ಪ್ರಚಲಿತ

ಅವಮಾನವನ್ನು ತಡೆಯಲಾರದೇ, ರಾಹುಲ್ ಗಾಂಧಿಯ ಗ್ಯಾಂಗ್ ‘ಮೋದಿ ಮೋದಿ’ ಎಂದ ವ್ಯಾಪಾರಿಗಳ ಮೇಲೆ ದಾಳಿ ನಡೆಸಿದ್ದು ಹೇಗೆ ಗೊತ್ತೇ?

ಮೋದಿ ಎಲ್ಲೇ ಹೋಗಲಿ! ಯಶಸ್ಸನ್ನು ಹೊರತುಪಡಿಸಿ ಬೇರೇನೂ ಕಾಣುವುದಿಲ್ಲ! ಆದರೆ, 47 ವರ್ಷದ ರಾಹುಕ್ ಎಲ್ಲೇ ಹೋಗಲಿ, ‘ಸೋಲು’ ಬೆಂಬಿಡದ ಭೂತವಾಗಿ ಕಾಡುತ್ತದೆ!

ಈ ‘ಸೋಲು’ ಎಂಬುವುದು ಬಹುಷಃ ರಾಹುಲ್ ಗಾಂಧಿಯ ಸಂಗಾತಿಯಾಗಿಬಿಟ್ಟಿದೆ! ಅಷ್ಟಾದರೂ ಸಹ, ತನ್ನ ಸೋಲಿಗೆ ಬೇರೆಯವರನ್ನು ದೂಷಿಸುವ
ಕಲೆಯಲ್ಲಿ ರಾಹುಲ್ ಪರಿಣಿತನೆಂಬುದು ಮತ್ತೆ ಸಾಬೀತಾಗಿದೆ! ರಾಹುಲ್ ನ ಇತ್ತೀಚೆಗಿನ ಗುಜರಾತ್ ಭೇಟಿ ಉತ್ತಮ ರೀತಿಯಲ್ಲಿ ಸೋಲುಂಡಿದೆ!

‘ಕಪ್ಪು ಹಣ ವಿರೋಧಿ’ ದಿವಸ, ಕತರಾಗಮ್ ಕೈಗಾರಿಕಾ ಪ್ರದೇಶದಲ್ಲಿ, ನಿರ್ಮಾಣ್ ಇಂಡಸ್ಟ್ರೀಸ್ ಕಂಪೆನಿಯ ಮಾಲೀಕರು ಹಾಗೂ ಕಾರ್ಮಿಕರ ಬೆಂಬಲ ಗಳಿಸಿಕೊಳ್ಳುವಾಸೆಯಿಂದ ರಾಹುಲ್ ಗಾಂಧಿ ಭೇಟಿ ನೀಡಲು ನಿರ್ಧರಿಸಿದ್ದರು! ಆದರೆ… ವ್ಯಾಪಾರಿಗಳೆಲ್ಲ ‘ಮೋದಿ ಮೋದಿ’ ಎಂದು ಘರ್ಜಿಸಿದ ರೀತಿಗೆ ಪಪ್ಪು ನಾಚಿಕೆಯಿಂದ ಪರಾರಿಯಾಗಿದ್ದಾರೆ!

ಬಂದಿದ್ದು ರಾಹುಲ್! ಬೆಂಬಲ ಗಳಿಸಿದ್ದು ಮೋದಿ!

