ಅಂಕಣ

ಇಡೀ ಜಗತ್ತಿನಲ್ಲಿಯೇ 33% ಆರ್ಥಿಕತೆಯನ್ನು ಹೊಂದಿದ್ದ ಪ್ರಾಚೀನ ಭಾರತ ಇಂದು ಬಡರಾಷ್ಟ್ರವಾಗಲು ಕಾರಣವೇನು?!

ಇತಿಹಾಸ ಏನನ್ನಾದರೂ ಸಾಬೀತು ಪಡಿಸುವುದೇ ಆದರೆ, ಪ್ರಾಚೀನ ಭಾರತ ಅದೆಷ್ಟು ವೈಭವಯುತವಾಗಿತ್ತೆಂದು ಸಾಬೀತುಪಡಿಸುತ್ತದೆ! ಭಾರತ ಜಗತ್ತಿನಲ್ಲಿಯೇ ಅತಿ ಶ್ರೀಮಂತ ರಾಷ್ಟ್ರವಾಗಿತ್ತೆಂಬುದು ಇತಿಹಾಸ! ಆದರೆ, ವಾಸ್ತವವಾಗಿ ಭಾರತವನೆನ್ನುವುದು ಕೇವಲ ವಜ್ರ ವೈಢೂರ್ಯಗಳನ್ನಿಟ್ಟ ಶ್ರೀಮಂತ ರಾಷ್ಟ್ರವಾಗಿರಲಿಲ್ಲ, ಬದಲಿಗೆ ಭಾರತದ ಶ್ರೀಮಂತಿಕೆ ಅಡಗಿದ್ದದ್ದು ಭಾರತದ ಸನಾತನ ಸಂಸ್ಕೃತಿಯಲ್ಲಿ! ಹಿಂದುತ್ವದ ಹರಿತಗಳಲ್ಲಿ! ವೇದಗಳ ಸಾರದಲ್ಲಿ! ಸಾಮಾಜಿಕ ವ್ಯವಸ್ಥೆಯ ಸಡಗರದಲ್ಲಿ! ಜೊತೆ ಜೊತೆಗೆ ತನ್ನೊಳಗೆ ರತ್ನವನ್ನಡಗಿಸಿಟ್ಟುಕೊಂಡ ಭಾರತದ ಮೇಲೆ ಆಕ್ರಮಣವಾದದ್ದು ಕೇವಲ ಧರ್ಮಪ್ರಚಾರಕ್ಕೆ ಮಾತ್ರವಲ್ಲ! ಬದಲಾಗಿ, ಇಂತಹ ಅಮೂಲ್ಯ ಸಂಪತ್ತುಗಳ ಮೇಲಿನ ಆಸೆಯಿಂದಷ್ಟೇ!

ಭಾರತದಲ್ಲಿರುವಂತಹ ಪ್ರಾಕೃತಿಕ ಹವಾಮಾನ ವ್ಯವಸ್ಥೆ ಯಾವ ದೇಶದಲ್ಲಿದೆ ಹೇಳಿ?! ಆಹಾ! ಭಾರತದ ನೆಲದಲ್ಲಿರುವ ಹೊನ್ನೆಂಬ ಮಣ್ಣಿನ ಶಕ್ತಿಗೆ ಭಾರತದಲ್ಲಿ ಬರಗಾಲ ಎಂಬುದೇ ಗೊತ್ತಿರದ ಪದವಾಗಿತ್ತಷ್ಟೇ! ಭಾರತದ ಭೌಗೋಳಿಕ ಪ್ರಾಕೃತಿಕ ತಾಕತ್ತನ್ನು ಸ್ಟ್ರಾಬೋ (c. 63 BC – 3 BC) ಎಂಬ ಗ್ರೀಕ್ ಇತಿಹಾಸಕಾರನೊಬ್ಬ ಆತನ ಪುಸ್ತಕವಾದ ಜಿಯೋಗ್ರಫಿ – ||, 5, 12. ರಲ್ಲಿ “ಎಲ್ಲ ರಾಷ್ಟ್ರಗಳಿಗಿಂತ ಶ್ರೇಷ್ಠವಾದ ಹಾಗೂ ಸಮೃದ್ಧಯುತವಾದ ದೇಶ” ಎಂದೇ ವರ್ಣಿಸಿದ್ದ!

