ಇತಿಹಾಸ

ಇಂದಿರಾ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ದುಷ್ಟ ಉದ್ದೇಶಗಳನ್ನು ಬಹಿರಂಗಪಡಿಸಿದ ಪ್ರಧಾನಿ ನರೇಂದ್ರ ಮೋದಿ !!

ಪ್ರಧಾನಿ ನರೇಂದ್ರ ಮೋದಿ ಎಲ್ಲ ಎಡಬಿಡಂಗಿ ವಿರೋಧ ಪಕ್ಷಗಳ ಮೇಲೆ ಮುಖ್ಯವಾಗಿ ಕಾಂಗ್ರೆಸ್ ಮತ್ತು ಎಡಪಂಥೀಯರ ಮೇಲೆ ತೀವ್ರವಾದ ದಾಳಿಯನ್ನು ಪ್ರಾರಂಭಿಸಿದ್ದಾರೆ. ಪ್ರಮುಖವಾಗಿ 500 ಮತ್ತು 1000 ರೂಪಾಯಿ ನೋಟುಗಳ ನಿಷೇಧವನ್ನು ವಿರೋಧಿಸುತ್ತಿರುವವರ ಮೇಲೆ.ಸಂಸತ್ತಿನಿಂದ ಸಂಪೂರ್ಣವಾಗಿ ಹೊರಗುಳಿಯುತ್ತಿರುವುದರ ಮೇಲೆ ಕಾಂಗ್ರೆಸ್ ಮತ್ತು ಎಡಪಕ್ಷಗಳು ಗುರಿ ಹೊಂದಿದ್ದರೂ, ಮೊದಲು ಸಂಸತ್ತಿನ ಅಧಿವೇಶನವನ್ನು ಮುಂದೂಡಲಾಗಿದ್ದರೂ, ಪ್ರಸ್ತುತ ವಿರೋಧ ಪಕ್ಷವಾದ ಯುಪಿಎ ಸರಕಾರವು ತನ್ನ ಆಡಳಿತಾವಧಿಯಲ್ಲಿ ಮತ್ತೊಂದರ ಮೇಲೆ ಮತ್ತೊ೦ದು ಎಂಬಂತೆ ಅನೇಕ ಹಗರಣಗಳನ್ನು ಸಾಧಿಸಲು ಸಫಲವಾಗಿತ್ತು. ಹೀಗಿದ್ದರೂ, ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ವಿರೋಧಿ ಪಕ್ಷಗಳು ಒಗ್ಗಟ್ಟಾಗಿವೆ.ಅದಕ್ಕೆ ಕಾರಣವೇನು ಗೊತ್ತೇ?? ಭ್ರಷ್ಟಾಚಾರವನ್ನು ಹೊರಹಾಕಲು ಬಲವಾದ ಹೆಜ್ಜೆಯನ್ನು ತೆಗೆದುಕೊಳ್ಳಲಾಗಿದೆಯೆಂಬುದು. ಈ ಕ್ರಮವನ್ನು ಬೆಂಬಲಿಸಿದ್ದಕ್ಕಾಗಿ ಅವರು ನವೀನ್ ಪಟ್ನಾಯಕ್ ಮತ್ತು ನಿತೀಶ್ ಕುಮಾರ್ ಅವರಿಗೆ ಧನ್ಯವಾದ ಸಲ್ಲಿಸುವುದನ್ನೂ‌ ಮರೆಯಲಿಲ್ಲ.

” ನಾವು 1971 ರಲ್ಲಿ ಈ‌ ಹೆಜ್ಜೆಯನ್ನು ಇಡಬೇಕಾಗಿತ್ತು. 1971ರಲ್ಲಿ ಇದನ್ನು ಮಾಡದೆ ಇದ್ದುದರಿಂದ ಅಪಾರ ನಷ್ಟವನ್ನು ನಾವು ಅನುಭವಿಸಿದ್ದೇವೆ “ಎಂದು ಮೋದಿ
ಬಿಜೆಪಿ ಸಂಸದರಿಗೆ ಹೇಳಿದರು. ದೇಶದಲ್ಲಿ ಕಪ್ಪು ಹಣವನ್ನು ನಿಗ್ರಹಿಸಲು ಪರಿಣಾಮಕಾರಿಯಾದ ಕ್ರಮಗಳನ್ನು ಕೈಗೊಳ್ಳುವಲ್ಲಿ ಕಾಂಗ್ರೆಸ್ ಸೋತಿತು. ಪ್ರಧಾನ
ಮಂತ್ರಿಯವರು ಮಾಜಿ ಅಧಿಕಾರಿಗಳಾದ ಮಾಧವ್ ಗಾಡ್ಬೊಲ್ ಅವರ ಪುಸ್ತಕವನ್ನು ಉಲ್ಲೇಖಿಸಿ, ಅದರಲ್ಲಿ ಗೃಹ ಸಚಿವ ವೈ.ಬಿ.ಚವಾಣ್ ಅವರು ದುಷ್ಕೃತ್ಯ ಮತ್ತು ಅಡಗಿದ ಸಂಪತ್ತನ್ನು ನಿಗ್ರಹಿಸುವ ಸಲುವಾಗಿ ನೋಟು ಅಪಮೌಲ್ಯದ ಅಗತ್ಯತೆಯಿದೆಯೆಂಬುದಾಗಿ ಶಿಫಾರಸು ಮಾಡಿದ್ದಾರೆ ಎಂದು ಅವರು ಬರೆದಿದ್ದಾರೆ.

