ಕಾಂಗ್ರೆಸ್… ಭಾರತದ ಇತಿಹಾಸದಲ್ಲಿ ದೇಶಪ್ರೇಮಿಗಳು ಎಂದು ನಂಬಿಸಿಕೊಂಡು ದೇಶವಾಸಿಗಳಿಗೆ ಮೋಸ ಮಾಡುತ್ತಾ, ದೇಶವನ್ನು ಕೊಳ್ಳೆ ಹೊಡೆದ ನೀಚ ಪಕ್ಷ. ನಮ್ಮ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷ ಎಂದು ಹೋದಲ್ಲಿ ಬಂದಲ್ಲಿ ಬೊಗಳೆ ಬಿಡುವ ಈ ಪಕ್ಷ ಇಂದು ಹೀನಾಯ ಪರಿಸ್ಥಿತಿಗೆ ತಲುಪಿದೆ. ನೆಹರೂ ಕಾಲದಿಂದಲೂ ದೇಶದ ನೈಜ ಸತ್ವವನ್ನು ಕಳೆದುಕೊಳ್ಳುವಂತೆ ಮಾಡಿ, ದೇಶವನ್ನು ಭಾಗ ಭಾಗವನ್ನಾಗಿ ಮಾಡಿದ ಈ ಕಾಂಗ್ರೆಸ್ಸಿಗರು ಇಂದು ಲೋಕಸಭೆಯಲ್ಲಿ ವಿರೋಧ ಪಕ್ಷಕ್ಕೂ ಲಾಯಕ್ಕಿಲ್ಲದೆ ಒದ್ದಾಡುತ್ತಿದ್ದಾರೆ. ಒಂದು ಕಾಲದಲ್ಲಿ ಓಟು ಸೆಳೆಯುವಲ್ಲಿ ಅಕ್ಷಯ ಪಾತ್ರೆಯಂತಿದ್ದ ಕಾಂಗ್ರೆಸ್ ಇಂದು ಭಿಕ್ಷಾ ಪಾತ್ರೆಗೂ ಕಡೆಯಾಗಿದೆ. ಇದಕ್ಕೆ ಕಾರಣವೊಂದೇ, ಅದು ವಂಶ ಪಾರಂಪರ್ಯ ಆಡಳಿತ…
ವಂಶ ಪಾರಂಪರ್ಯ ಆಡಳಿತದ ದರ್ದು ಇವರಿಗ್ಯಾಕೆ ಬಂದಿದ್ದು..?
ಹೌದು. ಈ ದೇಶದಲ್ಲಿ ಅನೇಕ ರಾಜಕೀಯ ಪಕ್ಷಗಳು ಹಾಗೂ ವ್ಯಕ್ತಿಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಕುಟುಂಬ ರಾಜಕೀಯವನ್ನು ಬಳಸಿಕೊಂಡಿದ್ದಾರೆ. ಹೀಗೆ ಬಳಸಿಕೊಂಡು ಭ್ರಷ್ಟಾಚಾರವನ್ನು ನಡೆಸಿ ತಮ್ಮ ಕುಟುಂಬದ ಹೊಟ್ಟೆಯನ್ನು ದೊಡ್ಡದಾಗಿಸಿಕೊಂಡಿದ್ದಾರೆ. ಇದರ ಬಹುಪಾಲು ಕೀರ್ತಿ ಸಲ್ಲುವುದಿದ್ದರೆ ಅದು ಈ ದೇಶದ ರಾಷ್ಟ್ರೀಯ ಪಕ್ಷ ಕಾಂಗ್ರೆಸ್‍ಗೆ.
