ಪ್ರಚಲಿತ

ಇಂದಿರಾ ಗಾಂಧಿ ಕ್ಯಾಂಟೀನ್ ನ ಆಹಾರದಲ್ಲಿ ತಾನೇ ಜಿರಳೆ ಹಾಕಿಸಿ ಇನ್ನೊಬ್ಬರ ಮೇಲೆ ಗೂಬೆ ಕೂರಿಸಲು ಕಾಂಗ್ರೆಸ್ ಪ್ರಯತ್ನಿಸಿ ಸೋತದ್ದು ಹೇಗೆ ಗೊತ್ತೇ?

ಇಂದಿರಾ ಕ್ಯಾಂಟೀನ್ ಪ್ರಾರಂಭವಾಗಿ ಹತ್ತು ದಿನಗಳು ಕಳೆದಿರಲಿಲ್ಲ. ಆಗಲೇ ಹಲವಾರು ವಿವಾದಗಳುಂಟಾಗಿತ್ತು! ಪ್ರತೀ ಬಾರಿಯೂ ಸಹ, ವಿವಾದಗಳಿಂದಲೇ
ಪ್ರಸಿದ್ಧಿಗೆ ಬಂದ ಇಂದಿರಾ ಗಾಂಧಿ ಕ್ಯಾಂಟೀನೆಂಬುವುದು ಸಿದ್ಧರಾಮಯ್ಯ ಸರಕಾರದ ವಿಫಲ ಯೋಜನೆ ಎಂಬುವುದು ಸುಳ್ಳಲ್ಲ!

ಎರಡು ದಿನಗಳಲ್ಲಿಯೇ ಕ್ಯಾಂಟೀನ್ ಗೆ ಸರಬರಾಜಾಗುವ ಆಹಾರದ ಗುಣಮಟ್ಟವನ್ನು ಬಯಲಿಗೆಳೆದಿದ್ದ ಕನ್ನಡ ಮಾಧ್ಯಮವೊಂದು ಸಿದ್ಧರಾಮಯ್ಯನವರು ಹೆಗ್ಗಳಿಕೆ ಪಡೆಯಲು ಚರಂಡಿ ಪಕ್ಕದಲ್ಲಾದರೂ ಅನ್ನ ಬೇಯಿಸಲು ಯೋಚಿಸುವುದಿಲ್ಲ ಎಂಬ ವಾಸ್ತವ ಗೊತ್ತಾದದ್ದು ಆಗಲೇ!

ಅದೂ ಹೋಗಲಿ! ಆಹಾರವಿದ್ದರೂ ‘closed’ ಎಂದು ಬೋರ್ಡು ನೇತು ಹಾಕಿ ಮತ್ತೆ ವಿವಾದವಾಯಿತು! ವಿದ್ಯಾರ್ಥಿಗಳ ಅನುದಾನ ಕಿತ್ತುಕೊಂಡು ಮಹಾನಗರದಲ್ಲಿ ಕ್ಯಾಂಟೀನ್ ಶುರು ಹಚ್ಚಿದ ಸಿದ್ಧರಾಮಯ್ಯನವರು ಮಾತ್ರ ಕ್ಯಾಂಟೀನ್ ಉದ್ಘಾಟನೆಯ ದಿನ ರಾಹುಲ್ ಗಾಂಧಿ ಜೊತೆ ತಿಂದಿದ್ದು 5 ಸ್ಟಾರ್ ಹೋಟೇಲ್ ನದಷ್ಟೇ!

ಈಗ ಮತ್ತೊಂದು ವಿವಾದ!

ಹಾ, ಐದು ದಿನಗಳ ಹಿಂದಷ್ಟೇ ಕ್ಯಾಂಟೀನ್ ನ ಆಹಾರದಲ್ಲಿ ಜಿರಳೆ ಇರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತಷ್ಟೇ! ಎರಡು ಜಿರಳೆಗಳು ಅರ್ಧ ಹೋಳಾಗಿ ಬೆಂದು ಬಿಟ್ಟಿದ್ದವು! ರಾಜರಾಜೇಶ್ವರಿನಗರದ ಕೊಟ್ಟಿಗೆ ಪಾಳ್ಯ ಲದ ಘಟಕದಲ್ಲಿ ರೈಸ್ ಬಾತ್ ನಲ್ಲಿ ಸಿಕ್ಕಿದ್ದ ಜಿರಳೆಯ ಶವಕ್ಕೆ ಸಂಬಂಧಿಸಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು! ಜೊತೆಗೆ, ಮೇಯರ್ ಸಂಪತ್ ರಾಜ್ “ಜಿರಳೆಯನ್ನು ಯಾರೋ ತಂದು ಹಾಕಿದ್ದಾರೆ” ಎಂದು ಬಿಜೆಪಿಯ ಕಡೆಗೆ ಬೊಟ್ಟು ಮಾಡಿ ತೋರಿಸಿದ್ದರು!

ಪ್ರಕರಣಕ್ಕೆ ಸಂಬಂಧಿಸಿ “ವಿವಾದ ಸೃಷ್ಟಿಸಲೆಂದೇ ಜಿರಳೆ ರಾಮಾಯಣವನ್ನು ಸೃಷ್ಟಿಸಿದ್ದಾರೆ. ತನಿಖೆ ನಡೆಸಿ ಸತ್ಯ ಹೊರತರಲಾಗುವುದು” ಎಂದಿದ್ದ ಸಂಪತ್ ಕುಮಾರ್ ಗೆ ಈಗ ಪೇಚಾಟ!

ಸತ್ತ ಜಿರಳೆಯ ಬಗ್ಗೆ ತನಿಖೆ ಕೈಗೊಂಡ ಕಾಮಾಕ್ಷಿಪಾಳ್ಯ ಪೋಲಿಸರು ನಾಲ್ವರ ವಿರುದ್ಧ ದೂರು ದಾಖಲು ಮಾಡಿದ್ದರು!

