ಅಂಕಣ

ಇವರಾವುದೇ ರಾಜಕಾರಣಿಯಲ್ಲ! ಭಾರತದ ಪ್ರತಿ ಗೆಲುವಿನ ಹಿಂದಿದೆ ಇವರ ಕೈಚಳಕ!! ಶಕ್ತಿಯುತ ರಾಷ್ಟ್ರವಾಗಿಸುವಲ್ಲಿ ಇವರು ಪಟ್ಟ ಶ್ರಮ ಅದ್ಭುತ!

ಭಾರತವನ್ನು ಜಗತ್ತಿನ ಶಕ್ತಿಯುತ ರಾಷ್ಟ್ರಗಳ ಪಟ್ಟಿಯಲ್ಲಿ ನಿಲ್ಲಿಸಿದ ವಿಜ್ಞಾನಿಗಳ ಬಗ್ಗೆ ನಾವು ತಿಳಿದುಕೊಳ್ಳುವ ಪ್ರಯತ್ನ ಯಾವತ್ತಾದರೂ ಮಾಡಿದ್ದೇವಾ?

ದೇಶದ ಆತ್ಮಗೌರವ ರಕ್ಷಣೆಗೆ ಕಣಕಣವನ್ನು ಬಸಿದ ವಿಜ್ಞಾನಿಗಳು ನಮ್ಮ ಕಣ್ಣಿಗೆ ಯಾವತ್ತಾದರೂ ಹಿರೋ ತರ ಕಾಣಿಸಿದ್ದಾರಾ?

ಕೇವಲ ಕ್ರಿಕೇಟಿಗರು, ಸಿನಿಮಾ ತಾರೆಯರೆ ನಮ್ಮ ಪಾಲಿಗ ಹಿರೋಗಳು ಅನಿಸಿಕೊಳ್ಳುತ್ತಿದ್ದಾರೆ ಇದು ಎಂತಹ ವ್ಯಥೆ ಅಲ್ವಾ?

ಬರೀ ರಾಜಕೀಯ ಕೆಸರೆರಚಾಟ,ಆಸೆಬುರುಕ ಮಾಧ್ಯಮಗಳ ನ್ಯಾಶನಲ್ ವೇಸ್ಟ್ ಶೋಗಳನ್ನು ನೋಡುವುದರಲ್ಲೇ ನಮಗೆ ಖುಷಿ ಅಲ್ವಾ? ಅದಕ್ಕೆ ತಕ್ಕಂತೆ
ಆಸೆಬುರುಕ ಮಾಧ್ಯಮಗಳು ತಮ್ಮ ಜವಾಬ್ದಾರಿಯನ್ನು ಮರೆತು ದೇಶದ ಕುರಿತಾದ ಸುದ್ದಿಗಳನ್ನು ಜನರಿಗೆ ತಿಳಿಸಿ ಜಾಗೃತರನ್ನಾಗಿ ಮಾಡೋದು ಬಿಟ್ಟು
ನೀರ್ವೀರ್ಯರನ್ನಾಗಿ ಮಾಡುತ್ತಿವೆ. ಹೌದು ಖಂಡಿತ ಮಾಧ್ಯಮಗಳ ಪರಿಣಾಮ ಈಗಿನ ಯುವಕ,ಯುವತಿಯರ ಮೇಲೆ ಬೀಳುತ್ತದೆ. ದೇಶದ ತೇರನ್ನು ಎಳೆಯುವ
ಯುವಕರನ್ನು ಹಾಳು ಮಾಡೋದು ಇದೇ ಮಾಧ್ಯಮಗಳು. ಯುವಕರನ್ನು ಬಡಿದೆಬ್ಬಿಸಿ ರಾಷ್ಟ್ರಭಕ್ತಿಯನ್ನು ತುಂಬುವುದು ಬಿಟ್ಟು,ಬೇಡವಾದದ್ದನ್ನೆಲ್ಲಾ ತುಂಬುತ್ತಿರುವುದು ಮಾಧ್ಯಮಗಳೇ. ಈ ನಿಟ್ಟಿನಲ್ಲಿ ಮಾಧ್ಯಮಳ ಜವಾಬ್ದಾರಿಯ ಬಗ್ಗೆ ಎಚ್ಚರಿಸಿ ಹೇಳಬೇಕಾಗಿದೆ.

