ಅಂಕಣ

ನಾವು ಮತ್ತೆ ಓಟು ಕೇಳಲು ನಿಮ್ಮ ಕಾಲಡಿಗೆ ಬರುತ್ತಿದ್ದೇವೆ, ದಯವಿಟ್ಟು ನಮಗೆ ಚಪ್ಪಲಿಯಲ್ಲಿ ಹೊಡೆಯದೆ ಓಟ್ ಹಾಕ್ತೀರಾ?! : ಕಾಂಗ್ರೇಸ್

ಕರ್ನಾಟಕ ಕಾಂಗ್ರೇಸ್ ಸರ್ಕಾರ… ಸಾಲು ಸಾಲು ಅವಮಾನಗಳನ್ನು ಹೊತ್ತು, ಹಗರಣಗಳೇ ತನ್ನ ಮಹಾ ಸಾಧನೆ ಎಂದು ಪೋಸು ಕೊಡುತ್ತಿರುವ ರಾಜ್ಯ ಕಂಡ
ಅತ್ಯಂತ ನಾಲಾಯಕ್ ಸರ್ಕಾರ. ಈಗ ಈ ಸರ್ಕಾರ “ನಾವು ಹಲವಾರು ತಪ್ಪುಗಳನ್ನು ಮಾಡಿದ್ದೇವೆ, ನಾವು ಮತ್ತೆ ಓಟು ಕೇಳಲು ನಿಮ್ಮ ಕಾಲಡಿಗೆ ಬರುತ್ತಿದ್ದೇವೆ,
ದಯವಿಟ್ಟು ನಮಗೆ ಚಪ್ಪಲಿಯಲ್ಲಿ ಹೊಡೆಯದೆ ಓಟ್ ಹಾಕ್ತೀರಾ” ಎಂದು ಭೀಕ್ಷೆ ಬೇಡಲು ತಯಾರಾಗಿ ನಿಂತಿದೆ. ಮತ್ತೆ “ಮನೆ ಮನೆಗೆ ಕಾಂಗ್ರೇಸ್” ಅಂತೆ…

ಅದೇನೋ ಹೇಳ್ತಾರಲ್ಲಾ ರೀ… ಮೂರೂ ಬಿಟ್ಟವರು ಊರಿಗೆ ದೊಡ್ಡವರು ಅಂತಾರಲ್ಲ ಅದು ಈ ಖಾನ್‍ಗ್ರೇಸ್ ಪಕ್ಷಕ್ಕೆ ಹೇಳಿ ಮಾಡಿಸಿದಂತಿದೆ. ರಾಜ್ಯದಲ್ಲಿ ಅದ್ಯಾವಾಗ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂತೋ ಅಂದಿನಿಂದ ಇಂದಿನವರೆಗೂ ಒಂದಲ್ಲ ಒಂದು ಹಗರಣದಿಂದ, ಜಾತಿ ವಾದದಿಂದ, ಧರ್ಮ ವಿಭಜನೆಯಿಂದ, ರೈತರ ಆತ್ಮಹತ್ಯೆಗಳಿಂದ, ನಿಷ್ಠಾವಂತ ಪೊಲೀಸ್ ಅಧಿಕಾರಿಗಳ ಆತ್ಮಹತ್ಯೆಯಿಂದ ಸುದ್ಧಿ ಮಾಡುತ್ತಲೇ ಇದೆ. ನಿಮ್ಮ ಸಿದ್ಧರಾಮಯ್ಯರ ಸರ್ಕಾರ ಅದೇನು ಸಾಧನೆ ಮಾಡಿದೆಯಪ್ಪಾ ಅಂತ ಕೇಳಿದರೆ ಸಾಮಾನ್ಯ ಜನರು ಹೇಳುವ ಮಾತೇನು ಗೊತ್ತಾ, ನಮ್ಮ ಸಾಹೇಬ್ರು ಅನ್ನ ಭಾಗ್ಯ ಕೊಟ್ರು ಸಾರ್ ಅಂತ. ಅಧಿಕಾರ ಬಂದೊಡನೆ ಅದೇನೋ ನಮ್ಮ ಸರ್ಕಾರ ಆರಂಭದಲ್ಲೇ ದೊಡ್ಡ ಸಾಧನೆ ಮಾಡಿತೆಂದು ಬಿಂಬಿಸಲು ಸಾಮಾನ್ಯ ಜನರನ್ನು ಮಂಗ ಮಾಡಲು “ನಾವು ಬಡವರಿಗೆ 1 ರೂಗೆ ಅಕ್ಕಿ ಕೊಡ್ತೀವಿ” ಅಂತ ಅನ್ನ ಭಾಗ್ಯ ಯೋಜನೆಯನ್ನ ಜಾರಿಗೆ ತಂದು ತನ್ನ ಪೌರುಷವನ್ನು ತೋರಿಸಲು ಪ್ರಯತ್ನಿಸಿತು. ಆದ್ರೆ ಇದರ ಬಹುಪಾಲು ಹಣ ಕೇಂದ್ರ ಸರ್ಕಾರ ಕೊಡುತ್ತಿದೆ ಎಂದು ಅದ್ಯಾವಾಗ ಜನರಿಗೆ ಗೊತ್ತಾಯಿತೋ ಅಂದು ಸಿದ್ದು ಸೆರಗು ಮುಚ್ಚಿಕೊಳ್ಳಲು ತಯಾರಾಗಿ ನಿಂತರು. ತನ್ನ ಮಹತ್ವಾಕಾಂಕ್ಷಿ ಯೋಜನೆ ತನ್ನದೇ ಪಕ್ಷದವರಿಂದ ಆಕ್ರಮವಾಗಿ ಮಾರಾಟಿಸಲ್ಪಟ್ಟಾಗ ಪಕ್ಷವೇ ಮುಜುಗರಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡಂತಾಗಿದ್ದಂತು ಸುಳ್ಳಲ್ಲ. ಅಂದಿನ ಅನ್ನಭಾಗ್ಯದಿಂದ ಹಿಡಿದು ಇಂದಿನ ಇಂದಿರಾ ಕ್ಯಾಂಟೀನ್‍ವರೆಗೂ ರಾಜ್ಯ ಸರ್ಕಾರ ಅಕ್ಕಿಯ ಜತೆ ಆಡುತ್ತಾ ಬಂದಿದೆ. “ವಿಷ ಹಕ್ಕಿ ಕಚ್ಚಿದರೂ ಔಷಧಿವುಂಟು, ಅಕ್ಕಿ ಚುಚ್ಚಿದರೆ ಮದ್ದಿಲ್ಲ” ಎಂಬುವುದನ್ನು ಮರೆತಂತಿದೆ.

