ಅಂಕಣದೇಶ

ಕಾಂಗ್ರೆಸ್‌ ಮತ್ತು ಅದರ ಮಿತ್ರ ಪಕ್ಷಗಳನ್ನು ಅವನತಿಯತ್ತ ತಳ್ಳಿದ ಆ ಹತ್ತು ಹಗರಣಗಳು! ಭಾರತದ ಪ್ರಜೆಗಳು ಕಳೆದು ಕೊಂಡಿದ್ದು ಎಷ್ಟು ?

ಭ್ರಷ್ಟಾಚಾರವು ಭಾರತಕ್ಕೆ ಅಂಟಿಕೊಂಡಿರುವ ಶನಿಯೆಂದರೆ ತಪ್ಪಾಗಲಾರದು, ಅದರಲ್ಲೂ ದೇಶದಲ್ಲಿನ ಅರಾಜಕತೆ, ಬಡತನ, ದರೋಡೆ,   ಲೈಂಗಿಕತೆ, ಆರ್ಥಿಕ ಅಸ್ಥಿರತೆ, ಅಸಮಾನತೆ, ಹಾಗು ಪ್ರಮುಖವಾಗಿ ಕಳಪೆ ರಾಜಕಾರಣಿಗಳ ರಾಜಕಾರಣವು ದೇಶದ ಆರ್ಥಿಕ ಬೆಳವಣಿಗೆಗಳಿಗೆ ಕೊಡಲಿಯೇಟಿನಂತಾಗಿದೆ.
 ಹೌದು! ಸ್ವಾತಂತ್ರ್ಯ ಪೂರ್ವದಲ್ಲಿದ್ದ ಭಾರತಕ್ಕೂ ಈಗಿನ ನಮ್ಮ ಭಾರತಕ್ಕೂ ತುಂಬಾ ವ್ಯತ್ಯಾಸವಿದೆ. ಅದರಲ್ಲೂ ಭ್ರಷ್ಟಾಚಾರ,ಹಗರಣಗಳು ಬಿಟ್ಟರೂ ಬಿಡದ ಪೆಡಂಭೂತದಂತೆ ಭಾರತವನ್ನು ಕಾಡುತ್ತಿವೆ. ನಾವು ಈಗ ಹೇಳಬೇಕೆಂದ ಆ 10 ಹಗರಣಗಳು ಭಾರತದ ಆರ್ಥಿಕತೆಯನ್ನೇ ಬುಡಮೇಲು ಮಾಡಿದ ಹಗರಣಗಳಾಗಿವೆ. ಅಧಿಕಾರಶಾಹಿ ಹಾಗೂ ಬಂಡವಾಳಶಾಹಿಗಳ ಈ ವಿಕೃತ ರೂಪ ಆರ್ಥಿಕತೆಯ ಬೆಳವಣಿಗೆಗೆ ತಡೆಗೋಡೆಯಂತಾಗಿದೆ..
ಅವ್ಯವಹಾರ, ನಕಲಿ ದಾಖಲೆ, ಷೇರುಪೇಟೆ, ಅಕ್ರಮ ಸಂಪತ್ತು ಇವುಗಳು ಭ್ರಷ್ಠಾಚಾರದ ಪ್ರತಿರೂಪ.  ಈ ರೀತಿಯಾಗಿ ಭಾರತವನ್ನು ಕಾಡಿದ ಪ್ರಮುಖ ಹಗರಣಗಳ ವಿವರ ಇಲ್ಲಿವೆ ನೋಡಿ..
1. ಕಲ್ಲಿದ್ದಲು ಹಗರಣ
ನಡೆದ ವರ್ಷ:2012
ಹಗರಣದ ಮೊತ್ತ: 1,86,000 ಕೋಟಿ.