‘ಅತಿಥಿ ದೇವೋ ಭವ’ ಎಂಬ ಘೋಷವಾಕ್ಯವನ್ನು ಭಾರತೀಯರು ಸದಾಕಾಲ ಸ್ಮರಿಸುವಂತೆ, ಗುಜರಾತಿನ ವ್ಯಾಪಾರಿಗಳು ರಾಹುಲ್ ಗಾಂಧಿ ಭೇಟಿ ಕೊಟ್ಟಾಗ ಚೆನ್ನಾಗಿಯೇ ಸೇವೆ ಮಾಡಿದ್ದಾರೆ! ಜಿಎಸ್ ಟಿ ತೆರಿಗೆಯನ್ನು ಜಾರಿಗೊಳಿಸಿದಾಗಿನಿಂದಲೂ ಸಹ, ಕಾಂಗ್ರೆಸ್ ಗೆ ಶ್ರೀಸಾಮಾನ್ಯನ ಬಗ್ಗೆ ರಾತ್ರಿ ಕಣ್ಣಿಗೆ ನಿದ್ದೆ ಇಲ್ಲದಂತೆ ಯೋಚಿಸಿದ್ದರ ಪರಿಣಾಮ, ಜಿಎಸ್ ಟಿಯಿಂದ ಚಿಕ್ಕಪುಟ್ಟ ವ್ಯಾಪಾರಿಗಳಿಗೆ ತೊಂದರೆಯಾಗಿದೆಯೆಂದು ಅರಚುತ್ತಲೇ ಬಂದಿತ್ತಷ್ಟೇ! ಆದರೆ,
ಗುಜರಾತ್ ನ ವ್ಯಾಪಾರಿಗಳು ಕಾಂಗ್ರೆಸ್ ಉಪಾಧ್ಯಕ್ಷನನ್ನು ನೋಡಿದ ಕೂಡಲೇ ‘ಮೋದಿ ಮೋದಿ’ಯೆಂದು ಜಪಿಸಿದ ಪರಿಣಾಮ ಮೋದಿಯಲೆಯಲ್ಲಿ ರಾಹುಲ್ ಗಾಂಧಿ ತೇಲಿಬಿಟ್ಟಿದ್ದಾರೆ!

ಅವಮಾನ ತಡೆಯಲಾರದೇ ಕಾಂಗ್ರೆಸ್ ನ ಕಾರ್ಯಕರ್ತರು ಹಲ್ಲೆಗಿಳಿದರು!

ಸತ್ಯ! ಪ್ರಜಾಪ್ರಭುತ್ವ ಅಪಾಯದಲ್ಲಿದೆ! ಅದರ ಕ್ರೆಡಿಟ್ಟುಗಳೆಲ್ಲ ರಾಹುಲ್ ಗೇ ಸೇರಬೇಕೆನ್ನುವುದರಲ್ಲಿ ಸಂಶಯವಿಲ್ಲ! ಪ್ರಜಾಪ್ರಭುತ್ವದಲ್ಲಿ, ಅವಮಾನವನ್ನೂ ಸಹಿಸಿಕೊಳ್ಳಬೇಕು, ಹೊಗಳಿಕೆಯನ್ನೂ ಸಮಚಿತ್ತದಿಂದಲೇ ನೋಡಬೇಕು! ಕಾಂಗ್ರೆಸ್ ನಾಯಕರಿಂದ ಇದನ್ನು ನಿರೀಕ್ಷಿಸುವುದು ನಮ್ಮ ಮೂರ್ಖತನವಾದರೂ ಸಹ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಅಭಿಪ್ರಾಯವನ್ನು ವ್ಯಕ್ತಪಡಿಸಲು ಸಮಾನ ಹಕ್ಕುಗಳಿವೆ ಎಂಬುದನ್ನು ಮರೆತಂತಿದೆ ಕಾಂಗ್ರೆಸ್!

ಮೋದಿಯನ್ನು ಜಪಿಸಿದವನ ಮೇಲೆ ದಾಳಿ ನಡೆಸಿದ ಅಸ್ಲಾಮ್ ಸೈಕಲ್ ವಾಲಾ ನ ಗ್ಯಾಂಗ್!

ಕೆಳಗಿನ ವೀಡಿಯೋ ನೋಡಿದರೆ ನಿಮಗರ್ಥವಾದೀತು! ಪ್ರಜಾಪ್ರಭುತ್ವ ಕಾಲಕಸವಾಗಿರುವುದು ಯಾವ ಪಕ್ಷಕ್ಕೆ ಎಂದು!

ಸೂರತ್ ನಲ್ಲಿ ರಾಹುಲ್ ನ ಸುಳ್ಳಿನ ಸರಮಾಲೆ!