ಈಗ ಸರ್ಕಾರ ಎಲ್ಲವನ್ನು ಮರೆತು ನಮ್ಮೊ0ಂದಿಗೆ ಬನ್ನಿ. ನಾವು ಇನ್ನಾದರೂ ಸರಿಯಾಗ್ತೀವಿ ಎಂದು ಅಂಗಲಾಚುತ್ತಿದೆ. ಮರೆಯೋದುಂಟೇ ನಿಮ್ಮ ಅನ್ಯಾಯ
ಅತ್ಯಾಚಾರಗಳನ್ನು. ದೇಶದಲ್ಲೇ ಶ್ರೀಮಂತ ಸಚಿವನಾಗಿ ಅನೇಕ ಹಗರಣಗಳನ್ನು ಮಾಡಿ ಕೋಟ್ಯಾಂತರ ಅಕ್ರಮ ಆಸ್ತಿಗಳನ್ನು ಸಂಪಾದಿಸಿ ಐಟಿ ದಾಳಿಗೊಳಗಾಗಿದ್ದ ರೌಡಿ ಸಚಿವ ಡಿಕೆ ಶಿವಕುಮಾರನನ್ನು ಮರೆಯೋದುಂಟೆ..?

ಕೆಲಸ ಮಾಡಿಕೊಡುವ ನೆಪವೊಡ್ಡಿ ತನ್ನ ಕಛೇರಿಗೆ ಕರೆದು ಅತ್ಯಾಚಾರ ಮಾಡಿ ವೀಡಿಯೋ ಬಿಡುಗಡೆಯಾದ ನಂತರವೂ ಜಗ್ಗದೆ, ಕೊನೆಗೆ ಸಂತ್ರಸ್ಥ ಮಹಿಳೆ
ಬಹಿರಂಗವಾಗಿ ಹೇಳಿಕೆ ನೀಡಿದರೂ ಮಾನ ಮರ್ಯಾದೆ ಬಿಟ್ಟವರ ಹಾಗೆ ಇನ್ನೂ ಆ ಸ್ಥಾನದಲ್ಲಿ ಮುಂದುವರೆಯುತ್ತಿರುವ ಶಾಸಕ ಹೆಚ್. ವೈ. ಮೇಟಿಯ ಕಾಮ
ಕಾಂಡವನ್ನು ಮರೆಯುವುದುಂಟೇ..?

