ಅಂಕಣ

ಇಂದು ಗಾಂಧಿಯನ್ನ ನೆನೆಯುತ್ತಿರೋ ನಾವು ಶಾಸ್ತ್ರೀಜೀಯನ್ಯಾಕೆ ಮರೆತೆವು? ಇಂದು ಲಾಲ್ ಬಹದ್ದೂರ್ ಶಾಸ್ತ್ರೀಜೀ ಜಯಂತಿ ಕೂಡ, ಅವರ ಬಗ್ಗೆ ನಿಮಗೆ ಗೊತ್ತಿರದ ಕೆಲ ವಿಚಾರಗಳು!!

ಅಕ್ಟೋಬರ್ 2 ಎಂದಾಕ್ಷಣ ದೇಶದ ಜನರಿಗೆ ಥಟ್ಟನೆ ನೆನಪಾಗೋದು ಗಾಂಧೀ ಜಯಂತಿ, ಆದರೆ ಅಸಂಖ್ಯ ಜನರಿಗೆ ಇಂದು ದೇಶ ಕಂಡ ಸರ್ವೋಚ್ಛ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜೀ ಯವರ ಜಯಂತಿಯೂ ಅಕ್ಟೋಬರ್ 2 ಅನ್ನೋದು ಗೊತ್ತೆ ಇಲ್ಲ.

ದೇಶಕ್ಕಾಗಿ ಪ್ರಾಣತೆತ್ತ ಆ ವೀರನ ಬಗ್ಗೆ ನಮಗೆಷ್ಟು ಗೊತ್ತಿದೆ? ಲಾಲ್ ಬಹದ್ದೂರ್ ಶಾಸ್ತ್ರೀಜೀಯವರ ಬಗ್ಗೆ ನಿಮಗೆ ಗೊತ್ತಿರದ ಕೆಲ ಮಾಹಿತಿಗಳನ್ನ ಇಂದು ನೀವು
ತಿಳಿದುಕೊಳ್ಳಲೇಬೇಕು.

* ಲಾಲ್ ಬಹದ್ದೂರ್ ಶಾಸ್ತ್ರೀಜೀಯವರು ಹುಟ್ಟಿದ್ದು ಉತ್ತರಪ್ರದೇಶದ ಕಾಶಿಯಲ್ಲಿ ಅಕ್ಟೋಬರ್ 2, 1904 ರಂದು

* ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡಿದ್ದ ಶಾಸ್ತ್ರೀಜೀಯವರು ತಮ್ಮ ಪದವಿಯನ್ನ ಮುಗಿಸಿದ ನಂತರ ಕಾಶಿ ವಿದ್ಯಾಪೀಠದಿಂದ ‘ಶಾಸ್ತ್ರಿ’ (ವಿದ್ವಾಂಸ) ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.

* ಲೋಕಮಾನ್ಯ ಬಾಲಗಂಗಾಧರನಾಥ ತಿಲಕರಿಂದ ಪ್ರಭಾವಿತರಾಗಿ ಶಾಸ್ತ್ರೀಜೀಯವರು ಭಾರತ ಸ್ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು.

* ಬಹಳ ಜನರಿಗೆ ಗೊತ್ತಿಲ್ಲ ಅನ್ಸತ್ತೆ, ಶಾಸ್ತ್ರೀಜೀ ತಮ್ಮ 17 ನೇಯ ವಯಸ್ಸಿನಲ್ಲೇ ತಾವು ಗಾಂಧಿಯ ಅಸಹಕಾರ ಚಳುವಳಿಯಲ್ಲಿ ಪಾಲ್ಗೊಂಡಿದ್ದಕ್ಕೆ ಜೈಲುಪಾಲಾಗಿದ್ದರು. ನಂತರ ಬ್ರಿಟಿಷರು ಈತನಿಗಿನ್ನೂ 17 ವರ್ಷ ಅಂತ ಬಿಡುಗಡೆ ಮಾಡಿದ್ದರಂತೆ.

