ಅಂಕಣ

ಇವತ್ತಿಗೂ ಸಹ ಗೋವಾದವರು ನಾವು ಭಾರತೀಯರೆನ್ನದೇ ಪೋರ್ಚುಗೀಸ್ ನಾಗರಿಕರು ಎನ್ನುವುದು ಯಾಕೆ?!

ಗೋವಾ ಪೋರ್ಚುಗೀಸರ ಅನ್ವೇಷಣೆ ಕಛೇರಿ ಎಂಬುವುದು ಕೇವಲ ನಾಮಮಾತ್ರ. ಹೌದು! ಪೋರ್ಚುಗೀಸರ ಮೂಲ ಸಾಮ್ರಾಜ್ಯ ಏಷ್ಯಾ ಆದರೂ ಕೂಡ ಅವರು
ತಮ್ಮ ಅಸ್ತಿತ್ವವನ್ನು ಗೋವಾದಲ್ಲಿ ಸ್ಥಾಪಿಸುವ ಉದ್ದೇಶದಿಂದ ಅವರು 1560 ರಲ್ಲಿ ಒಂದು ಅನ್ವೇಷಣೆಯನ್ನು ಕೈಗೊಂಡರು. ಈ ತನಿಖಾ ಕಾರ್ಯದಲ್ಲಿ ಇವರು
ಹಿಂದುಗಳು, ಭಾರತೀಯ ಮುಸ್ಲಿಂ, ಯಹೂದಿಗಳು ಹಾಗೂ ಇತರರಲ್ಲಿ ಅವರ ಧರ್ಮದ ಬಗ್ಗೆ ಪ್ರಶ್ನೆಗಳನ್ನು ಹಾಕಿ, ಅವರ ಧರ್ಮವನ್ನು ಭಾರತದಲ್ಲಿ ಸ್ಥಾಪಿಸಿ, ಅದನ್ನೂ ಬೆಳೆಸುವ ಕಾರ್ಯವನ್ನು ಕೈಗೊಂಡರು.

1774 ರಲ್ಲಿ ಗೋವಾ ಅನ್ವೇಷಣೆ ನಡೆದಂತಹ ಸಂದರ್ಭದಲ್ಲಿ ಸಾವಿರಾರು ಜನರು ಪ್ರಾಣಹಾನಿ, ಹಿಂಸೆ, ಮರಣದಂಡನೆಗಳಿಗೆ ಬಲಿಯಾದರು.
ಫ್ರೆಂಚ್ ತತ್ವಜ್ಞಾನಿ ವಾಲ್ಟೆರ್ ಗೋವಾ ಅನ್ವೇಷಣೆಯನ್ನು ಗಮನಿಸಿ. ಅದರ ಬಗ್ಗೆ ತನ್ನ ಲೇಖನವನ್ನು ಬರೆಯುತ್ತಾನೆ ( ಈತನ ಲೇಖನವು ಮೊದಲು ಪ್ಯಾರಿಸ್ ನಲ್ಲಿ 1777 ರಲ್ಲಿ ಪ್ರಕಟವಾಯಿತು). ಗೋವಾವು ಈ ದುಃಖಕರ ಅನ್ವೇಷಣೆಯಿಂದ ಪ್ರಸಿದ್ದಿಯನ್ನು ಪಡೆದಿದ್ದು, ಈ ಶೋಧನೆಯು ಮಾನವೀಯತೆಗೆ ಹಾಗೂ ವಾಣಿಜ್ಯತೆಗೆ ತದ್ವಿರುದ್ಧವಾದಂತಾಗಿತ್ತು. ಅನ್ವೇಷಣೆಕಾರರು, ಭಾರತೀಯ ಜನಸಾಮಾನ್ಯರು ಆವರೆಗೂ ದೆವ್ವವನ್ನು ಪೂಜಿಸುತ್ತಿರುವುದಾಗಿ ನಂಬಿಸಿದರು, ಆದರೆ ಇಲ್ಲಿ ನಿಜವಾಗಿಯು ಪೋರ್ಚುಗೀಸರು ದೆವ್ವವನ್ನು ಪೂಜಿಸುತ್ತಿದ್ದರು ಎಂಬುವುದನ್ನು ನಾವು ಅರಿತಿಲ್ಲ ಅಷ್ಟೇ.