ಅರ್ನಾಲ್ಡ್ ಹರ್ಮನ್ ಲುಡ್ವಿಗ್ ಹೀರನ್ (1760 – 1842) ಹೇಳಿದ್ದೇನು ಗೊತ್ತೇ?! “ಭಾರತ ಆಕೆಯ ಪ್ರಾಚೀನ ಶ್ರೀಮಂತಿಕೆಯನ್ನು ಸಂಭ್ರಮಿಸಿದೆ!! ಭಾರತದ ಸಂಪತ್ತು, ವೈಭವ ಹಾಗೂ ಸಮೃದ್ಧಿ ಅಲೆಕ್ಸಾಂಡರ್ ನ ಕಣ್ಣು ಕುಕ್ಕಿತ್ತು! ಪರ್ಶಿಯಾದಿಂದ ಭಾರತದೆಡೆಗೆ ಹೊರಟ ಅಲೆಕ್ಸಾಂಡರ್ ತನ್ನ ಸೈನ್ಯಕ್ಕೆ “ನಾವು ಭಾರತವೆಂಬ ಬಂಗಾರವನ್ನು ಕೊಳ್ಳಲೇಬೇಕು” ಎಂದು ಹುರಿದುಂಬಿಸಿದ್ದ! ಸ್ವತಃ ಅಲೆಕ್ಸಾಂಡರನಿಗೂ ಭಾರತಕ್ಕೆ ಹೋಲಿಸಿದರೆ ತನ್ನಿಡೀ ಪರ್ಶಿಯಾ ಶೂನ್ಯ ಎಂದೆನಿಸಿಬಿಟ್ಟಿತ್ತು! ಚೇಂಬರ್ಸ್ ನ ಎನ್ಸೈ ಕ್ಲೋಪೀಡಿಯಾವೂ ಸಹ ‘ಭಾರತ ಅದೆಷ್ಟೋ ಯುಗಗಳವರೆಗೆ ಶ್ರೀಮಂತ ರಾಷ್ಟ್ರವಾಗುಳಿದಿತ್ತು’ ಎಂದಿತು! ಎನ್
ಸೈಕ್ಲೋಪೀಡಿಯಾದಲ್ಲಿ ‘ಹಿಂದೂಸ್ಥಾನ’ ವೆಂಬ ಲೇಖನ ಬರೆದವನಿಗೆ ಸ್ಪಷ್ಟವಾಗಿ ಹೋಗಿತ್ತು! ಭಾರತದ ಸ್ಥಾನ ಸಹಜವಾಗಿಯೇ ಶ್ರೀಮಂತ ರಾಷ್ಟ್ರವೆಂಬುದಾಗಿತ್ತೆಂದು ಮನವರಿಕೆಯಾಗಿತ್ತು!

ಮಿಲ್ಟನ್ ಅದಕ್ಕಾಗಿಯೇ ಭಾರತದ ಗುಣಗಾನ ಮಾಡಿದ್ದ!!

“High on a throne of royal state which far
outshone the wealth of Ormuz and of India
or where the goregeous east and richest hand
showers on her kings barbaric, pearl and gold.”

ಸೈತಾನ ತನ್ನ ಸಿಂಹಾಸನದಲ್ಲಿ ಕೂತಿದ್ದಾನೆ!

ಆತನ ವೈಭೋಗ ಪರ್ಶಿಯಾ ಹಾಗೂ ಭಾರತಕ್ಕಿಂತಲೂ ಮೀರಿದೆ!

ಪೂರ್ವದ ರಾಜಸಿಂಹಾಸನದ ವೈಭೋಗವೊಂದೀಗ ಕ್ರೂರತೆಯನ್ನೇ ಮೈ ಹೊದ್ದ ರಾಜನ ಮೇಲೆ ಮುತ್ತು ಬಂಗಾರಗಳನ್ನು ಸುರಿಯುತ್ತದೆ!

ಚಿನ್ನವನ್ನು ಬಿತ್ತುವ ಪಗೋಡಾ ಮರಗಳು!

