ಪ್ರಚಲಿತ

ಆತ್ಮೀಯ ಕಮಲ್ ಹಾಸನ್! ‘ಸಂಘ ದೇಶಕ್ಕೇನು ಮಾಡಿದೆ?!’ ಎಂಬ ನಿಮ್ಮ ಪ್ರಶ್ನೆಗೆ ನಿಮ್ಮ ಜನ್ಮದಿನದಂದೇ ಉತ್ತರ ಕೊಡುವುದು ನನ್ನ ಕರ್ತವ್ಯ!

ಕಮಲ್ ಹಾಸನ್ “ಸಂಘ ದೇಶಕ್ಕೇನು ಮಾಡಿದೆ?!” ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದರೋ ಇಲ್ಲವೋ, ಆದರೆ ‘ಭಯೋತ್ಪಾದಕ ಸಂಘಟನೆ’ ಎಂಬ
ತೀರ್ಪೊಂದನ್ನು ಧಾರಾಳವಾಗಿ ಕೊಟ್ಟುಬಿಟ್ಟರು! ‘ಸಂಘ ಸ್ವಾತಂತ್ರ್ಯದ ಸಮಯದಲ್ಲಿ ಅಡವಿ ಕುಳಿತಿತ್ತು, ಸಂಘ ಸಮಾಜದ ಶಾಂತಿಯನ್ನು ಕೆಡಿಸಿದೆ’ ಎಂಬೆಲ್ಲ
ಹೇಳಿಕೆಗಳನ್ನು ಕೊಟ್ಟ ಓ ಹಾಸನ್!!! ನೀನಿದನ್ನು ಓದಲೇಬೇಕು!

1930, ಏಪ್ರಿಲ್ 6 ರಂದು ಶುರುವಾದ ಅಸಹಕಾರ ಚಳುವಳಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕರಾದ ಶ್ರೀ ಡಾ.ಹೆಡ್ಗೇವಾರ್ ಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡು ಡಾ.ಪರಂಜ್ಪೆ ಯವರ ಜೊತೆಗೂಡಿ ಸಹಸ್ರಾರು ಕಾರ್ಯಕರ್ತರ ಜೊತೆ ಹೋರಾಟ ಕಾವೇರುವಂತೆ ಮಾಡಿದ್ದು ಇದೇ ಸಂಘ!

1930, ಮೇ ತಿಂಗಳಿನಲ್ಲಿ ಸತ್ಯಾಗ್ರಹ ಚಳುವಳಿಯನ್ನು ಪ್ರಾರಂಭಿಸುವಾಗಲೂ ಸಹ, ಒಂದು ಸಂಘದ ಪರವಾಗಿ ಸತ್ಯಾಗ್ರಹ ಚಳುವಳಿಯಲ್ಲಿ ಭಾಗವಹಿಸದಿದ್ದರೂ ಸಹ, ಕಾರ್ಯಕರ್ತರಾಗಿ ಭಾಗವಹಿಸಬಹುದೆಂಬ ಗಾಂಧೀಜಿಯ ಮಾತಿಗೆ ತಲೆಬಾಗಿ ಹೋರಾಟ ನಡೆಸಿದ್ದೂ ಇದೇ ಸಂಘ!

Image result for hedgewar

ಪಕ್ಷದ ನಂತರದ ಜನರಲ್ ಸೆಕ್ರೆಟರಿಯಾಗಿ ನೇಮಕ ಹೊಂದಿದ ಜೀ ಜೋಶಿ ಹಾಗೂ ಮದ್ರಾಸ್ ಪ್ರಾಂತ್ಯದ ಮೊದಲನೇ ಭೋದಕನಾಗಿ ನೇಮಕ ಹೊಂದಿದ
ದಾದಾರಾವ್ ಪರ್ಮಥ್ ಹಾಗೂ, ಇಂತಹ ಅದೆಷ್ಟೋ 12 ಪ್ರಮುಖ ಕಾರ್ಯಕರ್ತರನ್ನು ದಾರುಣವಾಗಿ 9 ತಿಂಗಳು ಹಿಂಸಿಸಲಾಗಿತ್ತು! ಆಗಲೂ, ಹೋರಾಟ
ನಿಲ್ಲದಂತೆ ಮಾಡಿದ್ದು, ಪದೇ ಪದೇ ಕಾರ್ಯಕರ್ತರ ಮೂಲಕ ಬ್ರಿಟಿಷರಿಗೆ ಹೊಡೆತ ನೀಡಿದ್ದು ಇದೇ ಸಂಘ!