1998ರಲ್ಲಿ ಫೋಕ್ರಾನ್ ನಲ್ಲಿ ಅಣ್ವಸ್ತ್ರ ಪರೀಕ್ಷೆಯನ್ನು ಮಾಡಿ ಯಶಸ್ವಿಯಾಗಿ ಜಗತ್ತಿನ ಮುಂದೆ ಹೆಮ್ಮೆಯಿಂದ ತಲೆ ಎತ್ತಿ ನಿಲ್ಲುವಂತೆ ಮಾಡಿದ್ದ ವಿಜ್ಞಾನಿಗಳ ಶ್ರಮದ ಬಗ್ಗೆ ಯಾವತ್ತಾದರೂ ಆಲೋಚಿಸಿದ್ದೇವಾ? ವಿಜ್ಞಾನಿಗಳು ಅಂದ ತಕ್ಷಣ ನಮ್ಮ ಕಣ್ಣೆದುರಿಗೆ ಬರುವುದು AC ರೂಮಿನಲ್ಲಿ ಆರಾಮಾಗಿರುವವರು ಅಂತ ಆದರೆ ಅಂದು 1998ರಲ್ಲಿ ಫೋಕ್ರಾನಿನಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಯಿತಲ್ಲ ಆಗ ವಿಜ್ಞಾನಿಗಳು ವಿದೇಶಿ ಗೂಢಾಚಾರಿಗಳಿಗೆ ಅನುಮಾನ ಬಾರದಿದರಲೆಂದು ಸೈನಿಕರ ವೇಷ ಧರಿಸಿ ಕೆಲಸ ಮಾಡಿದ್ದರು. ರಾಜಸ್ತಾನದ ಆ ಬಿರು ಬಿಸಿಲಿನಲ್ಲಿ , ಉರಿಯುವ ಟೆಂಟುಗಳಲ್ಲಿ ಎಸಿ ಇರಲಿ , ಫ್ಯಾನೂ ಇಲ್ಲದೆ ಕೆಲಸ ಮಾಡಬೇಕಿತ್ತು. ಗಾಳಿಗೆ ವೈರ್ ಗಳು ಒಂದಕ್ಕೊಂದು ತಿಕ್ಕಾಡಿ ಬೆಂಕಿ ಹತ್ತಿಕೊಂಡರೆ ಆ ವಿಜ್ಞಾನಿಗಳ ಕಥೆಯೇ ಮಗಿಯಿತು. ಅಂತಹ ಸಂದರ್ಭದಲ್ಲಿಯೂ ವಿಜ್ಞಾನಿಗಳು ಹಿಂದೆ ಸರಿಯುವ ಮಾತೇ ಆಡಲಿಲ್ಲ. ಅವರೆಲ್ಲಾ ಅದೆಷ್ಟೋ ವರ್ಷಗಳಿಂದ ಅಣ್ಣವಸ್ತ್ರ ಪರೀಕ್ಷೆ ಮಾಡಬೇಕೆಂದು ಕನಸು ಕಂಡವರು. ಆ ಕನಸನ್ನು ನನಸಾಗಿಸಲಯ ವಾಜಪೇಯಿಯವರು ಬಂದಿದ್ದರು. ಹೀಗಾಗಿ ಕನಸನ್ನು ನನಸು ಮಾಡಿಕೊಂಡು ಜಗತ್ತಿನ ಮುಂದೆ ಬೀಗುವಂತ ರಾಷ್ಟ್ರವನ್ನಾಗಿ ಭಾರಯವನ್ನು ಮಾಡಬೇಕೆಂಬ ಆಸೆ , ಹಠ ವಿಜ್ಞಾನಿಗಳಲ್ಲಿತ್ತು.

