ಪ್ರಚಲಿತ

ಇಳಿಕೆಯಾಗುವುದೇ ತೈಲಬೆಲೆ?! ಕೇಂದ್ರ ಸರಕಾರದ ಅಧಿಸೂಚನೆ ಏನು ಗೊತ್ತೇ?

ಪೆಟ್ರೋಲ್ ಮತ್ತು ಡಿಸೇಲ್‍ನ ಬೆಲೆಯ ಬಗ್ಗೆ ತೀವ್ರವಾದ ಚರ್ಚೆ ನಡೆಯುತ್ತಿರುವುದು ಗೊತ್ತಿರುವ ವಿಚಾರ!! ಆದರೆ ಇತ್ತೀಚೆಗಷ್ಟೇ ಕೇಂದ್ರ ಸರಕಾರವು ಪೆಟ್ರೋಲ್
ಹಾಗೂ ಡಿಸೇಲ್ ಬೆಲೆಯಲ್ಲಿ ಇಳಿಕೆಯನ್ನು ಕಂಡಿದ್ದರೂ ಕೂಡ ನಮ್ಮ ರಾಜ್ಯ ಸರಕಾರದಲ್ಲಿ ಮಾತ್ರ ಇಳಿಕೆಯನ್ನು ಕಾಣುತ್ತಿಲ್ಲ! ಆದರೆ ಕಳೆದ 3 ತಿಂಗಳಿಂದ
ನಾಗಾಲೋಟದಲ್ಲಿ ಸಾಗುತ್ತಿದ್ದ ತೈಲ ಬೆಲೆ ಇಳಿಕೆಗೆ, ಅಬಕಾರಿ ಸುಂಕದಲ್ಲಿ 2 ರೂಪಾಯಿ ಕಡಿತ ಮಾಡಿದ್ದ ಕೇಂದ್ರ ಸರಕಾರ, ಇದೀಗ ರಾಜ್ಯಗಳೂ ಕೂಡ ಶೇ.5ರಷ್ಟು ಕಡಿತಗೊಳಿಸಿ ಎಂದು ಹೇಳಿದೆ!!

ಹೌದು……ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಸತತವಾಗಿ ಏರಿಕೆ ಕಾಣುತ್ತಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರು ಸರಕಾರವನ್ನು ಪ್ರಶ್ನಿಸಿ ಒತ್ತಡ
ಹೇರಿದ್ದರು. ಈಗ ಸರಕಾರ ಸಾರ್ವಜನಿಕರ ಒತ್ತಾಯಕ್ಕೆ ಮಣಿದಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಸುಂಕದಲ್ಲಿ 2 ರೂಪಾಯಿಯಷ್ಟು ಕಡಿತ ಮಾಡಿರೋದು ಸಂತಸದ ವಿಚಾರವಾಗಿದೆ!!

ಇದೇ ಮೊದಲ ಬಾರಿಗೆ ನರೇಂದ್ರ ಮೋದಿ ಸರಕಾರ ಪೆಟ್ರೋಲ್ ಹಾಗೂ ಡೀಸೆಲ್‍ಗಳ ಮೇಲಿನ ಸುಂಕವನ್ನು ಕಡಿಮೆ ಮಾಡಿದ್ದು, ಬುಧವಾರದಿಂದ ಈ ಹೊಸ ಸುಂಕದ ಪ್ರಮಾಣ ಜಾರಿಯಾಗಲಿದೆ!! ಅದರೊಂದಿಗೆ ಇಂಧನಗಳ ಬೆಲೆ 2 ರೂಪಾಯಿಯಷ್ಟು ಕಡಿಮೆಯಾಗಲಿದೆ!! ಅಷ್ಟೇ ಅಲ್ಲದೇ ಪ್ರತಿ ಲೀಟರ್ ಪೆಟ್ರೋಲ್, ಡಿಸೇಲ್ ಮೇಲಿನ ಅಬಕಾರಿ ಸುಂಕವನ್ನು 2 ರೂಪಾಯಿ ಕಡಿತಗೊಳಿಸಿದ್ದು ಕೇಂದ್ರ ಸರಕಾರ ಇದೀಗ ರಾಜ್ಯ ಸರಕಾರಗಳಿಗೆ ಮೌಲ್ಯವರ್ಧಿತ ತೆರಿಗೆ ಕಡಿತಗೊಳಿಸುವಂತೆ ಹೇಳಿದೆ.