* ಶಾಸ್ತ್ರೀಜೀ ತಮ್ಮ ಜೀವನದ 7 ವರ್ಷ ಸ್ವಾತಂತ್ರ್ಯ ಹೋರಾಟಕ್ಕಾಗಿ ಜೈಲು ಶಿಕ್ಷೆ ಅನುಭವಿಸಿದ್ದರು.

* ಸಾರಿಗೆ ಸಚಿವನಾಗಿ ನಿಯುಕ್ತಿಗೊಂಡ ಶಾಸ್ತ್ರೀಜೀ ಮಹಿಳಾ ಕಂಡಕ್ಟರ್’ಗಳನ್ನ ನೇಮಕ ಮಾಡಿದ್ದ ಸ್ವಾತಂತ್ರ್ಯ ಭಾರತದ ಮೊದಲ ಮಂತ್ರಿಯಾಗಿದ್ದರು.

* 1965 ರಲ್ಲಿ ನಡೆದ ಭಾರತ-ಪಾಕಿಸ್ತಾನದ ಯುದ್ಧದ ಸಮಯದಲ್ಲಿ ಪ್ರಧಾನಿಯಾಗಿದ್ದ (ಜೂನ್ 1964 ರಿಂದ ಜನವರಿ 1966) ಶಾಸ್ತ್ರೀಜೀಯವರ ತ್ವರಿತಗತಿಯ ನಿರ್ಧಾರ ಕೋಟ್ಯಾಂತರ ಭಾರತೀಯರ ಹೃದಯಗಳನ್ನು ಗೆದ್ದಿತು.

* “ಜೈ ಜವಾನ್ ಜೈ ಕಿಸಾನ್” ಎಂಬ ಸುಪ್ರಸಿದ್ಧ ಘೋಷಣೆಯನ್ನ ಭಾರತಕ್ಕೆ ನೀಡಿ ನಮಗೆ ಅನ್ನ ನೀಡುವ ಅನ್ನದಾತ ಹಾಗು ದೇಶ ಕಾಯುವ ಸೈನಿಕರು ದೇವರ ಸಮಾನ ಎಂದು 1965 ರ ಪಾಕಿಸ್ತಾನದ ವಿರುದ್ಧದ ಯುದ್ಧದ ಸಮಯದಲ್ಲಿ ತಿಳಿಸಿದ್ದು ಇದೇ ಶಾಸ್ತ್ರೀಜೀ.

* 1956 ರಲ್ಲಿ ಮೆಹಬೂಬ್ ನಗರದಲ್ಲಿ ಸಂಭವಿಸಿದ್ದ ರೈಲು ದುರ್ಘಟನೆಗೆ ತಕ್ಷಣ ಆ ಘಟನೆಯ ನೈತಿಕತೆಯನ್ನು ಹೊತ್ತುಕೊಂಡು ತನ್ನ ರೇಲ್ವೆ ಮಂತ್ರಿಗಿರಿಗೆ ರಾಜೀನಾಮೆ ಕೊಟ್ಟಿದ್ದರು ಇದೇ ಶಾಸ್ತ್ರೀಜೀ.

* ಜಾತೀಯತೆಯ ವಿರೋಧಿಯಾಗಿದ್ದ ಶಾಸ್ತ್ರೀಜಿ ತಮ್ಮ ಹೆಸರಿನ ಮುಂದೆಯಿದ್ದ ಶ್ರೀವಾಸ್ತವ್ ಅಡ್ಡಹೆಸರನ್ನ ತ್ಯಜಿಸಿದ್ದರು.

* ವರದಕ್ಷಿಣೆಗೆ ವಿರುದ್ಧವಾಗಿದ್ದ ಶಾಸ್ತ್ರೀಜೀ ತನ್ನ ಮದುವೆಯಲ್ಲೂ ವರದಕ್ಷಿಣೆ ತೆಗೆದುಕೊಳ್ಳಲು ನಿರಾಕರಿಸಿದ್ದರು. ತಂದೆಯ ಒತ್ತಾಯದ ಮೇರೆಗೆ ಶಾಸ್ತ್ರೀಜೀ ತರಗೆದುಕೊಂಡ ವರದಕ್ಷಿಣೆ ಒಂದು ಜೊತೆ ಖಾದಿ ಬಟ್ಟೆ.