1998ರಲ್ಲಿ ಫೋಕ್ರಾನ್ ನಲ್ಲಿ ಅಣ್ವಸ್ತ್ರ ಪರೀಕ್ಷೆಯನ್ನು ಯಶಸ್ವಿ ಮಾಡಿ,ಇಡೀ ಜಗತ್ತಿನ ಮುಂದೆ ಭಾರತ ಎದೆ ಉಬ್ಬಿಸುವಂತೆ ಮಾಡಿ ಇಡಿಯ ಯೋಜನೆಯ ಮಹತ್ವದ ಕೊಂಡಿಯಾಗಿದ್ದ ವಿಜ್ಞಾನಿ ಕಾಕೋಡ್ಕರ್ ರ ಬಗ್ಗೆ ನಾವು ಯಾವತ್ತು ಯೋಚಿಸಲೇ ಇಲ್ಲ. ಅಣ್ವಸ್ತ್ರ ಪ್ರಯೋಗದ ಸಂದರ್ಭದಲ್ಲಿ ಕಾಕೋಡ್ಕರ್ ತಂದೆ ತೀರಿಕೊಂಡ ಸುದ್ದಿ ಬಂದಾಗ. ದುಃಖತಪ್ತ ಮಗ ಕಾಕೋಡ್ಕರ್ ತಂದೆಯ ಅಂತ್ಯ ಸಂಸ್ಕಾರ ಮುಗಿಸಿ , ಮುಂದಿನ ಅನುಷ್ಠಾನಗಳಿಗೆ ಕಾಯದೇ ಮರಳಿ ಬಂದುಬಿಟ್ಟಿದ್ದರು ಇಂತಹ ವಿಜ್ಞಾನಿಗಳ ಬಗ್ಗೆ ನಾವು ನೆನಪು ಮಾಡಿಕೊಳ್ಳದೇ ಇದ್ದರೆ ಕೃತಘ್ನ ಅನಿಸಿಕೊಳ್ತೀವಿ.

ಇತ್ತೀಚಿಗೆ ಈ ಉಗ್ರವಾದಿಗಳು ಮತ್ತು ಅವರ ಸಂಘಟನೆಗಳು ನೇರವಾಗಿ ಬಾಂಬ್ ದಾಳಿ ಅಥವಾ ಬೇರೆ ದಾಳಿ ಮಾಡದೇ ಪರೋಕ್ಷವಾಗಿ ದೇಶದ ಭದ್ರತೆಯ ಈ ವೈಜ್ಞಾನಿಕ, ತಂತ್ರಜ್ಞಾನ ಹಾಗೂ ಆರ್ಥಿಕತೆಯನ್ನು ಸದೆಬಡಿಯಲು ಗೌಪ್ಯವಾಗಿ ದೇಶದ ತಂತ್ರಜ್ಞಾನಿಗಳನ್ನು, ವಿಜ್ಞಾನಿಗಳನ್ನು, ಇಂಜಿನಿಯರ್ ಗಳನ್ನು ಹತ್ಯೆ ಮಾಡಲಾಗುತ್ತಿವೆ ಇದಕ್ಕೆ ಕೆಲ ರಾಜಕೀಯ ಪಕ್ಷಗಳೇ ಬೆಂಬಲ ಕೊಡುತ್ತಿವೆ. ಯಾಕಂದ್ರೆ ಉಗ್ರರನ್ನು ಸಾಕಿ,ಸಲಹಿ,ಪೋಷಿಸಿ ಬೆಳೆಸೋರು ಇವರೇ ಅಲ್ವಾ? ಪ್ರಜೆಗಳಾದ ನಾವು ಯಾವತ್ತೂ ಈ ಬಗ್ಗೆ ಗಂಭೀರವಾದ ಚಿಂತನೆ ಮಾಡಲೇ ಇಲ್ಲ. ರಾಜಕೀಯ ಹಾಳಾಗಿ ಹೋಗ್ಲಿ ನಮಗೆ ಅದರ ಗೊಡವೆಯೇ ಬೇಡ ಆದರೆ ಇವರ ರಾಜಕೀಯದಾಟದಲ್ಲಿ ಉಗ್ರರನ್ನು ಬೆಂಬಲಿಸೋದು ಭಾರತೀಯರಾದ ನಾವು ಸಹಿಸಿಕೊಳ್ಬೇಕಾ?

