ಅಂಕಣ

ಅಹಿಂದ ಸರಕಾರ ಎಂದು ಬೊಬ್ಬೆ ಇಟ್ಟ ರಾಜ್ಯ ಕಾಂಗ್ರೆಸ್ ಹಿಂದುಳಿದ ವರ್ಗದವರ ಅಭಿವೃದ್ಧಿಯನ್ನು ವಿರೋಧಿಸಿತ್ತೇ?! ಇಲ್ಲಿದೆ ಕಾಂಗ್ರೆಸ್ ನ ಕರಾಳ ಮುಖ!

ಅಹಿಂದ, ಅಹಿಂದ, ಅಹಿಂದ… ಇದು ರಾಜ್ಯ ಕಾಂಗ್ರೆಸ್ ಸರ್ಕಾರದ ಜಪ. ಯಾವಾಗ ನೋಡಿದರೂ ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತರ ಪರ ಜಪ
ಮಾಡಿಕೊಂಡು ಅಧಿಕಾರಕ್ಕೆ ಬಂದಿದ್ದು ಈವಾಗ ಇತಿಹಾಸ. ಅಹಿಂದದ ಹೆಸರು ಹೇಳಿಕೊಂಡು ಬಂದಿರುವ ಕಾಂಗ್ರೆಸ್ ಆ ವರ್ಗದವರನ್ನು ಬೆಳೆಸುವಲ್ಲಿ ತೀರಾ
ವಿರೋಧಿಯಾಗಿತ್ತು ಅನ್ನುವುದು ಗುಟ್ಟಾ ಉಳಿದಿಲ್ಲ.

ಅಷ್ಟಕ್ಕೂ ಅಹಿಂದ, ಅಹಿಂದ ಎಂದು ಬಡಿದಾಡಿಕೊಳ್ಳುವ ಅದೇ ಕಾಂಗ್ರೆಸ್‍ನ ಹಿಂದಿರುವ ಕರಾಳ ಮುಖವನ್ನು ಎಳೆಎಳೆಯಾಗಿ ಅನಾವರಣ ಮಾಡುತ್ತೇವೆ ನೋಡಿ. ಅಹಿಂದ ವಿರೋಧಿ ಕಾಂಗ್ರೆಸ್‍ನ ಇತಿಹಾಸವನ್ನು ಎಲ್ಲರೂ ಅರಿಯುವಂತಾಗಲಿ…

* ಛತ್ರಪತಿ ಶಾಹು ಮಹಾರಾಜರು 1902 ಜುಲೈ 26ರಂದು ತಮ್ಮ ಕೊಲ್ಲಾಪುರ ಸಂಸ್ಥಾನದಲ್ಲಿ ಹಿಂದುಳಿದ ಜಾತಿಗಳಿಗೆ ಶೇ.50 ರಷ್ಟು ಮೀಸಲಾತಿ ನೀಡಿದಾಗ ಅದೇ ಕಾಂಗ್ರೆಸ್ ವಿರೋಧಿಸಿತ್ತು. ಮೀಸಲಾತಿ ರದ್ದು ಪಡಿಸದಿದ್ದರೆ ನಿಮ್ಮನ್ನು ಕೊಲ್ಲಲಾಗುವುದು ಎಂದು ಕಾಂಗ್ರೆಸ್ ನಾಯಕ ಬಾಲ ಗಂಗಾಧರ ತಿಲಕ್ ಶಾಹು
ಮಹಾರಾಜರಿಗೆ ಕೊಲೆ ಬೆದರಿಕೆ ಹಾಕಿದ್ದರು. ಇದು ಹಿಂದುಳಿದ ವರ್ಗದವರ ಮೇಲಿರುವ ಕಾಳಜಿಯೇ..?