* ಮೇಡಂ ಕ್ಯೂರಿ ಬರೆದಿದ್ದ ಅವರ ಆತ್ಮಕಥೆಯನ್ನ ಶಾಸ್ತ್ರೀಜೀ ಹಿಂದಿ ಭಾಷೆಗೆ ಅನುವಾದಿಸಿದ್ದರು.

* ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಸೆಟೆದು ನಿಂತಿದ್ದ ಶಾಸ್ತ್ರೀಜೀ ಹಲವುಬಾರಿ ಜೈಲು ಶಿಕ್ಷೆ ಅನುಭವಿಸಬೇಕಾಗಿತ್ತು. 15 ದಿನಗಳ ಪೆರೋಲ್ ಮೇಲೆ ಹೊರಬಂದಿದ್ದ ಶಾಸ್ತ್ರೀಜೀ ಅನಾರೋಗ್ಯಕ್ಕೆ ತುತ್ತಾಗಿ ಅಸುನೀಗಿದ ತನ್ನ ಮಗಳ ಅಂತ್ಯಕ್ರಿಯೆ ಮುಗಿಸಿ ಪೆರೋಲಿನ ಇನ್ನೂ ಕೆಲದಿನಗಳು ಬಾಕಿಯಿದ್ದಾಗಲೇ
ಜೈಲಿಗೆ ವಾಪಸ್ಸಾಗಿದ್ದರು.

* 1965 ರಲ್ಲಿ ಶಾಸ್ತ್ರೀಜೀ ಪ್ರಧಾನಿಯಾಗಿದ್ದಾಗ ತಮಗೇ ಒಂದು ಕಾರ್ ಬೇಕೆಂದು ಸರ್ಕಾರಕ್ಕೆ ಕೇಳಿರಲಿಲ್ಲವಂತೆ, ತಾವೇ ತಮ್ಮ ಸ್ವಂತ ಖರ್ಚಿನಿಂದ ಕಾರು ಖರೀದಿಸಲು ಬ್ಯಾಂಕಿನಿಂದ 5000 ರೂ.ಗಳ ಸಾಲ ಮಾಡಿದ್ದರಂತೆ, ಅವರ ನಿಧನದ ನಂತರ ಶಾಸ್ತ್ರೀಜೀ ಪತ್ನಿಗೆ ಬ್ಯಾಂಕ್’ನಿಂದ ನೋಟೀಸ್ ಬಂದಾಗ ತಮಗೆ ಬರುತ್ತಿದ್ದ ಪೆನ್ಷನ್ ಹಣವನ್ನು ಕಂತಿನ ರೂಪದಲ್ಲಿ ಶಾಸ್ತ್ರೀಜೀ ಸಾಲವನ್ನು ತೀರಿಸಿದ್ದರಂತೆ.

* ಮಗನನ್ನು ಕಾಲೇಜಿಗೆ admission ಮಾಡುವ ಸಮಯದಲ್ಲಿ ಕಾಲೇಜಿನ ಫಾರಂ ನಲ್ಲಿ ‘ಕೆಲಸ’ ಕಾಲಂನಲ್ಲಿ ಶಾಸ್ತ್ರೀಜೀ “ಸರ್ಕಾರಿ ನೌಕರ” ಅಂತ ಬರೆದಿದ್ದರಂತೆ.

* ಒಮ್ಮೆ ಶಾಸ್ತ್ರೀಜೀ ಮಗ ಕ್ಲರ್ಕ್ ಕೆಲಸಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದಾಗ ಅಲ್ಲಿನ ಅಧಿಕಾರಿಯೊಬ್ಬರು ನಿಮ್ಮ ತಂದೆ ಏನು ಕೆಲಸ ಮಾಡ್ತಾರೆ ಅಂತ ಕೇಳಿದಾಗ “ಈ ದೇಶದ ಪ್ರಧಾನಿ” ಅಂದಿದ್ದರಂತೆ, ಇದನ್ನ ನೋಡಿದರೆ ಅರ್ಥವಾಗುತ್ತಲ್ಲವೇ ಶಾಸ್ತ್ರೀಜೀಗರ ದೇಶಸೇವೆಯ ಗುರಿಯೊಂದೇ ಮುಖ್ಯವಾಗಿತ್ತು ಅನ್ನೋದು.

