ಅಂಕಣ

`ಇವರಿಗೆಲ್ಲಾ ಲಕ್ವಾ ಹೊಡೆದು ಹಾಸಿಗೆಯಲ್ಲಿ ಬಿದ್ದಿರಬೇಕು.’ ಇವರು ತನ್ನ ಪತ್ರದಲ್ಲಿ ಈ ರೀತಿ ಶಾಪ ಕೊಡಲು ಕಾರಣವೇನು ಗೊತ್ತೇ…?

ಹಾಯ್ ನಮಸ್ಕಾರ..

ಸಾಂಪ್ರತ ಮೇಲಾಗಿ ತಿಳಿಸುವುದೇನೆಂದರೆ ನಾವೆಲ್ಲಾ ಕ್ಷೇಮ.. ನೀವೆಲ್ಲರೂ ಕ್ಷೇಮ ತಾನೆ.. ಆ ದೇವರ ದಯೆಯಿಂದ ನೀವೆಲ್ಲರೂ ಕ್ಷೇಮವಿದ್ದೀರಿ ಎಂದು ನಂಬುತ್ತೇನೆ. ಪತ್ರ ಬರೆಯದೆ ತುಂಬಾ ಸಮಯವಾಯಿತಲ್ವಾ? ಕಳೆದ ತಿಂಗಳು ಬರೆಯಬೇಕೆಂದಿದ್ದೆ. ಆದರೆ ಪುರ್ಸೊತ್ತು ಸಿಕ್ಕಿರಲಿಲ್ಲ. ಅದಕ್ಕಾಗಿ ಈ ಬಾರಿ ಪತ್ರ ಬರೆಯುತ್ತಿದ್ದೇನೆ. ಆದರೆ ನೀವು ಪತ್ರ ಬರೆಯುವುದೇ ಇಲ್ಲ… ಈ ಪತ್ರ ನೋಡಿಯಾದರೂ ಉತ್ತರಿಸುತ್ತೀರಿ ಎಂದು ನಂಬಿದ್ದೇನೆ..

ಅಂದಹಾಗೆ ನಾನು ಯಾಕೆ ಪತ್ರ ಬರೆಯುತ್ತಿದ್ದೇನೆ ಎಂದು ನಿಮಗನಿಸಬಹುದು. ಹೌದು ವಿಷಯ ತುಂಬಾ ಸೀರಿಯಸ್. ಯಾಕೆ ಗೊತ್ತಾ ಇಂಥವರನ್ನು ಭಾರತೀಯರು ಅನ್ನೋದಕ್ಕೇ ನನಗೆ ನಾಚಿಕೆಯಾಗ್ತಾ ಇದೆ. ಛೇ… ನನ್ನ ಪ್ರಕಾರ ಇಂಥವರಿಗೆಲ್ಲಾ ಲಕ್ವಾ ಹೊಡೀಬೇಕು… ಮತ್ತೆಂದಿಗೂ ಅವರು ಹಾಸಿಗೆ ಬಿಟ್ಟು ಮೇಲೇಳಬಾರದು… ಯಾಕೆಂದರೆ ರಾಷ್ಟ್ರಗೀತೆಗಾಗಿ ಕೇವಲ 52 ಸೆಕೆಂಡುಗಳ ಕಾಲ ಎದ್ದು ನಿಂತು ಗೌರವ ಕೊಡಲಾಗದವರಿಗೆ ನನ್ನ ಪ್ರಕಾರ ಲಕ್ವಾ ಕೂಡಾ ಕಮ್ಮಿಯೇ…

ನಮ್ಮ ಹಿರಿಯರು ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿ ಸ್ವಾತಂತ್ರ್ಯ ಗಳಿಸಿಕೊಟ್ಟಿರುವಾಗ ಹಿರಿಯರ ಕಷ್ಟವೇನೆಂದು ಅರ್ಥ ಮಾಡದೆ ತಿಂದು ಕೊಬ್ಬಿದ ಹೆಗ್ಗಣಗಳಿಗೆ ಇಂದು 52 ಸೆಕೆಂಡುಗಳ ಎದ್ದು ನಿಂತಾಗ ಸುಸ್ತಾಗುತ್ತದೆ. ಇಂಥವರಿಗೆ ನಾಯಿಯನ್ನು ಛೂ ಬಿಟ್ಟು ತಲೆಗಡರಿದ್ದ ಅಹಂಕಾರವನ್ನು ಇಳಿಸಬೇಕು.. ಆಗ ಇವರಿಗೆ ಎದ್ದುನಿಂತಾಗ ಸುಸ್ತು ಕೂಡಾ ಆಗುವುದಿಲ್ಲ ಜೊತೆಗೆ ಮೈಗಂಟಿದ ಕೊಬ್ಬು ಕೂಡಾ ಇಳಿದುಹೋಗುತ್ತದೆ. ನಾನು ಹೇಳಿದ್ದು ಕರೆಕ್ಟ್ ತಾನೇ…

