ಅಂಕಣಇತಿಹಾಸ

ಆಕ್ರಮಣಕಾರಿ ಜಿಹಾದಿಗಳ ಸೊಕ್ಕುಮುರಿದಿದ್ದ ಮಹಾ ಸೇನಾನಿ ! ಅಪ್ರತಿಮ ಯೋಧನ ಪರಾಕ್ರಮ ನಿಮಗೆ ತಿಳಿದಿದೆಯೇ?!

ಹಿಂದೂಸ್ಥಾನದ ಇತಿಹಾಸದಲ್ಲಿ ಪ್ರೇರಣಾದಾಯಕವಾದ ಮಹಾರಾಣಾ ಪ್ರತಾಪಸಿಂಹರ ಹೆಸರು ಸಾಹಸ, ಶೌರ್ಯ, ತ್ಯಾಗ ಇವುಗಳ ಪ್ರತೀಕವಾಗಿದೆ. ಮಹಾರಾಣ ಪ್ರತಾಪರು ಎಂದರೆ ನಿಜವಾಗಿಯೂ ಅವರೊಂದು ಅದ್ಭುತ ಶಕ್ತಿ ಅದಲ್ಲದೆ ಇವರೊಬ್ಬ ಹಿಂದುತ್ವದ ಪ್ರತೀಕವಾಗಿರೋ ಕ್ಷಾತ್ರತೇಜಸ್ಸಿನ ಜ್ವಾಲೆ ಅಂತಾನೇ ಹೇಳಬಹುದು. ಮಹಾರಾಣಾ ಪ್ರತಾಪರ ಬಗ್ಗೆ ಓದಿದರೆ ನಿಜವಾಗಿಯೂ ಒಮ್ಮೆ ಮೈ ಮನ ಪುಳಕಿತವಾಗುತ್ತದೆ! ಮಹಾರಾಣಾ ಪ್ರತಾಪರ ಜನ್ಮ ಮೇ 9 1540 ರಲ್ಲಾಯಿತು. ಇವರು ಮೇವಾಡದ ದ್ವಿತೀಯ ರಾಣಾ ಉದಯ ಸಿಂಹ ಇವರ ಜ್ಯೇಷ್ಠ ಪುತ್ರರಾಗಿದ್ದು ಸ್ವಾಭಿಮಾನ ಹಾಗೂ ಸದಾಚಾರ ಪ್ರತಾಪಸಿಂಹರ ಮುಖ್ಯ ಗುಣಗಳಾಗಿದ್ದವು. ಅವರಿಗೆ ಚಿಕ್ಕಂದಿನಿಂದಲೇ ಮೈದಾನದಲ್ಲಿನ ಆಟ ಹಾಗೂ ಶಸ್ತ್ರಾಸ್ತ್ರಗಳನ್ನು ಉಪಯೋಗಿಸುವುದರಲ್ಲಿ ಆಸಕ್ತಿಯಿತ್ತು.

