ಪ್ರಚಲಿತ

ಅಹ್ಮದ್ ಪಟೇಲ್ ಮಿಸ್ಸಿಂಗ್! ರಾಹುಲ್ ಗಾಂಧಿ, ಹಾರ್ದಿಕ್ ಪಟೇಲ್ ಫೈಟಿಂಗ್..ಗುಜರಾತ್‍ನಲ್ಲಿ ಹೀನಾಯ ಸೋಲು ಕಾಣಲಿದೆಯಾ ಕಾಂಗ್ರೆಸ್?

ಗುಜರಾತಿನಲ್ಲಿ ಯುದ್ಧಕ್ಕೆ ಮೊದಲೇ ಶಸ್ತ್ರತ್ಯಾಗ ಮಾಡಿಬಿಟ್ಟಿತೆ ಕಾಂಗ್ರೆಸ್..? ಈ ಪ್ರಶ್ನೆ ಯಾಕೆ ಉದ್ಭವವಾಗಿದೆ ಎಂದರೆ ಗುಜರಾತಿನ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಗುಜರಾತ್ ಪ್ರಚಾರದಲ್ಲಿ ಕಾಣಿಸುತ್ತಿಲ್ಲ.  ಗುಜರಾತಿನ ಮೊದಲನೇ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇನ್ನೆರಡೇ ದಿನ ಬಾಕಿ ಇದ್ದರೂ, ಕಾಂಗ್ರೆಸ್ ಇನ್ನೂ ಒಂದೇ ಒಂದು ನಾಮಪತ್ರವನ್ನು ಕೂಡ ಸಲ್ಲಿಸಿಲ್ಲ. ಹೀಗಾಗಿ ಇನ್ನೂ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿಲ್ಲ. ಇದೀಗ ತಾವು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಅನಿರೀಕ್ಷಿತ ತೀರ್ಮಾನ ಕೈಗೊಂಡು ಗುಜರಾತ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಭರತ್ ಸಿಂಗ್ ಸೋಲಂಕಿ ಮತ್ತೊಂದು ಶಾಕ್ ನೀಡಿದ್ದಾರೆ. ದೆಹಲಿಯಲ್ಲಿ ಕಳೆದ ವಾರ ನಡೆದ ಕೇಂದ್ರ ಚುನಾವಣಾ ಸಮಿತಿ ಸಭೆಯಿಂದ ಅರ್ಧದಲ್ಲಿಯೇ ಸೋಲಂಕಿ ನಿರ್ಗಮಿಸಿದ್ದರು. ಕಾರಣವಿಷ್ಟೇ ಇವರಿಗೆ ಸೋಲಿನ ರುಚಿ ಚುನಾವಣೆಗೆ ಮುಂಚೆಯೇ ಬಡಿದಂತಿದೆ. ಮೋದಿ ಅಲೆಯಲ್ಲಿ ಕಸ , ಕಡ್ಡಿಗಳಂತಹ ಎಲ್ಲಾ ವಿರೋಧಿಗಳು ಹಾರಿ ಹೋಗುವ ಭಯ ಶುರುವಾದಂತಿದೆ.

ಹಾರ್ದಿಕ್ ಪಟೇಲ್ ನ ಅವಾಂತರ ಹಾಗೂ ಜಿಗ್ನೇಶ್ ಮೇವಾನಿಯರ ಬೇಡಿಕೆಯಿಂದ ಕಾಂಗ್ರೆಸ್ಸಿನಲ್ಲಿ ಭಿನ್ನಮತ ಉಂಟಾಗಿದೆ. ಸೋನಿಯಾ ಗಾಂಧಿರವರ ಪರಮಾಪ್ತ ಹಾಗೂ ಗುಜರಾತ್ ಕಾಂಗ್ರೆಸ್ಸಿನ ಮಾಸ್ಟರ್ ಮೈಂಡ್ ಅಹ್ಮದ್ ಪಟೇಲ್ ಹಾಗೂ ರಾಹುಲ್ ಗಾಂಧಿ ನಡುವಿನ ವಿರಸದಿಂದಾಗಿ, ಅಹ್ಮದ್ ಪಟೇಲ್ ಈ ಬಾರಿ ಗುಜರಾತ್ ಬಗ್ಗೆ ತಲೆಕೆಡಿಸಿಕೊಳ್ಳದೇ ಕಾಣೆಯಾಗಿದ್ದಾರೆ.

ಅಷ್ಟಕ್ಕೂ ಅಹ್ಮದ್ ಪಟೇಲ್ ಚುನಾವಣಾ ಕಣದಿಂದ ದೂರ ಉಳಿಯುತ್ತಿರುವುದು ಯಾಕೆ?