ನೋಡಿ ಯಾವ ಬಾಯಿಯಿಂದ ರಾಷ್ಟ್ರಗೀತೆಗೆ ಕಡ್ಡಾಯವಾಗಿ ನಿಂತು ಗೌರವ ಕೊಡಬೇಕು ಅನ್ನೋದನ್ನು ನಾನು ಕೂಡ ವಿರೋಧಿಸುತ್ತೇನೆ…. ಎಲ್ಲರ ಮೇಲೆ ಬಲವಂತವಾಗಿ ದೇಶಭಕ್ತಿಯನ್ನು ಏತಕ್ಕಾಗಿ ಹೇರುತ್ತೀರಾ? ಎಂದು ಕೇಳಿದ್ದಾರೆ. ನಮ್ಮವರು ಈತರ ಕೇಳುವಷ್ಟರ ಮಟ್ಟಿಗೆ ದೇಶದ ಬಗ್ಗೆ ಅಭಿಮಾನ ಶೂನ್ಯರಾಗಿ ಮೆರೆಯುತ್ತಿದ್ದಾರೆಂದರೆ ಇಂಥವರೆಲ್ಲಾ ಈ ದೇಶದಲ್ಲಿ ಯಾಕಾಗಿ ಹುಟ್ಟಿದ್ದಾರೋ ಎಂದು ಅಸಹ್ಯವಾಗುತ್ತದೆ ನನಗೆ… ನಿಮಗೂ ಆ ರೀತಿ ಆಗುತ್ತಿಲ್ಲವೇ?

ನಾನು ನಿಮಗೊಂದು ವಿಷ್ಯ ಹೇಳ್ತೀನಿ… ನನಗೆ ನನ್ನ ಅಮ್ಮ ತನ್ನ ತಾತಂದಿರೆಲ್ಲಾ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ, ಜೈಲಿಗೂ ಹೋಗಿದ್ದಾರೆ ಎಂದೆಲ್ಲಾ ಕಥೆ ಹೇಳುತ್ತಿದ್ದರು. ಅವರಿಗೆ ಸ್ವಾತಂತ್ರ್ಯಕ್ಕಾಗಿ ಸ್ಫೂರ್ತಿ ಕೊಟ್ಟಿದ್ದೇ ರಾಷ್ಟ್ರಗೀತೆ ಜನಗಣಮನ, ವಂದೇ ಮಾತರಂ… ಎಂಬ ಗೀತೆಗಳು. ಈ ಗೀತೆಯನ್ನು ಕೇಳಿದೊಡನೆ ಮೈಯಲ್ಲಿ ರಕ್ತ ಸಂಚಾರವಾಗಿ ಬ್ರಿಟೀಷ್ ಸಾಮ್ರಾಜ್ಯವನ್ನೇ ಸಿಗಿದುಹಾಕಬೇಕೆನ್ನುವಷ್ಟು ಕೋಪ ನೆತ್ತಿಗೇರಿ ಊರಿನ ಮಂದಿಯೆಲ್ಲಾ ಚಳುವಳಿಗೆ ಧುಮುಕುತ್ತಿದ್ದರು ಎಂದು ಅಮ್ಮ ಹೇಳುವಾಗ ನನಗಿನ್ನೂ ಮಿಂಚಿನ ಸಂಚಾರವಾಗುತ್ತದೆ. ಆದರೆ ಇಂದಿನ ಪರಿಸ್ಥಿತಿ ನೋಡಿ, ಅಷ್ಟೊಂದು ಕಷ್ಟದಿಂದ ಪಡೆದ ಸ್ವಾತಂತ್ರ್ಯವನ್ನು ಮರೆತು, ಅವರಿಗೆ ರಾಷ್ಟ್ರಗೀತೆಗೆ ಬರೇ 52 ಸೆಕೆಂಡುಗಳ ಕಾಲ ಎದ್ದು ನಿಲ್ಲಲು ಕಷ್ಟವಾಗುತ್ತದಂತೆ. ಅದಕ್ಕೇ ನಾನು ಹೇಳಿದ್ದು, ಆ ರೀತಿ ಎದ್ದು ನಿಲ್ಲದವರಿಗೆ ಲಕ್ವಾ ಹೊಡೀಬೇಕು ಅಂತ. ನಾನು ಹೇಳಿದ್ದು ಕರೆಕ್ಟ್ ಅಲ್ವಾ… ರಾಷ್ಟ್ರಗೀತೆಗಾಗಿ ಎದ್ದು ನಿಲ್ಲಲಾಗವರು ನಡೆದಾಡಿ ಏನು ಪ್ರಯೋಜನವಿದೆ ಅಲ್ವಾ…

