ಅಂಕಣ

ಇದೊಂದೇ ಒಂದು ಕಾರಣಕ್ಕೆ ಮೋದಿಯ ವಿರುದ್ಧ ಕೆಲವು ಬಿಜೆಪಿ ನಾಯಕರು ತಿರುಗಿ ಬಿದ್ದಿದ್ದಾರೆ! ಆದರೆ, ಅದೊಂದೇ ಕಾರಣಕ್ಕೆ ಭಾರತ ಮೋದಿಯನ್ನು ಪ್ರೀತಿಸುತ್ತದೆ!

ಮೋದಿಯ ಆಡಳಿತವನ್ನು ಒಮ್ಮೆ ಸೂಕ್ಷ್ಮವಾಗಿ ಅವಲೋಕಿಸಿಬಿಡಿ! ಅವರೆಂತಹ ಅದ್ಭುತ ಎನ್ನುವುದು ತಿಳಿಯುತ್ತಲೇ ಹೋಗುತ್ತದೆ! ‘ ಭಾರತ’ ವೆನ್ನುವುದು ಬಂದಾಗ ಅವರೆಷ್ಟು ಕಠಿಣವಾಗುತ್ತಾರೆ ಎಂಬುದು ತಿಳಿಯುತ್ತದೆ! ಒಂದು ದೇಶ ವರವಾಗಿ ಪಡೆಯಬಲ್ಲಂತಹ ಶಕ್ತಿ ಎಂದೆನಿಸಿಬಿಡುತ್ತೆ!

ಇದಾವುದೋ ಹೊಗಳಿಕೆಯಲ್ಲ! ವಾಸ್ತವ! ಮೋದಿಯ ಆಡಳಿತಾವಧಿಯಲ್ಲಿಯೇ ಅದ್ಭುತವೆನ್ನುವ ಸಂಗತಿಗಳು ನಡೆದು ಹೋಯಿತು! ಎಲ್ಲಿಯ ತನಕ ಮೋದಿ ಅಧಿಕಾರದಲ್ಲಿರುತ್ತಾರೋ, ಅಲ್ಲಿಯವರೆಗೂ ಸಹ ಅದ್ಭುತಗಳು ನಡೆಯುತ್ತಲೇ ಹೋಗುತ್ತದೆ ಎಂಬುದೂ ಕೂಡ ಮುಂಬರುವ ಭವಿಷ್ಯದ ವಾಸ್ತವವಷ್ಟೇ!

ಒಂದೇ ಪ್ರಶ್ನೆ – ಉತ್ತರ?!

ಪ್ರಧಾನ ಮಂತ್ರಿಯ ಆಪ್ತೇಷ್ಟರ ಯಾರ ಮನೆಯ ಮೇಲಾದರೂ ತೆರಿಗೆ ಅಧಿಕಾರಿಗಳು ದಾಳಿ ನಡೆಸುತ್ತಾರೆಯೇ?! ದಾಳಿಯಾದರೂ ಅವರ ಆಸ್ತಿ ವಿಚಾರಗಳು ಬಯಲಾಗುತ್ತದೆಯೇ?! ಯೋಚಿಸಿ!

ರಾಬರ್ಟ್ ವಾದ್ರಾ ಕೋಟಿಗಟ್ಟಲೇ ನುಂಗಿ ಕೂತರೂ ಸಹ ಅಂದಿನ ಕಾಂಗ್ರೆಸ್ ಸರಕಾರ ಯಾವುದೇ ಕ್ರಮವನ್ನೂ ತೆಗೆದುಕೊಳ್ಳಲಿಲ್ಲ! ಯಾವುದೇ ಮೊಕದ್ದಮೆಯನ್ನೂ ಹೂಡಲಿಲ್ಲ! ಕಾರಣ, ಆತ ಸೋನಿಯಾಳ ಅಳಿಯ! ಕೇಂದ್ರ ಸರಕಾರದ ಕಾಂಗ್ರೆಸ್ ಪಕ್ಷಕ್ಕೆ ಹತ್ತಿರದವನಾಗಿದ್ದನೆಂಬ ಒಂದೇ ಕಾರಣಕ್ಕೆ ಆತ ನಡೆದಿದ್ದೇ ಹಾದಿಯಾಯಿತು! ಯಾರೂ ಪ್ರಶ್ನೆಯನ್ನೂ ಸಹ ಮಾಡಲೇ ಇಲ್ಲ!