ಮೊಘಲರ ವಿರುದ್ಧದ ದಣಿವರಿಯದಂತೆ ಸೆಣಸುತ್ತಾ ಹಿಂದು ರಜಪೂತ ಪರಂಪರೆಯ ಅತ್ಯಂತ ಹೆಮ್ಮೆಯ ಬಿಂದುವಾಗಿ ಮಾಡಿದ ರಾಣಾ ಪ್ರತಾಪರನ್ನು ಪ್ರತಿಯೋರ್ವ ಹಿಂದೂ ಹೃದಯದಲ್ಲಿಟ್ಟು ಪೂಜಿಸಬೇಕು. ಮತಾಂಧರೊಡನೆ ಯಾವ ರೀತಿ ಹೋರಾಟ ನಡೆಸಬೇಕೆಂದು ಪ್ರತಾಪರನ್ನು ನೋಡಿ ಕಲಿಯಬೇಕು. ಇಂದು ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿರಲು ಮಹಾರಾಣಾ ಪ್ರತಾಪರೂ ಕಾರಣ. ಮೊಘಲ್ ವಂಶ ದುರ್ಬಲವಾಗುವಂತೆ ನೋಡಿಕೊಂಡರಲ್ಲದೆ ಅನೇಕ ಪ್ರದೇಶಗಳನ್ನು ಮುಸ್ಲಿಂ ಕಪಿಮುಷ್ಠಿಯಿಂದ ಸ್ವತಂತ್ರ್ಯಗೊಳಿಸುವಂತೆ ಮಾಡಿಕೊಂಡರು. ಮಹಾರಾಣ ಪ್ರತಾಪರ ಸೇನೆಯ ಬಗ್ಗೆ ಕೇಳಿದರೇನೇ ಅಕ್ಬರನ ಸಾಮ್ರಾಜ್ಯವನ್ನೇ ಗಡಗಡ ನಡುಗುತಿತ್ತು. ಅಕ್ಬರ್ ಜೀವನ ಪೂರ್ತಿ ಆತಂಕವಿರುವಂತೆ ಪ್ರತಾಪರು ನೋಡಿಕೊಂಡರು. ಇದು ಅಕ್ಬರನನ್ನು ಹಿಂದೂಗಳ ವಿರುದ್ಧ ದೌರ್ಜನ್ಯ ಎಸಗದಂತೆ ನೋಡಿಕೊಂಡಿತು. ಅಲ್ಲದೆ ಅಕ್ಬರನ ಸೈನ್ಯದಲ್ಲಿ ಅನೇಕ ಹಿಂದೂಗಳಿದ್ದರು. ಒಂದು ವೇಳೆ ಅಕ್ಬರ್ ಹಿಂದೂಗಳ ವಿರುದ್ಧ ನಡದುಕೊಂಡರೆ ಆತನ ಜೊತೆಯಲ್ಲಿದ್ದ ಹಿಂದೂ ದೊರೆಗಳು ಮಹಾರಾಣ ಪ್ರತಾಪರ ಸೇನೆಯನ್ನು ಸೇರುವ ಸಾಧ್ಯತೆ ಇದೆ ಎಂಬ ಆತಂಕ ಮನೆಮಾಡಿತ್ತು. ಇದೇ ಆತಂಕ ಅಕ್ಬರನಲ್ಲಿ ಹಿಂದೂಗಳ ವಿರುದ್ಧ ದೌರ್ಜನ್ಯ ಎಸಗದಂತೆ ನೋಡಿಕೊಂಡಿತು.

ಕ್ರೂರಿ ಅಕ್ಬರನನ್ನು ಇತಿಹಾಸ ಮಾತ್ರ ಹೀರೋ ನಂತೆ ಬಿಂಬಿಸಿದೆ!

ಶಾಲಾ ಫಠ್ಯ ಪುಸ್ತಕಗಳಲ್ಲಿ ಅಕ್ಬರ್ ಎಂದರೆ ಮಹಾನ್ ವ್ಯಕ್ತಿ ಎಂದು ನಂಬಿಸಿಬಿಟ್ಟಿದ್ದರು. ಅದನ್ನೇ ನಾವು ಕೂಡಾ ನಂಬಿ ಬಿಡುತ್ತೇವೆ. ಆದರೆ ಅಕ್ಬರ್ ಇತರ ಮೊಘಲ್ ದೊರೆಗಳಂತೆ ಕ್ರೂರಿಯಾಗಿದ್ದ. ಈತ ರಜಪೂತರ ವಿರುದ್ಧದ ಪ್ರಾರಂಭಿಕ ಯುದ್ಧಗಳಲ್ಲಿ ಮೆರೆದ ಕ್ರೌರ್ಯ ಇತರ ಮೊಘಲ್ ರಾಜರುಗಳಂತೆ ಕಡಿಮೆ ಇರಲಿಲ್ಲ. ರಜಪೂತ ಮಹಿಳೆಯರನ್ನು ಸತಿಯ ಚಿತಾಗ್ನಿಗೆ ದೂಡಿದ ಪಾಪಕಾರ್ಯದಲ್ಲಿ ಅಕ್ಬರನ ಪಾತ್ರವೂ ಅಷ್ಟೇ ದೊಡ್ಡದಿದೆ. 1568ರಲ್ಲಿ ನಾಲ್ಕು ತಿಂಗಳ ಕದನದ ನಂತರ ಚಿತ್ತೋಡಗಢದ ಕೋಟೆ ಅಕ್ಬರನ ವಶವಾಯಿತು. ಆಗ ಸಮರದಲ್ಲಿ ಬದುಕುಳಿದಿದ್ದ 30,000 ಹಿಂದುಗಳನ್ನು ಮಾರಣಹೋಮ ಮಾಡಿ ಇಸ್ಲಾಂ ಸಾಮ್ರಾಜ್ಯದ ಆಗಮನವಾಗಿದೆಯೆಂದು ಸಾರಿದ್ದು ಇದೇ ಅಕ್ಬರ್. ಹಿಂದೂಗಳ ರುಂಡಗಳನ್ನು ಕಡಿದು ಆ ಪ್ರಾಂತ್ಯದಲ್ಲೆಲ್ಲಾ ಗೋಪುರಗಳ ಮೇಲೆ ನೇತುಹಾಕಿಸಿ ತನ್ನ ಪ್ರಾಬಲ್ಯ ಸಾರಿದ ವಿಕೃತ ನಡೆ ಅಕ್ಬರನದಾಗಿತ್ತು.