ಜಸ್ಟ್ 52 ಸೆಕೆಂಡುಗಳ ಕಾಲ ರಾಷ್ಟ್ರಗೀತೆಗೆ ಎದ್ದು ನಿಲ್ಲಲಾಗುವುದಿಲ್ಲ.. ಆದರೆ ಮೆಕ್ಕಾ ಮದೀನದಲ್ಲಿ ಬೇಕಾದ್ರೆ ಮೂರು ದಿನ ಕ್ಯೂ ನಿಲ್ತಾರೆ. ಆದರೆ ರಾಷ್ಟ್ರಗೀತೆಗೆ 52 ಸೆಕೆಂಡುಗಳ ನಿಂತ್ರೆ ಇವರ ಕೈಕಾಲು ಮರಗಟ್ಟುತ್ತದಾ… ಇನ್ನು ಕೆಲವರು ದೇವಸ್ಥಾನದಲ್ಲಿ ಉದ್ದುದ್ದದ ಲೈನಲ್ಲಿ ಎಷ್ಟು ಗಂಟೆ ಬೇಕಾದ್ರೂ ನಿಲ್ತಾರೆ. ಚರ್ಚ್‍ನಲ್ಲಿ ಎರಡು ಗಂಟೆ ನಿಲ್ಲುತ್ತಾರೆ. ಆದ್ರೆ 52 ಸೆಕೆಂಡ್ ಮಾತ್ರ ಬರೋಬ್ವರಿ ಆಯ್ತಲ್ವಾ ಇವ್ರಿಗೆ… ನನಗೆ ಇವರ ಲಾಜಿಕ್ ಏನು ಎಂದು ಸ್ವಲ್ಪನೂ ಅರ್ಥವಾಗುವುದಿಲ್ಲ…

ಸಮಾಜಕ್ಕೆ ಅದೇನು ದಾರಿದ್ರ್ಯ ಬಂದಿದೆಯೋ.. ಗೊತ್ತಾಗುತ್ತಿಲ್ಲ ಮಾರಾಯ್ರೆ… ನಮ್ಮ ದೇಶದ ಸೈನಿಕರನ್ನು ನೋಡಿಯಾದ್ರೂ ಕಲಿಬೇಕಲ್ವಾ… ಮೈನಸ್ ಡಿಗ್ರಿ ಚಳಿಯಲ್ಲಿ, ಕಂದಕಗಳ ನಡುವೆ ಶತ್ರುಗಳ ಗುಂಡಿಗೆ ಎದೆಯೊಡ್ಡಿ ಇಡೀ ದೇಶವನ್ನು ರಕ್ಷಿಸುತ್ತಿದ್ದಾರೆ. ಅವರು ನಮಗಾಗಿ ಅಷ್ಟು ಕಷ್ಟ ಪಡುತ್ತಿರುವಾಗ ಈ ಹೈಕ್ಳಿಗೆ 52 ಸೆಕೆಂಡ್‍ಗಳ ಕಾಲ ಎದ್ದು ನಿಲ್ಲೋದಕ್ಕೆ ಆಗೋದಿಲ್ಲಾಂದ್ರೆ ಸಿಟ್ಟು ನೆತ್ತಿಗೇರುತ್ತಿದೆ. ನಿಮ್ಗೂ ಹಾಗೆಯೇ ಅನಿಸ್ತದಾ..?

ದಿನಕ್ಕೆ ಎರಡು ಜಿಬಿ ಇಂಟೆರ್‍ನೆಟ್, ಫ್ರೀ ಕಾಲ್ ಸಿಗ್ತದೆ ಎಂದಾಗ ನಾಲ್ಕೈದು ದಿನ ಕಾದು ಕಾದು ಸುಸ್ತಾದರೂ ಸಿಮ್ ಹಿಡ್ಕೊಂಡೇ ಬಂದ್ರು, ಉಚಿತ ಊಟ ಕೊಡ್ತೇನೆ ಎಂದಾಗ ಬಿಸಿಲಿಗೂ ಎಷ್ಟು ದೊಡ್ಡ ಲೈನ್ ನಿಲ್ಲಲೂ ರೆಡಿ ನಿಂತು ಹೊಟ್ಟೆ ತುಂಬಾ ಊಟ ಮಾಡಿಕೊಂಡು ಬಂದ್ರು… ಸರಕಾರದ ಉಚಿತ ಸೌಲಭ್ಯ ಸಿಗುತ್ತದೆಂದಾಗ ನಾಲ್ಕೈದು ದಿನ ಸರತಿ ಸಾಲಿನಲ್ಲಿ ನಿಂತು, ಗವರ್ನಮೆಂಟ್ ಆಫೀಸರ್‍ಗೆ ಬೈದಾದರೂ ಸೌಲಭ್ಯ ಪಡೆದುಕೊಂಡರು ಆದರೆ ಜಸ್ಟ್ 52 ಸೆಕೆಂಡ್ಸ್ ಎದ್ದು ನಿಲ್ಲೋಕಾಗೋದಿಲ್ಲ ಎಂದಾಗ ನನಗೆ ಅಚ್ಚರಿಯೋ ಅಚ್ಚರಿ.