* ಮೈಸೂರು ಸಂಸ್ಥಾನದಲ್ಲಿ 1921ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರು ಹಿಂದುಳಿದ ಜಾತಿಗಳಿಗೆ ಶೇಖಡಾ 75ರಷ್ಟು ಮೀಸಲಾತಿ ಒದಗಿಸಿದಾಗ, ಅಂದಿನ
ಕಾಂಗ್ರೆಸ್ ನಾಯಕರಾದ ಶ್ರೀಮಾನ್ ಗಾಂಧಿಯವರು ನಾಲ್ವಡಿಯವರನ್ನು ಅಧಿಕಾರದಿಂದ ಕಿತ್ತೊಗೆಯಲು ಮೈಸೂರಿನ ಲಿಂಗಾಯುತ, ಒಕ್ಕಲಿಗ ಮುಖಂಡರಿಗೆ ಸುಪಾರಿ ಕೊಟ್ಟಿದ್ದರಲ್ಲಾ… ಆವಾಗ ಎಲ್ಲಿ ಹೋಗಿತ್ತು ಕಾಂಗ್ರೆಸ್‍ನ ಹಿಂದುಳಿದ ವರ್ಗದವರ ಮೇಲಿನ ಪ್ರೀತಿ..?

* 1930-31ರ ದುಂಡು ಮೇಜಿನ ಸಭೆಗಳಲ್ಲಿ ಡಾ.ಅಂಬೆಡ್ಕರರು ಎಲ್ಲ ಶೋಷಿತರ ಪರವಾಗಿ “ಪ್ರತ್ಯೇಕ ಚುನಾಯಕ”ಗಳನ್ನು ಕೇಳಿದಾಗ ಗಾಂಧಿಯವರೇಕೆ
ಓಬಿಸಿಗಳನ್ನು ಡಾ.ಅಂಬೆಡ್ಕರ್‍ರವರನ್ನು ಬೇರ್ಪಡಿಸುವ ಕೀಳು ಕೆಲಸ ಮಾಡಿದರು..? ಇದು ಅವರ ಕಾಳಜಿಯೇ…?

* ಕೊನೆಗೆ ಅಸ್ಪ್ರಶ್ಯರಿಗಾದರೂ ಡಾ.ಬಿ.ಆರ್.ಅಂಬೆಡ್ಕರ್‍ರವರು 1932 ಆಗಸ್ಟ್ 17ರ ಕೋಮುವಾರು ತೀರ್ಪಿನಲ್ಲಿ ವಿಶೇಷ ಚುನಾಯಕಗಳನ್ನು ಸಂಪಾದಿಸಿ ತಂದಾಗ ಅದರ ವಿರುದ್ಧ ಗಾಂಧಿ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡಿದ್ದರಲ್ಲಾ… ಅಂಬೆಡ್ಕರ್ ಬಗ್ಗೆ ಅತಿಯಾದ ಅಭಿಮಾನವನ್ನು ಹೊಂದಿರುವಂತೆ ಮಾಡಿದ್ದ ಇದೇ ಕಾಂಗ್ರೆಸ್ ಪಕ್ಷಕ್ಕೆ ಈ ಇತಿಹಾಸದ ಅರಿವಿದೆಯೇ..?

* ಡಾ.ಬಿ.ಆರ್.ಅಂಬೆಡ್ಕರ್‍ರವರು ಹಿಂದುಳಿದ ವರ್ಗದವರಿಗಾಗಿ ಆರ್ಟಿಕಲ್ 340ನ್ನು ಸಂವಿಧಾನದಲ್ಲಿ ಸೇರಿಸಿದಾಗ ಅದೇ ಹಿಂದುಳಿದ ವರ್ಗದವರ ಮೇಲಿರುವ
ಪ್ರೀತಿಯ ನಾಟಕವಾಡುತ್ತಿದ್ದ ಕಾಂಗ್ರೆಸ್ ಸದಸ್ಯರು ಯಾಕೆ ವಿರೋಧಿಸಿದ್ದರು..?

