ಅಂಕಣಪ್ರಚಲಿತ

ಇಂದು ಭಗತ್ ಸಿಂಗರ 111 ನೆಯ ಜಯಂತ್ಯೋತ್ಸವ, ಭಗತ್ ಸಿಂಗರ ಬಗ್ಗೆ ನಿಮಗೆ ಗೊತ್ತಿರದ ಕೆಲ ವಿಷಯಗಳು!!!

ಭಗತ್ ಸಿಂಗ್ ಎಂದರೆ ಮೈಯಲ್ಲಿ ಅದೇನೋ ದೇಶಭಕ್ತಿಯ ಸಂಚಾರ, ರೋಮಾಂಚನ. ತಾಯಿ ಭಾರತಿಗಾಗಿ ತನ್ನ 23 ರ ಚಿಕ್ಕ ವಯಸ್ಸಿನಲ್ಲಿಯೇ ಪ್ರಾಣಾರ್ಪಣೆ
ಮಾಡಿದ ಆ ವ್ಯಕ್ತಿ ಕೋಟ್ಯಾಂತರ ಜನರಿಗೆ ಸ್ಪೂರ್ತಿ.

ಆದರೆ ಭಗತ್ ಸಿಂಗ್ ಬಗ್ಗೆ ನಿಮಗೆ ಗೊತ್ತಿರದ ಕೆಲ ವಿಷಯಗಳ್ಯಾವುವು ಗೊತ್ತಾ?

* ಭಗತ್ ಸಿಂಗ್ ಜನಿಸಿದ್ದು ಸೆಪ್ಟೆಂಬರ್ 28, 1907 ರಲ್ಲಿ ಸದ್ಯ ಪಂಜಾಬ್ ಪ್ರಾಂತ್ಯದಲ್ಲಿರುವ(ಆಗ ಭಾರತದಲ್ಲಿದ್ದ) ಲ್ಯಾಲ್ಲಪುರ ಜಿಲ್ಲೆಯ ಬಂಗಾ ಎಂಬ ಗ್ರಾಮದಲ್ಲಿ

* ಬಾಲಕನಾಗಿದ್ದಾಗ ಭಗತ್ ಸಿಂಗ್ ಹೀಗೇ ಒಮ್ಮೆ ತನ್ನ ಹೊಲಕ್ಕೆ ತಂದೆಯ ಜೊತೆ ಹೋದಾಗ ಅಲ್ಲಿ ಬೆಳೆದ ಫಸಲನ್ನ ನೋಡಿ ತಂದೆಗೆ ಕೇಳ್ತಾನೆ “ಅಪ್ಪ ನಾವಿಲ್ಲಿ ಏನು ಬೇಕಾದರೂ ಬೆಳೆಯಬಹುದಲ್ವಾ?” ಅದಕ್ಕೆ ತಂದೆ “ಹೌದು ಮಗು” ಅಂತಾರೆ. ಆಗ ಪುಟ್ಟ ಬಾಲಕ ಭಗತ್ ಏನು ಹೇಳ್ತಾನೆ ಗೊತ್ತಾ? “ಅಪ್ಪ ನಾವು ಇಲ್ಯಾಕೆ ಗನ್’ಗಳನ್ನ ಬೆಳಯಬಾರದು? ಮುಂದೆ ಆ ಗನ್’ಗಳಿಂದ ನಾವು ಬ್ರಿಟಿಷರ ಮೇಲೆ ದಾಳಿ ಮಾಡಿ ಈ ದೇಶ. ಬಿಟ್ಟೋಡಿಸಬಹುದಲ್ವಾ” ಅಂತ. ಪುಟ್ಟ ವಯಸ್ಸಿನ ಆ ಬಾಲಕನ ಪ್ರಶ್ನೆಯನ್ನ ಕೇಳಿ ತಂದೆಗೆ ಭಗತ್’ನ ಮೇಲಿನ ಪ್ರೀತಿ ಇಮ್ಮಡಿಯಾಗಿತ್ತು.