ನಂತರವೂ ಸಹ, ಮರ್ತಾಂಡ್ ರಾವ್ ರವರನ್ನು ಭೇಟಿಯಾಗಿ ಮತ್ತೆ ಸತ್ಯಾಗ್ರಹಕ್ಕೆ ಕೈ ಜೋಡಿಸಿದ್ದು ಇದೇ ಸಂಘ!

ಸತ್ಯಾಗ್ರಹ ಚಳುವಳಿಯಲ್ಲಿ ಸುಮಾರು ನೂರಕ್ಕೂ ಹೆಚ್ಚು ಜನ ಕಾರ್ಯಕರ್ತರು ಸತ್ಯಾಗ್ರಹವನ್ನು ಪ್ರಾರಂಭಿಸಿದ್ದ ನಾಯನನ್ನು ಹಾಗೂ ಪ್ರಮುಖ ವ್ಯಕ್ತಿಗಳನ್ನು ರಕ್ಷಿಸಲು ಸುತ್ತುವರೆದು ನಿಂತದ್ದು ಇದೇ ಸಂಘದ ಕಾರ್ಯಕರ್ತರೇ! ಲಾಠಿಯೇಟು ಬಿದ್ದರೂ ಜಗ್ಗದೇ ನಿಂತು ನಿಮ್ಮ ಗುರುವನ್ನು ರಕ್ಷಿಸಿದ್ದು ಇದೇ ಕಾರ್ಯಕರ್ತರೇ!

ಸೆಕ್ಷನ್ 144 ನ್ನು ಜಾರಿಗೊಳಿಸಿದ್ದರೂ ಸಹ ಹೋರಾಟ ನಿಲ್ಲಿಸದ ಕಾರ್ಯಕರ್ತರ ಬೆನ್ನು ಮೂಳೆಯನ್ನು ಮುರಿದರೂ ಹೋರಾಟ ಬಿಟ್ಟು ಕದಲದೇ ನಿಂತದ್ದು ಇದೇ ಸಂಘ!

1931 ರ ವಿಜಯದಶಮಿಯಂದು ಡಾ.ಹೆಗ್ಡೇವಾರ್ ಅವರನ್ನು ಜೈಲಿಗಟ್ಟಲಾಗಿತ್ತು. ವಿಧರ್ಭದ ಅಶ್ತಿಕಿಮಾರ್ ನಲ್ಲಿ ಪರ್ಯಾಯವಾದ ಸರಕಾರವೊಂದನ್ನು ರಚಿಸಿ ಬ್ರಿಟಿಷರ ದೌರ್ಜನ್ಯಗಳ ವಿರುದ್ಧ ಭಾರತೀಯರನ್ನು ಸಿಡಿದೇಳುವಂತೆ ಮಾಡಿದ್ದೂ ಇದೇ ಸಂಘ!

ಪರ್ಯಾರ ಸರಕಾರದ ಸಭೆ ನಡೆಯುತ್ತಲೇ ಬ್ರಿಟಿಷರ ಲಾಠಿ ಏಟು ತಿಂದು ಸಾವನ್ನಪ್ಪಿದ್ದ ಕಾರ್ಯಕರ್ತರ ಸಂಖ್ಯೆ ನೂರಕ್ಕೂ ಹೆಚ್ಚು! ಉಹೂಂ! ಆದರೂ, ಸಂಘ ‘ನಮಸ್ತೇ ಸದಾ ವತ್ಸಲೇ ಮಾತೃಭೂಮಿ’ ಎನ್ನುವುದನ್ನು ಬಿಡಲಿಲ್ಲ!