ಸಿಫಾರ್ಡಿ ಯಹೂದಿಗಳ ಸಮುದಾಯವೊಂದು ಗೋವಾದಲ್ಲಿ ವಾಸಿಸುತ್ತಿದ್ದರು. ಆ ಸಂದರ್ಭದಲ್ಲಿ ಸ್ಪ್ಯಾನೀಶ್ ಅನ್ವೇಷನೆಕಾರರು ಅಲ್ಲಿ ದಾಳಿ ಮಾಡಿದರು. ಅವರಗಳ ದೌರ್ಜನ್ಯದಿಂದ ಹಾಗೂ ಅವರ ಕಿರುಕುಳಗಳಿಂದ ತಪ್ಪಿಸಲು ಲಿಬ್ರೀಯನ್ ದ್ವೀಪಕ್ಕೆ ಆ ಸಮುದಾಯ ಪಲಾಯನಗೊಂಡಿತು. ಆದರೂ ಕೂಡ ಯಹೂದಿಗಳು ಅವರ ಕಿರುಕುಳಕ್ಕೆ ತುತ್ತಾದರು. ದಾಖಲೆಗಳು ಹೇಳುವ ಪ್ರಕಾರ ನೂರಾರು ಸೆರೆಮನೆಗಳನ್ನು ಇವರಿಗೋಸ್ಕರವೇ ಹೊಸತಾಗಿ ನಿರ್ಮಾಣ ಮಾಡಲಾಗಿತ್ತು ಎಂದು ಹೇಳಲಾಗಿದೆ. 71 “ಆಟೋ ಡಾ ಫ್ಲೆ” ದಾಖಲೆಯ ಪ್ರಕಾರ ಮೊದಲ 5 ವರ್ಷದಲ್ಲಿ, 121 ದಿನಗಳಲ್ಲಿ 4000 ಜನರನ್ನು ಸೆರೆಮನೆಯಲ್ಲಿ ಬಂಧಿಸಲಾಯಿತುಪ್ರಮುಖವಾಗಿ ಗೋವಾದ ಹಿಂದುಗಳಿಗೆ ಈ ಅನ್ವೇಷಣೆಯು ಹೆಚ್ಚು ಪರಿಣಾಮವನ್ನು ಬೀರಿತ್ತು, ಈ ಪೋರ್ಚುಗೀಸರ ಅನ್ವೇಷಣೆಯನ್ನು ಖಂಡಿಸಿದ ಹಿಂದೂಗಳನ್ನು ಸಾರ್ವಜನಿಕವಾಗಿ ಬಂಧಿಸಿ ಅವರಿಗೆ ಚಿತ್ರಹಿಂಸೆಯನ್ನು ಕೊಡಲಾಯಿತು. ಪೋರ್ಚುಗೀಸ್ ಪ್ರತಿನಿಧಿಗಳು ಭಾರತೀಯರೊಂದಿಗೆ ಬಹಳ ಕ್ರೂರವಾಗಿ ವರ್ತಿಸಿದರು. ಹಿಂದುಗಳು ಹಾಗೂ ಮುಸ್ಲಿಂರನ್ನು ಅವರ ಧರ್ಮಕ್ಕೆ ಮತಾಂತರ ಮಾಡುವ ಸಲುವಾಗಿ ಪೋರ್ಚುಗೀಸರು ಅದೇಷ್ಟು ಕೀಳು ಮಟ್ಟಕ್ಕೆ ಬೇಕಾದರೂ ಇಳಿಯಲು ಹಿಂದು ಮುಂದು ನೋಡುತ್ತಿರಲಿಲ್ಲ. ಕಾಥ್ರೇಡಲ್ ಧಾರ್ಮಿಕ ವೇದಿಕೆಯಲ್ಲಿ ಇವರ ಸಂಸ್ಕತಿಗೆ ವೀರೋಧಿಸಿದ ಹಿಂದೂಗಳನ್ನು ಹತ್ಯೆಗೈದರು. ಅವರ ಕುತ್ತಿಗೆಗಳನ್ನು ಕತ್ತರಿಗೆ ಬೆಂಕಿಯಲ್ಲಿ ಸುಟ್ಟು ಹಾಕಲಾಯಿತು. ಹಿಂದೂಗಳ ಸಂಗೀತ, ಆಚಾರ, ವಿಚಾರವನ್ನು ನಿಷೇಧಮಾಡಲಾಯಿತು, ಇದರ ಜೊತೆಗೆ ಹಿಂದೂ ಉಡುಪಿನ ಶೈಲಿಯನ್ನು ಕೂಡ ಬದಲಾವಣೆ ಮಾಡಿಸಿದರು. ಅನೇಕ ಹಿಂದೂ ದೇವಾಲಯಗಳನ್ನು ಚರ್ಚ್‍ಗಳಾಗಿ ಪರಿವರ್ತನೆ ಮಾಡಲಾಯಿತು. ಇತಿಹಾಸಕಾರ ಆರ್.ಎನ್ ಸ್ಯಾಕ್‍ಶೇನ(Sakshena) ತನ್ನ ಶಾಂತಿ ಮತ್ತು ಪ್ರೀತಿಯ ಸಂಬಂಧ ಎಂಬ ಲೇಖನದಲ್ಲಿ ಇವುಗಳ ಬಗ್ಗೆ ಉಲ್ಲೇಖಮಾಡಿದ್ದ.

ಹಿಂದೂ ವಿರೋಧಿ ಕಾನೂನು ಮತ್ತು ನಿಷೇಧಗಳು!!

ಪೋರ್ಚುಗೀಸರ ಅನ್ವೇಷಣೆಕಾರರು ಹಿಂದೂ ಧರ್ಮದ ಕಾನೂನುಗಳನ್ನು ನಿಷೇಧಿಸಿ, ಅವರ ಕಾನೂನನ್ನು ಜಾರಿಗೆ ತಂದರು. ಇವರ ಮಾತಿನ ಪ್ರತಿ ಅಂಚಿನಲ್ಲೂ
ಮತಾಂತರ ಇಲ್ಲವೇ ಸಾವು ಎಂಬ ಭಯಾನಕ ಸತ್ಯ ಅಡಗಿತ್ತು. ಬೃಹತ್ ಪ್ರಮಾಣದ ಭಾರತೀಯ ಧಾರ್ಮಿಕ ಕಾನೂನುಗಳನ್ನು ಕಟ್ಟು ನಿಟ್ಟಾಗಿ ನಿಷೇಧಿಸಿದರು.
ಹಿಂದುಗಳ ಸಂಗೀತ, ಉಡುಗೆ ತೊಡುಗೆಗಳ ಶೈಲಿಯನ್ನು ಇದರ ಜೊತೆ ಧಾರ್ಮಿಕ ಕ್ಷೇತ್ರಗಳನ್ನು ಸಂಪೂರ್ಣವಾಗಿ ಅವರ ಧರ್ಮಕ್ಕೆ ಬದಲಾಯಿಸುವ ಸಲುವಾಗಿ ಕಠಿಣ ಪ್ರಯತ್ನ ಮಾಡಿದರು. ಆದ್ದರಿಂದ ದೇವಾಲಯಗಳನ್ನು ಕೆಡವಿ ಅದೇ ಜಾಗದಲ್ಲಿ ಚರ್ಚ್‍ಗಳು ತಲೆ ಎತ್ತುವಂತೆ ಮಾಡಿ, ಅಲ್ಲಿದ್ದ ವಸ್ತುಗಳನ್ನು ಕೂಡ ನಾಶಮಾಡಿದರು. ಇದರೊಂದಿಗೆ ಹಿಂದುಗಳ ಪ್ರಮುಖ ಗ್ರಂಥಗಳನ್ನು ಅವರ ಕಣ್ಣೆದುರೆ ಸುಟ್ಟು ಹಾಕಲಾಯಿತು. ಆ ಪ್ರದೇಶದಲ್ಲಿ ಕೇವಲ ಕ್ರೈಸ್ತ ಗ್ರಂಥಗಳನ್ನೇ ಮಾರಾಟಮಾಡಲಾಯಿತು. ಹಿಂದೂಗಳನ್ನು ದ್ವೇಷಿಸುವುದು ಹಾಗೂ ಅವರನ್ನು ಮತಾಂತರ ಮಾಡುವುದೇ ಇವರ ದಿನಚರಿಯಾಗಿತ್ತು.