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಭಾರತವನ್ನು ಆಕ್ರಮಣಕಾರಿಗಳ ದಾಸ್ಯದಿಂದ ತಪ್ಪಿಸಬೇಕೆಂದು ಹಲವಾರು ಮಾರ್ಗಗಳನ್ನು ತುಳಿದಿದ್ದರು ನಮ್ಮ ಭಾರತ ದೇಶದ ಸ್ವಾತಂತ್ರ್ಯ ಹೋರಾಟಗಾರರು. ಜೀವನ ಹಾಗೂ ಜೀವದ ಹಂಗನ್ನು ತೊರೆದು, ಆಕ್ರಮಣಕಾರಿಗಳಿಗೆ ಸಿಂಹದಂತೆ ಕಾಡಲಾರಂಭಿದರು ನಮ್ಮ ದೇಶದ ಲಕ್ಷ ಲಕ್ಷ ಕ್ರಾಂತಿಕಾರಿಗಳು. ಕ್ರಾಂತಿಕಾರಿಗಳ ಕಿಚ್ಚು ಪಿಸ್ತೂಲ್, ಬಾಂಬ್‍ಗಳಿಂದ ತುಂಬಿ ಹೋಗಿ, ಸೂರ್ಯ ಮುಳುಗದ ಬ್ರಿಟಿಷ್ ಸಾಮ್ರಾಜ್ಯಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದರು. ಅನೇಕ ಕ್ರಾಂತಿಕಾರಿಗಳನ್ನು ಜೈಲಿಗಟ್ಟಿದ್ದರು. ಮತ್ತೆ ಕೆಲವರಿಗೆ ಗಲ್ಲು ಶಿಕ್ಷೆಯೂ ಆಗಿತ್ತು. ನಂತರ ಕೆಲವರೂ, ತಾವು ದೇಶಪ್ರೇಮಿಗಳೆಂಬಂತೆ ಪೋಸುಕೊಟ್ಟು ಶಾಂತಿ ಶಾಂತಿ ಎಂದು ಬೊಬ್ಬಿರಿದು ಯಾವುದೇ ಪ್ರಾಣಾಪಾಯಕ್ಕೆ ಸಿದ್ಧರಾಗದೆ ಅಹಿಂಸಾ ಮಾರ್ಗವನ್ನು ತುಳಿದ ಮತ್ತೊಂದು ತಂಡ.
ಹೀಗೆ ಶಾಂತಿ, ಅಹಿಂಸೆ ಎಂದು ತೋರಿಸಿಕೊಡುತ್ತಿದ್ದ ಈ ನಾಟಕ ತಂಡದ ಮೇಲೆ ಬ್ರಿಟಿಷರಿಗೂ ಬಲು ಪ್ರೀತಿ. ತಮ್ಮ ಮೇಲೆ ಮಾರಣಾಂತಿಕ ದಾಳಿಗಳನ್ನು ಮಾಡದ, ಕೇವಲ ಉಪವಾಸ ಕುಳಿತು ತಮ್ಮನ್ನು ಪ್ರಶ್ನಿಸುತ್ತಿರುವ ಈ ತಂಡದ ಮೇಲೆ ಸಹಜವಾಗಿಯೇ ಬ್ರಿಟಿಷರಿಗೆ ಮಮತೆಯಿತ್ತು. ಈ ಕಾರಣದಿಂದಲೇ ಕಾಂಗ್ರೆಸ್ ಎಂಬ ಬ್ರಿಟಿಷ್ ನಿಯಂತ್ರಣದಲ್ಲಿರುವ ಪಕ್ಷವೊಂದನ್ನು ಹುಟ್ಟುಹಾಕಿದ್ದರು. ಆದರೆ ಯಾವ ಪಕ್ಷ ದೇಶದ ಒಳಿತಿಗಾಗಿ ದುಡಿಯಬೇಕಿತ್ತೋ ಅದೇ ಪಕ್ಷ ಈ ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ತಮ್ಮ ಜೀವವನ್ನೇ ಬಲಿಕೊಟ್ಟ ಕ್ರಾಂತಿಕಾರಿಗಳನ್ನು ವಿರೋಧಿಸುವ ಭರದಲ್ಲಿ ದೇಶ ವಿರೋಧಿ ಕೃತ್ಯಗಳನ್ನು ಎಸಗಲು ಆರಂಭಿಸಿತ್ತು.
ವಿಪರ್ಯಾಸವೆಂದರೆ ಈ ದೇಶಕ್ಕಾಗಿ ಉಪವಾಸ ಕುಳಿತು ಮಹಾತ್ಮ ಎನಿಸಿಕೊಂಡ ಮೋಹನದಾಸ ಕರಮ ಚಂದ ಗಾಂಧೀಜಿಯೂ ತಪ್ಪು ದಾರಿಯನ್ನು ಹಿಡಿದು ಬಿಟ್ಟಿದ್ದರು. ತಾನು ದೇಶದ ಜನರ ಪಾಲಿಗೆ “ಮಹಾತ್ಮ” ಎಂದು ಎನಿಸಿಕೊಂಡರೂ, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದ “ಹುತಾತ್ಮ”ರನ್ನು ಮರೆತೇಬಿಟ್ಟಿದ್ದರು. ಕ್ರಾಂತಿಕಾರಿಗಳನ್ನು ದೂರವಿಟ್ಟು ಮಹಾಪರಾದ ಮಾಡಿಬಿಟ್ಟಿದ್ದರು.
