ಅಂಕಣ

ಇದ್ಯಾವುದೋ ಥ್ರಿಲ್ಲರ್ ಸಿನಿಮಾದ ಕಥೆಯಲ್ಲ!! ಬದಲಾಗಿ ಮೈ ನವಿರೇಳಿಸುವ ನೇತಾಜಿಯ 16 ವಯಸ್ಸಿನ ಗೂಢಾಚಾರಿಣಿಯ ಕಥೆ!!

ಅದೆಷ್ಟೋ ರೋಮಾಂಚನಕಾರಿಯಾದ ಪತ್ತೇದಾರಿ ಪ್ರಕಾರದ ಚಲಚಿತ್ರಗಳನ್ನು ಒಂದು ಕ್ಷಣ ನೆನಪಿಸಿಕೊಳ್ಳುವಾಗ ಮೈನವಿರೇಳಿಸುವಂತೆ ಮಾಡುತ್ತೆ ಅಲ್ವೇ??…. ಶತ್ರುಗಳು ಒಂದು ಮಗುವನ್ನು ರಹಸ್ಯ ಸ್ಥಳಗಳಲ್ಲಿ ಬಚ್ಚಿಡುವ ಕಥೆಗಳು…. ದೇಶದ ಬಗೆಗಿರುವ ಸೀಕ್ರೆಟ್ ಕೋಡ್‍ಗಳನ್ನು ಅಥವಾ ಸಂದೇಶಗಳನ್ನು ಕದಿಯುವ ಕಥೆಗಳು… ಇದರಿಂದ ರೋ(ಖಂW) ಏಜೆಂಟ್ ರಹಸ್ಯ ಕಾರ್ಯಚರಣೆ ಮಾಡಿ ಬಿಕ್ಕಟ್ಟಿನ ಸಮಸ್ಯೆಯಿಂದ ದೇಶವನ್ನು ಉಳಿಯುಸುವುದು.. ಇದೆಲ್ಲಾ ಥ್ರಿಲ್ಲರ್ ಸ್ಪೈ ಸಿನೆಮಾಗಳಲ್ಲಿ ಎದ್ದು ಕಾಣುತ್ತದೆ!!

ರೋಮಾಂಚನಕಾರಿಯಾದಂತಹ ಅದೆಷ್ಟೋ ಪತ್ತೇದಾರಿ ಸಿನೆಮಾಗಳು, ತನ್ನ ಕಥೆಯ ಉದ್ದಕ್ಕೂ ನಿಜಾಂಶವನ್ನು ಹೊಂದಿರುವಂತಹ ಕಥೆಗಳನ್ನೇ
ಒಳಗೊಂಡಿರುತ್ತದೆ.!! ಆದರೆ ನಾನು ಹೇಳ ಹೊರಟಿರುವ ಕಥೆ ನಾಟಕೀಯವಾದ ಕಥೆಯಲ್ಲ!!! ಒಬ್ಬ ಹಿರಿಯ ಸ್ವಾತಂತ್ರ್ಯ ಹೋರಾಟಗಾರ್ತಿಯ ಜೀವನಾಧಾರಿದ ಘಟನೆಯ ಬಗ್ಗೆ ಮಾಡಿದಂತಹ ಸಿನೆಮಾ!!! ಆದರೆ ಆಕೆಯ ಪ್ರಸ್ತುತ ಜೀವನ ಬಹಳ ಅಸ್ಪಷ್ಟನೆಯಿಂದ ಕೂಡಿದೆ. ಹಾಗಾದರೆ ಆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ್ತಿಯಾದರು ಯಾರು?? ಆಕೆಯ ಸಾಧನೆಯಾದರೂ ಎಂತಹದು ಎಂಬುವುದು ನಿಮಗೆ ಗೊತ್ತೆ? ಈಕೆಯ ಬಗ್ಗೆ ಅದೆಷ್ಟೂ ಮಂದಿಗೆ ಇಂದಿಗೂ ಗೊತ್ತಿಲ್ಲ!!!