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಅವರ ಪ್ರಬಲ
ಗಾಂಧಿ ಕುಟುಂಬದೊಂದಿಗೆ ಅಹ್ಮದ್ ಪಟೇಲ್ ಅವರ ಸಂಬಂಧ ತುಂಬಾ ಹಳೆಯದು. ತುರ್ತುಪರಿಸ್ಥಿತಿಯ ನಂತರ ಇಂದಿರಾ ಗಾಂಧಿಯವರು 1977 ರ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದರು. ಆದರೆ ಅಹ್ಮದ್ ಪಟೇಲ್ ಅವರು ಗುಜರಾತಿನ ಭರೂಚ್ ನಿಂದ ಸ್ಪರ್ದಿಸಿ ಗೆದ್ದು ಲೋಕಸಭಾ ಸದಸ್ಯರಾದರು. ರಾಜೀವ್ ಗಾಂಧಿ ಕಾಂಗ್ರೆಸ್ಸಿನ ಚುಕ್ಕಾಣಿಯನ್ನು ಹಿಡಿದ ಮೇಲೆ ಅಹ್ಮದ್ ಪಟೇಲ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದರು.

1988 ರಲ್ಲಿ ಜವಾಹರಲಾಲ್ ನೆಹರೂ ಅವರ ಜನ್ಮ ವಾರ್ಷಿಕೋತ್ಸವದ ಮೊದಲು ಜವಾಹರ್ ಭವನವನ್ನು ಪೂರ್ಣಗೊಳಿಸುವ ಜವಾಬ್ದಾರಿಯನ್ನು ಪಟೇಲ್ ಅವರಿಗೆ ನೀಡಲಾಯಿತು. ಆ ಮೂಲಕ ಅಹ್ಮದ್ ಪಟೇಲ್ ಮತ್ತು ಗಾಂಧಿ ಕುಟುಂಬದ ನಂಟು ಎಷ್ಟಿತ್ತು ಎಂದು ತಿಳಿದು ಬರುತ್ತೆ. ಸೀತಾರಾಮ್ ಕೇಸರಿ ಕಾಂಗ್ರೆಸ್ಸಿನ ಅಧ್ಯಕ್ಷರಾಗಿದ್ದಾಗ, ಅಹ್ಮದ್ ಪಟೇಲ್ ಖಜಾಂಚಿಯಾದರು. 1992 ರಿಂದ ಅಹ್ಮದ್ ಪಟೇಲ್ ಅವರು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದಾರೆ. ಆದರೆ ಈಗ ಹಿಂದೆ ಅವರು ಚುನಾವಣಾ ಪದರಚಾರದಲ್ಲೂ ಕಾಣಿಸದೇ ಕಾಣೆಯಾದಂತಿದೆ.

ಅಹ್ಮದ್ ಪಟೇಲ್ 2001 ರಿಂದಲೂ ಸೋನಿಯಾ ಗಾಂಧಿಯವರು ಅತ್ಯಂತ ವಿಶ್ವಾಸಾರ್ಹ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದರು. 2004ರ ಕಾಂಗ್ರೆಸ್ಸಿನ ಚುನಾವಣೆಯ ತಂತ್ರಗಾರನಾಗಿ ಕೆಲಸ ಮಾಡಿದ್ದು ಇದೇ ಅಹ್ಮದ್ ಪಟೇಲ್. ಇದೆಲ್ಲಾ ಗಮನಿಸಿದರೆ ಅಹ್ಮದ್ ಪಟೇಲ್ ಮತ್ತು ಗಾಂಧೀ ಕುಟುಂಬದ ಸ್ನೇಹ ತುಂಬಾ ಹಳೆಯದು ಅಂತ ಅರ್ಥವಾಗುತ್ತೆ ಆದರೂ ಅಹ್ಮದ್ ಪಟೇಲ್ ಯಾಕೆ ಚುನಾವಣಾ ಪ್ರಚಾರದಿಂದ ದೂರ ಉಳಿದಿರುವುದು ಯಾಕೆ ಅನ್ನುವುದೇ ಯಕ್ಷ ಪ್ರಶ್ನೆ.

