ಅಂಕಣ

ಇತಿಹಾಸದ ಪುಟಗಳಲ್ಲಿ ಹೀರೋ ಎಂದು ಬಿಂಬಿಸಿದವರ ನೈಜ್ಯ ಪುರಾಣಗಳನ್ನು ನೀವುಗಳೂ ಮರೆತಿದ್ದೀರೇ?

ಇತಿಹಾಸಗಳ ನಿಜ ಸ್ವರೂಪವನ್ನೇ ಬದಲಾಯಿಸಿ, ತಮಗೆ ಹೇಗೆ ಬೇಕು ಹಾಗೆಗೀಚಿರುವ ಬುದ್ದಿಜೀವಿಗಳು ನಿಜಾಂಶವನ್ನು ಸಮಾಜಕ್ಕೆ ತಿಳಿಸಲೇ ಇಲ್ಲ ಎನ್ನುವುದು ಬೇಸರದ ಸಂಗತಿ!! ಬಾಲ್ಯಾದಿಂದಲೇ ಸಮಾಜಶಾಸ್ತ್ರದ ಪಠ್ಯಪುಸ್ತಕಗಳಲ್ಲಿರುವ ಅದೆಷ್ಟೋ ವಿಚಾರಗಳನ್ನು ಅಲ್ವಸಲ್ವವಾಗಿ ತಿಳಿದುಕೊಳ್ಳುವ ಸಮಯದಲ್ಲಿ ಹೆಚ್ಚಾಗಿ ನಾವು ಕಲಿತಿದ್ದು, ಕೇವಲ ಮೊಘಲರ ವಿಚಾರಗಳು, ಬ್ರಿಟಿಷರ ವಿಚಾರಗಳನ್ನು ಮಾತ್ರ!! ಅಷ್ಟೇ ಅಲ್ಲದೇ ಇವರೆಲ್ಲಾ ದೇಶಕ್ಕೋಸ್ಕರ ಮಾಡಿದ ಕಿಂಚಿತ್ತು ಸೇವೆಯನ್ನು ಬೃಹತ್ ಮಟ್ಟದಲ್ಲಿ ಮಾಡಿರುವ ಹಾಗೆ ಬಿಂಬಿಸಿ ಅವರೆನ್ನೆಲ್ಲಾ ಹೀರೋಗಳೆಂದು ಬಿಂಬಿಸಿದ್ದಾರೆ!! ಆದರೆ ಭಾರತೀಯರಿಗಾದ ಅಥವಾ ಹಿಂದೂಗಳಿಗಾದ ಅನ್ಯಾಯವನ್ನು ಯಾರೋ ಹೇಳಿದ್ದೇ ಇಲ್ಲ!!!

ಹೌದು…. ಇಂದು ಟಿಪ್ಪುವಿನ ಜಯಂತಿಯನ್ನು ಮಾಡ ಹೊರಟ ಬುದ್ದಿಜೀವಿಗಳಿಗೆ ಆತ ಒಬ್ಬ ದೇಶಭಕ್ತನಾಗಿ ಕಾಣುತ್ತಾನೆ, ಒಬ್ಬ ಸ್ವಾತಂತ್ರ್ಯ ಹೋರಾಟಗಾರನಾಗಿ ಕಾಣುತ್ತಾನೆ ಆದರೆ ಒಂದೇ ದಿನದಲ್ಲಿ ಲಕ್ಷಾಂತರ ಅಮಾಯಕ ಹಿಂದುಗಳನ್ನು ಕೊಂದ ಕ್ರೂರ ಟಿಪ್ಪು ಸುಲ್ತಾನ್ ನನ್ನು ನಾವು ಯಾವತ್ತಾದರೂ ದೇಶಭಕ್ತ ಎಂದು ಹೇಳಲು ಸಾಧ್ಯವೇ! ಟಿಪ್ಪು ಸುಲ್ತಾನ ವಿಚಾರ ಒಂದು ಕಡೆಯಾದರೆ, ಅಲ್ಲಾವುದ್ದಿನ್ ಖಿಲ್ಜಿಯ ಆಳ್ವಿಕೆಯ ಬಗ್ಗೆ ವಿಶೇಷವಾಗಿ ಚಿತ್ರಿಸಿರುವ ಇತಿಹಾಸಕಾರರು ಕಾಮಪಿಶಾಚಿ ಅಲ್ಲಾವುದ್ದಿನ್ ಖಿಲ್ಜಿ ಎಂಬ ರಾಕ್ಷಸನ ಕಾರಣ ತಮ್ಮ ಶೀಲ ಕಾಪಾಡಿಕೊಳ್ಳಲು 14,000 ಹಿಂದೂ ಹೆಣ್ಣುಮಕ್ಕಳು ಬೆಂಕಿಗೆ ಹಾರಿ ಜೌಹಾರ್ ಮಾಡಿಕೊಂಡದ್ದುದರ ಬಗ್ಗೆ ತಿಳಿದಿತ್ತೇ??