ಹೌದು…. ಇದೀಗ ಈಕೆಗೆ 90ವರ್ಷ, ವಾಸವಿರುವುದು ಚೆನ್ನೈನ ಒಂದು ಸಣ್ಣ ಜರ್ಜರಿತವಾದ ಅಪಾಟ್ರ್ಮೆಂಟ್‍ನಲ್ಲಿ!! ಅಷ್ಟೇ ಅಲ್ಲದೇ ತಮಿಳುನಾಡಿನಲ್ಲಿದ್ದ ಅಲ್ಪ
ಪಿಂಚಣಿಯು ಇವರಿಗೆ ಇಂದು ಉಳಿದಿಲ್ಲ. ಆದರೆ, ನೀವು ಮತ್ತು ನಾನು ಊಹಿಸಿಕೊಳ್ಳಲು ಸಾಧ್ಯವಾಗದಷ್ಟು ಅವರ ನೆನಪುಗಳು ಇಂದಿಗೂ ಅವರ ಸುತ್ತಲೂ
ಸುಳಿದಾಡುತ್ತಿದೆ!! ಅವರೇ ಆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ್ತಿ “ಸರಸ್ವತಿ ರಾಜಮಣಿ”!!!!! ಹೌದು… ಈಕೆ ಭಾರತದ ಅತ್ಯಂತ ಕಿರಿಯ ಪತ್ತೆದಾರಿ ಎಂದು
ಹೆಸರುವಾಸಿಯಾದವರು. ತನ್ನ 16ನೇ ವಯಸ್ಸಿನಲ್ಲಿ ಭಾರತೀಯ ರಾಷ್ಟ್ರೀಯ ಸೈನ್ಯದ (ಐಎನ್‍ಎ)ಗುಪ್ತಚರ ಇಲಾಖೆಯಲ್ಲಿದ್ದು, ಬ್ರಿಟಿಷರ ರಹಸ್ಯಗಳನ್ನು ಕಳ್ಳಸಾಗಣೆ ಮಾಡಿದ ಕೆಚ್ಚೆದೆಯ ಮಹಿಳೆ ಈಕೆ!! ಇವರ ನಿಸ್ವಾರ್ಥ ಸೇವೆಗೆ ನಾವೆಲ್ಲ ಬದ್ಧರಾಗಿರೋದು ನಮ್ಮಲ್ಲರ ಕರ್ತವ್ಯ! ವಾಸ್ತವವಾಗಿ, ಅದೆಷ್ಟೂ ಸಾವಿರಾರು ಅನಾಮಧೇಯ ಸ್ವಾತಂತ್ರ್ಯ ಯೋಧರಿಗೆ ಬದ್ಧರಾಗಿದ್ದೇವೆಯೋ ಗೊತ್ತಿಲ್ಲ, ಯಾಕೆಂದರೆ ನಮ್ಮ ನೆಹರೂ ಯುಗದ ಇತಿಹಾಸದ ಪುಟಗಳಲ್ಲಿ ಎಲ್ಲರೂ ತಿರಸ್ಕಾರಕ್ಕೊಳಗಾದವರೇ ಹೆಚ್ಚು!!!

ಸರಸ್ವತಿ ರಾಜಮಣಿ 1927ರಲ್ಲಿ ರಂಗೂನ್‍ನ ಶ್ರೀಮಂತವಾದ, ದೇಶಭಕ್ತಿಯನ್ನು ತುಂಬಿದ್ದ ಕುಟುಂಬದಲ್ಲಿ ಜನಿಸಿದವರು! ಈಕೆಯ ತಂದೆ ಬರ್ಮಾದಲ್ಲಿನ ಚಿನ್ನದ
ಗಣಿಗಳ ಶ್ರೀಮಂತ ಮಾಲೀಕರಾಗಿದ್ದರು!! ಕೆಚ್ಚೆದೆಯ ಸರಸ್ವತಿ ರಾಜಮಣಿ ಭಾರತದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಚಳುವಳಿಯಲ್ಲಿ ಸತತವಾಗಿ ಸಹಾಯ ಮಾಡಿದ ಧೀರ ವನಿತೆ!!