* ಅದು 1919, ಜಲಿಯನ್ ವಾಲಾ ಬಾಗ್ ನಲ್ಲಿ ಶಾಮತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಜನರ ಮೇಲೆ ಬ್ರಿಟಿಷರು ಮನಬಂದಂತೆ ಗೋಲಿಬಾರ್ ಮಾಡಿ ನೂರಾರು ಜನರನ್ನ ಕಂಡಲ್ಲಿ ಗುಂಡಿಟ್ಟು ಕೊಂದಿದ್ದರು. ಶಾಲೆ ಮುಗಿಸಿಕೊಂಡು ಬರುವ ಸಮಯದಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದ ಸ್ಥಳಕ್ಕೆ ಭೇಟಿ ನೀಡಿದ 12 ವರ್ಷದ ಬಾಲಕ ಭಗತ್ ಆ ಜಾಗದಿಂದ ಭಾರತೀಯರ ರಕ್ತದಿಂದ ತೇವಗೊಂಡ ಮಣ್ಣನ್ನ ಬಾಟಲಿಯಲ್ಲಿ ತುಂಬಿಕೊಂಡು ಮನೆಗೆ ತೆಗೆದುಕೊಂಡು ಹೋಗಿದ್ದನಂತೆ. ಪ್ರತಿದಿನವೂ ಆ ಮಣ್ಣನ್ನ ಭಗತ್ ಪೂಜಿಸಿ ಬ್ರಿಟಿಷರ ವಿರುದ್ಧ ಸೇಡು ತೀರಿಸಿಕೊಳ್ಳುವ ಪ್ರತಿಜ್ಞೆ ಮಾಡುತ್ತಿದ್ದನಂತೆ.

* ಕಾಲೇಜು ವಿದ್ಯಾರ್ಥಿಯಾಗಿದ್ದಾಗ ನಟನೆಯಲ್ಲೂ ಭಗತ್’ನದ್ದು ಎತ್ತಿದ ಕೈಯಾಗಿತ್ತಂತೆ. ಕಾಲೇಜಿನಲ್ಲಿ ಮಹಾರಾಣಾ ಪ್ರತಾಪ್ ಸಿಂಗ್, ಸಾಮ್ರಾಟ್ ಚಂದ್ರಗುಪ್ತನಾಗಿ ನಟಿಸಿದ್ದ ನಾಟಕಗಳಿಗೆ ಭಗತ್’ಗೆ ಪ್ರಶಸ್ತಿಯು ಬಂದಿತ್ತು

* ‘ಇಂಕ್ವಿಲಾಬ್ ಜಿಂದಾಬಾದ್’ ಎಂಬ ಸುಪ್ರಸಿದ್ಧ, ದೇಶಭಕ್ತಿಯ ಸಂಚಾರ ಮೂಡಿಸುವ ಘೋಷಣೆಯನ್ನ ಭಾರತೀಯರಿಗೆ ನೀಡಿದ್ದು ಇದೇ ಭಗತ್. ಇದು ಬ್ರಿಟಿಷರ ವಿರುದ್ಧದ ಸಶಸ್ತ್ರ ಹೋರಾಟದಲ್ಲಿ ಪ್ರಮುಖವಾಗಿ ಬಳಸಲಾಗಿದ್ದ ಘೋಷಣೆಯಾಗಿತ್ತು.