ಶಿವಾಜಿಯ ಬಗ್ಗೆ ಪಠ್ಯಪುಸ್ತಕಗಳಲ್ಲಿ ಕೊಟ್ಟಿರುವ ವಿಚಾರಗಳನ್ನು ಗಮನಿಸಿದಾಗ, ಅವುಗಳು ಕೇವಲ 2 ಅಂಕಗಳ ಅಥವಾ 5 ಅಂಕಗಳ ಪ್ರಶ್ನೆಗಳ ಉತ್ತರದಷ್ಟೇ ಇದೆ!! ಆದರೆ, ಪಠ್ಯಪುಸ್ತಕದಲ್ಲಿ ಶಿವಾಜಿ ಬಗ್ಗೆ ತಿಳಿಯುವುದಕ್ಕಿಂತ ಹೆಚ್ಚಾಗಿ ಔರಂಗಜೇಬನ ಬಗ್ಗೆ ತಿಳಿದ್ದೇ ಹೆಚ್ಚು!! ಹೌದು… ಇಸ್ಲಾಂ ಸ್ವೀಕರಿಸಲಿಲ್ಲ ಅನ್ನೋ ಕಾರಣಕ್ಕೆ ಶಿವಾಜಿ ಮಹಾರಾಜರ ಮಗ ಸಂಭಾಜೀ ಮಹಾರಾಜರನ ನಾಲಿಗೆ ಕತ್ತರಿಸಿ, ಕಾದ ಕಬ್ಬಿಣ ಸಲಾಕೆಯಿಂದ ಕಣ್ಣು ಕೀಳಿಸಿ, ಕಾದ ಕಬ್ಬಿಣದಿಂದ ಮೈ ಚರ್ಮ ಸುಲಿದು ಸಂಭಾಜಿ ಮಹಾರಾಜರನ್ನು ಜೀವಂತವಾಗಿ ಬೆಂಕಿಗೆ ದೂಡಿದ ದರಿದ್ರ ಔರಂಗಜೇಬನನ್ನು ವಿಚಾರ ಎಲ್ಲದರೂ ತಿಳಿದಿದೆಯೇ?? ಅಥವಾ ಧರ್ಮವೀರ ಮತಿದಾಸ್ ಭಾಯಿ ಇಸ್ಲಾಂನ್ನು ಒಪ್ಪಿಕೊಳ್ಳದ ಕಾರಣ ನಡು ಬೀದಿಯಲ್ಲಿ ನಿಲ್ಲಿಸಿ ಕೊಂದ ಜಿಹಾದಿ ಔರಂಗಜೇಬನ ಕುಕೃತ್ಯ ಬಗ್ಗೆಯಾದರೂ ತಿಳಿದಿತ್ತೆ??

