ಸದಾ ಒಂದಲ್ಲಾ ಒಂದು ರೀತಿಯ ಬಾಲಿಶತನದ ಹೇಳಿಕೆ ನೀಡುತ್ತಾ ಇಡೀ ದೇಶದ ಜನರಿಗೆ ಮನೋರಂಜನೆ ಒದಗಿಸುತ್ತಿದ್ದ ಕಾಂಗ್ರೆಸ್‍ನ ಉಪಾಧ್ಯಕ್ಷ ರಾಹುಲ್ ಗಾಂಧಿ ಈ ಬಾರಿ ಅತಿರೇಕ ಎನಿಸುವಂಥಾ ಹೇಳಿಕೆ ನೀಡಿ ಇಡೀ ದೇಶದ ಮಹಿಳೆಯರ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಒಂದು ಪಕ್ಷದ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿ ಈ ರೀತಿ ಹೇಳಿಕೆ ನೀಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದ್ದು, ಎಲ್ಲೆಡೆ ಆಕ್ರೋಶ ಸೃಷ್ಟಿಸಿದೆ.
ಆರೆಸ್ಸೆಸ್ ಬಗ್ಗೆ ಅಪಪ್ರಚಾರ ಮಾಡುತ್ತಾ ಬರುತ್ತಿರುವ ರಾಹುಲ್ ಗಾಂಧಿ ಈ ಬಾರಿ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಗುಜರಾತ್‍ನ ಪ್ರವಾಸದಲ್ಲಿರುವ ರಾಹುಲ್‍ಗಾಂಧಿ ಅಲ್ಲಿನ ಅಕೋಟಾ ಎಂಬ ಭಾಗದಲ್ಲಿ ಮಾತಾಡಿ, ಆರೆಸ್ಸೆಸ್ ಶಾಖಾದಲ್ಲಿ ಮಹಿಳೆಯರು ಯಾವತ್ತಾದರೂ ಚಡ್ಡಿ ಹಾಕಿಕೊಂಡಿರುವುದನ್ನು ನೋಡಿದ್ದೀರಾ ಎಂದು ಹೇಳುವ ಮೂಲಕ ಇಡೀ ದೇಶದಲ್ಲೇ ಆಕ್ರೋಶಕ್ಕೆ ತುತ್ತಾಗಿದ್ದಾರೆ.
ಬಿಜೆಪಿ ಹಾಗೂ ಆರೆಸ್ಸೆಸ್ ಮಹಿಳೆಯರನ್ನು ತಾರತಮ್ಯ ಮಾಡುತ್ತಿದೆ ಎಂದು ಹೇಳುವ ಸಲುವಾಗಿ ಬಾಯಿಗೆ ಬಂದಂತೆ ಮಾತಾಡುವ ರಾಹುಲ್ ಗಾಂಧಿ
ಹೇಳಬಾರದ್ದನ್ನು ಹೇಳಿ ಅಪಹಾಸ್ಯಕ್ಕೊಳಗಾಗಿದದ್ದಾರೆ. ಬಿಜೆಪಿಯ ಸಂಘಟನೆ ಆರೆಸ್ಸೆಸ್‍ನಲ್ಲಿ ಎಷ್ಟೋ ಮಂದಿ ಮಹಿಳೆಯರಿದ್ದಾರೆ. ಆದರೆ ಆರೆಸ್ಸೆಸ್ ಶಾಖೆಯಲ್ಲಿ
ಮಹಿಳೆಯರು ಯಾವತ್ತಾದರೂ ಚಡ್ಡಿ ಹಾಕಿಕೊಂಡಿದ್ದನ್ನು ನೀವು ನೋಡಿದ್ದೀರಾ? ನಾನಂತೂ ನೋಡಿಲ್ಲಪ್ಪ! ಎಂದು ಹೇಳುವ ಮೂಲಕ ವಿವಾದ ಎಬ್ಬಿಸಿದ್ದಾರೆ.
ಅಷ್ಟಕ್ಕೂ, ಮಹಿಳೆಯರು ಮೌನವಾಗಿರಬೇಕು ಎಂದು ಬಿಜೆಪಿ ಬಯಸುತ್ತದೆ. ಮಹಿಳೆಯರು ಬಾಯಿ ಮುಚ್ಕೊಂಡಿರುವಷ್ಟು ಕಾಲವೂ ಬಿಜೆಪಿಗೆ ಎಲ್ಲವೂ ಚೆನ್ನಾಗಿಯೇ ಇರುತ್ತದೆ. ಆದರೆ ಆಕೆ ಬಾಯಿ ತೆರೆಯುತ್ತಿದ್ದಂತೆ ಬಿಜೆಪಿಯವರು ತಕ್ಷಣ ಒಡಿ ಹೋಗಿ ಆಕೆಯ ಬಾಯಿ ಮುಚ್ಚಿಸಿಬಿಡುತ್ತಾರೆ. ಆದರೆ ನಮ್ಮ ಕಾಂಗ್ರೆಸ್ ಹಾಗಲ್ಲ. ಅದೊಮ್ಮೆ ನಾವು ಅಧಿಕಾರಕ್ಕೆ ಬರುತ್ತಿದ್ದಂತೆ ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡುತ್ತೇವೆ ರಾಹುಲ್ ಗಾಂಧಿ ಹೇಳಿರುವುದಕ್ಕೆ ಸಾಕಷ್ಟು ಆಕ್ರೋಶ ಕಾರಣವಾಗಿದೆ.
