ಅಂಕಣದೇಶಪ್ರಚಲಿತ

ಆಸ್ಪತ್ರೆ ಬಿಲ್ ಮೇಲೆ ಸರ್ಜಿಕಲ್ ದಾಳಿ ನಡೆಸಿದ ಮೋದಿ ಸರ್ಕಾರ…!!!

ಹೌದು! 1.50 ಲಕ್ಷ ಇದ್ದ ಮೊಣಕಾಲು ಶಸ್ತ್ರಚಿಕಿತ್ಸೆ ದರವನ್ನು 55 ಸಾವಿರಕ್ಕೆ ಇಳಿಸಿ ತುರ್ತಾಗಿ ಅನ್ವಯವಾಗುವಂತೆ ಆದೇಶ ಮಾಡಿದೆ ಮೋದಿ ಸರ್ಕಾರ!!!!

ಇತ್ತೀಚಿಗಷ್ಟೇ ಸ್ಟೆಂಟ್ ಬೆಲೆ ಇಳಿಸುವ ಮೂಲಕ ಹೃದ್ರೋಗಿಗಳಿಗೆ ನೆರವು ನೀಡಿದ್ದ ಕೇಂದ್ರ ಸರಕಾರ ಈಗ ಮಂಡಿ ಕಸಿ ಶಸ್ತ್ರ ಚಿಕಿತ್ಸೆಯ ನೆರವಿಗೂ ಧಾವಿಸಿದೆ!
ಗುರುವಾರದಂದು ಕಸಿ ಶಸ್ತ್ರ ಚಿಕಿತ್ಸೆಗೆ ಬಳಸುವ ವಿವಿಧ ಉಪಕರಣಗಳಿಗೆ ಬೆಲೆ ನಿಗದಿ ಮಾಡಿದ ಕೇಂದ್ರ ಸರಕಾರ ಪ್ರಕಟಣೆ ಹೊರಡಿಸಿದೆ.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರಾದ ಅನಂತ ಕುಮಾರ್ ಪ್ರಕಟಣೆ ನೀಡಿದ್ದಾರೆ.

ದರಕ್ಕೆ ಕಡಿವಾಣ ಹಾಕಿದ ಕೇಂದ್ರ ಸರಕಾರ!!!

ಕಸಿ ಚಿಕಿತ್ಸೆಗೆ ಅತ್ಯಗತ್ಯವಾಗಿ ಬೇಕಾಗಿರುವುದು ಕೋಬಾಲ್ಟ್ ಕ್ರೋಮಿಯಂ! ಸದ್ಯ ವ್ಯಾಪಕವಾಗಿ ಬೇಡಿಕೆಯಲ್ಲಿರುವ ಕ್ರೋಮಿಯಂಗೆ ಸದ್ಯ ಭಾರತದಲ್ಲಿ ಸರಾಸರಿ ರೂಪಾಯಿ 1.58 ಲಕ್ಷ ದರ ವಿಧಿಸಲಾಗುತ್ತಿತ್ತು. ಆದರೆ, ಈಗ ಈ ದರವನ್ನು ಶೇ.65 ರಷ್ಟು ಕಡಿತಗೊಳಿಸಿ ಕೇವಲ ರೂ.54,720 ಕ್ಕೆ ನಿಗದಿ ಮಾಡಲಾಗಿದೆ.

ಇತರೆ ವಿಶೇಷ ಲೋಹಗಳಾದ ಟೈಟಾನಿಯಂ ಮತ್ತು ಆಕ್ಸಿಡೈಜ್ಡ್ ಜೊರೊಕೊನಿಯಂ ಉಪಕರಣಗಳಿಗೆ ರೂ.2.50 ಲಕ್ಷ ವಿಧಿಸಲಾಗುತ್ತಿದ್ದು, ಶೇ.69 ರಷ್ಟನ್ನು ಇಳಿಸಿ ಗರಿಷ್ಟ ರೂ.76,600 ಗೆ ನಿಗದಿ ಮಾಡಲಾಗಿದೆ.