ಇನ್ನು, ಶಹಜಹಾನ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ!! ಆತ ಎಲ್ಲರಿಗೂ ಚಿರ ಪರಿಚಿತನಾಗಿದ್ದು ತನ್ನ ಹೆಂಡತಿಯ ಮೇಲಿರುವ ಪ್ರೀತಿಗಾಗಿ ಅದರ ಸವಿನೆನಾಪಿಗಾಗಿ ಕಟ್ಟಿಸಿದ ಎಂದು ಹೇಳುತ್ತಿರುವ ತಾಜ್ ಮಹಲ್ ನಿಂದಾಗಿ, ಹೌದು… ಆದರೆ ತಾಜ್ ಮಹಲ್ ನನ್ನು ಕಟ್ಟಿಸಿದ ಎನ್ನುವ ಕಾರಣಕ್ಕೆ ಆತ ಒಬ್ಬ ಮಹಾನ್ ಪುರುಷ ಎಂದು ಹೇಳಿದರೆ ನಾಲಗೆಯಲ್ಲಿ ಹುಳ ಬೀಳಬಹುದು!! ಯಾಕೆಂದರೆ 14 ವರ್ಷದ ಬ್ರಾಹ್ಮಣ ಬಾಲಕಿಯನ್ನು ತನ್ನ ಕಾಮತೃಷೆಯನ್ನು ತೀರಿಸಿಕೊಳ್ಳಲು ತನ್ನದೇ ಮಹಲಿನಲ್ಲಿ ಬಲವಂತವಾಗಿ ಬಲಾತ್ಕಾರ ಮಾಡಿದ ಆ ಶಹಜಹಾನ್ನನ ನಿಜ ರೂಪ ಯಾವತ್ತು ಹೊರಬಿದ್ದಿದ್ದೇ ಇಲ್ಲ!!

ಹಿಂದೂಗಳ ಪವಿತ್ರ ಕ್ಷೇತ್ರಗಳನ್ನು, ದೇವಾಲಯಗಳನ್ನು ಕೆಡವಿದ ಮೊಘಲರ ಬಗ್ಗೆ ಎಷ್ಟು ತಿಳಿದ್ದೇವೆ ಎಂದರೆ, ಭಾರತೀಯರ ಮಹಾಪುರುಷರ ಬಗ್ಗೆ ತಿಳಿಯುವುದಕ್ಕಿಂತ ಹೆಚ್ಚಾಗಿ ಮೊಘಲರ ಬಗ್ಗೆನೇ ನಾವು ಅಧ್ಯಾಯನ ಮಾಡಿದ್ದೇವೆ ಎಂದರೆ ತಪ್ಪಾಗಲಾರದು (ವಿಲನ್ ಗಳಾಗಿ ಅಲ್ಲ… ಬದಲಿಗೆ ಹಿರೋಗಳಾಗಿ)!!! ಆದರೆ ಹಿಂದೂ ಪುಣ್ಯಭೂಮಿಯಾದ ಆಯೋಧ್ಯೆಯಲ್ಲಿ ಬರ್ಬರವಾಗಿ ಶ್ರೀರಾಮನ ಮಂದಿರವನ್ನು ಕೆಡವಿ ಮಸೀದಿ ನಿರ್ಮಿಸಿದ ಆ ಬಾಬರನನ್ನು, ಜ್ವಾಲಾಮುಖಿ ಮಂದಿರದಲ್ಲಿನ ದುರ್ಗಾಮಾತೆಯ ಮೂರ್ತಿ ಭಗ್ನಗೊಳಿಸಿ ದೇವಸ್ಥಾನದಲ್ಲೇ ಗೋವನ್ನು ಕತ್ತರಿಸಿ ಅದನ್ನು ಕಟುಕರಿಗೆ ಕೊಟ್ಟ ಹರಾಮಿ ಸಿಕಂದರ್ ಲೋದಿಯನ್ನು ನಾವೇಗೆ ಮರೆಯಲು ಸಾಧ್ಯ!!