* ಶಾಸ್ತ್ರೀಜೀ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಜನರನ್ನುದ್ದೇಶಿಸಿ ಮಾತನಾಡಿದ್ದ ಭಾಷಣದಲ್ಲಿ ಅವರು ಹೇಳಿದ್ದು “ಪ್ರತಿ ರಾಷ್ಟ್ರದ್ದೂ ಅದರದ್ದೆ ಆದ ಇತಿಹಾಸವಿರುತ್ತೆ, ಅದನ್ನ ಅರಿತು ರಸ್ತೆಯ ತಿರುವು ಬಂದಾಗ ಯಾವ ಕಡೆ ಹೋಗಬೇಕೆಂದು ಆ ದೇಶ ಅರಿತುಕೊಳ್ಳಬೇಕು ಆದರೆ ಅಂತಹ ಆಯ್ಕೆ ಮಾಡುವ ಅವಶ್ಯಕತೆ ನಮಗಿಲ್ಲ. ನಾವು ಸರಿಯಾದ ಮಾರ್ಗದಲ್ಲಿದ್ದೇವೆ, ನಮ್ಮ ಗುರಿ ಸ್ಪಷ್ಟವಾಗಿದೆ ನಮ್ಮ ಮಾರ್ಗವು ನೇರ ಹಾಗು ಸ್ಪಷ್ಟವಾಗಿದೆ – ಎಲ್ಲರಿಗೂ ಸ್ವಾತಂತ್ರ್ಯ ಮತ್ತು ಸಮೃದ್ಧಿಯೊಂದಿಗೆ ಒಂದು ಸಮಾಜವಾದಿ ಪ್ರಜಾಪ್ರಭುತ್ವವನ್ನು ನಿರ್ಮಿಸುವುದು ಮತ್ತು ಎಲ್ಲಾ ರಾಷ್ಟ್ರಗಳೊಂದಿಗಿನ ವಿಶ್ವ ಶಾಂತಿ ಮತ್ತು ಸ್ನೇಹಕ್ಕಾಗಿ ನಿರ್ವಹಣೆ ಮಾಡುವುದು ನಮ್ಮ ಉದ್ದೇಶವಾಗಬೇಕು”.

* ದೇಶದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಶಾಸ್ತ್ರೀಜೀ ಭಾರತದ ಪ್ರಧಾನಿಯಾಗಿದ್ದದ್ದು ಕೇವಲ 17 ತಿಂಗಳುಗಳು.

ಈಗ ನಾವು ಸರ್ಜಿಕಲ್ ಸ್ಟ್ರೈಕ್ ಅನ್ನೋ ಪದವನ್ನ ಕೇಳುತ್ತಿದ್ದೇವೆ ಆದರೆ ಶಾಸ್ತ್ರೀಜೀಯವರು ಸರ್ಜಿಕಲ್ ಸ್ಟ್ರೈಕ್ ಮಾದರಿಯಲ್ಲೇ ಪಾಕಿಸ್ತಾನಕ್ಕೆ ಮಣ್ಣು ಮುಕ್ಕಿಸಿದ್ದರೆಂಬುದು ಎಷ್ಟು ಜನರಿಗೆ ಗೊತ್ತು?

