ಅಂಕಣ

ಅವರು ಚಡ್ಡಿಗಳ ಸಂಘವೆಂದು ಸರ್ಟಿಫಿಕೇಟ್ ಕೊಟ್ಟು ಕಲ್ಲು ಹೊಡೆದಿದ್ದರು!!! ಆದರೆ… ರಾಷ್ಟ್ರೀಯ ಸ್ವಯಂ ಸೇವಕರ ಸಂಘ ಮಾಡಿದ್ದೇನು ಗೊತ್ತಾ?!

ಸ್ವಾತಂತ್ರ್ಯ ಸಂಗ್ರಾಮದ ಅಪ್ರತಿಮ ಹೋರಾಟಗಾರ ರಾಮ್ ಪ್ರಸಾದ್ ಬಿಸ್ಮಿಲ್ಲಾ ಆಡಿದ ಮಾತುಗಳಿವು : ತಾನು ಗಲ್ಲಿಗೇರುವ ಮುಂಚೆ ತಮ್ಮ
ಭಾವನೆಗಳನ್ನು ಕವಿತೆಗಳ ಮೂಲಕ ವ್ಯಕ್ತಪಡಿಸಿದ್ದರು.

“ಮಾತೃಭೂಮಿಗಾಗಿ ಕತ್ತು ಕತ್ತರಿಸಿಕೊಡುವ ಅಭಿಲಾಷೆ ನಮಗೆ ಇದೆ. ಇಂದು ನಮಗೆಲ್ಲಾ ಗಲ್ಲು ಸಿಗುವುದೆಂಬ ಉಮೇದಿನಿಂದಲೇ ಇಲ್ಲಿಗೆ ಬಂದಿದ್ದೇವೆ.‌ಆ ಕೊಲೆಗಡುಕರ ಗಲ್ಲಿಗಳಲ್ಲಿ ದೇಶಪ್ರೇಮಿಗಳ ಮೇಳ ನಡೆಯಲಿದೆ. ಇದೀಗ ನೋಡೋಣ ಈ ಕೊಲೆಗಡುಕರ ಕೈಯಲ್ಲಿ ಅದೆಷ್ಟು ಬಲವಿದೆಯೆಂದು !!”

ಅಂದು ವಿವೇಕಾನಂದರೂ ಹೇಳಿದ್ದರು ಸುಭಾಷರೂ ಹೇಳಿದ್ದರು. ಯುವ ಶಕ್ತಿಗೆ ದೇಶವನ್ನು ಸಡೃಢವಾಗಿಸುವ ಸಾಮರ್ಥ್ಯವಿದೆಯೆಂದು.
ಒಮ್ಮೆ ಯೋಚನೆ ಮಾಡಿ.. ನಮ್ಮ ರಾಷ್ಟ್ರಕ್ಕೆ ಸ್ವತಂತ್ರ ಲಭಿಸಿತು. ದೇಶದ ಯುವಕರಿಗೆ ನಂತರ ದೇಶಾಭಿಮಾನ ಅನ್ನುವ ಚಿಂತನೆಯ ಅರಿವು ಬೇಕಾಗಿರಲಿಲ್ಲ.
ದೇಶಕ್ಕಾಗಿ ಹೋರಾಡಿದವರ ಅಗತ್ಯವೂ ಇರಲಿಲ್ಲ. ಮತಾಂಧ ರಾಜಕಾರಣಿಗಳ ಮಾತನ್ನು ಕೇಳಿ ವೀರ ಸಾವರ್ಕರರ ಮನೆಗೆ ಕಲ್ಲು ತೂರಿದ್ದರಲ್ಲವೇ ನಮ್ಮ ಕೆಲವು ಹಿರಿಯರು?? ಅಂತಹ ಸಂದರ್ಭದಲ್ಲಿ ರಾಷ್ಟ್ರಚಿಂತನೆಯನ್ನು ಉಣಬಡಿಸಿ ದೇಶಕ್ಕಾಗಿ ತಮ್ಮ ಜೀವನ ಸಮರ್ಪಿತವಾಗಬೇಕೆಂಬ ಚಿಂತನೆಯನ್ನು ಮತ್ತೊಮ್ಮೆ ಜನಮಾನಸದಲ್ಲಿ ಬೇರೂರುವ ಹಾಗೆ ನಿರ್ಮಿಸಿದ್ದು ರಾಷ್ಟ್ರೀಯ ಸ್ವಯಂ ಸೇವಕಾ ಸಂಘ..!! ಇದು ಅತಿಶಯೋಕ್ತಿಯ ಮಾತಲ್ಲ. ವಾಸ್ತವ ಸಂಗತಿ.

