ಅಂಕಣ

ಆಕೆ ನನ್ನ ದೇಶದ ಪ್ರಧಾನ ಮಂತ್ರಿಯನ್ನು ‘ಸಲಿಂಗಿ’ ಎಂದರೂ, ನನ್ನ ತಾಯಿಯನ್ನು ‘ಲೈಂಗಿಕ ಗುಲಾಮ’ಳೆಂದರೂ, ಅವಳ ಸಾವನ್ನು ನಾನು ಸಂಭ್ರಮಿಸುವ ಹಾಗಿಲ್ಲ! ಅದ್ಭುತ!!

ಗೌರಿ ಲಂಕೇಶರ ಹತ್ಯೆಯಾದ ದಿನದಿಂದಲೂ ಸಹ ಆಕೆಯ ಸಾವಿಗೆ ಕಾಣ್ಣೀರು ಹಾಕಬೇಕೆಂಬ ಕೂಗು ಏಳುತ್ತಲೇ ಇದೆ! ಒಬ್ಬ ಪ್ರತಿಭಾನ್ವಿತ ದಿಟ್ಟ ಪತ್ರಕರ್ತೆ,
ಬುದ್ಧಿಜೀವಿ, ಕರ್ನಾಟಕದ ಘನತೆ ಎಂದೆಲ್ಲ ಬಿಂಬಿಸುವ ಪ್ರಯತ್ನ ನಡೆಯುತ್ತಲೇ ಇದೆ! ಆಕೆಯನ್ನು ‘ಹೀರೋಯಿನ್’ ಆಗಿ ಮುಂದಿನ ಜನಾಂಗಕ್ಕೆ ಕೊಡುವ ಎಲ್ಲಾ
ತಯಾರಿಯೂ ಸದ್ದಿಲ್ಲದೇ ಸಾಗಿದೆ! ಆದರೆ., ಈ ಎಲ್ಲಾ ಬಿರುದುಗಳೂ ಸಹ ಇರುವುದು ಆಕೆ ಹಿಂದುತ್ವವನ್ನು ಬೈದಿದ್ದಕ್ಕೋ ಅಥವಾ ನರೇಂದ್ರ ಮೋದಿಯನ್ನು
ದ್ವೇಷಿಸಿದ್ದಕ್ಕೋ?!

ಭಾರತ ಶವವಾಯಿತೆಂಬ ನಯವಂಚಕ ಘೋಷಣೆಗಳು!!!

ಆಕೆಯ ಸಾವಿಗೆ ಯಾವ ರೀತಿ ಬಿಂಬಿತವಾಯಿತೆಂದರೆ ಇಡೀ ಭಾರತ ಶವವಾಯಿತೆಂಬ ಅತಿರೇಕದ ತನಕವೂ! ಜನ್ಮಕ್ಕಿಷ್ಟು ಧಿಕ್ಕಾರವಿರಲಿ ಎಂದು ತೆಗಳದಿರಲು
ಸಾಧ್ಯವೇ ಇಲ್ಲ! ಭಾರತ ಶವವಾಗಲು ಆಕೆ ಭಾರತದ ಸಮಾಜಕ್ಕೆ ಯಾವ ಘನಾತ್ಮಕ ಸಂದೇಶವನ್ನು ನೀಡಿದ್ದಳು?! ಇಡೀ ಭಾರತ ಶವವಾಯಿತೆಂದು ಹೇಳುವುದಕಿಂತ ಪತ್ರಿಕಾ ಧರ್ಮಕ್ಕೆ ಅಪವಾದವಾಗಿದ್ದ ಕಪ್ಪು ಚುಕ್ಕೆಯೊಂದು ಅಳಿಸಿತು ಎಂದೆನ್ನುವುದು ಸೂಕ್ತ!

