ಪ್ರಚಲಿತ

ಅಲ್‍ಖೈದಾ, ಲಷ್ಕರ್ ಉಗ್ರರಿಗಿಂತಲೂ ಡೇಂಜರ್ ಈ ಹಿಂದೂ ಉಗ್ರರು ಎಂದವನಿಗೆ ಪಟ್ಟ ಕಟ್ಟಲು ಈ ಎಲ್ಲಾ ನಾಟಕ ಬೇಕಿತ್ತೇ?

ಅಂದು 2010ನೇ ಇಸವಿ. ಆಗಿನ ಅಮೆರಿಕಾದ ವಿದೇಶಾಂಗ ಸಚಿವೆ ಹಿಲರಿ ಕ್ಲಿಂಟನ್ ಭಾರತಕ್ಕೆ ಬಂದಿದ್ದರು. ಇವರ ಜೊತೆಗೆ ಅಮೆರಿಕಾದ ರಾಯಭಾರಿ ಟೊಮೋಥಿ ರೊಯ್ಮರ್ ಕೂಡಾ ಆಗಮಿಸಿದ್ದರು. ಆಗ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಹಿಲರಿ ಹಾಗೂ ಟೊಮೋಥಿ ರೊಯ್ಮರ್ ಅವರನ್ನು ಊಟಕ್ಕೆ ಕರೆದಿದ್ದರು. ಈ ಸಂದರ್ಭದಲ್ಲಿ ಅಲ್ಲೇ ವಕ್ಕರಿಸಿದ್ದ ವ್ಯಕ್ತಿಯ ಬಳಿಕೆ ಬಂದ ಟೊಮೋಥಿ ರೊಯ್ಮರ್, ‘ಲಷ್ಕರ್ ಇ ತೊಯ್ಬಾ ಭಯೋತ್ಪಾದಕ ಸಂಘಟನೆ ಬಗ್ಗೆ ನಿಮ್ಮ ಅಭಿಪ್ರಾಯವೇನು’ ಎಂದು ಪ್ರಶ್ನಿಸಿದ್ದರು.

ಇದಕ್ಕೆ ಆ ವ್ಯಕ್ತಿ, ‘ಲಷ್ಕರ್ ವಿಷಯ ಬಿಡಿ ಸರ್, ಭಾರತದಲ್ಲಿ ಅದಕ್ಕಿಂತ ಭಯಾನಕವಾದುದು ಹಿಂದೂ ಭಯೋತ್ಪಾದನೆ’ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ.. ಈ ಮಾತನ್ನು ಕೇಳಿ ಔಹಾರಿದ್ದ ಟೊಮೋಥಿ ರೊಯ್ಮರ್ ಈ ಮನುಷ್ಯನಲ್ಲಿ ಮಾತಾಡುವುದೇ ಬೇಡ ಎಂದು ಮತ್ತೆಂದೂ ಮಾತಾಡಲಿಲ್ಲ. ಆದರೆ ಇದೇ ಮನುಷ್ಯನಿಗೆ ಪಟ್ಟ ಕಟ್ಟಲು ನಡೆಸುತ್ತಿರುವ ನಾಟಕಕ್ಕೆ ನಿಜವಾಗಿಯೂ ಆಸ್ಕರ್ ಪ್ರಶಸ್ತಿ ಕೊಡಬೇಕು..

ಈ ರೀತಿ ವಿವಾದಾತ್ಮಕವಾಗಿ ಟೊಮೋಥಿ ರೊಯ್ಮರ್ ಬಳಿ ಉತ್ತರ ಹೇಳಿದ್ದ ಮಹಾನುಭಾವ ಯಾರು ಗೊತ್ತೇ? ಅದು ಬೇರ್ಯಾರೂ ಅಲ್ಲ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ. ಇಂಥಾ ಮನುಷ್ಯನನ್ನು ಇಂದು ಕಾಂಗ್ರೆಸ್ ಅಧ್ಯಕ್ಷನನ್ನಾಗಿ ಮಾಡಿದರೆ ಹಿಂದೂಗಳಾದವರ ಓಟು ಬಿದ್ದೀತೇ? ಹಿಂದೂಗಳು ಓಟು ಹಾಕಲು ಅವರೇನು ಅಷ್ಟೊಂದು ಮೂರ್ಖರೇ? ಸ್ವಾಭಿಮಾನಿ ಹಿಂದೂಗಳು ಖಂಡಿತಾ ಓಟು ಹಾಕಲಾರರು. ಭಾರತವನ್ನು ಕಾಂಗ್ರೆಸ್ ಮುಕ್ತ ರಾಷ್ಟ್ರವನ್ನಾಗಿಸಲು ಸ್ವತಃ ಸೋನಿಯಾ ಗಾಂಧಿ ಮಾಡುತ್ತಿರುವ ಈ ಪ್ರಯತ್ನಕ್ಕೆ ಖಂಡಿತಾ ಭೇಷ್ ಅನ್ನಲೇಬೇಕು.

