ಪ್ರಚಲಿತ

ಆರ್ ಟಿ ಐ ಖುಲಾಸೆ : ನರೇಂದ್ರ ಮೋದಿಯವರು ಸಾಮಾಜಿಕ ಜಾಲತಾಣಗಳಲ್ಲಿನ ಪ್ರಚಾರಕ್ಕಾಗಿ ಖರ್ಚು ಮಾಡುತ್ತಿರುವ ಹಣ ಎಷ್ಟು ಎಂದು ತಿಳಿದರೆ ಸ್ವತಃ ದಂಗಾಗುವಿರಿ!!!

ಕೆಲವೇ ಕೆಲವು ದಿನಗಳ ಹಿಂದೆ ಅರವಿಂದ್ ಕೇಜ್ರಿವಾಲ್ ತಮ್ಮನ್ನು ತಾವು ಪ್ರಚಾರ ಮಾಡಿಕೊಳ್ಳಲು ಹೋಗಿ 100 ಕೋಟಿ ರುಪಾಯಿಗಳಷ್ಟು ಹಣ ವ್ಯಯಿಸಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ!!! ಹಾಗೆಯೇ ತಮ್ಮನ್ನು ತಾವು ಪ್ರಚಾರ ಮಾಡಿಕೊಳ್ಳಲು ಹೋಗಿ ಕೋಟ್ಯಾಂತರ ರುಪಾಯಿಗಳನ್ನು ಮಾಧ್ಯಮಗಳಿಗೆ ನೀಡಿದ್ದರ ಬಗ್ಗೆ ನಾವು ಅನೇಕ ಸುದ್ದಿಗಳನ್ನು ಮತ್ತು ಲೇಖನಗಳನ್ನು ಈಗಾಗಲೇ ಓದಿದ್ದೇವೆ ಹಾಗೂ ಕೇಳಿದ್ದೇವೆ ಕೂಡ!! ಆದರೆ ಆ ಸಂದರ್ಭದಲ್ಲಿ ಸಿಎಜಿಯು, ಸಾರ್ವಜನಿಕರ ಹಣ ಮತ್ತು ತೆರಿಗೆ ಪಾವತಿಸುವ ಹಣವನ್ನು ದುರ್ಬಳಕೆ ಮಾಡಲಾಗಿತ್ತು ಎಂದು ಅರವಿಂದ್ ಕೇಜ್ರಿವಾಲ್‍ಗೆ ಮತ್ತು ದೆಹಲಿ ಸರಕಾರವನ್ನು ನೇರವಾಗಿ ಆರೋಪಿಸಿತ್ತು!!

ತಾವು ತಮ್ಮ ಪ್ರಚಾರವನ್ನು ಗಿಟ್ಟಿಸಿಕೊಳ್ಳುವ ಭರದಲ್ಲಿ ಪೇಚಾಟದ ಸ್ಥಿತಿಗೆ ತಲುಪಿದ್ದರಿಂದ, ಈ ಗುಂಪಿನ ಕೆಲ ವ್ಯಕ್ತಿಗಳು ನರೇಂದ್ರ ಮೋದಿಯವರು ಸಾಮಾಜಿಕ
ಮಾಧ್ಯಮಗಳ ಪ್ರಚಾರಕ್ಕೆ ಎಷ್ಟು ಹಣವನ್ನು ಖರ್ಚು ಮಾಡಿದ್ದಾರೆ? ಎಂಬುವುದನ್ನು ತಿಳಿಯಲು ಆರ್‍ಟಿಐಗೆ ಪ್ರಶ್ನೆಯನ್ನು ಸಲ್ಲಿಸಿದ್ದರು!! ಈ ಆರ್‍ಟಿಐ ಅರ್ಜಿಯನ್ನು ಆಮ್ ಆದ್ಮಿಪಾರ್ಟಿಯ ನಾಯಕ ಮತ್ತು ದೆಹಲಿಯ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ದಾಖಲಿಸಿದ್ದಾರೆ!! ಆದರೆ ಈ ಆರ್‍ಟಿಐಯ ದಾಖಲೆಯನ್ನು ನೋಡಿ ಆಶ್ವರ್ಯಚಕಿತರಾಗಿದ್ದು ಮಾತ್ರ ನಿಜ.

ಹೌದು.. ಈ ಅರ್ಜಿಯಲ್ಲಿ, ನರೇಂದ್ರ ಮೋದಿಯವರು ಪ್ರಚಾರಕ್ಕಾಗಿ ಬಳಸಿರುವ ಹಣ ಎಷ್ಟು ಗೊತ್ತೇ?