ಈಗಾಗಲೇ, ಕೇಂದ್ರ ಸರಕಾರದಲ್ಲಿ ಪೆಟ್ರೋಲ್ ಹಾಗೂ ಡಿಸೇಲ್‍ನ ಬೆಲೆ 21.49 ರೂಪಾಯಿಗಳಲ್ಲಿ ಇವೆ. ಆದರೆ ರಾಜ್ಯ ಸರಕಾರಕ್ಕೆ 9.02ರೂಪಾಯಿಗೆ ವರ್ಗಾವಣೆ ಮಾಡಲಾಗಿದೆ. ಹಾಗಾಗಿ ಮೋದಿ ಸರಕಾರವು 12.26 ರೂಪಾಯಿ ಮಾತ್ರ ತೆಗೆದುಕೊಳ್ಳುತ್ತಿದೆ!! ಆದ್ದರಿಂದ ರಾಜ್ಯ ಸರಕಾರವು 23.92 ರೂಪಾಯಿಗೆ (14.0 ರೂಪಾಯಿ + 9.02 ರೂಪಾಯಿ)ತೆಗೆದುಕೊಳ್ಳುತ್ತಿದೆ ಅನ್ನೋದು ವಾಸ್ತವದ ಸಂಗತಿಯಾಗಿದೆ.. ಆದರೆ ಇದೀಗ ತೈಲ ಬೆಲೆ ಇಳಿಕೆಗೆ ಅಬಕಾರಿ ಸುಂಕದಲ್ಲಿ 2 ರೂಪಾಯಿ ಕಡಿತಗೊಳಿಸಿ ತನ್ನ ಜಾಣತನವನ್ನು ಮೆರೆದಿದೆ!!

ಅಷ್ಟೇ ಅಲ್ಲದೇ, ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ರಾಜ್ಯ ಸರಕಾರಗಳು ವ್ಯಾಟ್ ಮೂಲಕ ಹೇರುತ್ತಿರುವ ತೆರಿಗೆಗಳನ್ನು ಇಳಿಕೆ ಮಾಡುವಂತೆ ಸೂಚಿಸಿದೆ. ಆದರೆ, ಈ ಬಗ್ಗೆ ಕೇಂದ್ರ ಪೆಟ್ರೋಲಿಯಂ ಖಾತೆಯ ಸಚಿವ ಧರ್ಮೆಂದ್ರ ಪ್ರಧಾನ್ ಕೂಡ ಪತ್ರವನ್ನು ಬರೆದಿದ್ದಾರೆ. ಅಬಕಾರಿ ಸುಂಕವನ್ನು ನಾವು ಇಳಿಕೆ ಮಾಡಿರೋದ್ರಿಂದ ಪೆಟ್ರೋಲ್ ಬೆಲೆ ಲೀಟರ್‍ಗೆ 2 ರೂಪಾಯಿ 50 ಪೈಸೆ ಹಾಗೂ ಡೀಸೆಲ್ ಬೆಲೆ 2 ರೂಪಾಯಿ 25 ಪೈಸೆ ಇಳಿಕೆಯಾಗಿದೆ!!! ನೀವು ಕೂಡ ವ್ಯಾಟ್ ರೂಪದಲ್ಲಿ ಹಾಕುತ್ತಿರುವ ತೆರಿಗೆಯನ್ನು ಇಳಿಕೆ ಮಾಡಿದ್ರೆ ಪೆಟ್ರೋಲ್ ಬೆಲೆ ಲೀಟರ್‍ಗೆ 5 ರೂಪಾಯಿ ಇಳಿಕೆಯಾಗಲಿದೆ ಅಂತ ಹೇಳಿದ್ದಾರೆ!! ಒಂದು ವೇಳೆ ತೈಲಬೆಲೆಯ ಮೇಲೆ ಇದ್ದ ಸುಂಕ ಕಡಿಮೆಯಾದರೆ ಅರ್ಧಕರ್ಧದಷ್ಟು ಬೆಲೆ ಇಳಿಕೆಯಾಗುವುದಂತೂ ಸತ್ಯ!!