ಆಕೆಯ ಬಗ್ಗೆ ಬಹಳ ಘನಾತ್ಮಕವಾಗಿ ಹೇಳುವ ಬದಲು, ಸಾವಿಗೆ ಕಣ್ಣೀರಿಡಿ ಎಂದು ಭಾಷಣ ಕುಟ್ಟುವ ಬದಲು, ಆಕೆಯ ಫೇಸ್ ಬುಕ್ ಹಾಗೂ ಟ್ವಿಟ್ಟರ್ ಖಾತೆಗಳ
ಪೋಸ್ಟ್ ಗಳನ್ನು ನೋಡಿದರೆ ಆಕೆಯ ಬುದ್ಧಿಮತ್ತೆಯ ಆಳ ಅಗಲದ ಅರಿವು ನಿಮಗಾದೀತು!

ಈ ಮೇಲಿನ ಸಾಲುಗಳನ್ನೋದಿದಾಗ ಆಕೆಯ ಬುದ್ಧಿಮತ್ತೆಯ ಬಗ್ಗೆ, ಸಂಸ್ಕಾರದ ಬಗ್ಗೆ, ಎಡಪಂಥೀಯ ವಿಚಾರಗಳ ಹಾದಿಯ ಬಗ್ಗೆ, ಜಾತ್ಯಾತೀತದ ವಾದಗಳ ಬಗ್ಗೆ, ಕೊನೆ ಕೊನೆಗೆ ಆಕೆಯ ಪತ್ರಕರ್ತೆಯೆಂಬ ಹೆಗ್ಗಳಿಕೆಯ ಬಗ್ಗೆ ಪ್ರಶ್ನೆಗಳೇಳುತ್ತವೆ! ಗೌರೀ ಲಂಕೇಶ್ ಬಹುಷಃ ಮಾಧ್ಯಮಗಳ ಎದುರಿಗೆ ನಿಂತದ್ದು, ಆಕೆಯನ್ನು
ಮಾಧ್ಯಮಗಳು ಹೊಗಳಿಕೆಯ ಉತ್ತುಂಗಕ್ಕೇರಿಸಿದ್ದು ಮೋದಿಯನ್ನು ದ್ವೇಷಿಸಿದ್ದರಿಂದಲೋ ಅಥವಾ ಪುಂಖಾನುಪುಂಖವಾಗಿ ‘ಹಿಂದುತ್ವ’ದ ಅಸ್ತಿತ್ವವನ್ನು ಪ್ರಶ್ನಿಸಿದ್ದಕ್ಕೋ?! ಯಾವ ಘನತೆಯೆತ್ತ, ಪತ್ರಿಕಾಧರ್ಮದ ಅರಿವಿರುವ ಪತ್ರಕರ್ತರು ಈ ರೀತಿಯ ಅಶ್ಲೀಲ ಭಾಷೆಗಳನ್ನು ಕೇವಲ ತನ್ನ ಸಿದ್ಧಾಂತಗಳನ್ನು ಗೌರವಿಸಲಿಲ್ಲ ಎಂಬ ಕಾರಣವೊಂದನ್ನೇ ಹಿಡಿದು ಈ ರೀತಿಯಾಗಿ ಕೂಗಬಲ್ಲರು?! ಒಬ್ಬ ಜವಾಬ್ದಾರಿಯುತ ಪತ್ರಕರ್ತೆಯ ಧರ್ಮವಿದೆಯೇ?! ಸಿದ್ಧಾಂತಗಳ ನಡವಳಿಕೆಯೂ ಇದೆಯೇ?!

ಅದೇ, ಇದೇ ರೀತಿಯ ಭಾಷಾಪ್ರಯೋಗಗಳನ್ನು ಒಬ್ಬ ಬಲಪಂಥೀಯನೆನ್ನಿಸಿಕೊಂಡ ಸಂಸ್ಕಾರದ ಬಲದ ಮೇಲೆ ನಡೆಯುವ ದೇಶಭಕ್ತ, ಸಂಘದ ಕಾರ್ಯಕರ್ತ ಅಥವಾ ಇನ್ಯಾರೋ ಎಡಪಂಥೀಯರ ಮೇಲೆ ಉಪಯೋಗಿಸಿದ್ದಿದ್ದರೆ ಪರಿಸ್ಥಿತಿ ಏನಾಗಬಹುದಿತ್ತು?! ಸುಮ್ಮನಿರುತ್ತಿದ್ದರೇ?! ಪ್ರತಿಭಾನ್ವಿತ ವ್ಯಕ್ತಿ ಎನ್ನುತ್ತಿದ್ದರೇ?!