ಪ್ರತಾಪರು ಅಕ್ಬರನ ಬಲಾಢ್ಯ ಸೈನ್ಯದೆದುರು ಎಂದಿಗೂ ಶರಣಾಗಲೇ ಇಲ್ಲ. ಅಕ್ಬರನಿಗೆ ತಲೆಬಾಗಿದ್ದೇ ಆದರೆ ಪ್ರತಾಪರಿಗೆ ಸಕಲ ವೈಭೋಗಗಳನ್ನು ನೀಡುವುದಾಗಿ ಸಂಧಾನ ಪ್ರಸ್ತಾಪವಾದಾಗಲೂ ಸ್ವಾಭಿಮಾನ ಬಿಡಲಿಲ್ಲ. ಬಹುತೇಕ ರಜಪೂತ ರಾಜರೆಲ್ಲಾ ಅಕ್ಬರನಿಗೆ ನಿಷ್ಠರಾಗಿ, ಅವರ ಜೊತೆ ವಿವಾಹ ಸಂಬಂಧ ಏರ್ಪಡಿಸಿದ್ದರೂ ಪ್ರತಾಪರು ಮಾತ್ರ ಕಾಡುಮೇಡುಗಳಲ್ಲಿ ಅಲೆದಾಡುತ್ತಾ ಅಕ್ಬರನಿಗೆ ಪ್ರತಿರೋಧ ಒಡ್ಡುತ್ತಲೇ ಇದ್ದರು.

ಮೇವಾಡದ ನಾಲ್ಕೂ ಸೀಮೆಯಲ್ಲಿ ಮುಸಲ್ಮಾನರು ಮುತ್ತಿಗೆ ಹಾಕಿದ್ದರು. ಮಹಾರಾಣಾ ಪ್ರತಾಪಸಿಂಹರ ತಮ್ಮಂದಿರಾದ ಶಕ್ತಿಸಿಂಹ ಹಾಗೂ ಜಗಮಲ್ಲ ಇವರಿಬ್ಬರೂ ಅಕ್ಬರನ ವಶದಲ್ಲಿದ್ದರು. ಅಕ್ಬರನಿಗೆ ಬುದ್ಧಿ ಕಲಿಸಬೇಕಿತ್ತು. ಆದರೆ ಪ್ರತಾಪರ ಬೊಕ್ಕಸ ಖಾಲಿಯಾಗಿತ್ತು. ಅದಕ್ಕಾಗಿ ಪ್ರತಾಪ ಸಿಂಹರು ತಮ್ಮ ವಿಶ್ವಾಸಿ ಸರದಾರರನ್ನು ಕರೆಸಿ, “ಮೇವಾಡ ಮುಸಲ್ಮಾನರ ವಶದಲ್ಲಿದೆ. ಚಿತ್ತೋಡ ಸ್ವತಂತ್ರವಾಗುವ ತನಕ ನಾನು ಬೆಳ್ಳಿಬಂಗಾರದ ತಟ್ಟೆಯಲ್ಲಿ ಊಟ ಮಾಡುವುದಿಲ್ಲ ಮೆತ್ತಗಿನ ಹಾಸಿಗೆಯಲ್ಲಿ ಮಲಗುವುದಿಲ್ಲ, ರಾಜವೈಭವವನ್ನು ಅನುಭವಿಸುವುದಿಲ್ಲ, ನೆಲದ ಮೇಲೆ ಮಲಗುವೆನು ಹಾಗೂ ಗುಡಿಸಲಿನಲ್ಲಿ ವಾಸಿಸುವೆನು! ಶೂರ ಸರದಾರರೇ, ಚಿತ್ತೋಡ ಸ್ವತಂತ್ರಗೊಳಿಸುವ ನನ್ನ ಪ್ರತಿಜ್ಞೆಯನ್ನು ಪೂರ್ಣಗೊಳಿಸಲಿಕ್ಕಾಗಿ ತನು-ಮನ-ಧನದಿಂದ ನೀವೆಲ್ಲರೂ ಸಹಾಯ ಮಾಡುವಿರಾ?.” ಎಂದರು. ಪ್ರತಾಪರ ಕಠೋರವಾದ ಪ್ರತಿಜ್ಞೆಯನ್ನು ಕೇಳಿ ಅಲ್ಲಿದ್ದ ಎಲ್ಲ ಸರದಾರರು, “ಹೇ ರಾಜಾ, ನಮ್ಮ ಶರೀರದಲ್ಲಿ ರಕ್ತದ ಕೊನೆ ಹನಿಯಿರುವ ತನಕ ಚಿತ್ತೋಡದ ಮುಕ್ತಿಗಾಗಿ ಹೋರಾಡುವೆವು’ ಎಂದು ಬೆಂಬಲಕ್ಕೆ ನಿಂತರು.