* ಹಿಂದುಳಿದ ವರ್ಗದವರನ್ನು ಮೇಲೆತ್ತಲು ಮಂಡಿಸಿದ್ದ ಆರ್ಟಿಕಲ್ 340ನ್ನು ಜಾರಿ ಮಾಡುವಂತೆ ಡಾ.ಬಿ.ಆರ್.ಅಂಬೆಡ್ಕರ್‍ರವರು ಅಂದಿನ ಪ್ರಧಾನಿ ನೆಹರೂರನ್ನು ಒತ್ತಾಯಿಸಿದ್ದರೂ ಮೊದಲ ಪ್ರಧಾನಿ ಎಂದುಕೊಳ್ಳುವ ಕಾಂಗ್ರೆಸ್ ನಾಯಕ ಅಂಬೆಡ್ಕರ್ ಮಾತನ್ನು ನಿರ್ಲಕ್ಷಿಸಿದ್ಯಾಕೆ…? ಅದೂ ಸಂವಿಧಾನ ಶಿಲ್ಪಿಯ ಮಾತನ್ನೇ ಮೀರಿ..! (ಅದೇ ಕಾಂಗ್ರೆಸ್ ಈಗ ಅಂಬೆಡ್ಕರ್ ಹೆಸರಲ್ಲಿ ಸಿಂಪತಿ ಸೃಷ್ಟಿಸಿ ರಾಜಕೀಯ ಮಾಡುತ್ತಿದೆ)

* ಹಿಂದುಳಿದ ವರ್ಗದ ಪರವಾಗಿದ್ದ 1955ರಲ್ಲಿ ಕಾಕಾ ಕಾಲೇಲ್ಕರ್ ವರದಿಯು ತಿರಸ್ಕøತವಾಗಿತ್ತು. ಹೀಗೆ ತಿರಸ್ಕøತವಾದಾಗ, ಮತ್ತೊಂದು ಓಬಿಸಿ ಆಯೋಗವನ್ನು ಕಾಂಗ್ರೆಸ್ ರಚಿಸಬಹುದಿತ್ತಲ್ಲವೇ..? ಕೈಕಟ್ಟಿ ಕುಳಿತು ದ್ರೋಹ ಮಾಡಿದ್ಯಾಕೆ..?

* ಜನತಾ ಸರ್ಕಾರದ ಕೃಪೆಯಿಂದ ಮಂಡಲ್ ವರದಿಯೊಂದು ಸಿದ್ಧವಾಗಿತ್ತು. ಹೀಗೆ ಸಿದ್ಧಗೊಂಡ ಮಂಡಲ್ ವರದಿಯನ್ನು 1980ರಲ್ಲಿ ಸ್ವೀಕರಿಸಿದ ಶ್ರೀಮತಿ ಇಂದಿರಾ ಗಾಂಧಿ ಆ ವರದಿಯನ್ನು ಜಾರಿಗೊಳಿಸಲಿಲ್ಲ ಯಾಕೆ..? ಇದರ ಹಿಂದಿರುವ ಮರ್ಮವೇನು..?

* ಅವರ ನಂತರ ಅಧಿಕಾರಕ್ಕೆ ಬಂದ ರಾಜೀವ್ ಗಾಂಧಿಯಾದರೂ ಮಂಡಲ್ ವರದಿಯನ್ನು ಜಾರಿಗೊಳಿಸಬಹುದಿತ್ತು. ಏಕೆಂದರೆ ಆ ಹೊತ್ತಿಗೆ ಬಿಎಸ್‍ಪಿ ಪಕ್ಷವು
ಮಂಡಲ್ ವರದಿ ಪರವಾಗಿ ಬೀದಿಗಿಳಿದು ಹೋರಾಡುತ್ತಿತ್ತು. ಆಗಲಾದರೂ ಮಂಡಲ್ ವರದಿಯನ್ನು ರಾಜೀವ್ ಗಾಂಧಿ ಜಾರಿಗೊಳಿಸಬಹುದಿತ್ತಲ್ವಾ..? ಯಾಕೆ
ಜಾರಿಗೊಳಿಸಿಲ್ಲಾ..? ಇದು ಕಾಂಗ್ರೆಸ್‍ನ ನಿಜವಾದ ಹಿಂದುಳಿದ ವರ್ಗದ ಮೇಲಿರುವ ಪ್ರೀತಿಯೇ..?