2ಜಿ ಸ್ಪೆಕ್ಟ್ರಂ ಹಗರಣವೇ ನಮ್ಮ ದೇಶದ ಅತಿದೊಡ್ಡ ಹಗರಣ ಅಂತ ನಾವು ತಿಳಿದುಕೊಂಡಿದ್ರೆ ಅದು ತಪ್ಪಾಗುತ್ತೆ..ಹೌದು! ಕಲ್ಲಿದ್ದಲು ಹಗರಣದ ಮೊತ್ತ ಕೇಳಿದ್ರೆ ನೀವು ಶಾಕ್ ಆಗ್ತೀರ.. ಈ ಹಗರಣದ ಒಟ್ಟು ಮೊತ್ತ 1.86 ಲಕ್ಷ ಕೋಟಿ. ಯುಪಿಎ ಸರ್ಕಾರದ ಅತೀ ದೊಡ್ಡ ಹಗರಣವು ಆಗಿನ ಪ್ರಧಾನಿ ಮನಮೋಹನ್ ಸಿಂಗ್ ರವರ ಅಧಿಕಾರವದಿಯಲ್ಲಿ ನಡೆದಿದ್ದು ಅದು 2012 ರಲ್ಲಿ ಬೆಳಕಿಗೆ ಬಂತು. ಇದು ಪಿಎಸ್ಯು ಮತ್ತು ಖಾಸಗಿ ಕಂಪೆನಿಗಳಿಗೆ ದೇಶದ ಕಲ್ಲಿದ್ದಲು ಠೇವಣಿ ಹಂಚಿಕೆ ಸಂಬಂಧಿಸಿದ ಯುಪಿಎ ಸರ್ಕಾರದ ಹಗರಣ. 155 ಎಕರೆ ಗಣಿಯನ್ನು ಬೇಕಾದ ಕಂಪನಿಗಳಿಗೆ ಹಂಚಿಕೆ ಮಾಡಿದ ಆರೋಪ ಹಾಗೂ ಕಡಿಮೆ ಬೆಲೆಗೆ ಬಿಡ್ಡಿಂಗ್ ಮಾಡಿದ ಆರೋಪ ಕೂಡ ಯುಪಿಎ ಸರ್ಕಾರದ ತಲೆ ಮೇಲಿದೆ.
 2 . 2ಜಿ ಸ್ಪೆಕ್ಟ್ರಂ  ಹಗರಣ
ನಡೆದ ವರ್ಷ : 2008
ಹಗರಣದ ಮೊತ್ತ : 1,76,000 ಕೋಟಿ
2ಜಿ ಸ್ಪೆಕ್ಟ್ರಂ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿರುವ ಹಗರಣ ಇದಾಗಿದ್ದು. 2 ನೇ ತಲೆಮಾರಿನ ತರಂಗಗುಚ್ಚಗಳನ್ನು ಹಂಚಿಕೆಮಾಡುವಲ್ಲಿ ನಡೆದ ಅವ್ಯವಹಾರ ಇದಾಗಿದೆ . ಸರ್ಕಾರಕ್ಕೆ ಭಾರಿ ಮೊತ್ತದಲ್ಲಿ ನಷ್ಟವುಂಟು ಮಾಡಿರುವ ಹಗರಣ ಇದಾಗಿದ್ದು ಒಟ್ಟು 1.76 ಲಕ್ಷ ರಷ್ಟು ಖಜಾನೆಯ ಲೂಟಿಯಾಗಿದೆ. 2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಕರುಣಾನಿಧಿ, ಎ.ರಾಜಾ, ಕನಿಮೋಳಿ, ನೀರಾ ರಾಡಿಯಾ ಹೆಸರುಗಳು ಮುಂಚೂಣಿಯಲ್ಲಿತ್ತು.
3 . ವಕ್ಫ್ ಮಂಡಳಿ ಭೂ ಹಗರಣ
 ನಡೆದ ವರ್ಷ; 2012
ಹಗರಣಗಳ ಮೊತ್ತ: 1,50,000 ಕೋಟಿ
ಕರ್ನಾಟಕದ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾದ ಅನ್ಚರ್ ಮಣಿಪ್ಡಿ 27,000 ಎಕರೆ ಭೂಮಿ ದುರುಪಯೋಗ ಆಗಿರುವ ಬಗ್ಗೆ ಅಘಾತಕಾರಿ ವರದಿ ನೀಡಿದ್ದರು. ಕರ್ನಾಟಕ ವಕ್ಫ್ ಮಂಡಳಿಯಿಂದ ನಿಯಂತ್ರಿಸಲ್ಪಟ್ಟಿದ್ದ ಭೂಮಿಯನ್ನು ಕಾನೂನುಬಾಹಿರವಾಗಿ ದುರುಪಯೋಗಪಡಿಸಲಾಗಿತ್ತು. ದುರುಪಯೋಗಕ್ಕೆ ಒಳಗಾದ ಭೂಮಿಯ ಒಟ್ಟು ಮೊತ್ತ 1.5-2 ಲಕ್ಷ ಕೋಟಿ!
