ಅಂಕಣ

ಆರ್ಡರ್ ಆರ್ಡರ್ ಆರ್ಡರ್ ಅಂತ ಹೇಳುವ ನ್ಯಾಯಾಧೀಶರ ನೇಮಕ 70 ವರ್ಷಗಳಿಂದ ಹೇಗೆ ನಡೆದಿದ್ದವು? ಸೆಕ್ಸ್, ಲಂಚ, ಬ್ಲ್ಯಾಕಮೇಲ್, ದಲ್ಲಾಳಿತನದ ಕರಾಳ ಕಥೆ!!!

70 ವರ್ಷಗಳಿಂದ ಸೆಕ್ಸ್, ಲಂಚ, ಬ್ಲ್ಯಾಕಮೇಲಿಂಗ್, ದಲ್ಲಾಳಿತನದಿಂದ ಜಡ್ಜ್’ಗಳನ್ನ ನಿಯುಕ್ತಿ ಮಾಡಲಾಗ್ತಿತ್ತು ಅನ್ನೋದರ ಬಗ್ಗೆ ನಿಮಗರಿವಿದೆಯಾ?

ಅದಕ್ಕೆ ಕೆಲ ಉದಾಹರಣೆಗಳನ್ನು ಇವತ್ತು ನಿಮ್ಮೆದುರಿಗಿಡೋ ಪ್ರಯತ್ನ ಮಾಡುತ್ತಿದ್ದೇನೆ. ಅದೊಂದು ಗುಪ್ತ ಕ್ಯಾಮೆರಾದಲ್ಲಿ ಸೆರೆ ಸಿಕ್ಕ ಪ್ರಭಾವಿ ನಾ(ಲಾ)ಯಕನೊಬ್ಬನ ಸೆಕ್ಸ್ ಸಿ.ಡಿ.ಯಲ್ಲಿ ಬಯಲಾಗಿದ್ದರ ಕಥೆ!!

“ಜಡ್ಜ್ ಆಗಿ ನನ್ನನ್ನ ಯಾವಾಗ ನೇಮಕ ಮಾಡ್ತೀರ? ಹೇಳಿ ಡಿಯರ್ ಜಡ್ಜ್ ಆಗಿ ಯಾವಾಗ ನೇಮಕ ಮಾಡ್ತೀರ?”

ಈ ಮಾತನ್ನ ಅನುಸೂಯ ಅನ್ನೋ ಮಹಿಳೆ ಆ ವ್ಯಕ್ತಿ ತನ್ನ ಬಟ್ಟೆ ಬಿಚ್ಚಲು ಮುಂದಾದ ಆತನಿಗೆ ಕೇಳಿದ್ದ ಪ್ರಶ್ನೆಯಾಗಿತ್ತು.

ಅಷ್ಟಕ್ಕೂ ಆ ವ್ಯಕ್ತಿ ಯಾರು? ಆತ ಆಕೆಯನ್ನ ಜಡ್ಜ್ ಆಗಿ ನೇಮಕ ಮಾಡುವಷ್ಟು ಪ್ರಭಾವಿಯಾಗಿದ್ದನಾ? ಯೆಸ್, ಆತ ಕಾಂಗ್ರೆಸ್ಸಿನ ರಾಜಕಾರಣಿ, ಕಾಂಗ್ರೆಸ್ ಪಕ್ಷದ ಪೂರ್ವ ವಕ್ತಾರ, ಸುಪ್ರೀಂ ಕೋರ್ಟಿನ ಹಿರಿಯ ವಕೀಲ, ಸುಪ್ರೀಂ ಕೋರ್ಟಿನ ಮಂಡಳಿ (ಕೊಲಿಜಿಯಮ್) ಸದಸ್ಯನೂ ಆಗಿದ್ದ. ಆ ವ್ಯಕ್ತಿಯೇ ಅಭಿಷೇಕ್ ಮನು ಸಿಂಘ್ವಿ.

ಯೂಟ್ಯೂಬ್’ನಲ್ಲಿ ಹರಿದಾಡಿ ಕೋಲಾಹಲವೆಬ್ಬಿಸಿ ಅಭಿಷೇಕ್ ಮನು ಸಿಂಘ್ವಿಯ ರಾಜಕೀಯ ಜೀವನವನ್ನೇ ಅಂತ್ಯ ಮಾಡಿತ್ತು ಆ ಸೆಕ್ಸ್ ವಿಡಿಯೋ!!

ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಸದ್ದು ಮಾಡಿದಾಗ ಅದರಲ್ಲಿದ್ದದ್ದು ನಾನಲ್ಲ ಆದರೆ ಈ ಪ್ರಕರಣದಿಂದ ದೋಷಮುಕ್ತನಾಗಿ ಬರುವವರೆಗೆ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ ಅಂತ ಆವತ್ತು ಹೋದ ಸಿಂಘ್ವಿ ಇವತ್ತಿಗೂ ವಾಪಸ್ ಮರಳಿ ಬಂದಿಲ್ಲ, ಯಾಕಂದ್ರೆ ಅದು ಆತನದ್ದೇ ವಿಡಿಯೋ ಆಗಿತ್ತು.

ನಮ್ಮ ದೇಶದಲ್ಲಿ ದಿನ ಬೆಳಗಾದರೆ ನೀವು ಇದನ್ನ ಮಾಡಿ ಅದನ್ನ ಮಾಡಿ, ಇದು ಮಾಡಬಾರದು ಅದು ಮಾಡಬಾರದು ಅಂತ ಸಲಹೆ ಅಥವ ಆರ್ಡರ್ ಮಾಡುವ ಪ್ರಜಾಪ್ರಭುತ್ವದ ಮೀಡಿಯಾ ಹಾಗು ನ್ಯಾಯಾಂಗ ವ್ಯವಸ್ಥೆ ಮಾತ್ರ ತಾವು ಚರಿತ್ರವಂತರಾ ಅನ್ನೋದನ್ನ ಮಾತ್ರ ಇಲ್ಲೀವರೆಗೂ ಆತ್ಮಾವಲೋಕನ ಮಾಡಿಕೊಳ್ಳದಿರೋದು ವಿಚಿತ್ರ & ದೇಶಕ್ಕೆ ಮಾರಕವೇ ಸರಿ.

ದೇಶಕ್ಕೆ ಯಾವಾಗ ಸ್ವಾತಂತ್ರ್ಯ ಸಿಕ್ಕಿತೋ ಆಗಿನಿಂದಲೂ ಭಾರತ ಬ್ರಿಟಿಷರ ಹಲವಾರು ಕಾನೂನುಗಳನ್ನ ಯಥಾವತ್ತಾಗಿ ಪಾಲಿಸಿಕೊಂಡು ಬಂದಿದೆ. ಅಂಥವುಗಳಲ್ಲಿ ‘ಕೊಲಿಜಿಯಮ್’ ಕೂಡ ಒಂದು. ಇದರರ್ಥ ಹಿರಿಯ ಜಡ್ಜ್ ಗಳು, ಹಿರಿಯ ವಕೀಲರು ಕಿರಿಯ ವಕೀಲರನ್ನ ಜಡ್ಜ್ ಗಳಾಗಿ ನಿಯುಕ್ತಿ ಮಾಡುವ ಪ್ರಕ್ರಿಯೆಯೇ ಕೊಲಿಜಿಯಮ್.

ಉದಾಹರಣೆಗೆ ಸುಪ್ರೀಂ ಕೋರ್ಟಿನ ಜಡ್ಜ್ ಹೈಕೋರ್ಟಿನ ಜಡ್ಜ್’ನ್ನ, ಹೈಕೋರ್ಟಿನ ಜಡ್ಜ್ ಜಿಲ್ಲಾ ನ್ಯಾಯಾಲಯದ ಜಡ್ಜ್’ಗಳನ್ನ ನಿಯುಕ್ತಿಗೊಳಿಸೋದು. ಈ ಪ್ರಕ್ರಿಯೆಯಲ್ಲಿ ಅದೆಷ್ಟು ಭ್ರಷ್ಟಾಚಾರ, ಅನಾಚಾರ ನಡೆಯುತ್ತಿದೆ ಅನ್ನೋದನ್ನ ಅಭಿಷೇಕ್ ಮನು ಸಿಂಘ್ವಿ ಸೆಕ್ಸ್ ಸಿ.ಡಿ ಬಯಲಾದಾಗಲೇ ನಮಗೂ ಗೊತ್ತಾಗಿದ್ದು.