ಗೊತ್ತಾದರೇ ಒಂದು ಸಲ ದಿಗ್ಭ್ರಮೆಗೊಳ್ಳುವುದಂತೂ ನಿಜ!!! ಪ್ರಧಾನಿ ನರೆಂದ್ರ ಮೋದಿಯರು ಸಾಮಾಜಿಕ ಮಾಧ್ಯಮ ಪ್ರಚಾರಕ್ಕೆ ಎಷ್ಟು ಹಣವನ್ನು ಖರ್ಚು ಮಾಡಿದೆ ಎಂಬ ದಾಖಲೆಗಳನ್ನು ಹಾಗೂ ಪುರಾವೆಗಳನ್ನು ಪಿಎಂಒ ವಿವರವಾಗಿ ಕಳುಹಿಸಿ ಕೊಟ್ಟಿದ್ದಾರೆ!!!! ಬಹುಮಂದಿಗೆ ಇದು ಆಶ್ಚರ್ಯವಾಗಬಹುದು, ಯಾಕೆಂದರೆ ಪ್ರಧಾನಿ ನರೇಂದ್ರ ಮೋದಿಯವರು 2014 ರಿಂದ ಅನೇಕ ಸಾಮಾಜಿಕ ಮಾಧ್ಯಮಗಳಲ್ಲಿ ವೇದಿಕೆಯಲ್ಲಿ ಉಪಸ್ಥಿತಿಯಲ್ಲಿದ್ದರು. ಆದರೆ 2014ರ ಮೇ.ಯಿಂದ ಒಂದೇ ಒಂದು ರೂಪಾಯಿ ಖರ್ಚು ಮಾಡಿಲ್ಲ ಎಂದು ದಾಖಲೆಗಳು ಬಹಿರಂಗವಾಗಿದೆ!!!

ಪ್ರಧಾನಿಕಚೇರಿಯ ಅಧಿಕೃತ ಮೊಬೈಲ್ ಅಪ್ಲಿಕೇಶನ್‍ಗಳಲ್ಲಿ ಒಂದಾದ “ಪಿಎಂಒ ಇಂಡಿಯಾ” ಎನ್ನುವ ಅಪ್ಲಿಕೇಶನ್‍ನ್ನು, ಮೈಗೊವ್ ನಡೆಸಿದ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ವಿನ್ಯಾಸಗೊಳಿಸಿದ್ದರು. ಈ ಕುರಿತಾದ ಮಾಹಿತಿಯನ್ನು ಪಿಎಂಒ ಮೂಲಗಳು ಬಹಿರಂಗಪಡಿಸಿದೆ. ಅಷ್ಟೇ ಅಲ್ಲದೇ, ಗೂಗಲ್ ಹಾಗೂ ಇತರ ಸಾಮಾಜಿಕ ಮಾಧ್ಯಮದ ಅಭಿಯಾನಗಳಾದ ಫೇಸ್‍ಬುಕ್, ಟ್ವೀಟರ್, ಯೂಟ್ಯೂಬ್ ಅಥವಾ ಯಾವುದೇ ಗೂಗಲ್ ಖಾತೆಗಳನ್ನು ಪ್ರಧಾನ ಮಂತ್ರಿಯ ಕಚೇರಿ ಕಾರ್ಯನಿರ್ವಹಿಸುತ್ತದೆ.

“ಈ ಅಪ್ಲಿಕೇಶನ್‍ನನ್ನು ಅಭಿವೃದ್ದಿ ಪಡಿಸುವಲ್ಲಿ ಬಹುಮಾನದ ಹಣವನ್ನು ಹೊರತುಪಡಿಸಿ ಯಾವುದೇ ವೆಚ್ಚವನ್ನು ಮಾಡಲಿಲ್ಲ” ಎನ್ನುವ ಬಗ್ಗೆ ಪ್ರತ್ಯುತ್ತರವಾಗಿ
ಸಿಸೋಡಿಯಾಗೆ ಆರ್‍ಟಿಐ ಹೇಳಿದ್ದರು!!! ಅದಷ್ಟೇ ಅಲ್ಲದೇ, ಈ ಬಹುಮಾನದ ಹಣವನ್ನೂ ಕೂಡ ಗೂಗಲ್ ಪಾವತಿಸಿದೆ ಅನ್ನೋದು ಇನ್ನೊಂದು ವಿಚಾರ!! ಆದರೆ ಸಿಸೋಡಿಯಾರ ಆರ್‍ಟಿಐ ಅರ್ಜಿಯ ಪ್ರತಿಕ್ರಿಯೆಯು ‘ನರೇಂದ್ರ ಮೋದಿ ಆ್ಯಪ್’ನ್ನು ಪಿಎಂಒ ಅಥವಾ ಭಾರತ ಸರಕಾರ ಈ ಅಪ್ಲಿಕೇಶನನ್ನು ಅಭಿವೃದ್ದಿ ಪಡಿಸುವುದಿಲ್ಲ ಹಾಗೂ ನಿರ್ವಹಿಸುವುದಿಲ್ಲ ಎಂದು ತೋರಿಸುತ್ತದೆ ಎಂದು ಹೇಳಿದ್ದರು!!