ಆದ್ದರಿಂದ ಉತ್ತರ ‘ಇಲ್ಲ’ ಎಂಬುದಾದರೆ ಅದು ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಮಾತ್ರ! ನರೇಂದ್ರ ಮೋದಿಯ ಆಡಳಿತದಲ್ಲಿ ನಿಮಗೆ ‘ಹೌದು’ ಎನ್ನುವ ಉತ್ತರ ಸಿಕ್ಕೀತು!

ಅಚ್ಚರಿಯಾಗುತ್ತದಲ್ಲವಾ?! ಮೋದಿಯವರ ಒಂದಷ್ಟು ನಿಷ್ಠುರ ನಿಯಮಗಳಿಂದ ಸ್ವತಃ ತನ್ನ ಪಕ್ಷದವರಿಂದಲೇ ದ್ವೇಷಿಸಲ್ಪಟ್ಟರು ಮೋದಿ! ಸ್ವಪಕ್ಷದಿಂದಲೇ ನಿಂದನೆಗೊಳಗಾದರು ಮೋದಿ!

ತೀರಾ ಇತ್ತೀಚೆಗೆ ತೆರಿಗೆ ಅಧಿಕಾರಿಗಳು 650 ಕೋಟಿ ರೂಪಾಯಿಗಳನ್ನು ಕಂಡು ಹಿಡಿದರು! ಅದೂ ಸಹ ಬಿಜೆಪಿಯ ಮಾಜಿ ಮುಖ್ಯ ಮಂತ್ರಿಯಾಗಿದ್ದ ಎಸ್ ಎಮ್ ಕೃಷ್ಣನ ಅಳಿಯ ವಿ ಜಿ ಸಿದ್ಧಾರ್ಥನ ಮನೆಯ ಮೇಲಾದ ದಾಳಿ ಯಿಂದ ಬಿಜೆಪಿಗೆ ದಂಗು ಬಡಿದಂತಾಯಿತು! ಸಿದ್ಧಾರ್ಥ್ ಒಬ್ಬ ಹೆಸರಾಂತ ಕಾಫಿ ರಿಟೇಲರ್! ಎಸ್ ಎಮ್ ಕೃಷ್ಣ ನ ಅಳಿಯ ಬೇರೆ! ತೆರಿಗೆ ಅಧಿಕಾರಿಗಳು ದಾಳಿ ನಡೆಸಿದಾಗ ಸ್ವತಃ ಮೋದಿಯವರಿಗೇ ಕರೆ ಮಾಡುವಂತಹ ಸ್ನೇಹ ಹೊಂದಿದ್ದ ಕುಟುಂಬ ಭ್ರಷ್ಟಾಚಾರದ ಅಕ್ರಮ ಹಣವನ್ನು ಕಳೆದುಕೊಂಡಿತು!

ಸತತ ನಡೆದ ನಾಲ್ಕು ದಿನಗಳ ದಾಳಿಯಿಂದ ಸಿಕ್ಕಿದ ದಾಖಲೆಗಳೆಲ್ಲವನ್ನೂ ಪರಿಶೀಲಿಸಿದ ಅಧಿಕಾರಿಗಳು ಕೊನೆಗೆ ಹೇಳಿದ್ದೇನು ಗೊತ್ತೇ?

“ಸಿದ್ದಾರ್ಥ್ ಹತ್ತಿರ ಇನ್ನೂ ಅಕ್ರಮವಾಗಿರುವಂತಹ ಹಣ ಇರುವ ಸಾಧ್ಯತೆಗಳಿದೆ! ಅಲ್ಲದೇ, ಪ್ರಭಾವಿ ವ್ಯಕ್ತಿಗಳ ಮೂಲಕ ತಪ್ಪಿಸಿಕೊಳ್ಳುವ ಸಾಧ್ಯತೆಯೂ ಅಧಿಕ! ಆದರೆ, ಈಗ ಸಿಕ್ಕಿರುವ ದಾಖಲೆಗಳನ್ನು ಮತ್ತೆ ಮತ್ತೆ ಪರಿಶೀಲಿಸಿ ಉಳಿದಂತಹ ಅಕ್ರಮ ವನ್ನು ಬಯಲಿಗೆಳೆದೇ ತೀರುತ್ತೇವೆ. ಪ್ರಧಾನ ಮಂತ್ರಿಯವರ ಬೆಂಬಲವೂ ನಮಗಿರುವುದರಿಂದ ಖಂಡಿತ ಭ್ರಷ್ಟಾಚಾರ ಮುಕ್ತವಾಗುತ್ತದೆ ದೇಶ.”

