ಪ್ರಚಲಿತ

ಇಟಲಿಯಲ್ಲಿ ಕೇವಲ ಮೂರು ವಾರಗಳಲ್ಲಿ ಸಂಭವಿಸಿರುವ ಸಾವಿನ ಸಂಖ್ಯೆಯನ್ನು ನೋಡಿದಾಗ ಜನತಾ ಕರ್ಫ್ಯೂನ ಅನಿವಾರ್ಯತೆ ಎಷ್ಟಿದೆ ಎಂದು ಮನದಟ್ಟಾಗುತ್ತದೆ…

ಮಾ.22ರಂದು ಮೋದಿ ಜನತಾ ಕರ್ಪ್ಯೂಗೆ ಮೋದಿ ಕರೆ ನೀಡಿರುವುದಕ್ಕೆ ದೇಶಾದ್ಯಂತ ಬೆಂಬಲ ವ್ಯಕ್ತವಾಗುತ್ತಿದೆ. ಜನರು ಮನೆಯಿಂದ ಹೊರಬರದಂತೆ ತಡೆಯಲು ವ್ಯಾಪಕವಾಗಿ ಜನಜಾಗೃತಿ ನಡೆಸಲಾಗುತ್ತಿದೆ. ಮೋದಿ ಜನತಾ ಕರ್ಫ್ಯೂಗೆ ಕರೆ ನೀಡಲು ಕಾರಣವೇನು? ಕೊರೊನಾದಿಂದ ಇಟಲಿಯಲ್ಲಿ ಕೇವಲ ಮೂರು ವಾರಗಳಲ್ಲಿ ಸಂಭವಿಸಿರುವ ಸಾವಿನ ಸಂಖ್ಯೆಯನ್ನು ನೋಡಿದಾಗ ಜನತಾ ಕರ್ಫ್ಯೂನ ಅನಿವಾರ್ಯತೆ ಎಷ್ಟಿದೆ ಎಂದು ಮನದಟ್ಟಾಗುತ್ತದೆ.

ಚೀನಾದ ವುಹಾನ್ ನಗರದಲ್ಲಿ ಕಾಣಿಸಿದ ಕೊರೊನಾ ವೈರಸ್ ಇಷ್ಟರವರೆಗೆ 3225 ಮಂದಿಯನ್ನು ಬಲಿ ಪಡೆದಿದೆ. ಆದರೆ ಇಟಲಿಯಲ್ಲಿ 4032 ಮಂದಿಯನ್ನು ಬಲಿಪಡೆದಿದೆ. ಚೀನಾದಲ್ಲಿ 81 ಸಾವಿರ ಮಂದಿ ಕೊರೊನಾ ಸೋಂಕಿಗೀಡಾಗಿ 3225 ಮಂದಿ ಸಾವಿಗೀಡಾದರೆ ಇಟಲಿಯಲ್ಲಿ ಸೋಂಕಿಗೀಡಾದ 47 ಸಾವಿರ ಮಂದಿಯಲ್ಲಿ 4032 ಮಂದಿ ಸಾವಿಗೀಡಾಗಿದ್ದಾರೆ. ಚೀನಾದಲ್ಲಿ ಬಾಧಿಸಿದ ಅರ್ಧದಷ್ಟು ಮಂದಿಯಲ್ಲಿ ಇಟಲಿಯ ಇಷ್ಟೊಂದು ಪ್ರಮಾಣದಲ್ಲಿ ಸೋಂಕಿತರು ಸಾವಿಗೀಡಾಗಿದ್ದಾರೆ ಅಂದರೆ ಲೆಕ್ಕಾಚಾರ ಹಾಕುವಾಗ ಮರಣದ ಪ್ರಮಾಣ ಹೆಚ್ಚಿರುವುದು ಗಮನಕ್ಕೆ ಬರುತ್ತದೆ.

ನಿಖರವಾಗಿ ಹೇಳುವುದಾದರೆ ಇಟಲಿಯ ಕರೋನವೈರಸ್ ರೋಗಿಗಳಲ್ಲಿ ಸುಮಾರು ಎಂಟು ಶೇಕಡಾ ಸಾವನ್ನಪ್ಪಿದ್ದಾರೆ ಎನ್ನುವುದನ್ನು ಅಂದಾಜು‌ ಮಾಡಬಹುದು. ಭಾರತದಲ್ಲಿ 275 ಮಂದಿ ಸೋಂಕಿಗೀಡಾಗಿದ್ದು, 5 ಮಂದಿ ಮೃತಪಟ್ಟಿದ್ದಾರೆ. ಭಾರತ ಇಡೀ ಜಗತ್ತಲ್ಲಿ ಕೊರೊನ ಸೋಂಕಿತರ ದೇಶದಲ್ಲಿ 47ನೆಯ ಸ್ಥಾನದಲ್ಲಿದೆ.