* ಕರ್ತಾರ್ ಸಿಂಗ್ ಸರಾಭಾ ಭಗತ್ ಸಿಂಗರ ಪ್ರೇರಣೆಯಾಗಿದ್ದರು. ಭಗತ್ ಸಿಂಗ್ ಯಾವಾಗಲೂ ಕರ್ತಾರ್ ಸಿಂಗರ ಫೋಟೋ ಇಟ್ಟುಕೊಂಡುರಿತ್ತಿದ್ದರಂತೆ. ಕರ್ತಾರ ಸರಾಭಾರ ಜೊತೆ ಜೊತೆಗೆ ಲೆನಿನ್, ಮಾರ್ಕ್ಸ್ ರನ್ನ ಓದಿಕೊಂಡಿದ್ದ ಭಗತ್ ಸಿಂಗ್ ಸೋಶಿಯಲಿಸಂ ಕಡೆಗೆ ಒಲವು ಬೆಳೆಸಿಕೊಂಡಿದ್ದ

* ಮನೆಯಲ್ಲಿ ಭಗತ್’ನಿಗೆ ಮದುವೆಯಾಗಲು ಮನೆಯವರು ನಿರ್ಧರಿಸಿದಾಗ ಭಗತ್ ಸಿಂಗ್ ಪತ್ರವೊಂದನ್ನ ಬರೆದಿಟ್ಟು ಮನೆ ಬಿಟ್ಟು ಓಡಿ ಹೋಗಿದ್ದನಂತೆ. ಆ ಪತ್ರದಲ್ಲಿ ಭಗತ್ ಹೀಗೆ ಬರೆದಿದ್ದ “ನನ್ನ ಜೀವನವು ದೇಶದ ಸ್ವಾತಂತ್ರ್ಯದ ಉದಾತ್ತ ಕಾರಣಕ್ಕೆ ಸಮರ್ಪಿತವಾಗಿದೆ. ಆದ್ದರಿಂದ, ಈಗ ನನಗೆ ಯಾವ ಲೌಕಿಕ ಆಸೆಗಳಾಗಲಿ, ಬಯಕೆಗಳಾಗಲಿ ಇಲ್ಲ. ನನ್ನ ಪ್ರಾಣ ದೇಶದ ಸ್ವಾತಂತ್ರ್ಯಕ್ಕೆ ಮುಡಿಪು”

* ಭಗತ್ ಸಿಂಗ್ ಹಿಂದೂಸ್ತಾನ್ ಸಮಾಜವಾದಿ ರಿಪಬ್ಲಿಕನ್ ಅಸೋಸಿಯೇಷನ್ (HRSA) ಸದಸ್ಯನೂ ಆಗಿದ್ದ. ಆ ಪಕ್ಷದ ಮೊದಲ ಹೆಸರಾಗಿದ್ದ ಹಿಂದುಸ್ಥಾನ ರಿಪಬ್ಲಿಕನ್ ಅಸೋಸಿಯೇಷನ್ ಗೆ ‘ಸಮಾಜವಾದಿ’ ಅನ್ನೋ ಪದವನ್ನು ಭಗತ್ ಸಿಂಗ್ ಸೇರಿಸಿದ್ದ.

* ಲಾಲಾ ಲಜಪತ್ ರಾಯ್’ರವರ ಸಾವಿಗೆ ಸೇಡು ತೀರಿಸಿಕೊಳ್ಳಲು ಸುಖದೇವ್, ರಾಜಗುರು ಜೊತೆಗೂಡಿ ಜೇಮ್ಸ್ ಸ್ಕಾಟ್’ನ್ನ ಕೊಲ್ಲಲು ತಂತ್ರವನ್ನ ಹೆಣೆದಿದ್ದರು. ಗುರಿ ತಪ್ಪಿತ್ತು, ಭಗತ್ ಸಿಂಗ ನೇತೃತ್ವದ ತಂಡದ ನಿಶಾನೆ ತಪ್ಪಿ ಬಲಿಯಾಗಿದ್ದು ಇನ್ನೊಬ್ಬ ಬ್ರಿಟಿಷ್ ಅಧಿಕಾರಿ ಜಾನ್ ಪಿ. ಸೌಂಡರ್ಸ್.