1608 – 11 ರಲ್ಲಿ ಭಾರತಕ್ಕೆ ಬಂದ ವಿಲಿಯನ್ ಫಿಂಚ್ ಮೊದಲು ಭಾರತದ ದೇವಸ್ಥಾನಗಳ ಗುಮ್ಮಟ ನೋಡಿ ಪಗೋಡಾ ಮರಗಳೆಂದಿದ್ದ! ಅಜ್ಮೇರಾದ ಮೂರು ದೇಗುಲಗಳನ್ನು ವರ್ಣಿಸಿದ್ದ ಫಿಂಚ್ ” ಮೂರು ಅಭೂತಪೂರ್ವ ಪಗೋಡಾಗಳ ಕೆತ್ತನೆಯನ್ನು ಬಂಗಾರಗಳಿಂದ ಅದ್ಭುತವಾಗಿ ಅಲಂಕರಿಸಲಾಗಿದೆ! ಡೊಮಿಂಗೋ ಪೇಸ್ ಹಿಂದೂಸ್ಥಾನದ ಅತ್ಯಂತ ಶ್ರೇಷ್ಟ ಸಂಸ್ಥಾನವಾದ ವಿಜಯನಗರ ಸಾಮ್ರಾಜ್ಯದ ಶ್ರೀಮಂತಿಕೆಯ ಬಗ್ಗೆ ದಾಖಲಿಸಿದ್ದಾನೆ! ಸಾಮ್ರಾಜ್ಯದ ಹೊರಗೆ ನಿಂತು ನೋಡಿದ ಅವನಿಗೆ ಅದೆಷ್ಟೋ ಹೊನ್ನಿನಿಂದ ಅಲಂಕರಿಸಿದ್ದ ಅದೆಷ್ಟೋ ಪಗೋಡಗಳನ್ನು ಕಂಡ! ಅದರಲ್ಲಿ, ಕೃಷ್ಣದೇವರಾಯ ಕಟ್ಟಿಸಿದ್ದ ವಿಠ್ಠಲ ಸ್ವಾಮಿಯ
ಮಂದಿರವೊಂದು ಚಿನ್ನವನ್ನು ಹೊದ್ದು ನಿಂತಿತ್ತು!”

ಎಡ್ವರ್ಡ್ ಟೆರ್ರಿ, ಸೇಂಟ್ ಥಾಮಸ್ ರೋಯ್ ನ ಪಾದ್ರಿ, ಕಿಂಗ್ ಜೇಮ್ಸ್ ನ ಗುಪ್ತಚಾರ ನಗರಕೋಟದ ಮಂದಿರಗಳನ್ನು “ಪರಿಶುದ್ಧ ಚಿನ್ನದಲ್ಲಿ ಸ್ಥಾಪಿಸಿದ್ದ ಶ್ರೀಮಂತವಾದ ಮಂದಿರ”ಗಳೆಂದು ದಾಖಲಿಸಿದ್ದ! ಜೀನ್ ಥೆವೆನೋಟ್ ಎಂಬುವವನು ಬನಾರಸ್ ಹಾಗೂ ಪುರಿಯ
ಮಂದಿರಗಳ ನೋಡಿ ಉದ್ಗರಿಸಿದ್ದ! “ಚಿನ್ನವನ್ನೇ ಇಟ್ಟಿಗರಯನ್ನಾಗಿ ಮಾಡಿ ಕಟ್ಟಿಸಿರುವ ಇಂತಹ ಪ್ರದೇಶದ ಪಗೋಡಾಗಳು ಬೇರೆಲ್ಲ ಅದ್ಭುತಗಳ ಮುಂದೆ
ಮುಂಚೂಣಿಯಲ್ಲಿ ನಿಲ್ಲುತ್ತದೆ! ಭಾರತದ ಶ್ರೀಮಂತಿಕೆಯನ್ನು ಪ್ರತಿನಿಧಿಸುವ ಪಗೋಡಾಗಳಿವು!”

1500 ರಲ್ಲಿದ್ದ ಜಿಡಿಪಿ!!!

ಭಾರತದ ಮೊದಲ ಪ್ರಧಾನ ಮಂತ್ರಿಯಾಗಿದ್ದ ನೆಹರೂ, ತನ್ನ ‘Discovery Of India’ ದಲ್ಲಿ ಮಾತ್ರ ಒಮ್ಮೆ ಬ್ರಿಟಿಷರ ವಿರುದ್ಧ ಬರೆದಿದ್ದೆನ್ನಿಸುತ್ತೆ!