ಒಂದು ಕಡೆಯಲ್ಲಿ ಕರ್ನಾಟಕದ ಪ್ರತ್ಯೇಕ ಧ್ವಜದ ಬಗ್ಗೆ ಸಿಎಂ ನಾಟಕವಾಡುತ್ತಿದ್ದರೆ, ಮತ್ತೊಂದು ಕಡೆ ಅವರದ್ದೇ ಪಕ್ಷದ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ
ಹೆಬ್ಬಾಳ್ಕರ್ “ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದ್ರೆ ನಾನೇ ಮೊದಲು ಜೈ ಮಹರಾಷ್ಟ್ರ ಅಂತ ಹೇಳ್ತೇನೆ” ಅಂತ ರಾಜ್ಯವನ್ನು ಮಾರುವ ನಾಡದ್ರೋಹಿ ಹೇಳಿಕೆ
ಕೊಟ್ಟಿದ್ರಲ್ಲ… ಅದನ್ನು ಮರೆಯೋದುಂಟೇ…?

ದೇಶದೆಲ್ಲೆಡೆ ಗೋ ಹತ್ಯೆಯ ವಿರುದ್ಧ ಹೋರಾಟವಾಗುತ್ತಿದೆ. ಕೇಂದ್ರ ಸರ್ಕಾರ ಬೇರೆ ಗೋಹತ್ಯೆಯನ್ನು ನಿಷೇಧಿಸಿದೆ. ಅಂತದ್ರಲ್ಲಿ ಮುಸಲ್ಮಾನರ ಓಟಿಗೋಸ್ಕರ
ಸಾರ್ವಜನಿಕವಾಗಿ ಗೋಮಾಂಸ ತಿನ್ನಿ ನಾನು ಬೆಂಬಲಿಸುತ್ತೇನೆ, ನಾನು ಕೂಡಾ ಬಹಿರಂಗವಾಗಿ ಗೋಮಾಂಸ ತಿನ್ನುತ್ತೇನೆ ಎಂದು ಹಿಂದೂ ವಿರೋಧಿ ಸರ್ಕಾರ, ಗೋಮಾತೆಯನ್ನು ಕೊಲೆ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯರನ್ನು ಮರೆಯೋದುಂಟೇ…?

ಸಾಲು ಸಾಲು ಪ್ರಯೋಜನವಿಲ್ಲದ ಭಾಗ್ಯಗಳನ್ನು ಘೋಷಿಸಿ ಜಾತಿ ಜಾತಿಗಳ ಮಧ್ಯೆ ಸಂಘರ್ಷವನ್ನುಂಟು ಮಾಡಿ, ಅಲ್ಪ ಸಂಖ್ಯಾತರ ಓಲೈಕೆಗಾಗಿ ಸ್ವಧರ್ಮವನ್ನು ಮೂಲೆ ಗುಂಪು ಮಾಡುತ್ತಿರುವ ನಿಮ್ಮ ಹೀನ ಸರ್ಕಾರವನ್ನು ಮರೆಯೋದುಂಟೇ…?

ಇಡೀ ರಾಜ್ಯಕ್ಕೆ ತಲೆನೋವಾಗಿ ಪರಿಣಮಿಸಿದ ಕಸ ವಿಲೇವಾರಿ ವಿಷಯದಲ್ಲಿ ಕಳ್ಳತನ ಮಾಡಿ, ಅಲ್ಲೂ ತನ್ನ ಅಧಿಕಾರವನ್ನು ಪ್ರಯೋಗಿಸಿ ಕಸದ ಹಣದಲ್ಲೂ 688 ಕೋಟಿ ಲೂಟಿ ಮಾಡಿ ತಮ್ಮ ದುರ್ಬುದ್ಧಿಯನ್ನು ಕಸಕ್ಕಿಂತ ಕಡೆ ಮಾಡಿದ ಸರ್ಕಾರದ ದುರ್ನಡತೆಯನ್ನು ಮರೆಯೋದುಂಟೇ….?