ಅದು 1965, ಪಾಪಿ ಪಾಕಿಸ್ತಾನ ಭಾರತದ ಮೇಲೆರಗಿ ಕಾಶ್ಮೀರದಲ್ಲಿ ತನ್ನ ಸಾವಿರಾರು ಸೈನಿಕರನ್ನ ನುಗ್ಗಿಸಿ ಕಾಶ್ಮೀರ ವಶಪಡಿಸಿಕೊಳ್ಳಲು ಹವಣಿಸಿದಾಗ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಇತ್ತ ಪಾಕಿಸ್ತಾನದ ಲಾಹೋರಿಗೇ ಭಾರತೀಯ ಸೈನಿಕರನ್ನು ನುಗ್ಗಿಸಿ ಅರವತ್ತೈದರಲ್ಲೇ ಪಾಕಿಸ್ತಾನದ ಮೇಲೆ Surgical Strike ಮಾದರಿಯಲ್ಲೇ ಆಪರೇಷನ್ ನಡೆಸಿದ್ದ ಗಂಡೆದೆಯ ನಾಯಕ ನಮ್ಮ ಲಾಲ್ ಬಹದ್ದೂರ್ ಶಾಸ್ತ್ರಿಜೀ.

ಅದು 1962, ನೆಹರು ಎಂಬ ವ್ಯಕ್ತಿ ನಮ್ಮ ದೇಶದ ಪ್ರಧಾನಿಯಾಗಿ ಅದಾಗಲೇ 18 ವರ್ಷ ಅಧಿಕಾರದಲ್ಲಿ ಕೂತಾಗಿತ್ತು. ಆತ ಚೀನಾದ ಪರ ತಳೆದಿದ್ದ ಮೃದು ಧೋರಣೆಯಿಂದ “ಹಿಂದಿ ಚೀನಿ ಭಾಯಿಭಾಯಿ” ಮಂತ್ರವನ್ನ ದೇಶದ ಜನರ ಮೇಲೆ ಹೇರಿದ್ದಕ್ಕೆ 1962 ರ ಯುದ್ಧದಲ್ಲಿ ಚೀನಾ ವಿರುದ್ಧ ಭಾರತ ಸೋಲಬೇಕಾಯಿತು.

ಆ ಸೋಲಿನ ಸುಳಿಯಿಂದ ಹೊರಬರೋಕು ಮುಂಚೆಯೇ ಮತ್ತೆ ಭಾರತದ ಮೇಲೆ ದಾಳಿ ನಡೆಸಿದರೆ ಭಾರತ ಸಲೀಸಾಗಿ ಸೋಲೊಪ್ಪಿಕೊಳ್ಳುತ್ತೆ ಅಂತ 1965 ರಲ್ಲಿ ಪಾಪಿ ಪಾಕಿಸ್ತಾನ ಒಮ್ಮಿಂದೊಮ್ಮೆಲೇ ಕಾಶ್ಮೀರದ ಮೇಲೆ ದಾಳಿಗೈದು ಕಾಶ್ಮೀರದ 250 Sq.Miles ಪ್ರದೇಶವನ್ನು ವಶಪಡಿಸಿಕೊಂಡಿತ್ತು.

ಪಾಕಿಸ್ತಾನದ ಈ ಅಪ್ರಚೋದಿತ ದಾಳಿಯನ್ನ ನಿರೀಕ್ಷಿಸದ ಭಾರತೀಯ ಸೈನ್ಯ ಕಂಗಾಲಾಗಿತ್ತು. ಇನ್ನೇನು ಕಾಶ್ಮೀರವನ್ನ ಕಳೆದುಕೊಂಡೇ ಬಿಟ್ಟೆವು ಅಂದಾಗ 1965 ರಲ್ಲಿ ಭಾರತದ ಪ್ರಧಾನಿಯಾಗಿದ್ದ ವಾಮನ ಮೂರ್ತಿ ಲಾಲ್ ಬಹದ್ದೂರ್ ಶಾಸ್ತ್ರೀ ಜೀ ಯವರು ಎದೆಗುಂದಲಿಲ್ಲ.

ಅವರು ಅಪ್ರಚೋದಿತವಾಗಿ ಕಾಶ್ಮೀರದ ಮೇಲೆ ದಾಳಿ ಮಾಡ್ತಾರೆಂದರೆ ನೀವ್ಯಾಕೆ ಅವರ ಜೊತೆ ಸೆಣೆಸುತ್ತೀರ? ಹೋಗಿ ಪಂಜಾಬಿನ ಮೂಲಕ ಅವರ ಲಾಹೋರಿಗೆ ನುಗ್ಗಿ ಅಂತ ಭಾರತೀಯ ಸೈನ್ಯಕ್ಕೆ ಸೂಚನೆ ಕೊಟ್ಟರು.