ನಿಮಗೆ ನೆನಪಿದೆಯೋ ಇಲ್ಲವೋ… ನನಗಂತೂ ನೆನಪಿನ್ನೂ ಮಾಸಿಲ್ಲ. ಪಡ್ಡೆ ಹುಡುಗರ ಹೃದಯಕದ್ದ ಚೋರಿ ಸನ್ನಿಲಿಯೋನ್ ಕೇರಳಕ್ಕೆ ಬಂದಾಗ ಜನಸಂಖ್ಯೆ ನೋಡಿ ಅಯ್ಯಯ್ಯೋ ಎನಿಸಿತ್ತು. ಕೆಲವು ಪಡ್ಡೆಗಳು ಗೋಡೆ ಮೇಲೆ, ಮರದ ಮೇಲೆ, ಇನ್ನು ಕೆಲವರು ಗ್ಯಾಲರಿಗೆ ಹಾಕಿದ ಪರದೆಯನ್ನು ಹರಿದು ಒಳಗೆ ನುಗ್ಗಿದ್ದರು. ಇದಕ್ಕೆಲ್ಲಾ ಅವರಿಗೆ ಪುರ್ಸೊತ್ತಿದೆ ಆದರೆ 52 ಸೆಕೆಂಡ್ಸ್ ನಿಲ್ಲೋಕಾಗೋಲ್ಲ ಅಂದ್ರೆ ಇಂಥವರನ್ನೆಲ್ಲಾ ಸೈಬೀರಿಯಾಕ್ಕೆ ಗಡೀಪಾರು ಮಾಡ್ಬೇಕು ಅಲ್ವಾ…

ಇನ್ನೂ ಮುಗಿದಿಲ್ಲ… ಒಂದಷ್ಟು ಹೇಳ್ಬೇಕಾದುದನ್ನೆಲ್ಲಾ ಹೇಳಿ ಆದಷ್ಟು ಬೇಗ ಪತ್ರಕ್ಕೆ ಪೂರ್ಣವಿರಾಮ ಹಾಕುತ್ತೇನೆ.

ಇಂದು 52 ಸೆಕೆಂಡ್ಸ್ ನಿಲ್ಲೋಕಾಗೋಲ್ಲ ಅಂದವರೆಲ್ಲಾ ಅವರ ಮಕ್ಕಳನ್ನೆಲ್ಲಾ ದೊಡ್ಡ ದೊಡ್ಡ ಶಾಲೆಗೆ ಸೇರಿಸಲು ಗಂಟೆಗಟ್ಟಲೆ ಕ್ಯೂನಲ್ಲಿ ನಿಂತರು. ಬ್ರಾಂಡೆಡ್ ಬಟ್ಟೆಗಳ ಮೇಲೆ ಶೇಕಡಾ 60% ರಿಯಾಯಿತಿ ಅಂತ ಘೋಷಿಸಿದಾಗ ಅಂಗಡಿಗಳ ಮುಂದೆ ಬಕ ಪಕ್ಷಿಗಳಂತೆ ನಿಂತು ಗಲಾಟೆ ಮಾಡಿದ್ರು, ಯಾರೋ ಬಿಕಿನಾಸಿ ರಾಜಕಾರಣಿ ಬಾಡೂಟ ಹಾಕಿದಾಗ ಕಂಭಕರ್ಣನಂತೆ ಮುಕ್ಕಿದರು.. ವೈಯಕ್ತಿಕ ಸುಖಕ್ಕಾಗಿ ಎಷ್ಟು ಗಂಟೆ ಬೇಕಾದ್ರೂ ನಿಂತುಕೊಳ್ಳಲು ತಯಾರಿರುವ ಇವರು ರಾಷ್ಟ್ರಗೀತೆಗಾಗಿ ಎದ್ದುನಿಂತುಕೊಳ್ಳಲು ಇವರಿಗೆ ಟೈಂ ಇಲ್ಲ ಅಲ್ವಾ…