ಸಿಟ್ಟಿಗೆದ್ದ ಬ್ರಿಟಿಷ್ ಸರಕಾರ, ರಮಾಕಾಂತ ಕೇಶವ ದೇಶಪಾಂಡೆ, ಬಾಳಾಸಾಹೇಬ್ ದೇಶಪಾಂಡೆ ಹಾಗೂ ರಾಮ್ಟೆಕ್ ನಗರದ ಸಹಸಂಚಾಲಕ್ ನನ್ನು ಚಳುವಳಿಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ಗಲ್ಲಿಗೇರಿಸಿದ ಬ್ರಿಟಿಷ್ ಸರಕಾರವನ್ನೂ ಲೆಕ್ಕಿಸದೇ ‘ದೇಶ ಮೊದಲು’ ಎಂದಿದ್ದು ಇದೇ ಸಂಘ!

Image result for swayam sevaks in freedom struggle

ಅದೇ ಕಾರ್ಯಕರ್ತರು, ಸ್ವಾತಂತ್ರ್ಯಾನಂತರ, ಸ್ಮರಣಿಕೆಯ ರೂಪದಲ್ಲಿ ಬನವಾಸೀ ಕಲ್ಯಾಣ ಆಶ್ರಮವನ್ನು ನಿರ್ಮಿಸಿದರು!

ಕಾರ್ಯಕರ್ತರನ್ನು ದೇಶದ ಮೂಲೆ ಮೂಲೆಯಲ್ಲಿಯೂ ಹಿಂಸಿಸಲಾಗಿತ್ತು. ದೆಹಲಿ- ಮುಝಾಫರ್ ನಗರ ಮಧ್ಯದ ರೈಲ್ವೆ ದಾರಿಯನ್ನು ಕಾರ್ಯಕರ್ತರು ಹಾಳುಗೆಡವಿದರ ಪರಿಣಾಮ ಬ್ರಿಟಿಷ್ ಸರಕಾರ ದೆಹಲಿಯಲ್ಲಿಯೇ ನರಳುವಂತಾಯಿತು. ಆಗ್ರಾದ ಬಹರನ್ ರೈಲ್ವೆ ನಿಲ್ದಾಣವನ್ನು ಸುಟ್ಟು ದೆಹಲಿಯಲ್ಲಿಯೇ ಬ್ರಿಟಿಷ್ ಸರಕಾರ ಮೈ ಪರಚಿಕೊಳ್ಳುವಂತೆ ಮಾಡಿದ್ದು ಇದೇ ಸಂಘ!

ಮೀರತ್ ಜಿಲ್ಲೆಯ ಮವಾನಾ ತಹಶೀಲ್ದಾರ ಕಛೇರಿಯ ಮೇಲೆ ಭಾರತ ಧ್ವಜವನ್ನೇರಿಸಬೇಕೆಂದು ಪಣ ತೊಟ್ಟ ಕಾರ್ಯಕರ್ತರ ಮೇಲೆ ಬ್ರಿಟಿಷ್ ಸರಕಾರ ಗುಂಡು ಹಾರಿಸಿದರೂ ಕೂಡ, ತೋಯ್ದ ರಕ್ತದಿಂದಲೇ ಮತ್ತೆ ಮತ್ತೆ ಸ್ಫೂರ್ಥಿಗೊಂಡಿದ್ದು ಇದೇ ಸಂಘದ ಕಾರ್ಯಕರ್ತರೇ! ಅದೇ ರೀತಿ, ನಾಲ್ಕನೇ ಸಂಘದ ಆಡಳಿತ ಮತ್ತೆ ಅಸ್ತಿತ್ವಕ್ಕೆ ಬಂದಿದ್ದು ರಂಜು ಭಾಯ್ ಅವರಿಂದ!

1942 ರ ಚಳುವಳಿಯಲ್ಲಿ, ದಾತೋಪಂತ್ ತಂಗಾರಿ ಯವರಂತಹ ಪ್ರಮುಖ ನಾಯಕರನ್ನು ಹೋರಾಟಕ್ಕೆ ಕಳುಹಿಸಿಕೊಟ್ಟಿದ್ದೂ ಇದೇ ಸಂಘವೇ!

