ಅಂಕಣ

ಆಸ್ಕರ್ ಫೆರ್ನಾಂಡಿಸ್ ಪ್ರಯಾಣಕ್ಕಾಗಿ ಖರ್ಚುಮಾಡಿದ ಸರಕಾರದ ಬೊಕ್ಕಸದ ಹಣವೆಷ್ಟು ಎಂದು ತಿಳಿದರೆ ಖಂಡಿತಾ ದಂಗಾಗುವಿರಿ!!!!

ನಮ್ಮ ದೇಶದಲ್ಲಿ ಇಂದು ಕಾಂಗ್ರೆಸ್ಸ್ ಸರಕಾರ ಏನೂ ಘನಂಧಾರಿ ಕೆಲಸ ಮಾಡಿತೋ ಗೊತ್ತಿಲ್ಲ ಆದರೆ ಸಿಕ್ಕ ಪಟ್ಟೆ ಹಣ ಮಾಡಿದ್ದಂತೂ ನಿಜ!!! ಯಾಕಂದರೆ
ಕೇಂದ್ರದಲ್ಲಿ ಕಾಂಗ್ರೇಸ್ಸ್ ಸರಕಾರ ಇರಬೇಕಾದರೆ ಕೋಟಿಗಟ್ಟಲೆ ಕಪ್ಪು ಹಣಗಳ ಅವ್ಯವಹಾರ ನಡೆದಿದ್ದು ಮಾತ್ರವಲ್ಲದೇ ಎಷ್ಟೋ ಸಚಿವರುಗಳು ತಮ್ಮ ಬೊಕ್ಕಸವನ್ನು ತುಂಬಿಸಿಕೊಂಡರೋ ಗೊತ್ತಿಲ್ಲ.

ದೇಶ ಸೇವೆಗಿಂತ ಲಕ್ಷ್ಮೀಯ ದಾಸರಾದದ್ದೇ ಹೆಚ್ಚು!!! ಯಾಕಂದರೆ ಹಣ ಕಂಡರೆ ಹೆಣನೂ ಬಾಯಿ ಬಿಡುತ್ತೆ ಅನ್ನುವಂತೆ ಹಣಕ್ಕೋಸ್ಕರ ಅದೇಷ್ಟೋ ಅವ್ಯವಹಾರಗಳು ನಡೆದವು ಗೊತ್ತಿಲ್ಲ…. ಆದರೇ ಸರಕಾರಕ್ಕೆ ಹೊರೆಯನ್ನು ವಹಿಸುವುದರಲ್ಲಿ ನಿಸ್ಸೀಮರೆನಿಸಿಕೊಂಡಿದ್ದಾರೆ.

ಇದೀಗಾಗಲೇ ಸಿ.ಎಂ ಸಿದ್ದರಾಮಯ್ಯ ಕಾಫಿ, ಟೀ, ಬಿಸ್ಕಿಟ್ ವಿಚಾರದಲ್ಲಿ ಬರೀ ನಾಲ್ಕೇ ವರ್ಷದಲ್ಲಿ 60 ಲಕ್ಷ ರೂಪಾಯಿಗಳನ್ನು ವ್ಯಯಿಸಿ ಸುದ್ದಿಯಾಗಿರುವುದು ಬಾರೀ ಸುದ್ದಿ ಮಾಡಿತ್ತು. ಆದರೆ ಇದೀಗ ಕರ್ನಾಟಕದ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಟಿಎ-ಡಿಎ ಮೂಲಕ ಸುದ್ದಿಯಲ್ಲಿದ್ದಾರೆ. ಹೌದು.. ಇದೇನೂ ಟಿಎ-ಡಿಎ ಅಂತೀರಾ? ಟಿಎ-ಡಿಎ ಅಂದರೆ ಪ್ರಯಾಣಭತ್ಯೆ ಮತ್ತು ತುಟ್ಟಿಭತ್ಯೆ!!!