ನಮ್ಮ ರಾಜ್ಯದ ಹಿತ ಕಾಯುವ ನಿಷ್ಠಾವಂತ ಅಧಿಕಾರಿಗಳಾದ ಜಿಲ್ಲಾಧಿಕಾರಿ ಡಿ.ಕೆ.ರವಿ, ಡಿವೈಎಸ್‍ಪಿ ಗಣಪತಿ, ಮಲ್ಲಿಕಾರ್ಜುನ ಬಂಡೆ ಸಹಿತ ಅನೇಕ ದಕ್ಷ
ಅಧಿಕಾರಿಗಳ ಸಾವಿಗೆ ಕಾರಣರಾಗಿ, ಅದರಲ್ಲಿ ನೇರ ಭಾಗಿಯಾಗಿದ್ದರೂ ರಾಜೀನಾಮೆಯನ್ನು ನೀಡದೆ ತನ್ನ ದರ್ಪವನ್ನು ಮೆರೆದ ಸಚಿವ ಕೆ.ಜೆ.ಜಾರ್ಜ್ ಸಹಿತ
ನಾಲಾಯಕ್ ಸರ್ಕಾರವನ್ನು ಮರೆಯೋದುಂಟೇ…?

ಸದಾ ಬಡಮಕ್ಕಳ ಕಾಳಜಿಯೊಂದಿಗೆ ಜಾತಿ ಮತಗಳನ್ನು ಮರೆತು ಮುಸಲ್ಮಾನರಿಗೆ ಸಹಿತವಾಗಿ 3000ಕ್ಕೂ ಮಿಕ್ಕಿ ಬಡ ಮಕ್ಕಳಿಗೆ ಅನ್ನದಾನ ಮಾಡುತ್ತಿದ್ದ ಕಲ್ಲಡ್ಕ ಡಾ.ಪ್ರಭಾಕರ ಭಟ್ ನೇತೃತ್ವದ ಶ್ರೀ ರಾಮ ವಿದ್ಯಾಸಂಸ್ಥೆಗೆ ಕೊಲ್ಲೂರು ದೇವಸ್ಥಾನ ನೀಡುತ್ತಿದ್ದ ಅನ್ನವನ್ನು ಕಸಿದು ರಾಜಕೀಯ ಮಾಡಿದ್ದ ನಿಮ್ಮ ಕರುಣೆಯಿಲ್ಲದ ಸರ್ಕಾರದ ದುರ್ನಡತೆಯನ್ನು ಮರೆಯೋದುಂಟೇ…?

ಭಯೋತ್ಪಾದಕರ ಜತೆ ನೇರ ಸಂಪರ್ಕ ಹೊಂದಿರುವ ಪಿಎಫ್‍ಐ, ಕೆಎಫ್‍ಡಿ ಗಳಂತಹ ದೇಶ ದ್ರೋಹಿ ಸಂಘಟನೆಗಳ 1600 ಮಂದಿಯ ಮೇಲಿದ್ದ ಕೇಸನ್ನು ರದ್ದು
ಮಾಡಿ, “ಸಂಘ ಪರಿವಾರದ ಜೊತೆ ಹೋರಾಡಿ ನಾವು ಬೆಂಬಲ ಕೊಡುತ್ತೇವೆ” ಎಂದು ಘಂಟಾ ಘೋಷವಾಗಿ ಘೋಷಿಸಿದ ಸಿದ್ಧರಾಮಯ್ಯರ ದೇಶದ್ರೋಹದ
ಆಡಳಿತವನ್ನು ಮರೆಯೋದುಂಟೇ…?

ದೇಶದ್ರೋಹಿ, ಉಗ್ರ ಚಟುವಟಿಕೆಗಳನ್ನು ಮಾಡಿ ಹಲವಾರು ಮುಗ್ದರ ಜೀವವನ್ನು ಬಲಿಪಡೆದಿದ್ದ ಉಗ್ರ ಮದನಿಗೆ ನಿಮ್ಮ ದುಷ್ಟ ಸರ್ಕಾರ ರಾಜಾತಿತ್ಯ ನೀಡಿದ್ದನ್ನು
ಮರೆಯೋದುಂಟೇ….?

ಅನೇಕ ಹಿಂದೂಗಳ ಹತ್ಯೆಯಾದರೂ ಸುಮ್ಮನಿದ್ದು, ದನಕಳ್ಳ ಕಬೀರನ ಹತ್ಯೆ ಮಾಡಿದ ಪೊಲೀಸ್ ಪೇದೆಯನ್ನು ಕೆಲಸದಿಂದ ಅಮಾನತು ಮಾಡಿದ್ದನ್ನು
ಮರೆಯೋದುಂಟೇ…?