ಇಡೀ ಪ್ರಪಂಚದಲ್ಲೇ ವೈಭವಯುತವಾದ ಸಾಮ್ರಾಜ್ಯ ಎಂದು ಕರೆಸಿಕೊಳ್ಳುತ್ತ ಬೀದಿ ಬೀದಿಗಳಲ್ಲಿ ಮುತ್ತು ರತ್ನ ಮಾರಾಟ ಮಾಡುತ್ತಿದ್ದಂತಹ ವಿಜಯನಗರ ಸಾಮ್ರಾಜ್ಯವನ್ನು ಮೋಸದಿಂದ ಬೆಂಕಿ ಹಚ್ಚಿ ವೈಭವಯುತ ಹಂಪಿಯನ್ನು ಹಾಳು ಹಂಪೆ ಮಾಡಿದ ಬಿಜಾಪುರದ ಸುಲ್ತಾನನ್ನು ಹಾಗೂ ಸೂಫಿ ಅಂತ ಹೇಳಿಕೊಂಡು ಪ್ರಥ್ವಿರಾಜನ ಪಿತೋರಗಢ್ ಸೇರಿಕೊಂಡು ಮೋಸದಿಂದ ಪ್ರಥ್ವಿರಾಜನನ್ನು ಸೋಲಿಸಿದ ನಂತರ ಆತನ ಪತ್ನಿ ಸಂಯೋಗಿತಾಳನ್ನು ತನ್ನ ಸೈನಿಕರೆದುರು ನಗ್ನಗೊಳಿಸಿ ರೇಪ್ ಮಾಡಿ ಕೊಂದ ಕ್ರೂರಿ, ಕಾಮಿ ಮೋಯಿನುದ್ದಿನ್ ಚಿಶ್ತಿಯ ಕ್ರೌರ್ಯವನ್ನು ಎಂದೂ ಮರೆಯಾಲಾಗದು!!

ಗುರುಗೋವಿಂದ ಸಿಂಗರ 7 ವರ್ಷದ ಹಾಗು 5 ವರ್ಷದ ಚಿಕ್ಕ ಮಕ್ಕಳಾದ ಫತೆಹ್ ಸಿಂಗ್, ಜೋರಾವರ್ ಸಿಂಗ್ ರನ್ನು ಗೋಡೆಗೆ ಕಟ್ಟಿ ಜೀವಂತ ಸಮಾಧಿ ಮಾಡಿದ ಹಾಗೂ ಕಾದ ಕಬ್ಬಿಣದಿಂದ ಮೈ ಸುಟ್ಟು ದೇಹದ ಮಾಂಸ ಖಂಡ ಕಾಣೋ ಹಾಗೆ ಸುಟ್ಟರೂ ಇಸ್ಲಾಂ ಒಪ್ಪದಿದ್ದ ಬಂದಾ ಬೈರಾಗಿಯನ್ನು ಚಿತ್ರಹಿಂಸೆ ಕೊಟ್ಟ ಜಿಹಾದಿ ಬಾಜಿರ್ ಖಾನ್ ನನ್ನು ದೇಶಪ್ರೇಮಿಗಳು ಎಂದು ಹೇಳಬೇಕೇನೂ??

ಇನ್ನು ಅಕ್ಬರ್ ನ ಬಗ್ಗೆ ಈಡೀ ನಮ್ಮ ಪಠ್ಯಪುಸ್ತಕದಲ್ಲಿ ಅದೆಷ್ಟು ಕೊಂಡಾಡಿದ್ದಾರೆ ಎಂದರೆ ಆತನನ್ನು ವಿದ್ವಾಂಸ ಎನ್ನುವಷ್ಟರ ಮಟ್ಟಿಗೆ ಆತನ ಬಗ್ಗೆ ತಿಳಿದಿದ್ದೇವೆ ಆದರೆ 72 ವರ್ಷದ ವೃದ್ಧ ಹೇಮುವಿನ ತಂದೆ ಇಸ್ಲಾಂಗೆ ಒಪ್ಪಿಕೊಳ್ಳದ ಕಾರಣ ಆತನ ತಲೆಯನ್ನು ನಿರ್ದಯವಾಗಿ ಕಡಿದು ಹಾಕಿದ ಈತನನ್ನು ಮಹಾನ್ ವ್ಯಕ್ತಿ ಎಂದು ಹೇಳಲು ಈ ನಾಲಿಗೆ ಒಪ್ಪುತ್ತದೆಯೇ??