ಉಗ್ರರು ನೇರವಾಗಿ ದಾಳಿ ಮಾಡದೆ ನಮ್ಮ ಭದ್ರತೆಯ ತಂತ್ರಜ್ಞಾನ ಮತ್ತು ಅದರ ವಿಜ್ಞಾನಿಗಳನ್ನು,ಇಂಜನಿಯರ್ ಗಳನ್ನು ದಾಳಿ ಮಾಡಿ ಕೊಲ್ಲುತ್ತಿದೆ. ಅಂಕಿ ಅಂಶಗಳ ಪ್ರಕಾರ 2009 ರಿಂದ 2013 ರ ಮಧ್ಯದಲ್ಲಿ ಈ ದೇಶದ 10 ಶ್ರೇಷ್ಠ ಪರಮಾಣು ವಿಜ್ಞಾನಿಗಳ ಹತ್ಯೆಯಾಗಿದೆ. ನಮಗೆ ಈ ಸುದ್ಧಿ ಗೊತ್ತೇ ಇಲ್ಲ ಯಾಕಂದ್ರೆ ಕ್ರಿಕೆಟ್,ಸಿನಿಮಾ ನೋಡುವದರಲ್ಲೇ ಬ್ಯುಸಿ ಅಲ್ವಾ? ಶಹಬ್ಬಾಷ್!! ಅಂದಂಗೆ ಈ 10 ಶ್ರೇಷ್ಠ ವಿಜ್ಞಾನಿಗಳು ದೇಶದ ಭದ್ರತೆಗೆ ಸಂಬಂಧಿಸಿದ ಅನೇಕ ಮಹತ್ವದ ಪ್ರಾಜೆಕ್ಟಗಳ ಕೆಲಸದಲ್ಲಿ ನಿರತರಾಗಿದ್ದರು. ನಮಗೆ ನಿಮಗೆಲ್ಲಾ ಈ ವಿಜ್ಞಾನಿಗಳು ಹತ್ಯೆಯಾಗಿದ್ದರ ಬಗ್ಗೆ ಗೊತ್ತಿಲ್ಲ ಬಿಡಿ ಯಾಕಂದ್ರೆ ನಮ್ಮ ಪೇಯ್ಡ್ ಮಿಡಿಯಾಗಳು ಈ ಸುದ್ಧಿಯನ್ನು ತೋರಿಸಲೇ ಇಲ್ಲ,ಈ ಪೇಯ್ಡ್ ಮಿಡಿಯಾಗಳಿಗೆ ಈ ಸುದ್ಧಿಯನ್ನು ತೋರಿಸಲು ಸಮಯವೇ ಸಿಗಲಿಲ್ಲ. ಇವರೆಲ್ಲ ಟಿಆರ್ ಪಿ ಸುದ್ದಿಯನ್ನು ಹೇಳುವಲ್ಲಿ ಬ್ಯುಸಿಯಾಗಿದ್ದರು.

ಇನ್ನೊಂದು ಅಂಕಿ ಅಂಶದ ಪ್ರಕಾರ 1995 ರಿಂದ 2010 ನೇ ಇಸವಿಯ ಮಧ್ಯದಲ್ಲಿ ಈ ದೇಶದ 32 ಕೇಂದ್ರಗಳ ಸುಮಾರು 197 ಪರಮಾಣು ವಿಜ್ಞಾನಿಗಳ ಹತ್ಯೆಯಾಗಿದೆ. ಇದರಲ್ಲಿ ಒಂದೇ ಒಂದು ಅಂಶ ಕೂಡಾ ನಮಗೆ ಗೊತ್ತಿಲ್ಲ. ಖಂಡಿತವಾಗಿಯೂ ಗೊತ್ತಿಲ್ಲ. ನಾವು ಇದರ ಬಗ್ಗೆ ಗಂಭೀರವಾದ ಚಿಂತನೆ ಮಾಡಲೇಬೇಕು. ಈ ವಿಜ್ಞಾನಿಗಳೆಲ್ಲ ದೇಶದ ಭದ್ರತೆಗೆ ಸಂಭಂದಿಸಿದಂತೆ ಅನೇಕ ಪ್ರೋಜೆಕ್ಟಗಳನ್ನು ಮಾಡುತ್ತಿದ್ದರು. ಇದರಲ್ಲಿ ಎಷ್ಟೋ ಜನ ವಿಜ್ಞಾನಿಗಳು ಭಾರತವನ್ನು ಗಂಡು ರಾಷ್ಟ್ರವನ್ನಾಗಿ ಮಾಡಿಸಿದ ಫೋಕ್ರಾನಿನ ಅಣ್ವಸ್ತ್ರ ಯಶಸ್ವಿಗೆ ಕಾರಣರಾದವರೂ ಇದ್ದರು.