ಹಳದಿಘಾಟ್ ಯುದ್ಧ ನಡೆದದ್ದು 1573ರ ಜೂನ್ 21 ರಂದು. ಕೊರಕಲುಗಳು, ಕಣಿವೆಗಳಿಂದ ಕೂಡಿದ ಹಲ್ದಿಘಾಟಿ ಎಂಬ ಸ್ಥಳದಲ್ಲಿ ಮಾನಸಿಂಹ ನೇತೃತ್ವದ ಅಕ್ಬರ್ನ ಸೇನೆ ಹಾಗೂ ಮೇವಾಡದ ರಾಜಾ ರಾಣಾ ಪ್ರತಾಪನ ಸೇನೆ ಎದುರಾದವು. ಮೊಗಲ್ ಸೈನ್ಯದ ಸೇನಾಪತಿ ಮಾನಸಿಂಹ. ಸ್ವತಃ ರಾಣಾ ಪ್ರತಾಪನೇ ತನ್ನ ಪ್ರಿಯ ಚೇತಕ್ ಕುದುರೆಯನ್ನೇರಿ ರಜಪೂತ ಸೈನ್ಯದ ನೇತೃತ್ವ ವಹಿಸಿದ್ದ. ಅಂದು ಬೆಳಗಿನಿಂದ ಮಧ್ಯಾಹ್ನದವರೆಗೆ ನಡೆದ ಭೀಕರ ಕಾಳಗದಲ್ಲಿ ರಜಪೂತರ ಕಡೆ 20,000 ಸೈನಿಕರು, ಮೊಗಲರ ಕಡೆ 80,000 ಅಶ್ವಾರೋಹಿ ಸೈನಿಕರು ಇದ್ದರೆಂದು ಕೆಲವು ದಾಖಲೆಗಳು ತಿಳಿಸುತ್ತವೆ. ಈ ಯುದ್ಧದಲ್ಲಿ ಮಾನಸಿಂಹನು ಗೆಲ್ಲಲಿಲ್ಲ. ಅಕ್ಬರ್ನ ಕಟ್ಟಾಜ್ಞೆಯಂತೆ ಪ್ರತಾಪ ಸಿಂಹನನ್ನು ಹಿಡಿದುಕೊಂಡು ಹೋಗಲು ಆಗಲಿಲ್ಲ.