ದುರಂತವದೇ! ಇಷ್ಟಾದ ಮೇಲೂ ಆಕೆಯ ಸಾವಿಗೆ ಕಣ್ಣೀರು ಹಾಕುವ ಜನರು ನಿಮಗೆ ಸಿಗುತ್ತಾರೆ! ಗೌರವಿಸಿ ಮಂಡಿಯೂರುವವರು ಸಿಗುತ್ತಾರೆ! ಆಕೆಯ ಸಾವಿಗೆ
ಭಾರತವೇ ಶವವಾಯಿತೆಂಬ ಕೂಗು ಹಾಕುವ ಅಡ್ಡಕಸುಬಿಗಳು ಸಿಗುತ್ತಾರೆ!

ಬಲಪಂಥೀಯರೆನ್ನಿಸಿದ ಸಂಘದ ಕಾರ್ಯಕರ್ತರ ಹೆಂಡತಿಯರನ್ನು, ಹೆಣ್ಣು ಮಕ್ಕಳನ್ನು ‘ಲೈಂಗಿಕ ಗುಲಾಮರು’, ‘ಅತ್ಯಾಚಾರಿ’ಗಳು, ಇನ್ನೂ ಏನೆಂದು ನಾ ಅನುವಾದ ಮಾಡಬಲ್ಲೆನು ಆಕೆಯ ಸಾಲುಗಳನ್ನು?! ಇಂತಹ ಸಾಲುಗಳನ್ನು ಯಾವ ಮಾಧ್ಯಮದವರು ಪ್ರಮುಖವಾಗಿ ಪ್ರಸಾರ ಮಾಡಿದರು?! ಆಕೆಯ ವಿಚಾರದ ಆಳ ಅಗಲದ ಬಗ್ಗೆ ಯಾವ ಮಾಧ್ಯಮಗಳು ಬರೆದವು?!

ನರೇಂದ್ರ ಮೋದಿಯ ಜಿಎಸ್ ಟಿ ವಿಚಾರವಾಗಿ ಆಕೆಯ ಮಾತುಗಳೇನಿತ್ತು ಗೊತ್ತಾ?!

ನರೇಂದ್ರ ಮೋದಿಯವರಿಗೆ ‘ಬಳಸಿದ ಸ್ಯಾನಿಟರಿ ಪ್ಯಾಡ್’ಗಳನ್ನು ಉಡುಗೊರೆಯಾಗಿ ನೀಡಬೇಕಿತ್ತೆಂಬುದು! ಅರೇ! ದೇಶವನ್ನು ತುಂಡರಿಸುತ್ತೇವೆಂದು ಘೋಷಣೆ ಹಾಕಿದ ಕನ್ಹಯ್ಯಾ ಹಾಗೂ ಉಮರ್ ಗೆ ಅದನ್ನೇ ಆಕೆ ಉಡುಗೊರೆಯಾಗಿ ನೀಡಬಹುದಿತ್ತಲ್ಲ?! ಆಗ ದೇಶವನ್ನು ತುಂಡರಿಸಿದಾಗ ಆಗುವ ರಕ್ತಪಾತ ಆಕೆಗೆ ಲೆಕ್ಕವಿರಲಿಲ್ಲವೇ?! ಅಥವಾ ಆಕೆಯ ‘ಧೈರ್ಯ’ ಮುದುರಿತ್ತೇ?! ಬೇಡ! ಅದೆಷ್ಟೋ ಹಗರಣಗಳಲ್ಲಿ ಭಾಗಿಯಾದ ಕಾಂಗ್ರೆಸ್ ಪಕ್ಷದ ಸೋನಿಯಾ ಗಾಂಧಿಗೇ ಆಕೆ ಬಳಸಿದ ಪ್ಯಾಡ್ ಗಳನ್ನು ಚೆಂದವಾಗಿ ಅಲಂಕರಿಸಿ ನೀಡಬಹುದಿತ್ತಲ್ಲವೇ?!