ಅಧಿಕಾರದ ಆಸೆಗಾಗಿ ಧರ್ಮಾಧಾರಿತ ಆಧಾರದ ಮೇಲೆ ದೇಶವನ್ನು ವಿಭಜಿಸಿ ಲಕ್ಷಾಂತರ ಹಿಂದೂಗಳ ಮಾರಣಹೋಮಕ್ಕೆ ಕಾರಣವಾದ ಮೊಹಮ್ಮದ್ ಅಲಿ ಜಿನ್ನಾ ಹಾಗೂ ಭಾರತದ ಮುಕುಟಮಣಿ, ಸ್ವರ್ಗದಂತಿದ್ದ ಕಾಶ್ಮೀರವನ್ನು ಇಸ್ಲಾಮೀಕರಣ ಮಾಡಿದ ಸೂಫಿ ಸೈಯ್ಯದ್ ಶರಾಫುದ್ದಿನ್ ಬುಲ್ಬುಲ್ನ ಕುತಂತ್ರದ ಬಗ್ಗೆ ಎಷ್ಟು ಹೇಳಿದರೂ ಸಾಲದು!! ಇವರಿಗೊಪ್ಪುವಂತೆ ತನ್ನ ಒಣಪ್ರತಿಷ್ಟೆಗಾಗಿ, ಅಧಿಕಾರದ ಆಸೆಗಾಗಿ ದೇಶವನ್ನೇ ಅಡಕ್ಕಿಟ್ಟು ಚೀನಾದ ವಿರುದ್ಧ ತಲೆ ತಗ್ಗಿಸುವಂತೆ ಮಾಡಿದ ಆ ನೆಹರೂವನ್ನು ಯಾವತ್ತಾದರೂ ಕ್ಷಮಿಸಲು ಸಾಧ್ಯವೇ??

ಮೊಘಲರ ಕಾಲದಲ್ಲಿ, ಬ್ರಿಟಿಷರ ಕಾಲದಲ್ಲಿದ್ದ ಸರ್ವಾಧಿಕಾರ ನೆಹರೂ ಕಾಲದಲ್ಲೂ ಅದು ಮುಂದುವರೆದಿತ್ತು, ಇವರು ಕೂಡ ಒಂದು ರೀತಿಯಲ್ಲಿ ಮೊಘಲರ ದರ್ಬಾರನ್ನೇ ಮತ್ತೆ ಮರುಕಳಿಸಿದರು ಎಂದರೆ ತಪ್ಪಾಗಲಾರದು!! ಯಾಕೆಂದರೆ, ನೆಹರೂ ಭಾರತದ ಅಧಿಕಾರದ ಗದ್ದುಗೆಯನ್ನು ಯಾವತ್ತು ಹಿಡಿದರೂ, ಅಲ್ಲಿಂದಾಚೆಗೆ ಹಿಂದೂ ಕೋಡ್ ಬಿಲ್ ಜಾರಿಗೊಳಿಸಿ ಹಿಂದುಗಳ ನಾಗರಿಕ ಹಕ್ಕುಗಳನ್ನು ಕಸಿದು ಮುಸಲ್ಮಾನರನ್ನ ಎತ್ತಿಹಿಡಿಯಲು ಪ್ರಯತ್ನಿಸಿದ್ದಲ್ಲದೇ, ಹಿಂದುಗಳ ಶ್ರದ್ಧೆ, ನಂಬಿಕೆಯ ಪ್ರತೀಕವಾಗಿರುವ ರಾಮಾಯಣ ಕಾಲದಿಂದ ಈಗಲೂ ಪ್ರಸ್ತುತವಿರುವ ರಾಮಸೇತುವನ್ನು ಒಡೆದು ಹಾಕ್ತೇವೆ ಅಂತ ಕಮಿಟಿ ರಚನೆ ಮಾಡಿದ್ದ ಕಾಂಗ್ರೆಸ್’ನ ದಬ್ಬಾಳಿಕೆ ಯಾವತ್ತು ಮರೆಯಲು ಸಾಧ್ಯವೇ??