ಈ ಅಭಿಷೇಕ್ ಸಿಂಘ್ವಿ ಕೂಡ ಸುಪ್ರೀಂ ಕೋರ್ಟಿನ ಕೊಲೇಜಿಯಂ ಸದಸ್ಯನಾಗಿದ್ದ ಹಾಗು ಈತನಿಗೆ ದೆಹಲಿ ಹೈಕೋರ್ಟಿನ ಜಡ್ಜ್’ಗಳನ್ನ ನಿಯುಕ್ತಿ
ಮಾಡುವ ಅಧಿಕಾರವೂ ಇತ್ತು. ಆ ಸೆಕ್ಸ್ ಸಿ.ಡಿ.ತಲ್ಲಿ ವರಿಷ್ಠ ವಕೀಲ ಅನುಸೂಯ ಸಾಲವಾನಳಿಗೆ ಜಡ್ಜ್ ಮಾಡುವ ಆಮಿಷವೊಡ್ಡಿ ಆತ ಲೈಂಗಿಕ ಸಂಪರ್ಕ ನಡೆಸಿದ್ದ. ಆತ ಲೈಂಗಿಕ ಕ್ರಿಯೆಗೆ ಮುಂದಾದಾಗಲೇ ಆಕೆ ಆತನನ್ನ “ನನ್ನನ್ನ ಜಡ್ಜ್ ಯಾವಾಗ ಮಾಡ್ತೀರ?” ಅನ್ನೋ ಪ್ರಶ್ನೆಯನ್ನ ಕೇಳಿದ್ದಳು.

ಈ ಕೊಲೋಜಿಯಮ್ ಪದ್ಧತಿಯಿಂದ ಹೇಗೆ ಜಡ್ಜ್’ಗಳ ನೇಮಕಾತಿ ಹಾಗು ಅದರಲ್ಲಿ ಭ್ರಷ್ಟಾಚಾರ, ಲಂಚ, ಸೆಕ್ಸ್ ದಂಧೆ ನಡೀತಿದೆ ಅನ್ನೋದಕ್ಕೆ ಕೆಲ ಉದಾಹರಣೆಗಳು ಹೀಗಿವೆ

1) ಯಾವುದೇ ವ್ಯಕ್ತಿ ರಾಜ್ಯ ಹೈಕೋರ್ಟಿನ ಜಡ್ಜ್ ಆಗಲು ಎರಡೇ ಮಾನದಂಡಗಳಿರುತ್ತವೆ. ಒಂದು ಆತ ಭಾರತದ ನಾಗರಿಕನಾಗಿದ್ದು ಕನಿಷ್ಠ 10 ವರ್ಷ ವಕೀಲವೃತ್ತಿ ಮಾಡಿರಬೇಕು. ಅಥವ ಆತ/ಆಕೆ ಒಂದು ರಾಜ್ಯದ ಅಟಾರ್ನಿ ಜನರಲ್ ಆಗಿರಬೇಕು.

ಆದರೆ ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ವೀರಭದ್ರಸಿಂಗ್ ನಿಯಮಗಳನ್ನ ಉಲ್ಲಂಘಿಸಿ ತನ್ನ ಮಗಳಾದ ಅಭಿಲಾಷಾ ಕುಮಾರಿಯನ್ನ ಹಿಮಾಚಲ ಪ್ರದೇಶದ ಅಟಾರ್ನಿ ಜನರಲ್ ಆಗಿ ನೇಮಕ ಮಾಡಿ ನಂತರ ಸುಪ್ರೀಂ ಕೋರ್ಟಿನ ಜಡ್ಜ್’ಗಳ ಕೊಲೀಜಿಯಂ ಮೂಲಕ ಆಕೆಯನ್ನ ಗುಜರಾತ್ ಹೈಕೋರ್ಟಿನ ಜಡ್ಜ್ ಆಗಿ ನೇಮಿಸಿ ಗುಜರಾತ್’ಗೆ ಕಳಿಸಿಬಿಟ್ಟಿದ್ದ ವೀರಭದ್ರಸಿಂಗ್. ಇದರ ಹಿಂದಿನ ಉದ್ದೇಶ ಮೋದಿಯನ್ನ ಗುಜರಾತ್ ದಂಗೆಯಲ್ಲಿ ಸಿಕ್ಕಿ ಹಾಕಿಸೋದೂ ಆಗಿತ್ತು. ಅದು ಬೇರೆ ವಿಷಯ ಬಿಡಿ.