1947 ರಿಂದ ಗಡಿಭಾಗದಲ್ಲಿ ನಡೆಯುವ ಪಾಕಿಸ್ಥಾನದ ಸೇನಾ ಶಿಬಿರಗಳ ಮೇಲೆ, ತರಬೇತಿಗಳ ಮೇಲೆ ಕಣ್ಣಿಡುತ್ತಲೇ ಬಂದಿರುವುದು ಇದೇ ಸಂಘ! ಕಾಶ್ಮೀರದ ಕಣಿವೆಯುದ್ದಕ್ಕೂ ನಡೆಯುವ ಉಗ್ರ ಚಟುವಟಿಕೆಗಳ ನಡೆಯುವ ಪರಿಸ್ಥಿತಿಯಲ್ಲಿಯೂ ಜಾಗೃತಿ ಮೂಡಿಸಿದ್ದು ಇದೇ ಸಂಘ! ಇದನ್ನು, ನಿಮ್ಮ ನೆಹರೂ ಸರಕಾರವಾಗಲಿ, ಮೌಂಟ್ ಬ್ಯಾಟನರ ಸರಕಾರವಾಗಲೀ ಇವತ್ತಿನವರೆಗೂ ಮಾಡಿಲ್ಲ ಬಿಡಿ! ಸಂಘದಿಂದ ಬಂದ ಪ್ರತಿ ನಾಯಕನೂ ಸಹ ಮೊದಲು ಗಮನ ಹರಿಸುವುದು ದೇಶದ ಭದ್ರತಾ ವ್ಯವಸ್ಥೆಯ ಮೇಲೆ!

ಲಾನ್ಯಾರ್ಡ್ ನ ಉಗ್ರ ತಂಡ ಕಾಶ್ಮೀರ ಗಡಿಯನ್ನು ನುಸುಳಲೆತ್ನಿಸಿದಾಗ, ಭಾರತೀಯ ಸೈನಿಕರ ಜೊತೆಗೂಡಿ ತಾಯ್ನಾಡನ್ನು ರಕ್ಷಿಸುವಲ್ಲಿ ಯೋಧರ ಜೊತೆ ಅದೆಷ್ಟೋ ಕಾರ್ಯಕರ್ತರು ಪ್ರಾಣತ್ಯಾಗ ಮಾಡಿದರ ಫಲವಾಗಿ, ಅವತ್ತು ಕಾಶ್ಮೀರ ಉಳಿಯಿತು! ಭಾರತದ ಭಾಗವಾಗಿ!

ಯಾವಾಗ ಇದೇ ಮಹಾತ್ಮಾ, ನೆಹರೂ ಹಾಗೂ ಜಿನ್ನಾರ ಒಕ್ಕೂಟವೊಂದು ದೇಶವನ್ನೇ ವಿಭಜನೆಗೊಳಿಸಿದಾಗ ಹತ್ಯಾಕಾಂಡ ನಡೆದುಹೋಯಿತಲ್ಲವೇ?! ನೆಹರೂ ಸರಕಾರವೂ ಕೋಮಾಕ್ಕೆ ಹೋದ ಸ್ಥಿತಿಯಲ್ಲಿದ್ದಾಗ, ಇದೇ ಸಂಘದ ಕಾರ್ಯಕರ್ತರು 3000 ಕ್ಕೂ ಹೆಚ್ಚು ನಿರಾಶ್ರಿತರ ಶಿಬಿರಗಳನ್ನು ನಿರ್ಮಿಸಿ ವಲಸೆ ಬಂದವರನ್ನು ಹಿಂದುವೋ, ಮುಸಲ್ಮಾನನೋ, ಕ್ರೈಸ್ತನೋ ಎಂಬುವುದನ್ನೂ ನೋಡದೇ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದರಲ್ಲ?! ಹಗಲೂ ರಾತ್ರಿ ತಮಗಿಲ್ಲದಿದ್ದರೂ ನಿರಾಶ್ರಿತರಿಗೆ ಬದುಕಲು ಜಾಗ ನೀಡಿ, ಪಂಕ್ತಿ ಭೇಧವನ್ನೂ ಮಾಡದೇ ವ್ಯಕ್ತಿ ನಿರ್ಮಾಣದಲ್ಲಿ ತೊಡಗಿದ್ದೂ ಇದೇ ಸಂಘವೇ!