ಹೌದು…ರಾಜಮಣಿಯವರು 10 ವರ್ಷದವರಾಗಿರಬೇಕಾದರೆ ಅವರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ನಡೆದುಹೋದವು!! ಒಂದು ದಿನ ಭಗತ್‍ಸಿಂಗ್‍ನ್ನು
ಗಲ್ಲಿಗೇರಿಸಲು ಬ್ರಿಟಿಷ್ ಕೋರ್ಟ್ ಅಂತೀಮ ತೀರ್ಪನು ನೀಡಿದ್ದು, ಈ ಸುದ್ದಿಯನ್ನು ಕೇಳಿದ್ದ ಇವರ ಕುಟುಂಬ ದುಃಖದಿಂದ ಕೂಡಿತ್ತು!! ಬಹಳ ಗೊಂದಲಕ್ಕೀಡಾದ
ರಾಜಮಣಿ ಮಾರನೇ ದಿನದ ಪತ್ರಿಕೆಯಲ್ಲಿ ಬಂದ ಭಗತ್‍ಸಿಂಗ್ ಅವರ ಬಗ್ಗೆ ಇದ್ದ ಸುದ್ದಿಗಳನ್ನು ಓದಿ, ಬಹಳ ಪ್ರಭಾವಿತರಾದರು! ಆದರೆ ಗಾಂಧಿ ಕುಟುಂಬವು ಆ
ಸಂದರ್ಭದಲ್ಲಿ ಭಗತ್ ಸಿಂಗ್ ಹಿಂಸಾಚಾರವನ್ನು ಅಳವಡಿಸಿಕೊಂಡ ಒಬ್ಬ ‘ತಪ್ಪಿತಸ್ಥ ದೇಶಭಕ್ತ’ ಎಂದು ಭಾರತೀಯರಿಗೆ ಹೇಳಿದರು!! ಆ ಸಂದರ್ಭದಲ್ಲಿ ಭಗತ್‍ಸಿಂಗ್ ಅವರ ಮರಣದಂಡನೆಯ ಆದೇಶವನ್ನು ತೀವ್ರವಾಗಿ ಖಂಡಿಸಿದವರೇ ನೇತಾಜಿ ಸುಭಾಷ್‍ಚಂದ್ರ ಬೋಸ್!!! ಇವರ ಬಗ್ಗೆ ಪ್ರಭಾವಿತರಾದ ರಾಜಮಣಿ, ನೇತಾಜಿ ಸುಭಾಷ್‍ಚಂದ್ರ ಬೋಸ್ ಅವರನ್ನು ನೆಚ್ಚಿನ ನಾಯಕನನ್ನಾಗಿ ಆಯ್ಕೆ ಮಾಡಿಕೊಂಡರು!!

ಅಹಿಂಸೆಯ ಅರ್ಧ-ಬೇಯಿಸಿದ ಸಿದ್ದಾಂತವನ್ನು ರಾಜಮಣಿ ತಿರಸ್ಕರಿಸಿದರು, ಮಾತ್ರವಲ್ಲದೇ ನೇತಾಜಿ ಬೋಸ್ ಅವರನ್ನು ತೀವ್ರವಾಗಿ ಅನುಸರಿಸಿದರು ಮತ್ತು
ಪಿಸ್ತೂಲ್ ಶೂಟಿಂಗ್ ಬಗ್ಗೆ ಅಭ್ಯಾಸ ಪ್ರಾರಂಭಿಸಿದರು!!!