ಲೆಕ್ಕಾಚಾರದ ಪ್ರಕಾರ, ಜರ್ಮನಿಯಲ್ಲಿ ಇದುವರೆಗೆ 20,000 ಪ್ರಕರಣಗಳು ಕಾಣಿಸಿದ್ದು 69 ಸಾವುಗಳನ್ನು ಕಂಡಿದೆ. ಒಟ್ಟು ಸೋಂಕಿನ ಪ್ರಮಾಣದ ಕೇವಲ 0.3 ರಷ್ಟು ಸಾವಿನ ಪ್ರಮಾಣವನ್ನು ಜರ್ಮನಿ ಹೊಂದಿದೆ. ಭಾರತದ ಸೋಂಕಿಗೀಡಾದವರಲ್ಲಿ ಶೇ.1ರಷ್ಟು ಪ್ರಮಾಣದಲ್ಲಿ ಸಾವಿನ ಸಂಖ್ಯೆ ಸಂಭವಿಸಿದೆ.

ಇಟಲಿಯಲ್ಲಿ ಸಾವಿನ ಸಂಖ್ಯೆ ಏರಲು ಕಾರಣವೇನು?

ಇಟಲಿಯ ಆರೋಗ್ಯ ಮಂತ್ರಿಯ ವೈಜ್ಞಾನಿಕ ಸಲಹೆಗಾರ ಪ್ರೊಫೆಸರ್ ವಾಲ್ಟರ್ ರಿಕಿಯಾರ್ಡಿ ಅವರ ಪ್ರಕಾರ, ಇಟಲಿಯಲ್ಲಿ ಸಾವಿನ ಸರಾಸರಿ ಆಯಸ್ಸು 67. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೃದ್ಧರಿದ್ದಾರೆ. ಇಟಲಿಯಲ್ಲಿ ಕೊರೊನಾ ಮೂರನೇ ಹಂತದಲ್ಲಿರುವುದರಿಂದ ಸುಲಭವಾಗಿ ಹರಡುತ್ತದೆ. ಒಂದು ವೇಳೆ ಇದು ವೃದ್ಧರಿಗೆ ತಗುಲಿದರೆ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ ಆಗುತ್ತದೆ. ವೃದ್ಧರು ಹಾಗು ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಈ ವಯಸ್ಸಿನವರು ಸುಲಭವಾಗಿ ತುತ್ತಾಗುತ್ತಾರೆ. ವೃದ್ಧರಲ್ಲಿ ಕಾಯಿಲೆ ಜಾಸ್ತಿ ಇರುವುದರಿಂದ ಕೊರೊನಾ ತಗುಲಿದರೆ ಈ ವಯಸ್ಸಿನವರು ಬೇಗ ಮೃತರಾಗುತ್ತಾರೆ. ಇಟಲಿಯಲ್ಲಿ ಕೊರೊನಾ ಸೋಂಕಿತರು ಬೇರೆ ಬೇರೆ ಕಾರಣಗಳಿಂದ ಮೃತರಾದರೂ ಅವರನ್ನು ಕೊರೊನಾದಿಂದಲೇ ಸಾವಿಗೀಡಾಗಿದ್ದಾರೆ ಎಂದು ಅಂದಾಜಿಸಲಾಗುತ್ತದೆ ಎನ್ನುವುದು ವಾಲ್ಟರ್ ರಿಕಿಯಾರ್ಡಿ‌ಅವರ ಅಭಿಪ್ರಾಯ.