ಹಿಂದೂರಾಷ್ಟ್ರದ ಕುರಿತಾದ‌ ಚಿಂತನೆ :

ಈ ವಿಚಾರದಲ್ಲಿಯೇ ಕೆಲವು ಬುದ್ಧಿಜೀವಿಗಳೆನೆಸಿದ ಲದ್ಧಿಜೀವಿಗಳು ವಿರೋಧ ವ್ಯಕ್ತಪಡಿಸುವುದು. ಅನ್ಯಮತೀಯರನ್ನು ದ್ವೇಷಿಸುತ್ತದೆ ಸಂಘವೆಂದು. ಇದಕ್ಕೆ ಪ್ರತ್ಯುತ್ತರವಾಗಿ ಮುಸ್ಲಿಂ ಮಂಚ್ ಅನ್ನು ಸಂಘ ಸ್ಥಾಪನೆ ಮಾಡಿರುವುದು ನಮಗೆ ಅರಿವಿದೆ. ಆದರೆ ಸಂಘದ ಪ್ರಕಾರ ಹಿಂದೂರಾಷ್ಟ್ರವೆಂದರೇನೆಂಬುದರ‌ ತಿಳುವಳಿಕೆ ಅನೇಕರಿಗಿಲ್ಲ.

ವಾಸ್ತವವಾಗಿ ಹಿಂದೂ ಮತ್ತು‌ ಮಾನವ ಶಬ್ದಗಳು ಸಮಾನಾರ್ಥಕ ಪದಗಳು. ಮಾವನನ ಹುಟ್ಟಿನಿಂದಲೇ ಆ ಸಂಸ್ಕೃತಿಯ ಉಗಮವಾಗಿವೆಯೆಂಬ ಕಾರಣಕ್ಕಷ್ಟೇ. ಬೇರೆ ಬೇರೆ ಜನಾಂಗಗಳಲ್ಲಿರುವ ಸರ್ವ ಉಪಾಸನಾ ಪದ್ಧತಿಗಳನ್ನೂ ಹಿಂದುತ್ವವು ಸ್ವೀಕಾರ ಮಾಡುತ್ತವೆ. ಹಿಂದೂ ವಿಚಾರ ಮತ್ತು ಅಹಿಂದು ವಿಚಾರಗಳಲ್ಲಿರುವ ಅಂತರವನ್ನು ಗಮನಿಸಿ ನೋಡಿ.”ಜೀಸಸ್ ನ ಮೂಲಕ ಮಾತ್ರ” ಎನ್ನುವುದು ಅಹಿಂದು ವಿಚಾರವಾದರೆ, “ಜೀಸಸ್ ನ ಮೂಲಕವೂ” ಯೆಂಬುದು ಹಿಂದೂ ಚಿಂತನೆ. ಈ ಮೂಲಕ ಮಾತ್ರ ಸಕಲ ಮಾನವ ಜನಾಂಗದ ಸರಿಯಾದ ಸಂಘಟನೆ ಮಾಡಲು ಸಾಧ್ಯ.