ಗಾಂಧಿಯವರು ಒಂದು ಸಲ ರಾಜಮಣಿಯವರ ಮನೆಗೆ ಭೇಟಿ ನೀಡಿದಾಗ ಬಾಲಕಿಯಾಗಿದ್ದ ರಾಜಮಣಿ ಪಿಸ್ತೂಲ್ ಶೂಟಿಂಗ್ ಅಭ್ಯಾಸ ಮಾಡುತ್ತಿದ್ದರು. ಇದನ್ನು ಕಂಡ ಗಾಂಧಿ, ಹಿಂಸಾಚಾರವು ಯಾವಾಗಲೂ ವಿನಾಶಕ್ಕೆ ಹೇಗೆ ದಾರಿ ಮಾಡಿಕೊಟ್ಟಿದೆ ಎನ್ನುವುದರ ಸಲಹೆ ನೀಡಲು ಪ್ರಯತ್ನಿಸಿದರು!! ಇದಕ್ಕೆ ರಾಜಮಣಿ ನಮ್ಮ ಲೂಟಿಕೋರರು ನಮ್ಮ ದೇಶವನ್ನು ಲೂಟಿ ಮಾಡಿದ್ದಕ್ಕಿಂತ ಹೆಚ್ಚಾಗಿ ಬೇರೆ ಯಾರು ಮಾಡಿದ್ದಾರೆ ಎಂದು ಕೇಳಿದರು! ಕೆಲವು ವರ್ಷಗಳ ನಂತರ ನೇತಾಜಿ ಬೋಸ್ ರಂಗೂನ್‍ಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ “ತುಮ್ ಮುಜೆ ಖೂನ್ ದೋ, ಮೇ ಅಜದಿ ದುಂಗಾ” ಅಂದರೆ “ನಿಮ್ಮ ರಕ್ತವನ್ನು ನನಗೆ ಕೊಡಿ, ನಾನು ನಿಮಗೆ ಸ್ವಾತಂತ್ರ್ಯವನ್ನು ನೀಡುತ್ತೇನೆ” ಎಂದಿದ್ದರು!!! ನೇತಾಜಿಯವರ ಈ ಸ್ಪೂರ್ತಿದಾಯಕ ಮಾತುಗಳು ಯುವ ಬಾಲಕಿ ರಾಜಮಣಿಯ ಮನಸ್ಸನ್ನು ಇನ್ನಷ್ಟು ಸೆಳೆದವು. ನೇತಾಜಿ ಬೋಸ್ “ಅಜಾದ್ ಹಿಂದ್ ಸೇನಾ”(ಭಾರತೀಯ ರಾಷ್ಟ್ರೀಯ ಸೇನೆ) ಮತ್ತು “ರಾಣಿ ಆಫ್ ಜಾನ್ಸಿ ಬ್ರಿಗೇಡ್(ಐಎನ್‍ಎ- ಮಹಿಳಾ ಬ್ರಿಗೇಡ್)ಗೆ ದಾನವನ್ನು ಮಾಡಲು ಹಾಗೂ ಸೇನೆ ಸೇರಿಕೊಳ್ಳಲು ಮನವಿ ಮಾಡಿದರು!! ಶ್ರೀಮಂತರಾಗಿದ್ದ ರಾಜಮಣಿ ಅವರ ದುಬಾರಿ ವಜ್ರಗಳನ್ನು ಮತ್ತು ಚಿನ್ನದ ಆಭರಣಗಳನ್ನು ದಾನ ಮಾಡಿದರು. ಆದರೆ ನೇತಾಜಿ ಬೋಸ್ ಸಂಜೆಯ ವೇಳೆಗೆ ಆಭರಣವನ್ನು ಹಿಂತಿರುಗಿಸಲು ಬಂದಿದ್ದು, ಅಪ್ರಾಪ್ತ ವಯಸ್ಸಿನ ಬಾಲಕಿಗೂ ತನ್ನ ಮಾತುಗಳು ತಟ್ಟಿದ್ದು, ಬಾಲಕಿಯಾದ ರಾಜಮಣಿ ಆಭರಣವನ್ನು ಹಿಂತೆಗೆದುಕೊಳ್ಳಲು ನಿರಾಕರಿಸಿದರು. ಅಷ್ಟೇ ಅಲ್ಲದೇ, ಸೈನ್ಯದಲ್ಲಿ ತಮ್ಮನ್ನು ನೇಮಕ ಮಾಡಲು ರಾಜಮಣಿ ಬೇಡಿಕೊಂಡರು!! ದೇಶಭಕ್ತಿಯ ಸಮರ್ಪಣೆ ನೋಡಿ, ನೇತಾಜಿ ಅವರಿಗೆ ‘ಸರಸ್ವತಿ’ ಎಂದು ಹೆಸರಿಸಿಟ್ಟರು!!