ದಾದ್ರಾ, ನಗರ ಹವೇಲಿ ಹಾಗೂ ಗೋವಾ 1947 ರಲ್ಲಿ ಭಾರತದ ಭಾಗವಾಗಿರಲಿಲ್ಲ! ಗೋವಾ, ಪೋರ್ಚುಗೀಸ್ ಆಡಳಿತದಿಂದ ಮುಕ್ತಿ ಹೊಂದಿದ್ದು ಜುಲೈ 21, 1954 ರಂದಾದರೆ, ನರೋಲಿ, ಫಿಪಾರೊಯಾ ಮತ್ತು ರಜ್ ಗೆ ಮುಕ್ತಿ ಸಿಕ್ಕಿದ್ದು ಜುಲೈ 28 ರಂದು! ಇದನ್ನಷ್ಟೂ ಮಾಡಿದ್ದು ನೆಹರೂ ಸರಕಾರವಲ್ಲ ಹಾಸನ್! ಬದಲಿಗೆ ಕಾರ್ಯಕರ್ತರ ಲಾಠಿಗಳು!

Image result for swayam sevaks in freedom struggle

ತದನಂತರ, 1954 ಆಗಸ್ಟ್ ಎರಡರಂದು ಪೋರ್ಚುಗೀಸರ ಧ್ವಜವನ್ನು ಕೆಳಗಿಳಿಸಿ, ತಿರಂಗಾವನ್ನು ಏರಿಸಿದ್ದೂ ಇದೇ ಸಂಘದ ಕಾರ್ಯಕರ್ತರೇ! ಇಡೀ ದಾದ್ರಾ ಹಾಗೂ ಹವೇಲಿ ಪೋರ್ಚುಗೀಸರಿಂದ ಮುಕ್ತಗೊಂಡಿತು! ಗೋವಾ ಮತ್ತೆ ಭಾರತ ಸರಕಾರದ ಅಧೀನಕ್ಕೊಳಪಟ್ಟಿತು! ಇಷ್ಟಕ್ಕೂ ಕಾರಣವಾಗಿದ್ದು ಸಂಘ!

1955 ರಿಂದಲೂ ಸಹ ಗೋವಾದ ವಿಮೋಚನಾ ಚಳುವಳಿಯಲ್ಲಿ ಭಾಗವಹಿಸಿದ್ದು ಸಂಘದ ಕಾರ್ಯಕರ್ತರೇ ಹೊರತು ಮಾನವತೆಯ ಬಗ್ಗೆ ಭಾಷಣ ಬಿಗಿಯುವ ಈವ್ಯಾವ ವಿಚಾರವಾದಿಗಳೂ ಅಲ್ಲ! ಗೋವಾದಲ್ಲಿ ಸಶಸ್ತ್ರ ಸೇನಾಪಡೆಯನ್ನು ನುಗ್ಗಿಸುವುದಕ್ಕೆ ನೆಹರೂ ನಿರಾಕರಿಸಿದ ಮೇಲೆ, ಜಗನ್ನಾಥ್ ರಾವ್ ಜೋಷಿಯ ನೇತೃತ್ವದಲ್ಲಿ ಒಕ್ಕೂಟ ಕಾರ್ಯಕರ್ತರು ಗೋವಾದಲ್ಲಿ ಹೋರಾಡಿದರಲ್ಲವೇ?! ಇವತ್ತು ಗೋವಾ ಉಳಿದುಕೊಂಡಿದೆಯೆಂದರೆ ಕಾರಣ ಸಂಘ!!!