* ಸೆಂಟ್ರಲ್ ಲೆಜಿಸ್ಲೇಟಿವ್ ಅಸೆಂಬ್ಲಿಯಲ್ಲಿ ಎರಡು ಬಿಲ್ ಜಾರಿಗೆ ತರಲು ಬ್ರಿಟಿಷರು ತಯಾರಿ ನಡೆಸಿದ್ದಾಗ ಭಗತ್ ಸಿಂಗ್ ಮತ್ತು ಭಟುಕೇಶ್ವರ್ ದತ್
ಸಂಸತ್ತಿನಲ್ಲಿ ಬಾಂಬ್’ನ್ನ ಎಸೆದಿದ್ದರು.

* ಬಾಂಬ್ ಎಸೆದ ನಂತರ ಓಡಿಹೋಗಲು ಪ್ರಯತ್ನಿಸದ ಭಗತ್ ಹಾಗು ಭಟುಕೇಶ್ವರ್ ದತ್ತ್ ಬ್ರಿಟಿಷರಿಗೆ ಶರಣಾಗತರಾಗುತ್ತಾರೆ. ಈ ದಾಳಿ ಯಾರೊಬ್ಬರನ್ನೂ ಸಾಯಿಸಕ್ಕಲ್ಲ ಬದಲಾಗಿ ಈ ಸುದ್ದಿ ರಾಷ್ಟ್ರಾದ್ಯಂತ ಚರ್ಚೆಯಾಗುತ್ತೆ, ಭಗತ್ ಸಿಂಗ್ ಯಾಕೆ ಬಾಂಬ್ ಎಸೆದ ಅನ್ನೋದು ಭಾರತೀಯರಿಗೆ ಗೊತ್ತಾಗಿ ಅವರೂ ಬ್ರಿಟಿಷರ ವಿರುದ್ಧ ಹೋರಾಡೋಕೆ ಸಜ್ಜಾಗುತ್ತಾರೆ ಅನ್ನೋದು ಭಗತ್ ಸಿಂಗ್ ಉದ್ದೇಶವಾಗಿತ್ತು.

* ಸ್ಯಾಂಡರ್ಸ್ ಹತ್ಯೆ ಹಾಗು ಅಸೆಂಬ್ಲಿಯಲ್ಲಿ ಬಾಂಬ್ ಎಸೆದ ಆರೋಪಗಳಿಗೆ ಭಗತ್ ಸಿಂಗ್ ಹಾಗು ಆತನ ಸಹಚರರು ಜೈಲು ಶಿಕ್ಷೆಯಾಯಿತು.

* ಜೈಲಿನಲ್ಲಿ ಖೈದಿಗಳಿಗೆ ಕ್ರೂರ ರೀತಿಯಲ್ಲಿ ನಡೆಸಿಕೊಳ್ಳುತ್ತಿದ್ದ ಬ್ರಿಟಿಷರ ಧೋರಣೆಯನ್ನ ವಿರೋಧಿಸಿದ ಭಗತ್ & ಟೀಂ ಆಮರಣ ಉಪವಾಸಕ್ಕೆ ಕುಳಿತುಬಿಟ್ಟರು. ಸತತ 63 ದಿನಗಳ ಉಪವಾಸದಿಂದ ಜತಿನ್ ದಾಸ್ ಕೊನೆಯುಸಿರೆಳೆದರು. ಜತಿನ್ ದಾಸ್ HRSA ಮೆಂಬರ್ ಕೂಡ ಆಗಿದ್ದು ಬಾಂಬ್’ಗಳನ್ನ ತಯಾರಿಸುವುದರಲ್ಲಿ ನಿಷ್ಣಾತನಾಗಿದ್ದ.