ಗಾಂಧೀಜಿ ಮಾಡಿದ್ದ ಅದೊಂದೇ ತಪ್ಪು ಈಗಲೂ ರಾಷ್ಟ್ರವನ್ನು ಕೊಲ್ಲುತ್ತಿದೆ..!!
ಹೌದು. ಇಷ್ಟಕ್ಕೂ ಗಾಂಧೀಜಿ ಇಂತಹ ಒಂದು ತಪ್ಪುಗಳನ್ನು ಮಾಡಿದ್ದರೂ ಇರಲಿ ಬಿಡಿ ಅನ್ನಬಹುದಿತ್ತೋ ಏನೋ… ಆದರೆ ಗಾಂಧಿ ಮಾಡಿದ ಮತ್ತೊಂದು ಅತಿ ದೊಡ್ಡ ತಪ್ಪೇ ನೆಹರು ಬಗ್ಗೆ. ಮೋತಿಲಾಲ್ ನೆಹರೂ ಗಾಂಧೀಜಿ ಬಳಿ ಹಠ ಹಿಡಿದು ಕೇಳಿದ್ದರಿಂದ ಜವಹರಲಾಲರಿಗೆ ಕಾಂಗ್ರೆಸ್ ಪಕ್ಷದಲ್ಲಿ ಅವಕಾಶ ದೊರೆಯಿತು. ಇವಿಷ್ಟಕ್ಕೇ ನಿಲ್ಲದೆ, ಕಾಂಗ್ರೆಸ್ ಪಕ್ಷದಲ್ಲಿ ಸರ್ಧಾರ್ ಪಟೇಲರಂತಹ ಅನೇಕ ಹಿರಿಯರು ಈ ಪಕ್ಷದಲ್ಲಿ ಕೆಲಸ ಮಾಡಿದ್ದರೂ, ಗಾಂಧೀಜಿ ಮಾತ್ರ ನೆಹರೂ ಅವರನ್ನು ಮುಂಚೂಣಿಯಲ್ಲಿ ತಂದು ನಿಲ್ಲಿಸಿದ್ದರು. “ನಾನು ಭಾರತವನ್ನು ಧ್ವೇಷಿಸುತ್ತೇನೆ” ಎಂಬ ಮಾತನ್ನು ಆಡಿದ್ದರೂ ಗಾಂಧೀಜಿ ಅವರಿಗೆ ಮಣೆ ಹಾಕಿದ್ದರು.
ನಂತರ ನೆಹರೂ ಅವರದ್ದೇ ದರ್ಬಾರ್. ಗಾಂಧೀಜಿಯನ್ನೂ ಮೀರಿ ತಮಗೆ ಬೇಕಾದ ರೀತಿ ನಡೆದುಕೊಂಡಿದ್ದರು ನೆಹರೂ. ಗಾಂಧೀಜಿ ಬಳಿ ರಚ್ಚೆ ಹಿಡಿದು ಕಾಂಗ್ರೆಸ್‍ನ ಅಧ್ಯಕ್ಷ ಸ್ಥಾನವನ್ನೂ ಗಿಟ್ಟಿಸಿಕೊಂಡಿದ್ದರು. ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಬೇಕಿದ್ದರೂ ಅದು ನೆಹರೂ ವಿಷಯಕ್ಕೆ ಬರೋವಾಗ ಇಲ್ಲವಾಗುತ್ತಿತ್ತು. ಗಾಂಧೀಜಿಯ ಕೃಪಾ ಕಟಾಕ್ಷದಿಂದ ನೆಹರೂರೇ ಅವಿರೋಧವಾಗಿ ಅಧ್ಯಕ್ಷರಾಗಿ ಬಿಡುತ್ತಿದ್ದರು. ಅನೇಕ ಬಾರಿ ಅಧ್ಯಕ್ಷರೂ ಆದರು. ಅದೇ ಗಾಂಧೀಜಿ ಸುಭಾಶ್‍ಚಂದ್ರ ಬೋಸ್ ಅಧ್ಯಕ್ಷರಾಗೋದಕ್ಕೆ ವಿರೋಧಿಸಿದ್ದರು.