ಅನಾಥಾಲಯದ ಮಕ್ಕಳನ್ನು ಗೋವಾದ ಸೈಂಟ್. ಪೌಲ್ ಕಾಲೇಜಿಗೆ ಕರೆತರಬೇಕೆಂಬ ಆದೇಶವನ್ನು ಈ ಅನ್ವೇಷಣಾ ಕಛೇರಿಯು ಹೊರಡಿಸಿತು. ಆ ಅನಾಥಮಕ್ಕಳನ್ನು ಕ್ರೈಸ್ತಧರ್ಮಕ್ಕೆ ಮತಾಂತರ ಮಾಡುವ ಉದ್ದೇಶವನ್ನು ಇಟ್ಟು ಕೊಂಡು ಈ ಆದೇಶವನ್ನು ಹೊರಡಿಸಿದರು. ಗೋವಾದಲ್ಲಿದ್ದ ಈ ಕಾಲೇಜನ್ನು ಚರ್ಚ್‍ನ ಪುರೋಹಿತರು ನೋಡಿಕೊಳ್ಳುತ್ತಿದ್ದರು. ಹಿಂದೂ ಮಕ್ಕಳನ್ನು ಹಾಗೂ ಅವರ ತಂದೆ-ತಾಯಂದಿರನ್ನು ಅಪಹರಿಸಲಾಯಿತು, ಮತ್ತು ಅವರನ್ನು ಒತ್ತಾಯ ಪೂರಕವಾಗಿ ಮತಾಂತರ ಮಾಡಲಾಯಿತು. ಈ ರೀತಿಯ ಧಾರ್ಮಿಕ ಹಿಂಸೆಯಿಂದ ಮನನೊಂದ ಕೆಲ ಕುಟುಂಬಗಳು ತಮ್ಮ ಮಕ್ಕಳೊಂದಿಗೆ ಗೋವಾದಿಂದ ಪಲಾಯನ ಗೈದರು, ಇವರ ಅದೃಷ್ಟವಶಾತ್ ಕೆಲ ಕ್ರೈಸ್ತ ಪುರೋಹಿತರು ಹಣಕ್ಕೋಸ್ಕರ ಅವರ ಮಕ್ಕಳನ್ನು ಅವರಿಗೆ ಒಪ್ಪಿಸಿದರು, ಹಾಗೂ ಅವರಿಗೆ ಆ ಪುರೋಹಿತ ವರ್ಗವು ಅಲ್ಲಿಂದ ಪಲಾಯನಗೊಳ್ಳಲು ಸಹಾಯಮಾಡಿದರು.

ಹಿಂದೂ ಕುಟುಂಬಗಳು ಪಲಾಯನ ಮಾಡಲು ಸಹಾಯಮಾಡಿದ ಕ್ರೈಸ್ತ ಪುರೋಹಿತರಿಗೆ ಶಿಕ್ಷೆಯನ್ನು ನೀಡಲಾಯಿತು. ಇವರ ವಿರುದ್ಧ ಅಲ್ಲಿಯ ಪ್ರಧಾನ ಬಿಷಪ್‍ಗೆ ದೂರು ನೀಡಲಾಯಿತು. ಆತನು ಹೊಸ ಕ್ರಮಗಳನ್ನು ಕೈಗೊಂಡು ಹಿಂದುಗಳ ಮತಾಂತರಕ್ಕೆ ಅಧಿಕ ಒತ್ತನ್ನು ನೀಡಿದ. ಇವನು ಹಿಂದು ಧರ್ಮವನ್ನು ತೊರೆದು ಅವರ ಧರ್ಮವನ್ನು ಸ್ವೀಕರಿಸಿದವರಿಗೆ ಪ್ರೋತ್ಸಾಹವನ್ನು ನೀಡಿ ಅವರಿಗೆ ಎಲ್ಲ ರೀತಿಯ ಸಹಾಯವನ್ನು ಮಾಡುತ್ತಿದ್ದ. ಕೇವಲ ಹಿಂದುಗಳೇ ವಾಸಿಸುತ್ತಿದ್ದ ಪ್ರದೇಶಗಳಲ್ಲಿ ಬೃಹತ್ ಸೈನ್ಯ ಹಾಗೂ ಶಸ್ತ್ರಾಸ್ತ್ರಗಳನ್ನು ನಿರ್ಮಾಣಮಾಡಿದ. ಇವುಗಳೊಂದಿಗೆ ಅಧಿಕ ಪುರೋಹಿತವರ್ಗಗಳನ್ನು ಮತಾಂತರ ಮಾಡಲು ಕಳುಹಿಸಿದ. ಮಧ್ಯಮ ಕ್ಯಾಥೋಲಿಕ್ ವರ್ಗಗಳು ಹಿಂದೂಗಳೊಂದಿಗೆ ಕೆಲವು ವಿಚಾರಗಳಲ್ಲಿ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದ್ದರು. ಈ ಮಧ್ಯಮ ವರ್ಗಗಳು ಕೂಡ ಇದರಿಂದ ಶಿಕ್ಷೆಗೆ ಒಳಗಾಗುತ್ತಿದ್ದವು. ಹಿಂದುಗಳ ಅಸ್ತಿತ್ವದಲ್ಲಿರುವ ಆಸ್ತಿ-ಪಾಸ್ತಿಗಳನ್ನು ತಮ್ಮ ವಶವಡಿಸಿಕೊಂಡರು. ಹಿಂದೂ ಕಾರ್ಮಿಕರನ್ನು ತುಂಬಾ ಕಠಿಣವಾಗಿ ನಡೆಸಿಕೊಂಡರು, ಕಾರ್ಮಿಕರನ್ನು ಮತಾಂತರ ಮಾಡುವ ಸಲುವಾಗಿ ಅವರಿಗೆ ಚಿತ್ರಹಿಂಸೆ ನೀಡಲಾಗುತ್ತಿತ್ತು.

