸಾಲದೆಂಬಂತೆ ಯಾತ್ರೆಗೆ ತೆರಳುವ ಹಿಂದೂ ಭಕ್ತರನ್ನು ಎಷ್ಟೆಲ್ಲಾ ರೀತಿಯಲ್ಲಿ ಸುಲಿಗೆ ಮಾಡಲು ಸಾಧ್ಯವೋ ಅಷ್ಟು ಸುಲಿಗೆ ಮಾಡುತ್ತದೆ. ಅದೇ ರೀತಿ ಕೇರಳದ ಕಮ್ಯುನಿಸ್ಟ್ ಸರಕಾರ ಶಬರಿಮಲೆಗೆ ತೆರಳಳುವ ಭಕ್ತರನ್ನು ಹಣದಲ್ಲೇ ಅಳೆದು ತೂಗಿ ಅವರನ್ನು ಲಪಟಾಯಿಸುವ ದಂಧೆಯಲ್ಲಿ ನಿರಂತರವಾಗಿ ತೊಡಗಿಕೊಂಡಿದೆ.

ಕೇರಳ ಸರ್ಕಾರ ಕರ್ನಾಟಕದಲ್ಲಿ ನೋಂದಣಿಯಾದ ಎಲ್ಲಾ ಪ್ರವಾಸಿ ವಾಹನಗಳಿಗೂ ವಾರ್ಷಿಕ ತೆರಿಗೆಯನ್ನು ವಿಧಿಸಿದೆ. ಅದರೊಂದಿಗೆ ರಾಜ್ಯದಲ್ಲಿ ನೋಂದಣಿಯಾದ ವಾಹನಗಳು ಕೇರಳಕ್ಕೆ ತೆರಳಬೇಕಾದರೆ ತೆರಿಗೆಯನ್ನು ಕಟ್ಟಬೇಕಿದೆ. ಈ ತೆರಿಗೆಯನ್ನು ಕಟ್ಟಿದರೆ ಆ ವಾಹನ ಎಷ್ಟು ಬಾರಿ ಬೇಕಾದರೂ ಕೇರಳಕ್ಕೆ ಸಂಚಾರ ಮಾಡಬಹುದಾಗಿದೆ. ಜೊತೆಗೆ ಪ್ರವೇಶ ತೆರಿಗೆಯನ್ನೂ ವಿಧಿಸಲಾಗುತ್ತದೆ. ಕರ್ನಾಟಕದಿಂದ ಶಬರಿ ಮಲೆಗೆ ತೆರಳುವ ಅಯ್ಯಪ್ಪ ಸ್ವಾಮಿ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಖಾಸಗಿ ವಾಹನದಲ್ಲಿ ಅಯ್ಯಪ್ಪ ಭಕ್ತರು ಸಂಚರಿಸುವಂತೆಯೇ ಇಲ್ಲ. ಕೇರಳದಲ್ಲಿ ಎಡರಂಗ (ಎಲ್‍ಡಿಎಫ್) ಆಡಳಿತಕ್ಕೆ ಬಂದ ನಂತರ ಹೊಸ ತೆರಿಗೆ ನೀತಿ ಜಾರಿಗೆ ತಂದಿದೆ. ಅಯ್ಯಪ್ಪ ಭಕ್ತರನ್ನೇ ಟಾರ್ಗೆಟ್ ಮಾಡಿಕೊಂಡು ಕೇರಳ ಸರಕಾರ ಭಕ್ತರಿಂದಲೇ ಅಧಿಕ ಮೊತ್ತದ ಹಣ ಕಸಿಯುತ್ತದೆ.