ಆದರೆ ನಮ್ಮ ಕರ್ನಾಟಕದ ಸಿದ್ದರಾಮಯ್ಯ ಸರಕಾರ ತೈಲಬೆಲೆಯ ಬಗ್ಗೆ ಹೆಚ್ಚಿನ ಕ್ರಮವನ್ನು ಕೈಗೊಳ್ಳುತ್ತಾರೆ ಎಂಬುವ ನಿರೀಕ್ಷೆಯಿಲ್ಲ!! ಯಾಕೆಂದರೆ ಸಿದ್ದರಾಮಯ್ಯ ಸರಕಾರದಲ್ಲಿ ಭ್ರಷ್ಟಚಾರವೇ ಮನೆ ಮಾಡಿರುವಾಗ ತೈಲಬೆಲೆ ಇಳಿಕೆಯನ್ನು ಮಾಡ್ಯಾರೇ!!!! ಅಷ್ಟೇ ಅಲ್ಲದೇ, ಕೆಲವೊಂದು ರಾಜಕಾರಣಿಗಳು ಹವಾನಿಯಂತ್ರಿತ ಕೋಣೆಗಳಲ್ಲಿ ಕುಳಿತುಕೊಂಡು ಸಾಮಾನ್ಯ ಜನರು ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯ ಹೆಚ್ಚಳದಿಂದ ಬಳಲುತ್ತಿದ್ದಾರೆ ಎನ್ನುವ ಹೇಳಿಕೆಗಳನ್ನು ನೀಡುವುದಷ್ಟೇ ಇವರ ಕೆಲಸ ಎಂದೆನಿಸುತ್ತೇ!!

ಹಾಗೆಯೇ ನಮ್ಮ ಕರ್ನಾಟಕದ ಸಿದ್ದರಾಮಯ್ಯ ಸರಕಾರದಲ್ಲಿ ಬಜೆಟ್ ವಿಚಾರವಾಗಿ ಹಣ ಹೊಂದಿಸಲು ಇವರಿಂದ ಸಾಧ್ಯವಾಗಲಿಲ್ಲ, ಇನ್ನೂ ತೈಲ ಬೆಲೆಯನ್ನು ಹೇಗೆ ಕಡಿಮೆ ಮಾಡ್ಯಾರು!! ಕರ್ನಾಟಕ ಸರಕಾರದ ಕಾಂಗ್ರೆಸ್ ನಾಯಕರು ತಮ್ಮ ಬೊಕ್ಕಸವನ್ನು ತುಂಬಿಸಲು ಹರಸಾಹಸ ಮಾಡುತ್ತಿರಬೇಕಾದರೆ ಇನ್ನು ನಮ್ಮ ರಾಜ್ಯದಲ್ಲಿರುವ ಸಾಲವನ್ನು ಹೇಗೆ ತುಂಬಿಸುತ್ತಾರೆ!! ಸಿದ್ದರಾಮಯ್ಯ ಅವರ ಕಾರಿನ ಮೇಲೆ ಕಾಗೆ ಕುಳಿತುಕೊಂಡಿದೆ ಎನ್ನುವ ಕಾರಣಕ್ಕೆ ಕಾರು ಬದಲಾಯಿಸಿದ ಇವರು, ಕರ್ನಾಟಕದ ಜನತೆಯ ಕಷ್ಟವನ್ನು ಎಷ್ಟು ಆಲಿಸುತ್ತಾರೋ ನಾ ಕಾಣೆ!!

ಹಾಗಾದರೆ, ಯಾವ ಯಾವ ರಾಜ್ಯದಲ್ಲಿ ತೈಲದ ವ್ಯಾಟ್ ಎಷ್ಟಿದೆ ಗೊತ್ತೇ?

ಕರ್ನಾಟಕದಲ್ಲಿ : ಪೆಟ್ರೋಲ್ ಶೇ.30, ಡೀಸೆಲ್- ಶೇ.19
ಮಹಾರಾಷ್ಟ್ರದಲ್ಲಿ: ಪೆಟ್ರೋಲ್- ಶೇ.47.64, ಡೀಸೆಲ್- ಶೇ.28.39
ಆಂಧ್ರ ಪ್ರದೇಶದಲ್ಲಿ: ಪೆಟ್ರೋಲ್- ಶೇ. 38.83, ಡೀಸೆಲ್- ಶೇ. 30.82
ಮಧ್ಯಪ್ರದೇಶದಲ್ಲಿ: ಪೆಟ್ರೋಲ್-ಶೇ. 38.79, ಡೀಸೆಲ್- ಶೇ. 30.22
ತೆಲಂಗಾಣದಲ್ಲಿ: ಪೆಟ್ರೋಲ್-ಶೇ. 35.20, ಡೀಸೆಲ್-ಶೇ.27.00
ಕೇರಳದಲ್ಲಿ: ಪೆಟ್ರೋಲ್ -ಶೇ. 34.06