ಇಟಲಿ ಆರಂಭದಲ್ಲಿ ಕೊರೊನಾದ ಬಗ್ಗೆ ತೀವ್ರ ನಿರ್ಲಕ್ಷ್ಯ ವಹಿಸಿತು. ಈ ನಿರ್ಲಕ್ಷ್ಯದಿಂದಲೇ ಕೊರೊನಾ ಅಲ್ಲಿ ಮೂರನೇ ಹಂತಕ್ಕೆ ತಲುಪಿ ಮರಣಮೃದಂಗ ಬಾರಿಸಿತು. ಚೀನಾದಲ್ಲಿ ಸರಾಸರಿ ಸಾವಿನ ಅಯಸ್ಸು 46 ಆಗಿರುವುದರಿಂದ ಇಟಲಿಗಿಂತ ಚೀನಾದಲ್ಲಿ ಸಾವಿನ ಪ್ರಮಾಣ ಕಡಿಮೆ ಆಗಿದೆ ಎನ್ನುವುದು ವಾಲ್ಟರ್ ರಿಕಿಯಾರ್ಡಿ ಅವರ ಅಭಿಪ್ರಾಯ ಆಗಿದೆ. ಕೊರೊನಾ ವೃದ್ಧರನ್ನು ಬಲಿಪಡೆಯುವುದು ಹೆಚ್ಚಾಗಿರುವ ಕಾರಣ ಭಾರತ ಈ ಬಗ್ಗೆ ಗಂಭೀರವಾಗಿ ಆಲೋಚಿಸುವಂತೆ ಮಾಡಿದೆ. ಯಾಕೆಂದು ಈ ಬಗ್ಗೆ ವಿಶ್ಲೇಷಿಸೋಣ..

ಭಾರತ:
ಭಾರತದಲ್ಲಿ ವ್ಯಕ್ತಿಗಳ ಸರಾಸರಿ ಆಯಸ್ಸು 68. ಅಂದರೆ ಭಾರತದಲ್ಲಿ ವೃದ್ಧರ ಸಂಖ್ಯೆ ಜಾಸ್ತಿ.‌ ಕಾಯಿಲೆಪೀಡಿತರ ಸಂಖ್ಯೆಯೂ ಇಲ್ಲಿ ಅಧಿಕವಾಗಿದೆ. ಭಾರತದ ಜನಸಂಖ್ಯೆಯೂ ಹೆಚ್ಚು. ಭಾರತದಲ್ಲಿ ನಗರ ಜನಸಾಂದ್ರತೆಯೂ ಹೆಚ್ಚು.

ಒಂದು ವೇಳೆ ಭಾರತದಲ್ಲಿ ಕೊರೊನಾ 3ನೇ ಹಂತಕ್ಕೆ ತಲುಪಿದರೆ ಇಲ್ಲಿ ಮರಣದ ಪ್ರಮಾಣವೂ ಹೆಚ್ಚಾಗಬಹುದು. ಯಾಕೆಂದರೆ ಇಲ್ಲಿ ವೃದ್ಧರ ಸಂಖ್ಯೆಯೂ ಹೆಚ್ಚು. ಇದು ಕೂಡಾ ವಿಶ್ವ ಆರೋಗ್ಯ ಸಂಸ್ಥೆಯ ಕಳವಳಕ್ಕೆ ಕಾರಣವಾಗಿದೆ.

ಒಂದು ವೇಳೆ ಕೊರೊನಾ ನಾಲ್ಕನೇ ಹಂತಕ್ಕೆ ಜಿಗಿದರೆ ಭಾರತದಲ್ಲಿ ಅದನ್ನು ನಿಯಂತ್ರಿಸುವುದು ಕಷ್ಟ. ಯಾಕೆಂದರೆ ಇಲ್ಲಿ ಜನಸಂಖ್ಯೆ ಹೆಚ್ಚು. ಜನರನ್ನು ದಿಗ್ಭಂಧನದಲ್ಲಿರಿಸುವುದು ಅಷ್ಟು ಸುಲಭವಲ್ಲ. ಭಾರತದ ಇಷ್ಟು ಪ್ರಮಾಣದ ಜನಸಂಖ್ಯೆಯ ಕಾರಣ ಎಲ್ಲರಿಗೂ ಸೂಕ್ತ ಚಿಕಿತ್ಸೆ ಕೊಡಲು ಸಾಧ್ಯವಿಲ್ಲ. ಆಸ್ಪತ್ರೆಗಳ ಸಂಖ್ಯೆ ಹೆಚ್ಚಿದ್ದರೂ ಈಪರಿಯ ಜನರಿಗೆ ಚಿಕಿತ್ಸೆ ಕೊಡಿಸುವಷ್ಟು ವಾರ್ಡ್‌ಗಳಿಲ್ಲ. ಅದಕ್ಕಾಗಿಯೇ ವಿಶ್ವ ಆರೋಗ್ಯ ಸಂಸ್ಥೆ ಭಾರತದ ಬಗ್ಗೆ ಕಳವಳ ವ್ಯಕ್ತಪಡಿಸಿರುವುದು.