ಅಷ್ಟಕ್ಕೂ ಹೈಕೋರ್ಟ್ ಜಡ್ಜ್ ಆಗಿ ಅಭಿಲಾಷಾ ಕುಮಾರಿ ನೀಡಿದ್ದ ಹಲವು ತೀರ್ಪುಗಳನ್ನ ಸುಪ್ರೀಂ ಕೋರ್ಟ್ ಬದಲಿಸಿ ಹೊಸ ತೀರ್ಪನ್ನ ಕೊಟ್ಟಿತ್ತು.

2) 1990 ರಲ್ಲಿ ಲಾಲೂ ಪ್ರಸಾದ್ ಯಾದವ್ ಬಿಹಾರದ ಮುಖ್ಯಮಂತ್ರಿಯಾಗಿದ್ದಾಗ ಕಟ್ಟರ್ ಮುಸಲ್ಮಾನನಾಗಿದ್ದ ಅಫ್ತಬ್ ಆಲಮ್ ಎಂಬುವನನ್ನ. ಹೈಕೋರ್ಟ್ ಜಡ್ಜ್ ಆಗಿ ನೇಮಕ ಮಾಡಿಸಿದ್ದ. ನಂತರ ಆತನಿಗೆ ಪ್ರೊಮೋಷನ್ ಕೊಡಿಸಿ ಸುಪ್ರೀಂ ಕೋರ್ಟಿನ ಜಡ್ಜ್ ಆಗಿಯೂ ಮಾಡಲಾಗಿತ್ತು.

ಆತನಿಗೆಷ್ಟು ನರೇಂದ್ರ ಮೋದಿ ಎಂದರೆ ಎಷ್ಟು ದ್ವೇಷವಿತ್ತೆಂದರೆ ತೀಸ್ತಾ ಸೆತಲ್ವಾಡ್ ಹಾಗು ಮುಕುಲ್ ಸಿನ್ಹಾ ತರುವ ಗುಜರಾತಿನ ಈ ಅಫ್ತಾಬ್’ನ ಎಲ್ಲ ಕೇಸ್ಗಳೂ ಈತನ ಬೆಂಚ್’ಗೆ ಬರುತ್ತಿದ್ದವು.

ನರೇಂದ್ರ ಮೋದಿಯವರನ್ನ ಪ್ರಕರಣದಲ್ಲಿ ಸಿಲುಕಿ ಹಾಕಿದರೆ ತನ್ನ ಗುರಿಯಾಗಿ ಈತ ಮಾಡಿಕೊಂಡಿದ್ ನಂತರ ಎಂ.ಬಿ.ಸೋನಿ ಅಧ್ಯಕ್ಷತೆಯ ನೇತೃತ್ವದ ಎಂಟು ನಿವೃತ್ತ ಜಡ್ಜ್’ಗಳ ತಂಡ ಸುಪ್ರೀಂ ಕೋರ್ಟಿನ ಚೀಫ್ ಜಸ್ಟಿಸ್ ರನ್ನ ಭೇಟಿಯಾಗಿ ಅಫ್ತಾಬ್ ಆಲಮ್’ನನ್ನ ಗುಜರಾತ್ ದಂಗೆಯ ಯಾವ ಕೇಸ್’ಗಳಿಂದ ಈತನನ್ನ ದೂರವಿಡಬೇಕು ಅನ್ನೋ ಅಪೀಲನ್ನೂ ಮಾಡಿದ್ದರು.

ಜಸ್ಟಿಸ್ ಸೋನಿ ಯವರು ಅಫ್ತಬ್ ಆಲಮ್ ನ ನೀಡಿದ್ದ 12 ಕೇಸುಗಳ ತೀರ್ಪಿನ ಅಧ್ಯಯನ ನಡೆಸಿ ಅಫ್ತಬ್ ಆಲಂನ ಪ್ರತಿಯೊಂದು ತೀರ್ಪಿನಲ್ಲೂ ಭೇದಭಾವ ಮಾಡಲಾಗಿದೆಯೆಂತಲೂ ಸಾಬೀತುಪಡಿಸಿ ಚೀಫ್ ಜಸ್ಟೀಸ್ ಗೆ ತಮ್ಮ ರಿಪೋರ್ಟ್ ಸಲ್ಲಿಸಿದ್ದರು. ನಂತರ ಸುಪ್ರೀಂ ಕೋರ್ಟಿನ ಜಸ್ಟಿಸ್ ಆಗಿದ್ದ ಅಫ್ತಬ್ ಆಲಂನನ್ನ ಗುಜರಾತ್ ದಂಗೆಗಳ ಕೇಸ್ಗಳ ಹಿಯರಿಂಗ್ ನಿಂದ ದೂರವಿಡಲಾಯಿತು.