“ಭ್ರಷ್ಟಾಚಾರ, ಲಂಚಕೋರತನ, ಸ್ವಜನಪಕ್ಷಪಾತ, ಹಿಂಸಾಚಾರ ಹಾಗೂ ದುರಾಸೆ ಎಂಬುವುದು ಬ್ರಿಟಿಷ್ ಆಳ್ವಿಕೆಯ ಪ್ರಾರಂಭದ ಪೀಳಿಗೆಯಾಗಿತ್ತು!’ ನೆಹರೂ, ‘ಬ್ರಿಟಿಷ್ ಮಾಡಿದ ಲೂಟಿಕೋರತನ ಕಲ್ಪನೆಗೂ ಮೀರಿದ್ದು! ಅದೆಷ್ಟೆಂದರೆ, ಹಿಂದೂಸ್ಥಾನದ ‘ಲೂಟ್ ‘ ಎಂಬ ಹಿಂದಿ ಪದ ಆಂಗ್ಲ ಶಬ್ದಕೋಶದಲ್ಲಿ ಸೇರುವಷ್ಟು!

ಅದೆಷ್ಟೋ ಆಕ್ರಮಣಕಾರರು ಭಾರತದ ಸಂಪತ್ತನ್ನು ಹುಡುಕಿಕೊಂಡೇ ಬಂದಿದ್ದರು! 19 ನೇ ಶತಮಾನದ ತನಕವೂ ಶ್ರೀಮಂತವೆಂದು ಗುರುತಿಸಿಕೊಂಡಿದ್ದ ಭಾರತ, ಲೂಟಿಕೋರರಿಂದ ಬಡವಾಗಿ ಹೋಯಿತು!

ಆಗಲೇ, ‘ಪಗೋಡಾ ಮರವನ್ನಲುಗಾಡಿಸು ಎಂಬ ವ್ಯಂಗ್ಯವೊಂದು ಹುಟ್ಟಿದ್ದು. ಅದರರ್ಥ, ಭಾರತವನ್ನಲುಗಾಡಿಸು, ಚಿನ್ನ ಸಿಗುತ್ತದೆ ಎಂಬುದಾಗಿತ್ತು.’

ಭಾರತದ ಸಂಪತ್ತನ್ನು ಸ್ವತಃ ಮೊಘಲರೇ ವರ್ಣಿಸಿಬಿಟ್ಟಿದ್ದಾರೆ! ಯಾವಾಗ ಸುಲ್ತಾನ ಮಹಮ್ಮದ್ ಘಜ್ನವಿ ಸೋಮನಾಥ ದೇವಾಲಯವನ್ನು ಕೊಳ್ಳೆ ಹೊಡೆದನೋ, ಆಗ ಶಿವನ ಒಂದೇ ವಿಗ್ರಹದಿಂದ ಅತ್ಯಂತ ಬೆಲೆಬಾಳುವ ಸಾವಿರಾರು ವಜ್ರದ ಹರಳುಗಳು ಸಿಕ್ಕಿದ್ದವು!

ಭಾರತ ಹೆಸರುವಾಸಿಯಾಗಿದ್ದದ್ದೇ ವಜ್ರ ವೈಢೂರ್ಯದ ತವರು ಎಂದು! ಪ್ರಾಚೀನ ಭಾರತದಲ್ಲಿ ಲಭ್ಯವಿದ‌್ದಂತಹ ಅನೇಕಾನೇಕ ಹರಳುಗಳು, ವಜ್ರಗಳನ್ನೆಲ್ಲ ನೋಡಿದ ಪೆರಿಪ್ಲಸ್, ‘ಗ್ರೀಕರು ಬಂಗಾರದ ತುಂಡುಗಳನ್ನು ಭಾರತದಿಂದ ಕೊಳ್ಳುತ್ತಿದ್ದರು! ಮಲಬಾರಿನ ಕ್ಯಾಲಿಕಟ್ ತೀರದಲ್ಲಿ ಬರೀ ಮುತ್ತುಗಳ ಅಂಗಡಿಗಳ ಸಾಲನ್ನು ನೋಡಬಹುದಾಗಿತ್ತು! ಜೂಲಿಯಸ್ ಸೀಸರ್ ಸೆರ್ವಿಲಿಯಾ ಗೆ ಕೊಟ್ಟ ಮುತ್ತಿನ ಹಾರ, ಬ್ರುಟಸ್ ನ ತಾಯಿಗೆ, ಕ್ಲಿಯೋಪಾತ್ರಳ ಮುತ್ತಿನ ಕಿವಿಯೋಲೆ ಗಳನ್ನೆಲ್ಲ ಭಾರತದಿಂದ ಕೊಳ್ಳಲಾಗಿತ್ತು! ಜಗತ್ತಿನ ಅತ್ಯಂತ ಶ್ರೇಷ್ಟ ವಜ್ರಗಳ ತವರು ಭಾರತವಾಗಿತ್ತು! ‘ದ ಪಿಟ್’ ಎಂಬ ವಜ್ರ 136 ಕ್ಯಾರಟ್ ಗಳನ್ನು ಹೊಂದಿದ್ದರೆ, ಕೊಹಿನೂರ್ ವಜ್ರ106 ಕ್ಯಾರಟ್ ಗಳನ್ನು ತೂಗುತ್ತಿತ್ತು! ಈ ಎರಡೂ ಪ್ರಸಿದ್ಧ ವಜ್ರಗಳನ್ನು ಬ್ರಿಟಿಷರು ಭಾರತದಿಂದ ಲೂಟಿಗೈದಿದ್ದರಾದರೂ, ಇವತ್ತಿನವರೆಗೂ ಆ ವಜ್ರಗಳ ಹಿಂದಿರುವ ಯಾವುದೇ ಇತಿಹಾಸ ಲಭ್ಯವಾಗಿಲ್ಲ.’ ಎಂದ!

