ಪ್ರಚಲಿತ

ಇಂಧನ ಕ್ಷಮತೆ ತೋರುವ ಚಾಲಕರಿಗೆ 10 ಗ್ರಾಂ ಚಿನ್ನದ ಪದಕ.. ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದೆ ಡಿಸಿಎಂ ಲಕ್ಷ್ಮಣ ಸವದಿ‌ಯವರ ಹಲವು ಮಹಾತ್ವಾಕಾಂಕ್ಷಿ ಯೋಜನೆಗಳು…

ಕರ್ನಾಟಕದ ಉಪಮುಖ್ಯಮಂತ್ರಿ, ಸಾರಿಗೆ ಸಚಿವರು ಆಗಿರುವ ಶ್ರೀಯುತ ಲಕ್ಷ್ಮಣ ಸವದಿ ಅವರ ಹಲವು ಮಹತ್ವಾಕಾಂಕ್ಷಿ ಯೋಜನೆಗಳು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದೆ. ಅದೂ ಕೂಡಾ ಕೊರೊನಾ ಸಂಕಟದ ಮಧ್ಯೆ!

ವಾಹನಗಳು ಪೆಟ್ರೋಲಿಯಂ ಇಂಧನ ಹೆಚ್ಚು ಬಳಸುವುದರಿಂದ ಸಾರಿಗೆ ಇಲಾಖೆಗೆ ಹೆಚ್ಚು ಹೊರೆಯಾಗುತ್ತದೆ. ಈ ನಿಟ್ಟಿನಲ್ಲಿ ಇಂಧನ ಬಳಕೆ ಕಡಿಮೆ ಮಾಡುವ ನಿಟ್ಟಿನಲ್ಲಿ ನಾಲ್ಕು ಸಾರಿಗೆ ನಿಗಮಗಳಲ್ಲಿ ಪ್ರತಿ ತಿಂಗಳು ಅತಿ ಹೆಚ್ಚು ಇಂಧನ ಕ್ಷಮತೆ ತೋರುವ ಚಾಲಕರಿಗೆ 10 ಗ್ರಾಂ ವೈಯಕ್ತಿಕವಾಗಿ ಚಿನ್ನದ ಪದಕ ನೀಡುವುದಾಗಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಘೋಷಿಸಿದ್ದಾರೆ.

 

ಈ ಬಗ್ಗೆ ನಾಲ್ಕು ಸಾರಿಗೆ ಸಂಸ್ಥೆಗಳ ವ್ಯವಸ್ಥಾಪಕ ವಿರ್ದೇಶಕರು ಹಾಗೂ 41 ವಿಭಾಗೀಯ ನಿಯಂತ್ರಣಾಧಿಕಾರಿಗಳೊಂದಿಗೆ ವಿಡಿಯೊ ಸಂವಾದ ನಡೆಸಿದ‌ ಸವದಿ ಈ ಮಹತ್ವಪೂರ್ಣ ಯೋಜನೆಯನ್ನು ಘೋಷಿಸಿದರು.

ನಾಲ್ಕು ಸಾರಿಗೆ ನಿಗಮಗಳಲ್ಲಿ ಅತಿ ಹೆಚ್ಚು ಇಂಧನ ಕ್ಷಮತೆ ತೋರುವ ಒಬ್ಬ ಚಾಲಕನಿಗೆ ಕಾರ್ಮಿಕ ದಿನಾಚರಣೆ ಪ್ರಯುಕ್ತ ಸಾರಿಗೆ ಇಲಾಖೆಯಿಂದ 10 ಗ್ರಾಂ ಚಿನ್ನದ ಪದಕ ನೀಡುವುದಾಗಿ ತಿಳಿಸಿದರು.

ಲಾಕ್ ಡೌನ್‌ನಿಂದಾಗಿ ಸಾರಿಗೆ ಸಂಸ್ಥೆಗಳು ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿ ಎದುರಿಸುತ್ತಿದೆ. ನಾವೆಲ್ಲರೂ ಮುಂದಿನ ದಿನಗಳಲ್ಲಿ ತಂಡವಾಗಿ ಕರ್ತವ್ಯ ನಿರ್ವಹಿಸಿ, ಪರಿಸ್ಥಿತಿ ಯನ್ನು ನಿಭಾಯಿಸಲು ಸಮರ್ಥರಾಗಿರಬೇಕು . ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಹೇಳಿದರು.