* ಕಾಂಗ್ರೆಸ್ ಪಕ್ಷ ಮತ್ತು ಭಗತ್ ಸಿಂಗರವರ ತಂದೆಯ ಕರೆಯ ಮೇರೆಗೆ ಅನಿರ್ದಿಷ್ಟ ಉಪವಾಸವನ್ನ 1929 ರ ಅಕ್ಟೋಬರ್ 5 ರಂದು ಭಗತ್ ಸಿಂಗ್ ಹಾಗು ಸಹಚರರು ನಿಲ್ಲಿಸಿದ್ದರು. ಈ ಉಪವಾಸ ಸತ್ಯಾಗ್ರಹ ಒಟ್ಟು 116 ದಿನ ನಡೆದಿತ್ತು. ಐರಿಶ್ ಕ್ರಾಂತಿಕಾರಿಗಳು ನಡೆಸಿದ್ದ 97 ದಿನಗಳ ರೆಕಾರ್ಡ್ ಭಗತ್ ಸಿಂಗರ ನಿರಶನ ಮುರಿದಿತ್ತು.

* ಸತತ ಉಪವಾಸದಿಂದ ಶಕ್ತಿ ಕಳೆದುಕೊಂಡಿದ್ದ ಭಗತ್ ಸಿಂಗ್ 14 ಕೆ.ಜಿ. ದೇಹದತೂಕ ಇಳಿದಿತ್ತು. ಕೋರ್ಟಿಗೆ ಕರೆದೊಯ್ಯುವಾಗ ನಡೆಯಲೂ ಆಗದ ನಿತ್ರಾಣ ಸ್ಥಿತಿಯಲ್ಲಿದ್ದ ಭಗತ್ ಸಿಂಗರನ್ನ ಬ್ರಿಟಿಷರು ಸ್ಟ್ರೆಚರ್ ಮೂಲಕ ಒಯ್ದಿದ್ದರಂತೆ.

* ಒಮ್ಮೆ ಭಗತ್ ಜೈಲಿನಲ್ಲಿ ತನ್ನ ಸ್ನೇಹಿತನೊಂದಿಗೆ ಚರ್ಚೆಯೊಂದನ್ನ ಮಾಡುತ್ತಿದ್ದಾಗ ಆತನ ಸ್ನೇಹಿತ ಹೀಗೆ ಹೇಳಿದನಂತೆ “ನಿನ್ನಿಂದಾಗಿ ನಾನೂ ನಾಸ್ತಿಕನಾಗಿದ್ದೇನೆ”. ಇದನ್ನ ಕೇಳಿದ ನಂತರ ಭಗತ್ ಸಿಂಗ್ ಜೈಲಿನಲ್ಲಿಯೇ “Why I Am an Atheist?” ಎಂಬ ಪುಸ್ತಕವನ್ನ ಬರೆದಿದ್ದನಂತೆ

* ಕೋರ್ಟಿನಲ್ಲಿ ಟ್ರೈಲ್ ನಡೆದಿದ್ದಾಗ ‘ಕ್ಷಮಾದಾನ’ ಕೇಳು ಅಂತ ಭಗತ್ ಸಿಂಗ್ ತಂದೆ ಹೇಳಿದ್ದರಂತೆ. ಇದಕ್ಕೆ ಕೋಪಗೊಂಡ ಭಗತ್ ಸಿಂಗ್ ತನ್ನ ತಂದೆಗೆ “ಅಪ್ಪ ನಾನು ತಪ್ಪೇ ಮಾಡಿಲ್ಲ ಅಂದಮೇಲೆ ನಾನ್ಯಾಕೆ ಕ್ಷಮಾದಾನ ಕೇಳಲಿ” ಅಂದಿದ್ರಂತೆ