ಬೆಲೆಕಟ್ಟಲಾಗದ ನವಿಲಿನ ಸಿಂಹಾಸನ!!

ಕಳೆದ 1000 ವರ್ಷಗಳಲ್ಲಿ ಅತ್ಯಂತ ಬೆಲೆಬಾಳುವುದೇನಾದರೂ ಇದೆಯೇ?! 1150 ಕೆಜಿ ಚಿನ್ನದ ಹೊದಿಕೆ, 230 ಕೆಜಿ ಅತ್ಯಮೂಲ್ಯ ಹರಳುಗಳು, 1999 ರಲ್ಲಿ $804 ಮಿಲಿಯನ್ ಡಾಲರ್ ಗಳಷ್ಟು ಬೆಲೆ ಬಾಳುತ್ತದೆಂದು ಹೇಳಿತ್ತು! ಇವತ್ತು ಅದು $1000 ಮಿಲಿಯನ್ ಡಾಲರ್ ಗಳನ್ನು ಮೀರಿಸಿದೆ! ವಾಸ್ತವವಾಗಿ, ತಾಜ್ ಮಹಲ್ ಇದರ ಅರ್ಧದಷ್ಟು ಬೆಲೆ ಬಾಳುತ್ತದೆ! ಸಿಂಹಾಸನದ ಎರಡೂ ಬದಿಗಳಲ್ಲಿ ರತ್ನಗಳಿಂದ ತಯಾರಿಸಿದ ನವಿಲುಗಳಿದೆ! ಆ ಎರಡು ನವಿಲುಗಳ ಮಧ್ಯೆ ಪಚ್ಚೆ, ವಜ್ರ, ಮಾಣಿಕ್ಯ ಹಾಗೂ ಮುತ್ತುಗಳಿಂದ ತಯಾರಿಸಿದ ಮರವಿನ ಮೇಲೆ ಕುಳಿತ ನವಿಲಿದೆ!! ಐತಿಹಾಸಿಕ ಹರಳಾದ 186 ಕ್ಯಾರಟ್ ಗಳಿಂದ ಕೂಡಿದ ಕೊಹಿನೂರ್ ಈ ಸಿಂಹಾಸನವನ್ನಲಂಕರಿಸಿದೆ! ಅಲ್ಲದೇ 26,733 ಅತ್ಯಮೂಲ್ಯ ಹರಳುಗಳನ್ನು ಕೂರಿಸಲಾಗಿದೆ! ಮೆಟ್ಟಿಲುಗಳು ಬೆಳ್ಳಿಯದ್ದಾಗಿದ್ದರೆ, ಅದರ ಮೇಲಿನ ಕವಚವನ್ನು ಮಾಣಿಕ್ಯ ಹಾಗೂ ಪಚ್ಚೆಗಳಿಂದ ಬಂಗಾರದ ಲೇಪನವನ್ನಿಟ್ಟು ಕೂರಿಸಲಾಗಿದೆ! ಸಿಂಹಾಸನದ ಹಿಂದೆ, ನವಿಲಿನ ಗರಿಗಳೆಲ್ಲ ಅಲಂಕೃತವಾಗಿರುವುದು ನೀಲಮಣಿ, ರತ್ನ ಹಾಗೂ ವೈಢೂರ್ಯದಿಂದ! ಈ ಸಿಂಹಾಸನವೊಂದನ್ನು ತಯಾರು ಮಾಡಲು ತೆಗೆದುಕೊಂಡದ್ದು ಕನಿಷ್ಟ ಏಳು ವರ್ಷಗಳು ಹಾಗೂ ಅವತ್ತಿನ ಬೆಲೆ ಸರಾಸರಿ 500 ಕೋಟಿ!