1580-1591 ರಲ್ಲಿ ಗೋವಾದ ಗವರ್ನರ್ ತನ್ನ ಆಡಳಿತ ಸಂದರ್ಭದಲ್ಲಿ ಹಿಂದುಗಳ ಆಚಾರ- ವಿಚಾರಗಳನ್ನು ಹಾಗೂ ಹಲವಾರು ಸಂಪ್ರದಾಯವನ್ನು ನಂಬುತ್ತಿದ್ದ. ಹಾಗೂ ಈತ ಮುಹೂರ್ತಗಳನ್ನು ಕೂಡ ನಂಬುತ್ತಿದ್ದು, ಹಡಗುಗಳನ್ನು ಚಾಲನೆ ಮಾಡುವಾಗ ಅವುಗಳ ಚಾಲನೆಯ ಮೊದಲು ಕಾಲಭವಿಷ್ಯವನ್ನು ನೋಡುತ್ತಿದ್ದ. ಇವುಗಳಿಗೆ ಹಿಂದೂಗಳ ಸಹಾಯವನ್ನು ಪಡೆಯುತ್ತಿದ್ದ, ಎನ್ನಲಾಗಿದೆ.

ಪೋರ್ಚುಗೀಸರ ಅನ್ವೇಷಣೆಕಾರರ ಕಛೇರಿಯು ಗೋವಾದಲ್ಲಿ ಇದ್ದು, ಅವರ ಈ ಅನ್ವೇಷಣೆಯನ್ನು ತಿರಸ್ಕರಿಸಿದ ಹಿಂದೂಗಳಿಗೆ ಅವರು ಮರಣ ದಂಡನೆಯನ್ನು
ನೀಡುತ್ತಿದ್ದರು. ಅನ್ವೇಷಣೆಕಾರರ ಸಮಾವೇಶದ ಎದುರು ಭಾರತೀಯ ಹಿಂದೂಗಳಿಗೆ ಚಿತ್ರ ಹಿಂಸೆಯನ್ನು ನೀಡುತ್ತಿದ್ದು, ಆ ಅಮಾಯಕ ಹಿಂದೂಗಳು ಯಾವುದೇ ತಪ್ಪು ಮಾಡದಿದ್ದರು ಕೂಡ ತಪ್ಪು ಒಪ್ಪಿಕೊಳ್ಳಬೇಕಿತ್ತು. ಇಲ್ಲವಾದಲ್ಲಿ ಇವರನ್ನು ಜೀವಂತವಾಗಿ ಸುಟ್ಟು ಹಾಕಲಾಯಿತು. ಹಿಂದೂಗಳ ಧಾರ್ಮಿಕ ಗ್ರಂಥಗಳನ್ನು ವಿರೋಧಿಸಿ ಅವುಗಳನ್ನು ರದ್ದು ಮಾಡಿದರು. ಹಿಂದೂಗಳು ನಿರ್ಮಾಣ ಮಾಡಿದ್ದ ಕಿರು ಚಿತ್ರಗಳ ಬಿಡುಗಡೆಯನ್ನು ತಡೆ ಹಿಡಿದು ಅದನ್ನು ವಿರೋಧಿಸಿದರು.

ಬ್ರಿಟಿಷ್ ಯುಗದ ಸಂದರ್ಭದಲ್ಲಿ ಕ್ರೈಸ್ತ ಮಿಷನರಿಗಳ ವಾಡಿಕೆಯಂತೆ, ಹಿಂದೂಗಳ ಧಾರ್ಮಿಕ ನಂಬಿಕೆಗಳಿಗೆ ಚ್ಯುತಿ ತಂದು ಬಿಟ್ಟಿತು. ಹೌದು! ಇವರು ಹಿಂದುಗಳನ್ನು ಅವಮಾನಿಸಿ & ಹೀಯಾಳಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರು, ದೆವ್ವಗಳನ್ನು ಪೂಜಿಸುವ ಇವರು ಹಿಂದೂ ಧರ್ಮದ ಕರಪತ್ರಗಳನ್ನು, ಗ್ರಂಥಗಳನ್ನು ಸುಟ್ಟು ಹಾಕಿದರು, ಮಾನವೀಯತೆ ಎಂಬ ಪದದ ತದ್ವಿರುದ್ಧವಾಗಿರುವ ಇವರ ಕಾನೂನುಗಳು ಅದೆಷ್ಟು ಕ್ರೂರವಾಗಿತ್ತೆಂದರೆ ಬಡ ಹಿಂದುಗಳನ್ನು ಅಪಹರಣಮಾಡಿ, ಅವರಿಗೆ ಹಿಂಸೆ ನೀಡುವ ಮೂಲಕ, ತಮ್ಮ ಧರ್ಮಪ್ರಚಾರವನ್ನು ಕೈಗೊಂಡರು. ಇವರು ಸಾವಿರಾರು ಹಿಂದು ಮುಸ್ಲಿಂರನ್ನು ಮತಾಂತರ ಮಾಡಿದರು, ಹಾಗೂ ಇವರನ್ನು ಇತರ ಭಾರತೀಯರ ವಿರುದ್ಧ ಎತ್ತಿಕಟ್ಟಿದರು. ಇವರ ಈ ಚಟುವಟಿಕೆಗಳು 1857 ರ ದಂಗೆಯಲ್ಲಿ ಹಿಂದೂ ಮತ್ತು ಮುಸ್ಲಿಂರ ಇವರ ವಿರುದ್ಧದ ಅಸಮಾಧಾನಕ್ಕೆ ಕಾರಣವಾಯಿತು.