ಅಲ್ಲದೆ ಕೇರಳ ಸರಕಾರ ಭಕ್ತರನ್ನು ಯಾವ ರೀತಿ ದರೋಡೆ ನಡೆಸುತ್ತದೆ ಎಂದರೆ ಅಯ್ಯಪ್ಪ ಭಕ್ತರೆಂದಾದರೆ ಟೋಲ್ಗೇಟ್(ಪ್ರಯಾಣ ಸುಂಕ) ದರ ಹೆಚ್ಚಾಗುತ್ತದೆ.
ಸಾವಿರಾರು ರೂ.ಗಳನ್ನು ಭಕ್ತರಿಂದ ವಸೂಲಿ ಮಾಡಲಾಗುತ್ತದೆ. ಶಬರಿಮಲೆಗೆ ಕೋಟ್ಯಂತರ ಮಂದಿ ಬರುತ್ತಿದ್ದರೂ ಭಕ್ತರಿಗೆ ಮೂಲಭೂತ ಸಮಸ್ಯೆಯುಂಟಾಗುತ್ತದೆ. ಸರಿಯಾದ ಶೌಚಾಲಯ, ಸ್ನಾನದ ಗ್ರಹ ನಿರ್ಮಿಸದ ಕಾರಣ ಭಕ್ತರು ದಯನೀಯ ಸ್ಥಿತಿಯನ್ನು ಅನುಭವಿಸುತ್ತಾರೆ. ದೇವರ ದರುಶನಕ್ಕಾಗಿ ಭಕ್ತರು ಸರದಿ ಸಾಲಿನಲ್ಲಿ ನಿಂತಿದ್ದರೂ ಕೆಲವೊಂದು ಕಡೆ ನೀರಿನ ವ್ಯವಸ್ಥೆಯೇ ಇಲ್ಲ. ಶಬರಿಮಲೆಯಲ್ಲಿ ನೂಕನುಗ್ಗಲಿನಿಂದಾಗಿ ನಿತ್ಯ ಸಮಸ್ಯೆ ತಲೆದೋರುತ್ತಲೇ ಇರುತ್ತದೆ.

ನೆನಪಿಡಿ ದೇವಸ್ಥಾನಕ್ಕೆ ತೆರಳುವ ಒಬ್ಬೊಬ್ಬ ಭಕ್ತನೂ ಕಾಣಿಕೆ ಎಂದು ಸಾಕಷ್ಟು ಹಣವನ್ನು ಹರಕೆಯ ರೂಪದಲ್ಲಿ ದೇವಸ್ಥಾನಕ್ಕೆ ಅರ್ಪಿಸುತ್ತಾನೆ. ಜೊತೆಗೆ ಸಾರಿಗೆ
ತೆರಿಗೆ, ಪ್ರಯಾಣ ಸುಂಕ ಎಂದೆಲ್ಲಾ ಸೇರಿ ಭಕ್ತರಿಂದ ಸಾಕಷ್ಟು ಹಣವನ್ನು ಕಸಿಯಲಾಗುತ್ತದೆ. ಆದರೆ ಭಕ್ತರಿಗೆ ಮಾತ್ರ ಯಾವುದೇ ಸೌಲಭ್ಯ ಕೊಡದೆ ಮೋಸ
ಮಾಡಲಾಗುತ್ತಿದೆ.

ಧರ್ಮಾಂಧರಿಂದ ಮೋಸ ನಡೆದೀತು ಎಚ್ಚರ….!