ಕೇಂದ್ರ ಸರ್ಕಾರ ಈ NJAC(National Judicial Appointment Commission) ನ್ನು ರದ್ದು ಮಾಡಿ ಬ್ರಿಟಿಷ್ ಕಾಲದಿಂದ ಚಾಲ್ತಿಯಲ್ಲಿರೋ
ಸುಪ್ರೀಂ ಕೋರ್ಟಿನ ಈ ಕೊಲೇಜಿಯಂ ವ್ಯವಸ್ಥೆಯನ್ನು ಬದಲಾಯಿಸುವ ಅವಶ್ಯಕತೆಯಿದೆ.

ಇದೇ ರೀತಿ ರಾಜಕೀಯ ಹಸ್ತಕ್ಷೇಪಗಳು ಜಡ್ಜ್’ಗಳ ನೇಮಕದಲ್ಲಿ ಮುಂದುವರೆದರೆ ಇದು ನಮ್ಮ ಪ್ರಜಾಪ್ರಭುತ್ವಕ್ಕೆ ದೊಡ್ಡ ಹೊಡೆತ ಕೊಡಲಿದೆ.

ಮೂವತ್ತು ವರ್ಷಗಳ ನಂತರ ಜನರಿಂದ ಆರಿಸಲ್ಪಟ್ಟ ಬಹುಮತವಿರೋ ಮೋದಿ ಸರ್ಕಾರದ ಎರಡೂ ಸದನದಲ್ಲಿ ಈ NJAC ರದ್ದು ಮಾಡುವ ಬಿಲ್ ಪಾಸ್ ಮಾಡಲಾಗಿತ್ತು. ಇದಕ್ಕೆ 20 ರಾಜ್ಯಗಳ ವಿಧಾನಸಭೆಯಲ್ಲೂ ಬೆಂಬಲ ಸಿಕ್ಕಿತ್ತು.

ಆದರೆ ಸುಪ್ರೀಂ ಕೋರ್ಟಿಗೆ ಇದ್ಯಾಕೋ ಇಷ್ಟ ಆಗಲಿಲ್ಲ ಅನಿಸುತ್ತೆ.

4 ಜನ ಜಡ್ಜ್’ಗಳು ಕೂತು ಕೋಟ್ಯಾಂತರ ಜನರ ವಿಶ್ವಾಸ, ಇಚ್ಛೆಗೆ ವಿರುದ್ಧವಾಗಿ ಹೋಗಬಹುದಾ?

ಯಾಕೆ ತಾನು ಸುಪ್ರೀಂ ಕೋರ್ಟ್ ಅನ್ನೋ ಅಹಂ ಇದಕ್ಕೆ ಕಾರಣವಾ ಹಾಗಾದ್ರೆ?

NJAC ಹೇಗೆ ಅಸಂವಿಧಾನಿಕೋ ಹಾಗೆಯೇ ಇದಕ್ಕಿಂತ ಕೊಲೇಜಿಯಂ ಅತಿ ಘೋರವಾಗಿದೆ.

ಈ ಕೊಲೇಜಿಯಂ ವ್ಯವಸ್ಥೆಯಲ್ಲಿ ಪಾರದರ್ಶಕತೆ ಇಲ್ಲ, ರೂಲ್ಸ್ ರೆಗ್ಯೂಲೆಷನ್ಸ್’ಗಳ ಸರಿಯಾದ ಪಾಲನೆಯಿಲ್ಲ, ಭ್ರಷ್ಟಾಚಾರ ಹಾಗು ನ್ಯಾಯವ್ಯವಸ್ಥೆಯಲ್ಲಿ
ಸುಧಾರಣೆ ತರುವ ಯಾವ ಅಂಶಗಳೂ ಇದರಲ್ಲಿಲ್ಲ.