ಅದೆಷ್ಟೋ ಸಚಿವರು, ದೇಶ ಸೇವೆ ಮಾಡುವುದಕ್ಕಿಂತ ಹೆಚ್ಚಾಗಿ ಸರ್ಕಾರದ ಬೊಕ್ಕಸಕ್ಕೆ ಭಾರಿ ಹೊರೆ ಮಾಡಿರುವ ಸುದ್ದಿ ಇದೀಗ ಬೆಳಕಿಗೆ ಬಂದಿದೆ. 2016-17ನೇ ವರ್ಷದಲ್ಲಿ 95 ಕೋಟಿ ರೂಪಾಯಿ ಹೊರೆ ಮಾಡಿದ್ದಾರೆ ಎಂದು ಮಾಹಿತಿ ಹಕ್ಕು ಅಡಿ ಸಲ್ಲಿಸಿದ್ದ ಅರ್ಜಿಯಿಂದ ಬೆಳಕಿಗೆ ಬಂದಿದೆ. ಈ ಪೈಕಿ ನಮ್ಮ ಕರ್ನಾಟಕದ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಅವರು ಎಷ್ಟು ರೂಪಾಯಿಯ ಪ್ರಯಾಣಭತ್ಯೆ ಮತ್ತು ತುಟ್ಟಿಭತ್ಯೆ (ಟಿಎ-ಡಿಎ) ಪಡೆದಿದ್ದಾರೆ ಗೊತ್ತೇ? ಅವರು ಪ್ರಯಾಣಭತ್ಯೆ ಮತ್ತು ತುಟ್ಟಿಭತ್ಯೆಗೆ ವ್ಯಯಿಸಿರುವುದು ಬರೋಬ್ಬರಿ 59,97,998 ರೂಪಾಯಿ!!!

ಲೋಕಸಭೆ ಮತ್ತು ರಾಜ್ಯಸಭೆಯ ಸಂಸದರು ವಿಮಾನದ ಟಿಕೆಟ್ ಖರೀದಿಸಿ, ಅದರಲ್ಲಿನ ಶೇ.25ರಷ್ಟನ್ನು ತುಟ್ಟಿಭತ್ಯೆಯಾಗಿ ಪರಿವರ್ತನೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಅಘಾತಕಾರಿಯಾದ ಸುದ್ದಿ ಹೊರಬಿದ್ದಿರುವುದು ಬಾರಿ ಕುತೂಹಲವನ್ನು ಸೃಷ್ಟಿಸಿದೆ. ಈ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯ ಅನ್ವಯದಲ್ಲಿ ಸಿಕ್ಕಿರುವ ಈ ಮಾಹಿತಿಯನ್ನು ಇಂಗ್ಲಿಷ್ ಸುದ್ದಿವಾಹಿನಿ “ಟೈಮ್ಸ್ ನೌ’ ವರದಿ ಪ್ರಸಾರ ಮಾಡಿದೆ.

ಶೇ.25ರಷ್ಟನ್ನು ತುಟ್ಟಿಭತ್ಯೆಯಾಗಿ ಪರಿವರ್ತನೆ ಮಾಡುತ್ತಿರುವ ಹಿನ್ನಲೆಯಲ್ಲಿ ಸರಕಾರಕ್ಕೆ ಅನಗತ್ಯವಾದ ಹೊರೆಯಾಗುತ್ತಿದ್ದು, ಪ್ರತಿ ತಿಂಗಳು 5 ಲಕ್ಷ ರೂ.ವರೆಗೆ
ವೆಚ್ಚವಾಗಿದೆ. ಒಟ್ಟಾರೆಯಾಗಿ ಒಂದು ವರ್ಷದ ಅವಧಿಯಲ್ಲಿ ರಾಜ್ಯಸಭೆಯ ಸದಸ್ಯರೇ 35 ಕೋಟಿ ರೂ.ನಷ್ಟು ಮೊತ್ತವನ್ನು ತುಟ್ಟಿಭತ್ಯೆ ರೂಪದಲ್ಲಿ ಪಡೆದುಕೊಂಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. 2016ರ ಏಪ್ರಿಲ್‍ನಿಂದ ಮಾರ್ಚ್ 2017ರ ವರೆಗಿನ ಅವಧಿಯಲ್ಲಿ ಸಂಸದರು ಕೊನೆಯ ಹಂತದಲ್ಲಿ ಬ್ಯುಸಿನೆಸ್ ಕ್ಲಾಸ್‍ನ ಟಿಕೆಟ್ ಬುಕ್ ಮಾಡಿಸಿದ್ದಾರೆ ಎಂದು ಹೇಳಿಕೊಳ್ಳಲಾಗಿದೆ.