ಪೆಟ್ರೋಲ್ ಹಾಗೂ ಡೀಸೆಲ್ ಮೂಲಕ ಆದಾಯ ಸಂಗ್ರಹ ಮಾಡುವ ರಾಜ್ಯಗಳ ಪೈಕಿ ಕರ್ನಾಟಕಕ್ಕೆ ದೇಶದಲ್ಲೇ ಐದನೇ ಸ್ಥಾನವಿದೆ. ದೇಶದಲ್ಲೇ ಅತಿ ಹೆಚ್ಚು ತೆರಿಗೆ ವಿಧಿಸೋ ಮಹಾರಾಷ್ಟ್ರ ಸರಕಾರ ಆದಾಯ ಸಂಗ್ರಹದಲ್ಲಿ ಮೊದಲ ಸ್ಥಾನವಿದೆ!! ಸೇವಾ ತೆರಿಗೆ, ಪ್ರವೇಶ ತೆರಿಗೆಗಳ ಮೂಲಕ ರಾಜ್ಯಗಳು ಸಂಗ್ರಹ ಮಾಡುವ ಹಣ ಈ ಕೆಳಗಿನಂತಿದೆ.

ತೆರಿಗೆ ಸಂಗ್ರಹದಲ್ಲಿ ಯಾರು ಮೊದಲು:
ನಂ.1 ಮಹಾರಾಷ್ಟ್ರ: 23,160 ಕೋಟಿ ರೂಪಾಯಿ.
ನಂ.2 ಗುಜರಾತ್: 15,958 ಕೋಟಿ ರೂಪಾಯಿ.
ನಂ.3 ಉತ್ತರಪ್ರದೇಶ: 15, 850 ಕೋಟಿ ರೂಪಾಯಿ.
ನಂ.4 ತಮಿಳುನಾಡು: 12, 563 ಕೋಟಿ ರೂಪಾಯಿ.
ನಂ.5 ಕರ್ನಾಟಕ: 11,103 ಕೋಟಿ ರೂಪಾಯಿ.

ಯಾರಿಗೆ ಎಷ್ಟು?

ಪೆಟ್ರೋಲ್ ಮೇಲೆ ಅಬಕಾರಿ ಸುಂಕ: 21.48 ಪೈಸೆ (ಲೀಟರ್ ಗೆ)
ಪೆಟ್ರೋಲ್ ಮೇಲೆ ವ್ಯಾಟ್: ಶೇ.27
ಡೀಲರ್ಸ್‍ಗಳ ಕಮಿಷನ್: 3.23 (ಲೀಟರ್ ಗೆ)
ಡೀಸೆಲ್ ಮೇಲೆ ಅಬಕಾರಿ ಸುಂಕ: 17.33 (ಲೀಟರ್ ಗೆ)
ಡೀಸೆಲ್ ಮೇಲಿನ ವ್ಯಾಟ್: ಶೇ.27
ಡೀಲರ್ಸ್‍ಗಳ ಕಮಿಷನ್: 2.17 (ಲೀಟರ್ ಗೆ)

ವಿಪರ್ಯಾಸವೆಂದರೆ, ಕೇಂದ್ರ ಸರಕಾರ ಇಷ್ಟೆಲ್ಲಾ ಸವಲತ್ತುಗಳನ್ನು ಒದಗಿಸಿದರು ಕೂಡ ನಮ್ಮ ರಾಜ್ಯದ ಸಿದ್ದರಾಮಯ್ಯ ಸರಕಾರ ಮಾತ್ರ ಗಪ್‍ಚುಪ್ ಆಗಿದೆ!! ಅಷ್ಟೇ ಅಲ್ಲದೇ, ಸಾಲದ ಹೊರೆಯನ್ನು ರಾಜ್ಯದ ಜನಸಾಮಾನ್ಯರಿಂದ ಪಡೆದುಕೊಂಡು ಅದರಲ್ಲಿ ಒಂದಷ್ಟು ಹಣವನ್ನು ಗುಳುಂ ಮಾಡಿ, ರಾಜ್ಯದ ಜನತೆಗೆ ಸಂಕಷ್ಟವನ್ನು ನೀಡುತ್ತಿದ್ದಾರೆಯೇ ಎನ್ನುವ ಯಕ್ಷ ಪ್ರಶ್ನೆಗಳು ಕಾಡೋದು ಸಹಜ!!

-ಅಲೋಖಾ

Tags

Related Articles

Close