ನೋಟ್ ಬ್ಯಾನ್ ಮತ್ತು GST ನಂತರವೂ
ನರೇಂದ್ರ ಮೋದಿಯವರು ಅತ್ಯಂತ ಪ್ರಖ್ಯಾತ ವಿಶ್ವ ವಿಖ್ಯಾತ ಸಂಶೋಧನಾ ಸಂಸ್ಥೆ “ಪ್ಯೂ ರಿಸರ್ಚ್” ಬಹಿರಂಗ ಪಡಿಸಿದೆ. ವಿಶ್ವ ವಿಖ್ಯಾತ ಸಂಶೋಧನಾ ಸಂಸ್ಥೆ “ಪ್ಯೂ ರಿಸರ್ಚ್” ಬಹಿರಂಗ ಪಡಿಸಿದ ವರದಿಯ ಪ್ರಕಾರ ನೋಟ್ ಬ್ಯಾನ್ ಮತ್ತು GSTಯ ನಂತರವೂ ದೇಶದ 88 % ಜನರು ಪ್ರಧಾನಿ ನರೇಂದ್ರ ಮೋದಿಯವರ ಪರವಾಗಿದ್ದಾರೆಂದು ವರದಿ ಮಾಡಿತ್ತು.ಹಾಗೂ ಅಮೆರಿಕನ್ ಮೂಡಿಸ್ ಎಂಬ ಕ್ರೆಡಿಟ್ ಸಂಸ್ಥೆ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ದಾಖಲೆಯ ಏರಿಕೆಯಾಗಿದೆ ಎಂದು ವರದಿ ಕೊಟ್ಟಿತ್ತು.ವರದಿಯ ಪ್ರಕಾರ ಕಳೆದ ನಾಲ್ಕು ವರ್ಷಗಳಲ್ಲಿ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ದಾಖಲೆಯ ಏರಿಕೆಯಾಗಿರುವುದು ಕಂಡು ಬಂದಿದೆ.

ಅಮೆರಿಕಾದ ಖ್ಯಾತ ಅರ್ಥಶಾಸ್ತ್ರ ಮತ್ತು ನೊಬೆಲ್ ಪ್ರಶಸ್ತಿಯನ್ನು ಪಡೆದ ರಿಚರ್ಡ್ ಥಾಲೇರ್ ಅವರು “ಭ್ರಷ್ಟಾಚಾರವನ್ನು ಕಡಿಮೆ ಮಾಡಲು ನೋಟ್ ಬ್ಯಾನ್ ಅತ್ಯುತ್ತಮ ಆರಂಭ” ಎನ್ನುವ ಮೂಲಕ ನೋಟ್ ಬ್ಯಾನ್ ಕಪ್ಪುಹಣ ಮತ್ತು ಭ್ರಷ್ಟಾಚಾರದ ವಿರುದ್ಧವಾದ ಒಂದು ಪ್ರಬಲ ಕ್ರಮವೆಂದು ಹೇಳಿ ಮೋದಿಯವರ ಕಾರ್ಯ ವೈಖರಿಯ ಬಗ್ಗೆ ಬಹಿರಂಗವಾಗಿ ಹೇಳಿದ್ದರು. ವಿಶ್ವದ ದೊಡ್ಡಣ್ಣನಾದ ಅಮೆರಿಕಾವೇ ವಿಶ್ವಾಸದಿಂದ ಮೋದಿಯ ಪರ ಮಾತನಾಡುತ್ತಿರಬೇಕಾದರೆ ಇನ್ನೂ ಭಾರತೀಯರು ಮಾತಾಡದೇ ಇರುತ್ತೇವೆಯಾ? ಮೋದಿಯವರ ಈ ಎಲ್ಲಾ ಸಾಧನೆಗಳು ಇಡೀ ಜಗತ್ತಿನ ಜನರ ನಾಲಿಗೆಯಲ್ಲಿ ಹರಿದಾಡುತ್ತಿವೆ. ಹೀಗಾಗಿ ಮೋದಿಯವರ ಜನಪ್ರಿಯತೆ ಮೊದಲಿಗಿಂತಲೂ ಜಾಸ್ತಿ ಆಗಿದೆ. ಇದನ್ನೆಲ್ಲಾ ಅರಿತ ಗುಜರಾತಿನ ಕಾಂಗ್ರೆಸ್ ಸೋಲುವುದು ಖಚಿತವೆಂದು ಗೊತ್ತಾಗಿ ಚುನಾವಣಾ ಕಣದಿಂದ ಹಿಂದೆ ಸರಿದಿರಬಹುದು. ಮೋದಿಯವರ ಅಲೆಗೆ ತಾನು ಕೊಚ್ಚಿಹೋಗುತ್ತೇನೆಂದು ಗೊತ್ತಾಗಿ ಅಹ್ಮದ್ ಪಟೇಲ್ ಪಲಾಯನವಾಗಿರಬಹುದು.

-ಮಹೇಶ್

Tags

Related Articles

Close