ಇನ್ನು ಧಾರ್ಮಿಕವಾಗಿ, ಸಾಮಾಜಿಕವಾಗಿ ಸಹಿಷ್ಣುಗಳಾಗಿ ಬೇಡಿ ಬಂದವರಿಗೆ ಆಶ್ರಯ ನೀಡಿದ ಹಿಂದೂಗಳನ್ನು ಕೇಸರಿ ಭಯೋತ್ಪಾದಕರು ಅಂತ ಕಾಂಗ್ರೆಸ್ ಕರೆದಿದ್ದಲ್ಲದೇ, ರಾಮ, ಸೀತೆ, ರಾಮಾಯಣ, ಮಹಾಭಾರತ ಇವೆಲ್ಲ ಕಟ್ಟುಕಥೆಗಳಂತ ಹಿಂದೂ ಧರ್ಮವನ್ನು ಲೇವಡಿ ಮಾಡಿತ್ತು. ರಾಮ ಷಂಡ ಅಂತ ಹೇಳಿಕೆ ನೀಡಿದಾತರನ್ನುಬಂಧಿಸದೆ, ಭಯೋತ್ಪಾದಕ ಚಟುವಟಿಕೆ ನಡೆಸುವ ಪಿ.ಎಫ್.ಐ, ಕೆ.ಎಫ್.ಡಿ ಕೊಲೆಗಡುಕರ ಮೇಲಿದ್ದ 150 ಕೇಸ್ಗಳನ್ನು ವಜಾ ಮಾಡಿ ರಾಜ್ಯದಲ್ಲಿ ಹಿಂದೂಗಳ ಸರಣಿ ಹತ್ಯೆಗೆ ಕಾರಣವಾದ ಸಿದ್ದರಾಮಯ್ಯ ಅವರನ್ನು ಏನೆಂದು ಕರೆಯಬೇಕು!!

‘ಇಸ್ಲಾಮಿಕ್ ಇತಿಹಾಸ’ದ ವಿಷಯದ ಮೇಲೆ ಪೆÇೀಸ್ಟ್ ಗ್ರ್ಯಾಜ್ಯೂಯೇಷನ್ ಮಾಡಿಕೊಂಡು, ವೋಟಬ್ಯಾಂಕಿಗಾಗಿ ಬಾಂಗ್ಲಾದೇಶದ ಮುಸಲ್ಮಾನರನ್ನ ಅಕ್ರಮವಾಗಿ ಪಶ್ಚಿಮ ಬಂಗಾಳಕ್ಕೆ ಕರೆಸಿಕೊಂಡು ಅವರಿಗೆ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮಾಡಿಸಿಕೊಟ್ಟು ತನ್ನ ರಾಜ್ಯದಲ್ಲಿನ ಹಿಂದುಗಳ ಮೇಲೆ ದಾಳಿ ಮಾಡಿಸುತ್ತಿರೋ ಮಮತಾ ಬ್ಯಾನರ್ಜಿ ಹಾಗೂ ದೇವರನಾಡಾಗಿದ್ದ ಕೇರಳವನ್ನು ಐಸಿಸ್ ಉಗ್ರರ ಸ್ವರ್ಗವಾಗಿ ಬದಲಿಸಿದ, ಹಿಂದುಗಳನ್ನ ಕಂಡ ಕಂಡಲ್ಲಿ ಕತ್ತರಿಸಿ ಹಾಕುವಂತೆ ಮಾಡುತ್ತಿರೋ ಕೇರಳದ ಪಿಣರಾಯಿ ವಿಜಯನ್ನು ಎಂದಾದರೂ ಶ್ರೇಷ್ಠ ರಾಜಕಾರಣಿ ಎಂದು ಹೇಳಲು ಸಾಧ್ಯವೇ!!