ನನಗೊಂದು ಡೌಟ್… ತನ್ನ ರಾಷ್ಟ್ರಗೀತೆಗೆ ಗೌರವ ಕೊಡದವರು ತನ್ನ ತಂದೆ ತಾಯಿಗಳಿಗೆ, ಗುರುಗಳಿಗೆ ಮರ್ಯಾದೆ ಕೊಡ್ತಾರಾ.. ಒಂದು ದೇಶ ನಮ್ಮ ತಂದೆ ತಾಯಿಗಿಂತಲೂ ಹೆಚ್ಚು ಎಂದು ನಂಬಿಕೊಂಡವರು ನಾವು, ಆದ್ರೆ ಕೆಲವೆಲ್ಲಾ ದೇಶ ವಿಭಜಕರಿಗೆ ಇದೆಲ್ಲಾ ಅರ್ಥವಾಗೋದಿಲ್ಲ. ಇವರೆಲ್ಲಾ ಭಾರತವನ್ನು ಪಾಕಿಸ್ತಾನ ಮಾಡಲು ಬಯಸೋದಕ್ಕಿಂತ ಇವರಿಗೇ ಡೈರೆಕ್ಟಾಗಿ ಪಾಕಿಸ್ತಾನಕ್ಕೆ ಓಡಿಬಿಡಬಹುದಲ್ವಾ..? ಆದ್ರೆ ಅಲ್ಲಿ ಇವರದ್ದು ಜೀವ ಹೋಗುತ್ತದೆಂದು ಭಯವಿದೆ. ಸುಮ್ನೆ ಇಲ್ಲೇ ಇದ್ದು ದೇಶ ವಿರೋಧಿ ಚಟುವಟಿಕೆಗಳನ್ನು ಮಾಡಿ ತನ್ನ ಬೇಳೆ ಬೇಯಿಸಲು ಎಂಥದಕ್ಕೂ ಇವರು ತಯಾರು ಎಂದು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು.

ನಾನೊಂದು ಮಾತು ಹೇಳುತ್ತೇನೆ ಕೇಳಿ, ಹಿಂದೂವಾಗಿ ಪೂಜೆ ಮಾಡಲಾಗದಿದ್ದರೂ, ಮುಸ್ಲಿಮನಾಗಿ ನಮಾಝ್ ಮಾಡಲಾಗದಿದ್ದರೂ, ಕ್ರಿಶ್ಚಿಯನ್ ಆಗಿ ಪ್ರಾರ್ಥನೆ ಮಾಡಲಾಗದಿದ್ದರೂ, ಭಾರತೀಯ ಎಂದು ಅನಿಸಿಕೊಂಡ ಮೇಲೆ ರಾಷ್ಟ್ರಗೀತೆಗೆ ಗೌರವ ಕೊಡಲೇಬೇಕು.. ಇಲ್ಲವಾದರೆ ಅವರು ಭಾರತೀಯರಾಗಿ ಹುಟ್ಟಿ ವೇಸ್ಟ್ ಅಲ್ವಾ… ಅದಕ್ಕಾಗಿಯೇ ನಾನು ರಾಷ್ಟ್ರಗೀತೆಗಾಗಿ 52 ಸೆಕೆಂಡ್ಸ್ ನಿಲ್ಲಲು ಕಷ್ಟವಾಗುವವರಿಗೆ ಲಕ್ವಾ ಹೊಡಿಬೇಕು ಎಂದು ಹೇಳಿರುವುದು..!

ಆಬ್ಬಾ ಪತ್ರ ದೀರ್ಘವಾಯಿತಲ್ವಾ.. ಇವತ್ತಿಗೆ ಇಷ್ಟು ಸಾಕು. ಇನ್ನೇನಿದ್ದರೂ ವಿಶೇಷವಿದ್ದರೆ ಮುಂದಿನ ಪತ್ರದಲ್ಲಿ ಬರೆಯುತ್ತೇನೆ. ಈ ಪತ್ರ ಸಿಕ್ಕಿದ ಕೂಡಲೇ ನನಗೆ ವಾಪಸ್ ಪತ್ರ ಬರೆಯಲು ಮರೆಯಬೇಡಿ..

ಇತೀ ತಮ್ಮ ವಿಶ್ವಾಸಿ

ಬಿ.ಎಲ್. ಹನುಮಂತ, ಶಿವಮೊಗ್ಗ ಜಿಲ್ಲೆ

Tags

Related Articles

Close