ಇದರ ಫಲಿತಾಂಶ ಜೋಷಿಯವರನ್ನೂ ಸೇರಿಸಿ ಅದೆಷ್ಟೋ ಕಾರ್ಯಕರ್ತರಿಗೆ ಹತ್ತು ವರ್ಷ ಜೈಲು ಶಿಕ್ಷೆಯಾಯಿತು! ಪರಿಸ್ಥಿತಿ ಹದಗೆಟ್ಟಿದ್ದಾಗ ಭಾರತ
ಸರಕಾರ ಮಧ್ಯ ಪ್ರವೇಶಿಸಬೇಕಾಗಿತ್ತಾದರೂ ಸಹ ಪೂರ್ಣವಾಗಿ ಸಹಕರಿಸಲೇ ಇಲ್ಲ. ಕೊನೆಗೂ, ಸಂಪೂರ್ಣವಾಗಿ ಗೋವಾ ವಿಮೋಚನೆಗೊಂಡಿದ್ದು 1961 ರಲ್ಲಿ!
ಅಂದರೆ, ಭಾರತಕ್ಕೆ ಸ್ವತಂತ್ರ್ಯ ಸಿಕ್ಕಿ ಹದಿನಾಲ್ಕು ವರುಷಗಳ ತರುವಾಯ! ಕಾರಣ?! ಇದೇ ಸಂಘ!

ಕ್ರಾಂತಿಕಾರಿಗಳ ಜೊತೆಗಿನ ಸಂಬಂಧವನ್ನೂ ಹೇಳುತ್ತೇನೆ ಕೇಳಿ!

ಕ್ರಾಂತಿಕಾರಿಗಳಿಲ್ಲದೇ ಹೋಗಿದ್ದರೆ, ಬಹುಷಃ ಇವತ್ತೂ ಸಹ ಗಾಂಧಿಯಂತೆ ಟೇಬಲ್ಲಿನ ಮುಂದೆ ಅಂಗಲಾಚುತ್ತಾ ಕುಳಿತಿರಬೇಕಿತ್ತೇನೋ! ಸ್ವತಂತ್ರ್ಯ ರಾಷ್ಟ್ರಕ್ಕಾಗಿ! ನಿಮ್ಮ ದುರಾದೃಷ್ಟ! ನಮ್ಮ ಅಧೃಷ್ಟ! ಹಾಗಾಗಲಿಲ್ಲ! ಸಂಘದ ಪ್ರಭಾವ ಕ್ರಾಂತಿಕಾರಿಗಳ ಮೇಲೆ ಎಷ್ಟಿತ್ತೆಂದರೆ ಹೆಗ್ಡೇವಾರ್ ಜೀ ಯವರನ್ನು ‘ಕೊಕೇನ್’ ಎಂದೂ ‘ಅನಾಟಿಮಾ’ ಎಂಬುವುದನ್ನು ಶಸ್ತ್ರಾಸ್ತ್ರಗಳ ಹೆಸರಾಗಿ ಉಲ್ಲೇಖಿಸಿದ ಸಾಂಡರ್ಸ್ 1928 ರಲ್ಲಿ ಕ್ರಾಂತಿಕಾರಿಗಳು ಹಾಗೂ ಸಂಘದವರ ಸ್ನೇಹವೆಂತದ್ದೆಂದು
ಬಹಿರಂಗಗೊಳಿಸಿದ್ದನಷ್ಟೇ!

ಅದಾಗಿ ಕೆಲವೇ ದಿನಗಳಲ್ಲಿ ಸಾಂಡರ್ಸ್ ನ ಹತ್ಯೆಯಾಯಿತು! ಆಗ ಶ್ರೀ ಹೆಗ್ಡೇವಾರ್ ರವರು ರಾಜಗುರುವನ್ನು ಅಡಗಿಸಿಟ್ಟರು! ನಿಮ್ಮಂತಹವರಿಗೆ ಇದು ಘೋರ ಅಪರಾಧವಾಗಿ ಕಾಣಬಹುದೇನೋ! ಆದರೆ, ನಿಜವಾದ ಭಾರತೀಯನಿಗೆ ಇನ್ಬೊಬ್ಬ ದೇಶಭಕ್ತನನ್ನು ರಕ್ಷಿಸುವ ಹೊಣೆಯೂ ಜನ್ಮದಲ್ಲಿಯೇ ಬಂದಿರುವುದರಿಂದ ನಮಗಿದು ಪ್ರಶಂಸನೀಯ!