ಅದೇ ಸಂದರ್ಭದಲ್ಲಿ ಕ್ರೈಸ್ತಮಿಷನರಿಗಳು ಈಶಾನ್ಯ ಭಾಗದ ಸಂಪೂರ್ಣ ಪ್ರದೇಶವನ್ನು ತಮ್ಮ ಚಟುವಟಿಕೆಗಳ ಮೂಲಕ ಆಕ್ರಮಿಸಿದ್ದರು. ಅವರ ಅಸ್ತಿತ್ವದ ಎಲ್ಲಾ
ಪ್ರದೇಶಗಳಲ್ಲಿ ಕೇವಲ ಕ್ರೈಸ್ತಧರ್ಮದ ಸಂಸ್ಕ್ರತಿಯನ್ನೇ ಬೆಳೆಸಿದರು, ಅಲ್ಲಿಯ ಜನರನ್ನು ಸಂಪೂರ್ಣವಾಗಿ ಅವರ ಕೈವಶಮಾಡುವ ಉದ್ದೇಶದಿಂದ ಅದರಲ್ಲೂ
ಪ್ರಮುಖವಾಗಿ ನಾಗಾಲ್ಯಾಂಡ್‍ನಲ್ಲಿ ಹಿಂದುಗಳಿಗೆ ದುರ್ಗಪೂಜೆಮಾಡಲು ಅವಕಾಶ ನೀಡಲಿಲ್ಲ. ಇವರು ಕ್ರೈಸ್ತ ಭಯೋತ್ಪಾದಕರಿಂದ ಭಯಬೀತರಾಗಿದ್ದರು. ತ್ರಿಪುರಾದಲ್ಲಿ “ನ್ಯಾಷನಲ್ ಲಿಬರೇಶನ್ ಪ್ರಂಟ್ ಆಪ್ ತ್ರಿಪುರಾ” ಎಂಬ ಸಂಸ್ಥೆಯು ಹಿಂದೂ ದೇವಸ್ಥಾನಗಳಿಗೆ ಹಾಗೂ ಸನ್ಯಾಸಿಗಳ ಮೇಲೆ ದಾಳಿ ಮಾಡಿ ಅವರನ್ನು ನಾಶ ಪಡಿಸುವುದನ್ನೇ ತಮ್ಮ ಹವ್ಯಾಸವನ್ನಾಗಿಸಿಕೊಂಡಿದ್ದರು. ನ್ಯೂಝಿಲ್ಯಾಂಡ್ ನ ಕ್ರೈಸ್ತ ಪಾರಮ್ಯವಾದಿಗಳು ಹಿಂದೂಗಳನ್ನು ನಾಶಮಾಡಲು ಹಲವಾರು ಶಸ್ತ್ರಾಸ್ತ್ರಗಳ ಸರಬರಾಜು ಮಾಡಿ ಈ ಅಮಾನವೀಯ ಕೃತ್ಯಕ್ಕೆ ಪ್ರೋತ್ಸಾಹ ಮಾಡಿದರು. ಹಲವಾರು ಹಿಂದೂಗಳನ್ನು ಹಿಂಸಿಸಿ, ಕೆಲವರನ್ನು ಗುಂಡಿಕ್ಕಿ ಕೊಂದರು. 90 ರ ದಶಕದಲ್ಲಿ ಈ ಪಾಪಿಗಳು ಸರಿಸುಮಾರು 13,000 ಹಿಂದುಗಳನ್ನು ನಿಷ್ಟುರವಾಗಿ ಕೊಂದು, ಬಾಕಿ ಉಳಿದವರನ್ನು ಮತಾಂತರ ಮಾಡಿದರು. ಅವರ ನೀತಿ ನಿಯಮವನ್ನು ಬಲವಂತವಾಗಿ ಒಪ್ಪುವಂತೆ ಮಾಡಿದರು. ಇವರಲ್ಲಿ ಅನೇಕ ಮಂದಿ ಭಾರತೀಯ ಸೇನೆಗೆ ಶರಣಾದರು. ಮೂಲಭೂತ ಕ್ರೈಸ್ತ ಭಯೋತ್ಪಾದಕರು ಉದಾಹರಣೆಗೆ ನಾಗಾಲ್ಯಾಂಡ್ ರೆಬಲ್ಸ್ ನಂತಹವರೂ ಇದೇ ರೀತಿ ಮತಾಂತರ ಮಾಡುವ ಹಾದಿಯನ್ನೇ ಬಳಸುತ್ತಿದ್ದರು.