‌ಆಗ ಮಾತ್ರ ಸಂಪೂರ್ಣ ಮಾನವ ಜನಾಂಗವೇ ಒಂದು ಕುಟುಂಬವೆಂಬ ಭಾವನೆ ಮೂಡುತ್ತದೆ. ಸಂಘದ ಪರಿಕಲ್ಪನೆಯ ಹಿಂದೂ ರಾಷ್ಟ್ರ ಇದುವೇ. ಹೀಗೆಂದ ತಕ್ಷಣ ಅನೇಕರು ಪ್ರಶ್ನಿಸಿದ್ದ ಪ್ರಶ್ನೆಯಾವುದು ಗೊತ್ತಾ? ಸರ್ವರನ್ನು ಪ್ರೀತಿಸುವ, ಗೌರವಿಸುವ ಸಂಸ್ಕೃತಿಯವರಾದ ನೀವು ಮುಸಲ್ಮಾನರನ್ನು ಗಲ್ಲಿಗೇರಿಸಿದಾಗ ಸಂಭ್ರಮಿಸುತ್ತೀರಲ್ಲಾ?? ಸ್ವಾಮೀ.. ಅವರು ಭಯೋತ್ಪಾದನೆ‌ ಚಟುವಟಿಕೆಯಲ್ಲಿದ್ದರೆಂದು ಗಲ್ಲಿಗೆ ಹಾಕಿದ್ದರೇ ಪರಂತು ಮುಸಲ್ಮಾನಯೆನ್ನುವ ಕಾರಣಕ್ಕಲ್ಲ. ನೆನಪಿರಲಿ.. ಛೋಟಾ ರಾಜನ್ ಗೆ ಕೂಡ ಶಿಕ್ಷೆಯಾಗಿದೆ. ಆತ ಹಿಂದೂಯೆನ್ನುವ ಕಾರಣಕ್ಕೆ ನಾವು ವಿರೋಧಿಸೆದ್ದೆವಾ?? ಉತ್ತರಿಸಿ ಬುದ್ಧಿಜೀವಿಗಳೇ.. ಈ ದೇಶಕ್ಕೆ ಉತ್ತಮರ ಅಗತ್ಯವಿದೆಯೋ ಹೊರತು ಅಧಮರ ಅಗತ್ಯವಿಲ್ಲ.

ಹಿಂದೂ ಚಿಂತನೆಯ‌ ಮೂಲ ಸ್ವರೂಪವೇ ವಿವಿಧತೆಯಲ್ಲಿ ಏಕತೆ. ಆದರೆ ಆ ಏಕತೆಯು ರಾಷ್ಟ್ರಚಿಂತನೆಯನ್ನು ಮಾಡಬೇಕಷ್ಟೇ. ಪರಮ ವೈಭವದ ದಿಕ್ಕಿಗೆ ರಾಷ್ಟ್ರವನ್ನು ಸಾಗಿಸಬೇಕಾದರೆ ಇದು ಅತ್ಯಗತ್ಯ.!! ಇದುವೇ ಹಿಂದೂರಾಷ್ಟ್ರದ ಪರಿಕಲ್ಪನೆ.. ಸಂಘದ ಧ್ಯೇಯ.!!

“ನೀನು ಹಿಂದು, ವಿಶ್ವಬಂಧು, ಪರಮಧರ್ಮಗಳ ಗೆಳೆಯ ಹಾಗೂ ಉದಾರಿ ಆಗಿರಬಹುದು, ಆದರೆ ನೀನು ದುರ್ಬಲನಾಗಿದ್ದರೆ ನಿನ್ನ ಮಾತನ್ನು ಯಾರು
ತಾನೇ ಕೇಳಿಯಾರು??” ಇದು ಕವಿ ಚೌಹಾನರ ನುಡಿಗಳು. ಅದೆಷ್ಟು‌ ವಾಸ್ತವತೆಯನ್ನು ಈ‌ ನುಡಿಗಳು ಒಳಗೊಂಡಿವೆ ಆಲೋಚಿಸಿ.!