* ಹಿಂದುಳಿದ ವರ್ಗದ ಜನಾಂಗದವರಿಗೆ ಮೀಸಲಾತಿಯನ್ನು ಕೊಡಲೇಬೇಕೆಂಬುದು ಖಚಿತವಾದಾಗ ಕಾಂಗ್ರೆಸ್ ಹಿಂದುಳಿದ ವರ್ಗಕ್ಕೆ ಸೇರಿದ್ದ ಸರ್ಕಾರಿ
ಉದ್ಯೋಗಿಗಳನ್ನೇ ನಾಶ ಪಡಿಸಲು 1991ರಲ್ಲಿ ಖಾಸಗೀಕರಣವನ್ನೇಕೆ ಜಾರಿಗೆ ತಂದಿತ್ತು…? ಓಬಿಸಿ ಪರ ಎಂದು ನಾಟಕವಾಡುವ ಕಾಂಗ್ರಸಿಗರೇ ಇದಕ್ಕೆ
ಉತ್ತರಿಸುವಿರಾ..?

* 1992-93ರಲ್ಲಿ ಸರ್ವೋಚ್ಛ ನ್ಯಾಯಾಲಯದ ತೀರ್ಪು ಹೊರಬೀಳುತ್ತೆ. ಓಬಿಸಿಗಳಿಗೆ ಶೇಖಡಾ 27 ರಷ್ಟು ಮೀಸಲಾತಿ ನೀಡುವುದು ಸಿಂಧುವೆಂದು ಹೇಳಿದಾಗ ಅದೇ ಕಾಂಗ್ರೆಸ್ ಪಕ್ಷ ಇಡೀ ಮಂಡಲ್ ಶಿಪಾರಸ್ಸುಗಳನ್ನೆಲ್ಲವನ್ನೂ ಜಾರಿ ಮಾಡದೆ ಕೇವಲ ಉದ್ಯೋಗದ ಮೀಸಲಾತಿಯನ್ನು ಮಾತ್ರ ಜಾರಿ ಮಾಡಿದ್ದೇಕೆ..? ಕಾಳಜಿ ಇರುತ್ತಿದ್ದರೆ ಸಂಪೂರ್ಣ ವರದಿ ಜಾರಿ ಮಾಡಬಹುದಿತ್ತಲ್ಲವೇ..?

* ಸುಮಾರು 13 ವರ್ಷಗಳ ನಂತರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಓಬಿಸಿಗಳಿಗೆ ಮೀಸಲಾತಿ ನೀಡುತ್ತೇವೆಂದು ಹೇಳಿಕೊಂಡು ಬರುತ್ತಿರುವ ಕಾಂಗ್ರೆಸ್ ಪಕ್ಷ ಇನ್ನೂ ಏಕೆ ಕಣ್ಣಿಗೆ ಮಣ್ಣೆರಚುತ್ತಿದೆ. ಇಷ್ಟು ದಿನ ಜನರನ್ನು ಮೋಸಗೊಳಿಸುತ್ತಿದ್ದ ಕಾಂಗ್ರೇಸ್ ಪಕ್ಷ ಈಗ ಹಿಂದುಳಿದ ವರ್ಗದವರ ಓಟಿಗಾಗಿ ಮತ್ತೆ ನಾಟಕವಾಡುತ್ತಿದೆ.

* ಕರ್ಣಾಟಕದಲ್ಲೇ ಹಲವಾರು ಹಿಂದುಳಿದ ಮತ್ತು ದಲಿತ ರೈತರ, ಸಾಮಾಜಿಕ ಮುಖಂಡರ ಹತ್ಯೆಗಳು ನಡೆಯುತ್ತಿದ್ದರೂ ತೆಪ್ಪಗೆ ಕುಳಿತಿರುವ ಸರ್ಕಾರಕ್ಕೆ
ನಿಜವಾಗಿಯೂ ಅಹಿಂದ ಬಗ್ಗೆ ಕಾಳಜಿ ಅನ್ನೋದು ಇದಿಯಾ..?

* ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಅನೇಕ ಹಿಂದೂಗಳ, ಮುಸಲ್ಮಾನರ ಸಾಲು ಸಾಲು ಹತ್ಯೆಗಳು ನಡೆಯುತ್ತಿದ್ದರೂ ಯಾಕೆ ಮೌನ..? ಅವರು
ಅಹಿಂದಾಕ್ಕೆ ಸೇರಿದವರಲ್ಲವೇ..? ಅಥವಾ ಅವರು ಬಿಜೆಪಿ ಬೆಂಬಲಿಗರು ಎಂಬ ಮೊಂಡುತನವೇ..:?