ನೋಡಿ. ಗಾಂಧೀಜಿ ಮಾಡಿದ್ದ ಆ ಒಂದು ತಪ್ಪು ಇಂದು ಹೇಗೆ ಈ ದೇಶವನ್ನು ಬಲಿಕೊಡುತ್ತಿದೆ ಎಂದು. ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಹೀಗೆ ಅವರ ವಂಶಸ್ಥರೇ ಕಾಂಗ್ರೆಸನ್ನು ಆಳಿ ಅದರ ಅಧ್ಯಕ್ಷರೂ ಹಾಗೂ ದೇಶದ ಪ್ರಧಾನಿಯೂ ಆಗಿದ್ದರು. ಇವರನ್ನು ಯಾರೂ ಪ್ರಶ್ನಿಸುವವರೂ ಇರಲಿಲ್ಲ. ಅದೇ ಅಂದು ಪಟೇಲರಿಗೆ ಸ್ಥಾನವನ್ನು ನೀಡುತ್ತಿದ್ದರೆ ಇಂದು ಭಾರತ ಭವ್ಯವಾಗಿ ಬೆಳೆಯುತ್ತಿತ್ತು. ಇಂದಿನ ಪ್ರಧಾನಿಗಳು ಅಷ್ಟೊಂದು ಕಷ್ಟವನ್ನು ಅನುಭವಿಸುವ ಅಗತ್ಯವೇ ಇರಲಿಲ್ಲ..!
1998ರಿಂದ ಅವರೇ ಅಧ್ಯಕ್ಷ್ಯರೆಂದರೆ ನಂಬುತ್ತೀರಾ..?
ಭಾರತೀಯ ಜನತಾ ಪಕ್ಷ 1998 ರ ನಂತರ 9 ಅಧ್ಯಕ್ಷರನ್ನು ಕಂಡಿದೆ. ಕುಷ್ಭಾವು ಠಾಕ್ರೆ, ಬಂಗಾರು ಲಕ್ಷ್ಮಣ್, ಕೃಷ್ಣಮೂರ್ತಿ,ವೆಂಕಯ್ಯ ನಾಯ್ಡು, ಲಾಲ್ ಕೃಷ್ಣ ಅಡ್ವಾಣಿ,ರಾಜನಾಥ್ ಸಿಂಗ್, ನಿತಿನ್ ಗಡ್ಕರಿ,ರಾಜನಾಥ್ ಸಿಂಗ್ ಹಾಗೂ ಅಮಿತ್ ಶಾ. ಆದರೆ ಕಾಂಗ್ರೆಸ್ ಪಕ್ಷವನ್ನು ಗಮನಿಸಿದರೆ ಈ ದೇಶದಲ್ಲಿ 1998ರ ನಂತರ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಮುಂದುವರೆದ ವ್ಯಕ್ತಿ ಒಬ್ಬರೇ. ಅದೂ ಇಟಲಿಯಲ್ಲಿ ಬಾರ್ ಗರ್ಲ್ ಆಗಿ ಕೆಲಸ ಮಾಡಿ, ಭಾರತದ ಇಂದಿರಾ ಗಾಂಧಿಯ ಮಗ ರಾಜೀವ್ ಗಾಂಧಿಯನ್ನು ಪ್ರೀತಿಸಿ ಮದುವೆಯಾಗಿ ಭಾರತಕ್ಕೆ ಬಂದಂತಹ ಸೋನಿಯಾ ಆಂಟನಿಯೋ ಮೈನೋ. ಸತತ ಅಷ್ಟೂ ಅವಧಿಯಲ್ಲೂ ಒಬ್ಬಳೇ ಅಧ್ಯಕ್ಷರಾಗಿ ಮುಂದುವರೆಯುತ್ತಾರೆ ಎಂದರೆ ಆ ವಂಶ ಎಷ್ಟೊಂದು ವಂಶ ಪಾಂಪರ್ಯದ ಆಡಳಿತದ ಆಸೆಯನ್ನು ಹೊಂದಿದೆ ಎಂಬುವುದನ್ನು ಸೂಚಿಸುತ್ತದೆ.
ಅಧ್ಯಕ್ಷರನ್ನೇ ಬದಲಾವಣೆ ಮಾಡದ ಪಕ್ಷದಿಂದ ದೇಶ ಬದಲಾವಣೆ ಮಾಡುವ ಪಾಠ…!!!