* ಆ ದಿನ ಬಂದೇ ಬಿಟ್ಟಿತು, ಮಾರ್ಚ್ 24, 1931 ರಂದು ಭಗತ್ ಸಿಂಗ್, ರಾಜಗುರು, ಸುಖದೇವರನ್ನ ಗಲ್ಲಿಗೇರಸುವ ಆದೇಶವಾಗಿತ್ತು
ಆದರೆ ಭಗತ್ ಸಿಂಗರನ್ನ ನಿಗದಿತ ದಿನದಂದು ಗಲ್ಲಿಗೇರಿಸಿದರೆ ಭಾರತೀಯರು ರೊಚ್ಚಿಗೇಳೋದು ಶತಸಿದ್ದ ಅನ್ನೋದು ಬ್ರಿಟಿಷರಿಗೆ ಗೊತ್ತಿತ್ತು. ಹಾಗಾಗಿ 23ನೆ ತಾರೀಖಿನ ಸಂಜೆಗೇ ಈ ಮೂವರೂ ಕ್ರಾಂತಿಕಾರಿಗಳನ್ನ ನೇಣಿಗೇರಿಸಲಾಯಿತು.23 ನೆ ಚಿಕ್ಕ ವಯಸ್ಸಿನಲ್ಲಿ ನಗುನಗುತ್ತಾ ನೇಣುಗಂಬಕ್ಕೆ ಏರಿದ ಭಗತ್ ಇಂದಿಗೂ ಕೋಟ್ಯಾಂತರ ಯುವಕರಲ್ಲಿ ದೇಶಭಕ್ತಿಯ ಕಿಚ್ಚನ್ನ ಹಚ್ಚುತ್ತ ರಾಷ್ಟ್ರಕಟ್ಟುವಲ್ಲಿ ಇಂದಿಗೂ ಸ್ಪೂರ್ತಿಯಾಗಿ ನಿಂತಿದ್ದಾನೆಂದರೆ ಅತಿಶಯೋಕ್ತಿಯಲ್ಲ.

* ಭಗತ್ ಸಿಂಗ್, ರಾಜಗುರು, ಸುಖದೇವರನ್ನ ನಿಜವಾಗಿಯೂ ಗಲ್ಲಿಗೇರಿಸಿ ಕೊಂದರಾ ಬ್ರಿಟಿಷರು?

ಆದರೆ ನಿಜವಾಗಿಯೂ ಆ ಮೂವರೂ ಕ್ರಾಂತಿಕಾರಿಗಳು ತಮ್ಮ ಪ್ರಾಣ ಭಾರತಮಾತೆಗೆ ಅರ್ಪಿಸಿದ್ದು ನೇಣಿಗೆ ಕೊರಳೊಡ್ಡಿಯಾ? ಅಥವ ಅವರನ್ನ ಬ್ರಿಟಿಷರು ಶೂಟ್ ಮಾಡಿ ಸಾಯಿಸಿದ್ದರಾ?

ಇಂಥದ್ದೊಂದು ಅನುಮಾನ ಅಥವ ಇತಿಹಾಸದ ಗರ್ಭದಲ್ಲಿ ಅಡಗಿಹೋಗಿರುವ ಸತ್ಯವನ್ನ Some Hidden Facts: Martyrdom of  Shaheed Bhagat Singh ಪುಸ್ತಕದಲ್ಲಿ ಬಿಚ್ಚಿಡಲಾಗಿದೆ.

ಬ್ರಿಟಿಷ್ ಅಧಿಕಾರಿಗಳು ರಾತ್ರೋ ರಾತ್ರಿ ಈ ಮೂವರೂ ಕ್ರಾಂತಿಕಾರಿಗಳನ್ನ ಗಲ್ಲಿಗೇರಿಸಲಾಗಿತ್ತಂತೆ.

ಇದಕ್ಕೆ ಬ್ರಿಟಿಷರು ಕೊಟ್ಟ ಹೆಸರೇ ‘Operation Trojan Horse’

ಗಲ್ಲಿಗೇರಿಸಿದ್ದು ಕೇವಲ ಭಗತ್ ಸಿಂಗ್, ರಾಜಗುರು, ಸುಖದೇವರ ಕುತ್ತಿಗೆ ಮೂಳೆ ಮುರಿದು ಅವರು ನಿಸ್ತೇಜಸ್ಥಿತಿ ತಲುಪಲಿ ಅನ್ನೋ ಉದ್ದೇಶ ಮಾತ್ರವಾಗಿತ್ತೇ ಹೊರತು ಅವರನ್ನ ಕೊಲ್ಲೋದಾಗಿರಲಿಲ್ಲ.