ಹೌದು ರಾಹುಲ್ ಗಾಂಧಿಯನ್ನು ಕಾಂಗ್ರೆಸ್‍ನ ಅಧ್ಯಕ್ಷರನ್ನಾಗಿ ಮಾಡಲು ಸೋನಿಯಾ ಗಾಂಧಿ ಪಟಲಾಂ ಒಂದು ನಾಟಕವಾಡಿದೆ. ಅದೇ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಲು ಯಾರಿಗೆ ಇಷ್ಟವಿದೆಯೋ ಅವರಿಗೆಲ್ಲಾ ನಾಮಪತ್ರ ಸಲ್ಲಿಸಲು ಆಹ್ವಾನಿಸಲಾಗಿದೆ. ಡಿಸೆಂಬರ್ 4ಕ್ಕೆ ಈ ನಾಮಪತ್ರ ಸಲ್ಲಿಸುವ ನಾಟಕ ನಡೆಯಲಿದೆ. ಆದರೆ ಗಮ್ಮತ್ತಿನ ವಿಷಯ ಏನೆಂದರೆ ಈ ನಾಮಪತ್ರ ಸಲ್ಲಿಸಲು ಕಾಂಗ್ರೆಸ್‍ನಿಂದ ಯಾರೂ ಕೂಡಾ ಮುಂದೆ ಬಂದಿಲ್ಲ.

ಇವರೆಲ್ಲಾ ಯಾಕೆ ಮುಂದೆ ಬಂದಿಲ್ಲ ಎನ್ನುವುದನ್ನು ಮತ್ತೊಮ್ಮೆ ವಿವರಿಸಬೇಕಿಲ್ಲ. ಆದ್ದರಿಂದ ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುವುದು ಖಚಿತವಾಗಿದೆ. ಡಿಸೆಂಬರ್ 4ರ ಸೋಮವಾರ ದೆಹಲಿಯಲ್ಲಿರುವ ಪಕ್ಷದ ಮುಖ್ಯ ಕಚೇರಿಯಲ್ಲಿ ಎಐಸಿಸಿ ಉಪಾಧ್ಯಕ್ಷರಾಗಿರುವ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸಲಿದ್ದಾರೆ. ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾದರೆ ಮುಂದೇನಾಗಬಹುದು ಎನ್ನುವುದೇ ಸದ್ಯಕ್ಕಿರುವ ಕುತೂಹಲ.

ಕಾಂಗ್ರೆಸ್ ಅಧ್ಯಕ್ಷರನ್ನಾಗಿ ರಾಹುಲ್ ಗಾಂಧಿಯವರನ್ನು ನೇಮಿಸಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಆರಂಭದಲ್ಲೇ ನಿರ್ಣಯ ತೆಗೆದುಕೊಳ್ಳಲಾಗಿತ್ತು. ನವದೆಹಲಿಯಲ್ಲಿರುವ 10 ಜನಪಥ್‍ನಲ್ಲಿರುವ ಸೋನಿಯಾ ಗಾಂಧಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದ ಮೇಲೆ ಈ ನಾಮಪತ್ರದ ನಾಟಕ ಬೇಕಿತ್ತೇ ಎನ್ನುವ ಬಗ್ಗೆ ಪ್ರಶ್ನೆ ಆರಂಭವಾಗಿದೆ.

