ಹಲವಾರು ವರ್ಷಗಳಿಂದ ಕುಟುಂಬ ರಾಜಕಾರಣವನ್ನು ಮಾಡಿಕೊಂಡು ಬಂದಿರುವ ನೆಹರೂ ಕುಟುಂಬ ಕಾಂಗ್ರೆಸ್ ಪಕ್ಷವನ್ನು ತನ್ನ ಸ್ವಂತ ಹಿತಾಸಕ್ತಿಗೆ ಬಳಸಿಕೊಂಡಿತು. ನೆಹರೂ ಕಾಲದಿಂದ ಇಂದಿನವರೆಗೂ ಕಾಂಗ್ರೆಸ್ ಪಕ್ಷವನ್ನು ನಿಯಂತ್ರಿಸುವುದು, ಅದರಿಂದ ಲಾಭ ಪಡೆದುಕೊಂಡಿರುವುದು, ಅದರಿಂದ ಮುಂದಿನ ಹಲವು ತಲೆಮಾರಿನವರೆಗೆ ಸಂಪತ್ತನ್ನು ಪಡೆದಿರುವುದು ನೆಹರೂ ಕುಟುಂಬ. ನೆಹರೂನುವಿನಿಂದ ಹಿಡಿದು, ಸೋನಿಯಾಗಾಂಧಿಯವರೆಗೆ ಕಾಂಗ್ರೆಸ್ ಪಕ್ಷದಿಂದ ಪಡೆದ ಲಾಭ ಅಷ್ಟಿಷ್ಟಲ್ಲ. ಇಡೀ ದೇಶವನ್ನೇ ತನ್ನ ಕುಟುಂಬದ ಆಸ್ತಿ ಎಂದೇ ನಂಬುವ ನೆಹರೂ ಕುಟುಂಬವನ್ನು ಆ ಪಕ್ಷದ ಚೇಲಾಗಳು, `ಇಂಡಿಯಾ ಅಂದ್ರೆ ಇಂದಿರಾ…
ಇಂದಿರಾ ಅಂದ್ರೆ ಇಂಡಿಯಾ’ ಎಂದು ಘೋಷಣೆ ಕೂಗುವಷ್ಟು ಗುಲಾಮಗಿರಿ ಮನೋಸ್ಥಿತಿಯನ್ನು ಬೆಳೆಸಿಕೊಂಡಿದ್ದಾರೆ. ಅನಕ್ಷರಸ್ತ ಮದರಾರರ ಓಟನ್ನೇ ನಂಬಿಕೊಂಡಿರುವ ಕಾಂಗ್ರೆಸ್, ಅವರ ಓಟಿನಿಂದಲೇ ಗೆದ್ದು, ದೇಶದ ಸಂಪತ್ತನ್ನೆಲ್ಲಾ ತನ್ನ ಕುಟುಂಬದ ಹೆಸರಲ್ಲಿ ಪೇರಿಸಿಟ್ಟಿರುವುದು ಇಂದು ನಿಧಾನವಾಗಿ ಬೆಳಕಿಗೆ ಬರುತ್ತಿದೆ. ಇಂದು ಜನರು ವಿವೇಕ ಶೂನ್ಯತೆಯಿಂದ ಹೊರಬರುತ್ತಿರುವುದು ಸೋನಿಯಾ ಗಾಂಧಿ ಕೃಪಾಪೋಷಿತ ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದೆ. ಈ ಕುಟುಂಬ ಕಳೆದ ಹಲವಾರು ವರ್ಷಗಳಿಂದ ತನ್ನ ಹಿಡಿತವಿರುವ ರಾಯ್‍ಬರೇಲಿ ಮತ್ತು ಅಮೇಥಿ ಬಿಟ್ಟು ಬೇರೆ ಕಡೆ ಸ್ಪರ್ಧಿಸುವುದಿಲ್ಲ.