1927 ರಲ್ಲಿ, ಯಾವಾಗ ಬ್ರಿಟಿಷ್ ಸರಕಾರ ಭಾರತೀಯ ಸೇನೆಯನ್ನು ಚೀನಾಕೆ ಕಳುಹಿಸಬೇಕೆಂದು ನಿರ್ಧಾರ ಮಾಡಿತೋ, ಪ್ರಸ್ತಾವನೆಯನ್ನು ವಿರೋಧಿಸಿದ್ದು ಇದೇ ಸಂಘದ ಶ್ರೀ ಹೆಗ್ಡೇವಾರ್ ರವರು! ಕೊನೆಗೆ, ಸಂಘದ ನೇತಾರೆಂದೇ ಬಿಂಬಿಸಲ್ಪಟ್ಟಿದ್ದ ಎಲ್.ಕೆ.ಪರಂಜ್ಪೆ ಅವರ ಹತ್ತಿರ ಖಡಕ್ ಎಚ್ಚರಿಕೆಯ ಪತ್ರವನ್ನು ಸಭೆಯಲ್ಲಿ ಮುಂದಿಟ್ಟು ಭಾರತೀಯ ಸೇನೆಯನ್ನು ಭಾರತದಲ್ಲಿಯೇ ಉಳಿಸಿದ್ದು ಇದೇ ಸಂಘ! ಇಲ್ಲದಿದ್ದರೆ, ಇಡೀ ಸೇನೆಯೇ ನಿರ್ನಾಮವಾಗಿ ಸ್ವಾತಂತ್ರ್ಯ ಮತ್ತೆ ಬಿಸಿಲು ಕುದುರೆಯಾಗುತ್ತಿತ್ತು! ಹಾಗಾಗಲಿಲ್ಲ! ಕಾರಣ ಸಂಘ!

1928 ನಲ್ಲಿ, ಸೈಮನ್ ಕಮಿಷನ್ ನನ್ನು ವಿರೋಧಿಸುವ ಜವಾಬ್ದಾರಿಯನ್ನು ಹೊತ್ತಿದ್ದೂ ಸಂಘದ ಶ್ರೀ ಹೆಗ್ಡೇವಾರ್ ಜೀ! ಸೈಮನ್ ಗೋ ಬ್ಯಾಕ್ ಎನ್ನುವಾಗ ಇದ್ದ ಅದಷ್ಟೂ ಸ್ವರಗಳು ಕಾರ್ಯಕರ್ತರದ್ದೇ! ಅವತ್ತು ಸೈಮನ್ ಕಾರ್ಯಕರ್ತರ ಲಾಠಿ ನೋಡಿ ಹೆಜ್ಜೆ ಹಿಂದಿಟ್ಟಿರಲಿಲ್ಲವೆಂದರೆ, ಭಾರತ ನೂರು ಹೋಳಾಗುತ್ತಿತ್ತು! ಹಾಗಾಗಲಿಲ್ಲ! ಕಾರಣ?! ಇದೇ ಸಂಘ!

Image result for swayam sevaks in freedom struggle

1929 ಏಪ್ರಿಲ್ 28 ರಂದು ಸಾರ್ವಜನಿಕವಾಗಿ ಅದೆಷ್ಟೋ ಲಕ್ಷ ಕಾರ್ಯಕರ್ತರು ವಾಗ್ದಾನ ಮಾಡಿದರು! ” ಸ್ವರಾಜ್ಯವನ್ನು ಸಾಧಿಸಲು ನಾವು ಕಟಿಬದ್ಧರಾಗಿದ್ದೇವೆ! ತೊಡೆ ತಟ್ಟಿ ನಿಂತಿದ್ದೇವೆ! ಪ್ರಾಣ ತೊರೆದರೂ ತೊರೆದೆವು! ಆದರೆ., ಭಾರತವನ್ನಲ್ಲ! ಸ್ವಾತಂತ್ರ್ಯವನ್ನಲ್ಲ!”

ಸಂಘದ ಭರವಸೆ, ನಂಬಿಕೆ ಹಾಗೂ ಬದ್ಧತೆಯೆಷ್ಟಿತ್ತೆಂದರೆ, ಸಂಘ ಜನವರಿ 26, 1930 ರಂದೇ ಸ್ವಾತಂತ್ರ್ಯ ದಿನವನ್ನು ಆಚರಿಸಿಬಿಟ್ಟಿತ್ತು! ಪ.ಪೂ.ಗುರೂಜಿ ಹಾಗೂ ಬಾಬಾ ಸಾಹೇಬ್ ಆಪ್ಟೆ ‘ಸ್ವತಂತ್ರ್ಯ ಚಳುವಳಿ’ ಯೆಂಬುದಾಗಿ ಕರೆದು ಬ್ರಿಟಿಷರ ವಿರುದ್ಧ ಸೆಣಸಲು ಸಹಸ್ರ ಕಾರ್ಯಕರ್ತರ ನಿರ್ಮಾಣ ಮಾಡಿದ್ದರು! ಅದು ಸಂಘ!