ಪಾಕಿಸ್ತಾನ ಕಾಶ್ಮೀರದ 250 Sq.Miles ವಶಪಡಿಸಿಕೊಂಡಿರೆ ದ್ದಭಾರತೀಯ ಸೈನ್ಯ ಪಾಕಿಸ್ತಾನದ ಲಾಹೋರಿಗೆ ನುಗ್ಗಿ ಪಾಕಿಸ್ತಾನದ 710 Sq.Miles ವಶಪಡಿಸಿಕೊಂಡು ಪಾಕಿಸ್ತಾನಕ್ಕೆ ಮರ್ಮಾಘಾತವನ್ನೇ ಕೊಟ್ಟಿತ್ತು

ಇದರಿಂದ ಕಂಗಾಲಾದ ಪಾಕಿಸ್ತಾನ ಮತ್ತೆ ಅಮೇರಿಕದೆದುರು ಮಂಡಿಯೂರಿ ಭಾರತಕ್ಕೆ ಯುದ್ಧ ನಿಲ್ಲಿಸುವಂತೆ ಸೂಚಿಸಿ ನಮ್ಮ ಲಾಹೋರ್ ನಮಗೆ ವಾಪಸ್ ಮಾಡಲು ಹೇಳಿ ಅಂತ ದೇಹಾತಿ ಔರತ್(ಹಳ್ಳಿ ಹೆಂಗಸು) ತರಹ ಗೋಗರೆಯಿತು.

ಮೊದಲಿನಿಂದಲೂ ದ್ವಿಮುಖ ನೀತಿಯಿಂದ ಭಾರತ ಪಾಕಿಸ್ತಾನದ ಸಮಸ್ಯೆಯನ್ನ ಸಮಸ್ಯೆಯನ್ನಾಗೇ ಇಡಲು ಪ್ರಯತ್ನಿಸುವ ಅಮೇರಿಕ ಆಗಲೂ ಅದೇ
ಕೆಲಸವನ್ನ ಮುಂದುವರೆಸಿತ್ತು.

ಶಾಸ್ತ್ರೀ ಜೀ ಮಾತ್ರ ಲಾಹೋರಿನಿಂದ ಸೈನ್ಯವನ್ನ ವಾಪಸ್ ಕರೆಸಲು ಸುತಾರಾಂ ಸಿದ್ಧರಿರಲಿಲ್ಲ.

USA & USSR(ರಷ್ಯಾ ಒಕ್ಕೂಟ) ರಷ್ಯಾದ ತಾಷ್ಕೆಂಟ್’ಗೆ ಭಾರತದ ಪ್ರಧಾನಿ ಶಾಸ್ತ್ರೀಜೀ ಹಾಗು ಪಾಕಿಸ್ತಾನದ ಅಧ್ಯಕ್ಷ ಅಯ್ಯೂಬ್ ಖಾನ್’ನ್ನ ಕರೆಸಿ ಕದನ ವಿರಾಮ ಮಾಡಿಸಿ ಶಾಂತಿ ಸ್ಥಾಪಿಸುವಂತೆ ಕರೆ ನೀಡಿದರು.

ಶಾಸ್ತ್ರೀಜೀ ಮಾತ್ರ ಈ ಒಪ್ಪಂದಕ್ಕೆ ಸುತಾರಾಂ ಸಿದ್ಧರಿರಲಿಲ್ಲ, ಶಾಸ್ತ್ರಿಜೀ ಯವರ ಜೊತೆಗೆ ಇಂದಿರಾ ಗಾಂಧಿಯೂ ತಾಷ್ಕೆಂಟಿಗೆ ಹೋಗಿದ್ದರು.