ಯಾಕೆಂದರೆ ಬೇರೆ ಕಡೆ ಸ್ಪರ್ಧಿಸಿದರೆ ಗಂಟುಮೂಟೆ ಕಟ್ಟಬೇಕೆಂದು ಅವರಿಗೆ ಚೆನ್ನಾಗಿ ಗೊತ್ತು.
ಕಾಂಗ್ರೆಸ್ ಪಕ್ಷ ಸೋನಿಯಾಗಾಂಧಿಗೆ ಯಾವ ರೀತಿ ಸಕಲೈಶ್ವರ್ಯವನ್ನು ಕೊಟ್ಟಿದೆ ಎಂದರೆ ಇದೆಲ್ಲಾ ಎಲ್ಲಿಂದ ಬಂತು ಎಂದು ಆಶ್ಚರ್ಯವಾಗಬಹುದು? ಇನ್ನು ಆಕೆಯ ನಿವಾಸ ಎಷ್ಟು ಭವ್ಯವಾದೆ ಗೊತ್ತಾ? ನಂಬಿದ್ರೆ ನಂಬಿ ಬಿಟ್ರೆ ಬಿಡಿ ಪ್ರಧಾನಿ ನಿವಾಸಕ್ಕಿಂತ ಸೋನಿಯಾ ನಿವಾಸ ಬಹಳಷ್ಟು ದೊಡ್ಡದಿದೆ. ಈ ವಿಷಯವನ್ನು ಮಾಹಿತಿ ಹಕ್ಕಿನಿಂದ ಪಡೆಯಲಾಗಿದೆ.
ಭವ್ಯ, ವಿಶಾಲ ಸೋನಿಯಾ ಅಧಿಕೃತ ನಿವಾಸ…
ನವದೆಹಲಿಯಲ್ಲಿರುವ ಸೆವೆನ್‍ಕೋರ್ಸ್ ರಸ್ತೆಯಲ್ಲಿರುವ ಪ್ರಧಾನಿ ನಿವಾಸಕ್ಕಿಂತ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ 10 ಜನಪಥ್ ರಸ್ತೆಯಲ್ಲಿರುವ ಮನೆ ತುಂಬಾ ದೊಡ್ಡದಾಗಿದೆ. ಮಾಹಿತಿ ಹಕ್ಕಿನಿಂದ ಪಡೆದ ವಿವರದಿಂದ ಈ ಸತ್ಯ ಬಯಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ತಂಗಿರುವ ಆರ್‍ಸಿಆರ್ ನಿವಾಸ 14,101 ಚದರ ಮೀಟರ್ ವಿಸ್ತೀರ್ಣ ಹೊಂದಿದ್ದರೆ, 10 ಜನಪಥ್‍ನಲ್ಲಿರುವ ಸೋನಿಯಾ ನಿವಾಸ ಬರೋಬ್ಬರಿ 15,181 ಚದರ ಮೀಟರ್ ವಿಸ್ತೀರ್ಣ ಹೊಂದಿದೆ. ಸೋನಿಯಾಜೀ ವಾಸಿಸಲೆಂದು ಇಷ್ಟೊಂದು ದೊಡ್ಡ ಬಂಗ್ಲೆಯನ್ನು ಸರಕಾರಿ ವೆಚ್ಚದಲ್ಲಿ ನೀಡಲಾಗಿದೆ. ಸರಕಾರದ ಯಾವುದೇ ದೊಡ್ಡ ಹುದ್ದೆಯಲ್ಲಿಲ್ಲದಿದ್ದರೂ ಸೋನಿಯಾಗೆ ಇಷ್ಟೊಂದು ದೊಡ್ಡ ಬಂಗ್ಲೆ ಯಾಕೆ ಕೊಟ್ಟಿದ್ದಾರೆ ಎಂದು ಯಾರೂ ಕೂಡಾ ಪ್ರಶ್ನಿಸುತ್ತಿಲ್ಲ. ನಾವು ಕಟ್ಟುವ ತೆರಿಗೆ ಹಣದಿಂದ ಸೋನಿಯಾ ಗಾಂಧಿ ಕುಟುಂಬ ಎಷ್ಟೊಂದು ಎಂಜಾಯ್ ಮಾಡ್ತಿದೆ ಎಂದು ನಮಗ್ಯಾರಿಗೂ ಏನೂ ಅನಿಸುವುದಿಲ್ಲವೆನ್ನುವುದೇ ದೊಡ್ಡ ವಿಪರ್ಯಾಸ.