ಹೀಗೆ ಪ್ರತಿಯೊಬ್ಬರ ವಿಚಾರಗಳನ್ನು ಕೆದಕುತ್ತಾ ಹೋದರೆ, ಅದೆಷ್ಟೋ ಮಂದಿ ಹಿಂದುಗಳನ್ನು ತುಚ್ಛವಾಗಿ ಕಾಣುತ್ತಾ 65 ವರ್ಷಗಳ ಕಾಲ ದೇಶವನ್ನು ನೆಹರೂ ವಂಶಕ್ಕೆ ಮೀಸಲಿಟ್ಟು, ಇಷ್ಟು ವರ್ಷಗಳಲ್ಲಿ ನಡೆದ ಅನ್ಯಾಯ, ಅನಾಚಾರ, ಭ್ರಷ್ಟಾಚಾರ ಮಾಡುತ್ತಾ ದೇಶದ ಆಸ್ತಿಯನ್ನು ನುಂಗಿ ನೀರುಕುಡಿದರೂ ಸುಮ್ಮನಿದ್ದ ಬುದ್ದಿಜೀವಿಗಳು ನರೇಂದ್ರ ಮೋದಿಯೆಂಬ ಹಿಂದೂ ರಾಷ್ಟ್ರವಾದಿ ಈ ದೇಶಕ್ಕೆ ಹಿಂದುತ್ವ ಉಳಿಸುವ ರಾಜನಾಗಿ 900 ವರ್ಷಗಳ ನಂತರ ದೆಹಲಿಯ ಗದ್ದುಗೆ ಹಿಡಿದಿರುವಾಗ ಇವರ ಮೇಲೆ ಅದಾವ ಕಾರಣದಿಂದ ದೂಷಿಸುತ್ತಿರೋ ನಾ ಕಾಣೆ!!

ಇಷ್ಟು ವರುಷಗಳ ನಂತರ ದೇಶದಲ್ಲಿ ಹಿಂದು ಸಾಮ್ರಾಜ್ಯ ಮರುಕಳಿಸುವ ಯುಗ ಆರಂಭವಾಗಿದೆ. ದೇಶದಲ್ಲಿ 65 ವರ್ಷಗಳ ಕಾಲ ಆಳಿದ ಒಂದು ಕುಟುಂಬ ಮಾಡಿದ ಅನಾಚಾರಗಳನ್ನು ಸರಿ ಮಾಡುತ್ತಾ ಸಾಗುತ್ತಿರುವ ಮೋದಿ, ತನ್ನ ಅಧಿಕಾರದ ಗದ್ದುಗೆಯನ್ನು ಹಿಡಿದ ನಂತರ ಕಾಂಗ್ರೆಸ್ಸಿಗರ ಮೈ ಚಳಿ ಬಿಡಿಸುತ್ತಾ, ಅವ್ಯವಹಾರದಿಂದ ಕೂಡಿಟ್ಟ ಹಣ, ಆಸ್ತಿಗಳನ್ನು ಬಯಲಿಗೆಳೆಯುತ್ತಾ… ದೇಶ ಕಾಯುವ ಸೈನಿಕರಿಗೆ ಆಶಾಕಿರಣವಾಗಿ ಸಾಗುತ್ತಿರುವ ಮೋದಿ, ಕೇವಲ ಮೂರು ವರ್ಷದಲ್ಲಿಯೇ ಇಷ್ಟೊಂದು ಸಾಧನೆ ಮಾಡಿದರು ಕೂಡ ಮೋದಿಯನ್ನು ದೂಷಿಸುತ್ತಾರಲ್ಲ ಇವರಿಗೇನು ಹೇಳಬೇಕು ನೀವೇ ಹೇಳಿ!!

– ಅಲೋಖಾ

Tags

Related Articles

Close