ಈ ಪಟ್ಟಿಯಲ್ಲಿ ಕರ್ನಾಟಕದ ಕಾಂಗ್ರೆಸ್ ನಾಯಕ, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ (59,97,998 ಲಕ್ಷ ರೂ), ಗೋವಾದ ಕಾಂಗ್ರೆಸ್ ನಾಯಕ, ರಾಜ್ಯಸಭಾ ಸದಸ್ಯ ಶಾಂತರಾಮ್ ನಾಯಕ್ (41,93,583 ಲಕ್ಷ ರೂ.), ಟಿಎಂಸಿ ನಾಯಕ ಸುಖೇಂದು ಶೇಖರ್ ರಾಯ್ (61,72,271 ಲಕ್ಷ ರೂ), ಡಿಎಂಕೆಯ ತಿರುಚ್ಚಿ ಶಿವ (58,79,198 ಲಕ್ಷ ರೂ), ಕರ್ನಾಟಕದಲ್ಲಿ ಕಾಂಗ್ರೆಸ್ ಉಸ್ತುವಾರಿ ಹೊತ್ತಿರುವ ಕೆ.ಸಿ.ವೇಣುಗೋಪಾಲ್ (32.6 ಲಕ್ಷ ರೂ.), ಸಿಪಿಐ ನಾಯಕ ಡಿ.ರಾಜಾ (65,72,271 ಲಕ್ಷ ರೂ.) ಮೊತ್ತ ಪಡೆದುಕೊಂಡಿದ್ದಾರೆ.

ಇನ್ನುಳಿದಂತೆ ಸಿಪಿಎಂನ ರಿತಂಭರಾ ಬ್ಯಾನರ್ಜಿ (68,24,335 ಲಕ್ಷ ರೂ), ಕಾಂಗ್ರೆಸ್‍ನ ಪಿ.ಭಟ್ಟಾಚಾರ್ಯ (53,12,550 ಲಕ್ಷ ರೂ.), ಸಂಸದರಾದ ಆನಂದ
ಭಾಸ್ಕರ ರಾಪೆÇೀಲಿ (52,48,328 ಲಕ್ಷ ರೂ), ನರೇಂದ್ರ ಬುದಾನಿಯಾ (41,38,300 ಲಕ್ಷ ರೂ.) ಜಾಯ್ ಅಬ್ರಹಾಂ (47,03,278 ಲಕ್ಷ ರೂ.) ಪಡೆದುಕೊಂಡಿದ್ದಾರೆಂದು
ವರದಿ ಹೇಳಿಕೊಂಡಿದೆ.

ಆದರೆ ಆಸ್ಕರ್ ಫೆರ್ನಾಂಡಿಸ್ ಅವರು ಕೊನೇ ಕ್ಷಣದಲ್ಲಿ ‘ಸರ್ಜ್ ಪ್ರೈಸಿಂಗ್’ ಅಡಿ ದಿಲ್ಲಿಯಿಂದ ಬೆಂಗಳೂರಿಗೆ ವಿಮಾನ ಟಿಕೆಟ್ ಬುಕ್ ಮಾಡಿದ್ದು, ಒಂದೇ ಟಿಕೆಟ್’ಗೆ
69,218 ರುಪಾಯಿ ನೀಡಿ ಸರ್ಕಾರದ ಬೊಕ್ಕಸಕ್ಕೆ ಬಹು ದೊಡ್ಡದಾದ ಹೊಡೆತ ನೀಡಿದ್ದಾರೆ. ಆದರೆ ಒಂದೇ ಟಿಕೆಟ್‍ಗೆ ಇಷ್ಟೊಂದು ಹಣವನ್ನು ವ್ಯಯಿಸಿರುವುದು
ಮಾತ್ರ ಒಂದು ಸೋಜಿಗದ ಸಂಗತಿಯಾಗಿದೆ.

ಇನ್ನೊಂದು ವಿಷಯ ಏನೆಂದರೆ, ಆಸ್ಕರ್ ಫೆರ್ನಾಂಡಿಸ್ ಎಲ್ಲೇ ಹೋಗಿರಲಿ ಅವರು ತಮ್ಮ ಹೆಂಡತಿಯನ್ನು ತನ್ನ ಜೊತೆಗೆನೇ ಕರೆದುಕೊಂಡು ಹೋಗುತ್ತಾರೆ ಎನ್ನುವುದು ಎಲ್ಲರಿಗೆ ತಿಳಿದಿರುವ ವಿಚಾರ. ಆದರೆ ಇವರ ವಿಮಾನದ ಟಿಕೆಟ್ ಅಲ್ಲದೇ ಇವರ ಪ್ರಯಾಣದ ಟಿಕೆಟ್‍ನ್ನು ಯಾರೂ ಕಟ್ಟುತ್ತಾರೆ ಎಂಬುವುದು ಒಂದು ಯಕ್ಷ ಪ್ರಶ್ನೆಯಾಗಿದೆ.

Original Source : Daily Hunt

– ಅಲೋಖಾ

Tags

Related Articles

Close