ಪ್ರಥಮ ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ (submarine) “ಅರಿಹಂತ್” ನ ನಿರ್ಮಾಣದಲ್ಲಿ ಜೊತೆಗೂಡಿದ್ದ ಇಬ್ಬರು ವಿಜ್ಞಾನಿಗಳಾದ ಕೆ.ಕೆ ಜೋಶ್ ಮತ್ತು ಅಭಿಶ್ ಶಿವಮ್ ಶಿವಮೊಗ್ಗಾ ಅವರ ಶವ 2013ರಲ್ಲಿ ರೈಲ್ವೆ ಹಳಿಯ ಮೇಲೆ ಪತ್ತೆಯಾಗಿತ್ತು. ನಮಗೇನಾದ್ರು ಇವರ ಹತ್ಯೆ ಹೇಗೆ ಮತ್ತು ಯಾಕಾಯ್ತು ಅಂತ ಗೊತ್ತಾಯ್ತೆ? ನಾವೆಲ್ಲರೂ ಯಾವ ಲೋಕದಲ್ಲಿ ತೇಲಾಡ್ತಾ ಇದ್ದೀವೋ ಗೊತ್ತಿಲ್ಲ. ಆದ್ರೆ ದೇಶದಲ್ಲಿ ಮಾತ್ರ ಇಂಥ ಗಂಭೀರ ಸ್ವರೂಪದ ಕುಕೃತ್ಯಗಳು ನಡೀತಾ ಇದೆ ಅದು ನೇರವಾಗಿ ದೇಶದ ಭದ್ರತೆಗೆ ಹಾಗೂ ಆರ್ಥಿಕತೆಗೆ ಅಡ್ಡ ಪರಿಣಾಮ ಬೀರುತ್ತಿದೆ.

ಭಾರತ ಕಂಡು ಹಿಡಿದ , ಪರೀಕ್ಷೆಯನ್ನು ಮಾಡಿದ , ಮಾಡುತ್ತಿರುವ ಪ್ರತಿಯೊಂದು ಅಣ್ಣವಸ್ತ್ರದ ಹಿಂದೆಯೂ ಅನೇಕ ವಿಜ್ಞಾನಿಗಳ , ಇಂಜನಿಯರ್ ಗಳು ಕಣಕಣವನ್ನು ಬಸಿದಿದ್ದಾರೆ. ಆದರೆ ಅವರು ಯಾರಿಗೂ ಗೊತ್ತಿಲ್ಲ. ಅವರು ಯಾರಿಗೂ ಹೀರೋ ಅಂತ ಅನಿಸಲೇ ಇಲ್ಲ. ದೇಶದ ಆತ್ಮಗೌರವ ರಕ್ಷಣೆಗೆ ಕಣಕಣವನ್ನು ಬಸಿದ ವಿಜ್ಞಾನಿಗಳನ್ನ ಹತ್ಯೆಗಳು ಸದ್ದಿಲ್ಲದೆ ಆಗುತ್ತಲೇ ಇವೆ. ಇವುಗಳ ಬಗ್ಗೆ ಗಂಭೀರವಾದ ಚಿಂತನೆಯ ಅಗತ್ಯವಿದೆ. ಮಾಧ್ಯಮದವರಿಗೆ ಇದೆಲ್ಲಾ ಗಂಭೀರ ಅನಿಸೋದೇ ನಾವು ನೀವಾದರೂ ಇದರ ಬಗ್ಗೆ ಸ್ವಲ್ಪ ಯೋಚಿಸೋಣ.

-ಶಿವಾಂಶ

Tags

Related Articles

Close