90 ನೇ ದಶಕದಲ್ಲಿ ಏಷ್ಯಾದ ಫಿಜ್ ನಲ್ಲಿ 38% ಹಿಂದೂಗಳಾಗಿದ್ದರು. ಆದರೆ ಕೆಲವು ಅಂಶಗಳು ಇಲ್ಲಿ ಹಿಂದು ವಿರೋಧಿಗಳನ್ನು ಸೃಷ್ಟಿ ಮಾಡಿತು. ಫಿಜ್ ಸರ್ಕಾರದ
ಪ್ರಧಾನ ಮಂತ್ರಿಯಾಗಿದ್ದ ಮಹೇಂದ್ರ ಚೌಧರಿ ಗೊರಿಲ್ಲ ಎಂಬ ಭಯೋತ್ಪಾದಕ ತಂಡದಿಂದ ಅಪಹರಣಕ್ಕೊಳಗಾಗಿದ್ದ. ಆದ್ದರಿಂದ ಆತನಲ್ಲಿ ಕ್ರೈಸ್ತ ಅನ್ವೇಷಣಾಕಾರರು ಫಿಜ್‍ನಲ್ಲಿ ತಮ್ಮ ಅಸ್ತಿತ್ವವನ್ನು ಸ್ಥಾಪಿಸುವ ಸಲುವಾಗಿ ಹಲವಾರು ಬೇಡಿಕೆಗಳನ್ನು ಇವನ ಮುಂದೆ ಇಡುತ್ತಾರೆ. ಇವರು ಹಿಂದುಗಳು ಹೊಂದಿದ್ದ ಅಧಿಕಾರವನ್ನು ಕಿತ್ತುಕೊಂಡು ಹಾಗೂ ಅವರ ಭೂ ಮಾಲಿಕತ್ವವನ್ನು ಅವರು ಕೈಬಿಡುವಂತೆ ಮಾಡಿದರು. ಇವರು ಸಾವಿರಾರು ಹಿಂದು ದೇವಾಲಯಗಳನ್ನು ಫಿಜ್‍ನಲ್ಲಿ ನಾಶಮಾಡಿದರು. ಫಿಜ್ ನ ಮೆಥೋಡಿಸ್ಟ್ ಚರ್ಚ್ ನಿರ್ಮಾಣ ಮಾಡಿ ಕ್ರೈಸ್ತ ರಾಜ್ಯವನ್ನು ಸ್ಥಾಪನೆ ಮಾಡಲು ಮುಂದಾದರು.

ಹಾಗೂ 1987 ರ ಕ್ಷಿಪ್ರ ಕ್ರಾಂತಿ ಡಿ ಟ್ಯಾಟ್ ನ ನಂತರ ಇದಕೋಸ್ಕರ ಹಿಂದೂಗಳನ್ನು ಒತ್ತಾಯ ಪೂರ್ವಕವಾಗಿ ಮತಾಂತರ ಮಾಡಲು ಅನುಮೋದನೆ ಮಾಡಿದರು. 1838 ರಲ್ಲಿ ಬ್ರಿಟಿಷ್ ಗಯಾನಾಗೆ ಮತ್ತು ಆನಂತರ ಟ್ರಿನಿಡಾಡ್, ಜಮೈಕಾ, ಗ್ರೆನಡಾ, ಸೇಂಟ್ ಲೂಸಿಯಾ, ಮಾರ್ಟಿನಿಕ್ , ಗುಡೆಲೋಪ್ ಮತ್ತು ಸುರಿನಾಮಗಳಿಗೆ ಭಾರತೀಯರು, ಅದರಲ್ಲೂ ಪ್ರಮುಖವಾಗಿ ಹಿಂದೂಗಳು ಒಪ್ಪಂದದ ಮೇರೆಗೆ ಆಗಮಿಸಿದರು. ಈ ಒಪ್ಪಂದವಾದ ಮೊದಲ ದಶಕದಲ್ಲಿ ಭಾರತೀಯರ ಸಂಸ್ಕತಿಗಳನ್ನು ಇವರು ಅವಮಾನಿಸಿ ತಿರಸ್ಕರಿಸಿದರು. ಹಾಗೂ ಇಲ್ಲಿ ಹಿಂದೂಗಳನ್ನು ದ್ವಿತೀಯ ದರ್ಜೆಯ ಹಿಂದೂಗಳೆಂದು ಪರಿಗಣಿಸಿದ್ದರು. ಹಿಂದೂಗಳು ಟ್ರೆನಿಡಾಡ್ ನ ಇತಿಹಾಸಕ್ಕೆ ಬಹಳಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಅಲ್ಲಿದ್ದ ಹಿಂದುಗಳು ವಯಸ್ಕರ ಫ್ರ್ಯಾಂಚೈಸ್ , ಹಿಂದೂ ವಿವಾಹ ಮಸೂದೆ, ವಿಚ್ಚೇದನ ಮಸೂದೆ ಹಾಗೂ ಸ್ಮಶಾನ ಆದೇಶದ ವಿರುದ್ಧ ಹೋರಾಡಿದರು. ಟ್ರೆನಿಡಾಡ್‍ನಲ್ಲಿ ನ ಹಿಂದೂಗಳನ್ನು ವಸಾಹತು ಆಳ್ವಿಕೆಯಿಂದ ಸ್ವತಂತ್ರ್ಯಗೊಂಡನಂತರ ಹಿಂದೂಗಳನ್ನು ಆಫ್ರಿಕನ್ ಮೂಲಕ ಜನರ ರಾಷ್ಟ್ರೀಯ ಚಳುವಳಿಯ ಅಂಚಿನಲ್ಲಿಟ್ಟುಕೊಂಡರು.