ತದನಂತರದಲ್ಲಿ ಸರಸ್ವತಿಯವರಿಗೆ ಯೋಧರಿಗೆ ಆರೈಕೆ ಮಾಡುವ ತರಬೇತಿಯನ್ನು ನೀಡಲಾಯಿತು. ಗಾಯಗೊಂಡ ಐಎನ್‍ಎ ಯೋಧರನ್ನು ಶುಶ್ರೂಷೆಯಲ್ಲಿರುವಾಗ ಅಲ್ಲಿಗೆ ಬ್ರಿಟಿಷರು ಒಳನುಸುಳುವಿಕೆಯ ಸಂದೇಶಗಳನ್ನು ಸರಸ್ವತಿ ಗಮನಿಸಿದ್ದರು!! ಇದನ್ನು ನೇತಾಜಿಯವರ ಗಮನಕ್ಕೆ ತಂದ ಸರಸ್ವತಿಯನ್ನು ಕಂಡು, ಕೆಚ್ಚೆದೆಯ ಹುಡುಗಿ ಈಕೆ, ಕಠಿಣವಾದ ಕೆಲಸಕ್ಕೆ ಉದ್ದೇಶಿಸಿದವಳು ಎಂದು ಅರಿತುಕೊಂಡರು!! ಸರಸ್ವತಿ ಅಂದು ಶಿಬಿರಕ್ಕೆ ಸೇರಲು ಕೇಳಿದ ಮನವಿ ಈ ಸಂದರ್ಭದಲ್ಲಿ ನನಸಾಗಿ ಹೋಯಿತು!! ಐಎನ್‍ಎಯ ಮಹಿಳಾ ಬ್ರಿಗೇಡ್‍ಗೆ ಸೇರಿಕೊಂಡ ಸರಸ್ವತಿಯ ಕಠಿಣವಾದ ತರಬೇತಿಯ ಅಭ್ಯಾಸವನ್ನು ಕಂಡು, ಸಾವಿರಾರು ಜನ ಯುವತಿಯರು ಈಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೇ, ನಿಸ್ಸಂದೇಹವಾಗಿಯೂ ಕೂಡ ನೇತಾಜಿಯವರು ಸ್ಥಾಪಿಸಿದ ಮಹಿಳಾ ಸೇನಾ ಬ್ರಿಗೇಡ್‍ನ ಮೊದಲ ನಾಯಕಿಯಾಗಿ ಆಯ್ಕೆಯಾದರು!!

ತರಬೇತಿಯ ನಂತರ ಸರಸ್ವತಿ ಹಾಗೂ ಇನ್ನೋರ್ವ ಕೆಚ್ಚೆದೆಯ ಸೈನಿಕಳಾದ ದುರ್ಗಾ ಎಂಬುವವರನ್ನು ರಹಸ್ಯ ಕಾರ್ಯಚರಣೆಗೆ ನೇಮಿಸಲಾಯಿತು. ಈ ಸಂದರ್ಭದಲ್ಲಿ ಅವರ ಉದ್ದವಾದ ಕೂದಲನ್ನು ಕತ್ತರಿಸಿ, ಅವರನ್ನು ಹುಡುಗರಂತೆ ವೇಷಭೂಷಣವನ್ನು ಬದಲಾಯಿಸಲಾಯಿತು!! ಹಾಗಾಗಿ ಇವರನ್ನು ರಥೂನ್‍ನಿಂದ 700ಕಿ,ಮೀ ದೂರದಲ್ಲಿರುವ ಮೆಯ್ಮೋದಲ್ಲಿನ ಬ್ರಿಟಿಷ್ ಶಿಬಿರಕ್ಕೆ ರಹಸ್ಯ ಕಾರ್ಯಚರಣೆಗಾಗಿ ಕಳುಹಿಸಿದರು! ಬ್ರಿಟಿಷರ ಮನೆಗೆಲಸದ ಆಫೀಸ್ ಬಾಯ್‍ಯಂತೆ ಬ್ರಿಟಿಷರ ಸ್ಥಳದಲ್ಲಿ ಸೇರಿಕೊಂಡರು. ಶತ್ರುಗಳ ಸಾಲಿನ ಹಿಂದೆ ಗುಪ್ತ ಏಜೆಂಟ್‍ಗಳ ಹಾಗೇ ಕಾರ್ಯನಿರ್ವಹಿಸುತ್ತಿದ್ದ ಅವರು ಸರಕಾರಿ ಆದೇಶಗಳನ್ನು ತಡೆದರು ಮತ್ತು ಬ್ರಿಟಿಷ್ ಅಧಿಕಾರಿಗಳ ಮಿಲಿಟರಿ ಗುಪ್ತಚರದ ಬಗ್ಗೆ ಐಎನ್‍ಎಗೆ ಮಾಹಿತಿಯನ್ನು ರವಾನಿಸುತ್ತಿದ್ದರು!!