ಇಲ್ಲಿಯವರೆಗೂ ದೇಶದಲ್ಲಿ ಈ ಪದ್ಧತಿ ಕಾಂಗ್ರೆಸ್ಸಿನ ಜೊತೆ ಹೆಗಲಿಗೆ ಹೆಗಲು ಕೊಟ್ಟು ಅವರ ಭ್ರಷ್ಟಾಚಾರದಲ್ಲಿ ಭಾಗಿಯಾಗಿದೆ ಎಂದರೆ ತಪ್ಪಾಗಲಾರದು.

ಸುಪ್ರೀಂ ಕೋರ್ಟಿನಲ್ಲಿರೋ 28 ಜಡ್ಜ್’ಗಳಲ್ಲಿ 20 ಜಡ್ಜ್’ಗಳು ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಆಯ್ಕೆ ಮಾಡಲ್ಪಟ್ಟ ಜಡ್ಜ್’ಗಳಿದಾರೆ. ಈ ಸರ್ಕಾರ ಬಂದ ನಂತರ ನೇಮಕ ಮಾಡಿದ್ದು ಉಳಿದ 8 ಜಡ್ಜ್’ಗಳು. ಇದರ ಕಾರಣವೇ ಅಲ್ವೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ NJAC ರದ್ದು ಮಾಡೋದನ್ನ ತಡೆದು ನಿಲ್ಲಿಸಿರೋದು.

ಕೇಂದ್ರ ಸರ್ಕಾರಕ್ಕೆ ಈ ಕೊಲೇಜಿಯಂ ಸುಧಾರಣೆಗೋಸ್ಕರ ಸುಪ್ರೀಂ ಕೋರ್ಟ್ ತನ್ನ ಅಭಿಪ್ರಾಯವನ್ನ ಕೇಳಿತ್ತು. ತನ್ನ ಅಭಿಪ್ರಾಯವನ್ನು ಕೇಂದ್ರ ಸರ್ಕಾರ ರಿಪೋರ್ಟ್ ಮೂಲಕ ಕೊಟ್ಟಿದ್ದನ್ನ ಇದೇ ಸುಪ್ರೀಂ ಕೋರ್ಟ್ ಒಪ್ಪಲಿಲ್ಲ ಅಂದ್ಮೇಲೆ ಸರ್ಕಾರಕ್ಕೆ ಅಭಿಪ್ರಾಯ ಕೇಳುವ ಗೋಜಿಗಾದರೂ ಯಾಕೆ ಹೋಯ್ತು ಸುಪ್ರೀಂ ಕೋರ್ಟ್? ಕೊಲೇಜಿಯಂ ನಲ್ಲಿ ಬದಲಾವಣೆ ತರೋದಕ್ಕಂತಲೇ NJAC ಜಾರಿಗೆ ತಂದದ್ದಾಗಿತ್ತು.

ಆದರೆ ಅದೂ ಫೇಲಾಗಿದೆ. ಇದನ್ನೆಲ್ಲ ನೋಡುತ್ತಿದ್ದರೆ ಕಾಂಗ್ರೆಸ್ ಹೇಗೆ ಮೋದಿಗೆ ಕೆಲಸ ಮಾಡಲು ಅಡ್ಡಗಾಲು ಹಾಕುತ್ತಿದೆಯೋ ಹಾಗೆಯೇ ಸುಪ್ರೀಂ ಕೋರ್ಟ್ ಕೂಡ ಮಾಡುತ್ತಿದೆ ಅನ್ಸತ್ತೆ.

ಒಬ್ಬ ವ್ಯಕ್ತಿ ತನ್ನ ಪ್ರಭಾವ ಅಥವ ಲಂಚ ಅಥವ ಇನ್ಯಾವುದೋ ಅಡ್ಡದಾರಿಯ ಮೂಲಕ ತನ್ನನ್ನ ತಾನೇ ಜಡ್ಜ್ ಆಗಿ ನೇಮಕ ಮಾಡಿಕೊಳ್ಳೋದು ಬಹುಶಃ ಬೇರೆ ಯಾವ ದೇಶದಲ್ಲೂ ಇರಲಿಕ್ಕಿಲ್ಲ.

ಧಾರ್ಮಿಕ ವಿಚಾರಗಳಲ್ಲಿ ಸುಪ್ರೀಂ ಕೋರ್ಟಿನ ಒನ್ ಸೈಡೆಡ್ ತೀರ್ಪುಗಳ ವಿಚಾರಮಂಥನ :

* ಸುಪ್ರೀಂ ಕೋರ್ಟ್ ಗೋರಕ್ಷಕರನ್ನ ಹದ್ದುಬಸ್ತಿನಲ್ಲಿಡೋಕೆ ತಾಕೀತು ಮಾಡುತ್ತೆ.