ಸದಾ ನಾವು ದಲಿತರೊಂದಿಗೆ, ಹಿಂದುಳಿದ ವರ್ಗದವರೊಂದಿಗೆ, ಹಿಂದುಳಿದ ವರ್ಗದವರೊಂದಿಗೆ ಅಥವಾ ಅಲ್ಪಸಂಖ್ಯಾತ ವರ್ಗದವರೊಂದಿಗೆ ಇದ್ದೇವೆ ಎಂದು
ಭಾಷಣ ಬಿಗಿಯುವ ಕಾಂಗ್ರೆಸ್ ನಾಯಕರಿಗೆ ನಿಜವಾಗಿಯೂ ಈ ಹಿಂದುಳಿದ ವರ್ಗದವರ ಮೇಲೆ ಕಾಳಜಿ ಅನ್ನೋದು ಇದಿಯಾ..? 60 ವರ್ಷಗಳ ಕಾಂಗ್ರೆಸ್
ಆಡಳಿತದಲ್ಲಿ ಈ ವರ್ಗದವರಿಗೆ ಯಾವ ರೀತಿಯ ಬೆಲೆಯನ್ನು ಕೊಟ್ಟಿದೆ. ಅಥವಾ ಯಾವ ರೀತಿಯ ಉಡುಗೊರೆಗಳನ್ನು ಕೊಟ್ಟಿದೆ ಎಂದು ಹೇಳಬೇಕಾಗಿದೆ.

ತನ್ನ 60 ವರ್ಷಗಳ ಕಾಲದಿಂದಲೂ ಈ ವರ್ಗಗಳನ್ನು ಕೇವಲ ಓಟ್ ಬ್ಯಾಂಕ್‍ಗಾಗಿ ಉಪಯೋಗಿಸುತ್ತಿದ್ದ ಈ ಕಾಂಗ್ರೆಸ್ ಎಂಬ ರಾಷ್ಟ್ರೀಯ ಪಕ್ಷದ ನೀಚತನಕ್ಕೆ
ಇನ್ನೆಷ್ಟು ಸಾಕ್ಷಿಗಳು ಬೇಕು? ಹೆಜ್ಜೆ ಹೆಜ್ಜೆಗಳಲ್ಲೂ ತನ್ನ ನೆಹರೂ ಸಂತತಿಯ ಬುದ್ಧಿಯನ್ನೇ ಮುಂದುವರೆಸಿಕೊಂಡು ಬರುತ್ತಿರುವ ಕಾಂಗ್ರೆಸ್ ನಾಯಕರು ಈ ವರ್ಗಗಳಿಗೆ ಮಾಡಿದ್ದೇನಿಲ್ಲ.

ಆರ್‍ಎಸ್‍ಎಸ್‍ನಲ್ಲಿ ಹಿಂದುಳಿದವರನ್ನು ಕಡೆಗಣಿಸಲಾಗುತ್ತಿದೆ, ದಲಿತರನ್ನು ಕಡೆಗಣಿಸಲಾಗುತ್ತಿದೆ ಎಂದು ಸದಾ ಬೊಬ್ಬೆ ಬಿಡುತ್ತಿರುವ ಎಡಪಂಥೀಯರು, ದೇಶದಲ್ಲಿ ಕಾಂಗ್ರೆಸ್ ಪಕ್ಷ ಈ ವರ್ಗಗಳಿಗೆ ಮಾಡಿರುವ ದ್ರೋಹಗಳನ್ನು ಬಲ್ಲಿರಾ..?