ಕಳೆದಬಾರಿ ಕಾಂಗ್ರೆಸ್ ಮೈತ್ರಕೂಟ ದೇಶವನ್ನು ಆಳಿತ್ತು. ಆ ವೇಳೆ ಪ್ರಧಾನಿಯಾಗಿದ್ದು ಮನಮೋಹನ ಸಿಂಗ್. ಆ ವೇಳೆ ಸೋನಿಯಾಗೆ ಯಾವುದೇ ಸಾಂವಿಧಾನಿಕ ಹುದ್ದೆ ಇರಲಿಲ್ಲ. ಆದರೂ ಕೂಡಾ ಆಕೆ ಭದ್ರತಾ ಕಾರಣಗಳಿಗಾಗಿ ಆಕೆಗೆ ಈ ಭವ್ಯ ಬಂಗ್ಲೆಯನ್ನು ನೀಡಲಾಗಿದೆಯಂತೆ… ಸರಕಾರಕ್ಕೆ ಸೇರಿದ 10 ಜನಪಥ್ ಅನ್ನು ಸೋನಿಯಾಗೆ ವಿಶೇಷವಾಗಿ ನೀಡಿದ್ದು ಯಾಕೆ ಎಂಬುವುದು ಮಿಲಿಯನ್ ಡಾಲರ್ ಪ್ರಶ್ನೆ.
ಇಷ್ಟು ಮಾತ್ರವಲ್ಲ… ಸೋನಿಯಾ ಪುತ್ರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಾಸವಿರುವ 12 ತುಘಲಕ್ ಲೇನ್‍ನಲ್ಲಿರುವ ಬಂಗ್ಲೆ ಐಷಾರಾಮಿಯಾಗಿದ್ದು, 5022.58 ಚದರ ಅಡಿ ವಿಸ್ತೀರ್ಣ ಹೊಂದಿದೆ. ಪ್ರಿಯಾಂಕಾ ಗಾಂಧಿ ವಾದ್ರಾಗೆ 2,765.18 ಚರದ ಅಡಿ ವಿಸ್ತೀರ್ಣದ ಬಂಗಲೆ ನೀಡಲಾಗಿದೆ.
ಮಂತ್ರಿ ಮಹೋದಯರು ವಾಸಿಸುತ್ತಿರುವ ನಿವಾಸಗಳ ಕುರಿತಂತೆ ವಿವರ ಕೋರಿ ಮಾಹಿತಿ ಹಕ್ಕು ಕಾರ್ಯಕರ್ತರಾದ ದೇವ್ ಆಶೀಶ್ ಭಟ್ಟಾಚಾರ್ಯ ಅರ್ಜಿ ಸಲ್ಲಿಸಿದಾಗ ದೊರಕಿದ ಮಾಹಿತಿಗಳಿವು.
ಪ್ರಸಿದ್ಧ ಆನ್‍ಲೈನ್ ಪೋಲ್ಸ್ಟೆರ್ `ಮೈ ಓಟ್ ಟುಡೇ’ ಒಂದು ಸಾರ್ವಜನಿಕರ ಅಭಿಪ್ರಾಯವನ್ನು ಕೇಳಿತು.