“ಗೋಡ್ಬಾಲೆ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸುತ್ತಾ‌ ಒಂದು ಮಾತನ್ನು ಹೇಳುತ್ತಾರೆ. ಗಾಂಧಿಯವರ ಪ್ರಶ್ನೆಯಾಗಿತ್ತಂತೆಯಿದು, ಕಾಂಗ್ರೆಸ್ ಇನ್ನೆಷ್ಚು ಚುನಾವಣೆಗಳನ್ನು ಹೋರಾಡಲು ಬಾಕಿಯಿವೆ? ಚವಾಣ್ಗೆ‌ ಇದರ ಕುರಿತಾದ ಸಂದೇಶ ದೊರೆತಿತ್ತು ಮತ್ತು ತಾವು ಮಂಡಿಸಿದ ಶಿಫಾರಸನ್ನು (ಕೈಬಿಡಲಾಯಿತು)”ಎಂದು ಮೋದಿ ಹೇಳಿದರು. “ಇದು 1971 ರಲ್ಲಿ ನಡೆದ ಘಟನೆ. ಹಾ. ಪ್ರತಿಯೊಬ್ಬರೂ ಇದನ್ನು ಶಿಫಾರಸು ಮಾಡಿದ ಸಂದರ್ಭವಾಗಿತ್ತದು. 1971 ರಲ್ಲಿ ಅದು (ಅಪಮೌಲ್ಯ) ಮಾಡಿದ್ದರೆ, ರಾಷ್ಟ್ರ ಈ ಪರಿಸ್ಥಿತಿಯಲ್ಲಿ ಇರುತ್ತಿರಲಿಲ್ಲವೆಂಬುದೂ ಸ್ಪಷ್ಟ.

ನರೇಂದ್ರ ಮೋದಿ ಎಡಪಕ್ಷಗಳನ್ನೂ ಗುರಿಯಾಗಿಟ್ಟುಕೊಂಡು ಅವರ ಕಪಟವನ್ನು ಬಹಿರಂಗಪಡಿಸಿದ್ದಾರೆ. ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿಚಾರದಲ್ಲಿ ಯಾವುದೇ ಕೆಲಸ ಮಾಡದೇ ಇದ್ದುದಕ್ಕಾಗಿ ಇಂದಿರಾ ಗಾಂಧಿಯವರನ್ನು ಹರ್ಕಿಶನ್ ಸಿಂಗ್ ಸುರ್ಜಿತ್ ಮತ್ತು ಜ್ಯೋತಿ ಬಸು ಮುಂತಾದ ಹಿರಿಯ ಎಡಪಕ್ಷಗಳು ಹೇಗೆ ವಿರೋಧಿಸಿದ್ದರೆಂಬುದಾಗಿ ಮೋದಿಯವರ ಅವರ ಭಾಷಣದಲ್ಲಿ ಹೇಳಿದರು. ವಂಚೂ ಸಮಿತಿ ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದಾಗ 70 ರ ದಶಕದ ಆರಂಭದಲ್ಲಿ ನೋಟು ಅಪಮೌಲ್ಯದ ಶಿಫಾರಸು ಮಾಡಿದ್ದರು, ಆಗಿನ ಹಿರಿಯ ಎಡಪಕ್ಷ ನಾಯಕ ಜ್ಯೋತಿ ಬಸು ಇದರ ತ್ವರಿತ ಅನುಷ್ಠಾನಕ್ಕೆ ಒತ್ತಾಯಿಸಿದರು. 1970 ರ ದಶಕದಲ್ಲಿ ತೆರೆದ ಒಮ್ಮತವು ಇಂದಿರಾ ಗಾಂಧಿಯ ರಾಜಕೀಯ ಕಪ್ಪು ಹಣದ ಮೇಲೆ ನಡೆಯುತ್ತಿದೆ ಎಂದು ರಾಜ್ಯಸಭೆಯಲ್ಲಿ ತಿಳಿಸಲಾಯಿತು. 1972 ರ ಭಾಷಣದಲ್ಲಿ ಎಡ ಮುಖಂಡರು, “ಕಪ್ಪು ಹಣದಿಂದಾಗಿ ಕಪ್ಪು ಹಣಕ್ಕೋಸ್ಕರ ಹಾಗೂ ಇಂದಿರಾ ಗಾಂಧಿ ಸರ್ಕಾರವು ಕಪ್ಪು ಹಣಕ್ಕಾಗಿ ನಡೆಯುತ್ತದೆ” ಎಂದು ಹೇಳಿದ್ದಾರೆ. ಒಂದಾನೊಂದು ಕಾಲದಲ್ಲಿ ಭ್ರಷ್ಟಾಚಾರವನ್ನು ವಿರೋಧಿಸುತ್ತಿದ್ದ‌ ಎಡಪಕ್ಷಗಳು ಇವತ್ತು ತಮ್ಮ ಸಿದ್ಧಾಂತವನ್ನು ಕಳೆದುಕೊಂಡು ಭ್ರಷ್ಟಾಚಾರದ ಬೆಂಬಲಿಗರಾಗಿದ್ದಾರೆಂಬುದಾಗಿಯೂ ಮೋದಿ ಕಿಡಿಕಾರಿದರು.