ಕಾಂಗ್ರೆಸ್ ಪಕ್ಷದ ಅಧ್ಯಕ್ಷೀಯ ಚುನಾವಣೆಗೆ ಸಂಬಂಧಿಸಿದಂತೆ ಡಿಸೆಂಬರ್ 1ರಂದು ಅಧಿಸೂಚನೆ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಸಲು ಡಿಸೆಂಬರ್ 4 ಕೊನೆಯ ದಿನವಾಗಿದ್ದು, 16ರಂದು ಮತದಾನ ನಡೆದು ಡಿಸೆಂಬರ್ 19ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಆದರೆ ರಾಹುಲ್ ಗಾಂಧಿ ಅವಿರೋಧವಾಗಿ ಆಯ್ಕೆಯಾಗುವುದರಿಂದ ಯಾರೂ ಕೂಡಾ ನಾಮಪತ್ರ ಸಲ್ಲಿಸಲು ಮುಂದೆ ಬರುವುದಿಲ್ಲ.

ಕಾಂಗ್ರೆಸ್‍ನಲ್ಲಿ ತಾಯಿ ಮಗ ಮಾತ್ರ ಪಕ್ಷದ ಅಧ್ಯಕ್ಷರಾಗಲು ಸಾಧ್ಯ. ಹೌದು ಈ ಮಾತನ್ನು ಬಿಜೆಪಿಗರಾಗಲೀ ಅಥವಾ ಬೇರೆ ಪಕ್ಷದವರಾಗಲೀ ಕೇಳಿದ್ದಲ್ಲ, ಬದಲಿಗೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮಣಿಶಂಕರ್ ಅಯ್ಯರ್ ಅವರೇ ಹೇಳಿದ್ದರು. ರಾಹುಲ್ ಗಾಂಧಿ ಅವರು ತಾವು ಪಕ್ಷದ ಅಧ್ಯಕ್ಷನಾಗಲು ಸಿದ್ಧ ಎಂಬ ಹೇಳಿಕೆಯನ್ನೂ ಈಗಾಗಲೆ ನೀಡಿಯಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಬೇಕಾದರೆ ಚುನಾವಣೆ ಮಾಡಬೇಕಾಗುತ್ತದೆ.

ಆದರೆ, ಅವರ ವಿರುದ್ಧ ನಿಲ್ಲುವಂಥ ವ್ಯಕ್ತಿಯೇ ಇಲ್ಲವೆಂದ ಮೇಲೆ ಚುನಾವಣೆ ನಡೆಸುವುದಾದರೂ ಯಾಕೆ ಎಂದು ಮಣಿಶಂಕರ್ ಅಯ್ಯರ್ ಪ್ರಶ್ನಿಸಿದ್ದು, ಭಾರೀ ಚರ್ಚೆಗೆ ಕಾರಣವಾಗಿತ್ತು. ಮಣಿಶಂಕರ್ ಅಯ್ಯರ್, ಮಲ್ಲಿಕಾರ್ಜುನ ಖರ್ಗೆ, ಕಪಿಲ್‍ಸಿಬಲ್, ದಿಗ್ವಿಜಯ ಸಿಂಗ್, ಪಿ. ಚಿದಂಬರಂನಂಥಾ ನಾಯಕರಿಗೆ ಕಾಂಗ್ರೆಸ್ ಅಧ್ಯಕ್ಷರಾಗುವ ಅರ್ಹತೆ ಇದ್ದರೂ ವಯಸ್ಸಿನಲ್ಲೇ ಚಿಕ್ಕವನಾದ, ಏನೂ ಅನುಭವವಿಲ್ಲದ, ಸರಿಯಾಗಿ ಮಾತಾಡಲೂ ಬಾರದ, ಕಾಂಗ್ರೆಸ್ ಪಕ್ಷದ ಸೋಲಿಗೆ ಪರೋಕ್ಷವಾಗಿ ಕಾರಣವಾಗುವ ರಾಹುಲ್ ಗಾಂಧಿಯನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದರೆ ಸ್ವತಃ ಆ ಪಕ್ಷದ ಒಳಗಡೆಯೇ ಭಿನ್ನಮತ ಭುಗಿಲೇಳುವ ಸಾಧ್ಯತೆ ಖಂಡಿತಾ ಇದೆ.