ಹೈ ಫ್ಲೆಕ್ಸಿಬಿಲಿಟಿ ಗೆ ಸದ್ಯ ರೂ.1.81 ಲಕ್ಷವಿದ್ದದ್ದನ್ನು ರೂ.56,490 ಗೆ ಇಳಿಸಲಾಗಿದೆ.

ಇದಲ್ಲದೇ, ಎರಡನೇ ಬಾರಿ ಮಂಡಿ ಕಸಿ ಮಾಡುವ ಸಂದರ್ಭದಲ್ಲಿ ಬಳಸುವ ಉಪಕರಣಕ್ಕೆ ಗರಿಷ್ಟ ರೂ.2.75 ಲಕ್ಷಗಳಿದ್ದದ್ದನ್ನು ರೂ.1.13 ಲಕ್ಷಕ್ಕೆ ಇಳಿಕೆ ಮಾಡಲಾಗಿದೆ. ಕ್ಯಾನ್ಸರ್ ಮತ್ತು ಬ್ರೈನ್ ಟ್ಯೂಮರ್ ಗಿದ್ದ ಗರಿಷ್ಟ ದರವನ್ನೂ ಕಡಿಮೆ ಮಾಡಿರುವ ಕೇಂದ್ರ ಸರಕಾರ 2 ಲಕ್ಷದಿಂದ 9 ಲಕ್ಷದವರೆಗಿದ್ದ ಖರ್ಚನ್ನು ಶೇ.59 ರಷ್ಟು ಇಳಿಸಿ ರೂ.1,13,950 ಗಳಿಗೆ ನಿಗದಿಗೊಳಿಸಿದೆ.

ಸರಾಸರಿ 1.5 ಕೋಟಿ ಜನರಿಗೆ ಮಂಡಿ ಸಮಸ್ಯೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಅಲ್ಲದೇ, 2020 ರ ಹೊತ್ತಿಗೆ ಜನರು ಚಲನ ಹೀನರಾಗಲು ದೇಶದಲ್ಲಿ ಹಾಗೂ ವಿಶ್ವದಲ್ಲಿ ನಾಲ್ಕನೇ ಪ್ರಮುಖ ಕಾರಣವಾಗಲಿದೆ ಎಂದು ವರದಿ ನೀಡಿದೆ.

ಅನಂತ್ ಕುಮಾರ್ ಈ ಗರಿಷ್ಟ ನಿಗದಿಯನ್ನು ಮೀರಿದರೆ, ಅಥವಾ ಸರಕಾರದ ಪ್ರಕಟಣೆಯನ್ನು ಪಾಲಿಸದಿದ್ದರೆ ಆಸ್ಪತ್ರೆಯ ಲೈಸೆನ್ಸ್ ನನ್ನು ರದ್ದುಗೊಳಿಸಿ ಕಠಿಣ ಕ್ರಮ ಕೈಗೊಳ್ಳುತ್ತೇವೆಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

ವೈದ್ಯಕೀಯ ಕ್ಷೇತ್ರಗಳಲ್ಲಿ ಸಹಕಾರ ನೀಡುತ್ತಿರುವ ಕೇಂದ್ರ ಸರಕಾರದ ಯೋಜನೆಗಳೂ ಬಡವರಿಗೆ ಅನುಕೂಲವಾಗುವಂಥದ್ದಾಗಿರುವುದರಿಂದ ಬಹುಷಃ ಅಚ್ಛೇದಿನದ ಸಂಕೇತವೂ ಗೋಚರಿಸುತ್ತಿದೆ. ಕೇಂದ್ರ ಸರಕಾರದ ಈ ನಿರ್ಧಾರಗಳು ದೇಶದ ಪ್ರಜೆಗಳ ಆರೋಗ್ಯಯುತವಾದ ಬದುಕಿಗೆ ಉತ್ತಮವಾಗಿದೆಯೆಂದು ಅನಂತ ಕುಮಾರ್ ಹೇಳಿದ್ದಾರೆ.

– ಪೃಥು ಅಗ್ನಿಹೋತ್ರಿ

Tags

Related Articles

Close