ಪದಕ ಬಹುಮಾನ ಯೋಜನೆಯ ಬಗ್ಗೆ ಈಗಾಗಲೇ ದೇಶದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಇದರ ಬಗ್ಗೆ ಹಲವು ರಾಜ್ಯಗಳು ಉತ್ಸುಹವಾಗಿದ್ದು, ತನ್ನ ರಾಜ್ಯದಲ್ಲೂ ಇದನ್ನು ಜಾರಿಗೊಳಿಸಲು ಮುಂದಾಗಿದ್ದಾರೆ. ಯಾಕೆಂದರೆ ಒಂದು ವಾಹನ ಕಡಿಮೆ ಪಕ್ಷ ದಿನದಲ್ಲಿ 1 ಲೀಟರ್ ಇಂಧನ ಉಳಿಸಿದರೂ ರಾಜ್ಯಾದ್ಯಂತ ಲಕ್ಷಾಂತರ ವಾಹನಗಳಲ್ಲಿ ಲಕ್ಷಾಂತರ ಲೀಟರ್ ಇಂಧನ ಉಳಿಕೆಯಾಗುತ್ತದೆ. ಸರಕಾರಕ್ಕೆ ಇದರಿಂದ ತಿಂಗಳ ಲೆಕ್ಕದಲ್ಲಿ ಕೋಟ್ಯಂತರ ರೂ. ಲಾಭವಾಗುತ್ತದೆ‌. ಇದು ಸವದಿ ಅವರ ದೂರದೃಷ್ಟಿಗೆ ಸಾಕ್ಷಿ.

ಫೀವರ್ ಕ್ಲಿನಿಕ್ ಬಸ್

ಇಷ್ಟಲ್ಲದೆ ಇಡೀ ದೇಶವೇ ಮೆಚ್ಚುವಂಥಾ ಕಾರ್ಯಗಳನ್ನು ಮಾಡಿ ಸಾರಿಗೆ ವ್ಯವಸ್ಥೆಗೆ‌ ಒಂದು ಹೊಸ ಭಾಷ್ಯ ಬರೆದಿದ್ದಾರೆ. ಅದೇ`ಮೊಬೈಲ್ ಫೀವರ್ ಕ್ಲಿನಿಕ್ ಬಸ್’. ಈ ವ್ಯವಸ್ಥೆಗೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸಿದ್ದು, ಎಲ್ಲಾ ರಾಜ್ಯಗಳು ಇದನ್ನು ಪಾಲಿಸತೊಡಗಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೇತೃತ್ವದಲ್ಲಿ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಈ ವ್ಯವಸ್ಥೆ ಜಾರಿಯಾಗುತ್ತಿದ್ದಂತೆ ಕೆಲವೇ ದಿನಗಳಲ್ಲಿ ಕೆಲವೇ ದಿನಗಳಲ್ಲಿ ಪಾಲನೆಯಾದ ಕೀರ್ತಿಯೂ ಸಾರಿಗೆ ಇಲಾಖೆಗೆ ಸಲ್ಲುತ್ತದೆ. ಪ್ರಮುಖವಾಗಿ ಗ್ರಾಮೀಣ ಪ್ರದೇಶಗಳನ್ನು ಕೇಂದ್ರೀಕರಿಸಿ ಸಂಚರಿಸಲಿದೆ.

ಸೋಂಕು ಕಂಡಬಂದಿರುವ ಅಥವಾ ಸೋಂಕಿತರ ಸಂಪರ್ಕಕ್ಕೆ ಬಂದವರು ಅನುಮಾನಗಳಿದ್ದರೆ ಈ ಬಸ್‌ಗಳು‌ ನೆರವಿಗೆ ಬರುತ್ತದೆ.‌ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸಂಚರಿಸಿ ತಪಾಸಣೆ ನಡೆಸುತ್ತದೆ.

ಈ ಬಸ್ಸಿನಲ್ಲಿ ಓರ್ವ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಇರುತ್ತಾರೆ. ಜ್ವರ, ನೆಗಡಿ, ಕೆಮ್ಮು ಹಾಗೂ ಸಕ್ಕರೆ ಕಾಯಿಲೆಗೆ ಇವರು ಚಿಕಿತ್ಸೆ ನೀಡಲಿದ್ದಾರೆ. ಕೊರೊನಾ ಲಕ್ಷಣ ಕಂಡುಬಂದರೆ ಅವರನ್ನು ಅಂಬ್ಯುಲೆನ್ಸ್ ಮೂಲಕ ಕೋವಿಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಪಾಸಣೆಗೆ ವ್ಯವಸ್ಥೆ ಮಾಡುತ್ತಾರೆ..