ಹಿಂದೂ ಒಂದು ಧರ್ಮವಾ ಎಂದಿದ್ದಕ್ಕೆ, ಅಪ್ಪ ಅಮ್ಮ ಇಲ್ಲದ ಅನಾಥ ಎಂದಿದ್ದಕ್ಕೆ, ಮೋದಿಯವರನ್ನು ನಿಂದಿಸಿದ್ದಕ್ಕೆ, ಹಿಂದೂ ದೇವತೆಗಳ ಬಗ್ಗೆ ಅವಹೇಳನ ಗೈದಿದ್ದಕ್ಕೆ, ಭಾರತಕ್ಕೆ ಧಿಕ್ಕಾರ ಕೂಗಿದ್ದಕ್ಕೆ ಕಿವಿಗಡಚಿಕ್ಕುವ ಚಪ್ಪಾಳೆ ಬಿತ್ತಲ್ಲವೇ?! ಅದೇ ಆಕೆ ಪೈಗಂಬರರನ್ನು ಅವಹೇಳನಗೈದಿದ್ದರೆ, ಜನಾನಾದ ಬಗ್ಗೆ ಪ್ರಶ್ನಿಸಿದ್ದರೆ, ನಿಕಾಹ್ ಹಲಾಲ್ ನನ್ನು ಬಯಲಿಗೆಳೆದಿದ್ದರೆ, ಮಹಿಳೆಯರು ಭೋಗವಸ್ತುಗಳಾಗುವ ವ್ಯವಸ್ಥೆಯ ಬಗ್ಗೆ ವಿರೋಧಿಸಿದ್ದರೆ, ಕ್ರೈಸ್ತರ ಮತಾಂತರದ ಬಗ್ಗೆ ಪ್ರಶ್ನಿಸಿದ್ದರೆ, ಪಾಕಿಸ್ಥಾನವನ್ನು ತುಂಡರಿಸುತ್ತೇವೆಂದಿದ್ದರೆ ಆಕೆಗೆ ಮನೆಯ ಹೊಸ್ತಿಲ ದಾಟುವ ಸ್ವಾತಂತ್ರ್ಯವಿರುತ್ತಿತ್ತೇ?! ನಿರ್ಭಯವಾಗಿ ನಡೆಯಲು ಸಾಧ್ಯವಾಗುತ್ತಿತ್ತೇ?! ಮಾಧ್ಯಮಗಳು ಪೂಜಿಸುತ್ತಿದ್ದವೇ? ನೇರವಾಗಿಯೇ ಹೇಳುತ್ತೇನೆ! ಆಕೆ ಇಷ್ಟು ವರ್ಷ ಬದುಕುತ್ತಲೇ ಇರುತ್ತಿರಲಿಲ್ಲವೇನೋ!

ಆಕೆಯ ಈ ಮನಸ್ಥಿತಿ ಹೇಗಿದೆಯೆಂದರೆ ಸ್ಥಿಮಿತ ಕಳೆದುಕೊಂಡ, ಯಾವುದೇ ಸಿದ್ಧಾಂತಗಳಿಲ್ಲದ, ದಿಕ್ಕು ದೆಸೆಯಿಲ್ಲದ ತುಕ್ಕು ಹಿಡಿದ ಲೇಖನಿಯೊಂದು ಹಿಂದುತ್ವದ
ವಿರುದ್ಧ ಹಾಳೆಗಳ ಮೇಲೆ ಕಾರಿದಂತೆ ಅಷ್ಟೇ! ಇದು, ಪ್ರಸ್ತುತ ಎಡಪಂಥಿಯರ ಸ್ಥಿತಿ! ಈ ತತ್ವಗಳ ಬಿಂಬಿಸುವುದು ಅದೇ ಎಡಪಂಥೀಯರೆಂದು ಬೆನ್ನು
ತಟ್ಟಿಕೊಳ್ಳುವ ನೂರಾರು ಗೌರಿಗಳು!