ಶ್ರೀ ಗುರೂಜಿಯವರೂ ಒಂದು ಕಡೆ‌ ಹೇಳ್ತಾರೆ, “ಮಾನವತೆಯ ಉದ್ಧಾರಕ್ಕಾಗಿ ಉದಾತ್ತನಾಗಿ ಯೋಚಿಸಿ ಪರಿಶ್ರಮಿಸುವ ಪ್ರಯತ್ನ ಮಾಡಬೇಕೆಂಬ ಅಭಿಲಾಷೆ ಪ್ರತಿ ವ್ಯಕ್ತಿಯ ಅಂತರಾಳದಲ್ಲಿ ಹುಟ್ಟಿ ಬರಲಿ ಎಂಬುದೇ ಹಿಂದೂವಿಚಾರ.”

ಈಗ ಹೇಳಿ‌ ಸಂಘದ ಹಿಂದೂಚಿಂತನೆಯ ನೈಜ ಉದ್ದೇಶಯಾವುದು!! ಅನ್ಯಮತೀಯರನ್ನು ವಿರೋಧಿಸುವುದೋ ಅಥವಾ ಬಲಾಢ್ಯ ರಾಷ್ಚ್ರವನ್ನು ನಿರ್ಮಿಸುವುದೋ??

ವ್ಯಕ್ತಿ ನಿರ್ಮಾಣದ‌ ಮುಖೇನ ರಾಷ್ಟ್ರ ನಿರ್ಮಾಣ: ಇದು ಸಂಘದ ಸಂಕಲ್ಪ !!

ಅನೇಕ ಸಂಸ್ಥೆಗಳು ಉನ್ನತ ದ್ಯೇಯವನ್ನೇ ಹೊಂದಿರುತ್ತವೆ.‌ ಆದರೆ ಅವು ಸಾಧಿಸುವ ರೀತಿ ಮಾತ್ರ ಕಠಿಣವಾಗಿರುತ್ತವೆ ಅನೇಕ ಬಾರಿ. ಆದರೆ ಸಂಘದ ಧ್ಯೇಯ ಮಾತ್ರ ಅತ್ಯಂತ‌ ಸರಳ, ಸ್ವಾಭಾವಿಕ.‌ಅದಾವುದು ಗೊತ್ತೇ??ನಿತ್ಯ ಶಾಖಾ ಪದ್ಧತಿ. ಇದು ಸಂಘದ್ದೇ ವಿಶೇಷ..

ಸಂಘಕಾರ್ಯ ಮಾಜಲು ಯಾವುದೇ ವ್ಯಕ್ತಿಗೆ ವಯಸ್ಸು, ಅಂತಸ್ತು ಅಥವಾ ವಿಶೇಷ ಕ್ಷಮತೆಯ ಅವಶ್ಯಕತೆಯಿಲ್ಲ. ವಿವಿಧ ಕಾರ್ಯಕ್ರಮಗಳು ನಿತ್ಯ ಶಾಖೆಯಲ್ಲಿ ಜರಗುತ್ತವೆ.ಈ ರೀತಿಯಾಗಿ ಸರ್ವರೂ ಒಂದಾಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಸಾಂಘಿಕ, ಸಾಮಾಜಿಕ ಭಾವನೆ ಬೆಳೆಯುತ್ತದೆ. ಆಟೋಟಗಳಿಂದ, ಶಾರೀರಿಕ ಕಾರ್ಯಕ್ರಮಗಳಿಂದ ಸ್ವಯಂಸೇವಕನಲ್ಲಿ ಶಾರೀರಿಕ ಕ್ಷಮತೆ ಹೆಚ್ಚುತ್ತದೆ. ಕಾರ್ಯಸಾಧನೆಗಾಗಿ ಮುನ್ನುಗ್ಗುವ ಪ್ರವೃತ್ತಿ ಬೆಳೆಯುತ್ತದೆ; ಕಷ್ಟ ಎದುರಿಸಲು ಮನಸ್ಸು ಸಿದ್ಧವಾಗುತ್ತದೆ. ಜಾತಿ, ಮತ,‌ಪಂಥ, ಪ್ರಾಂತ, ಆರ್ಥಿಕಮಟ್ಟ, ಸಾಮಾಜಿಕ ಸ್ತರ, ಭಾಷೆ – ಈ ಸರ್ವ ಭಿನ್ನತೆಗಳು ದೂರವಾಗಿ ಹಿಂದೂಸಮಾಜದ ಏಕಾತ್ಮತೆಯ ಭಾವ ಮನಸ್ಸಿನಲ್ಲಿ ಮೂಡುತ್ತದೆ. ತನ್ನ ಅಭಿರುಚಿಗೆ ಹಿಡಿಸದ ಕಾರ್ಯಕ್ರಮವಾದರೂ ಅದರಲ್ಲಿ ಎಲ್ಲರೊಡನೆ ಭಾಗವಹಿಸುವುದರಿಂದ ಅನ್ಯರಿಗಾಗಿ, ಸಮಾಜಕ್ಕಾಗಿ ತಾನಿರಬೇಕೆಂಬ ಮಾನಸಿಕತೆ ನಿರ್ಮಾಣವಾಗುತ್ತದೆ.‌