ಮಹಾರಾಣಾ ಪ್ರತಾಪಸಿಂಹರನ್ನು ಮೋಸದಿಂದ ತನ್ನ ಗುಲಾಮರನ್ನಾಗಿ ಮಾಡಲು ಅಕ್ಬರನು ಬಹಳ ಪ್ರಯತ್ನಿಸಿ ಸೋತ.. ಕೊನೆಗೆ ಅಕ್ಬರನು ತನ್ನ ಪುತ್ರ ಸಲೀಂ (ಜಹಾಂಗೀರ)ನ ನೇತೃತ್ವದಲ್ಲಿ ಸೈನ್ಯವನ್ನು ಕಳಿಸಿದ. ಜೊತೆಗೆ ಅಕ್ಬರನಿಗೆ ಶರಣಾಗಿದ್ದ ಜಯಪುರದ ರಾಜಾ ಮಾನಸಿಂಗ್ ಮತ್ತು ಮತಾಂತರವಾಗಿದ್ದ ರಾಜಪುತ ಸರದಾರ ಮಹಾಬತಖಾನ್ ಸೈನ್ಯಗಳು ಮಹಾರಾಣಾ ಪ್ರತಾಪಸಿಂಹರ ಮೇಲೆ ದಂಡೆತ್ತಿ ಹೋದವು. ಮಹಾರಾಣಾ ಪ್ರತಾಪ ಸಿಂಹರ 28 ಸಾವಿರ ಸೈನ್ಯ ಹಾಗೂ ಅಕ್ಬರನ 2 ಲಕ್ಷ ಸೈನ್ಯ ಹಳದಿಘಾಟಿನಲ್ಲಿ ಮುಖಾಮುಖಿಯಾಯಿತು. ಹೋರಾಟದ ಆವೇಶದಲ್ಲಿ ಮಹಾರಾಣಾ ಪ್ರತಾಪಸಿಂಹರು ತನ್ನ ಕುದುರೆಯ ಮೇಲಿಂದ ನೇರವಾಗಿ ಸಲೀಂನ ಆನೆಯ ಮೇಲೇರಿ ಹೋದರು. ಪ್ರತಾಪರ ಇತಿಹಾಸ ಪ್ರಸಿದ್ಧ `ಚೇತಕ’ ಎಂಬ ಕುದುರೆಯೂ ಅಂಜದೆ ಸಲೀಂನ ಆನೆಯ ಮೇಲೆಯೇ ಜಿಗಿಯಿತು, ರಾಣಾ ಪ್ರತಾಪಸಿಂಹರು ಭರ್ಜಿಯನ್ನೆಸೆದರು. ಸಲೀಂ ಮಾವುತನ ಹಿಂದೆ ಆಶ್ರಯ ಪಡೆದ ಕಾರಣ ಭರ್ಜಿ ಮಾವುತನಿಗೆ ತಗುಲಿ ಅವನು ಸಾವನ್ನಪ್ಪಿದನು. ಅದೃಷ್ಟವಶಾತ್ ಸಲೀಂ ಬದುಕಿದನು.

ಘಟನೆಯಲ್ಲಿ ಚೇತಕನಿಗೆ ಗಾಯವಾಯಿತು. ಆದರೂ ಅದು ಪ್ರತಾಪರ ಜೀವವನ್ನು ಉಳಿಸಲಿಕ್ಕಾಗಿ ಒಂದು ದೊಡ್ಡ ಹಳ್ಳ ದಾಟಲು ಜಿಗಿಯಿತು. ಹಳ್ಳವನ್ನು ದಾಟಿದ ತಕ್ಷಣ ನೆಲಕ್ಕುರುಳಿದ ಚೇತಕನ ಪ್ರಾಣ ಹಾರಿಹೋಯಿತು. ಚೇತಕನ ಮೃತ್ಯುವಿನಿಂದ ಮಹಾರಾಣಾರಿಗೆ ಬಹಳ ದುಃಖವಾಯಿತು. ಚೇತಕ ಪ್ರಾಣ ಬಿಟ್ಟಿರುವ ಸ್ಥಳದಲ್ಲಿ ಮಹಾರಾಣಾ ಪ್ರತಾಪಸಿಂಹರು ಅದರ ನೆನಪಿಗಾಗಿ ಒಂದು ಸುಂದರವಾದ ಉದ್ಯಾನವನವನ್ನು ನಿರ್ಮಿಸಿದರು. ಅನಂತರ ನೇರವಾಗಿ ಅಕ್ಬರನೇ ಯುದ್ಧಕ್ಕೆ ಬಂದನು. ಆತ ಬರೋಬ್ಬರಿ 6 ತಿಂಗಳು ಯುದ್ಧ ನಡೆಸಿಯೂ ಪ್ರತಾಪರನ್ನು ಸೋಲಿಸಲು ಸಾಧ್ಯವಾಗಲಿಲ್ಲ. ಯುದ್ಧಕ್ಕೆ ಅಕ್ಬರ ಸಾಕಷ್ಟು ಹಾನಿ ಅನುಭವಿಸುತ್ತಿದ್ದ. ಕೊನೆಯ ಪ್ರಯತ್ನವೆಂದು ಅಕ್ಬರನು 1584ರಲ್ಲಿ ಮಹಾಪರಾಕ್ರಮಿ ಸೇನಾಪತಿ ಜಗನ್ನಾಥನಿಗೆ ವಿಶಾಲವಾದ ಸೈನ್ಯವನ್ನು ನೀಡಿ ಮೇವಾಡದ ಮೇಲೆ ಆಕ್ರಮಿಸಲು ಕಳಿಸಿದನು. ಆದರೆ ಬರೋಬ್ಬರಿ 2 ವರ್ಷ ಕಠಿಣ ಪ್ರಯತ್ನ ಮಾಡಿಯೂ ಮಹಾರಾಣಾರನ್ನು ಹಿಡಿಯಲು ಅವನಿಗೂ ಸಾಧ್ಯವಾಗಲಿಲ್ಲ.