ಇದರ ವೈಶಿಷ್ಠ್ಯ:

ಈ ಬಸ್ ಎಲ್ಲೆಡೆ ಸಂಚರಿಸಿ ಜ್ವರ, ಕೆಮ್ಮು ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡವರನ್ನು ಇದರಲ್ಲಿ ಪರೀಕ್ಷಿಸಲಾಗುತ್ತದೆ. ಒಂದು ವೇಳೆ ಕೊರೊನಾ ಸೋಂಕಿನ ಲಕ್ಷಣ ಕಂಡುಬಂದರೆ ತಕ್ಷಣ ಅವರನ್ನು ಅಂಬುಲೆನ್ಸ್ ಮೂಲಕ ಕೊವೀಡ್ ಆಸ್ಪತ್ರೆಗೆ ಕಳುಹಿಸಿಕೊಡಲಾಗುತ್ತದೆ. ಓರ್ವ ಡಾಕ್ಟರ್, ನರ್ಸ್, ಗ್ರೂಪ್ ಡಿ ನೌಕರರು ಸಂಚಾರಿ ಫೀವರ್ ಅಲ್ಲಿ ಕೆಲಸ ನಿರ್ವಹಿಸುತ್ತಾರೆ. ಥರ್ಮಲ್ ಸ್ಕ್ಯಾನರ್, ರಕ್ತ ಪರೀಕ್ಷೆ, ರಕ್ತದ ಒತ್ತಡ ಪರೀಕ್ಷೆ ಮಾಡುವ ಯಂತ್ರ ಈ ಬಸ್ಸಿನಲ್ಲಿರುತ್ತದೆ.

ಫೀವರ್ ಕ್ಲಿನಿಕ್‍ಗಳು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ರವರೆಗೆ ಕಾರ್ಯ ನಿರ್ವಹಿಸುತ್ತವೆ . ಫೀವರ್ ಕ್ಲಿನಿಕ್‍ಗಳಲ್ಲಿ ಜ್ವರ , ಕಫ ಹಾಗೂ ಸ್ಯಾನಿಟೈಸಿಂಗ್ ಮಾಡಿಸಲು ವ್ಯವಸ್ಥೆ ಕಲ್ಪಿಸಲಾಗಿದೆ . ಒಂದೊಂದು ಕ್ಲಿನಿಕ್‍ಗಳಲ್ಲೂ ವೈದ್ಯಾಧಿಕಾರಿ , ಸುಶ್ರೂಶಕಿ , ಹಿರಿಯ ಹಾಗೂ ಕಿರಿಯ ಆರೋಗ್ಯ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಕ್ಲಿನಿಕ್‍ಗಳಲ್ಲಿ ನೇರವಾಗಿ ರೋಗಿಗಳ ಪರೀಕ್ಷೆ ಮಾಡುವವರಿಗೆ ಪಿ ಪಿ ಇ ಕಿಟ್ ನೀಡಲಾಗುತ್ತದೆ. ತಲೆಯಿಂದ ಕಾಲಿನವರೆಗೆ ರಕ್ಷಾ ಕವಚದಂತಿರುವ ವಸ್ತ್ರ ಧರಿಸಿಯೇ ಇವರು ಜ್ವರ , ನೆಗಡಿ , ಕೆಮ್ಮು ಇರುವವರ ಪರೀಕ್ಷೆ ಮಾಡುತ್ತಾರೆ.

ಕೊರೊನಾ ಅಲ್ಲದೆ ಬೇರೆ ಸಣ್ಣ ಪುಟ್ಟ ಕಾಯಿಲೆಗಳಿಗೆ ಜನರು ಫೀವರ್ ಕ್ಲಿನಿಕ್‍ಗೆ ಬರಬಹುದು. ಸ್ಯಾನಿಟೈಜರ್ , ಒಬ್ಬರಿಂದ ಒಬ್ಬರು ನಾಕಷ್ಟು ದೂರದಲ್ಲಿ ನಿಲ್ಲುವುದು ಮುಂತಾದ ಜಾಗರೂಕತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಕ್ಲಿನಿಕ್‍ಗೆ ಬರುವ ರೋಗಿಗಳಿಗೆ ಜ್ವರ ಇದ್ದಾಗ ಅವರಿಗೆ ಅಗತ್ಯವಾದ ಪ್ಯಾರಸಿಟಮಲ್ , ಓಆರ್‌ಎನ್ ಮತ್ತು ನೆಗಡಿಯ ಔಷಧಿಗಳನ್ನು ಸಿದ್ಧ ಮಾಡಿಟ್ಟುಕೊಳ್ಳಲಾಗಿದೆ. ಸಾಮಾನ್ಯ ಜ್ವರವಾದರೆ ಈ ಔಷಧಗಳನ್ನು ನೀಡಿ ಸ್ವಲ್ಪ ಸಮಯ ಕಾದು ನೋಡುವಂತೆ ತಿಳಿಸಲಾಗುತ್ತದೆ. ಪ್ರತಿಯೊಬ್ಬ ರೋಗಿಯ ಸಂಪೂರ್ಣ ವಿವರ ಪಡೆಯಲಾಗುತ್ತದೆ.