ಓರ್ವ ವ್ಯಕ್ತಿ ನೀಡುವ ಆಜ್ಞೆಗಳನ್ನು ಎಲ್ಲರೂ ಪಾಲಿಸುವುದರಿಂದ ಅನುಶಾಸನ ವಿಕಸಿತಗೊಳ್ಳುತ್ತದೆ. ನಿಮಗೆ ಒಂದು ವಿಚಾರ ಗೊತ್ತಾ?? ಸಂಘದ ಯಾವುದೇ ಕಾರ್ಯಕ್ರಮಕ್ಕೆ ಸಂಘದ‌ ಅತ್ಯುನ್ನತ ಹುದ್ದೆಯಲ್ಲಿರುವ ಸರಸಂಘಚಾಲಕರಾಗಿರುವ ಮೋಹನ್ ಭಾಗವತ್ ಜೀ ಯವರು ಬಂದರೂ ಆ ಶಾಖೆಯ ಬಾಲ ಸ್ವಯಂಸೇವಕನ ಆಜ್ಞೆಯನ್ನು ಪಾಲಿಸುತ್ತಾರೆ. ಸಂಘವೆಂದರೆ ಇದೇ!! ಅಲ್ಲಿ ಅಧಿಕಾರ, ಅಂತಸ್ತು, ಪ್ರತಿಷ್ಠೆಗೆ ಸ್ಥಾನವೇ ಇಲ್ಲ. ಲೌಖಿಕ ವಿಚಾರಗಳಿಂದ ವ್ಯಕ್ತಿಯ ವ್ಯಕ್ತಿಗತ, ಸಾಮಾಜಿಕ ಸಂಬಂಧಗಳ ಮೇಲೆ ಬರುವ ಒತ್ತಡಗಳು ಶಾಖಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಅನಾಯಾಸವಾಗಿ ನಿವಾರಣೆಯಾಗುತ್ತದೆ. ನಿಮಗೆ ಒಂದು ಆಸಕ್ತಿಯ‌ ವಿಚಾರ ಹೇಳುತ್ತೇನೆ. ಇದುವರೆಗೂ “ನಾನು”, “ನನ್ನ ಕುಟುಂಬ” ವೆಂದು ಹೇಳುತ್ತಿದ್ದವರು ಸಂಘದ ಸಂಪರ್ಕಕ್ಕೆ ಬಂದ ನಂತರ “ನಮ್ಮದೇಶ”, ” ನಮ್ಮ ಸಮಾಜ” ಎಂಬ ಚಿಂತನೆ ಮಾಡುತ್ತಾರೆ. ಅವರ ಧ್ಯೇಯ ರಾಷ್ಟ್ರ ಸೇವೆ‌ಯಾಗಿರುತ್ತದೆ.