ಒಲ್ಲದ ಮನಸ್ಸಿನಿಂದ ತಾಷ್ಕೆಂಟ್ ಒಪ್ಪಂದಕ್ಕೆ ಸಹಿ ಹಾಕಿದರು ಶಾಸ್ತ್ರೀಜೀ.

ಪಾಕಿಸ್ತಾನ ವಶಪಡಿಸಿಕೊಂಡಿದ್ದ ಕಾಶ್ಮೀರ & ಭಾರತ ವಶಪಡಿಸಿಕೊಂಡಿದ್ದ ಲಾಹೋರನ್ನ ಮತ್ತೆ ಅವರವರ ದೇಶಕ್ಕೆ ವಾಪಸ್ ಬಿಟ್ಟುಕೊಡಬೇಕೆನ್ನುವುದು ತಾಷ್ಕೆಂಟ್ ಒಪ್ಪಂದದ ಉದ್ದೇಶವಾಗಿತ್ತು.

ಅದೇನಾಯಿತೋ ಏನೋ ಗೊತ್ತಿಲ್ಲ, ತಾಷ್ಕೆಂಟ್ ಒಪ್ಪಂದ ಸಹಿ ಮಾಡಿದ ನಂತರ ರಾತ್ರಿ ತಮ್ಮ ಕೋಣೆಗೆ ಮಲಗಲು ಹೋದ ಶಾಸ್ತ್ರೀಜೀ ಮತ್ತೆ ಏಳಲೇ ಇಲ್ಲ.

ಬೆಳಿಗ್ಗೆ ಶಾಸ್ತ್ರೀ ಜೀ ನಿಧನರಾಗಿದ್ದಾರೆ ಅನ್ನೋ ಸುದ್ಧಿ ಭಾರತಕ್ಕೆ ಬರಸಿಡಿಲಿನಂತೆ ಬಂದೆರಗಿತ್ತು.

ಶಾಸ್ತ್ರೀಜೀ ನಮ್ಮನಗಲಿ 51 ವರ್ಷ ಕಳೆದುಹೋಗಿವೆ, ಅವರ ಸಾವಿನ ನಿಗೂಢತೆ ಮಾತ್ರ ಇನ್ನೂ ಬೆಳಕಿಗೆ ಬಂದಿಲ್ಲ .

ಇಲ್ಲಿ ಇನ್ನೊಂದು ಇಂಟರೆಸ್ಟಿಂಗ್ ವಿಷ್ಯ ಅಂದ್ರೆ ರಷ್ಯಾದ ತಾಷ್ಕೆಂಟಿಗೆ ಶಾಸ್ತ್ರೀಜೀ ತೆರಳುವಾಗ ಭಾರತದ ಜನರಿಗೊಂದು ಮಾತನ್ನ ಹೇಳಿ ಹೊರಟಿದ್ದರು
“ನಾನು ಭಾರತಕ್ಕೆ ವಾಪಸ್ಸಾಗುವಾಗ ರಷ್ಯಾದಿಂದ ಒಬ್ಬ ವ್ಯಕ್ತಿಯನ್ನು ಕರೆ ತರುತ್ತೇನೆ”

ಆ ವ್ಯಕ್ತಿ ಯಾರು ಗೊತ್ತೆ? ಅದೇ ನಮ್ಮ ಕ್ರಾಂತಿಕಾರಿ ಕಣ್ಮಣಿ ಸುಭಾಷ್ ಚಂದ್ರ ಬೋಸರು.

ಇಲ್ಲಿ ಒಂದಕ್ಕೊಂದು ವಿಷಯಗಳನ್ನು ಲಿಂಕ್ ಮಾಡಿ ನೋಡಿದಾಗ ಅರ್ಥವಾಗುವ ವಿಷ್ಯ ಏನಂದ್ರೆ

“ಭಾರತದ ಪ್ರಧಾನಿ ಶಾಸ್ತ್ರೀಜೀ ಪ್ರಧಾನಿಯಾಗಿ ಮುಂದುವರೆದರೆ ನಮ್ಮ ಆಟ ನಡೆಯಲ್ಲ ಅನ್ನೋ ಪಾಕಿಸ್ತಾನ.