ಜನತಾ ಕರ್ಫ್ಯೂನ ಅನಿವಾರ್ಯತೆ…

ನಾವು ಇಟಲಿಯಿಂದ ಪಾಠ ಕಲಿಯಬೇಕಾಗಿರುವುದು ಹೆಚ್ಚಿದೆ. ಯಾಕೆಂದರೆ ಕೊರೊನಾ ಈಗಾಗಲೇ ಭಾರತದಲ್ಲಿ ಎರಡನೇ ಹಂತದಲ್ಲಿದೆ. ಇಟಲಿಯ ನಿರ್ಲಕ್ಷ್ಯ ವೇ ಅಲ್ಲಿ ಕೊರೊನಾ ತಾಂಡವವಾಡಲು ಕಾರಣ ಎಂದು ಸ್ವತಃ ಒಪ್ಪಿಕೊಂಡಿದೆ. ಅದಕ್ಕಾಗಿಯೇ ಅದು ಭಾರತಕ್ಕೆ ಎಚ್ಚರವಿರುವಂತೆ ಸೂಚನೆ ನೀಡಿದೆ.

ಕೊರೊನಾ ವ್ಯಾಪಿಸುವುದನ್ನು ತಡೆಯುವ ಸಲುವಾಗಿಯೇ ಭಾರತದ ಪ್ರಧಾನಿ ಜನತಾ ಕರ್ಫ್ಯೂಗೆ ಕರೆ ನೀಡಿದ್ದಾರೆ. ಕೊರೊನಾ ವ್ಯಾಪಿಸಿದ ಮೇಲೆ ತಡೆಯುವುಕ್ಕಿಂತ ಅದು ಅದು ವ್ಯಾಪಿಸುವ ಮೊದಲೇ ತಡೆದರೆ ಭಾರತದಂಥಾ ರಾಷ್ಟ್ರದಲ್ಲಿ ಕೊರೊನಾ ನಿರ್ಮೂಲನೆಗೊಳಿಸಬಹುದು.

ಇಲ್ಲಿ ಮೋದಿಯ‌ ಜಾಣತನದ ಅರಿವಾಗುತ್ತದೆ. ಒಂದು ವೇಳೆ ಮೋದಿಯ ಸ್ಥಾನದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ನಮ್ಮನ್ನು ದೇವರೇ ಕಾಪಾಡಬೇಕಿತ್ತು.‌ ರೋಗಲಕ್ಷಣ ಕುಸಿಯುವಂತೆ ಮಾಡಿ ಕೊರೊನಾವನ್ನು ಸೊಣ್ಣೆಗೆ ತಂದು ನಿರ್ಮೂಲನೆಗೊಳಿಸಲು ಮೋದಿ ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿಯೇ ಮೋದಿಯನ್ನು ವಿಶ್ವ ಆರೋಗ್ಯ ಸಂಸ್ಥೆ ಪ್ರಶಂಸಿಸಲು ಕಾರಣ. ತನ್ನಿಂದಲೂ ಕೊರೊನಾ ಹರಡಲು ಸಾಧ್ಯವಿದೆ ಎಂಬ ಬಗ್ಗೆ ಜನರು ಮುಂಜಾಗ್ರತೆ ವಹಿಸಿ ಸ್ವಯಂಜಾಗೃತಿಗೊಳಿಸುವಂತೆ ಮೋದಿ ಭಾರತೀಯರನ್ನು ಹುರಿದುಂಬಿಸಿದ್ದಾರೆ. ಇದಕ್ಕಾಗಿ ಪ್ರತಿಯೊಬ್ಬರೂ ಜನತಾ ಕರ್ಫ್ಯೂಗೆ ಬೆಂಬಲ ಸೂಚಿಸಿ ಮೋದಿಯ ಕೊರೊನಾ ನಿರ್ಮೂಲನೆಗೆ ಸಾಥ್‌ ನೀಡಬೇಕಾಗಿದೆ.

-ಗಿರೀಶ್

Tags

Related Articles

FOR DAILY ALERTS
Close