Image result for peacock throne

ಅರಬ್ ರಿಂದ ಬ್ರಿಟಿಷ್ ರ ವರೆಗೂ ಸಹ ಭಾರತದೊಳ ಕಾಲಿಡಲು ಪ್ರೇರೇಪಿಸಿದ್ದೇ ಈ ಶ್ರೀಮಂತಿಕೆ!

ಭಾರತ ಮೊದಲು ಜಗತ್ತಿನಲ್ಲಿಯೇ ಅತ್ಯಂತ ಶ್ರೀಮಂತ ರಾಷ್ಟ್ರವಾಗಿತ್ತು!!!

ಜಬೇಝ್ ಟಿ. ಸುಂದರ್ ಲಾಂಡ್ (1842 – 1936), ಭಾರತದ ಮಾಜಿ ರಾಷ್ಟ್ರಪತಿ ಭಾರತದ ಸಂಸ್ಕೃತಿಯ ಬಗ್ಗೆ ವಾಸ್ತವದ ಮಾತುಗಳನ್ನಾಡಿದ್ದರು!

ಸ್ವದೇಶಿ ತಯಾರಿಕೆಯನ್ನು ನಾಶಗೊಳಿಸಿದ್ದರ ಪರಿಣಾಮ ಭಾರತ ದಾರಿದ್ರ್ಯವನ್ನಪ್ಪಿತು! ಬ್ರಿಟಿಷ್ ಕಾಲಿಟ್ಟ ಪ್ರಾರಂಭದಲ್ಲಿ ಭಾರತ ಸಮೃದ್ಧಭರಿತವಾಗಿತ್ತು! ಅದೇ, ಬ್ರಿಟಿಷರನ್ನು ಭಾರತದ ತೀರಗಳಿಗೆ ಆಹ್ವಾನಿಸಿತು!”

ಆಕೆಯ ಆರ್ಥಿಕತೆಗೆ ಕಾರಣವಾಗಿದ್ದು ಭಾರತೀಯರು ತಯಾರಿಸುತ್ತಿದ್ದ ವಸ್ತುಗಳಿಂದ! ಅದಲ್ಲದೇ, ಹತ್ತಿಯ ವಸ್ತುಗಳು, ರೇಷ್ಮೆ,. . ಹೀಗೆಲ್ಲ ಅದೆಷ್ಟೋ ಕೈಗಾರಿಕಾ ತಯಾರಿಕೆಗಳು ಯುರೋಪಿನ ಉತ್ತರ ಆಫ್ರಿಕಾದ ತನಕವೂ ವಹಿವಾಟು ನಡೆಸುತ್ತಿತ್ತು! ಏನಾಯಿತು ಬರುಬರುತ್ತಾ?! ಅದೆಷ್ಟೋ ಹಳ್ಳಿಗಳಲ್ಲಿ ಕಾಮಗಾರಿಗಳು ನಿಂತವು! ಜನ ಎಲ್ಲೆಲ್ಲಿಗೋ ವಲಸೆ ಹೋಗ ತೊಡಗಿದರು! ಬ್ರಿಟಿಷರ ಮಾರುಕಟ್ಟೆಗಳಿಗೆ ಹೊಂದಲಾಗದೇ ಭಾರತೀಯರು ಕೈ ಕಟ್ಟಿ ಕುಳಿತರು! ಯಾರನ್ನು ದೂಷಿಸುವುದು?! ಭಾರತವೇನಾದರೂ ಎಚ್ಚೆತ್ತಿದ್ದರೆ ಅದಕ್ಕೊಂದು ಶಕ್ತಿ ಆಸರೆಯಾಗಿ ನಿಲ್ಲುತ್ತಿತ್ತು! ಹಾಗಾಗಲೇ ಇಲ್ಲ, ಭಾರತ ಗೆದ್ದವರ ಅಡಿಯಾಳಾಗಿ ಬದುಕತೊಡಗಿತು “