ದೊಡ್ಡ ದೊಡ್ಡ ಕಂಪನಿಗಳೊಂದಿಗೆ ಒಪ್ಪಂದವನ್ನು ಮಾಡುವ ಮುಖಾಂತರ, ಪ್ರಧಾನಿ ಮೋದಿ ಹೆಚ್ಚುವರಿ ಖರ್ಚನ್ನು ಹೇಗೆ ಕಡಿತಗೊಳಿಸುತ್ತಾರೆ ಎಂಬುವುದು ಇದು ಸ್ಪಷ್ಟವಾಗಿ ತೋರಿಸಿ ಕೊಡುತ್ತದೆ!!! ಅಲ್ಲದೇ, ಈ ಅಪ್ಲಿಕೇಶನ್ ಹಾಗೂ ಖಾತೆಗಳನ್ನು ನಿರ್ವಹಿಸುವ ಸಹಾಯವನ್ನು ಮಾಡಲು ಕೆಲ ಪ್ರತಿಭೆಗಳನ್ನು
ಬಳಸಿಕೊಳ್ಳಲಾಗುತ್ತದೆ. ಪ್ರಧಾನಿ ಮೋದಿಆರಂಭಿಕ ದಿನಗಳಲ್ಲಿ ‘ಮನ್ ಕೀ ಬಾತ್’ ಕಾರ್ಯಕ್ರಮದ ಬಗ್ಗೆ ಅಧಿಕಾರಿಗಳು ಪ್ರಚಾರವನ್ನು ನೀಡುತ್ತಿರುವಾಗ ತನ್ನ
ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ ಇವತ್ತು ‘ಮನ್ ಕಿ ಬಾತ್’ ಅತೀ ದೊಡ್ಡ ಕಾರ್ಯಕ್ರಮವಾಗಿದ್ದು, ಆಲ್ ಇಂಡಿಯಾ ರೇಡಿಯಾ ಇದರಿಂದ ಸಾಕಷ್ಟು ಹಣವನ್ನು ಗಳಿಸಿದ್ದಾರೆ ಕೂಡ!! 2015ರಿಂದ 2016ರವರೆಗೆ ಈ ಕಾರ್ಯಕ್ರಮದ ಜಾಹೀರಾತು ಆದಾಯದ ಒಟ್ಟು ಮೊತ್ತ 4.78 ಕೋಟಿ ರುಪಾಯಿಗಳೆಂದು, ಈಗಾಗಲೇ ಅಧಿಕೃತ ಇಂಗ್ಲೀಷ್ ದೈನಂದಿನ ಎ.ಎನ್.ಐ ತಿಳಿಸಿದ್ದಾರೆ!!

ಕೇಜ್ರಿವಾಲ್ ಮತ್ತು ಮನೀಷ್ ಸಿಸೋಡಿಯಾ ಮೋದಿಯ ಆಡಳಿತವನ್ನು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂಬುವುದು ಸ್ಪಷ್ಟವಾಗಿ ತಿಳಿದು
ಬರುತ್ತಿದೆ. ಅಲ್ಲದೇ, ಈಗಾಗಲೇ ಜಾಹೀರಾತು ಮತ್ತು ಸ್ವಯಂ ಪ್ರಚಾರಕ್ಕೆ ತೆರಿಗೆ ಪಾವತಿದಾರ ಹಣವನ್ನು ಕಬಳಿಸಿ ಕ್ಷಮೆಗೂ ಅರ್ಹತೆಯನ್ನು ಪಡೆಯದ
ಸ್ಥಿತಿಯಲ್ಲಿರುವುದಂತೂ ಖಂಡಿತಾ!

– ಅಲೋಖಾ

Tags

Related Articles

Close