ಹಾ! ಸಿದ್ಧಾರ್ಥನ ಅಕ್ರಮ ಹಣ ಹೂಡಿಕೆ ಕಾಫಿ ಯೊಂದರಲ್ಲೇ ಇಲ್ಲ. ಬದಲಾಗಿ ಮಾಹಿತಿ ತಂತ್ರಜ್ಞಾನದಿಂದ ಹಿಡಿದು ಟೂರಿಸಂ ತನಕವೂ ಇದೆ! ಆದರೆ, ಯೋಚಿಸಿ! ನರೇಂದ್ರ ಮೋದಿಯ ಬದಲು ಕಾಂಗ್ರೆಸ್ ಪಕ್ಷವೇ ಕೇಂದ್ರದಲ್ಲಿದ್ದಿದ್ದರೆ ಸಿದ್ಧಾರ್ಥನ ಅಕ್ರಮ ಬಯಲಾಗುತ್ತಿರಲಿಲ್ಲ! ಬದಲಿಗೆ, ಅರ್ಧದ ಪಾಲು ಪಡೆದು ಕ್ಲೀನ್ ಚಿಟ್ ಸಿಗುತ್ತಿತ್ತಷ್ಟೇ!

ಮೋದಿ ಸ್ವಪಕ್ಷದವರ ಮೇಲೇ ದಾಳಿ ನಡೆಸಿದ್ಯಾಕೆ ಗೊತ್ತಾ?

ಎಲ್ಲದಕ್ಕೂ ಮುಂಚೆ ನಿಮಗೊಂದಿಷ್ಟು ವಸ್ತುಸ್ಥಿತಿ ತಿಳಿಸಿಬಿಡುತ್ತೇನೆ! ಈ ಹಿಂದೆ ಕರ್ನಾಟಕದಲ್ಲಿ ಡಿಕೆ ಶಿವಕುಮಾರ್ ಮೇಲೆ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದಾಗ ಇಡೀ ಕಾಂಗ್ರೆಸ್ ಪಕ್ಷ ಬೀದಿಯಲ್ಲಿ ನಿಂತು ಡಿಕೆಶಿ ಪರ ವಹಿಸಿತ್ತು! ಇದೇ ಕಾಂ‌ಗ್ರೆಸ್ ಇದು ರಾಜಕೀಯ ಪಿತೂರಿ ಎಂದಿತ್ತು! ಯಾವಾಗ ತೆರಿಗೆ ಅಧಿಕಾರಿಗಳು ದಾಖಲೆ ಮುಂದಿಟ್ಟರೋ, ಇದು ಕೇಂದ್ರ ಸರಕಾರದ ಪಿತೂರಿ ಎಂದು ಬಾಯಿ ಹರಿದುಕೊಂಡಾಗಲೇ ಕಾಂಗ್ರೆಸ್ ನ ಭ್ರಷ್ಟಾಚಾರದ ಅಜೆಂಡಾವೊಂದು ಜನಗಳಿಗೆ ಗೊತ್ತಾದದ್ದು!

ಆದರೆ, ಯಾವಾಗಲೇ ಸ್ವಪಕ್ಷದವರ ಮೇಲೆ ದಾಳಿಯಾಗಲಿ, ಮೋದಿ ಪರ ವಹಿಸಿ ಮಾತನಾಡಲಿಲ್ಲ! ಬೀದಿಗೆ ಬಂದು ಇದು ರಾಜಕೀಯ ಪಿತೂರಿ ಎಂದೆಲ್ಲ ಹಾರಾಡಿ ತನಿಖೆಯ ದಿಕ್ಕು ತಪ್ಪಿಸಲಿಲ್ಲ! ನಗುತ್ತಾ ಕುಳಿತರು! ‘ದೇಶವನ್ನು ಲೂಟಿ ಹೊಡೆದಿರಾ?! ಅನುಭವಿಸಿ’ ಎನ್ನುತ್ತಾ ಕರ್ತವ್ಯ ನಿರ್ವಹಿಸತೊಡಗಿದರು!