ಮುಸ್ಲಿಂ ಸಮುದಾಯದ ದುರ್ಬಲ ನಿರ್ಗತಿಕ ಹಾಗು ಬಡ ಜನರಿಗೆ ದಾನವಾಗಿ ಮೀಸಲಿಡಲ್ಪಟ್ಟ ಮತ್ತು ವಕ್ಫ್ ಮಂಡಳಿಯಿಂದ  ನಿರ್ವಹಿಸಲ್ಲಡುತ್ತಿದ್ದ ಭೂಮಿ ಇದಾಗಿದೆ..
4. ಕಾಮನ್ ವೆಲ್ತ್ ಹಗರಣ
ನಡೆದ ವರ್ಷ:2010
ಹಗರಣದ ಮೊತ್ತ: 70,000ಕೋಟಿ
2010 ರ ಹಗರಣ ಆಯೋಜಕ ಸಮಿತಿಯ ಚೇರ್ಮನ್ ಸುರೇಶ್ ಕಲ್ಮಾಡಿ ತಲೆದಂಡಕ್ಕೆ ಕಾರಣವಾಗಿತ್ತು. ಕ್ರೀಡಾಕೂಟದ ಪರಿಕರ ಖರೀದಿ, ಆಯೋಜನೆ ಗುತ್ತಿಗೆ ನೀಡುವಲ್ಲಿ 141 ಕೋಟಿ ಅವ್ಯವಹಾರ ನಡೆದಿರುವ ಅರೋಪವನ್ನು ಕಲ್ಮಾಡಿ  ಎದುರಿಸಿದ್ದಾರೆ. ಹಾಗೂ 2010 ರಲ್ಲಿ ನಡೆದ ಕಾಮನ್ ವಲ್ತ್ ಗೇಮ್‍ಗಾಗಿ ಟೈಮಿಂಗ್, ಸ್ಟೋರಿಂಗ್ ಮತ್ತು ರಿಸಲ್ಟ್ ವ್ಯವಸ್ಥೆಯನ್ನು ಅಳವಡಿಸಲು ಸ್ವಿಜರ್‍ಲೆಂಡ್‍ನ ಒಮೆಗಾ ಸಂಸ್ಥೆಗೆ ಹೆಚ್ಚುವರಿ ಮೊತ್ತ ನೀಡಿ ಗುತ್ತಿಗೆ ನೀಡಲಾಗಿತ್ತು. ಇದರಿಂದ ಸರ್ಕಾರಕ್ಕೆ 70 ಸಾವಿರ ಕೋಟಿಗಳಷ್ಟು ನಷ್ಟವುಂಟಾಗಿತ್ತು. ಕಲ್ಮಾಡಿ ಇಂಡಿಯನ್ ಒಲಪಿಂಕ್ ಅಸೋಸಿಯೇಷನ್ ಅಧ್ಯಕ್ಷರಾಗಿ 1996-2011 ರ ವರೆಗೆ ಕಾರ್ಯನಿರ್ವಹಿಸಿದ್ದರು. ಕಾಮನ್ ವೆಲ್ತ್ ಗೇಮ್ಸ್ ನಲ್ಲಿನ ಹಗರಣ ಸಂಬಂಧ 10 ತಿಂಗಳ ಜೈಲುವಾಸ ಅನುಭವಿಸಿದ್ದು ಜಾಮೀನಿನ ಮೂಲಕ  ಹೊರಬಂದರು.