ರಾಹುಲ್ ಗಾಂಧಿ ಕಾಂಗ್ರೆಸ್‍ನ ಅಧ್ಯಕ್ಷರಾದ ಬಳಿಕ ಮುಂದಿನ ಚುನಾವಣೆಯಲ್ಲಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸುವ ಸಾಧ್ಯತೆಯೂ ಇದೆ. ಒಂದು ವೇಳೆ ರಾಹುಲ್‍ನನ್ನು ಪ್ರಧಾನಿಯನ್ನಾಗಿಸಿದರೆ ಪ್ರಧಾನಿಯಾಗುವುದು ತುಂಬಾ ಸುಲಭವಾಗಿದೆ. ಯಾಕೆಂದರೆ ರಾಹುಲ್ ಗಾಂಧಿ ಇದುವರೆಗೆ ಮಾಡಿರುವ ಘನಕಾರ್ಯಗಳೇನು ಎನ್ನುವುದು ಎಲ್ಲರಿಗೂ ತಿಳಿದ ವಿಚಾರವಾಗಿದೆ.

ರಾಹುಲ್ ಗಾಂಧಿಯ ಬಾಲಿಶತನದ ಹೇಳಿಕೆಗಳೇ ಇಂದು ಬಿಜೆಪಿ ತನ್ನ ಅಸ್ತ್ರವನ್ನಾಗಿಸಿ ತನ್ನ ಪರ ಪ್ರಚಾರ ಮಾಡುತ್ತಿದೆ. ರಾಹುಲ್ ಗಾಂಧಿಯ ವಿವಾದಾತ್ಮಕ ಹೇಳಿಕೆಗಳತ್ತ ಕಣ್ಣಾಯಿಸಿದಾಗಲೂ ಇವರು ಪಕ್ಷದ ಅಧ್ಯಕ್ಷರಾದರೆ ಪಕ್ಷಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಆದರೂ ಸೋನಿಯಾ ಗಾಂಧಿ ತನ್ನ ಪುತ್ರ ವ್ಯಾಮೋಹದಿಂದ ಆತನಿಗೇ ಪಟ್ಟಕಟ್ಟಿ ಉಳಿದ ಕಾಂಗ್ರೆಸಿಗರನ್ನು ತನ್ನ ಗುಲಾಮರನ್ನಾಗಿ ಮಾಡುವ ಕೆಲಸವೊಂದು ಯೋಜನಾಭದ್ಧವಾಗಿ ನಡೆಯುತ್ತಿದೆ.

ಕಾಂಗ್ರೆಸ್‍ಗೆ ಮುಳುವಾದ ರಾಹುಲ್ ಗಾಂಧಿಯ ವಿವಾದಾತ್ಮಹ ಹೇಳಿಕೆಗಳು;

– ಜಾಮತ್ ಉಲ್ ದಾವಾ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ, ಮುಂಬೈ ಸ್ಫೋಟದ ರೂವಾರಿ, ಲಷ್ಕರ್ ಇ ತೊಯ್ಬಾ ಸ್ಥಾಪಕರಲ್ಲೊಬ್ಬನಾದ ಹಫೀಜ್ ಸಯೀದ್‍ನನ್ನು ಪಾಕ್ ಬಿಡುಗಡೆ ಮಾಡಿದೆ. ಇದನ್ನು ಮೋದಿ ಸರ್ಕಾರದ ವೈಫಲ್ಯ ಎಂದಿರುವ ರಾಹುಲ್ ಗಾಂಧಿ, ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭೇಟಿ ಮತ್ತು ಅಪ್ಪುಗೆಗಳು ಯಾವುದೇ ಪರಿಣಾಮ ಬೀರಿಲ್ಲ. ಈ ಅಪ್ಪುಗೆ ಶೈಲಿ ವೈಫಲ್ಯವಾಗಿದೆ ಎಂಬುದನ್ನೇ ವಿಭಿನ್ನವಾಗಿ hugಠಿಟomಚಿಛಿಥಿ ಎಂದು ಕರೆದು ಟ್ವೀಟ್ ಮಾಡಿ ವಿವಾದ ಸೃಷ್ಟಿಸಿದ್ದರು..

