ಪ್ರಚಲಿತ

ಇಂದು ದೇಶಕ್ಕೆ ಬೃಹತ್ ಕೊಡುಗೆ ನೀಡಲಿದ್ದಾರೆಯೇ ಪ್ರಧಾನ ಮಂತ್ರಿ ನರೇಂದ್ರ ಮೋದಿ?!

ಒಂದು ಕಡೆ ಭಾರತದ ಆರ್ಥಿಕತೆ ನೋಟು ನಿಷೇಧದ ಬಳಿಕ ಕುಸಿಯುತ್ತಿದೆ ಎಂಬ ಗೊತ್ತು ಗುರಿಯಿಲ್ಲದ ಆರೋಪಗಳ ನಡುವೆಯೇ ನರೇಂದ್ರ ಮೋದಿಯವರು
ಆರ್ಥಿಕತೆಯನ್ನು ಮೇಲೆತ್ತುವ ಪ್ರಯತ್ನವನ್ನು ಸತತವಾಗಿ ಮಾಡುತ್ತಲೇ ಇದ್ದಾರೆ ಎಂಬುದೂ ಅಷ್ಟೇ ಸತ್ಯ.

ನೆನ್ನೆಯಿಂದ ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಆರಂಭವಾಗಿದ್ದು, ಇದೇ ಸಮಯದಲ್ಲಿ ಸಂಘ ಪರಿವಾರದ ಮುಂಚೂಣಿಯಲ್ಲಿದ್ದ ದಿವಂಗತ ದೀನದಯಾಳ ಉಪಾಧ್ಯಾಯರ ಜನ್ಮ ಶತಮಾನೋತ್ಸವವೂ ನಡೆಯಲಿದ್ದು, ದೇಶದ ಆರ್ಥಿಕತೆಗೆ ಬಲವಾದ ಭದ್ರತೆ ಒದಗಿಸುವ ಯೋಜನೆಗಳನ್ನು ಮೋದಿ ಘೋಷಿಸುವ ಸಾಧ್ಯತೆ ಇದೆ.

ಸಭೆಯಲ್ಲಿ ಅಂದಾಜು 40 ಸಾವಿರ ಕೋಟಿಯಿಂದ 50 ಸಾವಿರ ಕೋಟಿ ರೂಪಾಯಿಗಳವರೆಗಿನ ಬೃಹತ್ ಯೋಜನೆಯನ್ನು ಮೋದು ಘೋಷಿಸುವ ಸಾಧ್ಯತೆ ಇದೆ.

ದೇಶದ ಆರ್ಥಿಕತೆಯ ದೃಷ್ಟಿಯಿಂದ ಮಹತ್ವಾಕಾಂಕ್ಷಿ ಸಭೆ ಇದಾಗಿದ್ದು, ಜಿಡಿಪಿ ವೃದ್ಧಿ, ವಿದ್ಯುತ್ ವಲಯ, ಗೃಹ ನಿರ್ಮಾಣ ಮತ್ತು ಉದ್ಯೋಗ ಸೃಷ್ಟಿಯಂತಹ ಸಮಾಜ ಕಲ್ಯಾಣ ವಲಯಗಳಿಗೆ ಮೋದಿ ದೊಡ್ಡ ಕೊಡುಗೆ ನೀಡುವ ಲಕ್ಷಣಗಳು ಅಧಿಕವಾಗಿದೆ.

ಇಂಧನ ಸಚಿವರಾದ ಆರ್.ಕೆ.ಸಿಂಗ್ ವಿದ್ಯುತ್ ವಲಯದ ಯೋಜನೆಯ ಬಗ್ಗೆ ಮಾತನಾಡಿದ್ದು ” ದೇಶದ ಪ್ರತಿ ಮನೆಗೂ ವಾರದ ಏಳು ದಿನಗಳಲ್ಲಿಯೂ ನಿರಂತರ 24 ತಾಸು ವಿದ್ಯುತ್ ಪೂರೈಕೆ ಮಾಡುವ ಸಲುವಾಗಿ ಕೇಂದ್ರ ಸರಕಾರ ಮಹತ್ವಾಕಾಂಕ್ಷಿ ಯೋಜನೆಯೊಂದು ರೂಪಿಸಿದೆ. ಕಾರ್ಯಕಾರಿಣಿ ಸಮಾರೋಪ ಸಮಾರಂಭದಲ್ಲಿ ನರೇಂದ್ರ ಮೋದಿಯವರು ಘೋಷಣೆ ಮಾಡಲಿದ್ದಾರೆ’ ಎಂದು ಹೇಳಿದ್ದಾರೆ!