ಕೊನೆಗೂ ಜಿರಳೆಯನ್ನು ಹತ್ಯೆ ಮಾಡಿದವರನ್ನು ಹೇಮಂತ್ ಹಾಗೂ ದೇವರಾಜ್ ಎಂಬ ಆಟೋ ಡ್ರೈವರ್ ಗಳನ್ನು ಬಂಧಿಸಿದ್ದು, ವಿವಾದ ಸೃಷ್ಟಿಸಲೆಂದೇ ಜಿರಳೆಗಳನ್ನು ಉಪಾಹಾರದ ವೇಳೆ ಹಾಕಿದ್ದಾಗಿ ಒಪ್ಪಿಕೊಂಡಿರುವ ಬಂಧಿತ ಆರೋಪಿಗಳು ಇಬ್ಬರೂ ಕಾಂಗ್ರೆಸ್ ಕಾರ್ಯಕರ್ತರೆಂದು ಬಯಲಾಗಿದೆ!

ಸುಮ್ಮನೇ ವಿವಾದಗಳನ್ನು ಸೃಷ್ಟಿಸಲು ಕ್ಯಾಂಟೀನ್ ನ ಊಟದಲ್ಲಿ ಜಿರಳೆ ಹಾಕಿ ತನ್ಮೂಲಕ ಬಿಜೆಪಿಯವರ ಮೇಲೆ ಗೂಬೆ ಕೂರಿಸುವ ಸಲುವಾಗಿ ಈ ಕೃತ್ಯ ಎಸಗಲಾಗಿತ್ತು ಎಂದು ತನಿಖೆಯಲ್ಲಿ ತಿಳಿದು ಬಂದಿದೆ!

ನಿರಪರಾಧಿಗಳೂ ಅಪರಾಧಿಗಳಾದರಲ್ಲ ಈ ಸರಕಾರದ ಆಡಳಿತಾವಧಿಯಲ್ಲಿ!

ಮೊದಲು, ಇಂದಿರಾ ಗಾಂಧಿ ಕ್ಯಾಂಟೀನ್ ನ ಆಹಾರದಲ್ಲಿ ಜಿರಳೆ ಸಿಕ್ಕಿದ್ದ ವೀಡಿಯೋ ಫೈಟ್ ಫಾರ್ ರೈಟ್ ಎಂಬ ಫೇಸ್ ಬುಕ್ ಪೇಜಿನಲ್ಲಿ ಪೋಸ್ಟ್ ಮಾಡಲಾಗಿತ್ತು. ಎಲ್ಲಿ, ವೀಡಿಯೋ ವೈರಲ್ ಆಗತೊಡಗಿತೋ, ಪೇಜಿನ ಮೇಲೂ ಸಹ ಕೇಸ್ ದಾಖಲಿಸಿದ ಪೋಲಿಸರು ಕೊನೆಗೆ ಆರೋಪಿ ಹೇಮಂತ್ ಕುಮಾರ್ ಆ ಪೇಜಿನ ಖಾತೆದಾರ ಎಂದು ಹೇಳಿಕೆ ಕೊಟ್ಟಿದ್ದರು!

ವಾಸ್ತವವಾಗಿ, ಫೈಟ್ ಫಾರ್ ರೈಟ್ ಪೇಜನ್ನು ನಿಭಾಯಿಸುವವರ ಪಟ್ಟಿಯಲ್ಲಿ ಹೇಮಂತ್ ಕುಮಾರ್ ಎಂಬುವವರೇ ಇಲ್ಲವಷ್ಟೇ! ಕೇವಲ ಬಿಜೆಪಿಯ ಪರವಿದ್ದಾರೆಂಬ ಕಾರಣಕ್ಕೆ ಪೇಜನ್ನು ಗುರಿಯಾಗಿಸಿದ್ದಕ್ಕೆ ಈಗ ಭಾರೀ ಟೀಕೆ ವ್ಯಕ್ತವಾಗಿದೆ!

ತಾನೇ ತೋಡಿದ ಹಳ್ಳದಲ್ಲಿ ತಾನೇ ಬಿದ್ದ ಕಾಂಗ್ರೆಸ್ ಚುನಾವಣೆ ಬರುವುದಕ್ಕೂ ಮುನ್ನ ಈ ರೀತಿ ಅಪಪ್ರಚಾರವನ್ನು ಗಿಟ್ಟಿಸುತ್ತಿರುವುದನ್ನು ನೋಡಿದರೆ ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ತಾವೇ ಮುನ್ನುಡಿ ಬರೆಯುತ್ತಿರುವುದು ಸುಳ್ಳಲ್ಲ!

ಈಗ ಪ್ರಕರಣವನ್ನು ಮುಚ್ಚಿ ಹಾಕಲು ಷಡ್ಯಂತ್ರ ನಡೆಯುತ್ತಿದ್ದು ಸತ್ತ ಜಿರಳೆಗಳಿಗೆ ನ್ಯಾಯ ಸಿಗದಂತಾಗಿದೆಯಷ್ಟೇ! ಪ್ರತೀ ಬಾರಿಯೂ ವಿವಾದಗಳ ಮೂಲಕವೇ ಸುದ್ದಿಯಾಗುತ್ತಿರುವ ಕ್ಯಾಂಟೀನ್ ನ ಪ್ರಸಿದ್ಧತೆಯೊಂದು ನೆಲಕಚ್ಚಿರುವುದು ಸತ್ಯ! ಸತ್ಯ!

– ಪೃಥು ಅಗ್ನಿಹೋತ್ರಿ

Tags

Related Articles

Close