ಸಾರ್ವಜನಿಕವಾಗಿ ಮಾತನಾಡುವಾಗ ಪ್ರಜ್ಞೆಯಿರಬೇಕು ಒಬ್ಬ ನಾಗರಿಕನಿಗೆ! ಮಾತನಾಡಲು ಬರುತ್ತದೆಂಬುದನ್ನೇ ಧನಾತ್ಮಕವಾಗಿ ತೆಗೆದುಕೊಂಡರೆ ರಾಹುಲ್ ಗಾಂಧಿಯಾಗುತ್ತೀರಿ ಅಷ್ಟೇ!

“ನೋಟು ಅಮಾನ್ಯೀಕರಣ ಹಾಗೂ ಜಿಎಸ್ ಟಿ ತೆರಿಗೆ ಸೂರತ್ ನ ಅಭಿವೃದ್ಧಿಯ ಕಾಲುಗಳನ್ನೇ ಮುರಿದಿದೆ ಎಂದು ಜನರು ಹೇಳಿದರು ನನಗೆ. ಕೈಗಾರಿಕೆಗಳು
ಈ ಎರಡು ಮೋದಿಯ ನಿರ್ಧಾರಗಳಿಂದ ಅಳಿವಿನಂಚಿಗೆ ಬಂದಿದೆ ಎಂಬ ಆರೋಪವೊಂದು ಕೇಳಿಬಂತು. ಪ್ರಜೆಗಳು ಅಪಾಯಕ್ಕೀಡು ಮಾಡಲ್ಪಟ್ಟಿದ್ದಾರೆಂದು ಹೇಳಿದರು. ಇದು ಬಿಜೆಪಿ ಹಾಗೂ ಕಾಂಗ್ರೆಸ್ ನ ನಡುವಿನ ಭಿನ್ನಾಭಿಪ್ರಾಯದ ಬಗೆಯಲ್ಲ. ಬದಲಿಗೆ, ಭಾರತದ ಆರ್ಥಿಕ ಸಧೃಢತೆಯ ಬಗ್ಗೆ!”

ವ್ಹಾ! ಎಂತಹ ಘೋಷವಾಕ್ಯ!

ರಾಹುಲ್ ಗಾಂಧಿಯ ಹೇಳಿಕೆಗೆ ವ್ಯಾಪಾರಿಯೊಬ್ಬ ತಿರುಗೇಟು ನೀಡಿದ್ದು ಹೇಗೆ ಗೊತ್ತಾ?!

“20 ವರ್ಷಗಳ ಹಿಂದೆ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ಈ ಪ್ರದೇಶದಲ್ಲಿ ಪ್ರತಿದಿನವೂ ಹಿಂಸಾಚಾರವಾಗುತ್ತಿತ್ತು! ಮಾಫಿಯಾ ವೇ ಬದುಕಾಗಿತ್ತು ಇಲ್ಲಿನ ಜನರಿಗೆ! ಆದರೆ, ಯಾವಾಗ ಮೋದಿ ಅಧಿಕಾರಕ್ಕೆ ಬಂದರೋ, ಮಾಫಿಯಾ ನಿಂತಿತು. ಹಿಂಸಾಚಾರವೂ ಕೊನೆಯಾಯಿತು. ವ್ಯಾಪಾರಿಗಳು ನಿಧಾನವಾಗಿ ದೇಶದೆಲ್ಲೆಡೆಯಿಂದ ಲಾಭದ ಕನಸನ್ನಿಟ್ಟು ಇಲ್ಲಿ ವ್ಯವಹರಿಸತೊಡಗಿದರು! ಇಷ್ಟಾದ ಮೇಲೂ, ಎಷ್ಟೋ ವರ್ಷಗಳ ನಂತರ ಈ ರಾಹುಲ್ ಇದ್ದಕ್ಕಿದ್ದ ಹಾಗೆ ಬಂದು ಜಿಎಸ್ ಟಿ ವಿರುದ್ಧ ಜನರನ್ನು ಎತ್ತಿಕಟ್ಟಲು ತೊಡಗಿದ್ದಾನೆ.” ಇದು ಗುಜರಾತ್ ವ್ಯಾಪಾರಿಗಳ ಮಾತು!

ಇಷ್ಟಾದರೂ ಸುಳ್ಳನ್ನೇ ಟ್ವೀಟ್ ಮಾಡಿದ ರಾಹುಲ್!!