ವೈದ್ಯರಿಗೆ ಪ್ರತ್ಯೇಕ ಕ್ಯಾಬಿನ್, ಆಸನ ವ್ಯವಸ್ಥೆ, ಔಷಧಿ ಬಾಕ್ಸ್, ಕೈತೊಳೆದುಕೊಳ್ಳಲು ವಾಷ್ ಬೇಸಿನ್, ಸ್ಯಾನಿಟೈಸರ್, ಸೋಪ್ ಆಯಿಲ್, ಪ್ರತ್ಯೇತ ನೀರಿನ ವ್ಯವಸ್ಥೆ, ಫ್ಯಾನ್‌ಗಳನ್ನು ಅಳವಡಿಸಲಾಗಿದೆ
ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಫೀವರ್ ಕ್ಲಿನಿಕ್‌ಗಳನ್ನು ತೆರೆಯಲಾಗಿದೆ. ಇದು ನಿಜಕ್ಕೂ ಲಕ್ಷ್ಮಣ‌ ಸವದಿ ಅವರ ಕಾರ್ಯಕ್ಷಮತೆಗೆ ಸಾಕ್ಷಿ..

ವಲಸೆ ಕಾರ್ಮಿಕರನ್ನು ಹುಟ್ಟೂರಿಗೆ ಮರಳಿಸುವ ವ್ಯವಸ್ಥೆ:

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಬೇರೆ ಜಿಲ್ಲೆಗಳಿಂದ ತನ್ನೂರಿಗೆ ಮರಳಲು ಸಾಧ್ಯವಾಗದೆ ಉಳಿದಿರುವ ಕಾರ್ಮಿಕರನ್ನು ಹುಟ್ಟೂರಿಗೆ ಮರಳಿಸಲು ವ್ಯವಸ್ಥೆ ಕಲ್ಪಿಸಿದ್ದಾರೆ.

ಹುಟ್ಟೂರಿಗೆ ಮರಳಲಿರುವವರನ್ನು ಕೇವಲ ಒಂದು ಬಾರಿ ಒಂದು ಕಡೆಯ ಸಾರಿಗೆ ದರವನ್ನು ಮಾತ್ರ ವಿಧಿಸಿ ಅವರವರ ಗ್ರಾಮಗಳಿಗೆ ಸ್ಥಳಾಂತರಿಸುವ ಬಗ್ಗೆ ಮುಖ್ಯಮಂತ್ರಿಗೆ ಮನವಿ‌ ಮಾಡಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಇದಕ್ಕೆ ಅನುಮತಿ ನೀಡಿದ್ದರು. ಈ ಹಿನ್ನೆಲೆ ಶೀಘ್ರದಲ್ಲೇ ಅವರವರ ಹುಟ್ಟೂರಿಗೆ ಸ್ಥಳಾಂತರಿಸಲು ಸವದಿ ವ್ಯವಸ್ಥೆ ಮಾಡಿದ್ದಾರೆ. ಆಯಾಯ ಸ್ಥಳಗಳಲ್ಲಿ ಸಿಲುಕಿದ್ದ ಕಾರ್ಮಿಕರಿಗೆ ಮೂಲಭೂತ ವ್ಯವಸ್ಥೆಯನ್ನು ಸರಕಾರ ಕಲ್ಪಿಸಿತ್ತು ಎನ್ನುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ರಾಜ್ಯ ಸಾರಿಗೆಗೆ ಬಾಹ್ಯಾಕಾಶ ತಂತ್ರಜ್ಞಾನ ಬಳಕೆ

ರಾಜ್ಯ ಸಾರಿಗೆ ಇಲಾಖೆಗೆ ಹೊಸ ಕಾಯಕಲ್ಪ ನೀಡುವ ಸಲಯವಾಗಿ ಇಸ್ರೋ ತಂತ್ರಜ್ಞಾನ ಬಳಸಲು ಸಾರಿಗೆ ಸಚಿವರಾದ‌ ಲಕ್ಷ್ಮಣ ಸವದಿ ನಿರ್ಧರಿಸಿದ್ದಾರೆ.‌ ಅದಕ್ಕಾಗಿಯೇ ಸವದಿ ಅವರು ಇಸ್ರೋದ ಅಧ್ಯಕ್ಷ ಕೆ. ಶಿವನ್ ಅವರೊಂದಿಗೆ ಮಹತ್ವದ ಸಭೆ ನಡೆಸಿದರು.