ದೇಶದ ಮೂಲೆ ಮೂಲೆಯಲ್ಲಿ ಅವತ್ತು ಕ್ರಾಂತಿಕಾರಿಗಳ ಬರುವಿಕೆಗಾಗಿ, ಸ್ವಯಂ ಸೇವಕರ ಬರುವಿಕೆಗಾಗಿ ಮನೆ ಬಾಗಿಲು ತೆರೆದು ಕೂತಿದ್ದರು ಭಾರತೀಯರು! ಪ್ರತಿಯೊಬ್ಬ ಕಸರ್ಯಕರ್ತನನ್ನೂ ಗೌರವಾದರಗಳಿಂದ ಕಾಣಲು ಹಾತೊರೆದು ಕಾಯುತ್ತ ಕುಳಿತ ಭಾರತೀಯರ ಪರವಾಗಿ ಅರುಣಾ, ಜಯಪ್ರಕಾಶ್ ನಾರಾಯಣ್, ಹಂಸರಾಜ್ ಗುಪ್ತ, ಅಚ್ಯುತ್ ಪಟವರ್ಧನ್, ಭಾವ್ಸಾಹೇಬ್, ಪಂಡಿತ್ ಸಟ್ವಾಳ್ಕರ್, ನಾನಾ ಪಾಟೀಲ್ ರೆಲ್ಲರೂ ಸೂರೊದಗಿಸಿಕೊಟ್ಟರು. ಅಂತಹ ಅದೆಷ್ಟೋ ಭಾರತೀಯರ ಹರಕೆಯ ಫಲವಾಗಿ ಜನಿಸಿದ ಮಗು ಇದೇ ಸಂಘ!!

ಅದಕ್ಕೆ ತಕ್ಕನಾಗಿಯೇ ನಡೆದುಕೊಂಡಿದ್ದು ಭಾರತದಲ್ಲಿ ಇತಿಹಾಸವನ್ನೇ ಸೃಷ್ಟಿಸಿರುವಾಗ, ‘ಸಂಘ’ ಒಂದು ಭಯೋತ್ಪಾದಕ ಸಂಘವೆಂದು ಕರೆದಿದ್ದರಲ್ಲಿ ಅತಿಶಯೋಕ್ತಿಯಲ್ಲ! ಯಾಕೆಂದರೆ, ಪಾಕಿಸ್ಥಾನಿಗಳಿಗೆ, ಭಾರತದ ವಿರೋಧಿಗಳಿಗೆ ಸಂಘವೊಂದು ಭಯೋತ್ಪಾದನೆಯೇ!

ಅರೇ ಕಮಲ್ ಹಾಸನ್!!!! ನಿನ್ನ ಜನ್ಮದಿನದ ಪ್ರಯುಕ್ತವಾಗಿ ಹೇಳುತ್ತೇನೆ ಕೇಳು!

ತೇರೀ ಜಿಹಾದ್ ಕಿ ಏಸೀ ತೇಸಿ!
ಅಬ್ ಇಸ್ ಬಾತ್ ಪೇ ಸವಾಲ್ ಉಠಾಕೆ ದಿಖಾ!
ಯೇ ಮಹಬೂತ್ ಭಾರತ್ ಹೈ!
ಜೋ ಮಜಬೂತ್ ಫೈಸಲೇ ಮೇ ಸಾಥ್ ಖಢಾ ಹೋತಾ ಹೈ!
ಅಪನೇ ದೇಶ್ ಕೇ ಸಾಥ್! ಅಪನೇ ಧರ್ಮಕೇ ಸಾಥ್!

– ತಪಸ್ವಿ

Tags

Related Articles

Close