ಪ್ರತಾಪರು ಅರಣ್ಯದಲ್ಲಿ ಅಲೆದಾಡುತ್ತಿದ್ದ ಸಂದರ್ಭ ಮಾಹಾರಾಣಿ ರೊಟ್ಟಿ ಕಾಯಿಸುತ್ತಿದ್ದರು. ಎಲ್ಲರೂ ತಮ್ಮ ತಮ್ಮ ಪಾಲಿನ ರೊಟ್ಟಿ ತಿಂದರು. ಮಾಹಾರಾಣಿಯ ಮಗಳು ಕೂಡಾ ತನ್ನ ಮಗಳಿಗೆ ಅರ್ಧ ರೊಟ್ಟಿ ತಿನ್ನಲು ಕೊಟ್ಟು ಉಳಿದ ಉಳಿದ ರೊಟ್ಟಿ ರಾತ್ರಿಗೆ ಕಟ್ಟಿಡಲು ಹೇಳಿದರು. ಅಷ್ಟರಲ್ಲಿ ಕಾಡುಬೆಕ್ಕು ಬಂದು ರಾಜಕುಮಾರಿಯ ಕೈಯಲ್ಲಿದ್ದ ರೊಟ್ಟಿಯನ್ನು ಕಸಿದುಕೊಂಡು ಹೋಯಿತು. ರಾಜಕುಮಾರಿ ಅಸಹಾಯಕತೆಯಿಂದ ಅಳುತ್ತಾ ಕುಳಿತಳು. ಇದರಿಂದ ಮನಸ್ಸು ಕರಗಿದ ಪ್ರತಾಪರು ಅಕ್ಬರನೊಂದಿಗೆ ಒಪ್ಪಂದ ಮಾಡಲು ನಿರ್ಣಯಿಸಿದರು. ಆದರೆ ಅಕ್ಬರನ ದರಬಾರಿನಲ್ಲಿ ಪ್ರತಾಪಸಿಂಹರ ಹಿತೈಷಿಯಾಗಿದ್ದ ರಾಜಕವಿ ಪೃಥ್ವಿರಾಜರು ಪ್ರತಾಪರಿಗೆ ರಾಜಸ್ಥಾನಿ ಭಾಷೆಯಲ್ಲಿ ಕವಿತೆಯ ರೂಪದಲ್ಲಿ ಒಂದು ದೊಡ್ಡ ಪತ್ರ ಬರೆದು ಒಪ್ಪಂದ ಮಾಡದಂತೆ ಸೂಚಿಸಿದರು. ಅಕ್ಬರನೊಂದಿಗೆ ಒಪ್ಪಂದ ಮಾಡುವ ವಿಚಾರವನ್ನೇ ಮನಸ್ಸಿನಿಂದ ಕಿತ್ತೆಸೆದರು.