ಇವರ ಎದುರಾಳಿಯ ಪಕ್ಷವಾದ ಪೀಪಲ್ಸ್ ಡೆಮಾಕ್ರೆಟಿಕ್ ಪಕ್ಷವನ್ನು “ ಹಿಂದುಗಳ ಗುಂಪು” ಎಂದು ಕರೆಯಲಾಯಿತು. ಹಿಂದುಗಳ ವಿರುದ್ಧ ವಿವಿಧ ತಂತ್ರಗಳನ್ನು
ಬಳಸಲಾಯಿತು. ಹಿಂದೂಗಳನ್ನು ಹಿಂಸಾಚಾರಿಗಳು ಹಾಗೂ ವಿರೋಧಿ ಅಲ್ಪಸಂಖ್ಯಾತರು ಎಂದೆಲ್ಲಾ ಆರೋಪಿಸಲಾಯಿತು, ಅಂತಹ ಕ್ರಿಶ್ಚಿಯನ್ ಸಮುದಾಯಿಕ
ಗುಂಪುಗಳಿಂದ ಹಿಂದೂಗಳನ್ನು ಪ್ರತ್ಯೇಕಿಸಲಾಯಿತು. ಕಾರ್ನವಲ್ಸ್‍ನಲ್ಲಿ ಕ್ರೆಒಲ್ ಕಲಾ ಪ್ರಕಾರಗಳಿಗೆ ಪಿಎನ್‍ಎಮ್ ಸರ್ಕಾರವು ಬೆಂಬಲ ನೀಡಿದ್ದು, ಹಿಂದೂಗಳ ಕಲಾಪ್ರಕಾರವನ್ನು ಸಾರ್ವಜನಿಕವಾಗಿ ನಿರಾಕರಣೆ ಮಾಡಲಾಯಿತು, ಹಿಂದು ಕಲಾಕೃತಿಯನ್ನು ಹಾಸ್ಯಾಸ್ಪದವಾಗಿ ಕಂಡು ಅದನ್ನು ಕಡೆಗಣಿಸಿದರು. ಇದು ಅಲ್ಲಿಯ ಹಿಂದೂ ಅಲ್ಪಸಂಖ್ಯಾತರ ವಿವಾದಾಸ್ಪದದ ಮೂಲವೆಂದು ಪರಿಗಣಿಸಲಾಗಿದೆ. 1985 ರಲ್ಲಿ ಪಿಎನ್‍ಎಮ್ ಸರ್ಕಾರದ ಅಧಿಕಾರವು ಸ್ಥಳಾಂತರವಾದ ಮೇಲೆ ಅಲ್ಲಿಯ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಸುಧಾರಿಸುತ್ತದೆ.

1986 ರಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಲೆ ಬಂದ ನಂತರದ ಶಾಸನಗಳು ಟ್ರಿನಿಡಾಡ್ ಮತ್ತು ಟೊಬಾಗೋದ ಅಧಿಕೃತ ನಿವಾಸದಲ್ಲಿ ಹಿಂದೂ ಧಾರ್ಮಿಕ ಗ್ರಂಥಗಳನ್ನು ಪರಿಗಣಿಸಲಿಲ.್ಲ ಇದು ಅಲ್ಪಸಂಖ್ಯಾತ ಸಮುದಾಯಗಳಿಗೆ ಇದೊಂದು ಅವಮಾನಕರ ಸಂಗತಿಯಾಗಿ ಪರಿಣಮಿಸಿತು. ದೇಶದ ಅಗ್ರ ರಾಷ್ಟ್ರೀಯ ಪ್ರಶಸ್ತಿಯು ಟ್ರಿನಿಟ್ ಕ್ರಾಸ್‍ನಲ್ಲಿ ಕಾರ್ಯನಿರ್ವಹಿಸುವ ಪ್ರತ್ಯೇಕತಾವಾದಿ ಕ್ರಿಶ್ಚಿಯನ್ ಸಂಕೇತವು ನಿರಂತರವಾಗಿ ಹಿಂದೂ ಧಾರ್ಮಿಕ ಸಂವೇದನೆಯನ್ನು ಕಟ್ಟಿಹಾಕಿತು. 1995 ರಲ್ಲಿ ಹಿಂದೂ ಧರ್ಮಚರ್ಚೆಯಲ್ಲಿ ಓರ್ವ ಧರ್ಮಚಾರ್ಯ ಒಂದು ಹೇಳಿಕೆಯನ್ನು ನೀಡುತ್ತಾರೆ, ಇವರು “ಕ್ರೈಸ್ತಧರ್ಮಿಯರು ನೀಡುತ್ತಿದ್ದ ಪ್ರಶಸ್ತಿಯು ರಾಷ್ಟ್ರೀಕೃತಗೊಳ್ಳಬೇಕು. ಧರ್ಮದ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡಬಾರದೆಂದು ಹೇಳುತ್ತಾರೆ.” ಇದೇ ರೀತಿ ರಾಷ್ಟ್ರೀಯ ಶಿಕ್ಷಣ ವ್ಯವಸ್ಥೆಯಲ್ಲಿಯು ಹಿಂದೂಗಳಿಗೆ ಅವಮಾನಕರವಾಗಿಯೆ ಕಾನೂನುಗಳನ್ನು ಜಾರಿಗೆ ತರಲಾಗಿತ್ತು. ಪಠ್ಯಕ್ರಮದಲ್ಲಿ ಹಿಂದೂ ಧಾರ್ಮಿಕ ವಿಚಾರಗಳನ್ನು ನಿರಾಕರಿಸಿ ಕ್ರಿಶ್ಚಿಯನ್ ಉದ್ದೇಶಿತ ಪ್ರಾರ್ಥನೆಗಳ ಸಾಲನ್ನು ಬಳಸಿದರು. ಈ ಘಟನೆಯು ಅಲ್ಪಾಸಂಖ್ಯಾತ ಹಿಂದೂಗಳಿಗೆ ತೀವ್ರವಾದ ಅಸಮಾಧಾನವನ್ನುಂಟು ಮಾಡಿತು. 1980 ರ ದಶಕದ ಅವಧಿಯಲ್ಲಿ ಹಿಂದೂಗಳ ತೀವ್ರಕರವಾದ ಪ್ರತಿಭಟನೆಗಳು ಕ್ರಿಶ್ಚಿಯನ್ ರಾಜ್ಯದ ನೀಚ ವರ್ತನೆಯ ಬದಲಾವಣೆಗೆ ಕಾರಣವಾಯಿತು. ಇದು ಸ್ಥಳೀಯ ಹಿಂದೂ ಸಂಕ್ಕøತಿಯ ಕೆಲವು ಅಂಶಗಳ ವಿಭಜನೆಗೆ ಕಾರಣವಾಯಿತು. ಟ್ರಿನಿಡಾಡ್ ನಿಂದ ಹಿಂದೂ ಸಮುದಾಯದ ಪ್ರತ್ಯೇಕಗೊಂಡು ಅಲ್ಲಿ ತಮ್ಮ ಅಸ್ತಿತ್ವವನ್ನು ಬೇರೂರಿಸಿ ತಮ್ಮ ಗುರುತನ್ನು ಎತ್ತಿ ಹಿಡಿಯಲು ಇದು ಪ್ರಮುಖ ಕಾರಣವಾಯಿತು. “ಟ್ರಿನಿಡಡ್ ಹಿಂದೂ ಧರ್ಮ” ಎಂದು ಕರೆಯಲ್ಪಡುವ ಅಂಶಗಳು ಇಂದಿಗೂ ಕೂಡ ಹಿಂದೂ ಸಂಸ್ಕತಿಯ ಆಯಾಮಗಳು. ರಾಜ್ಯದೊಂದಿಗೆ ಸಂಪರ್ಕಕ್ಕೆ ಬಂದಾಗ ಭಿನ್ನಾಭಿಪ್ರಾಯವನ್ನು ಉಂಟುಮಾಡುತ್ತಿದೆ. ಅನೇಕ ಸಂದರ್ಭದಲ್ಲಿ ಅಸಮಂಜಸತೆಗಳು ಇವುಗಳ ಚರ್ಚೆಯನ್ನು ಮುಂದುವರೆಸುತ್ತಿದೆ. ಅನೇಕ ವೇಳೆ ಇಂತಹ ಸನ್ನಿವೇಶಗಳು ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ. ಟ್ರಿನಿಡಾಡ್ ನ ಹಿಂದೂ ಅಲ್ಪಸಂಖ್ಯಾತರಿಗೆ ತಮ್ಮ ರಾಜ್ಯದ ಬಗೆಗಿನ ಜಾಗೃತಿ ಮೂಡಿದೆ.

