ಪ್ರಚಲಿತ

ಇಟಲಿಯಿಂದ ಮಗಳನ್ನು ಕರೆತಂದ ಮೋದಿ‌ ನನಗೆ ತಂದೆ ಸಮಾನ: ಮೋದಿಯನ್ನು ದೂರುತ್ತಿದ್ದ ವ್ಯಕ್ತಿಯೊಬ್ಬ ಪ್ರಶಂಸಿಸಲು ಕಾರಣವೇನು?

ಕೊರೊನಾ ವೈರಸ್ ನಿಯಂತ್ರಣಕ್ಕೆ ಭಾರತ ಕೈಗೊಳ್ಳುತ್ತಿರುವ ಯಶಸ್ವಿ ಕ್ರಮಗಳ ಬಗ್ಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.‌

ವಿದೇಶಗಳಲ್ಲಿದ್ದ ಭಾರತೀಯರನ್ನ ವಾಪಸ್ ಕರೆತಂದು, ದೇಶದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಬೇಕಾದ ವ್ಯವಸ್ಥೆ ಹಾಗೂ ಮಂಜಾಗ್ರತಾ ಕ್ರಮಗಳನ್ನ ವಹಿಸುವುದ್ರಲ್ಲಿ ಭಾರತ ಪರಿಸ್ಥಿತಿಯನ್ನ ಉತ್ತಮವಾಗಿ ನಿಭಾಯಿಸುತ್ತಿದೆ.

ಇಷ್ಟೆಲ್ಲಾ ಪರಿಣಾಮಕಾರಿ ಕಾರ್ಯಕ್ರಮಗಳಿಂದ ವಿಶ್ವದಲ್ಲೇ ಅಧಿಕ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ಉತ್ತಮ ಬೆಳವಣಿಗೆಯೆಂದರೆ ಭಾರತದಲ್ಲಿ ಒಟ್ಟು ೧೭೭ ಸೋಂಕಿತರ ಪೈಕಿ ೧೫ ಮಂದಿ ಕೊರೊನಾದಿಂದ ಸಂಪೂರ್ಣ ಮುಕ್ತರಾಗಿದ್ದಾರೆ. ಹೆಚ್ಚಿನ ಮಂದಿ ಚಿಕಿತ್ಸೆಗೂ ಸ್ಪಂದಿಸುತ್ತಿದ್ದಾರೆ.

ಕೊರೊನಾದಿಂದ ಇಡೀ ಜಗತ್ತಲ್ಲಿ ಚೀನಾಕ್ಕಿಂತ ಹೆಚ್ಚು ತೊಂದರೆಗೀಡಾದ ದೇಶ ಇಟಲಿ. ಈ ದೇಶ ಸಂಪೂರ್ಣ ಲಾಕ್ ಡೌನ್ ಆಗಿದ್ದು, ಅಲ್ಲಿನ ಪರಿಸ್ಥಿತಿಯನ್ನು ಊಹಿಸಲೂ ಕಷ್ಟ.

ಈ‌ ನಡುವೆ ಇಟಲಿಯ ಮಿಲಾನ್‌ನಲ್ಲಿ ತಮ್ಮ ಮಗಳು ಸಿಲುಕಿಕೊಂಡಾಗ ತಾವು ಪಟ್ಟ ಪಾಡಿನ ಬಗ್ಗೆ ತಂದೆಯೊಬ್ಬರು ಭಾರತದ‌ ಬಗ್ಗೆ ನೀಡಿರುವ ಭಾವಾನಾತ್ಮಕ ಹೇಳಿಕೆ ಎಲ್ಲರ ಕಣ್ಣು ತೇವವಾಗುವಂತೆ ಮಾಡಿದೆ.

ಮಹಾರಾಷ್ಟ್ರ ಮೂಲದ ವಿದ್ಯಾರ್ಥಿನಿಯೊಬ್ಬರು ಇಟಲಿಯಲ್ಲಿ ಸಿಲುಕಿದ್ದರು . ಸದ್ಯ ಅವರನ್ನ ಭಾರತಕ್ಕೆ ವಾಪಸ್ ಕರೆತರಲಾಗಿದ್ದು , ಮೋದಿ ಸರ್ಕಾರದ ಈ ಕಾರ್ಯಕ್ಕೆ ವಿದ್ಯಾರ್ಥಿನಿಯ ತಂದೆ ಸುಜಯ್ ಕದಮ್ ಧನ್ಯವಾದ ಹೇಳಿದ್ದಾರೆ .

ಸ್ನಾತಕೋತ್ತರ ವಿದ್ಯಾಭ್ಯಾಸಕ್ಕಾಗಿ ಫೆಬ್ರವರಿ 4ರಂದು ನನ್ನ ಮಗಳು ಇಟಲಿಗೆ ಹೋಗಿದ್ದಳು , ಆದ್ರೆ ಕೊರೊನಾ ವೈರಸ್ ಹರಡುತ್ತಿದ್ದರಿಂದ ಆಕೆಯ ಕಾಲೇಜನ್ನ ಬಂದ್ ಮಾಡಲಾಯ್ತು .