ಆವರೆಗೆ ಒಬ್ಬನೇ ಒಬ್ಬ ಮುಸಲ್ಮಾನನ್ನು ಮೇಲಕ್ಕೆತ್ತದ ಕಾಂಗ್ರೆಸಿಗರು ಬಿಜೆಪಿಯ ವಿರುದ್ಧ ಸುಖಾ ಸುಮ್ಮನೆ ಆರೋಪಿಸುತ್ತಾರೆ. ಡಾ. ಎಪಿಜೆ ಅಬ್ದುಲ್ ಕಲಾಂರನ್ನು ರಾಷ್ಟ್ರಪತಿ ಮಾಡಿದ್ದು ಅದೇ ಆರ್‍ಎಸ್‍ಎಸ್ ಅಡಿಯಲ್ಲಿ ಬರುವ ಬಿಜೆಪಿ ಪಕ್ಷ. ಕಾಂಗ್ರೆಸ್ ಈವರೆಗೆ ಒಬ್ಬನೇ ದಲಿತ ವ್ಯಕ್ತಿಯನ್ನು ಮೇಲಕ್ಕೆತ್ತಲಿಲ್ಲ. ಕೇವಲ ಓಟ್‍ಬ್ಯಾಂಕ್‍ಗೋಸ್ಕರ ಮಾತ್ರನೇ ಬಳಸಿಕೊಂಡಿತ್ತು. ದಲಿತ ವ್ಯಕ್ತಿಯಾಗಿದ್ದ ರಾಮನಾಥ್ ಕೋವಿಂದರನ್ನು ರಾಷ್ಟ್ರಪತಿ ಹುದ್ದಗೇರಿಸಿದ್ದು ನೀವು ಟೀಕೆ ಮಾಡುವ ಅದೇ ಆರ್‍ಎಸ್‍ಎಸ್… ಯಾವಾಗ ನೋಡಿದರು ತಮ್ಮ ವಂಶಸ್ಥರನ್ನೇ ಪ್ರಧಾನಿಯಾಗಿಸುವ ನೆಹರೂ ಕುಟುಂಬ ಹಿಂದುಳಿದ ವರ್ಗದವರ ಮೇಲೆ ಕಾಳಜಿ ಇದ್ದಿತ್ತೇ..? ಅದೇ ಆರ್‍ಎಸ್‍ಎಸ್, ಅತಿ ಹಿಂದುಳಿದ ವರ್ಗದಲ್ಲಿ ಜನಿಸಿ, ಟೀ ಮಾರಿಕೊಂಡು ಜೀವನ ಸಾಗಿಸುತ್ತಿದ್ದ ಗುಜರಾತಿನ ಕುವರನನ್ನು ಪ್ರಧಾನಿಯಾಗಿಸಿತ್ತಲ್ಲಾ…. ಯಾರಿಗೆ ಹೇಳ್ಬೇಕಿತ್ತು ಹಿಂದುಳಿದ ವರ್ಗದವರ ಮೇಲಿನ ಪ್ರೀತಿಯ ಪಾಠ..?

ಶೋಷಿತರ ಕಣ್ಣುಗಳಿಗೆ ಮಣ್ಣೆರಚುವ ಇಂತಹ ಅಮಾನವೀಯ ಕೆಲಸಗಳನ್ನು ಕಾಂಗ್ರೇಸ್ ಮಾತ್ರವೇ ಮಾಡಬಲ್ಲುದು. ಶೋಷಿತರ ಪರ ಎಂದು ದೇಶದ
ಜನತೆಯನ್ನು ಮೋಸಗೊಳಿಸುತ್ತಿರುವ ಕಾಂಗ್ರೆಸಿಗರಿಗೆ ಜನತೆಯೇ ಪಾಠ ಕಳಿಸಬೇಕಾಗಿದೆ.

ಆತ್ಮೀಯ ದೇಶವಾಸಿಗಳೆ… ಇನ್ನಾದರು ಎಚ್ಚೆತ್ತುಕೊಳ್ಳೋಣ. ಅಹಿಂದ ಅಹಿಂದ ಎಂದು ನಮ್ಮನ್ನೆಲ್ಲ ಮೋಸಗೊಳಿಸುವ ಮುನ್ನ ಆ ಪಕ್ಷಕ್ಕೆ ಪಾಠ ಕಳಿಸೋಣ.
ಪ್ರತಿಯೋರ್ವ ಹಿಂದುಳಿದ ವರ್ಗದ ಹಾಗೂ ದಲಿತರಿಗೂ ಈ ಸಂದೇಶವನ್ನು ಶೇರ್ ಮಾಡಿ.

-ಸುನಿಲ್

Tags

Related Articles

Close