ಆಂಗಸ್ ಮ್ಯಾಡಿಸನ್ ಎಂಬ ಆರ್ಥಿಕ ತಜ್ಞನ ಪ್ರಕಾರ ವಿಶ್ವದ ಆರ್ಥಿಕತಯಲ್ಲಿ, ಸಹಸ್ರಾರು ವರ್ಷಗಳನ್ನಿಟ್ಟು ನೋಡಿದಾಗ, ಯಾವಾಗ ಚೀನಾ 18ನೇ ಶತಮಾನದ ತನಕವೂ ಸ್ಪರ್ಧೆ ನೀಡಿತೋ, ಭಾರತಕ್ಕೆ ಹೊಂದಿಕೊಂಡಿರುವ ಪ್ರದೇಶಗಳೆಲ್ಲವೂ ಸಹ 16 ನೇ ಶತಮಾನದ ಪ್ರಾರಂಭದ ತನಕವೂ ಕೂಡ, ಜಗತ್ತಿನ ಒಟ್ಟು ದೇಸೀ ಉತ್ಪನ್ನಗಳಲ್ಲಿ ಬಹುಪಾಲನ್ನು ಹೊಂದಿತ್ತು!

‘India, the Silicon Jewel of the East” (Digiatal Journal, May 13, 2004) ಎಂಬ ಲೇಖನದಲ್ಲಿ, ಪಾಲ್ ವಿಲಿಯಮ್ ರಾಬರ್ಟ್ ಎಂಬ
ಭಾರತದ ಕೃಷಿ ಪದ್ಧತಿಗಳೆಲ್ಲವನ್ನೂ ಉಳಿದಂತಹ ರಾಷ್ಟ್ರಗಳ ಕೃಷಿ ಪದ್ಧತಿಗೆ ಹೋಲಿಸಿದರೆ ಬಹಳ ಉತ್ತಮವಾಗಿದೆ. ಪ್ರತಿ ಹಂತದ ಕೃಷಿಯಲ್ಲಿಯೂ, ರೈತರು
ಉತ್ತಮವಾದ ಇಳಿವರಿಯನ್ನು ಪಡೆಯುತ್ತಿದ್ದಾರಲ್ಲದೇ, ಮಾರುಕಟ್ಟೆಯಲ್ಲಿಯೂ ಉತ್ತಮವಾದ ಬೆಲೆಯನ್ನೇ ಹೊಂದುತ್ತಿದ್ದಾರು! ಆದರೆ, ಕೇವಲ ಹತ್ತಿ, ಅಥವಾ ರೇಷ್ಮೆಯ ಮಾರುಕಟ್ಟೆಯಲ್ಲದೇ, ಉಳಿದಂತಹ ಕೈಗಾರಿಕೆಗಳಲ್ಲಿಯೂ ಆದ ಬದಲಾವಣೆಗಳಿಂದ, ಪದ್ಧತಿಗಳ ಮಾರ್ಪಾಡಿನಿಂದ ಆರ್ಥಿಕತೆಯಲ್ಲಿ ಉಳಿತಾಯವಾಗತೊಡಗಿದೆ.”

18 ನೇ ಶತಮಾನದಿಂದ ಹತ್ತೊಂಬತ್ತನೇ ಶತಮಾನದವರೆಗೂ ಸಹ, ಭಾರತ ಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶೇ.24.4% ಪಾಲುಗಳನ್ನು ಹೊಂದಿದ್ದನ್ನು ಆರ್ಥಿಕ ತಜ್ಞ ಪಾಲ್ ಬೈರೋಚ್ ಧೃಢೀಕರಿಸಿದಷ್ಟೇ! ಅಲ್ಲದೇ, ರೇಷ್ಮೆ ಹಾಗೂ ಹತ್ತಿಯ ವಸ್ತ್ರಗಳ ಕೈಗಾರಿಕೆಗಳಲ್ಲಿ 33% ಪಾಲನ್ನು ಹೊಂದಿದ್ದ ಭಾರತ ಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಲು ಭಾಗದಷ್ಟು ಪಾಲನ್ನು ಹೊಂದಿತ್ತು!!!