ಇಸ್ರೋ ತಂತ್ರಜ್ಞಾನವನ್ನು ಪಡೆದು ಪ್ರಮುಖವಾಗಿ ಸಾರಿಗೆ ಇಲಾಖೆಯ ಕಾರ್ಯ ನಿರ್ವಹಣೆಯ ಗುಣಮಟ್ಟವನ್ನು ಮತ್ತಷ್ಟು ಪುನಶ್ಚೇತನಗೊಳಿಸುವುದು ಸಾರಿಗೆ ಸಂಸ್ಥೆಯ ಅನಗತ್ಯ ವೆಚ್ಚ‌ಕಡಿವಾಣ ಗೊಳಿಸುವುದು, ಪರಿಣಾಮಕಾರಿ ಸುರಕ್ಷಾ ಸಚಾರ ವ್ಯವಸ್ಥೆ ಇದರ ಮುಖ್ಯ ಉದ್ದೇಶ.

ಇಸ್ರೋ ತಂತ್ರಜ್ಞಾನವನ್ನು ಮುಖ್ಯವಾಗಿ ಕೆ.ಎಸ್.ಆರ್. ಟಿ. ಸಿ, ವಾಯವ್ಯ ಸಾರಿಗೆ ಸಂಸ್ಥೆ, ಈಶಾನ್ಯ ಸಾರಿಗೆ ಸಂಸ್ಥೆ, ಬಿ.ಎಂ.ಟಿ.ಸಿಗಳಲ್ಲಿ ಬಳಸಲು ನಿರ್ಧರಿಸಲಾಗಿದೆ.

ರಾಜ್ಯದಲ್ಲಿ ಸಾರಿಗೆ ಸಂಸ್ಥೆಗಳ ಬಸ್ ಹಾಗೂ ಸರಕು ಸಾಗಾಣಿಕೆಯ ವಾಹನಗಳ ಕಾರ್ಯದಕ್ಷತೆ ಹೆಚ್ಚಿಸುವುದು, ಪಾರದರ್ಶಕತೆ‌ ಕಾಯುವುದು, ಸಂಸ್ಥೆಗಳ ವೆಚ್ಚಗಳನ್ನು ಕಡಿಮೆ ಮಾಡಿ ಆದಾಯ ಹೆಚ್ಚಿಸುವ ಮಾರ್ಗೋಪಾಯ ಕಂಡುಕೊಳ್ಳಲು ಸವದಿ ಅವರು ಇಸ್ರೋ ಅಧ್ಯಕ್ಷರ ಜೊತೆ ಚರ್ಚಿಸಿದ್ದಾರೆ.

ಒಟ್ಟಿನಲ್ಲಿ ತಂತ್ರಜ್ಞಾನ ಅಳವಡಿಸಿ ಸುರಕ್ಷಾ ಸಂಚಾರ ಹಾಗೂ ಸಾರಿಗೆ ಆದಾಯ ಸೋರದಂತೆ ಲಾಭದಾಯಕವನ್ನಾಗಿಸುವ ಮಾರ್ಗೋಪಾಯವನ್ನು ಸವದಿ ಕಂಡುಹಿಡಿಯುತ್ತಿದ್ದಾರೆ.

ಇದೇ ರೀತಿ ಅನೇಕ ಜನನುರಾಗಿ ಕೆಲಸ ಮಾಡಿದ್ದಾರೆ. ಕೊರೊನಾದಂಥಾ ಸಂಕಷ್ಟದ ಸಂದರ್ಭದಲ್ಲಿಯೂ ಅತ್ಯುತ್ತಮವಾಗಿ ಕೆಲಸ ಮಾಡಿ ಇಡೀ ಜನತೆಯ ಮೆಚ್ಚುಗೆಯ ಮಂತ್ರಿಯಾಗಿದ್ದಾರೆ ಲಕ್ಷ್ಮಣ ಸವದಿ.

-ಗಿರೀಶ್

Tags

Related Articles

FOR DAILY ALERTS
Close