-2010ರಲ್ಲಿ, ಆಗಿನ ಅಮೆರಿಕ ವಿದೇಶಾಂಗ ಸಚಿವೆ ಹಿಲರಿ ಕ್ಲಿಂಟನ್ ಭಾರತಕ್ಕೆ ಬಂದಿದ್ದರು. ಆಗ ಭಾರತದ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್, ಹಿಲರಿಯವರನ್ನು ಊಟಕ್ಕೆ ಆಹ್ವಾನಿಸಿದ್ದರು. ಈ ಸಂದರ್ಭದಲ್ಲಿ ಹಾಜರಿದ್ದ ರಾಹುಲ್ ಗಾಂಧಿ ಅವರನ್ನು ಅಮೆರಿಕ ರಾಯಭಾರಿ ಟೊಮೋಥಿ ರೊಯ್ಮರ್, `ಲಷ್ಕರ್ ಇ ತೊಯ್ಬಾ ಭಯೋತ್ಪಾದಕ ಸಂಘಟನೆ ಬಗ್ಗೆ ನಿಮ್ಮ ಅಭಿಪ್ರಾಯವೇನು’ ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರ ನೀಡಿದ್ದ ರಾಹುಲ್, ‘ಲಷ್ಕರ್ ವಿಷಯ ಬಿಡಿ, ಭಾರತದಲ್ಲಿ ಅದಕ್ಕಿಂತ ಭಯಾನಕವಾದುದು ಹಿಂದೂ ಭಯೋತ್ಪಾದನೆ’ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದು ವಿಕಿಲೀಕ್ಸ್ ಮೂಲಕ ಬಯಲಾಗಿತ್ತು.

– ಕಾಂಗ್ರೆಸ್ ಪಕ್ಷದಲ್ಲಿ ವಂಶಪಾರಂಪರ್ಯವಾಗಿ ಆಡಳಿತ ನಡೆಯುತ್ತಿರುವ ಬಗ್ಗೆ ಅಮೆರಿಕದಲ್ಲಿರುವ ಭಾರತೀಯ ಪ್ರಜೆಯೊಬ್ಬರು ಕೇಳಿದಾಗ, ಭಾರತದಲ್ಲಿ ವಂಶಪಾರಂಪರ್ಯವೆಂಬುದು ರಾಜಕೀಯ, ಸಿನೆಮಾ, ವಾಣಿಜ್ಯ ಮುಂತಾದ ರಂಗಗಳಲ್ಲಿ ಅಡಕವಾಗಿದೆ, ಇದೇನು ಹೊಸದಲ್ಲ. ಅಖೇಲೇಶ್ ಯಾದವ್, ಅಭಿಷೇಕ್ ಬಚ್ಚನ್, ಕರುಣಾನಿಧಿ ಮಗ ಸ್ಟಾಲಿನ್ ಇವರೆಲ್ಲ ವಂಶಪಾರಂಪರ್ಯವಾಗಿ ಮುಂದುವರಿದಿದ್ದಾರೆ. ಭಾರತದಲ್ಲಿ ಇದು ಸರ್ವೇಸಾಮಾನ್ಯ. ಹೀಗಾಗಿ, ಕೇವಲ ನನ್ನನ್ನು ಮಾತ್ರ ಗುರಿ ಮಾಡಬೇಡಿ ಎಂದು ನಗುನಗುತ್ತ ರಾಹುಲ್ ಉತ್ತರ ನೀಡಿದ್ದರು.

– ಗುಜರಾತ್ ಚುನಾವಣೆಯ ಪ್ರಚಾಋಕ್ಕೆ ಹೋಗಿದ್ದ ರಾಹುಲ್ ಗಾಂಧಿಯವರು ಮಾತತಿನ ಭರದಲ್ಲಿ ಆರೆಸ್ಸೆಸ್‍ನಲ್ಲಿ ಮಹಿಳೆಯರು ಚಡ್ಡಿ ಹಾಕುವುದನ್ನು ನೋಡಿದ್ದೀರಾ ಎಂದು ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದರು.

-ಉತ್ತರ ಪ್ರದೇಶದ ಜನರು ಭಿಕ್ಷೆ ಬೇಡಲು ದೆಹಲಿಗೆ ಹೋಗುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ರಾಹುಲ್ ಗಾಂಧಿ ಕೊನೆಗೆ ಅದನ್ನು ಸಮರ್ಥಿಸಿಕೊಂಡಿದ್ದರು.

-ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರನ್ನು ಕೊಂದಿದ್ದು ಆರ್ ಎಸ್ ಎಸ್ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆ ಸಂಬಂಧ ಕ್ಷಮೆ ಕೋರುವಂತೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ವಿಷಯ ವಿಚಾರಣೆಯಲ್ಲಿರುವುದರಿಂದ ಆರೆಸ್ಸೆಸ್ ವಿರುದ್ಧದ ಅವರ ಹೇಳಿಕೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ವಿಷಯ ಏನಿದೆ ಎಂಬುದನ್ನು ರಾಹುಲ್ ಸಾಬೀತು ಪಡಿಸಬೇಕು ಎಂದು ಕೋರ್ಟ್ ತಾಕೀತು ಮಾಡಿತ್ತು.

-ಅನಿವಾಸಿ ಭಾರತೀಯರು ಭಾರತದ ಬೆನ್ನುಲು ಇದ್ದಂತೆ. ಮಹಾತ್ಮಾ ಗಾಂಧಿ, ಜವಾಹರ್ ಲಾಲ್ ನೆಹರೂ, ಬಾಬಾ ಅಂಬೇಡ್ಕರ್, ಮೌಲಾನಾ ಆಝಾದ್‍ರಂತಹ ಸ್ವಾತಂತ್ರ್ಯ ಹೋರಾಟಗಾರರು ಅನಿವಾಸಿ ಭಾರತೀಯರು. ಅನಿವಾಸಿ ಭಾರತೀಯರಿಂದಲೇ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಎಂದು ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದರು.

ರಾಹುಲ್ ಗಾಂಧಿ ಇದೇ ತರ ಹಲವಾರು ವಿವಾದಾತ್ಮಕ ಹೇಳಿಕೆ, ಬಾಲಿಷತನ ವರ್ತನೆ, ಜ್ಞಾನವಿಲ್ಲದ ಭಾಷಣ ಇತ್ಯಾದಿಗಳಿಂದ ವಿವಾದಕ್ಕೊಳಪಟ್ಟು ಟ್ರೋಲ್‍ಗೆ ಒಳಗಾಗುತ್ತಲೇ ಇದ್ದಾರೆ.

ಕಾಂಗ್ರೆಸ್ ಮುಖಂಡರೇ ತಾಖತ್ ಇದ್ದರೆ ರಾಹುಲ್ ವಿರುದ್ಧ ಸ್ಪರ್ಧಿಸಿ…

ತಾವು ಚುನಾವಣೆಗೆ ಸಿದ್ಧ ಎಂದು ರಾಹುಲ್ ಗಾಂಧಿ ಹೇಳಿದ್ದಾರೇನೋ ನಿಜ. ಆದರೆ, ಅವರ ವಿರುದ್ಧ ಸ್ಪರ್ಧಿಸುವವರು ಯಾರು? ಅವರ ವಿರುದ್ಧ ನಾಮಪತ್ರ ಸಲ್ಲಿಸುವ ಧೈರ್ಯವಾದರೂ ಕಾಂಗ್ರೆಸ್ ಪಕ್ಷದಲ್ಲಿ ಯಾವ ನಾಯಕನಿಗಿದೆ? ಕಾಂಗ್ರೆಸ್‍ನ ಉಳಿದ ನಾಯಕರಿಗೆ ನಿಜವಾಗಿಯೂ ತಾಖತ್ ಇದ್ದರೆ ರಾಹುಲ್ ಗಾಂಧಿಯ ವಿರುದ್ಧ ಸ್ಪರ್ಧಿಸಲಿ. ಆದರೆ ಕಾಂಗ್ರೆಸ್‍ನಲ್ಲಿ ಗುಲಾಮಗಿರಿ ಇರುವುದರಿಂದ ಅದೆಲ್ಲಾ ಖಂಡಿತಾ ಸಾಧ್ಯವಿಲ್ಲ ಎನ್ನುವುದನ್ನು ಖಂಡಿತಾ ಅರ್ಥ ಮಾಡಿಕೊಳ್ಳಬಹುದು.

ಚೇಕಿತಾನ

Tags

Related Articles

Close