ಜಾನ್ ಸ್ಯಾಂಡರ್ಸನ್ನ ಇದೇ ಮೂವರು ಕ್ರಾಂತಿಕಾರಿಗಳು ಕೊಂದು ಬಿಸಾಡಿದ್ದರಲ್ವೇ ಅದಕ್ಕೆ ಆತನ ಸಂಬಂಧಿಕರಿಗೆ ಈ ಮೂವರೂ ಕ್ರಾಂತಿಕಾರಿಗಳ ಮೇಲೆ ಕೆಂಡದಂಥ ಕೋಪವಿತ್ತು.

ಆ ಮೂವರನ್ನೂ ಶೂಟ್ ಮಾಡಿ ಕೊಂದು ತನ್ನ ಅಳಿಯನ revenge ತೀರಿಸಿಕೊಳ್ಳಲು ಜಾನ್ ಸ್ಯಾಂಡರ್ಸನ್ ಸಂಬಂಧಿಕರು ಭಗತ್ ಸಿಂಗ್, ರಾಜಗುರು,
ಸುಖದೇವರನ್ನ ಕೇವಲ ಅವರ ಕುತ್ತಿಗೆ ಮೂಳೆ ಮುರಿದು ನಿಸ್ತೇಜ ಸ್ಥಿತಿ ತಲುಪಿಸಲು ಅವರಿಗೆ ನೇಣುಗಂಬಕ್ಕೇರಿಸಲಾಗಿತ್ತು. ನಂತರ ಕೆಲ ಸೆಕೆಂಡುಗಳ ನಂತರ ಇನ್ನೂ ಜೀವಂತವಾಗಿದ್ದ ಆ ಮೂವರನ್ನೂ ನೇಣುಗಂಭದಿಂದ ಕೆಳಗಿಳಸಿ ರಾತ್ರೋ ರಾತ್ರಿ ಮರದ ದಿಮ್ಮಿಗಳಿಂದ ತುಂಬಿದ್ದ ಲಾರಿಗೆ ಈ ಮೂವರನ್ನೂ ತುಂಬಿ ಲಾಹೋರ್ ಕಂಟೋನ್ಮೆಂಟ್ ನ ರಹಸ್ಯ ಸ್ಥಳಕ್ಕೆ ತರಲಾಯಿತು.

ಮೂವರಲ್ಲಿ ಭಗತ್ ಸಿಂಗರಿಗೆ ಪ್ರಜ್ಞೆ ಬಂದಿದ್ದನ್ನ ಕಂಡ ಪಂಜಾಬಿನ ಗವರ್ನರ್ ಆಗಿದ್ದ ಸ್ಯಾಂಡರ್ಸನ್ ಮಾವ “Death Squad” ಮೂಲಕ ಭಗತ್ ಸಿಂಗರ ತಲೆ
ಹಾಗು ಎದೆಗೆ ಗುಂಡಿಟ್ಟು ಸಾಯಿಸಿದ. ನಂತರ ಇನ್ನುಳಿದ ಇಬ್ಬರನ್ನೂ ಶೂಟ್ ಮಾಡಿ ಸಾಯಿಸಲಾಯಿತು.

ಆದರೆ ನಂತರ ಅವರ ಪೋಸ್ಟಮಾರ್ಟಮ್ ಆದರೆ ಈ ಸುದ್ಧಿ ಹೊರಗೆ ಬಂದು ಜನ ದಂಗೆಯೇಳಬಹುದಂತ ಜನರ ದಿಕ್ಕು ತಪ್ಪಿಸಲು ‘ಹುಸ್ಸೇನಿವಾಲಾ’ ಪ್ರದೇಶದಲ್ಲಿ ಅಂತ್ಯಕ್ರಿಯೆ ಮಾಡಿರುವಂತೆ ಜನರನ್ನ ನಂಬಿಸಲಾಯಿತು

ಆದರೆ ಈ ಮೂವರ ಶವಗಳನ್ನೂ ರಾವಿ ಸಟ್ಲೇಜ್ ನದಿಯ ತಟದಲ್ಲಿ ಸುಡಲಾಗಿತ್ತು.