ಒಬ್ಬ ಪ್ರಧಾನ ಮಂತ್ರಿಗೆ ಬೇಕಾದರೆ ಸ್ವಪಕ್ಷದವರನ್ನು ತನ್ನ ಪ್ರಭಾವ ಬಳಸಿ ದೋಷಮುಕ್ತನನ್ನಾಗಿಸುವ ಬೇಕಾದಷ್ಟು ಹಾದಿಯಿದೆ! ಬೇಕಾದರೆ, ದಾಳಿಯೇ ಆಗದಂತೆ ತಡೆಯುವ ತಾಕತ್ತೂ ಇದೆ! ನಿಮಗೆ ಆಘಾತವಾಗಬಹುದು! ಮೋದಿ ಇವತ್ತಿನವರೆಗೂ ಬಿಜೆಪಿಯವರ ಮೇಲಾದ ದಾಳಿಯನ್ನು ಖಂಡಿಸಲೂ ಇಲ್ಲ! ಅಥವಾ ದಾಳಿಯಾಗದಂತೆ ತಡೆಯಲೂ ಇಲ್ಲ!

ಬಿಡಿ! ಒಂದಷ್ಟು ತಿಂಗಳ ಹಿಂದೆ ಮಾಜಿ ಕೇಂದ್ರ ಸಚಿವರಾಗಿದ್ದ ಬಿಜೆಪಿಯ ಜಿ ಎಮ್ ಸಿದ್ಧೇಶ್ವರರ ಮನೆಯ ಮೇಲೆ ದಾಳಿಯಾಯಿತು! ತೆರಿಗೆ ಅಧಿಕಾರಿಗಳು ಅದೆಷ್ಟೋ ಅಕ್ರಮ ಹಣವನ್ನು ಚೀಲಗಳಲ್ಲಿ ಹೊತ್ತೊಯ್ದರು! ಆತ ಮೋದಿಯವರಿಗೂ ಕೈ ಮುಗಿದ! ಉಹೂಂ! ಮೋದಿ ಜಗ್ಗಲಿಲ್ಲ! ಉಪ್ಪು ತಿಂದವ ನೀರು ಕುಡಿಯಬೇಕು ಎಂದು ಬಿಟ್ಟರು!

2016 ರಲ್ಲಿ ಮಧ್ಯಪ್ರದೇಶದ ಪ್ರಭಾವೀ ಬಿಜೆಪಿ ನಾಯಕ ಸುಶೀಲ್ ವಾಸ್ವಾನಿಯ ಮೇಲೂ ತೆರಿಗೆ ಅಧಿಕಾರಿಗಳು ಮುಗಿಬಿದ್ದರು! ತೆರಿಗೆ ಅಧಿಕಾರಿಗಳು ನೀಡಿದ ದಾಖಲೆಗೆ ಶಹಬ್ಬಾಸ್ ಗಿರಿ ನೀಡಿದರು ಮೋದಿ!

ಅಲ್ಲಿಂದ ಶುರುವಾಯಿತು ನೋಡಿ!