* ಸುಪ್ರೀಂ ಕೋರ್ಟ್ ಜಲ್ಲಿಕಟ್ಟು ಬ್ಯಾನ್ ಮಾಡೋಕೆ ಹೇಳುತ್ತೆ.

* ದಹಿಹಂಡಿ ಯನ್ನ ಬ್ಯಾನ್ ಮಾಡೋಕೆ ಕೋರ್ಟ್ ಹೇಳುತ್ತೆ.

* ಹೋಳಿ ಹಬ್ಬದ ಸಂದರ್ಭದಲ್ಲಿ ನೀರನ್ನ ಜಾಸ್ತಿ ಉಪಯೋಗಿಸಬೇಡಿ ಅನ್ನೋ ತಾಕೀತು ಮಾಡುತ್ತೆ.

* ರಾತ್ರಿ ಹತ್ತರ ನಂತರ ದಾಂಡಿಯಾವನ್ನ ಬಂದ್ ಮಾಡಿ ಅನ್ನೋ ತೀರ್ಪು ಕೊಡುತ್ತೆ.

* ಸುಪ್ರೀಂ ಕೋರ್ಟ್ ದೀಪಾವಳಿ ಸಂದರ್ಭದಲ್ಲಿ ಪಟಾಕಿಗಳನ್ನ ಬ್ಯಾನ್ ಮಾಡುತ್ತೆ.

* ಆಯೋಧ್ಯೆಯ ರಾಮಜನ್ಮಭೂಮಿ ತೀರ್ಪಿಗಾಗಿ ಅಥವ ವಿಚಾರಣೆಗಾಗಿ ಸಮಯ ಇವರಿಗಿಲ್ಲ ಆದರೆ ಉಗ್ರರ ಹಿಯರಿಂಗ್ ಗಾಗಿ ರಾತ್ರಿ ಎರಡು ಗಂಟೆಗೆ ನ್ಯಾಯಾಲಯದ ಬಾಗಿಲು ತೆಗೆಯಲಾಗುತ್ತೆ!!

ಸುಪ್ರೀಂ ಕೋರ್ಟಿಗೆ ಕೇವಲ ಹಿಂದೂ ಧಾರ್ಮಿಕ ನಂಬಿಕೆಗಳ ಮೇಲೆ ಪ್ರಹಾರ ಮಾಡುವ ಬದಲು ಕಾಶ್ಮೀರಲ್ಲಿ ಕಲ್ಲೆಸೆಯೋ ಭಯೋತ್ಪಾದಕರನ್ನ ಬ್ಯಾನ್ ಮಾಡೋ ತಾಕತ್ತು ತೋರಿಸಲಿ. ಆದರೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ತರಾಟೆಗೆ ತಗೊಂಡು ಕಲ್ಲೆಸೆಯೋರ ಮೇಲೆ ಪೆಲೆಟ್ ಗನ್ ಪ್ರಯೋಗಿಸಬೇಡಿ ಅನ್ನೋ ತಾಕೀತು ಮಾಡುತ್ತೆ.

ಗೋರಕ್ಷಣೆ ಮಾಡುವವರ ಮೇಲೆ ಪ್ರಹಾರ ಮಾಡುವ ಬದಲು ಅಕ್ರಮವಾಗಿ ಗೋಸಾಗಾಟ ಮಾಡುವ ದಂಧೆ ಮಾಡಿ ಮಾಂಸ ಇತ್ಯಾದಿಯನ್ನು ವಿದೇಶಕ್ಕೆ ರಫ್ತು ಮಾಡಿ ಸಾವಿರಾರು ಕೋಟಿ ದುಡ್ಡು ಮಾಡುತ್ತಿರೋ ಗೋಭಕ್ಷಕರಿಗೂ ಚಾಟಿ ಬೀಸಲಿ