ದೇಶದಲ್ಲಿ ಹಲವಾರು ಲೋಕಸಭಾ ಸದಸ್ಯರಿದ್ದಾರೆ. ಆದರೆ ಕಾಂಗ್ರೆಸ್ ನಾಯಕಿಯ ನಿವಾಸವು ಪ್ರಧಾನಿ ನಿವಾಸಕ್ಕಿಂತಲೂ ದೊಡ್ಡದಿರುವುದು ಸರಿಯೇ?’ ಎಂದು ಅದು ಪ್ರಶ್ನಿಸಿತು. ಇಲ್ಲಿ 16,781 ಮಂದಿ ತನ್ನ ಅಭಿಪ್ರಾಯವನ್ನು ದಾಖಲಿಸಿದ್ದು, ಶೇ. 73 ಮಂದಿ ಸೋನಿಯಾ ಗಾಂಧಿ ಪ್ರಧಾನಿಗಿಂತಲೂ ದೊಡ್ಡ ನಿವಾಸವನ್ನು ಹೊಂದುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೊದಲೇ ತಿಳಿಸಿದಂತೆ ಯಾವುದಾದರೂ ಸಾಂವಿಧಾನಿಕ ಹುದ್ದೆ ಹೊಂದಿರುವವರು ಮಾತ್ರ ಸರಕಾರಿ ಬಂಗ್ಲೆಯಲ್ಲಿ ಇರಬಹುದು. ಆದರೆ ಸೋನಿಯಾಗಾಂಧಿಗೆ ಯಾವ ಹಕ್ಕಿದೆ? ತೆರಿಗೆ ಹಣ ಸೋನಿಯಾ ಗಾಂಧಿಯಾ ಮೋಜಿಗಾಗಿ ಖರ್ಚಾಗುತ್ತಿದೆ ಎಂದಾಗ ನಮ್ಮ ದೇಶದ ಸ್ಥಿತಿ ಯಾವ ದಿಕ್ಕಿನಲ್ಲಿದೆ ಎಂದು ಆಲೋಚಿಸಬೇಕಾಗುತ್ತದೆ. 2013-14ರಲ್ಲಿ ಸೋನಿಯಾ ಬಂಗ್ಲೆಯ ವಿದ್ಯುತ್ ನಿರ್ವಹಣೆಗೆಂದೇ ಬರೋಬ್ಬರಿ 53.43 ಲಕ್ಷ ರೂ ಹಣವನ್ನು ಸರಕಾರಿ ಖಜಾನೆಯಿಂದ ಖರ್ಚು ಮಾಡಲಾಗಿದೆ. ಇಷ್ಟೊಂದು ಹಣವನ್ನು ಯಾವುದಾದರೂ ಅಭಿವೃದ್ಧಿ ಯೋಜನೆಗೆ ಅಳವಡಿಸಿದ್ದರೆ ದೇಶಕ್ಕೆ ಎಷ್ಟೋ ಲಾಭವಾಗಿರುತ್ತಿತ್ತು.
ನಮ್ಮ ದೇಶದಲ್ಲಿ ಇದೇ ರೀತಿ ಸಾಕಷ್ಟು ಹಣವನ್ನು ಪೋಲು ಮಾಡಲಾಗುತ್ತಿದೆ. ಜವಹರಲಾಲ್ ನೆಹರೂ ಫ್ಯಾಮಿಲಿ ಎಂಬ ಕಾರಣಕ್ಕಾಗಿಯೇ ಸೋನಿಯಾಗೆ ಸರಕಾರಿ ಖರ್ಚಿನಲ್ಲಿ ಇಷ್ಟೊಂದು ದುಂದುವೆಚ್ಚ ಮಾಡಲಾಗುತ್ತಿದೆ. ಕೇವಲ ಗಾಂಧಿ ಎಂಬ ಹೆಸರನ್ನಿಟ್ಟುಕೊಂಡು, ಕಾಂಗ್ರೆಸ್ ಪಕ್ಷದ ಹೆಸರಲ್ಲಿ ಜನರನ್ನು ಮೂರ್ಖರನ್ನಾಗಿಸುವ ಇಂಥವರಿಂದ ದೇಶ ದರೋಡೆಯಾಗುವುದನ್ನು ತಪ್ಪಿಸಬೇಕು.
ಚೇಕಿತಾನ