ಬಿಜೆಪಿಯ ನವ ಪರಿವರ್ತನಾ ಯಾತ್ರೆಗೆ ಬಿಜೆಪಿ ಕಾರ್ಯಕರ್ತರ ದಂಡೇ ಹರಿದು ಬಂದಿದೆ. ಎಲ್ಲಿ ನೋಡಿದರೂ ಜನ! ಎಲ್ಲಿ ನೋಡಿದರೂ ಕೇಸರಿ ಕಲರವ ತುಂಬಿತ್ತು. ಹಲವು ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.
ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಉದ್ಧೇಶದಿಂದ ಕೈಗೊಂಡಿರುವ ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆಯನ್ನು ಇಂದು ನೀಡಿದ್ದು ಇದಕ್ಕೆ ಸಾಥ್ ನೀಡಲು ಸುಮಾರು 58 ಸಾವಿರ ಬೈಕ್ ಕಾರ್ಯಕರ್ತರು ಬೆಂಗಳೂರಿಗೆ ತೆರಳಿದ್ದರು. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹಾಗೂ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಇವರು ಪರಿವರ್ತನಾ ಯಾತ್ರೆ ಉಧ್ಘಾಟಿಸಿದ್ದು ಇದರಲ್ಲಿ ಮೈಸೂರಿನ ಕಾರ್ಯಕರ್ತರೂ ಪಾಲ್ಗೊಂಡಿದ್ದರು. ಭಾರತೀಯ ಜನತಾ ಪಕ್ಷದ ವತಿಯಿಂದ ನವ ಕರ್ನಾಟಕ ನಿರ್ಮಾಣಕ್ಕಾಗಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ 75 ದಿನಗಳ ಕಾಲ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಯಾತ್ರೆ ನಡೆಯಲಿದೆ.
ತುಮಕೂರು ರಸ್ತೆಯಲ್ಲಿ 4ರಿಂದ 5 ಕಿಮೀ ಟ್ರಾಫಿಕ್ ಜಾಮ್ ಉಂಟಾಗಿದ್ದು ಮಹಾ ಟ್ರಾಫಿಕ್‍ನಲ್ಲಿ ಸಿಲುಕಿ ಆಂಬುಲೆನ್ಸ್‍ಗಳು ಕೂಡಾ ಪರದಾಡುವಂತಾಗಿದೆ.
ಬರೋಬ್ಬರಿ 1 ಲಕ್ಷಕ್ಕೂ ಅಧಿಕ ಕೇಸರಿ ಪಡೆ ಕಾರ್ಯಕರ್ತರು ಯಾತ್ರೆಯಲ್ಲಿ ಭಾಗಿಯಾಗಲು ಬಂದಿದ್ದು ಬೆಂಗಳೂರು ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಸ್ಥಳವೆಲ್ಲಾ
ಭರ್ತಿಯಾಗಿತ್ತು.
ಇದೇ ಸಮಯದಲ್ಲಿ ರಾಜ್ಯದ ವಿವಿದೆಡೆಗಳಿಂದ ಬಂದ ಬೈಕ್ ರ್ಯಾಲಿಯಿಂದಾಗಿ ಹಲವೆಡೆ ಸುಮಾರು ಹೊತ್ತಿನವಗೆ ಟ್ರಾಫಿಕ್ ಜಾಮ್ ಉಂಟಾಗಿದ್ದು ವಾಹನಗಳ
ಸಂಚಾರ ಸ್ವಲ್ಪ ಸಮಯ ಅಸ್ತ ವ್ಯಸ್ತಗೊಂಡಿತ್ತು. ಕೇವಲ ಬೈಕ್ ರ್ಯಾಲಿ ಅಲ್ಲದೇ ಕಾರು ಬಸ್‍ಗಳಲ್ಲಿಯೂ ಕಮಲ ಕಾರ್ಯಕರ್ತರು ಬಂದಿದ್ದಾರೆ.