ಹೋಳಿ ಹಬ್ಬಕ್ಕೆ ಹೆಚ್ಚು ನೀರು ಬಳಸಬೇಡಿ ಅಂತ ಹೇಳುವ ಮುನ್ನ ಬಕ್ರೀದ್ ದಿನದಂದು ಬಲಿ ಕೊಡೋ ಕೋಟ್ಯಾಂತರ ಪ್ರಾಣಿಗಳ ಜೀವವನ್ನೂ ರಕ್ಷಿಸೋಕೆ ಆದೇಶ ಕೊಡಲಿ

ಹಿಂದೂ ಆಚರಣೆಗಳನ್ನ ಟಾರ್ಗೇಟ್ ಮಾಡೋ ಸುಪ್ರೀಂ ಕೋರ್ಟ್ ಮೊಹರ್ರಂನಂದು ಎದೆ ಎದೆ ಬಡ್ಕೊಂಡು ಮಾಡಿಕೊಳ್ಳೋ ಹಿಂಸೆಯನ್ನೂ ತಡೆಯೋ ತೀರ್ಪು ಕೊಡಲಿ.

ಬರೀ ಸಹಿಷ್ಣುಗಳಾಗಿರೋ ಹಿಂದುಗಳಿಗೆ ಮಾತ್ರ ಈ ದೇಶದಲ್ಲಿ ಸುಪ್ರೀಂ ಕೋರ್ಟ್ ಇದೆಯಾ ಅಥವ ದೇಶದ 125 ಕೋಟಿ ಜನರಿಗೂ ಇದು ಸುಪ್ರೀಂ ಕೋರ್ಟಾ?

ಅಷ್ಟಕ್ಕೂ ಇವರುಗಳು ಯಾರ ಕೃಪೆಯಿಂದ ಜಡ್ಜ್’ಗಳಾಗಿ ಆಯ್ಕೆಯಾಗಿದ್ದೀರೋ ಅವರಿಗೆ ನಿಷ್ಠೆಯಿಂದ ನಡೆಕೊಳ್ಳುತ್ತಿದ್ದಾರೆ ಅಷ್ಟೇ.

ಜನ ತಿರುಗಿ ಬೀಳೋ ಮುಂಚೆ ನಿಮ್ಮ ದ್ವಿಮುಖ ನೀತಿಯನ್ನ ಬದಲಿಸಿಕೊಂಡಿತು ಬಾಬಾ ಸಾಹೇಬ್ ಅಂಬೇಡ್ಕರರು ಬರೆದ ಸಂವಿಧಾನಕ್ಕೆ ಕೊಂಚ ಮರ್ಯಾದೆ ಕೊಡಿ, ಇಲ್ಲವಾದರೆ ಜನ ನಿಮ್ಮ ವಿರುದ್ಧವೂ ತಿರುಗಿಬೀಳಬಹುದು.

(ಈ ಲೇಖನದಲ್ಲಿ ನಾನು ಇಡೀ ನ್ಯಾಯಾಂಗ ವ್ಯವಸ್ಥೆಯನ್ನು ಪ್ರಶ್ನೆ ಮಾಡಿಲ್ಲ, ನಾನು ಹೇಳುತ್ತಿರೋದು ಈ ಪವಿತ್ರ ನ್ಯಾಯಾಂಗ ವ್ಯವಸ್ಥೆಯಲ್ಲಿ ನಡೆಯುತ್ತಿರೋ ಅನಾಚಾರಗಳ ಬಗ್ಗೆಯಷ್ಟೇ, ಅಷ್ಟಕ್ಕೂ ಈ ಅಂಕಣದಲ್ಲಿ ನಾನು ಎಲ್ಲಾ ಜಡ್ಜ್’ಗಳೂ ಅಕ್ರಮವಾಗೇ ನೇಮಕವಾಗಿದ್ದಾರೆ ಅನ್ನೋದನ್ನ ಹೇಳಿಲ್ಲ ಆದರೆ ಕೊಲೇಜಿಯಂ ಮೂಲಕ ಹಲವಾರು ಜನ ಅಕ್ರಮವಾಗಿ ತಮ್ಮ ಜಡ್ಜ್ ಸ್ಥಾನಗಳನ್ನ ಅಲಂಕರಿಸಿದ್ದಾರೆ ಅನ್ನೋದನ್ನಷ್ಟೇ ಹೇಳಿದ್ದೇನೆ)

ಮೂಲ ಲೇಖನ : ಸಂಜಯ್ ದುಬೆ

ಕನ್ನಡಾನುವಾದ : Vinod Hindu Nationalist

Tags

Related Articles

Close