ಅವಮಾನವನ್ನೆಂತೂ ತಡೆಯಲಿಕ್ಕಾಗಲಿಲ್ಲ! ದಾರಿಯಿರುವುದದೊಂದೇ! ಟ್ವೀಟಿಸುವುದು!

” ನೋಟು ನಿಷೇಧವೊಂದು ದುರಂತ! ಪ್ರಧಾನಿ ಮೋದಿಯಿಂದ ಅದೆಷ್ಟೋ ಜನರ ಬದುಕು ನಾಶವಾಗಿ ಹೋಗಿದೆ! ಅಂತಹ ಭಾರತೀಯರ ಪರವಾಗಿ ನಾವು ನಿಲ್ಲುತ್ತೇವೆ!”

ಮತ್ತದೇ ಸುಳ್ಳನ್ನೇ ಟ್ವೀಟಿಸಿದ ರಾಹುಲ್ ಗೆ ಮಾತ್ರ ಆಡಿದ ಮಾತಿಗೆ ಯಾವ ಆಧಾರವನ್ನೂ ಕೊಡಲಿಕ್ಕಾಗಲಿಲ್ಲವಷ್ಟೇ!

ಮೊನ್ನೆಯಷ್ಟೇ, ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ ವೃದ್ಧರೊಬ್ಬರ ಭಾವಚಿತ್ರವನ್ನು ಟ್ವೀಟಿಸಿ, ಡಿಮಾನಿಟೈಸೇಷನ್ ನಿಂದ ಇವರ ಸಂತೋಷವೇ ಬೀದಿಪಾಲಾಗಿದೆ ಎಂಬುವಂತೆ ಬಿಂಬಿಸಿದ್ದ ರಾಹುಲ್ ಗಾಂಧಿಗೆ ಆ ವೃದ್ಧರ (ನಂದಲಾಲ್) ಪರಿಚಯ)ವೂ ಇರಲಿಲ್ಲ! ಕೊನೆಗೆ, ರಾಹುಲ್ ಗಾಂಧಿಯ ಟ್ವೀಟಿಗೆ ಮಾಧ್ಯಮದೆದುರಿಗೆ ಬಂದು ಸ್ಪಷ್ಟೀಕರಣ ನೀಡಿದ್ದರು ನಂದಲಾಲ್!

ರಾಹುಲ್ ಗಾಂಧಿಗೆ ಏನಾಗಿದೆ?!

ಇಂತದ್ದೊಂದು ಪ್ರಶ್ನೆ ಎಲ್ಲರ ತಲೆಯಲ್ಲಿಯೂ ಕೊರೆಯುತ್ತಿದೆ! Indian National Congress ಎಂಬುದನ್ನು Indian Incorrect English ಆಗಿ
ಬಿಂಬಿಸಲು ಹೊರಟಿದ್ದಾರೆಯೇ?! ಒಮ್ಮೊಮ್ಮೆ ತನ್ನ ನಾಯಿಯ ಬಗ್ಗೆ ಟ್ವೀಟಿಸಿ ‘ನಾನು ಪಿಡಿ! ರಾಹುಲ್ ಗಾಂಧಿಗಿಂತ ಸ್ಮಾರ್ಟ್!’ ಎಂದು ನಾಯಿಯೇ ಟ್ವೀಟ್ ಮಾಡುತ್ತೆ ಎನ್ನುತ್ತಾರೆ! ಒಮ್ಮೊಮ್ಮೆ ಯಾರ್ಯಾರದ್ದೋ ಚಿತ್ರಗಳನ್ನು ಹಾಕಿ ಮೋದಿಯ ನಿರ್ಧಾರ ದುರಂತ ಎನ್ನುತ್ತಾರೆ! “ಸತ್ಯವನ್ನರಿಯದೇ, ಬಡಜನರ ಅಳು ರಾಹುಲ್ ಗಾಂಧಿ ಹಾಗೂ ಆತನ ಕುಟುಂಬಕ್ಕೊಂದು ಹಾಸ್ಯ ಮಾಡುವ ವಸ್ತುವಾಗಿದೆಯೇ?!” ಛೇ!!

– ಪೃಥು ಅಗ್ನಿಹೋತ್ರಿ

Tags

Related Articles

Close