ಈ ಸುದ್ದಿ ತಿಳಿದ ಭಗತ್ ಸಿಂಗ್ ಸಹೋದರಿ ರಾವಿ ಸಟ್ಲೇಜ್ ನದಿ ತೀರಕ್ಕೆ ಹೋಗಿ ಅರ್ಧಂಬರ್ದ ಸುಟ್ಟ ಶವಗಳನ್ನ ನೋಡಿದಾಗ ಆಕೆಗೆ ಕಂಡಿದ್ದು ಉದ್ದನೆಯ ಕೈ
ಮೂಳೆ, ಆ ಮೂವರೂ ಕ್ರಾಂತಿಕಾರಿಗಳಲ್ಲಿ ಎತ್ತರವಾಗಿದ್ದವನೇ ತನ್ನ ತಮ್ಮನಂತ ತಿಳಿದಿದ್ದ ಭಗತ್ ಸಹೋದರಿ ಆ ಮೂಳೆ ಹಾಗು ಕಳೆಬರವನ್ನ ತೆಗೆದುಕೊಂಡು
ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆ ಮಾಡಿ ಮುಗಿಸಿದ್ದರು. ಈ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನ ಪಾಲ್ಗೊಂಡು ಭಗತ್ ಸಿಂಗ, ರಾಜಗುರು, ಸುಖದೇವರನ್ನ ನೆನೆದು
ಕಣ್ಣೀರಿಟ್ಟಿದ್ದರಂತೆ.

ಆದರೆ ಈ ಸುದ್ದಿ ಮಾತ್ರ ಹೊರಬರದಂತೆ ಬ್ರಿಟಿಷ್ ಅಧಿಕಾರಿಗಳು ನೋಡಿಕೊಂಡಿದ್ದರು. ಸ್ವಾತಂತ್ರ್ಯ ಸಿಕ್ಕ ನಂತರವೂ ಈ ಸುದ್ದಿ ನಮಗೆ ತಿಳಿದಿರಲೇ ಇಲ್ಲ.

ಭಗತ್ ಸಿಂಗನ ಕುರಿತಾದ ಮಾಹಿತಿಗಳನ್ನು Some Hidden Facts: Martyrdom of Shaheed Bhagat Singh ಪುಸ್ತಕದಲ್ಲಿ ಕಾಣಬಹುದು.

ಹೀಗೆ ನಮ್ಮಿಂದ ಕಣ್ಮರೆಯಾಗಿ ಬ್ರಿಟಿಷರ ಚಿತ್ರಹಿಂಸೆಯಿಂದ ಕೊನೆಯುಸಿರೆಳೆದಿದ್ದ ಭಗತ್ ಸಿಂಗ್ ಇಂದಿಗೂ ನಮ್ಮೆಲ್ಲರ ಮನದಲ್ಲಿ ಜೀವಂತವಾಗಿದ್ದಾರೆ.

ಇಂದು ಅವರ 111ನೆಯ ಜನ್ಮ ದಿನ, ಅವರ ಆದರ್ಶಗಳನ್ನ ಮೈಗೂಡಿಸಿಕೊಂಡು ನಾವು ಕೂಡ ದೇಶಕ್ಕಾಗಿ ಪ್ರಾಣ ಕೊಡುವುದು ಬೇಡ, ಕನಿಷ್ಠಪಕ್ಷ ದೇಶಕ್ಕಾಗಿ ಬದುಕೋಣ.

ಜೈ ಭಗತ್ ಜೀ!!!

– Vinod Hindu Nationalist

Tags

Related Articles

Close