ಫೆಬ್ರವರಿ 28ರಂದು ಕರೆ ಮಾಡಿದಾಗ , ತಾನು ಸುರಕ್ಷಿತವಾಗಿರೋದಾಗಿ ಹೇಳಿದ್ದಳು . ಹೀಗಾಗಿ ನಾವು ಆಕೆಯ ಬಾಡಿಗೆ ಅಗ್ರೀಮೆಂಟ್ ಅನ್ನು 4 ತಿಂಗಳ ಕಾಲ ಮಂದುವರೆಸಿದೆವು . ಆದ್ರೆ ಮಾರ್ಚ್ 10ರಂದು ಸೂಪರ್‌ಮಾರ್ಕೆಟ್ ಸೇರಿದಂತೆ ಸಂಪೂರ್ಣ ಲಾಕ್‌ಡೌನ್ ಆಯ್ತು .

ಮುಂದಿನ 15 ದಿನಗಳವರೆಗೆ ಸಾಕಾಗುವಷ್ಟು ಮಾತ್ರ ಆಹಾರ ತನ್ನ ಬಳಿ ಇದೆ ಎಂದು ನನ್ನ ಮಗಳು ಹೇಳಿದಳು . ಕೂಡಲೇ ಅಲ್ಲಿಂದ ಹೊರಡುವಂತೆ ಹೇಳಿದೆ . ಆದ್ರೆ ಆವೇಳೆಗೆ ಇಟಲಿ ಸರ್ಕಾರ , ಭಾರತಕ್ಕೆ ಪ್ರಯಾಣ ಮಾಡಲು ಸರ್ಟಿಫಿಕೇಷನ್ ಕೇಳಿತ್ತು . ಮಾರ್ಚ್ 12ರಂದು ನಾನು ಇಂಡಿಯನ್ ಎಂಬೆಸ್ಸಿ ವೆಬ್ ಸೈಟ್ ನೋಡಿದಾಗ ಮಿಲಾನ್‌ನಲ್ಲಿರೋ ಭಾರತೀಯ ರಾಯಭಾರ ಕಚೇರಿ ಕೂಡ ಬಂದ್ ಆಗಿದೆ ಅನ್ನೋದು ಗೊತ್ತಾಯ್ತು .

ನಂತರ ನಾನು ಇಂಡಿಯನ್ ಎಂಬೆಸ್ಬಿಯ 8 ಸಿಬ್ಬಂದಿಯ ಇ – ಮೇಲ್ ಅಡ್ರೆಸ್ ಪಡೆದುಕೊಂಡು , ನನ್ನ ಮಗಳು ಮಿಲಾನ್‌ನಲ್ಲಿ ಸಿಲುಕಿರುವ ಬಗ್ಗೆ ಮೇಲ್ ಕಳಿಸಿದೆ . ಬಳಿಕ ಮಗಳಿಂದ ಕರೆ ಬಂತು . ಇಂಡಿನ್ ಎಂಬೆಸ್ಸಿಯವರು ನನಗೆ ಕರೆ ಮಾಡಿದ್ರು ,ನಂತರ ನಾನು ಇಂಡಿಯನ್ ಎಂಬೆಸ್ಸಿಯ 8 ಸಿಬ್ಬಂದಿಯ ಇ – ಮೇಲ್ ಅಡ್ರೆಸ್ ಪಡೆದುಕೊಂಡು , ನನ್ನ ಮಗಳು ಮಿಲಾನ್‌ನಲ್ಲಿ ಸಿಲುಕಿರುವ ಬಗ್ಗೆ ಮೇಲ್ ಕಳಿಸಿದೆ .

ಬಳಿಕ ಮಗಳಿಂದ ಕರೆ ಬಂತು . ಇಂಡಿನ್ ಎಂಬೆಸ್ಸಿಯವರು ನನಗೆ ಕರೆ ಮಾಡಿದ್ರು , ಭಾರತಕ್ಕೆ ಬರ್ತಿದ್ದೀನಿ ಅಂತ ಹೇಳಿದಳು . ವಾವ್ . . ನಿಜ ಹೇಳಬೇಕು ಅಂದ್ರೆ , ನಾನು ಸಾಕಷ್ಟು ವರ್ಷಗಳಿಂದ ಭಾರತ ಸರ್ಕಾರವನ್ನ ದೂಷಿಸುತ್ತಿದ್ದೆ . ಕೊನೆಗೂ ಮೋದಿ ಸರ್ಕಾರ ತಂದೆಯ ಸಮಾನ ಅನ್ನೋದು ನನಗೆ ಅರಿವಾಯ್ತು . ನನ್ನ ಮಗಳು ಮಾರ್ಚ್15ರಂದು ಸುರಕ್ಷಿತವಾಗಿ ಭಾರತಕ್ಕೆ ವಾಪಸ್ ಬಂದಿದ್ದಾಳೆ . ದೆಹಲಿಯ ಐಟಿಬಿಪಿ ಆಸ್ಪತ್ರೆಯಲ್ಲಿದ್ದಾಳೆ . ಊಟ , ಚಿಕಿತ್ಸೆ ಎಲ್ಲವನ್ನೂ ಉಚಿತವಾಗಿ ನೀಡಲಾಗ್ತಿದೆ . . ” ಎಂದು ಅವರು ವಿವರಿಸಿದ್ದಾರೆ.

ಸದಾಕಾಲ‌ ಮೋದಿಯನ್ನು ದೂಷಿಸುತ್ತಾ ಕಾಲ‌ ಕಳೆಯುತ್ತಿದ್ದ ವ್ಯಕ್ತಿ ಇಂದು ಮೋದಿ ಸರಕಾರ ಮಾಡಿದ ಕಾರ್ಯತತ್ಪರತೆಗೆ ಮೂಕನಾಗಿದ್ದಾನೆ.

ಜೀಎಂ

Tags

Related Articles

FOR DAILY ALERTS
Close