ಸೈಟಾಗಳು ಮತ್ತು ದ್ವೇಷದ ಗುಂಪುಗಳು ಜಗತ್ತಿನಾದ್ಯಂತ ತಪ್ಪು ಹೇಳಿಕೆಗಳನ್ನು, ಮಾಹಿತಿಯನ್ನು, ಸುಳ್ಳು ಸಂಗತಿಯನ್ನು ಪ್ರಚಾರ ಮಾಡಿ ಜನರನ್ನು
ಮತಾಂತರಗೊಳ್ಳಲು ಹುರಿದುಂಬಿಸುತ್ತವೆ . ಮತಾಂತರವಾಗದ ಪಕ್ಷದಲ್ಲಿ ಈ ಗುಂಪುಗಳು ಜನರ ಹತ್ಯೆ ಮಾಡಲೂ ಕೂಡ ಹಿಂಜರಿಯುವುದಿಲ್ಲ.

ಇತಿಹಾಸಕಾರ ಅಲ್ಪ್ರೆಡೋ ಡೆಮೆಲೋ ಅಪ್ಟ್ಲಿ ವರ್ಣಿಸುವ ಹಾಗೆ ಗೋವಾ ಅನ್ವೇಷಣೆ ಎನ್ನುವುದು ಒಂದು ಮಹಾಪಾತಕ, ಪೈಶಾಚಿಕ, ಕಾಮಾಸಕ್ತಿಯುಳ್ಳ, ಭ್ರಷ್ಟವಾದ, ಹಿಂದೂ ಸಿದ್ಧಾಂತಗಳನ್ನು ನಾಶ ಮಾಡಿ ಹೊಸದಾದ ಕ್ರೈಸ್ತ ಮತವನ್ನು ಪರಿಚಯಿಸಲು ಮಾಡಿದ ಕುತಂತ್ರವಷ್ಟೇ. ಇಲ್ಲಿಯವರೆಗೂ ಭಾರತದ ಮೇಲೆ ಅದೆಷ್ಟೋ ಆಕ್ರಮಣಕಾರರು ಅಥವಾ ದಾಳಿಕೋರರು ದಾಳಿ ಮಾಡಿ, ಮತಾಂತರ ಮಾಡಲು ಹರಸಾಹಸ ಮಾಡಿದ್ದಾರೆ, ಭಾರತದ ಆಚಾರ ವಿಚಾರಗಳನ್ನು ಬದಲಾಯಿಸುವ ವ್ಯರ್ಥಪ್ರಯತ್ನ ಮಾಡಿದ್ದಾರೆ. ಇಡೀ ಭಾರತವನ್ನೇ ಬುಡಮೇಲು ಮಾಡಿದರು ಕೂಡ ಭಾರತವು ಹಿಂದೂ ರಾಷ್ಟ್ರವಾಗಿಯೇ ಉಳಿದಿರುವುದು ನಾವೆಲ್ಲ ಹೆಮ್ಮೆಪಡಬೇಕಾದ ಸಂಗತಿಯೇ ಸರಿ.

-Kavya Anchan

Tags

Related Articles

Close