ವೃತಾಚಾರಣೆ ಕೈಗೊಂಡು ತೆರಳುವ ಭಕ್ತರಿಗೆ ಕೆಲವು ಮತಾಂಧರು ಮೋಸ ಮಾಡುವ ಸಾಧ್ಯತೆಯೂ ಇದೆ. ಕೆಲವು ಹೋಟೆಲ್‍ಗಳಲ್ಲಿ ಮಾಂಸಾಹಾರವನ್ನು
ಮಾಡಿದ್ದರೂ ಅಯ್ಯಪ್ಪ ಭಕ್ತರಲ್ಲಿ ಸುಳ್ಳು ಹೇಳಿ ತರಕಾರಿ ಎಂದು ಸುಳ್ಳು ಹೇಳಿ ಯಾಮಾರಿಸುವ ಕೆಲಸ ಎಗ್ಗಿಲ್ಲದೆ ನಡೆಯುತ್ತಿದೆ. ಅಯ್ಯಪ್ಪ ಭಕ್ತರ ಮುಂದೆ ಬಿರಿಯಾನಿ ಹೋಟೆಲ್‍ಗಳೆಲ್ಲಾ ಸಸ್ಯಾಹಾರಿಗಳಾಗಿ ಮೋಸ ಮಾಡುತ್ತವೆ. ಆದ್ದರಿಂದ ಇಂಥಾ ಮತಾಂಧರಿಂದ ಏಮಾರದಂತೆ ಭಕ್ತರು ಜಾಗ್ರತೆ ವಹಿಸಬೇಕಾಗಿದೆ.

ಕೇಸರಿ ಕಂಡರೆ ಸಿಟ್ಟಾಗುವ ಕಮ್ಮಿನಿಷ್ಠರುಕೇರಳದಲ್ಲಿ ಕಮ್ಯುನಿಸ್ಟ್ ಕಾರ್ಯಕರ್ತರ ದುಂಡಾವರ್ತನೆ ಎಲ್ಲರಿಗೂ ತಿಳಿದಿರುವಂಥದ್ದೇ. ಅನೇಕ ಮಂದಿ ಆರ್‍ಎಸ್‍ಎಸ್ ಕಾರ್ಯಕರ್ತರನ್ನು ಕೊಂದಿದ್ದಾರೆ. ಕೇಸರಿ ಬಣ್ಣವನ್ನು ಕಂಡರಾಗದ ಸಿಪಿಎಂ ಗೂಂಡಾಗಳು ಇದೇ ವರ್ತನೆಯನ್ನು ಅಯ್ಯಪ್ಪ ಭಕ್ತರ ಮೇಲೂ ಪ್ರಯೋಗಿಸುತ್ತಾರೆ. ಹೊರಗಿನಿಂದ ಬಂದ ಭಕ್ತರು ಕೇಸರಿ ಬಾವುಟ ಪ್ರದರ್ಶಿಸಿದರೆ, ಜೈ ಶ್ರೀ ರಾಂ ಎಂದರೆ ವಾಹನಗಳನ್ನು ಮುತ್ತಿಕೊಳ್ಳುವ ಕಮ್ಯುನಿಸ್ಟ್ ಗೂಂಡಾಗಳು ಭಕ್ತರ ಮೇಲೆ ನೈತಿಕ ಗೂಂಡಾಗಿರಿಯನ್ನು ಪ್ರದರ್ಶಿಸಿದ ಅನೇಕ ಉದಾಹರಣೆಗಳಿವೆ. ಇಂಥವರನ್ನು ಪೊಲೀಸರು ಕಡಿವಾಣ ಹಾಕುವುದನ್ನು ಬಿಟ್ಟು ಮೂಖಪ್ರೇಕ್ಷಕರಂತೆ ವರ್ತಿಸುತ್ತಾರೆ.

ಅಯ್ಯಪ್ಪ ಭಕ್ತರ ಹಣದಿಂದ ಕೊಬ್ಬಿರುವ ಸರಕಾರಕ್ಕೆ ಅಯ್ಯಪ್ಪ ಭಕ್ತರ ಹಿತಾಸಕ್ತಿಯ ಮೇಲೆ ಕಾಳಜಿ ಇದ್ದಂತೆ ಕಾಣುತ್ತಿಲ್ಲ. ಹಿಂದೂಗಳೇ ಎಷ್ಟು ದಿನಗಳ ಕಾಲ ಇದನ್ನು ಸಹಿಸುತ್ತೀರಿ…..?

-ಚೇಕಿತಾನ

Tags

Related Articles

Close