ಆ ಸಮಯದಲ್ಲಿ ನೇತಾಜಿ ಬೋಸ್ ಅವರು ಗಾಂಧಿಯವರ ಇಚ್ಛೆಗೆ ವಿರುದ್ಧವಾಗಿದ್ದು ಎರಡನೇಯ ಮಹಾಯುದ್ದದಲ್ಲಿ ಜಪಾನಿಗೆ ಸಹಾಯ ಮಾಡಲು ತನ್ನ ಸೈನ್ಯವನ್ನು ನಿಯೋಜಿಸಿದ್ದರು!! ಅಷ್ಟೇ ಅಲ್ಲದೇ ಶತ್ರುವಿನ ಶತ್ರುವು ಸ್ನೇಹಿತ ಎಂದು ಅವರು ನಂಬಿದ್ದರು!!

ಇದೆಲ್ಲಾ ಮುಗಿದ ನಂತರ ಏಳು ಸಮುದ್ರಗಳಾದ್ಯಂತ ತಮ್ಮ ಆಡಳಿತವನ್ನು ವೃದ್ಧಿಸಲು ಅಲ್ಲದೇ ಬ್ರಿಟಿಷ್ ಸೈನ್ಯದಲ್ಲಿ ನೇಮಕಗೊಳ್ಳಲು ಭಾರತೀಯರನ್ನು ಸರಬರಾಜು ಮಾಡಲು ಗಾಂಧಿಯವರಿಗೆ 1916ರಲ್ಲಿ ‘ಕೈಸರ್ ಇ-ಹಿಂದ್’ನ್ನು ನೀಡಿತು (ಇವೆಲ್ಲವೂ ಬ್ರಿಟಿಷ್ ಹಾಗೂ ಹುತಾತ್ಮರಾದ 5ಲಕ್ಷ ಯೋಧರಿಗೆ ಅನುಕೂಲವಾಗಿತ್ತು)ಆದರೆ ಇದು ಬ್ರಿಟಿಷರಿಗೆ ಸ್ವಲ್ಪ ಮಟ್ಟಿನಲ್ಲಿ ಬೆದರಿಕೆಯನ್ನು ಉಂಟುಮಾಡಿತ್ತು!!

ಈ ಇಬ್ಬರು ಹುಡುಗಿಯರು ಶಸ್ತ್ರಾಸ್ತ್ರ ಮತ್ತು ಫಿರಂಗಿಗಳನ್ನು ಕಸದ ಚೀಲದ ಜೊತೆ ಐಎನ್‍ಎಗೆ ಸರಬರಾಜು ಮಾಡಿದರು. ಒಂದು ವರ್ಷವಾದ ನಂತರ ಒಂದು
ದುರದೃಷ್ಟಕರವಾದ ದಿನ ಬಂದೇ ಬಿಟ್ಟಿತು!! ಅದೇನೆಂದರೆ, ದುರ್ಗಾ ಅವರನ್ನು ಕದ್ದು ಕೇಳಿಸಿಕೊಂಡಿದ್ದಕ್ಕೆ ಸೆರೆ ಹಿಡಿದು ಅವರಿಗೆ ಚಿತ್ರಹಿಂಸೆ ನೀಡಲಾಯಿತು. ಆದರೆ, ಆ ಸಂದರ್ಭದಲ್ಲಿ ಸರಸ್ವತಿ ತನ್ನನ್ನು ತಾನು ಕಾಪಾಡಿಕೊಳ್ಳು ಓಡಿಹೋಗಿರಬಹುದೆಂದು ತಿಳಿದಿದ್ದರೆ ಅದು ನಮ್ಮ ತಪ್ಪು!! ಯಾಕೆಂದರೆ ಈ ಕೆಚ್ಚೆದೆಯ ಹುಡುಗಿ ತನ್ನ ಉಡುಪುಗಳನ್ನು ಸ್ಥಳೀಯ ಬರ್ಮಾ ಸ್ತ್ರೀಯರ ಉಡುಗೆಗಳಿಗೆ ಬದಲಾಯಿಸಿಕೊಂಡರು!! ಅಷ್ಟೇ ಅಲ್ಲದೇ, ಈ ಶಿಬಿರದಲ್ಲಿ ಕಸಗುಡಿಸುವ ಕೆಲಸಕ್ಕೆ ಸೇರಿಕೊಂಡರು. ಒಂದು ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತಿದ್ದ ಸರಸ್ವತಿಗೆ ಆಕ್ಷಣ ಬಂದೇ ಬಿಟ್ಟಿತ್ತು!! ಸರಸ್ವತಿ, ದುರ್ಗಾ ಇದ್ದ ಜೈಲಿನ ಒಳಕ್ಕೆ ಹೋಗಿ, ಆಕೆಯ ಜೈಲಿಗೆ ಹಾಕಿದ್ದ ಬೀಗವನ್ನು ತನ್ನ ಪಿನ್ ಮೂಲಕ ತೆರೆದರು!! ತದನಂತರದಲ್ಲಿ ತಮ್ಮ ಜೀವವನ್ನು ಉಳಿಸುವುದಕೋಸ್ಕರ ಅಲ್ಲಿಂದ ಪಲಾಯನ ಗೈದರು!!