ತಮಾಷೆಯಾದರೂ ಸೀರಿಯೆಸ್ ವಿಷಯ. ಈ ದೇಶದಲ್ಲಿ ನೆಹರೂ ವಂಶ ಕಾಂಗ್ರೆಸ್ ಎನ್ನುವ ಪಕ್ಷದ ಮೂಲಕ ದೇಶವನ್ನು ಗುಡಿಸಿ ಗುಂಡಾಂತರ ಮಾಡಿದ್ದರೂ ಮತ್ತದೇ ವಂಶ ಈ ದೇಶದ ರಾಷ್ಟ್ರೀಯ ಪಕ್ಷದ ಅಧಿಕಾರವನ್ನು ಪಡೆಯುತ್ತದೆ. ತನ್ನ ವಂಶಸ್ಥರನ್ನೇ ಅಧ್ಯಕ್ಷರನ್ನಾಗಿ ನೇಮಿಸುವ ಹಾಗೂ ತಾವೇ ಅಧ್ಯಕ್ಷ್ಯ ಗಿರಿಯನ್ನು ಪಡೆದುಕೊಳ್ಳುವ ಇವರಿಂದ ದೇಶದ ಅಭಿವೃದ್ಧಿ ಹೇಗೆ ನಿರೀಕ್ಷಿಸಲು ಸಾಧ್ಯ..?
ಇಷ್ಟು ವರ್ಷ ಕಳೆದರೂ ಓರ್ವ ಪ್ರಭುದ್ಧ ವ್ಯಕ್ತಿ ಅಥವಾ ದೇಶಪ್ರೇಮವುಳ್ಳ ಕಾಂಗ್ರೆಸ್ಸಿಗನನ್ನು ಅಧ್ಯಕ್ಷರನ್ನಾಗಿ ನೇಮಿಸದೆ ತಾನೇ ಮುಂದುವರೆದುಕೊಂಡು
ಹೋಗುವುದೆಂದರೆ ಏನರ್ಥ.? ಇಷ್ಟು ವರ್ಷಗಳು ಕಳೆದರೂ ಕಾಂಗ್ರೆಸ್ ಎಂಬ ರಾಷ್ಟ್ರೀಯ ಪಕ್ಷದ ನಾಯಕರಿಗೆ ತಮ್ಮ ಪಕ್ಷದ ಅಧ್ಯಕ್ಷರನ್ನೇ ಬದಲಾವಣೆ ಮಾಡಲು ಸಾಧ್ಯವಾಗಿಲ್ಲ ಎಂದಾದರೆ ಇವರು ದೇಶವನ್ನು ಏನು ಬದಲಾವಣೆ ಮಾಡುತ್ತಾರೋ…!!!
ಪಿಜ್ಜ, ಅಜ್ಜಿ, ಅಪ್ಪ, ಅಮ್ಮ ಆಯ್ತು, ಈಗ ಮತ್ತೊಂದು ಕುಡಿಯ ಸರದಿ…
ರಾಷ್ಟ್ರೀಯ ಪಕ್ಷ ಕಾಂಗ್ರೆಸ್‍ನಲ್ಲಿ ನೆಹರೂ, ಇಂದಿರಾ, ರಾಜೀವ್, ಸೋನಿಯಾ ಹೀಗೆ ಎಲ್ಲರೂ ಅಧ್ಯಕ್ಷ ಹಾಗೂ ಪ್ರಧಾನಿ ಪಟ್ಟವನ್ನು ಅಲಂಕರಿಸಿದವರೇ… ಸಧ್ಯ ಸೋನಿಯಾ ಗಾಂಧಿಯ ಶಕ್ತಿ ಕುಂದುತ್ತಾ ಬರುತ್ತಿದೆ. ಆರೋಗ್ಯವೂ ಕೈಕೊಡುತ್ತಿದೆ. ಈವಾಗಲಾದರೂ ಅಧ್ಯಕ್ಷರು ಬದಲಾಗಬಹುದು. ಹೊಸ ಪ್ರತಿಭೆಗಳಿಗೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ಪಕ್ಷ ಶಾಕ್ ನೀಡಿದೆ. ಹಲವಾರು ಚುನಾವಣೆಗಳ ಸಾರಥ್ಯವನ್ನು ವಹಿಸಿಕೊಂಡು, ಹೀನಾಯ ವಿಫಲತೆಗಳನ್ನು ಕಾಣುತ್ತಿದ್ದ ರಾಹುಲ್ ಗಾಂಧಿ ಆಲಿಯಾಸ್ ಪಪ್ಪುವನ್ನು ಕಾಂಗ್ರೆಸ್‍ನ ಅಧ್ಯಕ್ಷ ಸ್ಥಾನಕ್ಕೆ ತಂದು ಕುಳ್ಳಿರಿಸಿದ್ದಾರೆ. ರಾಜಕೀಯದಲ್ಲಿ ನಯಾ ಪೈಸೆಯ ಅರ್ಹತೆಯೂ ಇಲ್ಲದ ಈ ರಾಹುಲ್ ಗಾಂಧಿಯನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸೋದು ಅಂದರೇನು..? ಹಲವಾರು ದಶಕಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದ ಹಿರಿಯರನ್ನು ಕಡೆಗಣಿಸಿ ರಾಹುಲ್ ಗಾಂಧಿಗೆ ಪಟ್ಟ ಕಟ್ಟಿದ್ದಾರೆ ಸೋನಿಯಾ ಗಾಂಧಿ ಹಾಗೂ ಆಕೆಯ ಬಂಟರು.