ಬೈರೋಚ್, ” ಬಹಳ ಮುಖ್ಯವಾಗಿ, ವ್ಯಾವಹಾರಿಕವಾಗಿ ಮಾರುಕಟ್ಟೆ ವ್ಯವಸ್ಥಿತವಾಗಿ ಉತ್ತಮವಾಗಿದ್ದಲ್ಲದೇ, ಸಾಲದ ಅವಕಾಶವೂ ಕೂಡ ಉತ್ತಮವಾಗಿದ್ದಲ್ಲದೇ, ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದವರೂ ಸಹ, ವಾಣಿಜ್ಯೋದ್ಯಮದ ಹಿನ್ನೆಲೆಯಲ್ಲಿದ್ದವರೇ ಆಗಿರುತ್ತಿದ್ದರಿಂದ, ಭಾರತದ ಆರ್ಥಿಕತೆಯ ಮಟ್ಟ ಬಹಳ ಉತ್ತಮವಾಗಿತ್ತು. ಬ್ಯಾಂಕಿಂಗ್ ವ್ಯವಸ್ಥೆಗಳನ್ನೆಲ್ಲ ಪ್ರಾಚೀನ ಭಾರತದಲ್ಲಿಯೇ ಅಳವಡಿಸಲಾಗಿತ್ತಷ್ಟೇ. ಪ್ರತಿಯೊಂದು ಜಾರಿಯೂ ಸಹ ಭವಿಷ್ಯದ ಆರ್ಥಿಕತೆಗೆ ಅಡಿಪಾಯ ಹಾಕುವಲ್ಲಿ ಸಹಕಾರಿಯಾಗಿದ್ದುದರಿಂದ ಭಾರತ ಶ್ರೀಮಂತ ರಾಷ್ಟ್ರವಾಗುಳಿದಿತ್ತು!

ಮಿಲಿಯನ್ ಡಾಲರ್ ಗಳಲ್ಲಿ ಅಂತರ್ ರಾಷ್ಟ್ರೀಯ ಮಾರುಕಟ್ಟೆಯ ಉತ್ಪನ್ನಗಳು :

ಮ್ಯಾಡಿಸನ್ ಎಂಬ ಆರ್ಥಿಕ ತಜ್ಞ ಬಹಳಷ್ಟು ದಾಖಲೆಗಳನ್ನು ಅಧ್ಯಯನ ಮಾಡಿ ಐತಿಹಾಸಿಕ ಅಂತರ್ ರಾಷ್ಟ್ರೀಯ ಮಟ್ಟದ ಉತ್ಪನ್ನಗಳ ಒಟ್ಟಾರೆ ಪಾಲುಗಳನ್ನು ಕಲೆಹಾಕಿದ್ದಲ್ಲದೇ, 1990 ರಲ್ಲಿದ್ದ ಡಾಲರ್ ಗಳ ಮೊತ್ತದ ಆಧಾರದಿಂದ ಭಾರತದ ಜಿಡಿಪಿಯ ಒಟ್ಟಾರೆ ಮೊತ್ತದ ಬೃಹತ್ ಸಾಕ್ಷ್ಯಗಳನ್ನು ಬಹಿರಂಗ ಪಡಿಸಿದ್ದನಷ್ಟೇ! ಭಾರತದ ಆರ್ಥಿಕತೆಯ ಹಂತದ ಪ್ರತಿ ಹೆಜ್ಜೆಗಳೂ ಕೂಡ ಅತ್ಯಾಶ್ಚರ್ಯವನ್ನುಂಟು ಮಾಡಿದ್ದವು!

ಈ ಎಲ್ಲಾ ಜಿಡಿಪಿಗಳನ್ನೂ ಹೊರತು ಪಡಿಸಿ ನೋಡಿದರೆ, ಇವತ್ತಿನ ಭಾರತದಲ್ಲಿ ಅದೆಷ್ಟು ಸಂಪತ್ತು ಮಹಿಳೆಯರ ಚಿನ್ನದಲ್ಲಿ ಅಡಗಿ ಕೂತಿದೆ ಗೊತ್ತೇನು?! 1 ಬಿಲಿಯನ್ ಅಂತಲೇ ದೇಶದ ಜನಸಂಖ್ಯೆಯನ್ನಿಟ್ಡುಕೊಂಡರೂ, ಪ್ರತಿ ಮನೆಯ 50 ಗ್ರಾಂ ಚಿನ್ನವನ್ನು ಲೆಕ್ಕ ಹಾಕಿದರೆ ದೇಶದೊಳಗೆ ಅಡಗಿ ಕುಳಿತಿರುವ ಆರ್ಥಿಕತೆ ತಿಳಿದೇ ಹೋಗುತ್ತದೆ ಬಿಡಿ! ಅದಕ್ಕೇ, ಇತಿಹಾಸಕಾರು ಭಾರತವನ್ನು ಕರೆದಿದ್ದು ‘ಬಂಗಾರದ ಪಗೋಡಾ ಮರಗಳು’ ಎಂದೇ!!!

– ತಪಸ್ವಿ

Tags

Related Articles

Close