ಆ ಸಂದರ್ಭದಲ್ಲಿ ಬ್ರಿಟಿಷರು ಇವರನ್ನು ಹಿಂಬಾಲಿಸಿದ್ದಲ್ಲದೇ ಬಂದೂಕಿನ ಮೂಲಕ ಗುಂಡನ್ನು ಹಾರಿಸಿದರು. ಆದರೆ, ಒಂದು ಗುಂಡು ಸರಸ್ವತಿಯ ಬಲಗೈಗೆ
ತಾಗಿತಾದರೂ ಈ ಹುಡುಗಿಯರು ಓಡುತ್ತಲೇ ಇದ್ದರು ನಂತರ ಒಂದು ಮರವನ್ನು ಹತ್ತಿ ಅದರ ಮೇಲೆ ಕುಳಿತುಕೊಂಡರು!! ದೀರ್ಘವಾದ ಮೂರು ದಿನಗಳ ಕಾಲ
ಗಾಯಗೊಂಡಿದ್ದ ಸರಸ್ವತಿ ಹಾಗೂ ದುರ್ಗಾ ಬ್ರಿಟಿಷರ ಸೆರೆಗೆ ಹೆದರಿ ಮರದಲ್ಲಿಯೇ ಕುಳಿತಿದ್ದರು. ಯಾವಾಗ ಬ್ರಿಟಿಷರು ತಮ್ಮ ಶೋಧ ಕಾರ್ಯವನ್ನು ನಿಲ್ಲಿಸಿ
ಮರಳಿದರೂ, ಆ ಸಮಯದಲ್ಲಿ ಮರದಿಂದ ಇಳಿದು ರಂಗೂನ್‍ಗೆ ಪ್ರಯಾಣ ಬೆಳೆಸಿದರು.

ನೇತಾಜಿ ಬೋಸ್ ಅವರು ತಮ್ಮ ಧೈರ್ಯವನ್ನು ಕಂಡು ಅಲ್ಲಿಂದ ಉಪಾಯವಾಗಿ ತಪ್ಪಿಸಿಕೊಂಡಿದ್ದಕ್ಕಾಗಿ ಹೆಮ್ಮೆಯನ್ನು ವ್ಯಕ್ತಪಡಿಸಿರುವುದರ ಬಗ್ಗೆ ಇವರಿಗೆ ಪತ್ರವನ್ನು ಬರೆದಿದ್ದರು!! ಅಷ್ಟೇ ಅಲ್ಲದೇ ಜಪಾನಿನ ಚಕ್ರವರ್ತಿ ಹಾಗೂ ಐಎನ್‍ಎಯ ರಾಣಿ ಝಾನ್ಸಿ ಬ್ರಿಗೇಡ್ ಇವರ ಧೈರ್ಯದ ಕಾರ್ಯಕ್ಕಾಗಿ ಲೆಫ್ಟಿನೆಂಟ್ ಶ್ರೇಣಿಯ ಪದಕವನ್ನು ಸರಸ್ವತಿಗೆ ನೀಡಿ ಗೌರವಿಸಿದರು.