5. ತೆಲಗಿ ಹಗರಣ
 ನಡೆದ ವರ್ಷ: 2002
ಹಗರಣದ ಮೊತ್ತ; 20,000 ಕೋಟಿ
 ಈ ಹಗರಣದ ಪ್ರಮುಖ ಆರೋಪಿ ಅಬ್ದುಲ್ ಕರೀಂ ಲಾಲ್ ತೆಲಗಿ . ಪ್ರಮುಖವಾಗಿ ನಾವು ಕಂಡ ಎಲ್ಲಾ ಹಗರಣಗಳ ಪ್ರಮುಖ ಉದ್ದೇಶ ಹಣಗಳಿಸುವುದು ಮಾತ್ರ. ನಕಲಿ ಛಾಪಾ ಕಾಗದಗಳ ಮುದ್ರಣಮಾಡಿ ಇತರ ಬ್ಯಾಂಕ್ ಹಾಗೂ ಸಂಸ್ಥೆಗಳಿ ಮಾರಾಟ ಮಾಡುವಲ್ಲಿ ಅಬ್ಬುಲ್ ಕರೀಂ ಚಾಣಕ್ಷನಾಗಿದ್ದ ಈ ಮೂಲಕ 20,000 ಕೋಟಿಗೂ ಹೆಚ್ಚು ಗಂಟುಹಾಕಿ ಕೊಂಡಿದ್ದ.
6.  ಸತ್ಯಂ ಹಗರಣ
ನಡೆದ ವರ್ಷ; 2009
ಹಗರಣದ ಮೊತ್ತ ; 14,000 ಕೋಟಿ
 ಕಾರ್ಪೋರೇಟ್ ಇತಿಹಾಸದಲ್ಲೇ ಅತಿ ದೊಡ್ಡ ಹಗರಣ ಇದಾಗಿದೆ. 2009 ರಲ್ಲಿ ಬೆಳಕಿಗೆ ಬಂದ ಸತ್ಯಂ ಕಂಪ್ಯೂಟರ್ ಸರ್ವೀಸಸ್ ಹಗರಣ ಭಾರತದ ಬೃಹತ್ ಕಾರ್ಪೂರೇಟರ್ ಹಗರಣವಾಗಿದೆ. ಕಂಪನಿಯ ಆರ್ಥಿಕ ಚಟುವಟಿಕೆಗಳ ದಾಖಲೆಗಳನ್ನು ತಿದ್ದುಪಡಿ ಮಾಡಿದ್ದದಲ್ಲದೆ ಸೃಜನ ಪಕ್ಷಪಾತ ಮಾಡಿದ ಆರೋಪದ ಮೇರೆಗೆ ಚೇರ್ಮನ್ ರಾಮಲಿಂಗ ರಾಜು ಜೈಲು ಪಾಲಾದರು.
7. ಬೊಫೊರ್ಸ್ ಹಗರಣ
 ನಡೆದ ವರ್ಷ: 1980- 90
 ಹಗರಣದ ಮೊತ್ತ : 100-200 ಕೋಟಿ
ಬೋಫೋರ್ಸ್ ಹಗರಣವನ್ನು ಭಾರತೀಯ ಭ್ರಷ್ಟಾಚಾರದ ನುದ್ರೆ ( ಹಾಲ್ ಮಾರ್ಕ್) ಎಂದೇ ಕರೆಯಲಾಗುತ್ತದೆ 1980-90 ರ ದಶಕದ ಅತೀ ದೊಡ್ಡ ಹಗರಣ ಇದಾಗಿದ್ದು, ಮಾಜಿ ಪ್ರಧಾನಿಯಾದ ರಾಜೀವ್‍ಗಾಂಧೀ ಮತ್ತು ಹಿಂದುಜಾಸ್ ಎನ್ನಾರೈ ಕುಟುಂಬ ಅನೇಕ ಕಾಂಗ್ರೇಸ್ ಅಧಿಕಾರಿಗಳು ಈ ಹಗರಣದಲ್ಲಿ ಭಾಗಿಯಾಗಿದ್ದರು. 155 ಎಂಎಂ ಫಿರಂಗಿಗಳನ್ನು ಬೊಫೋರ್ಸ್ ಎಬಿ ಕಂಪನಿಯಿಂದ ಖರೀದಿಸಲು ಕಿಕ್ ಬ್ಯಾಕ್ ಪಡೆದ ಆರೋಪ ಗಾಂಧಿ ಕುಟುಂಬವನ್ನು ಅಲುಗಾಡಿಸಿತ್ತು. ಸ್ವೀಡಿಷ್ ಮೂಲದ ಕಂಪನಿಯೊಂದು 640 ಮಿಲಿಯನ್( 12 ಮಿಲಿಯನ್  ಯುಎಸ್  ಡಾಲರ್) ಮೊತ್ತದ ಕಿಕ್ ಬ್ಯಾಕನ್ನು ಹಿರಿಯ ರಾಜಕಾರಣೀ ಒರ್ವರಿಗೆ ನೀಡಿದ ಬಗ್ಗೆ ಮಾಹಿತಿ ಹೊರ ಬಿದ್ದಿತ್ತು. ವಿಶ್ವನಾಥ್ ಪ್ರತಾಪ್‍ಸಿಂಗ್ ಅವರು ರಕ್ಷಣಾಸಚಿವಾರಾಗಿದ್ದ ಸಂದಂರ್ಭದಲ್ಲಿ ಈ ಹಗರಣ ಬೆಳಕಿಗೆ ಬಂತು.