ಕರಾವಳಿಯಲ್ಲಿ ಉಗ್ರರಿದ್ದಾರೆ ಎನ್ನುವ ಎಚ್ಚರಿಕೆಯಿದ್ದರೂ ಬಾಯಿ ಮುಚ್ಚಿ ಕುಳಿತು ಈಗ ತನ್ನ ಸ್ವಕ್ಷೇತ್ರ ಬಂಟ್ವಾಳ, ಬಿಸಿ ರೋಡಿನಲ್ಲೇ ಐಸಿಸ್ ಕಾರ್ಯಚಟುವಟಿಕೆ
ಆಗುತ್ತಿದೆ ಎಂದು ಗೊತ್ತಾದ ಮೇಲೂ ತುಟಿಕ್ ಪಿಟಿಕ್ ಎನ್ನದ ಭಯೋತ್ಪಾದಕರ ಸ್ನೇಹಿತರಂತಿರುವ ಸಚಿವ ರಮಾನಾಥ ರೈಯವರ ದಿವ್ಯ ಮೌನವನ್ನು
ಮರೆಯೋದುಂಟೇ….?

ಸಿಕ್ಕ ಸಿಕ್ಕಲ್ಲಿ ತನ್ನ ದರ್ಪವನ್ನು ತೋರಿಸಿ, ತನಗೆ ಎದುರು ಮಾತನಾಡಿದರೆ ಅದೆಲ್ಲೆಲ್ಲಿಂದಲೋ ಕೋಪಗೊಂಡು ಸಾಮಾನ್ಯ ಜನರಿಗೂ ಕೈ ಎತ್ತುವ
ಮೂಲ್ಕಿ-ಮೂಡುಬಿದ್ರಿಯ ಶಾಸಕ ಅಭಯ ಚಂದ್ರ ಜೈನ್‍ರ ಗೂಂಡಾಗಿರಿಯನ್ನು ಮರೆಯೋದುಂಟೇ….?

ಸದಾ ಅಕ್ರಮಗಳ ಸರಮಾಲೆಯಲ್ಲೇ ಬದುಕುತ್ತಿರುವ ಈ ಕಾಂಗ್ರೇಸ್‍ಗೆ ಹಗರಣಗಳೆಂದರೆ ಅಷ್ಟೊಂದು ಕಷ್ಟದ ಮಾತಲ್ಲ. ಕೇಂದ್ರದಲ್ಲಿ ಹಗರಣ ಮಾಡಿ ದೇಶದ
ಜನತೆಯ ಮುಂದೆ ಬೆತ್ತಲಾಗಿ ಜನರು ಅಟ್ಟಾಡಿಸಿಕೊಂಡು ಬರುವವರೆಗೂ ಕುರ್ಚಿಯಲ್ಲಿ ಭದ್ರವಾಗಿ ಕುಳಿತು ಹೀನಾಯವಾಗಿ ಸೋಲುಂಡ ಯುಪಿಎ ಸರ್ಕಾರದ
ರೀತಿಯಲ್ಲೇ ರಾಜ್ಯ ಕಾಂಗ್ರೇಸ್ ಸರ್ಕಾರ ಪತನಗೊಳ್ಳವ ದಿನ ದೂರವಿಲ್ಲ. “ವಿನಾಶಕಾಲೇ ವಿಪರೀತ ಬುದ್ಧಿ” ಎಂಬಂತೆ ಕೊನೆ ಕೊನೆಗೆ ತನ್ನ ಅಹಂಕಾರವನ್ನು
ಪ್ರದರ್ಶಿಸಿ ನಂತರ ವಿನಾಶದ ದಿನಗಳನ್ನು ಕಂಡುಕೊಂಡು ಶಾಶ್ವತವಾಗಿ ಕಾಂಗ್ರೇಸ್ ಮುಕ್ತವಾಗುವ ದಿನವೂ ದೂರವಿಲ್ಲ… ಕಾಂಗ್ರೇಸ್ ಮುಕ್ತ ಭಾರತವನ್ನು ಕಂಡು ನಿಟ್ಟುಸಿರು ಬಿಟ್ಟ ಜನತೆ ಕಾಂಗ್ರೇಸ್ ಮುಕ್ತ ರಾಜ್ಯ ನಿರ್ಮಿಸಲಾರರೆ…..?

-ಸುನಿಲ್

Tags

Related Articles

Close