ನಮಗೆ ಗೊತ್ತಿರು ಹಾಗೆ, ನೆಹರೂ ಹಾಗೂ ಗಾಂಧಿ, ನೇತಾಜಿಯವರ ಸಿದ್ದಾಂತವನ್ನು ವಿರೋಧಿಸಿದರು ಮಾತ್ರವಲ್ಲದೇ ಈ ಸಮಯದಲ್ಲಿ ಸ್ವತಂತ್ರ ಭಾರತದ ಐಎನ್‍ಎ ಸೈನಿಕರು ಕೆಟ್ಟ ಸಮಯವನ್ನು ಕೂಡ ಕಾಣಬೇಕಾಯಿತು!! ಇವರನ್ನು 1971ರವರೆಗೆ ‘ಸ್ವಾತಂತ್ರ್ಯ ಹೋರಾಟಗಾರರು’ ಎಂದು ಗುರುತಿಸಿರಲಿಲ್ಲ. ಆದರೆ ನೆಹರು ಅವರ ಎಡಪಂಥೀಯ ಇತಿಹಾಸಕಾರರು ನೇತಾಜಿಗೆ ಸ್ವಲ್ಪ ಜಾಗವನ್ನು ನೀಡಿದ್ದರು, ಆದರೆ ಇವರನ್ನು ಅರ್ಹರು ಎಂದಲ್ಲ! ಆದರೆ ಒಂದು ಸತ್ಯ ಸಂಗತಿ ಏನೆಂದರೆ ನಮಗೆ ಸ್ವಾತಂತ್ರ್ಯವನ್ನು ನೀಡಿರುವುದು ಗಾಂಧೀಜಿಯಲ್ಲ! ನಮಗೆ ಸ್ವಾತಂತ್ರ್ಯ ನೀಡಿರೋದು ನೇತಾಜಿ ಸುಭಾಷ್‍ಚಂದ್ರ ಬೋಸ್!! ವಿಪರ್ಯಾಸವೆಂದರೆ, ಗಾಂಧೀಜಿಯರು ಮಾತ್ರ ಇತಿಹಾಸದಲ್ಲಿ ಅಮೂಲ್ಯವಾದ ಹೆಸರನ್ನು ಪಡೆದುಕೊಂಡರು!
((http://postcard.news/biggest-mystery-netaji-subasha-chandra-bose-congress-never-
wanted-people-know/)).

ಆದರೆ… ಇಂದು, ಸರಸ್ವತಿಯವರು ಬದುಕಿ ಉಳಿದಿರುವುದರಿಂದ ನೇತಾಜಿಯವರ ಪರಂಪರೆಗೆ ಜೀವಂತ ಸಾಕ್ಷಿಯಾಗಿದ್ದಾರೆ!! ಇವರ ಈ ಸಣ್ಣ ಮನೆಯ ತುಂಬಾ ನೇತಾಜಿಯವರ ಪೋಟೋಗಳಿಂದಲೇ ತುಂಬಿ ತುಳುಕಾಡುತ್ತಿದೆ!! ಇವರ ಜೀವನವನ್ನು ಬಡವರಿಗೆ ಸೇವೆ ಮಾಡವ ಮೂಲಕ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ. ಇದೀಗ ಇವರು ಒಂದು ವಿಚಾರಕ್ಕೆ ವಿಷಾದವನ್ನು ವ್ಯಕ್ತಪಡಿಸಿದ್ದಾರೆ. ಹೌದು… ತನ್ನ ಜೀವನ ತಿಳಿ ಬೆಳಕಿನಲ್ಲಿದೆ ಎಂದಲ್ಲ, ‘ಬಡತನದ ಗೆಲುವಿನ’ ಪ್ರಯಾಣಕ್ಕಾಗಿ ಅಲ್ಲ. ಇವರ ಜೀವನದ ಏಕೈಕ ವಿಷಾದ ಸಂಗತಿ ಎಂದರೆ ನೇತಾಜಿ ಬೋಸ್ ಅವರು ತಮ್ಮ ಶೌರ್ಯದ ಬಗ್ಗೆ ಶ್ಲಾಘಿಸಿದ ಕೈಬರಹವನ್ನು ಕಳೆದುಕೊಂಡಿರುವ ಬಗ್ಗೆ!! ಆದರೆ ಇಂತಹ ಕೆಚ್ಚೆದೆಯ ಮಹಿಳೆಯ ಬಗ್ಗೆ ಎಲ್ಲಿಯೂ ಕೂಡ ಮಾಹಿತಿ ನೀಡದಿರುವುದು ಮಾತ್ರ ವಿಪರ್ಯಾಸದ ಸಂಗತಿಯಾಗಿದೆ!!1

ಈ ಒಂದು ಜೀವನಾಧರಿತ ವಿಡೀಯೊವನ್ನು ಕೊನೆಯವರೆಗೆ ವೀಕ್ಷಿಸಿ ಮತ್ತು ಸರಸ್ವತಿ ಅವರೊಂದಿಗೆ ಹೇಳಿ………… ಜೈ ಹಿಂದ್!!

-ಅಲೋಖಾ

Tags

Related Articles

Close