 
8.  ಮೇವು ಹಗರಣ
ನಡೆದ ವರ್ಷ: 1990
ಹಗರಣದ ಮೊತ್ತ :1000 ಕೋಟಿ
ದೇಶವು ಕಂಡ ಭ್ರಷ್ಟ ರಾಜಕಾರಣಿಗಳಲ್ಲಿ ಲಾಲು ಅವರದೆ ಮೇಲು ಗೈ. ಲಾಲು ಪ್ರಸಾದ್ ಯಾದವ್ ಪ್ರಚಾರ ಹಾಗೂ ಅಧಿಕಾರದ ಗೀಳಿನಿಂದ ಬಹಳಷ್ಟು  ಪ್ರಸಿದ್ದಿ ಪಡೆದಿದ್ದಾರೆ ಎಂಬುವುದು ಎಲ್ಲಾರಿಗೂ ತಿಳಿದೆ ಇದೆ. ಲಾಲು ರವರು ಕೋಟಿಗಟ್ಟಲೆ ಮೇವು ಹಗರಣದಲ್ಲಿ ಅಪರಾದಿಯಾಗಿ ಜೈಲು ಪಾಲಾಗಿದ್ದರು. ಸುಮಾರು 20 ವರ್ಷಗಳ ಹಿಂದೆ ನಡೆದಿದ್ದ 900 ಕೋಟಿ ರೂ. ಮೊತ್ತದ ಮೇವು ಹಗರಣ ಸಂಬಂಧ ಒಟ್ಟು 53 ಪ್ರಕರಣಗಳು ದಾಖಲಾಗಿದ್ದವು.   ಅದರಲ್ಲಿ  44 ಪ್ರಕರಣಗಳು ದಾಖಲಾಗಿವೆ.  ಅವುಗಳಲ್ಲಿ 44 ಪ್ರಕರಣಗಳ ತೀರ್ಪು ಈಗಾಗಲೇ ಹೊರಬಿದ್ದಿವೆ. ಲಾಲು ಪ್ರಸಾದ್ ಯಾದವ್‍ಅವರ ವಿರುದ್ದ ಅಂದು ಆರು ಪ್ರಕರಣಗಳು ದಾಖಲಾಗಿತ್ತು. ಚೈಬಸಾ ಖಜಾನೆಯಿಂದ 37.7 ಕೋಟಿ ವಂಚಿಸಿರುವ ಆರೋಪವನ್ನು  ಸ್ವತಃ ಲಾಲು ಎದುರಿಸಿದ್ದಾರೆ. ಬಿಹಾರದ ಜಾನುವಾರುಗಳಿಗೆ ಮೇವು ಹಾಗೂ ಔಷಧ ನೀಡುವುದಾಗಿ ಅದಷ್ಟೋ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಸರ್ಕಾರದ ಹಣವನ್ನು ಕೊಳ್ಳೆ ಹೊಡೆದಿದ್ದರು ಸತತ 20 ವರ್ಷಗಳ ಕಾಲ ನಡೆದ ಈ ಲೂಟಿ ತಡವಾಗಿ ಈ ಪ್ರಕರಣ ಬೆಳಕಿಗೆ ಬಂತು. ಲಾಲು ಅವರು ದೇಶದ ಅತೀ ದೊಡ್ಡ ದೇಶ ಭ್ರಷ್ಟ ರಾಜಕಾರಣಿಯಾಗಿದ್ದು. ಭಾರತ ಸರ್ಕಾರದ ಖಜಾನೆಯಿಂದ ಲೆಕ್ಕವಿಲ್ಲದಷ್ಟು ಸಂಪತ್ತು ದೋಚಿದ್ದಾರೆ.