ರಾಷ್ಟ್ರದ ವಿಚಾರ ಬಂದಾಗ ತಮ್ಮ ಪ್ರಾಣವನ್ನೂ ಈ ದೇಶಕ್ಕೆ ಸಮರ್ಪಿಸಲು ತಯಾರಿರುವಂತಹ, ಅಂತಹ ವ್ಯಕ್ತಿಗಳನ್ನು ಸಂಘ ತಯಾರು ಮಾಡುತ್ತಿದೆಯೆಂದರೆ ತಪ್ಪಾಗದು. ಸಂಘದ ಧ್ಯೇಯ‌ಒಂದೇ. ವ್ಯಕ್ತಿ ನಿರ್ಮಾಣ ತನ್ಮೂಲಕ ರಾಷ್ಟ್ರ‌ನಿರ್ಮಾಣ. ಪ್ರಸ್ತುತ ಸಂಘದ ಕಾರ್ಯಪದ್ಧತಿ ಭವ್ಯ ರಾಷ್ಟ್ರ ನಿರ್ಮಾಣಕ್ಕೆ ಪೂರಕವಾಗಿ ಕಾರ್ಯ ಮಾಡುತ್ತಿದೆಯೆಂದರೆ ತಪ್ಪಲ್ಲ. ವಾಸ್ತವವಾಗಿಯೂ ಸತ್ಯ.

ಯಾವಾಗ ಚಂದ್ರಶೇಖರ್ ಆಜಾದ್ ಅವರು ಬೆಳೆಸಿದ ಸಂಘಟನೆ “ಅಭಿನವ ಭಾರತ” ದ ಅಂತ್ಯವಾಯಿತೋ, ಯಾವಾಗ ಸುಭಾಷರು ಕಟ್ಟಿ ಬೆಳೆಸಿದ್ದ “ಭಾರತೀಯ ರಾಷ್ಚ್ರೀಯ ಸೇನೆ” ಯ ಕಾರ್ಯ ಅಂತ್ಯವಾಗಿತ್ತೋ ಭಾರತಕ್ಕೆ ಅಂತಹ ಚಿಂತನೆಗಳನ್ನು ಜನಮಾನಸದಲ್ಲಿ ಬಿತ್ತುವ ಕಾರ್ಯ ಮಾಡುವ ಸಂಘದ‌ ಅಗತ್ಯವಿತ್ತು. ಆ ಸಂದರ್ಭಕ್ಕೆ ದೇಶದಾದ್ಯಂತ ಬೆಳೆದಿತ್ತು “ರಾಷ್ಟ್ರೀಯ ಸ್ವಯಂ ಸೇವಕಾ ಸಂಘ”.. ಇವತ್ತು ನಾವು ಹೆಮ್ಮೆಯಿಂದ ಹೇಳಬಹುದು. ಸಂಘ ರಾಷ್ಟ್ರಕ್ಕೆ ಉಡುಗೊರೆಯಾಗಿ ಕೊಟ್ಟಿದ್ದು ‘ಅಜಾತಶತ್ರು ವಾಜಪೇಯಿ‌ಯವರನ್ನು’, ಭಾರತ ಹಿಂದೆಂದೂ ಕಂಡಿರದ ದಕ್ಷ ಜನನಾಯಕ ಪ್ರಧಾನಿ ನರೇಂದ್ರ‌ಮೋದಿ’ ಯವರನ್ನೇ ಹೊರತು ಯಾಸೀನ್ ಭಟ್ಕಳ್, ವೀರಪ್ರನ್, ಛೋಟಾ ರಾಜನ್ ಅಲ್ಲ.. ‌