ಅರೇ! ಬಲಪಂಥೀಯರಿಗೂ ಸಹ ಇದೇ ರೀತಿ ಋತುಸ್ರಾವದ ಬಗ್ಗೆ, ರಕ್ತಪಾತಗಳ ಬಗ್ಗೆ, ಹೆಣ್ಣುಮಕ್ಕಳ ಬಗ್ಗೆ ಅಸಹ್ಯವಾಗಿ ಮಾತನಾಡುವುದಕ್ಕೆ, ಒಬ್ಬರನ್ನು
ಗುರಿಯಾಗಿಸಿ ಅವರಿವರ ಜೊತೆ ಮಲಗಿದ್ದಾರೆಂದು ಹಬ್ಬಿಸುವುದಕ್ಕೆ, ಚಾರಿತ್ರ್ಯದ ಬಗ್ಗೆ ಮಾತನಾಡುವುದಕ್ಕೆ ಯಾವುದೇ ಭಾಷೆಯನ್ನಾದರೂ ಉಪಯೋಗಿಸಲು
ಬರುತ್ತದೆಂಬದು ಅರಿವಿರಬೇಕಿತ್ತು! ಆದರೆ, ಸಂಸ್ಕಾರಯುತವಾದವರು ತುಟಿಬಿಚ್ಚಲಿಲ್ಲ! ಆಕೆಯನ್ನು ಬಹುವಚನದಲ್ಲಿಯೇ ಕರೆದರು! ಪತ್ರಕರ್ತೆಯಾಗಿಯೇ ಇರಿಸಿದರು! ನೆನಪಿರಲಿ! ಅಭದ್ರತೆಯ ಭಾವ ಬೊಗಳಿಸುತ್ತದೆ, ಆತ್ಮವಿಶ್ವಾಸ ಬಾಯಿ ಮುಚ್ಚಿ ಮುನ್ನಡೆಯುತ್ತಿರುತ್ತದೆ!

ಇವತ್ತು, ಎಡಪಂಥೀಯ ಸಮಾಜ, ಮಾಧ್ಯಮಗಳು, ಆಕೆಯ ಸಾವಿಗೆ ಕಣ್ಣೀರು ಹಾಕುವಂತೆ ಹೇಳುತ್ತಿದೆ! ಆಕೆ ಏನೇ ಇರಬಹುದು, ಆದರೆ ಸಾವಿಗೆ ಖುಷಿಪಡಬೇಡಿ ಎನ್ನುತ್ತಿವೆ! ಹೇಗೆ?! ನನ್ನ ಅಮ್ಮಂದಿರನ್ನು, ಅಕ್ಕ- ತಂಗಿಯರನ್ನು, ಪೂಜಿಸುವ ಧರ್ಮವನ್ನು, ಪಾಲಿಸುವ ಆಚಾರವನ್ನು, ರಕ್ತದ ಕಣಕಣದಲ್ಲಿಯೂ ಮಿಂದ ಭಾರತ ಮಾತೆಯನ್ನೆಲ್ಲ ಹಳಿದ, ‘ಲೈಂಗಿಕ ಗುಲಾಮ’ರೆಂದು ಜರಿದ ಆಕೆಯ ಸಾವಿಗೆ ಕಣ್ಣೀರು ಹಾಕಿದರೆ ಅದಕ್ಕಿಂತ ದೊಡ್ಡ ಅಪರಾಧ ಇನ್ನಾವುದಿರಬಹುದು?! ಹಾಗಂತಹ, ಒಂದು ಜೀವದ ಸಾವಿಗೆ ನಕ್ಕು ಸಂಭ್ರಮಿಸುವಷ್ಟು ಎಡಪಂಥೀಯರ ಕ್ರೂರತೆಯೂ ನನ್ನಲ್ಲಿಲ್ಲ! ಅದಕ್ಕೇ, ಆಕೆಯ ಮಾತನ್ನು ಆಕೆಗೇ ನಿಷ್ಠಾವಂತನಾಗಿ ಹಿಂದಿರುಗಿಸುತ್ತಿದ್ದೇನೆ! ‘No tears, No cheers to your death’!!

– ತಪಸ್ವಿ

Tags

Related Articles

Close