ಮೂಲಗಳ ಪ್ರಕಾರ, ವಿದ್ಯುತ್ ಪೂರೈಕೆಯ ಯೋಜನೆಗೆ ‘ಸೌಭಾಗ್ಯ’ ಎಂದು ಹೆಸರಿಡಲಾಗಿದ್ದು ಇದರ ಮೇಲೆ ಟ್ರಾನ್ಸ್ ಫಾರ್ಮರ್ಸ್, ಮೀಟರ್ ಹಾಗೂ ವೈರ್ ಗಳ ಮೇಲೆ ಸಬ್ಸಿಡಿ ನೀಡಲಾಗುತ್ತದೆ. ಈ ಯೋಜನೆ ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳ್ಳಲಿದ್ದು ತದನಂತರ ಸರ್ವರಿಗೂ ವಿದ್ಯುತ್ ಪೂರೈಕೆ ಆಗಲಿದೆ ಎಂದು ತಿಳಿದು ಬಂದಿದೆ!

ಕೇಂದ್ರ ಸರಕಾರದ ಮುಂದೆ ಆರ್ಥಿಕತೆಯ ದುರ್ಬಲ ಸ್ಥಿತಿ, ಜಿಡಿಪಿ ದರದ ಕುಸಿತ ಹಾಗೂ ಉದ್ಯೋಗ ಸೃಷ್ಟಿಯ ಸವಾಲುಗಳನ್ನು ಪರಿಹರಿಸುವ ಅನಿವಾರ್ಯತೆ ಇರುವುದರಿಂದ ಶೀಘ್ರದಲ್ಲಿಯೇ ಯೋಜನೆ ಆಧಾರಿತ ಕಾರ್ಯಗಳು ಪ್ರಾರಂಭವಾಗುವುದೆಂದು ವಿತ್ತ ಸಚಿವ ಅರುಣ್ ಜೇಟ್ಲಿ ಕಳೆದ ವಾರವೇ ಹೇಳಿದ್ದರು.

ಕಾರ್ಯಕಾರಿಣಿ ಸಭೆಯ ನಿರೀಕ್ಷೆಗಳು!

1. ದೇಶದ ಆರ್ಥಿಕತೆಯ ಭದ್ರತೆಗೆ ಸವಾಲೊಡ್ಡಿದ ಸಮಸ್ಯೆಗಳಿಗೆ ಪರಿಹಾರ.
2. ಜಿಡಿಪಿ ಹಾಗೂ ಜಿಎಸ್ ಟಿ ಯ ಸಮಸ್ಯೆಗಳಿಗೆ ಪರ್ಯಾಯ ಪರಿಹಾರ.
3. ರೋಹಿಂಗ್ಯಾ ಮುಸಲ್ಮಾನರ ಕುರಿತು ನಿರ್ಧಾರ.
4. ನಿರಂತರ ವಿದ್ಯುತ್ ಸಂಪರ್ಕ ವ್ಯವಸ್ಥೆ!

ದೇಶದ ಹೆಮ್ಮೆಯ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರ ಮಹತ್ಬಾಕಾಂಕ್ಷಿ ಯೋಜನೆಗಳಿಗೆ ದೇಶದ ನಾಗರಿಕರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆಂದು ಕಾದು ನೋಡಬೇಕಿದೆ.

ಸಭೆಗೆ ಸರಾಸರಿ ಎಲ್ಲಾ ಸಂಸದರೂ, ಶಾಸಕರೂ ಹಾಜರಾಗಲಿದ್ದು 2017 ರ ಬೃಹತ್ ಸಭೆ ಇದಾಗಿದೆ. ಮೊದಲು ಅಮಿತ್ ಷಾ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದು, ತದನಂತರ ಮೋದಿ ಘೋಷಣೆಗಳನ್ನು ಮಾಡಲಿದ್ದಾರೆ.

– ಪೃಥ ಅಗ್ನಿಹೋತ್ರಿ

Tags

Related Articles

Close