ಈತನೇ ಪ್ರಧಾನಿಯಾಗಿದ್ದರೆ ಈತನ ಪ್ರಖ್ಯಾತಿ ಹೀಗೆ ಮುಂದುವರೆದರೆ ನನ್ನ ಗತಿಯೇನು ಅಂದುಕೊಂಡಿದ್ದ ಭಾರತದ ದುಷ್ಟಶಕ್ತಿ, ಈತ ಹೇಳಿದಂತೆ ಸುಭಾಷರನ್ನ ಭಾರತಕ್ಕೆ ಕರೆದೊಯ್ದರೆ ನಮ್ಮಪ್ಪ ನೆಹರು ಸುಭಾಷರ ವಿರುದ್ಧ ನಡೆಸಿದ್ದ ಸಂಚು & 1943 ರಲ್ಲೇ ವಿಮಾನ ಅಪಘಾತದಲ್ಲಿ ಅವರು ತೀರಿ ಹೋದರು ಅನ್ನೋ ಸುಳ್ಳು ದೇಶದ ಜನರಿಗೆ ತಿಳಿದರೆ ನಮ್ಮ ಕುಟುಂಬದ ಮರ್ಯಾದೆ ಏನು?” ಅನ್ನೋ ಪ್ರಶ್ನೆ ಕಾಡಿತ್ತು.

ಇನ್ನು ರಷ್ಯಾದ ವಿಚಾರಕ್ಕೆ ಬಂದರೆ ಸುಭಾಷರನ್ನ ತಮ್ಮ ಸೆರೆಬಂಧಿಯಾಗಿಟ್ಟುಕೊಂಡ ವಿಚಾರ ಜಗತ್ತಿಗೆ ತಿಳಿದರೆ ನಮ್ಮ ಮಾನ ಹರಾಜಾಗುತ್ತೆ ಅನ್ನೋದು ರಷ್ಯಾದ ಚಿಂತೆಯಾಗಿತ್ತು.

ಒಟ್ಟನಲ್ಲಿ ಪಾಕಿಸ್ತಾನ + ಭಾರತದ ಕೆಲ ದುಷ್ಟ ಶಕ್ತಿಗಳು + ರಷ್ಯಾ ಕೂಡಿಕೊಂಡು ಶಾಸ್ತ್ರೀಜೀಯವರ ಹತ್ಯೆಯನ್ನ ವ್ಯವಸ್ಥಿತವಾಗಿಯೇ “Heart Attack” ಮಾಡಿಮುಗಿಸಿಬಿಟ್ಟಿದ್ದವು.

ಈ ವಿಷಯಗಳೆಲ್ಲ ತನಿಖೆಯ ಮೂಲಕ ಮುಂದೆ ಬಂದಾಗ ಪಾಕಿಸ್ತಾನ ಅಂದರೆ ಯಾವ ರೀತಿಯಲ್ಲಿ ಮೈ ಉರಿದುಕೊಳ್ಳೋ ನಮ್ಮ ಜನ ನಮ್ಮ ಭಾರತದ ಹಳೇ ಪಕ್ಷದ ಹೆಸರು ಕೇಳಿದರೂ ಕೂಡ ಮೈ ಉರಿದುಕೊಳ್ಳೋ ಕಾಲ ದೂರವಿಲ್ಲ.

ಅದೇನೇ ಇರಲಿ ಇಂದು ಗಾಂಧಿ ಜಯಂತಿಯೆಂಬ ಕಾರಣಕ್ಕೆ ಗಾಂಧಿಯನ್ನಷ್ಟೇ ನೆನೆಯದೆ ದೇಶ ಕಂಡ ಶ್ರೇಷ್ಟ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜೀಯವರನ್ನೂ ನೆನೆಯೋಣ!!

ಜೈ ಹಿಂದ್,
ಜೈ ಶಾಸ್ತ್ರೀಜೀ,
ಜೈ ಜವಾನ್ ಜೈ ಕಿಸಾನ್

– Vinod Hindu Nationalist

Tags

Related Articles

Close