ರಾಜಸ್ಥಾನ ಅಕ್ಬರನ ವಶದಲ್ಲಿದ್ದಾಗ ಮಹಾರಾಣಾ ಪ್ರತಾಪಸಿಂಹರು ತಮ್ಮ ಸಣ್ಣ ಭೂಮಿಗಾಗಿ 25 ವರ್ಷ ಹೋರಾಡಿದರು. ಆದರೆ ಅಕ್ಬರನಿಗೆ ಸೋಲಿಸಲಾಗಲಿಲ್ಲ. ಪ್ರತಾಪರು ಮುಸಲ್ಮಾನರ ಹಿಡಿತದಿಂದ ರಾಜಸ್ಥಾನದ ಬಹಳಷ್ಟು ಭೂಮಿಯನ್ನೂ ಸ್ವತಂತ್ರಗೊಳಿಸಿದರು. ಕೊನೆಯ ಕ್ಷಣದಲ್ಲಿ ತಮ್ಮ ಪುತ್ರ ಅಮರಸಿಂಹನ ಕೈಹಿಡಿದುಕೊಂಡು ಅವರು ತನ್ನ ಪ್ರತಿಜ್ಞೆಯನ್ನು ಪೂರ್ಣಗೊಳಿಸುವ ಜವಾಬ್ದಾರಿಯನ್ನು ವಹಿಸಿ ಪ್ರಾಣ ಬಿಟ್ಟರು. ಇಂದು ಹಿಂದೂಗಳು ಬಹುಸಂಖ್ಯಾರಾಗಿ ಉಳಿದುಕೊಂಡಿರುವುದಕ್ಕೆ ಮಹಾರಾಣಾ ಪ್ರತಾಪರೂ ಕಾರಣ. ಇಲ್ಲದೇ ಹೋಗಿದ್ದರೆ ಮೊಘಲರು ಭಾರತವನ್ನು ಎಂದೋ ಇಸ್ಲಾಮೀ ರಾಷ್ಟ್ರವನ್ನಾಗಿ ಮಾಡಿರುತ್ತಿದ್ದರು.

ಪ್ರತಾಪರೂ ಇಂದಿನ ಭಾರತೀಯರ ಮನದಲ್ಲಿ ಅಜರಾಮರ….

ವಿದೇಶಿ ರಕ್ತದಿಂದ ತನ್ನವರ ರಕ್ತ ಕಲುಷಿತಗೊಳ್ಳಬಾರದೆಂದೂ ತನ್ನ ದೇಶ ಸದಾ ಸ್ವತಂತ್ರವಾಗಿಯೇ ಇರಬೇಕೆಂದೂ ಅದಕ್ಕಾಗಿ ತನ್ನ ಜೀವನವನ್ನೇ ಬಲಿ ನೀಡಲು ರಾಣಾ ನಿರ್ಧರಿಸಿಕೊಂಡಿದ್ದ. ಇಂತಹ ಪರಾಕ್ರಮಿ ರಾಜರುಗಳ ಎದುರು ಯಾವ ಮೊಘಲರು ರಾಜರುಗಳೂ ಸರಿಸಾಟಿ ಇಲ್ಲ. ದೇಶ, ಧರ್ಮ ಸಂಸ್ಕೃತಿಯನ್ನು ರಕ್ಷಿಸಲು, ತನ್ನ ಜನರ ಮಾನ, ಪ್ರಾಣ, ಸ್ವಾಭಿಮಾನಗಳನ್ನು ಕಾಪಾಡಲು ತನ್ನ ಜೀವವನ್ನೇ ಪಣಕ್ಕಿಟ್ಟು ಹೋರಾಡಿದ ವೀರ ಇವರು. ಮೇವಾಡದ ರಾಜನಾಗಿದ್ದ ಮಹಾರಾಣಾ ಪ್ರತಾಪ್, ಮೊಘಲರ ವಿರುದ್ಧ ಪರಾಕ್ರಮದಿಂದ ಹೋರಾಟ ನಡೆಸಿದ ಕಾರಣಕ್ಕಾಗಿ ಇಂದಿಗೂ ಭಾರತೀಯರ ಜನಮಾನಸದಲ್ಲಿ ಅಜರಾಮರನಾಗಿ ಉಳಿದಿದ್ದಾರೆ.. ಇಂದು ಮಹಾರಾಣ ಪ್ರತಾಪರ ಜಯಂತಿ. ಇವರು ಹಿಂದೂ ಧರ್ಮಕ್ಕೆ ಭಾರತಕ್ಕೆ ನೀಡಿದ ಕೊಡುಗೆ ಅಪಾರ. ಇವರಿಗೆ ಕೋಟಿ ನಮನಗಳು…

Tags

Related Articles

FOR DAILY ALERTS
Close