ಆರೆಸ್ಸೆಸ್ ಬಗ್ಗೆ ಯಾವುದೇ ಮಾಹಿತಿ ಇಲ್ಲದಿದ್ದರೂ ಸದಾ ಅದರ ಬಗ್ಗೆ ಸುಳ್ಳು ಬಿತ್ತುವ ರಾಹುಲ್ ಗಾಂಧಿ ಮೇಲೆ ಈಗಾಗಲೇ ಆರೆಸ್ಸೆಸ್ ಕೇಸ್ ಜಡಿದಿದೆ. ಆದರೂ ತನ್ನ ಬುದ್ದಿ ಬದಲಿಸದ ರಾಹುಲ್ ಗಾಂಧಿ ಮತ್ತೆ ಮತ್ತೆ ಆರೆಸ್ಸೆಸ್ ಬಗ್ಗೆ ಸುಳ್ಳು ಹೇಳುತ್ತಾ ವಿವಾದಕ್ಕೆ ಒಳಗಾಗುತ್ತಿದ್ದಾರೆ. ಮಹಿಳೆಯರ ಬಗ್ಗೆ ಹೇಳಬಾರದನ್ನು ಹೇಳಿಕೊಂಡು ಕಾಂಗ್ರೆಸ್‍ನ ಮರ್ಯಾದೆಯನ್ನು ಬೀದಿಪಾಲು ಮಾಡುತ್ತಿರುವ ರಾಹುಲ್ ಬಗ್ಗೆ ಸ್ವತಃ ಕಾಂಗ್ರೆಸ್‍ನಲ್ಲಿಯೇ ಆಕ್ರೋಶ ವ್ಯಕ್ತವಾಗಿದೆ.
ಈ ಮುಂಚೆ ಮಹತ್ಮಾ ಗಾಂಧಿ ಹತ್ಯೆಯ ಕುರಿತು ರಾಹುಲ್ ಗಾಂಧಿ ಆರೆಸ್ಸೆಸ್ ವಿರುದ್ಧ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು. ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಮಾನನಷ್ಟ ದಾವೆ ಹೂಡಿದ್ದ ಮಹಾರಾಷ್ಟ್ರದಲ್ಲಿನ ಆರ್‍ಎಸ್‍ಎಸ್ ನಾಯಕ ರಾಜೇಶ್ ಮಹಾದೇವ್ ಕುಂಟೆ ಅವರು, “ರಾಹುಲ್ ಗಾಂಧಿ ಅವರು ಇನ್ನು ಮುಂದೆ ತಾನು ಮಹಾತ್ಮ ಗಾಂಧಿಯನ್ನು ಕೊಂದದ್ದು ಆರ್‍ಎಸ್‍ಎಸ್ ಎಂದು ಪುನರಪಿ ಹೇಳುವುದಿಲ್ಲ ಎಂಬ ಬಗ್ಗೆ ಸುಪ್ರೀಂ ಕೋರ್ಟಿಗೆ ಲಿಖಿತವಾಗಿ ಬರೆದುಕೊಡಬೇಕು; ಹಾಗಾದರೆ ಮಾತ್ರವೇ ಈ ವಿಷಯ ಇತ್ಯರ್ಥವಾಗಲು ಸಾಧ್ಯವಾದೀತು. ರಾಹುಲ್ ಗಾಂಧಿ ವಿರುದ್ಧದ ಕ್ರಿಮಿನಲ್ ಮಾನನಷ್ಟ ದಾವೆಯನ್ನು ಹಿಂದೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ’ ಎಂದು ಹೇಳಿದ್ದರು. ಆದರೂ ಬುದ್ದಿ ಬದಲಿಸದ ರಾಹುಲ್ ಗಾಂಧಿ ಮತ್ತೆ ಮತ್ತೆ ಹೇಳಿಕೆ ನೀಡುವ ಮೂಲಕ ವಿವಾದವನ್ನು ಮೈಗೆಳೆದುಕೊಂಡಿದ್ದಾರೆ.
Source :Original Link
-ಚೇಕಿತಾನ