ಕಾರ್ಯಕ್ರಮಕ್ಕೆ ಕುಳಿತುಕೊಳ್ಳಲು ಕುರ್ಚಿಗಳ ವ್ಯವಸ್ಥೆ ಮಾಡಲಾಗಿದ್ದು, ಬಿಸಿಲಿಗಾಗಿ ಯಾವುದೆ ಶೀಟ್ ವ್ಯವಸ್ಥೆಯನ್ನು ಮಾಡಲಾಗಿಲ್ಲ.!! ಇದರಿಂದಾಗಿ ಹಲವಾರು ಜನ ಬಿಸಿಲಿನ ತಾಪವನ್ನು ತಡೆಯಲಾಗದೆ ನೆರಳು ಇದ್ದ ಕಡೆಗಳಲ್ಲಿ ನಿಂತುಕೊಂಡು ಕಾರ್ಯಕ್ರಮಕ್ಕೆ ಸಾಥ್ ಕೊಟ್ಟರು. ಅಗಾಧ ಪ್ರಮಾಣದಲ್ಲಿ ಬೈಕ್‍ನಲ್ಲಿ ಬಂದಿದ್ದ ಅದೆಷ್ಟೋ ಯುವಕರು ತಮ್ಮ ಬೈಕ್‍ನ್ನು ಬಿಡದೇ ಅಲ್ಲಿಯೇ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದರು. ಹಾಗಾಗಿ ವ್ಯವಸ್ಥೆ ಮಾಡಿರುವ ಕುರ್ಚಿಗಳು ಸ್ವಲ್ಪ ಮಟ್ಟಿಗೆ ಖಾಲಿಯಾದ ಅನುಭವನ್ನು ತಂದಿತ್ತು. ಇಂದಿನ ಯುವಕರಿಗೆ ಬೈಕ್‍ನ್ನು ಪ್ರೀತಿಸುವವರೇ ಜಾಸ್ತಿ ಇರುವುದರಿಂದ ತಮ್ಮ ಬೈಕನ್ನು ಬಿಡದೆ ಬೈಕ್‍ನಲ್ಲಿಯೇ ಕುಳಿತುಕೊಂಡು ಕಾರ್ಯಕ್ರಮಕ್ಕೆ ಸಾಥ್ ಕೊಟ್ಟರು.
ಆದರೆ ಇದನ್ನೇ ಕಾಂಗ್ರೆಸ್ ಪಕ್ಷ ಟೀಕೆಗೆ ಒಳಪಡಿಸಿಕೊಂಡು ಬಿಜೆಪಿಯ ನವ ಪರಿವರ್ತನಾ ಯಾತ್ರೆ ಖಾಲಿ ಖಾಲಿ ಎಂಬ ಉದ್ಘಾರವನ್ನು ಎತ್ತಿದ್ದು, ಟೀಕೆಗೆ ಗುರಿ
ಮಾಡಿದೆ. ಆದರೆ ಬೆಳಗ್ಗೆ ಮಾತ್ರ ಕಾಂಗ್ರೆಸ್ ಪಕ್ಷ ಬಿಜೆಪಿಯ ನವ ಪರಿವರ್ತನಾ ಯಾತ್ರೆಯು ಇಡೀ ಬೆಂಗಳೂರು ಟ್ರಾಫಿಕ್ ಜಾಮ್‍ನಿಂದ ಅಸ್ತವ್ಯಸ್ತಗೊಂಡಿತ್ತು ಎಂಬ ಟೀಕೆಗೆ ಗುರಿ ಮಾಡಿತ್ತು. ಆದರೆ ಇದೀಗ ಬಿಜೆಪಿಯ ನವ ಪರಿವರ್ತನಾ ಯಾತ್ರೆ ಖಾಲಿ ಖಾಲಿ ಎಂಬ ಎಂಬ ಮಾತು ಎಷ್ಟು ಸರಿ!!