9. ಹವಾಲ ಹಗರಣ
 ನಡೆದ ವರ್ಷ: 1990-91
ಹಗರಣದ ಮೊತ್ತ: 100 ಕೋಟಿ.
1996 ರಲ್ಲಿ ಬೆಳಕಿಗೆ ಬಂದ ಹಗರಣ ಇದಾಗಿದೆ. ಹವಾಲ ದಲ್ಲಾಲಿಗಳಿಂದ ದೇಶದ ಪ್ರಮುಖ ರಾಜಕಾರಣಿಗಳು ಲಂಚ ಸ್ವೀಕರಿಸಿದ್ದರು ಎಂದು ಆರೋಪ  ಕೇಳಿಬಂದಿತ್ತು.
10. ಹರ್ಷದ್ ಮೆಹ್ತಾ-ಕೇತನ್ ಫರೆಖ್ ಹಗರಣ
ನಡೆದ ವರ್ಷ : 1992
ಹಗರಣದ ಮೊತ್ತ : 5,000 ಕೋಟಿ
1991- 92 ರಲ್ಲಿ ನಡೆದ ಷೇರುಮಾರುಕಟ್ಟೆ ಸುರಕ್ಷತಾ ಹಗರಣವು, ಹರ್ಷದ್ ಮೆಹ್ತಾ ಅವರು ಬ್ಯಾಂಕ್ ಹಾಗೂ ಸ್ಟಾಕ್ ಮಾರುಕಟ್ಟೆಯಲ್ಲಿ ಮೂಡಿಸಿರುವ ಸಂಚಲನವು ಎಸಿಸಿಯೊಥ ಷೇರುಗಳು 500 ರೂ ಮೌಲ್ಯದಿಂದ 10,000ಕ್ಕೇರಿತ್ತು. ಇದು ಸುಮಾರು 10,000 ಕೋಟಿ ಮೌಲ್ಯದ ಹಗರಣ ಎಂದು ಅಂದಾಜಿಸಲಾಗಿದೆ. ಈ ಪ್ರಕರಣ ಬೆಳಕಿಗೆ ಬಂದ ಮೇಲೆ  ಹರ್ಷದ್ ಮೆಹ್ತಾ ರವರನ್ನು ಬಂಧಿಸಲಾಯ್ತು. ಷೇರುಪೇಟೆ ವ್ಯವಹಾರ ನಡೆಸದಂತೆ ನಿಷೇಧ ಹೇರಲಾಯಿತು. 2001 ರಲ್ಲಿ ಹೂಡಿಕೆದಾರರನ್ನು ಕಳ್ಳ ಮಾರ್ಗದಲ್ಲಿ ನಡೆಯುವಂತೆ ಮಾಡಿದ ಕೇತನ್ ಪಾರೇಖ್ ಹಗರಣವು ಅಲಹಾಬಾದ್ ಹಾಗೂ ಕೋಲ್ಕತ್ತಾ ಷೇರುಪೇಟೆಯನ್ನು ಬುಡಮೇಲು ಮಾಡಿದ ಕೇತನ್ ಪಾರೇಖ್ ಕೆ-10 ಸೂಚ್ಯಾಂಕ ಎಂದು ತನ್ನದೇ ಬದಲಿ ವ್ಯವಸ್ಥೆ ಸ್ಥಾಪಿಸಿ ಆತನು ಸರಿ ಸುಮಾರು 1 ಲಕ್ಷ ಕೋಟಿ ರೂ ನಷ್ಟು ದೋಚಿದ್ದಾರೆ ಎಂದು ಆರೋಪ ಮಾಡಲಾಗಿದೆ.
-ಶ್ರೀವತ್ಸ **
Tags

Related Articles

Close