ಇಷ್ಟಾದರೂ “ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ದೇಶವನ್ನು ಬದಲಾವಣೆ ಮಾಡುತ್ತೇವೆ” ಎಂದು ಬೊಬ್ಬೆ ಹೊಡೆಯುತ್ತಿರುವ ಕಾಂಗ್ರೆಸ್ ನಾಯಕರಿಗೆ ತಮ್ಮ ಪಕ್ಷದ ಅಧ್ಯಕ್ಷರನ್ನೇ ಬದಲಾವಣೆ ಮಾಡವಷ್ಟು ಸಾಮಥ್ರ್ಯವಿಲ್ಲ. ದೇಶವನ್ನು ಬದಲಾವಣೆ ಮಾಡುತ್ತೇವೆ ಎಂಬ ಮಾತುಗಳು ಎಷ್ಟೊಂದು ತಮಾಷೆ ಎನಿಸುತ್ತದೆ. ತನ್ನ ಜವಬ್ಧಾರಿಯಲ್ಲಿ, ತಾನು ಹೋದಲೆಲ್ಲಾ ಪಕ್ಷ ಹೀನಾಯ ಸೋಲು ಕಂಡಿದ್ದರೂ ರಾಹುಲ್ ಗಾಂಧಿಗೆ ಅಧ್ಯಕ್ಷನ ಪಟ್ಟವನ್ನು ಕರುಣಿಸಿದ ನೆಹರೂ ವಂಶದ ಭಕ್ತರಿಗೆ ಏನನ್ನಬೇಕೋ..!!!
ಪುಣ್ಯಕ್ಕೆ ದೇಶದಲ್ಲಿ ಬದಲಾವಣೆಯ ಗಾಳಿ ಬೀಸಿ ಹೆಮ್ಮೆಯ ನಾಯಕ ನರೇಂದ್ರ ಮೋದಿ ಪ್ರಧಾನಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷ ಮತ್ತೆ ಈ ದೇಶದಲ್ಲಿ ಎದ್ದು ಬರಲ್ಲ ಅನ್ನುವ ನಂಬಿಕೆ ಇದೆ. ಹಿಂದಿನಂತೆ ಮತ್ತೆ ಕಾಂಗ್ರೆಸ್ ಪಕ್ಷವೇ ಗೆಲ್ಲುತ್ತಿದ್ದರೆ ರಾಹುಲ್ ಗಾಂಧಿಯೇ ಪ್ರಧಾನಿ ಆಗಿರುತ್ತಿದ್ದ. ಅಯ್ಯೋ ಈ ದೇಶದ ಪಾಡೇನಾಗುತ್ತಿತ್ತೋ…
ಕಾಂಗ್ರೆಸ್ ಪಕ್ಷದ ನಾಯಕರಿಗೆ ತಮ್ಮ ಪಕ್ಷದ ಅಧ್ಯಕ್ಷರನ್ನೇ ಬದಲಾವಣೆ ಮಾಡಲು ಸಾಧ್ಯವಾಗಿಲ್ಲ ಇನ್ನು ದೇಶವನ್ನೇನು ಬದಲಾವಣೆ ಮಾಡುತ್ತಾರೆ ಎಂದರೆ, “ಹೌದು ನಾವು ಇಟಲಿಯ ಗುಲಾಮರು” ಎನ್ನುತ್ತಾರೆ ಕಾಂಗ್ರೆಸ್ಸಿಗರು. ನಾವೇನು ಮಾಡೋಕೆ ಆಗುತ್ತೆ ಅಲ್ವಾ…?
-ಸುನಿಲ್ ಪಣಪಿಲ