ಕಾಂಗ್ರೆಸ್ 1988 ರಲ್ಲಿ ಬೆನಾಮಿ ಸ್ವತ್ತುಗಳ ವಿರುದ್ಧ ಕಾನೂನು ಮಾಡಿರುವುದನ್ನು ಅವರು ಬಹಿರಂಗಪಡಿಸಿದರು. ಆದರೆ ಈ ನಿಯಮವನ್ನು ಜಾರಿಗೆ ತರವುದನ್ನು ದೃಢಪಡಿಸದೆ, ನಿಯಮಗಳನ್ನು ಮತ್ತು ನಿಯಮಾವಳಿಗಳಿಗೆ ಸೂಚನೆಯನ್ನೂ ನೀಡಲಿಲ್ಲ. ಬೆನಾಮಿ ಕಾನೂನು ಅಂಗೀಕಾರವಾಗದೇ ಸೂಚನೆ ನೀಡಿದೆ ಎಂದು ಮೋದಿ ಹೇಳಿದ್ದಾರೆ. ಜನರ ಬೆನಾಮಿ ಗುಣಲಕ್ಷಣಗಳನ್ನು ಆಧರಿಸಿ ಕ್ರಮ ಕೈಗೊಳ್ಳುತ್ತಲಿತ್ತು.. 18 ವರ್ಷಗಳ ಕಾಲ ಕಾಂಗ್ರೆಸ್ ಈ ಕಾನೂನನ್ನು ಜಾರಿಗೆ ತರಲಿಲ್ಲವೆಂಬುದು ನಿಜವಾಗಿಯೂ ಅವಮಾನಕರ ಹಾಗೂ ದುರಂತ.!!

1971 ರ ಡಿಸೆಂಬರ್ 16 ರಂದು ಭಾರತದ ಸೈನ್ಯವು ತನ್ನ ಶ್ರೇಷ್ಠ ಶೌರ್ಯದ ಉದಾಹರಣೆಯನ್ನು ಉಲ್ಲೇಖಿಸಿ, ಬಾಂಗ್ಲಾದೇಶವನ್ನು ಮುಕ್ತಗೊಳಿಸಿದ್ದಷ್ಟೇ ಅಲ್ಲದೇ, 93,000 ಪಾಕಿಸ್ತಾನಿ ಸೈನಿಕರು ಶರಣಾಗುವಂತೆ ಮಾಡಿದ್ದನ್ನೂ ಮೋದಿ ಸ್ಮರಿಸಿಕೊಂಡರು. ಆ ಸಮಯದಲ್ಲಿ, ಬಲವಾದ ವಿರೋಧ ಪಕ್ಷಗಳು ಇದ್ದರೂ ಕೂಡ ಯಾರೂ ಪುರಾವೆಗಳನ್ನು ಕೇಳಿರಲಿಲ್ಲ. ಆದರೆ ಇಂದು, ರಾಜಕೀಯವು ಎಷ್ಚು ಕಳಪೆ ಮಟ್ಟಕ್ಕಿಳಿದಿವೆಯೆಂದರೆ ಭಾರತೀಯ ಸೇನಾ ಸೈನಿಕರು ತಮ್ಮ ಜೀವಕ್ಕೆ ಅಪಾಯವನ್ನುಂಟು ಮಾಡುತ್ತಾರೆಂಬುದಾಗಿಯೂ ಮತ್ತು ಪುರಾವೆಗಳನ್ನು ಕೇಳಲು ಪ್ರಾರಂಭಿಸುತ್ತಿದ್ದಾರೆ.

ಇದು ನಿಸ್ಸಂದೇಹವಾಗಿ ಪ್ರಧಾನಿಯಾಗಿರುವ ಮೋದಿ ಅವರ ಆಕ್ರಮಣಶೀಲವಾದ ಮಾತುಗಳು. ಇಲ್ಲಿದೆ ಅವರ ಪೂರ್ಣ ಮಾತು –

– ವಸಿಷ್ಠ

Tags

Related Articles

Close