ರಾಮ್ ಪ್ರಸಾದರು‌ ಅಂದು ಅಂದ‌ ಮಾತನ್ನು ಇವತ್ತು ಅಕ್ಷರಶ: ತನ್ನ ಅಂತರಂಗದಲ್ಲಿ ಜಪಿಸುತ್ತಿದ್ದಾರೆ ಕಾರ್ಯಕರ್ತರು. ರಾಷ್ಟ್ರದ ಹಿತಕ್ಕಾಗಿ ಯಾವುದೇ ಕಠಿಣ ಪರಿಸ್ಥಿಯನ್ನೆದುರಿಸಲೂ ಸಿದ್ಧರಿದ್ದೇವೆ ಎನ್ನುತ್ತಿದ್ದಾರೆ.

ಒಂದು ಮಾತನ್ನಂತೂ ಹೇಳಬೇಕು. ಸಂಘದ ಶಕ್ತಿಯೇನೂ ಇಲ್ಲದಿದ್ದಾಗ ಅನೇಕ ಪರೀಕ್ಷೆಗಳನ್ನೆದುರಿಸಿತ್ತು. ಸ್ವತ: ನಿಷೇಧಕ್ಕೆ‌ ಒಳಗಾಗಿತ್ತು. ಆದರೆ ಇವತ್ತು ಆಜಾನುಬಾಹುವಾಗಿ ಸಮಾಜದ ಆಶಾಕಿರಣವಾಗಿ ಬೆಳೆದುನಿಂತಿದೆ. ಸರ್ವ ಪರೀಕ್ಷೆಗಳನ್ನು ಯಶಸ್ವಿಯಾಗಿ ಪಾಸಾಗಿದೆ. ” Sangh is no longer on trial,but those who talk about RSS are on trial” – ಈಗ ಸಂಘವು ಪರೀಕ್ಷೆಯ‌ ಓರೆಗಲ್ಲಿನಿಂದ ಪಾರಾಗಿದೆ. ಸಂಘದ ಕುರಿತಾಗಿ ವಿರೋಧಾಭಾಸವಾಗಿ‌ ಮಾತನಾಡುವವರು ಪರೀಕ್ಷೆ ಎದುರಿಸಬೇಕಾಗಿದೆ. ಪಾಸಾಗುವ ಧೈರ್ಯ ಬಿಡಿ, ಪರೀಕ್ಷೆಗೆ ಪ್ರವೇಶವಾಗುವ ತಾಕತ್ತು‌ ಲದ್ಧಿಜೀವಿ ಎಡಪಂಥೀಯರಿಗೆ ಹಾಗೂ‌ ರಾಷ್ಟ್ರವಿರೋಧಿಗಳಿಗಿದೆಯಾ??

ಒಂದು ಮಾತಂತೂ ಸತ್ಯ.‌ ಅವರು ದೇಶದ್ರೋಹಿ ಸಂಘಟನೆಯೆಂದರು, ಕೋಮುವಾದಿಗಳೆಂದು ಕರೆದರು,‌ಇದಾವುದನ್ನೂ ಲೆಕ್ಕಿಸದೆ‌ ಇವತ್ತು ನಿಸ್ವಾರ್ಥದಿಂದ
ಸಮಾಜಸೇವೆ ಮಾಡುತ್ತಾ ಸಂಘದ ಧ್ಯೇಯ-ಸಂಕಲ್ಪವನ್ನು ಪೂರೈಸುವ ಸಲುವಾಗಿ ಹಗಲು-ರಾತ್ರಿ ಶ್ರಮವಹಿಸಿ ದುಡಿಯುತ್ತಿದ್ದಾರೆ ಕಾರ್ಯಕರ್ತರು. ಆ ಸಂಕಲ್ಪವೇನು ಗೊತ್ತಾ? “ಪರಮ್ ವೈಭವಂ ನೇ ತುಮೇ ತತ್ ಸ್ವರಾಷ್ಟ್ರಮ್” ||

– ವಸಿಷ್ಠ

Tags

Related Articles

Close