ಹೌದು! ಎಲ್ಲಿ ಸ್ವಪಕ್ಷದವರ ಮೇಲೆ ದಾಳಿಯಾದರೂ ಸಹ ಮೋದಿ ರಾಷ್ಟ್ರದ ಹಿತದಲ್ಲಿ ರಾಜಿಯಾಗಲಿಲ್ಲವೋ, ಬಿಜೆಪಿಯವರೇ ಮೋದಿಯನ್ನು ಟೀಕಿಸಿದರು! ನಿಂದಿಸಿದರು! ಅದೆಷ್ಟೇ ವಿರೋಧವಾದರೂ ಮೋದಿ ಜಗ್ಗಲಿಲ್ಲ! ರಾಷ್ಟ್ರದ ಹಿತಕ್ಕೆ ಎಂತಹ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕೂ ಮೋದಿ ಹಿಂಜರಿಯಲಿಲ್ಲ! ರಾಷ್ಟ್ರ ಮೊದಲೆಂಬ ಧ್ಯೇಯಕ್ಕೆ ಬದ್ಧವಾದರು! ಭ್ರಷ್ಟಾಚಾರ ಯಾವುದೇ ಪಕ್ಷದವರಾದರೂ ಮಾಡಿರಲಿ, ಅವರಿಗೆ ಶಿಕ್ಷೆಯಾಗಲೇ ಬೇಕೆಂದರು ಮೋದಿ!

ಯಾವಾಗ ಸಿದ್ಧಾರ್ಥನ ಮನೆಯ ಮೇಲೆ ದಾಳಿಯಾಯಿತೋ, ಯಾವಾಗ ಮೋದಿ ಬೆಂಬಲ ನೀಡಿದರೋ, ಯಾವಾಗ 650 ಕೋಟಿ ರೂಪಾಯಿಗಳನ್ನು ವಶಕ್ಕೆ ಪಡೆದರೋ, ಯಾವಾಗ ಎಸ್ ಎಮ್ ಕೃಷ್ಣನ ಅಳಿಯನ ಎಲ್ಲಾ ಅಕ್ರಮ ಕಾಫಿ ಡೇ ಗಳು ಬಾಗಿಲು ಹಾಕಿದವೋ,. . .ಅಲ್ಲಿಂದ
ಉಳಿದೆಲ್ಲ ನಾಯಕರಿಗೂ ಬಿಸಿ ತಟ್ಟಿತು! ಮೋದಿ ಎಂತಹ ರಾಷ್ಟ್ರೀಯವಾದಿ ಎಂಬುದು ಮನವರಿಕೆಯಾಯಿತೋ, ಮೋದಿಯ ವಿರುದ್ಧ ತಿರುಗಿ ಬಿದ್ದರು!

ಮೋದಿ ಇಷ್ಟವಾಗುವುದು ಇದೇ ಕಾರಣಕ್ಕೇ!

ರಾಷ್ಟ್ರದ ಹಿತ ಬಂದಾಗ ಎಲ್ಲರೂ ಒಂದೇ! ಭ್ರಷ್ಟಾಚಾರವೆಂದರೆ ಎಲ್ಲರಿಗೂ ಶಿಕ್ಷೆಯಾಗಲೇಬೇಕು! ಯಾವುದೇ ಪಂಗಡ, ಧರ್ಮ ಅಥವಾ ಪಕ್ಷ! ಉಹೂಂ! ಅಕ್ರಮವೆಸಗಿದರೆ ಕಾನೂನಿಡಿಯಲ್ಲಿ ಶಿಕ್ಷೆಯಾಗಲೇ ಬೇಕು!

ಇಂತಹ ಬದ್ಧತೆಯನ್ನು ನೋಡುವಾಗ ಮತ್ತೆ ಮತ್ತೆ ಮೋದಿ ಇಷ್ಟವಾಗಿಬಿಡುತ್ತಾರೆ! ದೇಶವನ್ನು ಮುಂದಕ್ಕೊಯ್ಯಲು, ಸಧೃಢ ರಾಷ್ಟ್ರವನ್ನಾಗಿ ಮಾಡಲು ಮೋದಿಯಂತಹ ಅನರ್ಘ್ಯ ರತ್ನ ಸಿಕ್ಕಿತೆನ್ನಿಸಿಬಿಡುತ್ತದೆ! ಆದರೆ, ನೆನಪಿಡಿ! ಇವತ್ತು ಮೋದಿಯನ್ನು ದ್ವೇಷಿಸುತ್ತಿರುವವರೆಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಹೆದರಿದವರೇ! ಅಪರೋಕ್ಷವಾಗಿಯೋ ಪರೋಕ್ಷವಾಗಿಯೋ ಭ್ರಷ್ಟಾಚಾರ ಎಸಗಿದವರೇ!

– ತಪಸ್ವಿ

Tags

Related Articles

Close