ಈ ಪರಿವರ್ತನಾ ಯಾತ್ರೆ ಮುಖ್ಯಮಂತ್ರಿಯನ್ನೋ ಶಾಸಕನನ್ನೋ ಬದಲಾಯಿಸಲು ಅಲ್ಲ . ಬದಲಿಗೆ ಈಗಿನ ಸ್ಥಿತಿಯನ್ನು ಬದಲಾಯಿಸದ್ದಾಗಿ ಎಂಬುದನ್ನು ಸ್ಪಷ್ಟವಾಗಿ ಅರಿಯಬೇಕಾಗಿದೆ. ಇತ್ತೀಚಿನ ಸಮೀಕ್ಷೆಯ ಪ್ರಕಾರ ದೇಶದ ಅತ್ಯಂತ ಭ್ರಷ್ಟ ಸರಕಾರವೆಂದರೆ ಸಿದ್ಧರಾಮಯ್ಯ ಸರಕಾರ ಅಗ್ರ ಸ್ಥಾನದಲ್ಲಿದೆ.
ಒಂದು ವಿಷಯ ನೆನಪಿಡಬೇಕಾಗಿದೆ!
ಅಭಿಯಾನಕ್ಕೆ ಬಂದ ಸಹಸ್ರ ಜನ ಬೈಕಿನಲ್ಲಿಯೇ ಬಂದದ್ದರಿಂದ ಆಸನದ ಮೇಲೆ ಕೂರುವ ಪ್ರಮೇಯವಿರಲಿಲ್ಲ ಎಂಬುದೂ ಸತ್ಯ ಹಾಗೆ ಬಿಸಿಲಿನ ಝಳಕ್ಕೆ ಸಾಕಷ್ಟು ಹೊತ್ತು ಕೂರಲಿಕ್ಕಾಗದೇ ಇದ್ದುದರಿಂದ ಕುರ್ಚಿಗಳು ಸ್ವಲ್ಪ ಖಾಲಿ ಕಂಡಿರಬಹುದು! ಆದರೆ, ಮಾಧ್ಯಮದವರು ಅದನ್ನೇ ಪ್ರಮುಖವಾಗಿ ತೋರಿಸಿದ್ದಾರೆ ಎನ್ನುವುದೂ ಅಷ್ಟೇ ಸತ್ಯ!
ಪರಿವರ್ತನಾ ಯಾತ್ರೆಗೆ ಬಂದವರದೆಷ್ಟೋ ಜನ ಬೈಕಿನಲ್ಲಿಯೇ ಕುಳಿತು ವೀಕ್ಷಿಸಿದ್ದನ್ನು ತೋರಿಸದ ಮಾಧ್ಯಮಗಳು ಹರಿಹಾಯ್ದಿದ್ದು ಮಾತ್ರ ಮತ್ತದೇ ಅಮಿತ್ ಷಾ
ರವರ ಮೇಲೆ.
ದುರಂತದ ಪರಮಾವಧಿ ಅದೇ! ಇವತ್ತು ಖಾಲಿ ಕುರ್ಚಿಗಳು ಕಂಡಿತ್ತೆನ್ನುವುದನ್ನೇ ಬಂಡವಾಳ ಮಾಡಿಕೊಂಡು ಟಾಂಗು ಕೊಡುತ್ತಿರುವ ಕಾಂಗ್ರೆಸ್ ನ ಕುರ್ಚಿ
ಶಾಶ್ವತವಾಗಿ ಅಧಿಕಾರದಿಂದ ಖಾಲಿಯಾಗುವ ಸಮಯ ಬಂದಿದೆ. ಅದನ್ನೊಂದು ತಿಳಿಯಿರಿ!
ಇಂದಿನ ಪರಿವರ್ತನಾ ಯಾತ್ರೆ pic.twitter.com/gMRnhz1LsX
— Postcard Kannada (@PostcardKannada) November 2, 2017
-Pavitra